Tag: Cyber Cell

  • ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆಗೆ ಯತ್ನ, ದೂರು ದಾಖಲು

    ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆಗೆ ಯತ್ನ, ದೂರು ದಾಖಲು

    ಬೆಂಗಳೂರು:  ಕಾದಂಬರಿಕಾರ, ನಾಟಕಕಾರ, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿ ಡಾ.ಚಂದ್ರಶೇಖರ ಕಂಬಾರ ಹೆಸರಿನಲ್ಲಿ ವಂಚನೆಗೆ ಯತ್ನ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

    ಚಂದ್ರಶೇಖರ ಕಂಬಾರ ಹೆಸರಿನಲ್ಲಿ ವಾಟ್ಸಪ್‌ ಸಂದೇಶ ಕಳಿಸುತ್ತಿರುವ ಅಪರಿಚಿತರು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್‌ ಅಪರಾಧ ವಿಭಾಗಕ್ಕೆ ಚಂದ್ರಶೇಖರ ಕಂಬಾರ ದೂರು ನೀಡಿದ್ದಾರೆ.  ಇದನ್ನೂ ಓದಿ: 1 ಲೀಟರ್ ಅಡುಗೆ ಎಣ್ಣೆ 555 ರೂ., ಕೆಜಿ ತುಪ್ಪ 605 ರೂ.ಗೆ ದಿಢೀರ್ ಏರಿಕೆ

    ದೂರಿನಲ್ಲಿ ಏನಿದೆ?
    ನನ್ನ ಹೆಸರು ಮತ್ತು ಫೋಟೋ ಬಳಸಿ ನನಗೆ ಧನ ಸಹಾಯ ಮಾಡಿ ಎಂದು ವಿವಿಧ ಕಡೆ ವಾಟ್ಸಪ್‌ನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸಾರ್ವಜನಿಕರು ನಂಬಬಾರದು. ಈ ರೀತಿ ನನ್ನ ಹೆಸರು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

  • 45 ಲಕ್ಷದ ಗಿಫ್ಟ್ ಆಸೆಗೆ ಬಿದ್ದು, 32 ಲಕ್ಷ ರೂ. ಕಳೆದುಕೊಂಡ ಯುವತಿ

    45 ಲಕ್ಷದ ಗಿಫ್ಟ್ ಆಸೆಗೆ ಬಿದ್ದು, 32 ಲಕ್ಷ ರೂ. ಕಳೆದುಕೊಂಡ ಯುವತಿ

    ಲಕ್ನೋ: ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಸ್ನೇಹಿತನ ಮಾತು ನಂಬಿ 32 ಲಕ್ಷ ರೂ. ಕಳೆದುಕೊಂಡ ಘಟನೆ ಉತ್ತರಪ್ರದೇಶದ ರಾಯ್ ಬರೇಲಿ ಜಿಲ್ಲೆಯ ನಡೆದಿದೆ.

    ಯುವತಿಗೆ ಇನ್‍ಸ್ಟಾಗ್ರಾಮ್ ನಲ್ಲಿ ಯುವಕನೊಬ್ಬ ನಾನು ಯುಕೆ ನಿವಾಸಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಇದನ್ನು ನಂಬಿ ಯುವತಿಯು ಅವನ ಜೊತೆ ಸ್ನೇಹ ಬೆಳೆಸಿದ್ದಾಳೆ. ಪರಿಣಾಮ ಯುವಕ ನಿಮಗೆ 45 ಲಕ್ಷದ ಉಡುಗೊರೆಯನ್ನು ಕಳುಹಿಸುತ್ತಿದ್ದೇನೆ ಅದಕ್ಕೆ ನೀವು 32 ಲಕ್ಷ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳಿದ್ದಾನೆ. ಉಡುಗೊರೆಗೆ ಆಸೆ ಬಿದ್ದು, ಯುವತಿ ಆತನಿಗೆ 32 ಲಕ್ಷ ರೂ. ಆನ್‍ಲೈನ್ ಮೂಲಕ ಕಳುಹಿಸಿದ್ದು, ಹಣ ಕಳುಹಿಸಿದ ನಂತರ ಯುವಕ ಈಕೆಯ ಸಂಪರ್ಕಕ್ಕೆ ಸಿಕ್ಕಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದನ್ನೂ ಓದಿ: ಥ್ರೋಬ್ಯಾಕ್ ವೀಡಿಯೋ ಎಂದು ವೈರಲ್ ವೀಡಿಯೋ ಶೇರ್ ಮಾಡಿದ ಡಿಡಬ್ಲ್ಯೂಆರ್

    ಈ ಪರಿಣಾಮ ಯುವತಿಗೆ ತಾನು ಮೋಸ ಹೋಗಿರುವುದು ತಿಳಿದು, ರಾಯ್ ಬರೇಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ರಾಯ್ ಬರೇಲಿ ಪೊಲೀಸ್ ಎಸ್‍ಪಿ ಶ್ಲೋಕ್ ಕುಮಾರ್ ಮಾತನಾಡಿದ್ದು, ಯುವತಿ ಕಂತುಗಳ ಮೂಲಕ ಆನ್‍ಲೈನ್ ನಲ್ಲಿ ಹಣ ಕಳುಹಿಸಲು ಯುವಕ ಹೇಳಿದ್ದಾನೆ. ಇದನ್ನೂ ಓದಿ: ಸಿದ್ದರಾಮಯ್ಯ, ಹೆಚ್‍ಡಿಕೆ ಗೆ RSS ಸಂಸ್ಕಾರ ಗೊತ್ತಿಲ್ಲ: ಶ್ರೀರಾಮುಲು

    ಯುವಕನ ಮಾತಿಗೆ ಮರುಳಾದ ಯುವತಿ ಹಣ ಕಳುಹಿಸಿದ್ದು, ಕೊನೆಯದಾಗಿ ಹಣ ಕಳುಹಿಸಿದ ನಂತರ ಈಕೆಯ ಜೊತೆ ಸಂಪರ್ಕವನ್ನು ಯುವಕ ಬಿಟ್ಟಿದ್ದಾನೆ. ಈ ಕುರಿತು ನಾವು ಮಾಹಿತಿ ತಿಳಿದುಕೊಂಡಿದ್ದು, ಸೈಬರ್ ಸೆಲ್ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಯುವತಿ ಸೆಪ್ಟೆಂಬರ್ ನಲ್ಲಿ ಇನ್‍ಸ್ಟಾಗ್ರಾಮ್ ಮೂಲಕ ವ್ಯಕ್ತಿಯ ಪರಿಚಯವಾಗಿತ್ತು.

  • ಸೆಕ್ಸ್ ವಿಡಿಯೋ ವೈರಲ್ ಆಗ್ತಿದ್ದಂತೆ ದೇವಮಾನವ ಎಸ್ಕೇಪ್

    ಸೆಕ್ಸ್ ವಿಡಿಯೋ ವೈರಲ್ ಆಗ್ತಿದ್ದಂತೆ ದೇವಮಾನವ ಎಸ್ಕೇಪ್

    ಚಂಡೀಗಢ: ಹುಡುಗಿಯರ ಜೊತೆಗಿನ ಸೆಕ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ವಯಂ ಘೋಷಿತ ದೇವಮಾನವನೊಬ್ಬ ಪರಾರಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    ಆರೋಪಿಯನ್ನು ದೇವಮಾನವ ಜ್ಯೋತಿಗಿರಿ ಎಂದು ಗುರುತಿಸಲಾಗಿದ್ದು, ಈತ ಗುರುಗ್ರಾಮ ಆಶ್ರಮದಿಂದ ಕಾಣೆಯಾಗಿದ್ದಾನೆ. ಈತ ಅನೇಕ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಎಎಪಿ ಮುಖಂಡ ಸುಧೀರ್ ಯಾದವ್ ದೂರು ದಾಖಲಿಸಿದ್ದಾರೆ.

    ಜ್ಯೋತಿಗಿರಿ ಹರಿಯಾಣದ ಗುರುಗ್ರಾಮದ ಬಹೇದಾ ಕಲಾ ಗ್ರಾಮದಲ್ಲಿ ವಾಸಿಸುತ್ತಿದ್ದನು. ಜೊತೆ ಆಶ್ರಮವೊಂದನ್ನು ನಡೆಸುತ್ತಿದ್ದು, ಅಲ್ಲಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿ ಜ್ಯೋತಿಗಿರಿ ಹುಡುಗಿಯರ ಜೊತೆ ಸೆಕ್ಸ್ ಮಾಡುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ಸೆಕ್ಸ್ ಟೇಪ್‍ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸೈಬರ್ ಸೆಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿ ಜ್ಯೋತಿಗಿರಿ ತನ್ನ ಆಶ್ರಮದಲ್ಲಿ ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡುವುದನ್ನು ಕಾಣಬಹುದು. ಜೊತೆ ಈತ ಹುಡುಗಿಯರ ಜೊತೆಯಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಮುಖ ಕಾಣಿಸಿಕೊಂಡಿರುವ ಸಂತ್ರಸ್ತೆಯೊಬ್ಬರು ಆನ್‍ಲೈನ್‍ನಲ್ಲಿ ವಿಡಿಯೋ ಲೀಕ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.