Tag: cyber Fraud

  • ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು

    ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು

    – ಎಫ್‌ಐಆರ್‌ ವಿವರ ನೀಡಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ

    ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ʻಡಿಜಿಟಲ್ ಅರೆಸ್ಟ್ʼ (Digital Arrest) ವಂಚನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ (Supreme Court), ಈ ಪ್ರಕರಣಗಳ ತನಿಖೆಯನ್ನ ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸುವ ಕುರಿತು ಚಿಂತನೆ ನಡೆಸಿದೆ.

    ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆಗಳನ್ನ ಬಳಸಿ ವಂಚಕರು ನಡೆಸುತ್ತಿರುವ ಈ ಕೃತ್ಯಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಿಗೆ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ವಿವರ ನೀಡುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

    ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ತನಿಖೆಯನ್ನ ಕೇಂದ್ರ ತನಿಖಾ ದಳಕ್ಕೆ (CBI) ಹಸ್ತಾಂತರಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ಬಗ್ಗೆ ದೇಶಾದ್ಯಂತದ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐಗೆ ಸಂಪನ್ಮೂಲಗಳಿವೆಯೇ ಎಂದು ಪ್ರಶ್ನಿಸಿತು. ಆಗ ಸಿಬಿಐ ಈಗಾಗಲೇ ಕೆಲವು ಪ್ರಕರಣಗಳನ್ನು ನಿಭಾಯಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಬಾಗ್ಚಿ, ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐ ಬಳಿ ಅಗತ್ಯ ಸಂಪನ್ಮೂಲಗಳಿವೆಯೇ ಪರಿಶೀಲಿಸುವಂತೆ ಸೂಚಿಸಿದರು.

    ಸೈಬರ್ ಅಪರಾಧದಲ್ಲಿ (Cyber Crime) ಅವರಿಗೆ ತಜ್ಞರು ಬೇಕಾದರೆ ನಮಗೆ ಹೇಳಬಹುದು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ಸಿಬಿಐ ಗೃಹ ಸಚಿವಾಲಯದ ಸೈಬರ್ ಅಪರಾಧ ವಿಭಾಗದ ಸಹಾಯ ಪಡೆಯುತ್ತಿದೆ ಎಂದು ವಿವರಿಸಿದರು.

    Digital Arrest

    ಅಂತಿಮವಾಗಿ ಏಕರೂಪದ ತನಿಖೆ ನಡೆಯುವಂತೆ ನೋಡಿಕೊಳ್ಳಲು ನಾವು ಇಂದು ನಿರ್ದೇಶನಗಳನ್ನು ನೀಡುತ್ತಿಲ್ಲ. ನಾವು ಎಲ್ಲ ರಾಜ್ಯಗಳಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ದೇಶಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್‌ ಹಗರಣಗಳ ಬೆದರಿಕೆಯನ್ನ ಪರಿಹರಿಸಲು ಅಕ್ಟೋಬರ್ 17 ರಂದು ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.

    ಡಿಜಿಟಲ್ ಅರೆಸ್ಟ್ ಎಂದರೇನು?
    ಡಿಜಿಟಲ್ ಅರೆಸ್ಟ್‌ ಸೈಬರ್ ವಂಚನೆಯ ಒಂದು ವಿಧಾನ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.

  • ನಕಲಿ ʻಲೋಕಾಯುಕ್ತ ಜಸ್ಟೀಸ್ʼ ಹಾವಳಿಗೆ ಬೆಚ್ಚಿಬಿದ್ದ ಅಧಿಕಾರಿಗಳು – ದೂರು ದಾಖಲು

    ನಕಲಿ ʻಲೋಕಾಯುಕ್ತ ಜಸ್ಟೀಸ್ʼ ಹಾವಳಿಗೆ ಬೆಚ್ಚಿಬಿದ್ದ ಅಧಿಕಾರಿಗಳು – ದೂರು ದಾಖಲು

    ಬೆಂಗಳೂರು: ಹಣ ಮಾಡೋದಕ್ಕೆ ಅಡ್ಡದಾರಿ ಹಿಡಿಯೋ ಸೈಬರ್ ವಂಚಕರು ಈ ಬಾರಿ ಬಳಸಿದ್ದು ನ್ಯಾಯಾಧೀಶರ ಹೆಸರನ್ನ. ಅಚ್ಚರಿ ಅನಿಸಿದ್ರೂ ಇದು ನಿಜ. ಲೋಕಾಯುಕ್ತ ಜಸ್ಟೀಸ್ (Lokayukta Justice) ಹೆಸರಲ್ಲಿ ಅಧಿಕಾರಿಗಳಿಗೆ ಫೋನ್ ಮಾಡಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಫೋನ್ (Phone) ಮಾಡಿ ನಿಮ್ಮ ಇಲಾಖೆಯಲ್ಲೇ ಭ್ರಷ್ಟಚಾರ ನಡೆಯುತ್ತಾ ಇದೆ. ನಿಮ್ಮ ಮೇಲಿನ ಆರೋಪಿಗಳಿಂದ ರೇಡ್ ಮಾಡ್ತೀವಿ ಅಂತ ಬೆದರಿಸೋಕೆ ಶುರು ಮಾಡಿದ್ದಾರೆ. ಟ್ರೂ ಕಾಲರ್‌ನಲ್ಲಿ (Truecaller) ಲೋಕಾಯುಕ್ತ ಜಸ್ಟೀಸ್ ಹೆಸರು ಬಳಸಿ ಕರೆ ಮಾಡಿದ್ದಾರೆ. ಇದ್ರಿಂದ ಕರೆ ಸ್ವೀಕರಿಸಿದ ಸರ್ಕಾರಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ಮುಂದಿನ ತಿಂಗಳಿಂದಲೇ ಭಾರತ್ ಟ್ಯಾಕ್ಸಿ ಶುರು – ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿಗೆ ಬ್ರೇಕ್!

    ಮಹಾ ವಂಚಕರು ಮಾಡ್ತಿದ್ದೇನು?
    ಈ ವಂಚಕರು ಅಧಿಕಾರಿಗಳು ಕಾರ್ಯ ನಿರ್ವಹಿಸುವ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ನಾನು ಲೋಕಾಯುಕ್ತ ಜಸ್ಟೀಸ್ ಬಿ.ಎಸ್ ಪಾಟೀಲ್ , ಹಾಗೂ ಉಪಯೋಕಾಯುಕ್ತ ಫಣೀಂದ್ರ ಎಂದು ಕರೆ ಮಾಡುವ ಅಪರಿಚಿತರು. ಇಂಪಾರ್ಟೆಂಟ್ ಕಾಲ್, ಜಸ್ಟೀಸ್ ಅವರೇ ಕರೆ ಮಾಡಿದ್ದಾರೆಂದು ತಕ್ಷಣ ರಿಸೀವ್ ಮಾಡುವ ಸರ್ಕಾರಿ ಅಧಿಕಾರಿಗಳು, ನಂತರ ಅವರ ಅವರು ಕಾರ್ಯನಿರ್ವಹಿಸುವ ಡಿಪಾರ್ಟ್ಮೆಂಟ್ ನಲ್ಲಿ ಏನೇನು ಕೆಲಸ ನಡೀತಿದೆ ಎಂದು ತಿಳಿದುಕೊಳ್ಳುವ ಅಪರಿಚಿತರು ಬಳಿಕ ಹೆದರಿಸುತ್ತಿದ್ದರು. ನಿಮ್ಮ ಮೇಲೆ ಲಂಚ ಸ್ವೀಕಾರದ ಆರೋಪ ಬಂದಿದೆ ಎಂದು ಬೆದರಿಕೆ ಹಾಕುತ್ತಿದ್ದರು. ಅಷ್ಟೇ ಅಲ್ಲದೆ ಲೋಕಾಯುಕ್ತ ದಾಳಿ ತಡೆಯಬೇಕು ಎಂದರೆ ಇಂತಿಷ್ಟು ಹಣ ಕೊಡಬೇಕು ಅಂತ ಡಿಮ್ಯಾಂಡ್‌ ಮಾಡಿದ್ದಾರೆ. ಇದೇ ರೀತಿ ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ)ಗೂ ಕರೆ ಮಾಡಿದ್ದ ಅಪರಿಚಿತರು ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ರಸ್ತೆಗಳಲ್ಲಿ ಬಟರ್ ಫ್ಲೈ ಲೈಟ್ ಹಾಕಿದ್ದೇವೆಂದು 73 ಲಕ್ಷ ಹಣ ಪಡೆದು ಗುಳುಂ; ಗೋಲ್ಮಾಲ್ ಬಹಿರಂಗ

    ಎಇಇ ವೆಂಕಟೇಶ್‌ಗೆ ಕರೆ ಮಾಡಿ ಸಿಕ್ಕಿಬಿದ್ದರು
    ಅಧಿಕಾರಿಗಳನ್ನು ಬೆದರಿಸುತ್ತಿದ್ದ ಖತರ್ನಾಕ್‌ಗಳು ಎಇಇ ವೆಂಕಟೇಶ್‌ ಅವರಿಗೂ ಕರೆ ಮಾಡಿದ್ದರು. ಮೊದಲಿಗೆ ಕರೆಯನ್ನ ಸ್ವೀಕಾರ ಮಾಡಿರಲಿಲ್ಲ. ಪದೇ ಪದೇ ಕರೆ ಮಾಡಿದಾಗ ಬೆದರಿಕೆ ಬಂದಿದೆ. ಇದ್ರಿಂದ ಅನುಮಾನಗೊಂಡು ನೇರವಾಗಿ ಲೋಕಾಯುಕ್ತ ಕಚೇರಿಗೆ ವೆಂಕಟೇಶ್‌ ಬಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಕಾಲ್‌ ಬಂದಿದ್ದ ನಂಬರ್‌ ಜಸ್ಟೀಸ್ ಬಿ.ಎಸ್ ಪಾಟೀಲ್ ಹಾಗೂ ಉಪಲೋಕಾಯುಕ್ತ ಫಣೀಂದ್ರ ಅವರದ್ದಲ್ಲ ಅನ್ನೋದು ಗೊತ್ತಾಗಿದೆ. ಜಸ್ಟೀಸ್ ಹೆಸರು ಬಳಸಿ ಬ್ಲ್ಯಾಕ್‌ಮೇಲ್‌ ಮಾಡಲಾಗ್ತಿದೆ ಎಂದು ತಿಳಿದುಬಂದಿದೆ. ಜಸ್ಟೀಸ್‌ಗಳ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ಹೆಸರು ದುರ್ಬಳಕೆ ಮಾಡಿರುವ ಹಿನ್ನಲೆ ಅವರ ಪರವಾಗಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ದೂರು ನೀಡಿದ್ದಾರೆ. ಇದನ್ನೂ ಓದಿ: ನೆಲಮಂಗಲ | ತಣ್ಣಗಾಗಿದ್ದ ಏರಿಯಾದಲ್ಲಿ ಮತ್ತೆ ರೌಡಿಸಂ – ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ

  • ಮಾನವ ಕಳ್ಳಸಾಗಣಿಕೆ ಹೆಸರಲ್ಲಿ ಮಹಿಳಾ ವಿಜ್ಞಾನಿಗೆ ಬೆದರಿಕೆ – ಲಕ್ಷ ಲಕ್ಷ ಪೀಕಿದ ಸೈಬರ್ ವಂಚಕ

    ಮಾನವ ಕಳ್ಳಸಾಗಣಿಕೆ ಹೆಸರಲ್ಲಿ ಮಹಿಳಾ ವಿಜ್ಞಾನಿಗೆ ಬೆದರಿಕೆ – ಲಕ್ಷ ಲಕ್ಷ ಪೀಕಿದ ಸೈಬರ್ ವಂಚಕ

    ಬೆಂಗಳೂರು: ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ನೀನು ಭಾಗಿಯಾಗಿದ್ದೀಯ ಅಂತ ಮಹಿಳಾ ವಿಜ್ಞಾನಿಗೆ ಬೆದರಿಕೆ ಹಾಕಿ ಆನ್‌ಲೈನ್‌ ವಂಚಕರು (Cyber Fraud) ಲಕ್ಷ ಲಕ್ಷ ಪೀಕಿದ ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಇತ್ತೀಚೆಗಷ್ಟೇ ಸಂಸದರ ಪತ್ನಿಗೆ ಮನಿಲ್ಯಾಂಡ್ರಿಂಗ್ ಮಾಡಿದ್ದೀರಿ ಎಂದು ಬೆದರಿಸಿ 14 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದರು. ಅದೇ ರೀತಿ ಮಹಿಳಾ‌ ವಿಜ್ಞಾನಿ ಐಐಎಸ್‌ಸಿಯ ನ್ಯೂ ಹೌಸಿಂಗ್ ಕಾಲೋನಿ ನಿವಾಸಿ ಡಾ.ಸಂಧ್ಯಾ ಅವರಿಗೆ ಬೆದರಿಸಿ ಲಕ್ಷ ಲಕ್ಷ ಹಣ ಹಾಕಿಸಿಕೊಂಡಿದ್ದಾರೆ. ಇದನ್ನೂ ಓದಿ: Kolar | ಲಾರಿ ಡಿಕ್ಕಿಯಾಗಿ ಮುರಿದು ಬಿದ್ದ ಸ್ಕೈವಾಕ್ – ಕಾರು ಜಖಂ

    ಸೆ.16 ರಂದು ಸಂಧ್ಯಾ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಮೊಬೈಲ್ ನಂಬರ್ ಬೇರೆ ಕಡೆಗಳಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದ್ದ. ಬಳಿಕ 17 ಪ್ರಕರಣಗಳು ದಾಖಲಾಗಿವೆ ಎಂದು ಮೆಸೇಜ್ ಮಾಡಿದ್ದ. ಇದಾದ ಬಳಿಕ ಮತ್ತೊಬ್ಬ ಕರೆ ಮಾಡಿ ನೀವು ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಸಿದ್ದ. ಅಲ್ಲದೇ ಸುಪ್ರೀಂ ಕೋರ್ಟ್‌ ಕೆಲ ದಾಖಲೆಗಳನ್ನು ತೋರಿಸಿ, ನಿಮ್ಮನ್ನು ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದ.

    ಬಳಿಕ ಸಂಧ್ಯಾ ಅವರ ಬಳಿ 8.8 ಲಕ್ಷ ರೂ. ಹಣ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡಿಸಿಕೊಂಡಿದ್ದರು. ಈ ಸಂಬಂಧ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ FIR ದಾಖಲಾಗಿದ್ದು, ವಂಚಕರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ

  • ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ವಸೂಲಿ – ಡೆತ್‌ನೋಟ್ ಬರೆದಿಟ್ಟು ಬೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ

    ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ವಸೂಲಿ – ಡೆತ್‌ನೋಟ್ ಬರೆದಿಟ್ಟು ಬೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ

    ರಾಮನಗರ: ಡಿಜಿಟಲ್ ಅರೆಸ್ಟ್ (Digital Arrest) ಎಂದು ಬೆದರಿಕೆ ಹಾಕಿ ಲಕ್ಷ ಲಕ್ಷ ಹಣ ದೋಚಿದ್ದಲ್ಲದೇ, ಮತ್ತೆ ಹಣ ಕೊಡುವಂತೆ ಬೆದರಿಕೆ ಹಾಕಿದ ಹಿನ್ನೆಲೆ ಬೆಸ್ಕಾಂ (BESCOM) ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ನಡೆದಿದೆ. ಸೈಬರ್ ವಂಚಕರ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನೇಣಿಗೆ ಶರಣಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

    ಬೆಸ್ಕಾಂ ಸಿಬ್ಬಂದಿ 42 ವರ್ಷದ ಕುಮಾರ್ ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೇ ಕುಮಾರ್ ಡೆತ್‌ನೋಟ್‌ನಲ್ಲಿ ಡಿಜಿಟಲ್ ಅರೆಸ್ಟ್ ಕಿರುಕುಳದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಸ್ಕಾಂ ಹೊರಗುತ್ತಿಗೆ ನೌಕರರನಾಗಿ ಕುಮಾರ್ ಕೆಲಸ ಮಾಡುತ್ತಿದ್ದರು. ವಿಕ್ರಮ್ ಗೋಸ್ವಾಮಿ ಎಂಬಾತ ವೀಡಿಯೋ ಕಾಲ್ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಸಿದ್ದ. ಕೇಸ್‌ನಿಂದ ಕೈಬಿಡಲು ಅಕೌಂಟ್‌ಗೆ ಹಣ ಹಾಕು ಎಂದು ಬೆದರಿಸಿದ್ದ. ಸುಮಾರು 11 ಲಕ್ಷ ಹಣವನ್ನ ತನ್ನ ಅಕೌಂಟ್‌ಗೆ ಹಾಕಿಸಿಕೊಂಡಿದ್ದ. ಆದರೆ ಮತ್ತೆ ಹಣ ನೀಡುವಂತೆ ಬೆದರಿಸಿದ್ದ. ಕಿರುಕುಳಕ್ಕೆ ಬೇಸತ್ತ ಕುಮಾರ್ ಡೆತ್‌ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಡೆತ್‌ನೋಟ್‌ನಲ್ಲಿ ತನ್ನ ಅನಾರೋಗ್ಯದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೇಕರಿ, ದಿನಸಿ ಅಂಗಡಿಗಳಿಗೆ ಲಕ್ಷ ಲಕ್ಷ ಟ್ಯಾಕ್ಸ್‌ – ಬಂದ್‌ ಎಚ್ಚರಿಕೆ ಕೊಟ್ಟ ಮಾಲೀಕರು

    ಡೆತ್‌ನೋಟ್‌ನಲ್ಲಿ ಏನಿದೆ?
    ವಿಕ್ರಂ ಗೋಸ್ವಾಮಿ, ಸಿಬಿಐ ಅಂತ ನನಗೆ 8109931663ರ ನಂಬರ್‌ನಿಂದ ಫೋನ್ ಮಾಡಿ ನಿನ್ನ ಮೇಲೆ ಅರೆಸ್ಟ್ ವಾರೆಂಟ್ ಇದೆ ಎಂದು ಹೆದರಿಸಿ ನನ್ನ ಅಕೌಂಟಿಗೆ 1,95,000 ರೂ. ಹಾಕು ಎಂದು ಅಕೌಂಟ್ ನಂಬರ್ ಕಳುಹಿಸಿದ್ದು, ನಾನು ಭಯಪಟ್ಟು ಹಣವನ್ನು ಹಾಕಿದೆ. ನಂತರ ಮತ್ತೆ ಫೋನ್ ಮಾಡಿ ಆ ಅಕೌಂಟ್‌ಗೆ ಹಾಕು, ಈ ಅಕೌಂಟ್‌ಗೆ ಹಾಕು ಎಂದು ನನ್ನಿಂದ ಸುಮಾರು 11 ಲಕ್ಷ ಹಾಕಿಸಿಕೊಂಡಿರುತ್ತಾರೆ. ನಂತರ ನನ್ನ ಪರ್ಸನಲ್ ನಂಬರ್ ಹಾಗೂ ವಾಟ್ಸಪ್ ನಂಬರ್‌ಗೆ 9752140613 ಹಾಗೂ 9812177540ರ ನಂಬರಿಗೆ 2,75,000 ರೂ. ಕಳುಹಿಸು ಎಂದು ಕಾಡಿಸುತ್ತಿದ್ದಾರೆ. ಆದ ಕಾರಣ ನನ್ನ ಸಾವನ್ನ ನಾನೇ ತಂದುಕೊಂಡಿದ್ದೇನೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

    ಘಟನೆ ಸಂಬಂಧ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡೆತ್‌ನೋಟ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಸದ್ಯ ಈ ಪ್ರಕರಣ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ಇದನ್ನೂ ಓದಿ: ವಾಕಿಂಗ್ ವೇಳೆ ಕಾರು ಡಿಕ್ಕಿ – ಮ್ಯಾರಥಾನ್ ಓಟಗಾರ ಶತಾಯುಷಿ ಫೌಜಾ ಸಿಂಗ್ ಸಾವು

  • ಟ್ರಂಪ್ ಹೆಸರಿನಲ್ಲಿ ಸೈಬರ್ ಕಳ್ಳರಿಂದ ಕೋಟ್ಯಂತರ ರೂ. ವಂಚನೆ

    ಟ್ರಂಪ್ ಹೆಸರಿನಲ್ಲಿ ಸೈಬರ್ ಕಳ್ಳರಿಂದ ಕೋಟ್ಯಂತರ ರೂ. ವಂಚನೆ

    ಹಾವೇರಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೆಸರಿನಲ್ಲಿ ಸೈಬರ್ ಕಳ್ಳರು ಕೋಟ್ಯಂತರ ರೂ. ವಂಚನೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ 15ಕ್ಕೂ ಅಧಿಕ ಜನರು ವಂಚನೆಗೆ ಒಳಗಾಗಿದ್ದು, ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೈಬರ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ – ಪುತ್ತೂರಿಗೆ NDRF ತಂಡ ಆಗಮನ

    ಸೈಬರ್ ಕಳ್ಳರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಕುರಿತು ಜಾಹೀರಾತು ಒಂದನ್ನು ಹರಿಬಿಟ್ಟು, ಆ್ಯಪ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಜಾಹೀರಾತಿನಲ್ಲಿ ನೀಡಿದ ನಂಬರ್‌ಗೆ ಕರೆ ಮಾಡಿದರೆ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಬಹುದು ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿದ್ದ ಹಲವಾರು ಜನರು ಜಾಹೀರಾತಿನಲ್ಲಿ ನೀಡಿದ್ದ ನಂಬರ್‌ಗೆ ಕರೆ ಮಾಡಿ, ವಂಚನೆಗೆ ಒಳಗಾಗಿದ್ದಾರೆ.

    ಆರಂಭದಲ್ಲಿ ಜನರನ್ನು ನಂಬಿಸುವ ಉದ್ದೇಶದಿಂದ ಟ್ರಂಪ್‌ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ ಹಾಗೂ ಬಡ್ಡಿ ಹಣ ನೀಡುತ್ತೇವೆ ಎಂದು ಹೇಳಿ ಹಣವನ್ನು ನೀಡಿದ್ದಾರೆ. ಬಳಿಕ ಜನರು ಹೆಚ್ಚಿನ ಲಾಭದ ಆಸೆಗೆ ಬಿದ್ದು, ಹೆಚ್ಚು ಹಣ ಹಾಕಲು ಆರಂಭಿಸಿದರು. ಜನರು ಹಣ ಜಾಸ್ತಿ ಹಾಕಲು ಪ್ರಾರಂಭಿಸಿದ್ದೇ ತಡ ಸೈಬರ್ ಕಳ್ಳರು ಆ್ಯಪ್ ಲಾಕ್ ಮಾಡಿದ್ದಾರೆ.

    ವ್ಯಾಪಾರಸ್ಥರು, ವಕೀಲರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಸೈಬರ್ ವಂಚಕರು ವಂಚಿಸಿದ್ದಾರೆ. ಕೆಲವು ದೂರು ಕೊಡಲು ಕೂಡ ಹಿಂದೇಟು ಹಾಕಿದ್ದಾರೆ.ಇದನ್ನೂ ಓದಿ: ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

  • ಮಂಗಳೂರು| ಹಳೆ ನಾಣ್ಯ ಖರೀದಿಸುವುದಾಗಿ ಹೇಳಿ ವ್ಯಕ್ತಿಗೆ 58 ಲಕ್ಷ ವಂಚನೆ

    ಮಂಗಳೂರು| ಹಳೆ ನಾಣ್ಯ ಖರೀದಿಸುವುದಾಗಿ ಹೇಳಿ ವ್ಯಕ್ತಿಗೆ 58 ಲಕ್ಷ ವಂಚನೆ

    ಮಂಗಳೂರು: ಹಳೆ ನಾಣ್ಯ ಖರೀದಿಸುವುದಾಗಿ ಹೇಳಿ ಅಕೌಂಟ್‌ ಮೂಲಕ 58 ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ನಿವೃತ್ತರಾಗಿ ಮಂಗಳೂರಿಗೆ ವಾಪಸ್‌ ಆಗಿದ್ದ ವ್ಯಕ್ತಿ ಸುರತ್ಕಲ್‌ ಸಮೀಪದ ಕಾಟಿಪಳ್ಳದಲ್ಲಿ ನೆಲೆಸಿದ್ದರು. ಇವರ ಬಳಿ 15 ಹಳೆ ನಾಣ್ಯಗಳಿದ್ದವು. ಈ ನಾಣ್ಯಗಳಿಗೆ ಕೋಟ್ಯಂತರ ಹಣ ನೀಡಲಾಗುವುದು ಎಂದು ಸೈಬರ್‌ ವಂಚಕರು ನಂಬಿಸಿದ್ದರು.

    ಫೇಸ್‌ಬುಕ್‌ನಲ್ಲಿ ಬಂದ ಹಳೆ ನಾಣ್ಯ ಖರೀದಿಯ ಜಾಹೀರಾತಿನ ಬಲೆಗೆ ಬಿದ್ದ ವ್ಯಕ್ತಿಯನ್ನು ವಾಟ್ಸಾಪ್‌ ಮೂಲಕ ಸೈಬರ್ ಖದೀಮರು ಸಂಪರ್ಕಿಸಿದ್ದರು. ನಾಣ್ಯಗಳನ್ನು ಖರೀದಿಸಿ, ಅದಕ್ಕೆ ಪ್ರತಿಯಾಗಿ 49 ಲಕ್ಷ ಹಣ ನೀಡುವುದಾಗಿ ತಿಳಿಸಿದ್ದರು.

    ಮೊದಲಿಗೆ ಆರ್​​ಬಿಐ ನೋಂದಣಿ ಮಾಡಲು 750 ರೂ. ಹಣ ಪಾವತಿಸುವಂತೆ ಸೈಬರ್ ಖದೀಮರು ತಿಳಿಸಿದ್ದರು. ನಂತರ ಆರ್‌ಬಿಐ ಶುಲ್ಕ, ಜಿಎಸ್‌ಟಿ, ಐಟಿಆರ್ ಎಂದು 3.50 ಲಕ್ಷ ವಂಚಿಸಿದ್ದಾರೆ. ಬಳಿಕ ಮುಂಬೈ ಸೈಬರ್ ಪೊಲೀಸ್ ಆಯುಕ್ತ ಗೌರವ್ ಶಿವಾಜಿ ರಾವ್ ಶಿಂಧೆ ಎಂದು ವಾಟ್ಸಪ್ ಮೂಲಕ ಸೈಬರ್‌ ವಂಚಕರು ಪರಿಚಯಿಸಿಕೊಂಡರು.

    ಆರ್​​ಬಿಐ ಕಡೆಯಿಂದ ನೋಟಿಸ್ ಬಂದಿದ್ದು, ನಿಮ್ಮನ್ನು ಬಂಧಿಸುತ್ತೇವೆ ಎಂದು ವಂಚಕ ಗದರಿದ್ದಾನೆ. ಆರ್​​ಬಿಐ ಗೈಡ್​ಲೈನ್ಸ್ ಪ್ರಕಾರ, 12.55 ಲಕ್ಷ ಪಾವತಿಸಬೇಕೆಂದು ಸೂಚನೆ ನೀಡಿದ್ದಾನೆ. ಬಳಿಕ ನಾವು ಚೆಕ್ ಮಾಡಿ, 1 ಗಂಟೆಯೊಳಗೆ ನಿಮ್ಮ ಖಾತೆಗೆ ಎಲ್ಲ ಹಣವನ್ನು ವರ್ಗಾಯಿಸುತ್ತೇವೆ ಎಂದಿದ್ದ. ಮತ್ತೆ ಸಂಪರ್ಕಿಸಿ ಹಂತ ಹಂತವಾಗಿ ಒಟ್ಟು 58,26,399 ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.

    ಮಂಗಳೂರಿನ‌ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • 100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್

    100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್

    ನವದೆಹಲಿ: 100 ಕೋಟಿ ರೂ. ಮೊತ್ತದ ಬೃಹತ್ ಸೈಬರ್ ವಂಚನೆ (Cyber Fraud) ಪ್ರಕರಣದಲ್ಲಿ ಭಾಗಿಯಾಗಿರುವ ಚೀನಾ ಪ್ರಜೆ ಫಾಂಗ್ ಚೆಂಜಿನ್‌ನನ್ನು ದೆಹಲಿಯಲ್ಲಿ ಇಂದು (ಮಂಗಳವಾರ) ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಫಾಂಗ್ ಚೆಂಜಿನ್ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣಗಳಲ್ಲಿ ಭಾಗಿಯಾಗಿದ್ದ. ಸಂತ್ರಸ್ತರಲ್ಲಿ ಒಬ್ಬರಾದ ಸುರೇಶ್ ಕೋಳಿಚಿಯಿಲ್ ಅಚ್ಯುತನ್ ಅವರು ಸೈಬರ್ ಕ್ರೈಂ (Cyber Crime) ಪೋರ್ಟಲ್‌ನಲ್ಲಿ 43.5 ಲಕ್ಷ ರೂ. ವಂಚಿಸಿದ್ದಾನೆ ಎಂದು ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ಅವರನ್ನು ವಂಚನೆಯ ಷೇರು ಮಾರುಕಟ್ಟೆಯ ತರಬೇತಿ ಅವಧಿಗಳಿಗೆ ಆಮಿಷವೊಡ್ಡಲಾಯಿತು. ನಂತರ ಹಣವನ್ನು ಹಲವಾರು ವಹಿವಾಟುಗಳಲ್ಲಿ ಹೂಡಿಕೆ ಮಾಡುವಂತೆ ಹೇಳಿ ವಂಚನೆ ಎಸಗಲಾಗಿದೆ. ನಂತರ ಈ ಹಣವನ್ನು ವಂಚಕರು ನಿಯಂತ್ರಿಸಲ್ಪಡುವ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್‌ ಬೋರ್ಡ್‌ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ: ಆರ್.‌ ಅಶೋಕ್‌

    ಏಪ್ರಿಲ್‌ನಲ್ಲಿ 1.25 ಲಕ್ಷ ರೂ. ವಂಚನೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಮುಂಡ್ಕಾದಲ್ಲಿರುವ ಮಹಾಲಕ್ಷ್ಮಿ ಟ್ರೇಡರ್ಸ್ ಹೆಸರಿನಲ್ಲಿ ಬ್ಯಾಂಕ್ ಖಾತೆ ಇತ್ತು. ಅಪರಾಧಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ. ಇದು ಆರೋಪಿ ಚೆಂಜಿನ್‌ನನ್ನು ಗುರುತಿಸಲು ಸಹಾಯವಾಯಿತು. ಆರೋಪಿಗಳು ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ – ಯುವತಿ ಸಜೀವ ದಹನ

    ಅಪರಾಧಗಳನ್ನು ನಡೆಸಲು ಬಳಸಲಾದ ಫೋನ್‌ನಲ್ಲಿ ಚೆಂಜಿನ್ ಮತ್ತು ಅವನ ಸಹಚರರ ನಡುವೆ ವಾಟ್ಸಾಪ್ ಸಂಭಾಷಣೆಗಳು ಸೇರಿದಂತೆ ಹಲವಾರು ಸಾಕ್ಷಿಗಳು ಸಿಕ್ಕಿದೆ. ಈ ಸಾಕ್ಷಿ ಮೇರೆಗೆ ಆತನನ್ನು ಬಂಧಿಸಲಾಗಿದೆ. ಆರೋಪಿಯು ವಂಚನೆಗೆ ಬಳಸಲಾದ ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡುವಂತೆ ತನ್ನ ಸಹಾಯಕನಿಗೆ ಸೂಚಿಸಿದ್ದಾನೆ. ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ಕನಿಷ್ಠ 17 ದೂರುಗಳನ್ನು ದಾಖಲಿಸಲಾಗಿದೆ. ಎಲ್ಲವೂ ಒಂದೇ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದೆ. ದೂರುಗಳ ಪ್ರಕಾರ, 100 ಕೋಟಿ ರೂ. ವಂಚನೆಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ತನಿಖೆಯಿಂದ ಆಂಧ್ರಪ್ರದೇಶ (Andhra Pradesh) ಮತ್ತು ಉತ್ತರ ಪ್ರದೇಶದಲ್ಲಿ (Uttar Pradesh) ಸೈಬರ್ ಕ್ರೈಮ್ ಮತ್ತು ಮನಿ ಲಾಂಡರಿಂಗ್ ಒಳಗೊಂಡತೆ ಇತರ ಎರಡು ಮಹತ್ವದ ವಂಚನೆ ಪ್ರಕರಣಗಳಿಗೂ ಫಾಂಗ್ ಚೆಂಜಿನ್‌ಗೂ ಸಂಬಂಧವಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಶಹದಾರ, ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭುಗಿಲೆದ್ದ ವಕ್ಫ್‌ ಆಸ್ತಿ ವಿವಾದ – ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

  • ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣ – 25,000 ಕೋಟಿ ರೂ. ಕಳೆದುಕೊಂಡ ಭಾರತೀಯರು

    ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣ – 25,000 ಕೋಟಿ ರೂ. ಕಳೆದುಕೊಂಡ ಭಾರತೀಯರು

    ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಸೈಬರ್ ವಂಚನೆಗಳಿಂದ (Cyber Fraud) ಭಾರತೀಯರು 25,000 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದು ಸಿಕ್ಕಿಂನ ವಾರ್ಷಿಕ ಬಜೆಟ್‌ಗಿಂತ ದ್ವಿಗುಣವಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

    ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವಾಲಯ ಮತ್ತು  ಅಧಿಕಾರಿಗಳು WhatsApp , MeitY, Instagram ಮತ್ತು Googleನಂತಹ ವಿವಿಧ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳೊಂದಿಗೆ ಈ ಕಳವಳ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಜೂ.24ಕ್ಕೆ ಮುಂದೂಡಿಕೆ

    ಕಳೆದ ವರ್ಷವೊಂದರಲ್ಲೇ ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಜನವರಿ 2024 ರಿಂದ ಜೂನ್ 2024 ರವರೆಗೆ ಕೇಂದ್ರ ಸೈಬರ್ ವಂಚನೆ ಏಜೆನ್ಸಿಯು 709 ದೂರುಗಳನ್ನು ಸ್ವೀಕರಿಸಿದೆ. ಇದರಲ್ಲಿ ಒಬ್ಬೊಬ್ಬರು ಸಂತ್ರಸ್ತರು 1 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 1,421 ಕೋಟಿ ರೂ. ಹಣವನ್ನು ಜನರು ವಂಚನೆಯಿಂದ ಕಳೆದುಕೊಂಡಿದ್ದಾರೆ ಎಂದು ಡೇಟಾ ಬಹಿರಂಗಪಡಿಸಿದೆ. ಇದನ್ನೂ ಓದಿ: ಯಾರೇ ಸ್ಟೇ ತಂದಿದ್ರೂ ತೆರವು ಮಾಡ್ತೀವಿ- ದರ್ಶನ್ ಮನೆ ತೆರವು ಬಗ್ಗೆ ಡಿಕೆಶಿ ರಿಯಾಕ್ಷನ್

    ಎಲ್ಲಾ ಕಂಪನಿಗಳು ಆರಂಭಿಕ ಹಂತದಲ್ಲಿಯೂ ಸಹ ವಿವಿಧ ರೀತಿಯ ವಿವರಗಳನ್ನು ಕೇಳುತ್ತವೆ. ಇದು ಸೈಬರ್ ವಂಚನೆಯನ್ನು ತಡೆಯುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ವಂಚಕರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಆಂಪ್ಲಿಫೈಯರ್‌ಗಳಾಗಿ ಬಳಸುತ್ತಿದ್ದಾರೆ. ಇದರಲ್ಲಿ ವಂಚಕರು ಸುಲಭವಾಗಿ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಇಂಡಿಯಾ ಒಕ್ಕೂಟದ ನಾಯಕರಿಗೆ ಪತ್ರ ಬರೆದು ಭೇಟಿಗೆ ಸಮಯ ಕೇಳಿದ ಸ್ವಾತಿ ಮಲಿವಾಲ್

    ಏಮ್ಸ್, ಐಸಿಎಮ್‌ಆರ್ ಸೈಬರ್ ದಾಳಿಯಿಂದ ಸಾಲ ನೀಡುವ ಅಪ್ಲಿಕೇಶನ್ ವಂಚನೆಗಳವರೆಗೆ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ (NCRP) 2020 ರಿಂದ ಫೆಬ್ರವರಿ 2024ರ ನಡುವೆ 31 ಲಕ್ಷ ದೂರುಗಳನ್ನು ಸ್ವೀಕರಿಸಿದೆ. ಕೇಂದ್ರ ಸರ್ಕಾರದ ಅಧಿಕೃತ ಸಂವಹನದ ಪ್ರಕಾರ, ಸೈಬರ್ ವಂಚನೆ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಬಂಧನವಾಗುತ್ತಿರುವ ಹಿನ್ನೆಲೆ ಈ ಬೆಳವಣಿಗೆ ಹೆಚ್ಚುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ: ರಾಬರ್ಟ್ ವಾದ್ರಾ

    ವಿವಿಧ ಕಾನೂನು ಜಾರಿ ಸಂಸ್ಥೆಗಳು ದಾಖಲಾದ ಪ್ರಕರಣಗಳು ಅಥವಾ ಎಫ್‌ಐಆರ್‌ಗಳು 66,000 ಕ್ಕಿಂತ ಹೆಚ್ಚಿವೆ. ಆದರೆ ಈ ವರ್ಷದವರೆಗೆ ಕೇವಲ 500 ಪ್ರಕರಣಗಳಲ್ಲಿ ಬಂಧನವಾಗಿದೆ. ಈ ಮೂಲಕ 1% ವಂಚಕರ ಬಂಧನವಾಗಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಸಾಲದ ಆ್ಯಪ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಸ್ಟಾಕ್ ಟ್ರೇಡಿಂಗ್ ಗ್ರೂಪ್‌ಗಳಲ್ಲಿ ನಕಲಿ ಜಾಹೀರಾತುಗಳನ್ನು ಪೂರ್ವಭಾವಿಯಾಗಿ ಪತ್ತೆಹಚ್ಚಲು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ರೀಲ್ಸ್‌ಗಾಗಿ ಡ್ರೈವಿಂಗ್ ಮಾಡಲು ಹೋಗಿ ಆಕ್ಸಿಲರೇಟರ್ ಒತ್ತಿದ ಯುವತಿ- ಮುಂದೇನಾಯ್ತು..?

  • 8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ

    8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ

    ಹುಬ್ಬಳ್ಳಿ: ಲೋನ್ ಆ್ಯಪ್‌ನಲ್ಲಿ ಕೇವಲ 8 ಸಾವಿರ ರೂ. ಸಾಲ ಮಾಡಿದ ವ್ಯಕ್ತಿ ಲಕ್ಷ ಲಕ್ಷ ಹಣ ಮರುಪಾವತಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ರೋಹನ್ ಲೋನ್ ಆ್ಯಪ್‌ನಲ್ಲಿ ಹಣ ಪಡೆದು ಮೋಸಹೋದ ವ್ಯಕ್ತಿ. ರೋಹನ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಲೋನ್ ಕ್ಯೂಬ್ ಮೊಬೈಲ್ ಆ್ಯಪ್‌ನಲ್ಲಿ 8 ಸಾವಿರ ರೂ. ಸಾಲ ಪಡೆಯಲು ಮುಂದಾಗಿದ್ದರು.

    8 ಸಾವಿರ ರೂ. ಸಾಲದ ಮುಂಗಡ ಬಡ್ಡಿ ಕಡಿತಗೊಳಿಸಿ ಕೇವಲ 4,960 ರೂ. ಹಣವನ್ನು ಲೋನ್ ಆ್ಯಪ್ ನೀಡಿತ್ತು ಅಲ್ಲದೇ 8 ಸಾವಿರ ರೂ. ಹಣವನ್ನು 7 ದಿನಗಳಲ್ಲಿ ತೀರಿಸಬೇಕೆಂದು ಷರತ್ತು ಸಹ ವಿಧಿಸಿತ್ತು. ಈ ಬಗ್ಗೆ ರೋಹನ್‌ಗೆ ನಿತ್ಯ ಕರೆಗಳು ಬರುತ್ತಿದ್ದು, ಹಣ ಬೇಗ ಹಿಂತಿರುಗಿಸುವಂತೆ ಒತ್ತಡ ಹಾಕಲಾಗುತ್ತಿತ್ತು. ಇದನ್ನೂ ಓದಿ: ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಈ ಕಿರಿಕಿರಿಗೆ ಬೇಸತ್ತ ರೋಹನ್ ಅದೇ ಆ್ಯಪ್‌ನಲ್ಲಿ ಪದೇ ಪದೇ ಲೋನ್ ಪಡೆದಿದ್ದಾರೆ. ಒಟ್ಟು 4,26,654 ರೂ. ಹಣ ಪಡೆದುಕೊಂಡಿದ್ದ ರೋಹನ್ ವಿಪರ್ಯಾಸವೆಂದರೆ ಅದೇ ಆ್ಯಪ್‌ಗೆ ಮತ್ತೆ ಹಿಂದಿರುಗಿಸಿದ್ದಾರೆ. ಹೀಗಿದ್ದರೂ ಆ್ಯಪ್‌ನಿಂದ ಮತ್ತೆ ಕರೆಗಳು ಬರುತ್ತಿದ್ದು, ಎಲ್ಲಾ ಸಾಲವನ್ನು ಮರಳಿ ತುಂಬುವಂತೆ ನಿರಂತರ ಒತ್ತಡ ಹಾಕಲಾಗಿದೆ.

    ಈ ಹಿನ್ನೆಲೆ ಆ್ಯಪ್‌ನಲ್ಲಿ ಮಾಡಿದ ಸಾಲವಲ್ಲದೇ, ವೈಯಕ್ತಿಕವಾಗಿ ಲಕ್ಷಾಂತರ ರೂ. ಹಣವನ್ನು ಮರುಪಾವತಿ ಮಾಡಿದ್ದಾರೆ. ಇಷ್ಟಾದರೂ ಆ್ಯಪ್ ರೋಹನ್‌ಗೆ, ವಿವಿಧ ನಂಬರ್‌ಗಳ ಮೂಲಕ ಕರೆ ಮಾಡಿ ಮತ್ತೆ ಹಣ ತುಂಬುವಂತೆ ಹೇಳಲಾಗುತ್ತಿದೆ. ಕೇಳಿದಷ್ಟು ಹಣ ನೀಡದಿದ್ದರೆ, ಎಲ್ಲಾ ಪರಿಚಯದವರಿಗೆ, ವೈಯಕ್ತಿಕ ಡೇಟಾ ಹಾಗೂ ಮೆಸೇಜ್‌ಗಳನ್ನು ಹಂಚುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು

    ಇದರಿಂದ ಮಾನಸಿಕವಾಗಿ ಕುಗ್ಗಿರುವ ರೋಹನ್, ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.