Tag: CWC 2023

  • World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ

    World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ

    ಬೆಂಗಳೂರು: ಏಕದಿನ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯ ಅಂತಿಮ ಹಂತಕ್ಕೆ ತಲುಪಿದೆ. ಇಂದು ಗುಜರಾತ್‌ನ (Gujarat) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾರತ (India) ಮತ್ತು ಆಸ್ಟ್ರೇಲಿಯಾ (Australia) ತಂಡಗಳ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಮ್ಯಾಚ್ ವೀಕ್ಷಿಸಲು ಅತ್ಯಂತ ಉತ್ಸುಕರಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ಅನೇಕ ಕಡೆಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.

    ಭಾರತದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಬೆಂಗಳೂರಿನ (Bengaluru) ಅನೇಕ ಕಡೆಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ವಿಶ್ವಕಪ್ ಗೆಲ್ಲಲಿ ಅಂತಾ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿದ್ದು, ಭಾರತದ ಬಾವುಟ ಇಟ್ಟು ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿದೆ- ಟೀಂ ಇಂಡಿಯಾಗೆ ತೆಂಡೂಲ್ಕರ್ ವಿಶ್

    ವಿಶ್ವಕಪ್ ಕ್ರಿಕೆಟ್ ಹಿನ್ನೆಲೆ ಭಾರತ ಗೆಲ್ಲಲಿ ಅಂತಾ ಎಲ್ಲೆಡೆ ಶುಭ ಹಾರೈಕೆಗಳ ಸುರಿಮಳೆ ಸುರಿಯುತ್ತಿದ್ದು, ಮಲ್ಲೇಶ್ವರಂ 18ನೇ ಕ್ರಾಸ್‌ನ ಮೈದಾನದಲ್ಲಿ ಪುಟಾಣಿ ಮಕ್ಕಳು ಬೆಸ್ಟ್ ವಿಶಶ್ ತಿಳಿಸಿದ್ದಾರೆ. ಬ್ಯಾಟ್ ಹಿಡಿದು ಇಂಡಿಯಾ ಗೆಲುವಿಗೆ ಹಾರೈಸಿದ್ದಾರೆ. ವಿಶ್ವಕಪ್ ಗೆಲುವಿಗಾಗಿ ಬನಶಂಕರಿ ದೇವಸ್ಥಾನದಲ್ಲಿ ಹೋಮ ಹವನ ನಡೆಯುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರ ಹೆಸರಿನಲ್ಲಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್

    ಇನ್ನು ವಂದೇ ಮಾತರಂ ಸರ್ವ ಸಂಘಟನೆಗಳ ವತಿಯಿಂದ ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ಪೂಜೆ ಆಯೋಜಿಸಿದ್ದು, ಬ್ಯಾಟ್, ಸ್ಟಂಟ್‌ಗಳಿಗೆ ಹಾರ ಹಾಕಿ, ಕುಂಬಳಕಾಯಿ ಹೊಡೆದು ಪೂಜೆ ಮಾಡಲಾಗಿದೆ. ಅಲ್ಲದೇ ಕ್ರಿಕೆಟ್ ಆಟಗಾರರು ಚೆನ್ನಾಗಿ ಆಟವಾಡಲಿ ಅಂತಾ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು, ಭಾರತ ತಂಡದ ಆಟಗಾರರ ಭಾವಚಿತ್ರ ಹಿಡಿದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ

    ಶ್ರೀ ಭುವನೇಶ್ವರಿ ಸಂಘದಿಂದ ಅದ್ಧೂರಿ ಸೆಲಬ್ರೆಷನ್ ನಡೆಯುತ್ತಿದ್ದು, ರಸ್ತೆಯಲ್ಲೆ ವಿಶ್ವಕಪ್ ಟ್ರೋಫಿ ನಿರ್ಮಾಣವಾಗಿದೆ. ಮಂಜುನಾಥ್ ನಗರದಲ್ಲಿ ವಿಶ್ವಕಪ್ ಹವಾ ಎಬ್ಬಿಸಿದ್ದು, ಪ್ರಸನ್ನ ಗಣಪತಿ ದೇವಸ್ಥಾನದ ಎದುರು ಹೋಮ ಹವನ ನಡೆಸಿದ್ದಾರೆ. ರಸ್ತೆಯ ಎರಡೂ ಕಡೆ ದೊಡ್ಡ ಬಾವುಟ ಕಟ್ಟಿ ಸಂಭ್ರಮಿಸಿದ್ದು, ಗೆದ್ದು ಬಾ ಟೀಂ ಇಂಡಿಯಾ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತದ ಗೆಲುವಿಗಾಗಿ ಇಶನ್ ಕಿಶನ್ ಕುಟುಂಬಸ್ಥರಿಂದ ವಿಶೇಷ ಪೂಜೆ

    ವರ್ಲ್ಡ್ ಕಪ್‌ಗಾಗಿ ಹಂಪಿನಗರದ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬ್ರಹ್ಮಶ್ರೀ ಡಾಕ್ಟರ್ ಉಮೇಶ್ ಶರ್ಮಾ ನೇತೃತ್ವದಲ್ಲಿ ಗಣಪತಿ ಹೋಮ, ಸುಬ್ರಹ್ಮಣ್ಯ ಹೋಮ, ಮೃತ್ಯುಂಜಯ ಹೋಮ, ದುರ್ಗ ಹೋಮ ನಡೆಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ದುರ್ಗ ದೇವಸ್ಥಾನದ ಬಂಗಾಳಿ ಪಂಡಿತರು, ವಾರಣಾಸಿ ಪಂಡಿತರು ಸೇರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ವಿಶ್ವ ಹಿಂದೂ ಪರಿಷತ್ ನಿಂದ ವಿಶ್ವಕಪ್‌ಗಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಕನ್ನಡ ಪರ ಹೋರಾಟಗಾರರು ಉರುಳು ಸೇವೆ ಮಾಡಿದ್ದು, ಸರ್ಕಲ್ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಪೂಜೆ ಸಲ್ಲಿಸಲಾಗಿದೆ. ಇದನ್ನೂ ಓದಿ: ವಿಶ್ವಕಪ್ 2023- ಜೀತೆಗಾ ಹಿಂದೂಸ್ತಾನ್ ಜೀತೆಗಾ ಎಂದ ಜಿಲ್ಲೆಯ ಕ್ರೀಡಾಭಿಮಾನಿಗಳು

    ಎಲ್ರಲ್ಲೂ ವಿಶ್ವಕಪ್ ಜ್ವರ ಹೆಚ್ಚಾಗಿದ್ದು, ಕೆಫೆ ಕಾಫಿ ಕನ್ಫೆಷನ್‌ನಿಂದ ಕಾಫಿಯಲ್ಲಿ ವರ್ಲ್ಡ್ ಕಪ್ ಅರಳಿದೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಹೋಮ ನಡೆಸುತ್ತಿದ್ದು, ಭಾರತ ತಂಡದ ಗೆಲುವಿಗಾಗಿ ಹೋಮ ನಡೆಸಲಾಗುತ್ತಿದೆ. ಇದನ್ನೂ ಓದಿ: World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

  • ನನ್ನ ಫೇವ್ರೆಟ್‌ ಕ್ರಿಕೆಟರ್‌ ಕೆ.ಎಲ್‌ ರಾಹುಲ್‌ ಅಲ್ಲ ಎಂದ ಸುನೀಲ್‌ ಶೆಟ್ಟಿ

    ನನ್ನ ಫೇವ್ರೆಟ್‌ ಕ್ರಿಕೆಟರ್‌ ಕೆ.ಎಲ್‌ ರಾಹುಲ್‌ ಅಲ್ಲ ಎಂದ ಸುನೀಲ್‌ ಶೆಟ್ಟಿ

    ಮುಂಬೈ: ಖ್ಯಾತ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ (Sunil Shetty) ತನ್ನ ಫೇವ್ರೆಟ್‌ ಕ್ರಿಕೆಟರ್‌ ಯಾರೆಂಬುದನ್ನು ಹೆಸರಿಸಿದ್ದಾರೆ. ಈ ಹಿಂದೆ ಪ್ರತಿ ಪಂದ್ಯದಲ್ಲೂ ಕೆ.ಎಲ್‌ ರಾಹುಲ್‌ ಅವರನ್ನ ಹಾಡಿ ಹೊಗಳುತ್ತಿದ್ದ ಸುನೀಲ್‌ ಶೆಟ್ಟಿ ನನ್ನ ಫೆವ್ರೆಟ್‌ ಕ್ರಿಕೆಟರ್‌ ಕೆ.ಎಲ್‌ ರಾಹುಲ್‌ (KL Rahul) ಅಲ್ಲ ಎಂದಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೆ.ಎಲ್‌ ರಾಹುಲ್‌ ನನ್ನ ಮಗ ಇದ್ದಂತೆ, ಆದ್ರೆ ನನ್ನ ಫೆವ್ರೆಟ್‌ ಸ್ಟಾರ್‌ ಕ್ರಿಕೆಟರ್‌ ಎಂದಿಗೂ ವಿರಾಟ್‌ ಕೊಹ್ಲಿ (Virat Kohli). ಆತ ನಿಜವಾದ ಚೇಸ್‌ ಮಾಸ್ಟರ್‌ ಎಂದು ಹೇಳಿದ್ದಾರೆ.

    ಸಚಿನ್‌ ದಾಖಲೆ ಮುರಿಯುವ ಸನಿಹದಲ್ಲಿ ಕಿಂಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ (Virat Kohli) ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 48 ಶತಕ ಗಳಿಸಿರುವ ಕಿಂಗ್‌ ಕೊಹ್ಲಿ, ಈ ಟೂರ್ನಿಯಲ್ಲಿ ಇನ್ನೆರಡು ಶತಕಗಳನ್ನು ಸಿಡಿಸಿದರೆ, ಸಚಿನ್‌ ತೆಂಡೂಲ್ಕರ್ ಅವರ (49 ಶತಕ) ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್ ಮದುವೆ

    ನ್ಯೂಜಿಲೆಂಡ್‌ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿಗೆ ಶತಕ ಸಿಡಿಸುವ ಅವಕಾಶವಿತ್ತು. ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ್ದ ಕೊಹ್ಲಿ, ಕೊನೆಯಲ್ಲಿ ಬಿರುಸಿನ ಆಟಕ್ಕೆ ತಿರುಗಿದರು. 103 ಎಸೆತಗಳಲ್ಲಿ 95 ರನ್‌ ಗಳಿಸಿ ಆಡುತ್ತಿದ್ದಾಗ ಗೆಲುವಿಗೆ ಇನ್ನೂ 5 ರನ್‌ ಬಾಕಿಯಿತ್ತು. ಕೊಹ್ಲಿಯ ಶತಕಕ್ಕೂ ಅಷ್ಟೇ ರನ್‌ ಬೇಕಿತ್ತು. ಈ ವೇಳೆ 104ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿದ ಕೊಹ್ಲಿ ಕ್ಯಾಚ್‌ ನೀಡಿ ನಿರಾಸೆ ಅನುಭವಿಸಿದರು. ಇದನ್ನೂ ಓದಿ: ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್‌

    ಕೋಟ್ಯಂತರ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಯಿತು. ಆದ್ದರಿಂದ ಕೊಹ್ಲಿ ಈ ಪಂದ್ಯದಲ್ಲಾದರೂ 49ನೇ ಶತಕ ಸಿಡಿಸಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಪಾಕಿಸ್ತಾನ ತಂಡದ ಸ್ಟಾರ್‌ ಕ್ರಿಕೆಟರ್‌ ಮೊಹಮ್ಮದ್‌ ರಿಜ್ವಾನ್‌ ಸಹ ಕೊಹ್ಲಿ 49 ಮತ್ತು 50ನೇ ಶತಕವನ್ನು ಇದೇ ವಿಶ್ವಕಪ್‌ನಲ್ಲಿ ಸಿಡಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಕಿಂಗ್‌ ಕೊಹ್ಲಿ, ರೋಹಿತ್‌ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?

    ಕೆ.ಎಲ್ ರಾಹುಲ್ ಮತ್ತು ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೇ ವರ್ಷಾರಂಭ ಜನವರಿ 23ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿತ್ತು. ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲೇ ಮದುವೆ ನೆರವೇರಿತ್ತು. ಇದನ್ನೂ ಓದಿ: ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್‌ ಫ್ಯಾನ್ಸ್‌ – ಇಂಗ್ಲೆಂಡ್‌ ಆರ್ಮಿಗೆ ಭಾರತ್‌ ಆರ್ಮಿ ಕೌಂಟರ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]