Tag: cutout

  • ದೇಸಾಯಿ ಕಟೌಟ್ ನೋಡಿ!

    ದೇಸಾಯಿ ಕಟೌಟ್ ನೋಡಿ!

    ಸಿನಿಮಾಗಳು ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಹೀರೋಗಳ ಕಟೌಟ್ ಕೆಲವೊಮ್ಮೆ ನಾಯಕಿಯ ಕಟೌಟ್ ನಿಲ್ಲಿಸಿ ಅದಕ್ಕೆ ಸ್ಟಾರ್ ಕಟ್ಟಿ, ಹಾರ ಹಾಕೋದು ವಾಡಿಕೆ. ಆದರೆ ಉದ್ಘರ್ಷ ಸಿನಿಮಾ ಬಿಡುಗಡೆಯಾಗಿರುವ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರವಾದ ಸಂತೋಷ್ ಥಿಯೇಟರ್ ಮುಂದೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಕಟೌಟ್ ನಿಲ್ಲಿಸಿದ್ದಾರೆ.

    ಒಂದು ಕಡೆ ಯಜಮಾನ ದರ್ಶನ್, ಈ ಕಡೆ ಕೆಜಿಎಫ್ ಯಶ್ ನಡುವೆ ದೇಸಾಯಿಯವರ ಎತ್ತರದ ಕಟೌಟ್ ರಾರಾಜಿಸುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಇವತ್ತಿನ ಘಟಾನುಘಟಿ ನಟರೆಲ್ಲಾ ಪಾತ್ರವಹಿಸಿದ್ದಾರೆ. ಆದರೂ ಅವರ ಕೈ ಕಾಲುಗಳನ್ನು ಬಿಟ್ಟು ಪೋಸ್ಟರ್ ಗಳಲ್ಲಿ ಮುಖವನ್ನೂ ಹಾಕಿಲ್ಲ.

    ಇದು ದೇಸಾಯಿ ಸ್ಟೈಲ್. ಈಗ ಥೇಟರ್ ಮುಂದೆ ನಿರ್ದೇಶಕರ ಕಟೌಟ್ ನಿಂತಿದೆ. ನಿಜ ದೇಸಾಯಿ ಸ್ಟಾರ್ ಗಳನ್ನು ಹುಟ್ಟುಹಾಕಿದ ಡೈರೆಕ್ಟರ್. ಒಂದು ಕಾಲಕ್ಕೆ ಸ್ಟಾರ್ ನಿರ್ದೇಶಕ ಅನಿಸಿಕೊಂಡಿದ್ದವರು. ಉದ್ಘರ್ಷ ಮೂಲಕ ಮತ್ತೆ ಅವರು ಹಳೇ ಛಾರ್ಮಿಗೆ ಮರಳುವಂತಾಗಬೇಕಿದೆ. ಆಗ ಥಿಯೇಟರ್ ಮುಂದೆ ನಿಂತ ಕಟೌಟಿಗೂ ಬೆಲೆ ಬರುತ್ತದೆ. ಅಲ್ಲವೆ?

  • ಯಜಮಾನನ ಜೊತೆ ಥಿಯೇಟರ್‌ನಲ್ಲಿ ರಶ್ಮಿಕಾ ಮಂದಣ್ಣ ಕಟೌಟ್!

    ಯಜಮಾನನ ಜೊತೆ ಥಿಯೇಟರ್‌ನಲ್ಲಿ ರಶ್ಮಿಕಾ ಮಂದಣ್ಣ ಕಟೌಟ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಇಂದು ವಿಶ್ವಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರು ಯಜಮಾನನ್ನು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಜೊತೆ ಅವರ ಮಗ ವಿನೀಶ್ ಕಟೌಟ್ ಹಾಕಲಾಗಿದ್ದು, ಈಗ ರಶ್ಮಿಕಾ ಮಂದಣ್ಣ ಅವರ ಕಟೌಟ್ ಕೂಡ ಹಾಕಲಾಗಿದೆ.

    ಕನ್ನಡ ಚಿತ್ರ ಬಿಡುಗಡೆ ಆದಾಗ ಸಾಮಾನ್ಯವಾಗಿ ನಟರ ಕಟೌಟ್ ಹಾಕುತ್ತಾರೆ. ಆದರೆ ಈಗ ದರ್ಶನ್ ಅವರ ಕಟೌಟ್ ಜೊತೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಕಟೌಟ್ ಕೂಡ ಹಾಕಲಾಗಿದೆ. ರಶ್ಮಿಕಾ ಮಂದಣ್ಣ ಅವರ ಕಟೌಟ್ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಕಟೌಟ್ ಯಾವ ಚಿತ್ರಮಂದಿರದ ಮುಂದೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

    ಈ ಮೊದಲು ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾಂಕಾ ಉಪೇಂದ್ರ, ರಾಗಿಣಿ ದ್ವಿವೇದಿ ಹಾಗೂ ಮಾಲಾಶ್ರೀ ಅವರ ಕಟೌಟ್ ಹಾಕಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟನ ಜೊತೆ ರಶ್ಮಿಕಾ ಅವರ ಕಟೌಟ್ ಹಾಕಲಾಗಿದೆ.

    ದರ್ಶನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಮಿಂಚಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ರವಿಶಂಕರ್, ಡಾಲಿ ಧನಂಜಯ್, ದತ್ತಣ್ಣ, ಶಿವರಾಜ್. ಕೆ.ಆರ್ ಪೇಟೆ, ಸಾಧುಕೋಕಿಲ ಸೇರಿದಂತೆ ಅತಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ತುಂಬಿದೆ. ಈ ಚಿತ್ರವನ್ನು ಪೋನ್‍ಕುಮಾರ್ ಹಾಗೂ ವಿ. ಹರಿಕೃಷ್ಣ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಬಜಾರ್ ನಲ್ಲಿ ಮಿನುಗುತ್ತಿರುವ ಹರಿಕೃಷ್ಣ, ಯಜಮಾನನಿಗಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿದ್ದಾರೆ. ಈ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿತ್ರ ಬಿಡುಗಡೆಯಾಗುವ ಮುನ್ನವೇ ದರ್ಶನ್ ಮಗನ 30 ಅಡಿ ಕಟೌಟ್

    ಚಿತ್ರ ಬಿಡುಗಡೆಯಾಗುವ ಮುನ್ನವೇ ದರ್ಶನ್ ಮಗನ 30 ಅಡಿ ಕಟೌಟ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಶುಕ್ರವಾರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಚಿತ್ರ ಬಿಡುಗಡೆ ಆಗುವ ದಿನ ಚಿತ್ರದ ನಟನ ಕಟೌಟ್ ಇರುವುದು ಸಾಮಾನ್ಯ. ಆದರೆ ಈ ಚಿತ್ರಕ್ಕೆ ದರ್ಶನ್ ಅವರ ಮಗ ವಿನೀಶ್‍ನ 30 ಅಡಿ ಕಟೌಟ್ ಹಾಕಲಾಗಿದೆ.

    ಯಜಮಾನ ಚಿತ್ರ ವಿಶ್ವಾದ್ಯಂತ ಕನ್ನಡ ಭಾಷೆಯಲ್ಲೇ ಬಿಡುಗಡೆ ಆಗುತ್ತಿದೆ. ಈ ಚಿತ್ರ ಶುಕ್ರವಾರ ಬಿಡುಗಡೆ ಆಗಲಿದ್ದು, ಚಿತ್ರತಂಡ ಸಿದ್ಧತೆ ನಡೆಸಿಕೊಂಡಿದೆ. ಈ ಚಿತ್ರ ಬಿಡುಗಡೆ ಆಗುವ ಮುನ್ನವೇ ನರ್ತಕಿ ಚಿತ್ರಮಂದಿರದಲ್ಲಿ ವಿನೀಶ್‍ನ 30 ಅಡಿ ಕಟೌಟ್ ಹಾಕಲಾಗಿದೆ.

    ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರ ಮಗ ವಿನೀಶ್ ಅವರು ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆ ವೇಳೆ ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ ಎಂಬ ಸೀಕ್ರೆಟ್ ರಿವೀಲ್ ಆಗಿತ್ತು.

    ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಟೌಟ್ ಕುಸಿದು ನಟ ಅಜಿತ್ ಅಭಿಮಾನಿಗಳಿಗೆ ಗಾಯ

    ಕಟೌಟ್ ಕುಸಿದು ನಟ ಅಜಿತ್ ಅಭಿಮಾನಿಗಳಿಗೆ ಗಾಯ

    ಚೆನ್ನೈ: ಹಾಲಿನ ಅಭಿಷೇಕ ಮಾಡುವ ವೇಳೆ ಖ್ಯಾತ ತಮಿಳು ನಟ ಅಜಿತ್ ಕಟೌಟ್ ಕುಸಿದು ಐವರು ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಅಜಿತ್ ನಟನೆಯ ‘ವಿಶ್ವಾಸಂ’ ಚಿತ್ರದ ರಿಲೀಸ್ ದಿನ ಅಭಿಮಾನಿಗಳು  ವಿಲ್ಲುಪುರಂ ಥಿಯೇಟರ್ ನಲ್ಲಿ ಕಟೌಟ್‍ಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡುತ್ತಿದ್ದರು. ಈ ವೇಳೆ ಅಭಿಮಾನಿಗಳು 30 ಅಡಿ ಎತ್ತರದ ಕಟೌಟ್ ಮೇಲೇರುತ್ತಿದ್ದಂತೆ ಭಾರ ತಡೆಯಲಾಗದೇ ಕಟೌಟ್ ನೆಲಕ್ಕುರುಳಿದೆ.

    ನಿಂತಿದ್ದ ಜನರ ಮೇಲೆ ಕಟೌಟ್ ಬಿದ್ದಿದ್ದು, ಐವರಿಗೆ ಗಾಯಗಾಳಾಗಿದೆ. ಘಟನೆಯಲ್ಲಿ ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈಗ ಅವರ ಆರೋಗ್ಯದ ಸ್ಥಿತಿ ಹೇಗೆ ಇದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

    ಅಜಿತ್ ಕಟೌಟ್ ನೆಲಕ್ಕುರುಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಅಜಿತ್ ಅಭಿಮಾನಿಗಳು ವಿಶ್ವಾಸಂ ಚಿತ್ರಕ್ಕಾಗಿ ಚಿತ್ರಮಂದಿರದ ಬೀಗವನ್ನು ಮುರಿದು ಟಿಕೆಟ್ ಪಡೆಯಲು ಮುಂದಾಗಿದ್ದರು.

    ವಿಶ್ವಾಸಂ ಚಿತ್ರವನ್ನು ಶಿರುತೈ ಸಿವಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅಜಿತ್, ನಯನತಾರಾ, ಬೇಬಿ ಅನಿಕಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ್ಣುವರ್ಧನ್ ಕಟೌಟ್‍ಗೆ ಅಭಿಮಾನಿಯಿಂದ ರಕ್ತದ ಅಭಿಷೇಕ!

    ವಿಷ್ಣುವರ್ಧನ್ ಕಟೌಟ್‍ಗೆ ಅಭಿಮಾನಿಯಿಂದ ರಕ್ತದ ಅಭಿಷೇಕ!

    ಬೆಂಗಳೂರು: ತಮ್ಮ ನೆಚ್ಚಿನ ನಟರಿಗೆ ಅಭಿಮಾನಿಗಳು ಪ್ರಾಣ ಕೊಡೋಕೆ ತಯಾರಿರುತ್ತಾರೆ. ಅಂತೆಯೇ ಇಲ್ಲೊಬ್ಬರು ಅಭಿಮಾನಿ ತನ್ನ ನೆಚ್ಚಿನ ನಟ ಸಾಹಸ ವಿಷ್ಣುವರ್ಧನ್ ಗಾಗಿ ರಕ್ತದ ಅಭಿಷೇಕವನ್ನೇ ಮಾಡಿದ್ದಾರೆ.

    ಮೈಸೂರು ಮೂಲದ ವ್ಯಕ್ತಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ವಿಷ್ಣುದಾದಾ ಅಂದ್ರೆ ಇವರಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಅಭಿಮಾನ. ಈ ಅಭಿಮಾನಿಯ ರಕ್ತಾಭಿಮಾನ ಹಾಗೂ `ನಯಾ ನಾಗರಹಾವು’ ಸಿನಿಮಾಗೆ ಸಿಕ್ತಿರುವ ರೆಸ್ಪಾನ್ಸ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

    ನಾಗರಹಾವು ಸಿನಿಮಾ ರೀ-ರಿಲೀಸ್ ಆಗಿದ್ದು, ಕರುನಾಡ ಮಂದಿ ಅದ್ಧೂರಿಯಾಗಿ ನಯಾ ನಾಗರಹಾವು ಚಿತ್ರವನ್ನ ಚಿತ್ರಮಂದಿರಕ್ಕೆ ಬರಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಥಿಯೇಟರ್ ಮುಂದೆ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದಾರೆ. ಡಿಜಿಟಲ್ ರೂಪ ಪಡೆದುಕೊಂಡಿರುವ ನಾಗರಹಾವು ಆರ್ಭಟಕ್ಕೆ ವಿಷ್ಣು ಅಭಿಮಾನಿ ಖುಷಿಯಾಗಿದ್ದಾರೆ. ಆದರೆ ಮೈಸೂರಿನ ಅಭಿಮಾನಿ ದಾದಾನ ಕಟೌಟ್‍ಗೆ ನೆತ್ತರ ಅಭಿಷೇಕ ಮಾಡಿ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ. ಇದನ್ನೂ ಓದಿ: ಕಲರ್ ಫುಲ್ ನಾಗರಹಾವಿಗೆ ಮನಸೋತ ಅಭಿಮಾನಿಗಳು- ಸಿನಿಮಾ ವೀಕ್ಷಿಸಿದ್ರು ಹ್ಯಾಟ್ರಿಕ್ ಹೀರೋ ಶಿವಣ್ಣ

    45 ವರ್ಷಗಳ ಹಳೆಯ ಸಿನಿಮಾವಾದರೂ ಬೆಳ್ಳಿತೆರೆ ಮೇಲೆ ಮೋಡಿ ಮಾಡ್ತಿರುವುದು ವಿಶೇಷ. ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಗಳು ಕೂಡ ವಿಷ್ಣು ಅಭಿನಯದ ನಾಗರಹಾವು ಸಿನಿಮಾ ನೋಡೋದಕ್ಕೆ ಮುಗಿಬೀಳ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿದ್ದರು. ಒಬ್ಬ ಅಭಿಮಾನಿಯಂತೆ ಕರುನಾಡ ಚಕ್ರವರ್ತಿ ಶಿವಣ್ಣ, ಸಾಹಸಸಿಂಹನ ಅಭಿನಯವನ್ನ ಕಣ್ತುಂಬಿಸಿಕೊಂಡಿದ್ದರು.

    ಒಟ್ಟಿನಲ್ಲಿ ರಾಮಾಚಾರಿಯ ಆರ್ಭಟ ಕರುನಾಡಲ್ಲಿ ಜೋರಾಗಿದೆ. ರಾಜಾದ್ಯಂತ ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಇದರ ಮೂಲಕ ಅಭಿಮಾನಿಗಳ ಹೃದಯದಲ್ಲಿ ವಿಷ್ಣುದಾದಾ ಚಿರಸ್ಥಾಯಿ ಅನ್ನೋದು ಮತ್ತೊಮ್ಮೆ, ಮಗದೊಮ್ಮೆ ಸಾಬೀತಾಗಿದೆ.

  • 2 ವರ್ಷದಿಂದ ನನ್ನ ಹೆಂಡ್ತಿ ಏನು ಗಿಫ್ಟ್ ಕೊಟ್ಟಿಲ್ಲ : ಗಣೇಶ್

    2 ವರ್ಷದಿಂದ ನನ್ನ ಹೆಂಡ್ತಿ ಏನು ಗಿಫ್ಟ್ ಕೊಟ್ಟಿಲ್ಲ : ಗಣೇಶ್

    ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೇ ಗಣೇಶ್ ತನ್ನ ಹೆಂಡತಿ ಎರಡು ವರ್ಷದಿಂದ ಏನು ಗಿಫ್ಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

    ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಗಣೇಶ್ ನಿವಾಸದ ಮುಂದೆ ರಾತ್ರಿ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಣೇಶ್, ನಮ್ಮ ಬರ್ತ್ ಡೇಯನ್ನು ಅಭಿಮಾನಿಗಳು ತಮ್ಮ ಹುಟ್ಟುಹಬ್ಬದ ರೀತಿ ಆಚರಣೆ ಮಾಡುತ್ತಾರೆ. ಅವರಿಗೆ ನಮ್ಮ ಇಡೀ ಕುಟುಂಬ ಚಿರುಋಣಿ. ಅಭಿಮಾನಿಗಳ ಪ್ರೀತಿ, ಆಶೀರ್ವಾದಿಂದ ನಾವು ಈ ಮಟ್ಟಕ್ಕೆ ಬೆಳೆದಿರುವುದು. ಆದ್ದರಿಂದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

    ಈ ವೇಳೆ ಪತ್ನಿ ಶಿಲ್ಪಾ ಅವರು ಏನು ಗಿಫ್ಟ್ ಕೊಟ್ಟರು ಎಂದು ಕೇಳಿದಾಗ, ಗಂಡ-ಹೆಂಡತಿ ಮಧ್ಯೆ ಏನು ಗಿಫ್ಟ್ ಅಂತ ಏನು ಇರಲ್ಲ. ವರ್ಷಕ್ಕೆ ಏನಾದರೂ ತೆಗೆದುಕೊಳ್ಳಬೇಕು ಎಂದುಕೊಂಡಿರುತ್ತೇವೆ. ಅದನ್ನು ಹುಟ್ಟುಹಬ್ಬದ ದಿನದಂದೇ ತೆಗೆದುಕೊಳ್ಳುತ್ತೇವೆ. ಬಳಿಕ ಎರಡು ವರ್ಷದಿಂದ ಏನು ಗಿಫ್ಟ್ ಕೊಟ್ಟಿಲ್ಲ ನನ್ನ ಹೆಂಡತಿ ಎಂದು ಶಿಲ್ಪಾರಿಗೆ ತಮಾಷೆ ಮಾಡಿದರು.

    ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಆರೆಂಜ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ನನ್ನ ಮಗಳ ಬಲವಂತಕ್ಕೆ ಒಂದು ಹಾರರ್ ಸಿನಿಮಾ ಮಾಡುತ್ತಿದ್ದೇನೆ. ನಿರ್ದೇಶಕ ನಾಗಣ್ಣ ಅವರ ಜೊತೆ ಮಾಡುತ್ತಿರುವುದು ಸಂತಸವಾಗಿದೆ. ನಮ್ಮ ಹೋಮ್ ಪ್ರೊಡೆಕ್ಷನ್ ನಲ್ಲಿ `ಗೀತಾ’ ಸಿನಿಮಾ ಮಾಡುತ್ತಿದ್ದೇನೆ. ಕೊನೆಯಲ್ಲಿ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

    ಹೋಮ್ ಬ್ಯಾನರ್ಸ್ ಅಡಿಯಲ್ಲಿ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಬರ್ತ್ ಡೇ ಆಚರಿಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ.

  • ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ

    ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನ ಜನ್ಮದಿನದ ಸಂಭ್ರಮಕ್ಕಾಗಿಯೇ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಮುಂಗಾರು ಮಳೆ ಹುಡುಗನ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.

    ಅಭಿಮಾನಿಗಳ ಸಮ್ಮುಖದಲ್ಲಿ ಗಣೇಶ್ ಪತ್ನಿ ಶಿಲ್ಪಾ ಜೊತೆಗೆ ಕೇಕ್ ಕಟ್ ಮಾಡಿದ್ರು. ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಾಣವಾಗ್ತಿರೋ ಗೀತಾ ಸಿನಿಮಾವೇ ಗಿಫ್ಟ್ ಅಂದ್ರು ಶಿಲ್ಪಾ. ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಆರೆಂಜ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

    ಗೋಲ್ಡನ್ ಸ್ಟಾರ್ ಗಣೇಶ್ ಈಗ ‘ಗೀತಾ’ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಬರ್ತ್ ಡೇ ಆಚರಿಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ.

  • ಸಿನಿಮಾ ಶುರುವಾಗೋ ಮೊದಲೇ ಗಣೇಶ್ ಮನೆಮುಂದೆ ನಿಂತಿತು ಕಟೌಟ್!

    ಸಿನಿಮಾ ಶುರುವಾಗೋ ಮೊದಲೇ ಗಣೇಶ್ ಮನೆಮುಂದೆ ನಿಂತಿತು ಕಟೌಟ್!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈಗ ‘ಗೀತಾ’ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಸಿನಿಮಾ ಸೆಟ್ಟೇರುವ ಮೊದಲೇ ಗೋಲ್ಡನ್ ಸ್ಟಾರ್ ನಿವಾಸದ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ.

    ಈ ಹಿಂದೆ ಗೀತಾ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಆದರೆ ಈಗ ಸೆಟ್ಟೇರುವ ಮೊದಲೇ ಗಣೇಶ್ ಮನೆ ಮುಂದೆ ಸಿನಿಮಾದ ದೊಡ್ಡ ಕಟೌಟ್ ಅನ್ನು ಅಭಿಮಾನಿಗಳು ನಿಲ್ಲಿಸಿದ್ದಾರೆ.

    ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಆಚರಣೆ ನಡೆಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ. ಈ ಚಿತ್ರದ ಟೈಟಲ್ ಅನೌನ್ಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದ್ದು, ಗಣೇಶ್ ಅವರು ಈ ಚಿತ್ರಕ್ಕಾಗಿ ಹೊಸ ಲುಕ್ ನಲ್ಲಿ ಪ್ರಯತ್ನಿಸಿದ್ದಾರೆ.

    ಜುಲೈ 2ರಂದು ಗಣೇಶ್ ಹುಟ್ಟುಹಬ್ಬ ನಡೆಯಲಿದ್ದು, ಈ ಸಂದರ್ಭದಲ್ಲಿ ಗೋಲ್ಟನ್ ಸ್ಟಾರ್ ನಟನೆಯ ‘ಆರೆಂಜ್’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

  • ರಾಜಕೀಯ ನಾಯಕರ ಕಟೌಟ್ ಮಧ್ಯೆ ಮಿಂಚಿದ ಮಾನಸಿಕ ಅಸ್ವಸ್ಥ ಭಿಕ್ಷುಕ

    ರಾಜಕೀಯ ನಾಯಕರ ಕಟೌಟ್ ಮಧ್ಯೆ ಮಿಂಚಿದ ಮಾನಸಿಕ ಅಸ್ವಸ್ಥ ಭಿಕ್ಷುಕ

    ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದ ಕಲ್ಲೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇದರ ಅಂಗವಾಗಿ ಪಟ್ಟಣದಾದ್ಯಂತ ಸ್ವಾಗತ ಕೋರುವ ಕಟೌಟ್ ಹಾಗೂ ಬ್ಯಾನರ್ ಗಳನ್ನ ಹಾಕಲಾಗಿದೆ. ಅವುಗಳ ನಡುವೆ ಒಂದು ಬ್ಯಾನರ್ ಮಾತ್ರ ಎಲ್ಲ ಗಮನ ಸೆಳೆಯುತ್ತಿದೆ. ರಾಜಕೀಯ ನಾಯಕರ ಕಟೌಟ್ ಮಧ್ಯೆ ಮಾನಸಿಕ ಅಸ್ವಸ್ಥ ಭಿಕ್ಷುಕನೊಬ್ಬ ನಿಂತಿರುವ ಕಟೌಟ್ ನೋಡಲು ಜನ ಮುಗಿ ಬೀಳುತಿದ್ದಾರೆ.

    ತಮಿಳುನಾಡು ಮೂಲದ ಗೋಪಾಲಯ್ಯ(50) ಬೋರ್‍ವೆಲ್ ವಾಹನದ ಜೊತೆ ಕೆಲಸಕ್ಕೆ ಬಂದು ಕಳೆದ ಹತ್ತು ವರ್ಷಗಳಿಂದ ಮೂಡಲಗಿಯಲ್ಲೇ ವಾಸವಾಗಿದ್ದಾನೆ. ಗೋಪಾಲಯ್ಯ ಬೋರ್ ವೆಲ್ ಕೆಲಸದಲ್ಲಿ ತೊಡಗಿದ್ದಾಗ ತೆಲೆಗೆ ಪೆಟ್ಟು ಬಿದ್ದು ಬುದ್ಧಿಭ್ರಮಣೆಯಾಗಿದೆ. ಹುಚ್ಚರಂತೆ ಬೀದಿಗಳಲ್ಲಿ ಅಲೆದಾಡುತಿದ್ದಾನೆ. ಯಾರಾದರೂ ಆಹಾರ ಕೊಟ್ಟರೆ ತಿಂದು ಅಲ್ಲೋ ಇಲ್ಲೋ ಮಲಗಿಕೊಂಡು ಕಾಲ ಕಳೆಯುತ್ತಿದ್ದಾನೆ.

    ಸ್ವಭಾವದಲ್ಲಿ ಯಾರಿಗೂ ಕೆಡುಕನ್ನ ಬಯಸದ ಈತ ಇಡೀ ಪಟ್ಟಣದ ಜನತೆಯ ಪ್ರೀತಿಯ ‘ಗೋಪ್ಯಾ’ ಎಂದೆ ಚಿರಪರಿಚಿತನಾಗಿದ್ದಾನೆ. ಈತನಿಗೆ ಅಭಿಮಾನಿಗಳು ಕೂಡ ಇದ್ದಾರೆ. ಈ ಬಾರಿ ನಡೆದ ಕಲ್ಲೇಶ್ವರ ಜಾತ್ರೆ ಸಂದರ್ಭದಲ್ಲಿ ಅಭಿಮಾನಿಗಳು ಈತನ ಭಾವಚಿತ್ರ ಇರುವ ದೊಡ್ಡ ಸ್ವಾಗತ ಕಟೌಟ್ ಹಾಕಿ ಅಭಿಮಾನ ಮೆರೆದಿದ್ದಾರೆ.

    ದೊಡ್ಡ ನಾಯಕರ ಕಟೌಟ್ ನಡುವೆ ಗೋಪ್ಯಾನ ಈ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದೆ.

  • ಮಾಸ್ತಿಗುಡಿ ಚಿತ್ರದ ದುನಿಯಾ ವಿಜಯ್ ಕಟೌಟ್ ವಿರೂಪಗೊಳಿಸಿದ ಕಿಡಿಗೇಡಿಗಳು

    ಮಾಸ್ತಿಗುಡಿ ಚಿತ್ರದ ದುನಿಯಾ ವಿಜಯ್ ಕಟೌಟ್ ವಿರೂಪಗೊಳಿಸಿದ ಕಿಡಿಗೇಡಿಗಳು

    ಬೆಂಗಳೂರು: ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಸಿನಿಮಾ ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಹಾಕಲಾಗಿದ್ದ ದುನಿಯಾ ವಿಜಿ ಕಟೌಟನ್ನ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.

    ಕಟೌಟ್‍ನಲ್ಲಿ ದುನಿಯಾ ವಿಜಿ ತಲೆಯನ್ನು ಮುರಿದಿದ್ದಾರೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿಲ್, ಉದಯ್ ಜೊತೆ ಇರೋ ದುನಿಯಾ ವಿಜಿ ಕಟೌಟನ್ನು ವಿರೂಪಗೊಳಿಸಿದ್ದಾರೆ. ಜೊತೆಗೆ ಚಿತ್ರದ ಟೈಟಲ್ ಬೋರ್ಡ್ ಕೂಡ ಮುರಿದು ಹಾಕಿದ್ದಾರೆ.

    ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು.

    ಮಾಸ್ತಿಗುಡಿ ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಕರಬಂಧ ಮತ್ತು ಅಮೂಲ್ಯ ನಟಿಸಿದ್ದಾರೆ.

    ಇದನ್ನೂ ಓದಿ: `ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!