Tag: CWG 2022

  • ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಮುಂಬೈ: ಕಾಮನ್‌ವೆಲ್ತ್ ಗೇಮ್ಸ್-2022ರಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಈ ವರ್ಷದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲಿದ್ದಾರೆ.

    ಪಿ.ವಿ ಸಿಂಧು ಅವರು ಸದ್ಯ ಕಾಲಿನ ಪಾದದ ಫ್ರ್ಯಾಕ್ಚರ್‌ ಸಮಸ್ಯೆಯಿಂದಾಗಿ ಬಳಲುತ್ತಿದ್ದು, ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    ಕಾಮನ್‌ಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ.ಸಿಂದು ಕಾಲು ನೋವಿನ ಹೊರತಾಗಿಯೂ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ಸ್ ಪಂದ್ಯವನ್ನು ಆಡಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಸಿಂಧು, `ದುರಾದೃಷ್ಟವಶಾತ್ ನಾನು ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಹೊರಗುಳಿಯಬೇಕಿದೆ. ಸದ್ಯ ನಾನು ಗಾಯದ ಸಮಸ್ಯೆಯಿಂದ ನೋವು ಅನುಭವಿಸುತ್ತಿದ್ದೇನೆ. ಕಾಮನ್‌ವೆಲ್ತ್ ಕ್ವಾಲಿಫೈಯರ್‌ನಲ್ಲಿಯೇ ಗಾಯದ ಭಯವಿತ್ತು. ಆದರೆ ನನ್ನ ತರಬೇತುದಾರರು ಹಾಗೂ ದೈಹಿಕ ತರಬೇತುದಾರರ ಸಹಾಯದಿಂದ ಪಂದ್ಯವನ್ನಾಡಿದೆ ಎಂದು ಸಿಂಧು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಫೋಟಕ ಆಟವಾಡಿದ ಟೆಸ್ಟ್ ಸ್ಪೆಷಲಿಷ್ಟ್‌ – ಒಂದೇ ಓವರ್‌ನಲ್ಲಿ 22 ರನ್ ಚಚ್ಚಿದ ಪೂಜಾರ

    ಬರ್ಮಿಂಗ್‌ಹ್ಯಾಮ್‌ನಿಂದ ಹೈದರಾಬಾದ್‌ಗೆ ಹಿಂದಿರುಗಿದ ನಂತರ ತಕ್ಷಣ ನಾನು ಎಂಆರ್‌ಐ ಸ್ಕ್ಯಾನ್‌ಗೆ ಧಾವಿಸಿದೆ. ವೈದ್ಯರು ನನ್ನ ಎಡಪಾದದಲ್ಲಿ ಗಂಭೀರ ಸಮಸ್ಯೆಯಾಗಿರುವುದನ್ನು ಗುರುತಿಸಿ ಕೆಲ ವಾರಗಳ ವರೆಗೆ ವಿಶ್ರಾಂತಿ ಪಡೆಯುವಂತೆ ಶಿಫಾರಸು ಮಾಡಿದ್ದಾರೆ. ಕೆಲವೇ ವಾರಗಳಲ್ಲಿ ನಾನು ತರಬೇತಿಗೆ ಹಿಂದಿರುಗಬೇಕು. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    2020ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ, 2019ರ ಟೂರ್ನಿಯಲ್ಲಿ ಚಿನ್ನದ ಪದಕ ನಂತರ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಕೊನೆಯದಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್‌ಗೆ ತೆರಳಿದ್ದ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆ – PBF

    ಕಾಮನ್‌ವೆಲ್ತ್‌ಗೆ ತೆರಳಿದ್ದ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆ – PBF

    ಬರ್ಮಿಂಗ್‌ಹ್ಯಾಮ್/ಇಸ್ಲಾಮಾಬಾದ್: ಬರ್ಮಿಂಗ್‌ಹ್ಯಾಮ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್-2022 ಕ್ರೀಡಾಕೂಟಕ್ಕೆ ತೆರಳಿದ್ದ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ ಎಂದು ನ್ಯಾಷನಲ್ ಫೆಡರೇಷನ್ ಹೇಳಿದೆ.

    ಪಾಕಿಸ್ತಾನದ ಬಾಕ್ಸಿಂಗ್ ಫೆಡರೇಶನ್ (ಪಿಬಿಎಫ್) ಕಾರ್ಯದರ್ಶಿ ನಾಸಿರ್ ಟಾಂಗ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನ್ ತಂಡವು ಇಸ್ಲಾಮಾಬಾದ್‌ಗೆ ತೆರಳುವ ಒಂದೆರಡು ಗಂಟೆಗಳ ಮುನ್ನ ಬಾಕ್ಸರ್‌ಗಳಾದ ಸುಲೇಮಾನ್ ಬಲೋಚ್ ಮತ್ತು ನಜೀರುಲ್ಲಾ ನಾಪತ್ತೆಯಾಗಿದ್ದಾರೆ ಎಂದು ಖಚಿತಪಡಿಸಿದೆ. ಇದನ್ನೂ ಓದಿ: ಅರುಂಧತಿ ಸಿನಿಮಾ ನೋಡಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ

    ಕಾಮನ್‌ವೆಲ್ತ್ ಕ್ರೀಡಾಕೂಟವು ಸೋಮವಾರ ಕೊನೆಗೊಂಡಿತು. ನಂತರ ಅವರು ತಂಡದೊಂದಿಗೆ ಪಾಕಿಸ್ತಾನಕ್ಕೆ ತರಳಬೇಕಿತ್ತು. ಇದೇ ವೇಳೆ ಅವರು ಕಾಣೆಯಾಗಿದ್ದಾರೆ. ಆದರೆ ಅವರ ಪಾಸ್‌ಪೋರ್ಟ್ ಹಾಗೂ ಟ್ರಾವೆಲ್‌ಗೆ ಸಂಬಂಧಿಸಿದ ದಾಖಲೆಗಳು ಪಾಕಿಸ್ತಾನ ಬಾಕ್ಸಿಂಗ್ ಫೆಡರೇಷನ್ ಅಧಿಕಾರಿಗಳ ಬಳಿಯೇ ಇವೆ ಎಂದು ಹೇಳಿದ್ದಾರೆ.

    ಸುಲೇಮಾನ್ ಮತ್ತು ನಜೀರುಲ್ಲಾ ನಾಪತ್ತೆಯಾಗಿರುವ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಯುಕೆನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹಾಗೂ ಲಂಡನ್‌ನಲ್ಲಿರುವ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಈ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಒಲಿಂಪಿಕ್ ಅಸೋಸಿಯೇಷನ್ (ಪಿಒಎ) 4 ಸದಸ್ಯರ ಸಮಿತಿಯನ್ನು ರಚಿಸಿದೆ ನಾಸಿರ್ ಟಾಂಗ್ ಹೇಳಿದ್ದಾರೆ. ಇದನ್ನೂ ಓದಿ: `ಮಾರ್ಕ್ ಆ್ಯಂಟನಿ’ ಚಿತ್ರೀಕರಣದಲ್ಲಿ ನಟ ವಿಶಾಲ್‌ಗೆ ಗಂಭೀರ ಗಾಯ

    2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ವೇಟ್ ಲಿಫ್ಟಿಂಗ್ ಹಾಗೂ ಜಾವೆಲಿನ್ ಎಸೆತದಲ್ಲಿ ಎರಡು ಚಿನ್ನ ಸೇರಿದಂತೆ 8 ಪದಕಗಳೊಂದಿಗೆ ಹೊರಹೊಮ್ಮಿತು.

    Live Tv
    [brid partner=56869869 player=32851 video=960834 autoplay=true]

  • ನೆರವು ಕೇಳಿದ್ದಕ್ಕೆ ನೀವು ದೆಹಲಿ ಪ್ರತಿನಿಧಿಸಿದ್ರಾ ಎಂದು ಪ್ರಶ್ನಿಸಿದ್ದ AAP ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸಿ ತಿರುಗೇಟು ಕೊಟ್ಟ ಕುಸ್ತಿಪಟು

    ನೆರವು ಕೇಳಿದ್ದಕ್ಕೆ ನೀವು ದೆಹಲಿ ಪ್ರತಿನಿಧಿಸಿದ್ರಾ ಎಂದು ಪ್ರಶ್ನಿಸಿದ್ದ AAP ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸಿ ತಿರುಗೇಟು ಕೊಟ್ಟ ಕುಸ್ತಿಪಟು

    ನವದೆಹಲಿ: ದೆಹಲಿ ಸರ್ಕಾರದಿಂದ ಆರ್ಥಿಕ ಸಹಕಾರ ನೀಡುವಂತೆ ಮನವಿ ಮಾಡಿದ್ದಕ್ಕೆ, ʼನೀವು ದೆಹಲಿ ರಾಜ್ಯವನ್ನು ಪ್ರತಿನಿಧಿಸಿದ್ರಾʼ ಎಂದು ಪ್ರಶ್ನಿಸಿದ್ದ ಆಮ್‌ ಆದ್ಮಿ ಪಕ್ಷದ ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸುವ ಮೂಲಕ ಕುಸ್ತಿಪಟು ದಿವ್ಯಾ ಕಕ್ರನ್‌ ತಿರುಗೇಟು ನೀಡಿದ್ದಾರೆ.

    61ನೇ ರಾಷ್ಟ್ರೀಯ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದಾರೆ ಎಂದು ತಿಳಿಸಿರುವ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಪ್ರಮಾಣಪತ್ರವನ್ನು ದಿವ್ಯಾ ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ʼನಾನು 2011 ರಿಂದ 2017 ರವರೆಗೆ ದೆಹಲಿಯನ್ನು ಪ್ರತಿನಿಧಿಸಿದ್ದೇನೆ. ಇದು ದೆಹಲಿ ರಾಜ್ಯದಿಂದ ನನ್ನ ಪ್ರಮಾಣಪತ್ರವಾಗಿದೆ. ನೀವು ಇನ್ನೂ ನನ್ನನ್ನು ನಂಬದಿದ್ದರೆ, ನಾನು 17 ಚಿನ್ನದ ಪದಕಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅಪ್‌ಲೋಡ್ ಮಾಡುತ್ತೇನೆ ಎಂದು ಎಎಪಿ ಶಾಸಕ ಸೌರಭ್‌ ಭಾರಧ್ವಾಜ್‌ ಅವರಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮನವಿ ಮಾಡಿದ್ರೂ ನನಗೆ ದೆಹಲಿ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ

    ನಡೆದಿದ್ದೇನು?
    ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ದಿವ್ಯಾ ಕಕ್ರನ್‌ ಅವರು ದೆಹಲಿ ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಕಳೆದ 20 ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿದ್ದು, ಸ್ಪರ್ಧೆಗಾಗಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಈವರೆಗೂ ನನಗೆ ದೆಹಲಿ ಸರ್ಕಾರದಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ನೊಂದು ನುಡಿದಿದ್ದರು. ಅಲ್ಲದೇ ದೆಹಲಿಯವರೇ ಆಗಿದ್ದರೂ ಬೇರೆ ರಾಜ್ಯದ ಪರ ಆಡುತ್ತಿರುವ ಇತರ ಆಟಗಾರರನ್ನು ಗೌರವಿಸುವ ರೀತಿಯಲ್ಲಿಯೇ ನನ್ನನ್ನು ಗೌರವಿಸಬೇಕೆಂಬುದು ಟ್ವೀಟ್‌ ಮೂಲಕ ಮನವಿ ಮಾಡಿದ್ದರು.

    ಈ ವೇಳೆ ದಿವ್ಯಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಶಾಸಕ ಸೌರಭ್ ಭಾರದ್ವಾಜ್ ಅವರು, ಸಹೋದರಿ, ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಆದರೆ ನೀವು ದೆಹಲಿಯ ಪರ ಆಡಿದ್ದು ನನಗೆ ನೆನಪಿಲ್ಲ. ಆದರೆ ನೀವು ಉತ್ತರ ಪ್ರದೇಶವನ್ನು ಪ್ರತಿನಿಧಿಸಿ ಆಡಿದ್ದೀರಿ. ಆದರೆ ಒಬ್ಬ ಆಟಗಾರ ದೇಶಕ್ಕೆ ಸೇರಿದವನು. ಯೋಗಿ ಆದಿತ್ಯನಾಥ್ ಅವರಿಂದ ನೀವು ಯಾವುದೇ ಪ್ರಶಸ್ತಿಗಳನ್ನು ನಿರೀಕ್ಷಿಸುವುದಿಲ್ಲ. ದೆಹಲಿ ಸಿಎಂ ನಿಮ್ಮ ಮನವಿಗೆ ಸ್ಪಂದಿಸುತ್ತಾರೆಂಬ ಭರವಸೆ ನನಗಿದೆ ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: Well Done Girls: ಗೋಲ್ಡ್‌ ಜಸ್ಟ್‌ ಮಿಸ್‌ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು

    ದೆಹಲಿ ಸರ್ಕಾರವು ದೇಶದ ಎಲ್ಲಾ ಕ್ರೀಡಾಪಟುಗಳನ್ನು ಗೌರವಿಸುತ್ತದೆ. ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತದೆ. ದಿವ್ಯಾ ಕಕ್ರನ್ ಸದ್ಯ ಉತ್ತರಪ್ರದೇಶ ಪರ ಆಡುತ್ತಿದ್ದಾರೆ. ಅವರು ದೆಹಲಿಯ ಪರವಾಗಿ ಆಡಿದ್ದರೆ ಅಥವಾ ದೆಹಲಿಯಲ್ಲಿ ಯಾವುದೇ ಕ್ರೀಡಾ ಯೋಜನೆಯ ಭಾಗವಾಗಿದ್ದರೆ ಅಥವಾ ಅಂತಹ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ರಾಜ್ಯ ಸರ್ಕಾರ ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತದೆ ಎಂದು ಸಹ ವಕ್ತಾರ ಪ್ರತಿಕ್ರಿಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

    ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

    ಬರ್ಮಿಂಗ್‌ಹ್ಯಾಮ್‌: ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ. ಸಿಂಧು ಕಾಮನ್‌ವೆಲ್ತ್‌ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

    ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಸೆಟ್‌ಗಳಿಂದ ಪಂದ್ಯವನ್ನು ಗೆದ್ದು ಸತತ ಮೂರು ಕಾಮನ್‌ವೆಲ್ತ್‌ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

    ಈ ಹಿಂದೆ 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚು, 2018 ರಲ್ಲಿ ಸೈನಾ ನೆಹ್ವಾಲ್‌ ವಿರುದ್ಧ ಸೋತು ಬೆಳ್ಳಿ ಗೆದ್ದಿದ್ದ ಸಿಂಧು ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿವ ಮೂಲಕ ಕನಸು ನನಸು ಮಾಡಿದ್ದಾರೆ.

    19 ಚಿನ್ನ, 15 ಬೆಳ್ಳಿ, 22 ಕಂಚಿನ ಪದಕ ಗೆದ್ದಿರುವ ಭಾರತ ಈಗ ಪದಕ ಪಟ್ಟಿಯಲ್ಲಿ ನಾಲ್ಕನೇಯ ಸ್ಥಾನಕ್ಕೆ ಜಿಗಿದಿದೆ.

    Live Tv
    [brid partner=56869869 player=32851 video=960834 autoplay=true]

  • ಮನವಿ ಮಾಡಿದ್ರೂ ನನಗೆ ದೆಹಲಿ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ

    ಮನವಿ ಮಾಡಿದ್ರೂ ನನಗೆ ದೆಹಲಿ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ

    ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ದಿವ್ಯಾ ಕಕ್ರನ್‌ ಅವರು ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    ಕಳೆದ 20 ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿದ್ದು, ಸ್ಪರ್ಧೆಗಾಗಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಈವರೆಗೂ ನನಗೆ ಯಾವುದೇ ಸರ್ಕಾರದಿಂದ ಸಹಾಯ ಸಿಗಲಿಲ್ಲ ಎಂದು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ವಿಂಡೀಸ್ ವಿರುದ್ಧದ ಕೊನೆಯ T20 ಪಂದ್ಯಕ್ಕೆ ರೋಹಿತ್ ಚಕ್ಕರ್ – ಕಾಮನ್‍ವೆಲ್ತ್ ಫೈನಲ್ ನೋಡಲು ಹಾಜರ್

    ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕುಸ್ತಿಪಟು ದಿವ್ಯಾ ಕಕ್ರನ್‌ ಕಂಚಿನ ಪದಕ ಗೆದ್ದರು. ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಟ್ವೀಟ್‌ ಮಾಡಿ ಅಭಿನಂದನೆ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್‌ ಮಾಡಿರುವ ದಿವ್ಯಾ ತನಗೆ ದೆಹಲಿ ಸರ್ಕಾರದಿಂದ ಸಹಾಯ ನೀಡಬೇಕು ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಕುಸ್ತಿಪಟು ದಿವ್ಯಾ, ನನ್ನನ್ನು ಅಭಿನಂದಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ 20 ವರ್ಷಗಳಿಂದ, ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ಜೊತೆಗೆ ಕುಸ್ತಿಯನ್ನು ನಿರಂತರ ಅಭ್ಯಾಸ ಮಾಡುತ್ತಿದ್ದೇನೆ. ಆದರೆ ನನಗೆ ಯಾವುದೇ ಸರ್ಕಾರದಿಂದ ಸಹಾಯ ಸಿಗಲಿಲ್ಲ ಎಂದು ಬೇಸರಿಸಿದ್ದಾರೆ.

    ದೆಹಲಿಯವರೇ ಆಗಿದ್ದರೂ ಬೇರೆ ರಾಜ್ಯದ ಪರ ಆಡುತ್ತಿರುವ ಇತರ ಆಟಗಾರರನ್ನು ಗೌರವಿಸುವ ರೀತಿಯಲ್ಲಿಯೇ ನನ್ನನ್ನು ಗೌರವಿಸಬೇಕೆಂಬುದು ನನ್ನ ವಿನಂತಿ ಎಂದು ತಿಳಿಸಿದ್ದಾರೆ.

    ನಾನು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಾಗ, ನನಗೆ ಯಾವ ಸಹಾಯವೂ ಸಿಗಲಿಲ್ಲ. ನಾನು ತುಂಬಾ ಕಠಿಣ ಪರಿಸ್ಥಿತಿಗಳಿಂದ ಬಂದಿದ್ದೇನೆ. ಬಡಮಕ್ಕಳನ್ನು ಬೆಂಬಲಿಸುವ ಬಗ್ಗೆ ಯೋಚಿಸಬೇಕು. ಇಂದು ನೀವು ನಮ್ಮನ್ನು ಇಲ್ಲಿಗೆ ಕರೆದಿದ್ದೀರಿ ಆದರೆ ನಮಗೆ ಹೆಚ್ಚು ಅಗತ್ಯವಿರುವಾಗ, ಯಾರೂ ನಮಗೆ ಸಹಾಯ ಮಾಡುವುದಿಲ್ಲ. ನಮಗೆ ಹೆಚ್ಚು ಅಗತ್ಯವಿರುವಾಗ ನಾವು ಬೆಂಬಲವನ್ನು ಪಡೆದರೆ, ನಾವು ಶೇ.100 ಪರಿಶ್ರಮವನ್ನು ಕ್ರೀಡೆಯಲ್ಲಿ ತೋರಿಸಬಹುದು. ಚಿನ್ನವನ್ನು ಸಹ ಗೆಲ್ಲಬಹುದು. CWG ಸಮಯದಲ್ಲಿ ನಾನು ಪದಕ ಗೆದ್ದಾಗ, ನೀವು ಕರೆ ಮಾಡಿ ನಮಗೆ ಸಹಾಯ ಮಾಡುವುದಾಗಿ ಹೇಳಿದ್ದೀರಿ. ನಾನು ಏಷ್ಯನ್ ಗೇಮ್ಸ್‌ಗೆ ತರಬೇತಿಗಾಗಿ ಬೆಂಬಲವನ್ನು ಕೇಳಿದ್ದೆ, ಆದರೆ ಏನೂ ಆಗಲಿಲ್ಲ. ಈ ಸಂಬಂಧ ಪತ್ರಗಳನ್ನೂ ಬರೆದೆ. ಆದರೆ ಅದರ ನಂತರ ಯಾರೂ ನನ್ನ ಕರೆಗಳನ್ನು ಸ್ವೀಕರಿಸಲಿಲ್ಲ. ಇಂದು ನಾನು ಪ್ರಶಂಸೆಗಳನ್ನು ಪಡೆಯುತ್ತಿದ್ದೇನೆ. ಆದರೆ ನಾನು ಬಯಸಿದಾಗ, ನನಗೆ ಬೆಂಬಲ ಸಿಗಲಿಲ್ಲ. ದಯವಿಟ್ಟು ಈಗಿನ ಮಕ್ಕಳ ಬಗ್ಗೆ ಯೋಚಿಸಿ. ದೆಹಲಿಯು ಕೆಲವೇ ಪದಕಗಳನ್ನು ಪಡೆದಿದೆ. ಹರಿಯಾಣವನ್ನು ನೋಡಿ, ಪದಕ ಗೆದ್ದವರಿಗೆ 3 ಕೋಟಿ ಕೊಡುತ್ತಾರೆ. ದೆಹಲಿ ಈಗ ಈ ಮೊತ್ತವನ್ನು 20 ಲಕ್ಷದಿಂದ 1 ಕೋಟಿಗೆ ಏರಿಸಲು ನಿರ್ಧರಿಸಿದೆ ಎಂದು ದಿವ್ಯಾ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: Well Done Girls: ಗೋಲ್ಡ್‌ ಜಸ್ಟ್‌ ಮಿಸ್‌ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು

    ದಿವ್ಯಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್, ಸಹೋದರಿ, ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಆದರೆ ನೀವು ದೆಹಲಿಯ ಪರ ಆಡಿದ್ದು ನನಗೆ ನೆನಪಿಲ್ಲ. ಆದರೆ ನೀವು ಉತ್ತರ ಪ್ರದೇಶವನ್ನು ಪ್ರತಿನಿಧಿಸಿ ಆಡಿದ್ದೀರಿ. ಆದರೆ ಒಬ್ಬ ಆಟಗಾರ ದೇಶಕ್ಕೆ ಸೇರಿದವನು. ಯೋಗಿ ಆದಿತ್ಯನಾಥ್ ಅವರಿಂದ ನೀವು ಯಾವುದೇ ಪ್ರಶಸ್ತಿಗಳನ್ನು ನಿರೀಕ್ಷಿಸುವುದಿಲ್ಲ. ದೆಹಲಿ ಸಿಎಂ ನಿಮ್ಮ ಮನವಿಗೆ ಸ್ಪಂದಿಸುತ್ತಾರೆಂಬ ಭರವಸೆ ನನಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

    ದೆಹಲಿ ಸರ್ಕಾರವು ದೇಶದ ಎಲ್ಲಾ ಕ್ರೀಡಾಪಟುಗಳನ್ನು ಗೌರವಿಸುತ್ತದೆ. ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತದೆ. ದಿವ್ಯಾ ಕಕ್ರನ್ ಸದ್ಯ ಉತ್ತರಪ್ರದೇಶ ಪರ ಆಡುತ್ತಿದ್ದಾರೆ. ಅವರು ದೆಹಲಿಯ ಪರವಾಗಿ ಆಡಿದ್ದರೆ ಅಥವಾ ದೆಹಲಿಯಲ್ಲಿ ಯಾವುದೇ ಕ್ರೀಡಾ ಯೋಜನೆಯ ಭಾಗವಾಗಿದ್ದರೆ ಅಥವಾ ಅಂತಹ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ರಾಜ್ಯ ಸರ್ಕಾರ ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತದೆ ಎಂದು ಸಹ ವಕ್ತಾರ ಪ್ರತಿಕ್ರಿಯಿಸಿದ್ದಾರೆ. ಕುಸ್ತಿಪಟು ದಿವ್ಯಾಗೆ ಅಗತ್ಯ ಸಹಾಯದ ಭರವಸೆಯನ್ನು ಸಿಎಂ ಕೇಜ್ರಿವಾಲ್‌ ಕೂಡ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • CWG-2022: ಭಾರತಕ್ಕೆ ಚಿನ್ನದ ಕಿಕ್ ಕೊಟ್ಟ ಬಾಕ್ಸರ್ಸ್, ಸಿಂಧು ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    CWG-2022: ಭಾರತಕ್ಕೆ ಚಿನ್ನದ ಕಿಕ್ ಕೊಟ್ಟ ಬಾಕ್ಸರ್ಸ್, ಸಿಂಧು ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    ಬರ್ಮಿಂಗ್‌ಹ್ಯಾಮ್: ಪ್ರತಿಷ್ಟಿತ ಕಾಮನ್‌ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿ ಎರಡು ಚಿನ್ನದ ಪದಕಗಳು ಭಾರತದ ಪಾಲಾಗಿವೆ.

    48 ಕೆಜಿ ವಿಭಾಗದ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ನೀತು ಗಂಗಾಸ್ ಹಾಗೂ 51 ಕೆಜಿ ಪುರುಷ ವಿಭಾಗದಲ್ಲಿ ಅಮಿತ್ ಪಂಗಲ್ ಭರ್ಜರಿ ಜಯ ಸಾಧಿಸಿದ್ದು, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ಪುರುಷರ ಫ್ಲೈವೇಟ್‌ನಲ್ಲಿ ಎದುರಾಳಿಯಾಗಿದ್ದ ಯುರೋಪಿಯನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್‌ಡೊನಾಲ್ಡ್ ಅವರನ್ನು 5-0 ಅಂತರದಿಂದಲ್ಲಿ ಮಣಿಸುವ ಮೂಲಕ ಪಂಗಲ್ ಚಿನ್ನದ ಹಾರಕ್ಕೆ ಕೊರಳೊಡ್ಡಿದರು. 2018ರ  ಕಾಮನ್‌ವೆಲ್ತ್ ಆವೃತ್ತಿಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದ ಪಂಗಾಲ್ ಈ ಬಾರಿ ಉತ್ತಮ ಪ್ರದರ್ಶನದಿಂದ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ

    ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತರಾಗಿದ್ದ ನೀತು ಗಂಗಾಸ್ ಇಂಗ್ಲೆಂಡ್‌ನ ಡೆಮಿ-ಜೇಡ್ ರೆಸ್ಟನ್ ರನ್ನು 5-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

    ಸಿಂಧು ಫೈನಲ್‌ಗೆ ಎಂಟ್ರಿ: 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾದ ಸಿಂಧು ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸಿಂಗಾಪುರದ ಯೆಯೂ ಜಿಯಾಮಿನ್ ಅವರೊಂದಿಗೆ 49 ನಿಮಿಷಗಳ ಕಾಲ ಸೆಣಸಿದ ಸಿಂಧು ಜಿಯಾಮಿನ್ ಅವರನ್ನು 21-19, 21-17 ಅಂತರದಲ್ಲಿ ಸೋಲಿಸಿ ಫೈನಲ್‌ಗೆ ಗ್ರ‍್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆಯನ್ನೂ ಮೂಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ತಪ್ಪುಗಳಿಂದ ರಾಷ್ಟ್ರಗೀತೆ ಮೊಳಗಲಿಲ್ಲ – ಅದು ತಪ್ಪಲ್ಲ ಕ್ಷಮೆ ಕೇಳುವ ಅಗತ್ಯವಿಲ್ಲ: ಮೋದಿ

    ನನ್ನ ತಪ್ಪುಗಳಿಂದ ರಾಷ್ಟ್ರಗೀತೆ ಮೊಳಗಲಿಲ್ಲ – ಅದು ತಪ್ಪಲ್ಲ ಕ್ಷಮೆ ಕೇಳುವ ಅಗತ್ಯವಿಲ್ಲ: ಮೋದಿ

    ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು 40ಕ್ಕೂ ಹೆಚ್ಚು ಪದಕ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ನಡುವೆ ಕುಸ್ತಿಯಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲವಾದ ಪೂಜಾ ಗೆಹ್ಲೋಟ್ ಆಡಿದ ಬೇಸರದ ನುಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಮಾಧಾನದ ಮಾತುಗಳಿಂದ ಕ್ರೀಡಾಪಟುವಿಗೆ ಧೈರ್ಯ ತುಂಬಿದ್ದಾರೆ.

    ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಸ್ಕಾಟ್ಲೆಂಡ್‍ನ ಕ್ರಿಸ್ಟೆಲ್ಲೆ ಲೆಮೊಫ್ಯಾಕ್ ಲೆಟ್ಚಿಡ್ಜಿಯೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು. ಆ ಬಳಿಕ ಸಂಭ್ರಮ ಹಂಚಿಕೊಳ್ಳುತ್ತ ಪೂಜಾ ಗೆಹ್ಲೋಟ್, ನಾನು ನನ್ನ ದೇಶವಾಸಿಗಳೊಂದಿಗೆ ಕ್ಷಮೆಯಾಚಿಸುತ್ತೇನೆ. ವಿಜಯ ವೇದಿಕೆಯಲ್ಲಿ ನಾನಿರುವಾಗ ನಮ್ಮ ದೇಶದ ರಾಷ್ಟ್ರಗೀತೆ ಮೊಳಗಬೇಕೆಂದು ನಾನು ಬಯಸಿದ್ದೆ. ಆದರೆ ನನ್ನ ತಪ್ಪುಗಳಿಂದ ಈ ಅವಕಾಶ ಸಿಗಲಿಲ್ಲ. ಈ ಸೋಲಿನಿಂದ ಪಾಠ ಕಲಿತು ಮುಂದೆ ಮುನ್ನಡೆಯುತ್ತೇನೆ ಎಂದಿದ್ದರು. ಇದನ್ನೂ ಓದಿ: ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    ಪೂಜಾ ಗೆಹ್ಲೋಟ್ ಆಡಿದ ಈ ಮಾತುಗಳನ್ನು ಕೇಳಿಸಿಕೊಂಡ ಬಳಿಕ ಮೋದಿ, ನಿಮ್ಮ ಪದಕವು ದೇಶದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ನಿಮ್ಮ ಜೀವನ ಪಯಣ ನಮ್ಮನ್ನು ಪ್ರೇರೇಪಿಸುತ್ತದೆ, ನಿಮ್ಮ ಯಶಸ್ಸು ನಮಗೆ ಸಂತೋಷವನ್ನು ನೀಡುತ್ತದೆ. ನೀವು ಮುಂದೆ ಮಹತ್ತರವಾದ ಗುರಿ ಹೊಂದಿದ್ದೀರಿ. ಮುಂದಿನ ದಿನಗಳಲ್ಲೂ ಇದೇ ರೀತಿ ಹೊಳೆಯುತ್ತಿರಿ ಎಂದು ಟ್ವಿಟ್ಟರ್ ಮೂಲಕ ಪೂಜಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್‌ – ಭಾರತಕ್ಕೆ ಸರಣಿ ಜಯ

    ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಭರ್ಜರಿ ಪದಕ ಬೇಟೆಯಾಡಿದ್ದಾರೆ. ಈವರೆಗೆ 13 ಚಿನ್ನ, 11 ಬೆಳ್ಳಿ, 16 ಕಂಚು ಸೇರಿ ಒಟ್ಟು 40 ಪದಕ ಗೆದ್ದಿದ್ದಾರೆ. 10ನೇ ದಿನವಾದ ಇಂದು ಇನ್ನಷ್ಟು ಪದಕ ಗೆಲ್ಲುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    ಬರ್ಮಿಗ್‌ಹ್ಯಾಮ್: ಭಾರತೀಯ ಕುಸ್ತಿಪಟು ಮೋಹಿತ್ ಗ್ರೆವಾಲ್ ಪುರುಷರ 125 ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

    ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ಜಮೈಕಾದ ಎದುರಾಳಿ ಆರನ್ ಜಾನ್ಸನ್ ಅವರನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಕಂಚಿನ ಪಕದ ಗೆದ್ದಿದ್ದಾರೆ. ಅಲ್ಲದೇ ಗ್ರೆವಾಲ್ ಕೇವಲ 3:30 ನಿಮಿಷಗಳಲ್ಲೇ ಪಂದ್ಯವನ್ನು ಕೈವಶ ಮಾಡಿಕೊಂಡಿದ್ದು ವಿಶೇಷ. ಇದನ್ನೂ ಓದಿ: CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ದಿವ್ಯಾ ಕಣ್ಣಲ್ಲಿ ಕಂಚಿನ ಹೊಳಪು: ಅಂತೆಯೇ ಮಹಿಳೆಯರ ವಿಭಾಗದ 68 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ದಿವ್ಯಾ ಕಕ್ರಾನ್‌ಗೆ ಕಂಚಿನ ಪದಕ ಲಭಿಸಿದೆ. ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ನಡೆದ ಪಂದ್ಯಲ್ಲಿ 2-0 ಅಂತರದಲ್ಲಿ ಎದುರಾಳಿಯನ್ನು ಬಗ್ಗು ಬಡಿಯುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಕುಸ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿನ್ನ – ಸಾಕ್ಷಿ ಮಲಿಕ್ ಬಂಗಾರದ ಹುಡುಗಿ

    ಇದಕ್ಕೂ ಮುನ್ನ 8ನೇ ದಿನದ ಅಖಾಡದಲ್ಲಿ ಭಾರತ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.

    8ನೇ ದಿನದ ಕುಸ್ತಿ ಅಖಾಡದಲ್ಲಿ ಪದಕಗಳ ಬಂಪರ್ ಬೆಳೆ ಸುರಿದಿದೆ. ಕೇವಲ ಕುಸ್ತಿಯಲ್ಲಿಯೇ ಭಾರತಕ್ಕೆ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    https://twitter.com/sbg1936/status/1555626699827847169

    ಕುಸ್ತಿಯ 57 ಕೆಜಿ ವಿಭಾಗದಲ್ಲಿ ಅನ್ಶು ಮಲಿಕ್ ಬೆಳ್ಳಿ, ದಿವ್ಯಾ ಮೋಹಿತ್ ಕಂಚಿನ ಪದಕಗಳನ್ನ ಗೆದ್ದುಕೊಂಡಿದ್ದಾರೆ. ಭಾರತದ ಗ್ರಾಪ್ಲರ್ ದೀಪಕ್ ಪೂನಿಯಾ ಪುರುಷರ 86 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಪಾಕಿಸ್ತಾನದ ಎದುರಾಳಿ ಮೊಹಮ್ಮದ್ ಇನಾಮ್ ಅವರನ್ನು 3-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ನಿನ್ನೆ ಕುಸ್ತಿಯಲ್ಲಿ ಗೆದ್ದ 3ನೇ ಚಿನ್ನದ ಪದಕವಾಗಿದೆ. ಇದನ್ನೂ ಓದಿ: CWG 2022: ಭಜರಂಗ್ ಪೂನಿಯಾ ಚಿನ್ನದ ಬೇಟೆ – ಭಾರತಕ್ಕೆ 7ನೇ ಚಿನ್ನ

    2-0 ಹಂತದವರೆಗೂ ಮುನ್ನಡೆ ಸಾಧಿಸಿದ್ದ ಪೂನಿಯಾಗೆ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಪಂದ್ಯದಲ್ಲಿ ಪುನಿಯಾ ಉತ್ತಮ ಫಾರ್ಮ್ನಲ್ಲಿದ್ದರು. ಹಾಗಾಗಿ ಅಂತಿಮ ಮೂರು ನಿಮಿಷಗಳಲ್ಲಿ ತಮ್ಮದೇ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಪೂನಿಯಾ ವಿರುದ್ಧ ಪಾಯಿಂಟ್ ಕದಿಯಲು ಹೆಣಗಾಡಿದ ಪಾಕಿಸ್ತಾನದ ಕುಸ್ತಿಪಟು ಅಂತಿಮ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿ ಹೊರನಡೆದರು.

    ಇದರಿಂದ ಭಾರತ ಈವರೆಗೆ 9 ಚಿನ್ನ, 8 ಬೆಳ್ಳಿ, 9 ಕಂಚಿನ ಪಕದ ಗೆದ್ದಿದ್ದು, 26 ಪದಕಗಳೊಂದಿಗೆ, ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಪದಕ ಗೆದ್ದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    ಬರ್ಮಿಂಗ್‌ಹ್ಯಾಮ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ 7ನೇ ದಿನವೂ ಉತ್ತಮ ಪ್ರದರ್ಶನದೊಂದಿಗೆ ಹೊರಹೊಮ್ಮಿದ್ದು, ಒಂದು ಚಿನ್ನ ಮತ್ತೊಂದು ಬೆಳ್ಳಿ ಪದಕವನ್ನು ಪಡೆದುಕೊಂಡಿದೆ.

    7ನೇ ದಿನದ ಆಟದ ಪುರುಷರ ವಿವಿಭಾಗದ ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿಪದಕ ಗೆದ್ದ ಮೊದಲ ಪುರುಷ ಎಂಬ ಖ್ಯಾತಿಯೂ ಇವರದ್ದಾಗಿದೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಮುರಳಿ ಶ್ರೀಶಂಕರ್ 8.08ಮೀ ಉದ್ದ ಜಿಗಿತದ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಗೆದ್ದುಕೊಂಡಿದ್ದಾರೆ. ಈ ಹಿಂದೆ ಹಿರಿಯ ಕ್ರೀಡಾಪಟು ಸುರೇಶ್‌ಬಾಬು 1978ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು. ಇದಾದ 44 ವರ್ಷಗಳ ಬಳಿಕ ಬೆಳ್ಳಿ ಪಡೆದಿದ್ದಾರೆ. ನಿನ್ನೆ ಎತ್ತರ ಜಿಗಿತದಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]