Tag: cutout

  • ಬೆಂಗ್ಳೂರಲ್ಲಿ ಧರೆಗುರುಳಿದ 40 ಅಡಿಯ ರಾಮನ ಬೃಹತ್ ಕಟೌಟ್!

    ಬೆಂಗ್ಳೂರಲ್ಲಿ ಧರೆಗುರುಳಿದ 40 ಅಡಿಯ ರಾಮನ ಬೃಹತ್ ಕಟೌಟ್!

    ಬೆಂಗಳೂರು: 40 ಅಡಿಯ ರಾಮನ ಕಟೌಟ್ (Rama Cutout) ಧರೆಗುರುಳಿದ ಘಟನೆ ಬೆಂಗಳೂರಿನ ನಂದಿನಿ ಲೇ ಔಟ್ (Nandini Lay Out) ಕೃಷ್ಣಾನಂದ ನಗರ ಸರ್ಕಲ್ ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

    ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ (Ayodhya Pran Prathistha ceremony) ಹಿನ್ನೆಲೆಯಲ್ಲಿ ರಾಮನ ಈ ಬೃಹತ್ ಕಟೌಟ್ ನಿಲ್ಲಿಸಲಾಗಿತ್ತು. ಆ ಬಳಿಕ ಬಿಬಿಎಂಪಿ ತೆರವು ಮಾಡಿರಲಿಲ್ಲ. ಅದೃಷ್ಟವಶಾತ್ ಕಟೌಟ್ ಬೀಳೋ ವೇಳೆ ಯಾವುದೇ ವಾಹನಗಳು ಸಂಚರಿಸಿಲ್ಲ. ಹೀಗಾಗಿ ಭಾರೀ ದುರಂತವೊಂದು ತಪ್ಪಿದೆ.

    ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಗಾಳಿಗೆ ಬಿದ್ದಿರೋ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಕೃಷ್ಣಶಿಲೆಯ ಬಾಲರಾಮನ ಎದುರು ಸೋತ ವೈಟ್ ಮಾರ್ಬಲ್ ಬಾಲರಾಮನ ಲುಕ್ ಹೇಗಿದೆ?

    ಮೂರು ದಿನದಿಂದ ನಿಲ್ಲಿಸಿದ್ದ ಕಟೌಟ್ ಏಕಾಏಕಿ ಗಾಳಿಗೆ ಬಿದ್ದಿರುವುದರಿಂದ ಸ್ಥಳೀಯರಲ್ಲಿ ಅನುಮಾನ ಉಂಟಾಗಿದೆ. ಬೇಕುಂತಲೇ ಕಟೌಟ್ ಕಡೆವಿದ್ದಾರಾ ಅನ್ನೋ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಜೊತೆಗೆ ಕಟೌಟ್ ಹಾಕಿದ್ದವರು ಯಾರು?, ಕಟೌಟ್ ಹಾಕಲು ಅನುಮತಿ ಪಡೆದಿದ್ದರಾ ಅಂತಾನೂ ಪರಿಶೀಲನೆ ನಡೆಸುತ್ತಿದ್ದಾರೆ.

  • ನಾಳೆ ಶಿವಣ್ಣ ಹುಟ್ಟುಹಬ್ಬ: ಥಿಯೇಟರ್ ಮುಂದೆ ಎದ್ದು ನಿಂತ 40 ಅಡಿ ಕಟೌಟ್

    ನಾಳೆ ಶಿವಣ್ಣ ಹುಟ್ಟುಹಬ್ಬ: ಥಿಯೇಟರ್ ಮುಂದೆ ಎದ್ದು ನಿಂತ 40 ಅಡಿ ಕಟೌಟ್

    ಪುನೀತ್ ರಾಜ್‌ಕುಮಾರ್ ನಿಧನ ನಂತರ ಮತ್ತು ಕೊರೋನಾ ಕಾರಣದಿಂದಾಗಿ ಶಿವರಾಜ್ ಕುಮಾರ್ ದೊಡ್ಡಮಟ್ಟದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅದರಲ್ಲೂ ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಘೋಸ್ಟ್ ಸಿನಿಮಾ ಕುರಿತಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸಂತೋಷ ಚಿತ್ರಮಂದಿರದಲ್ಲಿ ಕಾರ್ಯಕ್ರಮ ನಡೆಯಲಿವೆ.

    ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಸಿದ್ದವಾಗಿದ್ದಾರೆ. ಸಂತೋಷ ಚಿತ್ರಮಂದಿರದ ಮುಂದೆ ಎರಡು ಬಹೃತ್ ಕಟೌಟ್ (Cutout)  ಗಳನ್ನು ಹಾಕಲಾಗಿದೆ. 40 ಅಡಿ ಕಟೌಟ್ ನಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳನ್ನು ಸೆಳೆಯಲಿದ್ದಾರೆ. ಈಗಾಗಲೇ ಘೋಸ್ಟ್ ಸಿನಿಮಾದ ಬಿಗ್ ಡ್ಯಾಡಿ ಪೋಸ್ಟರ್ ರಿಲೀಸ್ ಆಗಿದ್ದು, ಶಿವರಾಜ್ ಕುಮಾರ್ ಸಿನಿಮಾ ಹಾಡುಗಳನ್ನು ಸಂತೋಷ್ ಚಿತ್ರಮಂದಿರದಲ್ಲಿ ಹಾಕಲಾಗುತ್ತದೆ ಎಂದು ತಿಳಿದು ಬಂದಿದೆ.

    ಅಲ್ಲದೇ ಅದೇ ಚಿತ್ರಮಂದಿರದಲ್ಲೇ ಘೋಸ್ಟ್ ಸಿನಿಮಾ ಟೀಸರ್ (Teaser) ಕೂಡ ರಿಲೀಸ್ ಆಗಿ ಪ್ರದರ್ಶನ ಆಗಲಿದೆ.  ಈಗಾಗಲೇ ಶಿವರಾಜ್‌ಕುಮಾರ್ ‘ಘೋಸ್ಟ್’ (Ghost) ಸಿನಿಮಾದ ಬಿಗ್ ಡ್ಯಾಡಿ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಘೋಸ್ಟ್ ಸಿನಿಮಾ ನಿರ್ದೇಶಕ ಶ್ರೀನಿ (ಜುಲೈ 9) ಅವರ ಹುಟ್ಟುಹಬ್ಬದಂದು ಶಿವಣ್ಣ ಫ್ಯಾನ್ಸ್ ಹ್ಯಾಪಿ ನ್ಯೂಸ್‌ವೊಂದನ್ನ ಹಂಚಿಕೊಂಡಿದ್ದಾರೆ.

    ಶಿವರಾಜ್‌ಕುಮಾರ್ (Shivarajkumar) ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ಘೋಸ್ಟ್ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಡ್ತಿದ್ದಾರೆ. ಅದರ ಜೊತೆಗೆ ಈ ಬಿಗ್ ಡ್ಯಾಡಿ ಅಂದರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡುವ ಹಾಗೇ ಮಾಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡ ‘ಘೋಸ್ಟ್’ ಟೀಮ್

    ಇದೇ ಜುಲೈ 12ರಂದು ಎನರ್ಜಿಟಿಕ್ ಹೀರೋ ಶಿವಣ್ಣ ಅವರ ಜನ್ಮದಿನ. ಪ್ರತಿ ವರ್ಷದಂತೆ ಈ ಬಾರಿ ಕೂಡ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಲಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ‘ಘೋಸ್ಟ್’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವೀಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11.45ಕ್ಕೆ ಬಿಗ್ ಡ್ಯಾಡಿ ಪರಿಚಯ ಆಗಲಿದೆ. ಈ ಮೂಲಕ ಬಿಗ್ ಡ್ಯಾಡಿ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

     

    ಈ ಪೋಸ್ಟರ್‌ನಲ್ಲಿ ಶಿವಣ್ಣ ಅವರು ರೈಫಲ್ ಹಿಡಿದು ನಿಂತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ನಿರ್ದೇಶಕ ಎಂ.ಜಿ. ಶ್ರೀನಿವಾಸ್ (Director Shrinivas) ಅವರ ಬರ್ತ್‌ಡೇಯಂದು ಪೋಸ್ಟರ್ ರಿವೀಲ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕನ್ನಡ ಚಿತ್ರರಂಗದಲ್ಲಿ ಶ್ರೀನಿ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವಣ್ಣ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರುನಾಡ ಸಂಭ್ರಮಕ್ಕೆ ಅಪ್ಪು-ಚಿರು ಬೃಹತ್ ಕಟೌಟ್

    ಕರುನಾಡ ಸಂಭ್ರಮಕ್ಕೆ ಅಪ್ಪು-ಚಿರು ಬೃಹತ್ ಕಟೌಟ್

    ರುನಾಡ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 10,11ರಂದು ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ವಿಶೇಷತೆ ಹಾಗೂ ಕಲರ್ ಫುಲ್ ನಿಂದ ಕರುನಾಡ ಸಂಭ್ರಮ ಕೂಡಿರಲಿದೆ.

    ವಿದ್ಯಾಪೀಠ ಸರ್ಕಲ್ ಡೊಂಕಲ ಗ್ರೌಂಡ್ ನಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ವರುಣ್ ಸ್ಟುಡಿಯೋಸ್, ರಾಜ್ ಇವೆಂಟ್ಸ್ ಜೊತೆಗೂಡಿ ಕಾರ್ಯಕ್ರಮದ  ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಚಿರಂಜೀವಿ ಸರ್ಜಾ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಕರುನಾಡ ಸಂಭ್ರಮ ಅಂದ್ರೇನೆ ಕಲರ್ ಫುಲ್ ಕಾರ್ಯಕ್ರಮ, ಚಂದನವನದ ತಾರೆಗಳ ಸಮಾಗಮ, ಸ್ಟಾರ್ ಗಾಯಕರ ಹಾಡು, ನಟ, ನಟಿಯರ ಡಾನ್ಸ್. ಈ ಬಾರಿಯೂ ಈ ಸಂಭ್ರಮ ಇನ್ನಷ್ಟು ರಂಗಿನಿಂದ ಕೂಡಿರಲಿದೆ. ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ, ಧ್ರುವ ಸರ್ಜಾ, ರವಿಶಂಕರ್ ಗೌಡ, ನಿಧಿ ಸುಬ್ಬಯ್ಯ, ಆರ್ಮುಗಂ ರವಿ ಶಂಕರ್, ಮಾನ್ವಿತಾ ಹರೀಶ್, ಸಂಗೀತ ಶೃಂಗೇರಿ, ವಿರಾಟ್, ಕಾವ್ಯ ಶಾ, ವಿಕ್ರಂ ರವಿಚಂದ್ರನ್ ಸೇರಿದಂತೆ ಹಲವು ತಾರೆಯರು ಕರುನಾಡ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ: ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ

    ಎಸ್ ಪಿ ಬಿ ಚರಣ್, ಸಿಂಗರ್ ಮನು, ನವೀನ್ ಸಜ್ಜು, ಅನನ್ಯ ಭಟ್, ಅನುರಾಧ ಭಟ್, ವಿಜಯ್ ಪ್ರಕಾಶ್ ಒಳಗೊಂಡ ಖ್ಯಾತ ಗಾಯಕರು ಈ ಸಂಭ್ರಮದ ರಂಗನ್ನು ತಮ್ಮ ಹಾಡಿನ ಮೂಲಕ ಹೆಚ್ಚಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಾ.ವಿಷ್ಣು ಜನ್ಮದಿನಕ್ಕೆ ಅಭಿಮಾನಿಗಳ ಸಾಗರ: ಅಭಿಮಾನ ಸ್ಟುಡಿಯೋ ಮುಂದೆ 50 ಕಟೌಟ್ ಸಿಂಗಾರ

    ಡಾ.ವಿಷ್ಣು ಜನ್ಮದಿನಕ್ಕೆ ಅಭಿಮಾನಿಗಳ ಸಾಗರ: ಅಭಿಮಾನ ಸ್ಟುಡಿಯೋ ಮುಂದೆ 50 ಕಟೌಟ್ ಸಿಂಗಾರ

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಅವರ 72ನೇ ಜನ್ಮದಿನವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಜನ್ಮದಿನಕ್ಕೆ ಚಾಲನೆ ನೀಡಿದ್ದಾರೆ.  72ನೇ ಜನ್ಮದಿನಾಚರಣೆ (Birthday) ಹಿನ್ನೆಲೆ ಡಾ. ವಿಷ್ಣುವರ್ಧನ್ ಅಭಿನಯದ ಚಿತ್ರಗಳ ಐವತ್ತು ಕಟೌಟ್ ಗಳನ್ನು ಅಭಿಮಾನ ಸ್ಟುಡಿಯೋ ಮುಂದೆ ನಿಲ್ಲಿಸಲಾಗಿದೆ. ಅಲ್ಲದೇ ಅಭಿಮಾನಿಗಳ ಸಾಗರವೇ ಅಲ್ಲಿ ಹರಿದು ಬಂದಿದೆ.

    ಅಭಿಮಾನ್ ಸ್ಟುಡಿಯೋ (Abhiman Studio) ಬಳಿ ರಾರಾಜಿಸುತ್ತಿರುವ ಡಾ.ವಿಷ್ಣುವರ್ಧನ್ ಕಟೌಟ್ ಗಳು (Cutout) ಯಜಮಾನ, ಸಾಹಸ ಸಿಂಹ, ಕೃಷ್ಣ ನೀ ಬೇಗನೆ ಬಾ, ಜಯಸಿಂಹ, ವೀರಪ್ಪ ನಾಯಕ, ಜನ ನಾಯಕ, ದಾದ, ಕೃಷ್ಣ ರುಕ್ಮಿಣಿ, ಹೃದಯ ಗೀತೆ, ದೇವ, ಮತ್ತೆ ಹಾಡಿತು ಕೋಗಿಲೆ, ಲಯನ್ ಜಗಪತಿ ರಾವ್, ರಾಜಧೀರಾಜಾ, ರಾಯರು ಬಂದರು ಮಾವನ ಮನೆಗೆ, ಮಹಾಕ್ಷತ್ರಿಯ, ಮುತ್ತಿನ ಹಾರ, ದಣಿ, ಜನನಿ ಜನ್ಮಭೂಮಿ, ಸೂರ್ಯ ವಂಶ, ಸೂರಪ್ಪ, ದಿಗ್ಗಜರು, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ರಾಜ ನರಸಿಂಹ, ಆಪ್ತಮಿತ್ರ, ಸಾಹುಕಾರ, ವರ್ಷ, ಕರ್ನಾಟಕ ಸುಪುತ್ರ, ಹಲೋ ಡ್ಯಾಡಿ, ಅಪ್ಪಾಜಿ, ಸ್ಕೂಲ್ ಮಾಸ್ಟರ್, ಆಪ್ತರಕ್ಷಕ, ಚಿನ್ನದಂತ ಮಗ, ವಿಷ್ಣುಸೇನಾ, ನಾಗರಹಾವು, ಗಂಧದ ಗುಡಿ, ಶುಭ ಮಿಲನ ಚಿತ್ರಗಳ ಕಟೌಟ್ ಗಳಾಗಿವೆ. ಇದನ್ನೂ ಓದಿ: ಶಕ್ತಿ, ಸ್ಫೂರ್ತಿ ಸದಾ ನಿಮ್ಮೊಂದಿಗಿರಲಿ: ಮೋದಿ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್ 

    ಅಲ್ಲದೇ ಹುಟ್ಟುಹಬ್ಬಕ್ಕಾಗಿಯೇ ಅಭಿಮಾನಿಗಳು ಸ್ಟುಡಿಯೋ ಬಳಿ ರಕ್ತದಾನ, ಅನ್ನದಾನ, ನೇತ್ರದಾನ ಸೇರಿದಂತೆ ಹಲವು ಜನಪರ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ. ಬೆಳಗ್ಗೆಯಿಂದಲೇ ಅಭಿಮಾನ ಸ್ಟುಡಿಯೋಗೆ ಆಗಮಿಸಿರುವ ಅಭಿಮಾನಿಗಳು ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು ಸಮಾಧಿ ಬಳಿ ಜಮಾಯಿಸಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದಾರೆ.

    ಇದೇ ಸಂದರ್ಭದಲ್ಲಿ ಕನ್ನಡದ ಹಿರಿಯ ನಟಿ ರಮೇಶ್ ಭಟ್ (Ramesh bhat) ಕೂಡ ಸಮಾಧಿಗೆ ಬಂದು ಪೂಜೆ ಸಲ್ಲಿಸಿದರು. ವಿಷ್ಟುವರ್ಧನ್ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ಪ್ರತಿ ವರ್ಷವೂ ರಮೇಶ್ ಭಟ್ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಕೆಲವು ಹೊತ್ತು ಅಭಿಮಾನಿಗಳ ಜೊತೆ ಬೆರೆಯುತ್ತಾರೆ. ಆದರೆ ಈ ಸ್ಮಾರಕದ ಬಳಿ ವಿಷ್ಣು ಕುಟುಂಬ ಬರದೇ ಮನೆಯಲ್ಲೇ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ‘ಸಾಹಸಸಿಂಹ’ ಸಿನಿಮಾ ರಂಗಕ್ಕೆ ಬಂದು 50 ವರ್ಷ: ನೆಚ್ಚಿನ ನಟನ ಜನ್ಮದಿನಕ್ಕೆ ಡಾ.ವಿಷ್ಣು ಸೇನಾನಿಗಳಿಂದ 50 ಕಟೌಟ್ ಸಂಕಲ್ಪ

    ‘ಸಾಹಸಸಿಂಹ’ ಸಿನಿಮಾ ರಂಗಕ್ಕೆ ಬಂದು 50 ವರ್ಷ: ನೆಚ್ಚಿನ ನಟನ ಜನ್ಮದಿನಕ್ಕೆ ಡಾ.ವಿಷ್ಣು ಸೇನಾನಿಗಳಿಂದ 50 ಕಟೌಟ್ ಸಂಕಲ್ಪ

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಅವರ 72ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಡಾ.ವಿಷ್ಣು ಸೇನಾನಿಗಳು ( Dr. Vishnu Senani) ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೇ ವರ್ಷ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಅವರು ಸಿನಿಮಾ ರಂಗಕ್ಕೆ ಬಂದು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟು ಹಬ್ಬದ ದಿನದಂದು ಐವತ್ತು ಕಟೌಟ್ ನಿಲ್ಲಿಸಲು ಅಭಿಮಾನಿಗಳು ಸಂಕಲ್ಪ ಮಾಡಿದ್ದಾರೆ. ಪ್ರತಿ ವರ್ಷವೂ ನೆಚ್ಚಿನ ನಟನ ಹುಟ್ಟು ಹಬ್ಬ(Birthday)ವನ್ನು ನಾನಾ ರೀತಿಯಲ್ಲಿ ಆಚರಿಸಿಕೊಂಡು ಬಂದಿರುವ ಅಭಿಮಾನಿಗಳು ಈ ಸಲ ಕಟೌಟ್ ಮೂಲಕ ದಾಖಲೆ ಸೃಷ್ಟಿಸಲು ಹೊರಟಿದ್ದಾರೆ.

    ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು ಈ ಡಿಸೆಂಬರ್ 29ಕ್ಕೆ  ೫೦ (Fifty Years)ವರ್ಷಗಳಾಗಲಿವೆ. ಹಾಗಾಗಿ ಅವರ ಹುಟ್ಟು ಹಬ್ಬದ ದಿನದಂದು ಸುಮಾರು 50 ಕಟೌಟ್ ಗಳನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಿಲ್ಲಿಸಲಾಗುತ್ತಿದೆ. ಆ ಪ್ರತಿ ಕಟೌಟ್ ಸಹ ಡಾ.ವಿಷ್ಣು ಅವರ ಒಂದೊಂದು ಯಶಸ್ವಿ ಚಿತ್ರದ್ದಾಗಿರಲಿದೆ. ಈ ಕಟೌಟ್ (Cutout) ಗಳನ್ನು ರಾಜ್ಯದ ಬೇರೆ ಬೇರೆ ಭಾಗದ ಸುಮಾರು 50 ಅಭಿಮಾನಿಗಳು ಸೇರಿ ನಿರ್ಮಿಸುತ್ತಿರುವುದು ವಿಶೇಷ. ಇದನ್ನೂ ಓದಿ:‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ಈ ಪ್ರಮಾಣದ ಕಟೌಟ್ ಗಳು ಇಡೀ ವಿಶ್ವದಲ್ಲಿಯೇ ಒಂದೇ ಸ್ಥಳದಲ್ಲಿ ಯಾವೊಬ್ಬ ಕಲಾವಿದನ ಹೆಸರಲ್ಲೂ ಆಗಿಲ್ಲವೆಂಬ ವಿಶ್ವದಾಖಲೆ ಕೂಡ ಆಗಲಿದೆ. ವಿಶ್ವ ದಾಖಲೆಗಾಗಿ ಈಗಾಗಲೇ ವಿಷ್ಣು ಸೇನಾನಿಗಳು ರಿಜಿಸ್ಟರ್ ಮಾಡುವಂತಹ ಕೆಲವು ಸಂಸ್ಥೆಗಳಿಗೆ ಮಾಹಿತಿ ಕೂಡ ಕೊಟ್ಟಿದ್ದಾರೆ. ಹಾಗಾಗಿ ಸೆಪ್ಟೆಂಬರ್ 18ರಂದು ಡಾ.ವಿಷ್ಣು ಪುಣ್ಯಭೂಮಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

     

    ಈ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿಗಳಾದ ಆನಂದ್ ರಾಚ್, ರಘು ಎಸ್, ತುಳಸೀಕೃಷ್ಣ, ರಾಧಾ ಗಂಗಾಧರ್, ವಿಜಯಲಕ್ಷ್ಮಿ, ರವಿಕುಮಾರ್ ದೇವರಮನಿ, ಸುಹಾಸ್ ಯಮಲೂರು, ಜಾನಕೀವರ್ಧನ್, ಸಿಂಹಘರ್ಜನೆ ಮಂಜು, ಮಲ್ಲಿಕಾರ್ಜುನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್ ಗೆ ಅಪ್ಪು ಫ್ಯಾನ್ಸ್ ಧನ್ಯವಾದ ಹೇಳಿದ್ದು ಯಾಕೆ?

    ಕಿಚ್ಚ ಸುದೀಪ್ ಗೆ ಅಪ್ಪು ಫ್ಯಾನ್ಸ್ ಧನ್ಯವಾದ ಹೇಳಿದ್ದು ಯಾಕೆ?

    ನ್ನಡದಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳು ಬಾಲ್ಯದಿಂದಲೇ ಪರಿಚಯ ಅಂತಿದ್ದರೆ ಅದು ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರಿಗೆ ಕ್ರೆಡಿಟ್ ಸೇರಬೇಕು. ಇಬ್ಬರೂ ಬಾಲ್ಯದಿಂದಲೇ ಸ್ನೇಹಿತರು. ಅಪ್ಪು ಬಾಲ್ಯದಲ್ಲಿ ಇರುವಾಗ ಅದೆಷ್ಟೋ ಬಾರಿ ಸುದೀಪ್ ಅವರನ್ನು ಭೇಟಿ ಮಾಡಿದ್ದು ಇದೆ. ಒಟ್ಟಿಗೆ ಆಡಿದ್ದೂ ಇದೆ. ಅದರಲ್ಲೂ ಸುದೀಪ್ ಅವರು ತಂದೆ ನಡೆಸಿಕೊಡುತ್ತಿದ್ದ ಸರೋವರ ಹೋಟೆಲ್ ಗೆ ಡಾ.ರಾಜ್ ಕುಮಾರ್ ಅವರು ಖಾಯಂ ಗೆಸ್ಟ್. ಹಾಗಾಗಿ ಅಪ್ಪನ ಜೊತೆಯೂ ಅಪ್ಪು ಅಲ್ಲಿಗೆ ಬರುತ್ತಿದ್ದರು.

    ಅಪ್ಪು ಅವರನ್ನು ಸುದೀಪ್ ಅವರು ಎಷ್ಟು ಗೌರವಿಸುತ್ತಿದ್ದರೋ, ಅಷ್ಟೇ ಗೌರವವನ್ನು ಸುದೀಪ್ ಅವರಿಗೆ ಅಪ್ಪು ನೀಡುತ್ತಿದ್ದರು. ಹೀಗಾಗಿಯೇ ಅಪ್ಪುವನ್ನು ಗೌರವಿಸುವುದಕ್ಕಾಗಿ ಅನೇಕ ಚಿತ್ರಮಂದಿರಗಳಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಕಟೌಟ್ ಗಳನ್ನು ಚಿತ್ರತಂಡ ಹಾಕಿದೆ. ಫ್ಯಾನ್ಸ್ ಕೂಡ ಇಬ್ಬರ ಕಟೌಟ್ ಗೂ  ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ಕಟೌಟ್ ಗಳು ಈ ಜೋಡಿಯದ್ದೇ ಚಿತ್ರಮಂದಿರದ ಮುಂದೆ ಎದ್ದು ನಿಂತಿವೆ. ಹಾಗಾಗಿ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

    ಸಾಮಾನ್ಯವಾಗಿ ಸಿನಿಮಾದಲ್ಲಿ ನಟರು ಇದ್ದರೆ ಅವರ ಕಟೌಟ್ ಹಾಕುವುದು ವಾಡಿಕೆ. ಪುನೀತ್ ರಾಜ್ ಕುಮಾರ್ ಅವರಿಗೂ ವಿಕ್ರಾಂತ್ ರೋಣ ಸಿನಿಮಾಗೂ ಸಂಬಂಧವೇ ಇಲ್ಲದಿದ್ದರೂ, ನಟನ ಗೌರವಾರ್ಥ ಸಾಕಷ್ಟು ಕಟೌಟ್ ಗಳನ್ನು ವಿಕ್ರಾಂತ್ ರೋಣ ತಂಡ ಹಾಕುವ ಮೂಲಕ ನಮನ ಸಲ್ಲಿಸಿದೆ. ಈ ನಡೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಂತಸ ತಂದಿದೆ. ಹೀಗಾಗಿ ವಿಕ್ರಾಂತ್ ರೋಣ ತಂಡಕ್ಕೆ ಮತ್ತು ಸುದೀಪ್ ಅವರಿಗೆ ಅಭಿಮಾನಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಥಿಯೇಟರ್ ಮುಂದೆ ರಾರಾಜಿಸಲು ಯಶ್ ಕಟೌಟ್ ರೆಡಿ: ಗ್ರೌಂಡ್ ರಿಪೋರ್ಟ್

    ಥಿಯೇಟರ್ ಮುಂದೆ ರಾರಾಜಿಸಲು ಯಶ್ ಕಟೌಟ್ ರೆಡಿ: ಗ್ರೌಂಡ್ ರಿಪೋರ್ಟ್

    ಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಏಪ್ರಿಲ್ 14 ರಿಂದ ವಿಶ್ವದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಕರ್ನಾಟಕವೊಂದರಲ್ಲೇ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ಥಿಯೇಟರ್ ಸಿಂಗಾರಗೊಳ್ಳುತ್ತಿವೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಚಿತ್ರಮಂದಿರಗಳ ಮುಂದೆ ನಿಲ್ಲಿಸುವುದಕ್ಕಾಗಿಯೇ ನೂರಾರು ಕಟೌಟ್ ಗಳು ರೆಡಿ ಆಗುತ್ತಿದ್ದು, ಮೊದಲ ಹಂತದಲ್ಲಿ 100 ಕಟೌಟ್ ಗಳನ್ನು ಮಾಡಲು ಹೇಳಿದೆಯಂತೆ ಹೊಂಬಾಳೆ ಫಿಲ್ಮ್ ಸಂಸ್ಥೆ. ಬೆಂಗಳೂರಿನ ರಾಜ್ ಕಮಲ್ ಆರ್ಟ್ಸ್ ನಲ್ಲಿ ಕಟೌಟ್ ಕೆಲಸ ಶುರುವಾಗಿದ್ದು, ಹಗಲು ರಾತ್ರಿ ಎನ್ನದೇ ಕಲಾವಿದರು ಈ ಕೆಲಸದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ಮೊದಲ ಹಂತದ ಕಟೌಟ್ ಗಳಲ್ಲಿ ಯಶ್ ಅವರ ಎರಡು ಲುಕ್ ಗಳು ಇರಲಿದ್ದು, 24 ಅಡಿಯಿಂದ 72 ಅಡಿವರೆಗೂ ಈ ಕಟೌಟ್ ಗಳು ರೆಡಿಯಾಗುತ್ತಿವೆ. ಯಶ್ ಈ ಸಿನಿಮಾದಲ್ಲಿ ನಾನಾ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದರೂ, ಎರಡು ಲುಕ್ ಗಳನ್ನು ಮಾತ್ರ ಕಟೌಟ್ ಮೂಲಕ ರಿವಿಲ್ ಮಾಡಲಾಗುತ್ತಿದೆ. ಅಲ್ಲದೇ ಯಶ್ ಜತೆ ಸಂಜಯ್ ದತ್ ಅವರ ಕಟೌಟ್ ಗಳು ಕೂಡ ರಾರಾಜಿಸಲಿವೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಚಾಪ್ಟರ್ ಒಂದು ರಿಲೀಸ್ ಆದಾಗಲೇ ದಾಖಲೆ ಸೃಷ್ಟಿಸಿತ್ತು. ಈ ಸಲವೂ ಅಷ್ಟೇ ಕ್ರೇಜ್ ಕ್ರಿಯೇಟ್ ಮಾಡಿದೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ ಟ್ರೈಲರ್ ಭಾರೀ ಸದ್ದು ಮಾಡಿದ್ದು, ರಿಲೀಸ್ ಆದ 24 ಗಂಟೆಯಲ್ಲಿ 109 ಮಿಲಿಯನ್ ನೋಡುಗರನ್ನು ಅದು ಆಕರ್ಷಿಸಿದೆ. ಭಾರತ ಸಿನಿಮಾ ರಂಗದ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ನೋಡಿದ ಟ್ರೈಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಆರು ವರ್ಷ ಪ್ರೀತಿ ತೋರಿದ್ದ ಬ್ಲ್ಯಾಕಿ ನೆನಪಿಗೆ ಶ್ರದ್ಧಾಂಜಲಿ ಕಟೌಟ್

    ಆರು ವರ್ಷ ಪ್ರೀತಿ ತೋರಿದ್ದ ಬ್ಲ್ಯಾಕಿ ನೆನಪಿಗೆ ಶ್ರದ್ಧಾಂಜಲಿ ಕಟೌಟ್

    ಉಡುಪಿ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಸಾಕಿದವರಿಗೆ, ಪ್ರೀತಿ ತೋರಿದವರ ಜೊತೆ ಶ್ವಾನ ಕೊನೆಯ ಕ್ಷಣದವರೆಗೂ ನಿಯತ್ತಿನಿಂದ ಇರುತ್ತದೆ. ಐದಾರು ವರ್ಷಗಳ ಕಾಲ ಜೊತೆಗಿದ್ದ ಬ್ಲ್ಯಾಕಿ ಮೃತಪಟ್ಟಾಗ ಸಾಸ್ತಾನ ಪಾಂಡೇಶ್ವರದ ಮಂದಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

    ಬೀದಿ ನಾಯಿಯೊಂದು ಗ್ರಾಮ ಸಿಂಹವಾಗಿ ಮೆರೆದಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಸ್ತಾನ ಪಾಂಡೇಶ್ವರದ ಜನಕ್ಕೆ ಬ್ಲ್ಯಾಕಿ ಎಂದರೆ ಅಚ್ಚುಮೆಚ್ಚು. ಊರಿನ ಕಾವಲುಗಾರನಾಗಿ, ಗೆಳೆಯರ ಬಳಗದ ಸದಸ್ಯರಂತೆ ಬ್ಲ್ಯಾಕಿ ಓಡಾಡಿಕೊಂಡಿತ್ತು. ವಾರದ ಹಿಂದೆ ಅನಾರೋಗ್ಯದಿಂದ ಶ್ವಾನ ಮೃತಪಟ್ಟಿದೆ. ನಾಯಿಯ ಮೇಲಿನ ಪ್ರೀತಿಗೆ ಗೆಳೆಯರ ಬಳಗ ಶ್ರದ್ಧಾಂಜಲಿ ಅರ್ಪಿಸಿ, ದೊಡ್ಡ ಕಟೌಟ್‍ನ್ನು ಊರಿನಲ್ಲಿ ಹಾಕಲಾಗಿದೆ. ಇದನ್ನೂ ಓದಿ:  ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ತಂಡದ ಯುವಕ ನಿತೇಶ್ ಮಾತನಾಡಿ, ಮಲ್ಪೆಯಿಂದ ಸಾಸ್ತಾನಕ್ಕೆ ನಾಯಿ ಮರಿಯನ್ನು ತಂದಿದ್ದರು. ಬ್ಲ್ಯಾಕೀ ಎಲ್ಲರ ಜೊತೆ ಓಡಾಡಿಕೊಂಡು ಗೆಳೆಯನಂತೆಯೇ ಆಗಿಬಿಟ್ಟಿತ್ತು. ಬ್ಲ್ಯಾಕಿ ಸಾವನ್ನಪ್ಪಿದ್ದು ಬಹಳ ಬೇಸರವಾಗಿದೆ ಎಂದರು. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಪಾಂಡೇಶ್ವರಕ್ಕೆ ಹೋಗುವ ಹೆದ್ದಾರಿ ಪಕ್ಕದಲ್ಲೇ ಕಟೌಟ್ ಹಾಕಿ ಶ್ರದ್ಧಾಂಜಲಿ ಅರ್ಪಣೆ ಮಾಡಲಾಗಿದೆ. ನಾಯಿಗಳಿಗೆ ಸ್ವಲ್ಪ ಪ್ರೀತಿ ತೋರಿದರೂ ಅವುಗಳು ಎಂದೂ ಮರೆಯುವುದಿಲ್ಲ. ನಾವು ಊರವರು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಥಳೀಯ ದಿನೇಶ್ ಬಾಂಧವ್ಯ ಹೇಳಿದರು.

  • ಹೋದಲ್ಲಿ, ಬಂದಲ್ಲಿ ಶುಭಕೋರಿ ಕಟೌಟ್ ಹಾಕಬೇಡಿ: ಸಿಎಂ ಬೊಮ್ಮಾಯಿ

    ಹೋದಲ್ಲಿ, ಬಂದಲ್ಲಿ ಶುಭಕೋರಿ ಕಟೌಟ್ ಹಾಕಬೇಡಿ: ಸಿಎಂ ಬೊಮ್ಮಾಯಿ

    – ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ನಿಷೇಧ ಬಳಿಕ ಮತ್ತೆ ಸಿಎಂ ಸರಳತೆ

    ಉಡುಪಿ: ನಾನು ಹೋದಲ್ಲಿ, ಬಂದಲ್ಲಿ ಕಟೌಟ್ ಹಾಕಬೇಡಿ. ಶುಭಕೋರುವ ಹೋರ್ಡಿಂಗ್ ಯಾರೂ ಹಾಕಬೇಡಿ ಎಂದು ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾನು ಈ ನಾಡಿನ ಸೇವಕ. ಮುಖ್ಯಮಂತ್ರಿ ಆದರೂ ಈ ನಾಡಿನ ಸೇವಕ. ಈ ಭಾವನೆ ಕಟೌಟ್ ಹೋರ್ಡಿಂಗ್ ನಿಂದ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ. ನಾನು ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಪ್ರೀತಿ ಮತ್ತು ವಿಶ್ವಾಸವೇ ನಾನು ಮಾಡುತ್ತಿರುವ ಮ್ಯಾಜಿಕ್. ಅಸಮಾಧಾನ ಎಲ್ಲಾ ತಣ್ಣಗಾಗುತ್ತಿದೆ ಎಂದು ಹೇಳಿದರು.

    ಕೋವಿಡ್ ಸಂದರ್ಭ ರಾಜ್ಯದಲ್ಲಿ 1 ಲಕ್ಷ ಸಾವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸಾವುಗಳು ಸರ್ಕಾರದ ದಾಖಲೆಯಲ್ಲಿದೆ. ಪ್ರತಿಯೊಂದು ಜಿಲ್ಲೆಯ ಅಂಕಿ ಅಂಶ ಸರ್ಕಾರದ ದಾಖಲೆಯಲ್ಲಿ ಇದೆ. ನಿಮ್ಮ ಹೇಳಿಕೆಗೆ ಆಧಾರ ಕೊಟ್ಟರೆ ಪರಿಶೀಲಿಸುತ್ತೇವೆ. ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ಕರೆಯುವುದಾಗಿ ಇದೇ ವೇಳೆ ಹೇಳಿದರು.

    ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಖಾಸಗಿಯಾಗಿ ಅವರು ಹೂವಿನ ವ್ಯಾಪಾರವನ್ನು ಮಾಡಬಹುದು. ಖಾಸಗಿ ಕಾರ್ಯಕ್ರಮದಲ್ಲಿ ಹೂವು, ಹಾರ ತುರಾಯಿ ಬಳಸಬಹುದು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಹೂಗುಚ್ಚ, ಹಾರ, ತುರಾಯಿ ಬೇಡ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಸರ್ಕಾರಿ ಜಾಗದಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಬೆಂಗಳೂರಿಗೆ ಹೋದ ತಕ್ಷಣ ಆದೇಶವನ್ನು ಹೊರಡಿಸುತ್ತೇನೆ. ಪೊಲೀಸ್ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

  • ಕುರುಕ್ಷೇತ್ರ: ದುರ್ಯೋಧನನ ಜೊತೆ ಮಿಂಚುತ್ತಿರೋ ಭೀಷ್ಮ!

    ಕುರುಕ್ಷೇತ್ರ: ದುರ್ಯೋಧನನ ಜೊತೆ ಮಿಂಚುತ್ತಿರೋ ಭೀಷ್ಮ!

    ಬೆಂಗಳೂರು: ಕುರುಕ್ಷೇತ್ರ ಬಿಡುಗಡೆಯಾಗಲು ದಿನಗಣನೆ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ವಿಜೃಂಭಿಸಿರೋ ಈ ಸಿನಿಮಾ ಅವರ ಅಭಿಮಾನಿಗಳಿಗೂ ಸ್ಪೆಷಲ್. ಇನ್ನೇನು ತೆರೆಯ ಮೇಲೆ ಕುರುಕ್ಷೇತ್ರ ಮೂಡಿಕೊಳ್ಳೋ ಕ್ಷಣಗಳು ಹತ್ತಿರಾಗುತ್ತಲೇ ಥೇಟರ್‌ಗಳ ಮುಂದೆ ಕಟೌಟ್ ಭರಾಟೆಯೂ ಜೋರಾಗಿದೆ. ಹೇಳಿಕೇಳಿ ಇದು ದೊಡ್ಡ ಕ್ಯಾನ್ವಾಸಿನ ಚಿತ್ರ. ಇದರಲ್ಲಿ ಹಲವಾರು ಸ್ಟಾರ್ ನಟ ನಟಿಯರೂ ನಟಿಸಿದ್ದಾರೆ. ಒಂದು ವೇಳೆ ಅವರೆಲ್ಲರ ಕಟೌಟ್ ಹಾಕಿದರೆ ಆಯಾ ಥೇಟರ್ ಇರೋ ಏರಿಯಾವೆಲ್ಲ ಕಟೌಟ್ ಮಯವಾಗಿ ಬಿಡುತ್ತದೆ. ಯಾಕೆಂದರೆ ಅಷ್ಟು ದೊಡ್ಡ ತಾರಾಗಣ ಕುರುಕ್ಷೇತ್ರದಲ್ಲಿದೆ!

    ಹೀಗಿರೋದರಿಂದಲೇ ಇದೀಗ ಥೇಟರ್‌ಗಳ ಮುಂದೆ ಪ್ರಧಾನವಾಗಿ ಇಬ್ಬರ ಕಟೌಟುಗಳು ರಾರಾಜಿಸುತ್ತಿವೆ. ದುರ್ಯೋಧನನಾಗಿ ನಟಿಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಭೀಷ್ಮ ಅಂಬರೀಶ್ ಅವರ ಕಟೌಟ್ ಬಹುತೇಕ ಚಿತ್ರಮಂದಿರಗಳ ಮುಂದೆ ಜನರನ್ನು ಸೆಳೆಯುತ್ತಿವೆ. ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕ ಹೀರೋಗಳು ಈ ಚಿತ್ರದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ದರ್ಶನ್ ಮತ್ತು ಅಂಬರೀಶ್ ಅವರ ಕಟೌಟುಗಳನ್ನು ಚಿತ್ರಮಂದಿರಗಳ ಮುಂದೆ ನಿಲ್ಲಿಸಲಾಗುತ್ತಿದೆ.

    ಹಾಗಂತ ಇದರ ಹಿಂದೆ ಯಾವ ಉದ್ದೇಶಗಳೂ ಇಲ್ಲ. ಈ ಬಗ್ಗೆ ಕುರುಕ್ಷೇತ್ರದಲ್ಲಿ ನಟಿಸಿರೋ ಸಕಲ ಕಲಾವಿದರಿಗೂ ಸಹಮತವಿದೆ. ಅಷ್ಟಕ್ಕೂ ಈ ಹಿಂದೆ ಖುದ್ದು ದರ್ಶನ್ ಅವರೇ ಯಾರ ಕಟೌಟುಗಳನ್ನು ನಿಲ್ಲಿಸೋದೂ ಬೇಡ, ಅಂಬರೀಶ್ ಅವರ ಕಟೌಟ್ ಒಂದಿದ್ದರೆ ಸಾಕು ಎಂದಿದ್ದರು. ಆದರೂ ಇದು ದರ್ಶನ್ ಅವರ ಐವತ್ತನೇ ಚಿತ್ರ. ಇನ್ನು ಅಂಬರೀಶ್ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಾ ಅವರ ಬಗ್ಗೆ ವಿಶೇಷವಾದ ಅಕ್ಕರಾಸ್ಥೆ ಹೊಂದಿರುವವರು ದರ್ಶನ್. ಈ ಕಾರಣದಿಂದಲೇ ಭೀಷ್ಮನ ಜೊತೆ ದುರ್ಯೋಧನನ ಕಟೌಟುಗಳನ್ನೂ ಹಾಕಲಾಗುತ್ತಿದೆ.

    ಚಿತ್ರಮಂದಿರಗಳ ಎದುರು ಹೀಗೆ ಭೀಷ್ಮ ಮತ್ತು ದುರ್ಯೋಧನನ ಕಟೌಟುಗಳು ರಾರಾಜಿಸುತ್ತಿರೋದನ್ನು ಕಂಡು ಅಭಿಮಾನಿಗಳು ಮಾತ್ರವಲ್ಲದೇ ಜನರೆಲ್ಲ ಖುಷಿಗೊಳ್ಳುತ್ತಿದ್ದಾರೆ. ಕುರುಕ್ಷೇತ್ರ ಬಿಡುಗಡೆಯಾಗಲು ಎರಡು ದಿನ ಬಾಕಿ ಇರುವಾಗಲೇ ರಾಜ್ಯಾದ್ಯಂತ ಇಂಥಾ ಕಟೌಟ್ ನಿರ್ಮಿಸೋ ಕಾರ್ಯ ಭರದಿಂದ ಸಾಗುತ್ತಿದೆ. ಪ್ರೇಕ್ಷಕರಂತೂ ತಮ್ಮಿಷ್ಟದ ನಟರನ್ನು ಒಂದೇ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.