Tag: customs duty

  • ಬಜೆಟ್‌ ಭಾಷಣ ಮುಗಿದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಭಾರೀ ಇಳಿಕೆ

    ಬಜೆಟ್‌ ಭಾಷಣ ಮುಗಿದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಭಾರೀ ಇಳಿಕೆ

    ನವದೆಹಲಿ: ನಿರ್ಮಲಾ ಸೀತಾರಾಮನ್‌ (Nirmala Sitharaman) ಬಜೆಟ್‌ (Union Budget) ಭಾಷಣ ಮುಗಿದ ಬೆನ್ನಲ್ಲೇ ಚಿನ್ನ (Gold) ಮತ್ತು ಬೆಳ್ಳಿ (Silver) ದರದಲ್ಲಿ ಭಾರೀ ಇಳಿಕೆಯಾಗಿದೆ.

    ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ(MCX) 10 ಗ್ರಾಂ ಚಿನ್ನದ ಬೆಲೆ 3,916 ರೂ. ಇಳಿಕೆಯಾಗಿದ್ದರೆ 1 ಕೆಜಿ ಬೆಳ್ಳಿ ದರ 4,213 ರೂ. ಇಳಿಕೆಯಾಗಿದೆ. ಅಂತಿಮವಾಗಿ 10 ಗ್ರಾಂ ಚಿನ್ನದ ದರ 68,789 ರೂ. ಕೊನೆಯಾದರೆ 1 ಕೆಜಿ ಬೆಳ್ಳಿ ದರ 84,990 ರೂ.ನಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: Budget 2024 | ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ 15 ಸಾವಿರ ರೂ.

    ಬಜೆಟ್‌ ಪ್ರಸ್ತಾಪ ಅಲ್ಲದೇ ವಿಶ್ವದೆಲ್ಲೆಡೆ ನಡೆಯುತ್ತಿರುವ ಹಲವು ವಿದ್ಯಮಾನಗಳಿಂದ ಚಿನ್ನ ಬೆಳ್ಳಿ ದರ ಇಳಿಕೆಯಾಗುತ್ತಿದೆ. ಈ ಬಜೆಟ್‌ನಲ್ಲಿ ಚಿನ್ನ (Gold) ಮತ್ತು ಬೆಳ್ಳಿಯ (Silver) ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ. ಇದನ್ನೂ ಓದಿ: ದಿಢೀರ್‌ ಕುಸಿತಗೊಂಡು ನಂತರ ಸಾವಿರ ಅಂಕ ಏರಿಕೆಯಾಗಿ ಸೆನ್ಸೆಕ್ಸ್‌ ಮತ್ತೆ ಕುಸಿದಿದ್ದು ಯಾಕೆ?

    ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ (Customs Duty) ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.

    ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ (Budget Speech) ಹೇಳಿದರು.

    6% ತೆರಿಗೆ ಹೇಗೆ?
    ಚಿನ್ನ ಮತ್ತು ಬೆಳ್ಳಿ ಮೇಲಿನ ಅಮದು ಸುಂಕವನ್ನು 10% ರಿಂದ 5% ಇಳಿಕೆ ಮಾಡಿದ್ದರೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ (AIDC) 5% ರಿಂದ 1% ಕ್ಕೆ ಇಳಿಸಲಾಗಿದೆ. ಹೀಗಾಗಿ ಈ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲೆ 6% ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಇದನ್ನೂ ಓದಿ: ಉದ್ಯೋಗಿಗಳಿಗೆ 17,500 ರೂ. ಉಳಿತಾಯ – ಮೊದಲು ತೆರಿಗೆ ಎಷ್ಟಿತ್ತು? ಈಗ ಏನು ಬದಲಾವಣೆಯಾಗಿದೆ?

  • ಆಭರಣ ಪ್ರಿಯರಿಗೆ ಸಿಹಿ ಸುದ್ದಿ – ಕಡಿಮೆಯಾಗಲಿದೆ ಚಿನ್ನ, ಬೆಳ್ಳಿ ದರ

    ಆಭರಣ ಪ್ರಿಯರಿಗೆ ಸಿಹಿ ಸುದ್ದಿ – ಕಡಿಮೆಯಾಗಲಿದೆ ಚಿನ್ನ, ಬೆಳ್ಳಿ ದರ

    ನವದೆಹಲಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ. ಈ ಬಜೆಟ್‌ನಲ್ಲಿ ಚಿನ್ನ (Gold) ಮತ್ತು ಬೆಳ್ಳಿಯ (Silver) ಮೇಲೆ ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ.

    ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ (Customs Duty) ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.

    ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಮ್ಮ ಬಜೆಟ್‌ ಭಾಷಣದಲ್ಲಿ (Budget Speech) ಹೇಳಿದರು. ಇದನ್ನೂ ಓದಿ: ಬಜೆಟ್ 2024 – ಯಾವೆಲ್ಲ ವಸ್ತುಗಳ ಬೆಲೆ ಏರಿಕೆ? ಯಾವುದರ ಬೆಲೆ ಇಳಿಕೆ?

    ವಿಘ್ನಹರ್ತಾ ಗೋಲ್ಡ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಮಹೇಂದ್ರ ಲುನಿಯಾ ಪ್ರತಿಕ್ರಿಯಿಸಿ, 2023 ಹಣಕಾಸು ವರ್ಷದಲ್ಲಿ ಭಾರತ ಅಂದಾಜು 2.8 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. 15% ಆಮದು ಸುಂಕ ಇರುವ ಕಾರಣ ಅಂದಾಜು 42,000 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.

    ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿನ್ನದ ದರವೂ ಭಾರತದಲ್ಲಿ ಏರಿಕೆಯಾಗುತ್ತಿದೆ. ಆಮದು ಸುಂಕವು ಹೆಚ್ಚಿದ್ದರಿಂದ  ಚಿನ್ನದ ಕಳ್ಳಸಾಗಾಣೆ ಹೆಚ್ಚಾಗುತ್ತಿದೆ. ಈ ಕಳ್ಳ ಸಾಗಾಣೆಯನ್ನು ನಿಯಂತ್ರಿಸಲು ಸರ್ಕಾರ ಈಗ ಆಮದು ಸುಂಕವನ್ನು ಇಳಿಸಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಇದನ್ನೂ ಓದಿ: Union Budget 2024: ಬಿಹಾರ, ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಭರ್ಜರಿ ಅನುದಾನ

     

  • ಏಟಿಗೆ ತಿರುಗೇಟು- ಅಮೆರಿಕದ 28  ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದ ಭಾರತ

    ಏಟಿಗೆ ತಿರುಗೇಟು- ಅಮೆರಿಕದ 28 ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದ ಭಾರತ

    ನವದೆಹಲಿ: ಸ್ಟೀಲ್ ಹಾಗೂ ಅಲ್ಯೂಮಿನಿಯಂನಂತಹ ಭಾರತೀಯ ಉತ್ಪನ್ನಗಳ ಮೇಲೆ ವಾಷಿಂಗ್ಟನ್ ಕಸ್ಟಮ್ ತೆರಿಗೆ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಯುಎಸ್‍ನ 28 ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ ಮಾಡಿ ಏಟಿಗೆ ತಿರುಗೇಟು ನೀಡಿದೆ.

    ಯುಎಸ್‍ನ ಉತ್ಪನ್ನಗಳಾದ ಬಾದಾಮಿ, ಬೆಳೆಕಾಳುಗಳು ಹಾಗೂ ವಾಲ್ನಟ್ ಸೇರಿದಂತೆ 28 ಉತ್ಪನ್ನಗಳ ಮೇಲೆ ಭಾರತ ಕಸ್ಟಮ್ ತೆರಿಗೆ ಹೆಚ್ಚಳ ಮಾಡಿರುವುದಾಗಿ ಶನಿವಾರದಂದು ಫೋಷಿಸಿದ್ದು, ಭಾನುವಾರದಿಂದ ಈ ತೆರಿಗೆ ಕ್ರಮ ಜಾರಿಗೆ ಬರಲಿದೆ ಎಂದು ಅಧಿಕೃತ ಅಧಿಸೂಚನೆ ನೀಡಿದೆ.

    ಈ ಮೊದಲು ಈ ಪಟ್ಟಿಯಲ್ಲಿ 29 ಸರಕುಗಳು ಮಾತ್ರ ಇದ್ದವು ಆದರೆ ಭಾರತವು ಸಿಗಡಿಗಳನ್ನು ಈ ಪಟ್ಟಿಯಿಂದ ತೆಗೆದು ಹಾಕಿದೆ. ಈ ಕ್ರಮದಿಂದಾಗಿ 28 ವಸ್ತುಗಳನ್ನು ರಫ್ತು ಮಾಡುವ ಅಮೆರಿಕದ ರಫ್ತುದಾರರಿಗೆ ತೊಂದರೆಯಾಗಲಿದ್ದು, ಅವರು ಹೆಚ್ಚಿನ ಸುಂಕವನ್ನು ಪಾವತಿಸಬೇಕಾಗುತ್ತದೆ ಅಲ್ಲದೆ ಆ ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತವೆ. ಇಂತಹ ಆಮದುಗಳಿಂದ ಭಾರತಕ್ಕೆ ಸುಮಾರು 217 ಮಿಲಿಯನ್ ಡಾಲರ್ ಹೆಚ್ಚುವರಿ ಆದಾಯ ಸಿಗಲಿದೆ ಎನ್ನಲಾಗಿದೆ.

    ಜೂನ್ 30, 2017 ರ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಶನಿವಾರದ ಅಧಿಸೂಚನೆಯಲ್ಲಿ ಯುಎಸ್‍ಎಯಿಂದ ರಫ್ತು ಮಾಡಿದ 28 ನಿರ್ದಿಷ್ಟ ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಹೇರಲಿದೆ ಎನ್ನಲಾಗಿದೆ. ಆದರೆ ಅಸ್ತಿತ್ವದಲ್ಲಿರುವ ಎಂಎಫ್‍ಎನ್ ದರ ಉಳಿದೆಲ್ಲಾ ದೇಶಗಳಲ್ಲಿ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆಯೋ ಹಾಗೆಯೇ ಇರಲಿದೆ.

    ಅಮೆರಿಕ ಕಳೆದ ವರ್ಷ ಮಾರ್ಚ್ ನಲ್ಲಿ ಉಕ್ಕಿನ ಮೇಲೆ ಶೇ 25 ರಷ್ಟು ತೆರಿಗೆ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ಶೇ 10 ರಷ್ಟು ಆಮದು ತೆರಿಗೆ ವಿಧಿಸಿತ್ತು. ಈ ಮೊದಲು ಭಾರತ ರಫ್ತು ಮಾಡುವ ಈ ಸರಕುಗಳ ಮೇಲೆ ಯುಎಸ್ ಯಾವುದೇ ತೆರಿಗೆ ವಿಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಧಾರಕ್ಕೆ ಭಾರತ ಪ್ರತೀಕಾರವಾಗಿ ಯುಎಸ್ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ವಿಧಿಸಲು ಜೂನ್ 21, 2018 ರಂದು ನಿರ್ಧರಿಸಿತು.

    ಭಾರತವು ಯುಎಸ್‍ಗೆ ಈ ವಸ್ತುಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿರುವುದರಿಂದ, ಈ ಕ್ರಮವು ದೇಶೀಯ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಸುಮಾರು 240 ಮಿಲಿಯನ್ ಡಾಲರ್ ಗಳಷ್ಟು ಆದಾಯವನ್ನು ಹೊಂದಿದೆ.

    ಅಲ್ಲದೆ ಜೂನ್ 5 ರಿಂದ ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆ (ಜಿಎಸ್‌ಪಿ) ಯೋಜನೆ ಅಡಿಯಲ್ಲಿ ಭಾರತೀಯ ರಫ್ತುದಾರರಿಗೆ ರಫ್ತು ಪ್ರೋತ್ಸಾಹವನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರ ಜಾರಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಭಾರತ ಅಮೆರಿಕಾದ ಹಲವಾರು ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಸೂಚಿಸಿದೆ. ಇದರಿಂದ ಭಾರತದಿಂದ 5.5 ಮಿಲಿಯನ್ ಡಾಲರ್ ಹೆಚ್ಚಿನ ಸುಂಕದ ಹಣ ಅಮೇರಿಕ ಖಜಾನೆ ಸೇರುತ್ತಿದೆ ಎನ್ನಲಾಗಿದೆ.

  • ಸ್ವಾಸ್ಥ್ಯ ಭಾರತ್, ಸಮೃದ್ಧ ಭಾರತ್ – ಕೃಷಿ, ಶಿಕ್ಷಣ, ಆರೋಗ್ಯಕ್ಕೆ ಒತ್ತು: ಬಜೆಟ್ ಹೈಲೈಟ್ಸ್ ಇಲ್ಲಿದೆ

    ಸ್ವಾಸ್ಥ್ಯ ಭಾರತ್, ಸಮೃದ್ಧ ಭಾರತ್ – ಕೃಷಿ, ಶಿಕ್ಷಣ, ಆರೋಗ್ಯಕ್ಕೆ ಒತ್ತು: ಬಜೆಟ್ ಹೈಲೈಟ್ಸ್ ಇಲ್ಲಿದೆ

    ನವದೆಹಲಿ: ಕೇಂದ್ರದ ಮೋದಿ ನೇತೃತ್ವದ ಕೊನೆ ಪೂರ್ಣ ಪ್ರಮಾಣದ ಬಜೆಟ್‍ನಲ್ಲಿ ಭರ್ಜರಿ ಸುಧಾರಣಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ರೈತಸ್ನೇಹಿ, ಜನಸ್ನೇಹಿ, ಉದ್ಯಮ ಸ್ನೇಹಿ ಬಜೆಟ್ ಮಂಡಿಸಿರೋದಾಗಿ ಸರ್ಕಾರ ಹೇಳಿದೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್‍ಗೆ ಅನುಮೋದನೆ ಪಡೆದ ಅರುಣ್ ಜೇಟ್ಲಿ, ಐದನೇ ಬಾರಿಗೆ ಬಜೆಟ್ ಮಂಡಿಸಿದರು.

    ಸುಮಾರು 11 ಗಂಟೆ 3 ನಿಮಿಷಕ್ಕೆ ಆರಂಭಿಸಿ 1 ಗಂಟೆವರೆಗೆ ಸುಮಾರು 3 ಗಂಟೆಗಳ ಕಾಲ ಬರೋಬ್ಬರಿ 24 ಲಕ್ಷದ 42 ಸಾವಿರದ 213 ಕೋಟಿ ರೂಪಾಯಿಗಳ ಆಯವ್ಯಯವನ್ನ ಪ್ರಸ್ತುತ ಪಡಿಸಿದ್ರು. ಕಳೆದ ಬಾರಿ 15.16 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದರು.

    ದೇಶದ ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ಸಾಕಷ್ಟು ಶ್ರಮ ಪಟ್ಟಿದ್ದೇವೆ. 2014ರ ನಂತರ ಭಾರತದ ಆರ್ಥಿಕತೆ ಉತ್ತಮವಾಗುತ್ತಾ ಸಾಗಿದೆ. ನಾಲ್ಕು ವರ್ಷಗಳಿಂದ ಸ್ವಚ್ಛ ಆಡಳಿತ, ಬಡತನ ನಿರ್ಮೂಲನೆಗೆ ಗಮನ ಹರಿಸಿದ್ದೇವೆ. ನೀತಿ ಆಯೋಗಕ್ಕೆ ನವಭಾರತ ನಿರ್ಮಾಣದ ಹೊಣೆ ನೀಡಲಾಗಿದೆ ಎಂದರು. ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಭಾಷಣ ಮಾಡಿದ್ದು ವಿಶೇಷವಾಗಿತ್ತು.

    ಬಜೆಟ್ ಹೈಲೈಟ್ಸ್ ಏನು?
    1. ಒಟ್ಟು ಆದಾಯ 24,42,213 ಕೋಟಿ ರೂ,. ವಿತ್ತೀಯ ಕೊರತೆ 4,16,034 ಕೋಟಿ ರೂಪಾಯಿ
    2. ತೆರಿಗೆ ಪಾವತಿಸುದಾರರ ಸಂಖ್ಯೆ 6.47 ಕೋಟಿಯಿಂದ 8.27 ಕೋಟಿಗೆ ಹೆಚ್ಚಳ
    3. ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
    4. 10 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ಸುರಕ್ಷಾ ಯೋಜನೆ (ವಿಶ್ವದಲ್ಲೇ ಅತೀ ದೊಡ್ಡ ಸರ್ಕಾರಿ ಅನುದಾನದ ಯೋಜನೆ )
    5. ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು
    6. ದೇಶಾದ್ಯಂತ ಡಿಜಿಟಲೈಸೇಷನ್ ಮೂಲಕ ಪಾರದರ್ಶಕ ತೆರಿಗೆ ವ್ಯವಸ್ಥೆ
    7. ದುಬಾರಿ ಮೊಬೈಲ್‍ಗಳ ಮೇಲೆ ಶೇ.20ರಷ್ಟು ಕಸ್ಟಮ್ ಸುಂಕ
    8. 250 ಕೋಟಿ ವಾರ್ಷಿಕ ಆದಾಯ ಹೊಂದಿರುವ ಕಂಪನಿಗಳಿಗೆ ಶೇ.25ರಷ್ಟು ತೆರಿಗೆ ಕಡಿತ
    9. 2019ಕ್ಕೆ ಎಲ್ಲಾ ಮಹಿಳಾ ಸಂಘಗಳಿಗೆ 75 ಸಾವಿರ ಕೋಟಿ ಸಾಲ
    10. 2018-19ನೇ ಸಾಲಿನಲ್ಲಿ ಶೇ.3.3ರ ವಿತ್ತೀಯ ಕೊರತೆ ಪ್ರಮಾಣ ನಿಗದಿ

    ಯಾವುದು ಏರಿಕೆ?
    ಸಿಗರೇಟ್, ಗುಟ್ಕಾ, ಲೈಟರ್, ಆಮದುಗೊಂಡ ಎಲ್‍ಸಿಡಿ, ಎಇಡಿ ಟಿವಿ, ಮೊಬೈಲ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ವಾಹನ, ವಾಹನಗಳ ಬಿಡಿಭಾಗ, ಬಂಗಾರ, ಬೆಳ್ಳಿ, ವಜ್ರ, ಉಮಾ ಗೋಲ್ಡ್, ತರಕಾರಿ, ಫ್ರೂಟ್ ಜ್ಯೂಸ್ ಚಪ್ಪಲಿ, ಅಡುಗೆ ಎಣ್ಣೆ, ಪಾದರಕ್ಷೆ, ರೇಷ್ಮೆ ಬಟ್ಟೆ, ಸನ್ ಗ್ಲಾಸ್, ಸುಗಂಧದ್ರವ್ಯ, ಸೌಂದರ್ಯವರ್ಧಕ, ಶೇವಿಂಗ್ ಕ್ರೀಮ್, ಹಲ್ಲುಜ್ಜುವ ಬ್ರಶ್, ಪೇಸ್ಟ್, ಟಾಯ್ಲೆಟ್ ಸ್ಪ್ರೇ, ಗಾಳಿಪಟ, ಟಯರ್, ಎಲ್‍ಇಡಿ ಲ್ಯಾಂಪ್, ವಾಚ್‍ಗಳು, ಅಲ್ಯುಮಿನಿಯಮ್ ಅದಿರು, ಮೇಣದ ಬತ್ತಿ, ಬೊಂಬೆ, ಆಟಿಕೆ, ವೀಡಿಯೋ ಗೇಮ್, ಕ್ರೀಡಾ ಉಡುಪು, ಪೀಠೋಪಕರಣ, ಮೊಬೈಲ್ ಮದರ್ ಬೋರ್ಡ್.

    ಯಾವುದು ಇಳಿಕೆ?
    ಗೋಡಂಬಿ, ಆನ್‍ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ , ಸೋಲಾರ್ ಟೆಂಪರ್ಡ್ ಗ್ಲಾಸ್, ಸೋಲಾರ್ ಪ್ಯಾನಲ್, ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಚರ್ಮ ಉತ್ಪನ್ನ, ಪಿಓಎಸ್ ಮಶಿನ್ ಕಾರ್ಡ್, ರಕ್ಷಣಾ ಸೇವೆಗಳ ಗುಂಪು ವಿಮೆ, ಗೃಹ ಬಳಕೆಯ ವಸ್ತುಗಳು.

    ತೆರಿಗೆ ಪಾವತಿದಾರರ ಸಂಖ್ಯೆ ಏರಿಕೆ
    ಜಿಎಸ್‍ಟಿ ಜಾರಿ ಬಳಿಕ ದೇಶದಲ್ಲಿ ತೆರಿಗೆ ಪಾವತಿಸುವವರ ಸಂಖ್ಯೆ 6.47 ಕೋಟಿಯಿಂದ 8.27 ಕೋಟಿಗೆ ಹೆಚ್ಚಳವಾಗಿದೆ. ಹಿರಿಯ ನಾಗರಿಕರಿಗೆ ಬಂಪರ್ ಕೊಡುಗೆ ಸಿಕ್ಕಿದೆ.
    * ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ
    * 2.50 ಲಕ್ಷ ರೂ.ವರೆಗೂ ಮಾತ್ರ ತೆರಿಗೆ ವಿನಾಯಿತಿ
    * ಹಿರಿಯ ನಾಗರಿಕರ ಬ್ಯಾಂಕ್ ಠೇವಣಿ ಮೇಲಿನ 50 ಸಾವಿರದವರೆಗಿನ ಬಡ್ಡಿಗೆ ತೆರಿಗೆ ಇಲ್ಲ
    * ಎಫ್‍ಡಿ, ಪೋಸ್ಟ್ ಆಫೀಸ್ ಠೇವಣಿ ಮೇಲೆ ಟಿಡಿಎಸ್ ಇಲ್ಲ
    * ಹಿರಿಯ ನಾಗರಿಕರ ವೈದ್ಯಕೀಯ ಖರ್ಚಿಗಾಗಿ ಹೆಚ್ಚುವರಿ ರಿಯಾಯಿತಿ 60 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಳ
    * ವೈದ್ಯಕೀಯ ಖರ್ಚಿಗಾಗಿ ಉದ್ಯೋಗಿಗಳಿಗೆ 40 ಸಾವಿರ ರೂ.ವರೆಗೂ ತೆರಿಗೆ ವಿನಾಯಿತಿ
    * 250 ಕೋಟಿ ರೂ. ವಾರ್ಷಿಕ ವ್ಯವಹಾರದ ಕಂಪನಿಗಳಿಗೆ ಶೇ.25ರಷ್ಟು ಕಾರ್ಪೋರೇಟ್ ತೆರಿಗೆ ಕಡಿತ
    * ಜನ್‍ಧನ ಯೋಜನೆ ವ್ಯಾಪ್ತಿಗೆ 60 ಕೋಟಿ ಖಾತೆಗಳು

    1 ರೂ. ಬಂದಿದ್ದು ಹೇಗೆ?
    * ಜಿಎಸ್‍ಟಿ, ಇತರೆ ತೆರಿಗೆ – 23 ಪೈಸೆ
    * ಸಾಲ – 19 ಪೈಸೆ
    * ಕಾರ್ಪೋರೇಟ್ ತೆರಿಗೆ – 19 ಪೈಸೆ
    * ಆದಾಯ ತೆರಿಗೆ – 16 ಪೈಸೆ
    * ಕೇಂದ್ರ ಅಬಕಾರಿ ಸುಂಕ – 8 ಪೈಸೆ
    * ತೆರಿಗೆಯೇತರ ಆದಾಯ – 8 ಪೈಸೆ
    * ಸುಂಕ – 4 ಪೈಸೆ
    * ಸಾಲಯೇತರ ಮೂಲಧನ ವಸೂಲಿ – 3 ಪೈಸೆ


    1 ರೂ. ಹೋಗಿದ್ದು ಹೇಗೆ?
    * ತೆರಿಗೆ, ಸುಂಕದಲ್ಲಿ ರಾಜ್ಯಗಳ ಪಾಲು – 24 ಪೈಸೆ
    * ಬಡ್ಡಿ ಪಾವತಿ – 18 ಪೈಸೆ
    * ಕೇಂದ್ರದ ವಲಯ ಯೋಜನೆ – 10 ಪೈಸೆ
    * ಕೇಂದ್ರದ ಪ್ರಾಯೋಜಿತ ಯೋಜನೆ – 9 ಪೈಸೆ
    * ಯೋಜನೇತರ ವೆಚ್ಚ – 8 ಪೈಸೆ
    * ರಕ್ಷಣಾ ವಲಯ – 9 ಪೈಸೆ
    * ಸಹಾಯಧನ – 9 ಪೈಸೆ
    * ಫೈನಾನ್ಸ್ ಕಮೀಷನ್ & ಟ್ರಾನ್ಸ್ ಫರ್ – 8 ಪೈಸೆ
    * ಪಿಂಚಣಿ – 5 ಪೈಸೆ ಪೈಸೆ

    ರಕ್ಷಣೆಗೆ ಸಿಕ್ಕಿದ್ದೇನು..?
    * ಕಳೆದ ಬಾರಿಗೆ ಹೋಲಿಸಿದರೆ ಶೇ.7.81 ರಷ್ಟು ಏರಿಕೆ
    * ರಕ್ಷಣೆಗೆ 2,95,511 ಕೋಟಿ ಮೀಸಲು (ಕಳೆದ ಬಾರಿ 2,74, 144 ಕೋಟಿ ಇತ್ತು)
    * ಸೇನೆಯ ಆಧುನೀಕರಣಕ್ಕೆ ವಿಶೇಷ ಒತ್ತು
    * ಎಫ್‍ಡಿಐ ಸೇರಿದಂತೆ ರಕ್ಷಣಾ ವಲಯದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ
    * 2 ರಕ್ಷಣಾ ಕೈಗಾರಿಕಾ ಉತ್ಪಾದನಾ ಕಾರಿಡಾರ್ ಸ್ಥಾಪನೆ (ಜಮ್ಮು ಕಾಶ್ಮೀರ & ಈಶಾನ್ಯ ರಾಜ್ಯಗಳಲ್ಲಿ ಕಾರಿಡಾರ್)
    * ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸಲು ಪ್ರೋತ್ಸಾಹ

    ರೈಲ್ವೆಗೆ ಸಿಕ್ಕಿದ್ದು ಏನು?
    * ರೈಲ್ವೆ ಗೆ 1,48,528 ಕೋಟಿ ರೂ. ಮೀಸಲು
    * ರೈಲ್ವೆ ಸುರಕ್ಷತೆಗೆ ಆದ್ಯತೆ, ತಂತ್ರಜ್ಞಾನ ಬಳಕೆ ಹೆಚ್ಚಳ
    * ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ, ವೈಫೈ ಅಳವಡಿಕೆ
    * 25 ಸಾವಿರ ಪ್ರಯಾಣಿಕರನ್ನು ಹೊಂದಿರುವ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್
    * 600 ರೈಲ್ವೆ ನಿಲ್ದಾಣಗಳ ಪುನಶ್ಚೇತನ
    * ವಡೋದರಾದಲ್ಲಿ ವಿಶೇಷ ರೈಲ್ವೆ ವಿಶ್ವ ವಿದ್ಯಾಲಯ
    (ಪ್ರಸ್ತುತ 124 ವಿಮಾನ ನಿಲ್ದಾಣಗಳ ಇದ್ದು, ಇವುಗಳನ್ನ ಐದು ಪಟ್ಟು ಹೆಚ್ಚಿಸುವ ಗುರಿ)

    ಕೃಷಿ ನೀರಾವರಿ:
    ದೇಶದ ಬೆನ್ನೆಲುಬು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2022ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸಲು ಯೋಜನೆ ರೂಪಿಸಿದ್ದೇವೆ. 2017-18ನೇ ಸಾಲಿನಲ್ಲಿ ದಾಖಲೆ ಪ್ರಮಾಣದ ಆಹಾರೋತ್ಪಾದನೆ ಮಾಡಲಾಗಿದೆ. ಕೃಷಿ, ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೇಶವು ಶೇ. 7.5ರ ಸರಾಸರಿ ಆರ್ಥಿಕ ಬೆಳವಣಿಗೆ ದಾಖಲಿಸಿದ್ದೇವೆ ಅಂತ ಜೇಟ್ಲಿ ಹೇಳಿದ್ರು.

    * ಕೃಷಿ ಸಾಲಕ್ಕಾಗಿ ಬರೋಬ್ಬರಿ 11 ಲಕ್ಷ ಕೋಟಿ (ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಕೃಷಿ ಮಾರುಕಟ್ಟೆ ನಿಧಿ – 2,000 ಕೋಟಿ)
    * `ಆಪರೇಷನ್ ಗ್ರೀನ್’ ಯೋಜನೆಯಡಿ ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೋ ಬೆಲೆ ಸ್ಥಿರತೆಗಾಗಿ 500 ಕೋಟಿ
    * ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ (ಕನಿಷ್ಠ ಒಂದೂವರೆ ಪಟ್ಟು ಹೆಚ್ಚಳ)
    * ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ.100ರ ತೆರಿಗೆ ವಿನಾಯಿತಿ

    * 22 ಸಾವಿರ ಗ್ರಾಮೀಣ ಮಾರುಕಟ್ಟೆಗಳು ಎಪಿಎಂಸಿಗಳಾಗಿ ಪರಿವರ್ತನೆ
    * ಆಹಾರ ಸಂಸ್ಕರಣೆಗೆ 1400 ಕೋಟಿ ರೂ, 42 ಫುಡ್ ಪಾರ್ಕ್‍ಗಳ ಸ್ಥಾಪನೆ
    * 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಕೃಷಿ – 200 ಕೋಟಿ ಮೀಸಲು
    * ಸೋಲಾರ್ ಅಳವಡಿಕೆಗೆ ಉತ್ತೇಜನ, ಸೂಕ್ತ ಬೆಲೆಯೊಂದಿಗೆ ರೈತರಿಂದ ಸೋಲಾರ್ ಖರೀದಿ
    * ಮೀನುಗಾರಿಕೆ, ಪಶುಸಂಗೋಪನೆಗೆ 10,000 ಕೋಟಿ ಅನುದಾನ ( ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ)
    (ಪ್ರಧಾನಮಂತ್ರಿ ಹನಿ ನೀರಾವರಿ ಯೋಜನೆಯಡಿ 2,600 ಕೋಟಿ ರೂ.. `ಹಸಿರು ಬಂಗಾರ’ – ರಾಷ್ಟ್ರೀಯ ಬಿದಿರು ಯೋಜನೆಗಾಗಿ 1,290 ಕೋಟಿ ಮೊತ್ತದ ನಿಧಿ)

    ಕೈಗಾರಿಕೆಗೆ ಸಿಕ್ಕಿದ್ದು ಏನು?
    * ಉದ್ಯಮಿಗಳಿಗೆ ಆಧಾರ್ ರೀತಿಯ ಹೊಸ ಕಾರ್ಡ್ ಜಾರಿ
    * ಆನ್‍ಲೈನ್ ಮೂಲಕ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡಿಕೆ
    * ಉದ್ಯೋಗ ಖಾತ್ರಿ ಯೋಜನೆಗೆ 5,750 ಕೋಟಿ ರೂಪಾಯಿ
    * ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3,794 ಕೋಟಿ. ರೂಪಾಯಿ
    * ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ಮೀಸಲು
    * ಚರ್ಮೋದ್ಯಮಕ್ಕಾಗಿ 1,290 ಕೋಟಿ ರೂಪಾಯಿ
    * ಜವಳಿ, ನೇಕಾರ ವಲಯಕ್ಕೆ 7,500 ಕೋಟಿ ರೂಪಾಯಿ
    * ಎಲ್ಲಾ ವಲಯದ ಹೊಸ ನೌಕರರ ಪಿಎಫ್‍ಗೆ ಶೇ.12ರಷ್ಟು ಸರ್ಕಾರದ ಕೊಡುಗೆ
    ( 250 ಕೋಟಿ ವಾರ್ಷಿಕ ಆದಾಯ ಹೊಂದಿರುವ ಕಂಪನಿಗಳಿಗೆ ಶೇ.25ರಷ್ಟು ತೆರಿಗೆ ಕಡಿತ)

    ಮೂಲಸೌಕರ್ಯ ಹೇಗಿದೆ?
    * ಗ್ರಾಮೀಣ ಭಾಗದ ಮೂಲಸೌಕರ್ಯ ಅಭಿವೃದ್ಧಿಗಾಗಿ 14.3 ಲಕ್ಷ ಕೋಟಿ ರೂ. ಅನುದಾನ
    * 2022ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಸೂರು (33 ಲಕ್ಷ ಮನೆ ನಿರ್ಮಾಣದ ಗುರಿ)
    * 8 ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ
    * ಉಜ್ವಲ ಯೋಜನೆಯಡಿ 4 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ (ಗ್ರಾಮೀಣ ವಿದ್ಯುದೀಕರಣಕ್ಕೆ 16 ಕೋಟಿ ರೂ. ನಿಧಿ ಸ್ಥಾಪನೆ)
    * 1 ಲಕ್ಷ ಗ್ರಾಮ ಪಂಚಾಯತ್‍ಗಳಿಗೆ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ ( 5 ಲಕ್ಷ ವೈಫೈ ಸ್ಟಾಟ್‍ಗಳ ನಿರ್ಮಾಣ)
    * 500 ನಗರಗಳ ಮನೆಗಳಿಗೆ ನೀರು ವಿತರಣೆಗಾಗಿ `ಅಮೃತ್’ ಯೋಜನೆ
    * ಸ್ವಚ್ಛ ಭಾರತ ಯೋಜನೆ ಅಡಿ ಇನ್ನೂ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ ( ಈವರೆಗೆ 6 ಕೋಟಿ ಶೌಚಾಲಯಗಳ ನಿರ್ಮಾಣ)
    * 99 ಸ್ಮಾರ್ಟ್ ಸಿಟಿಗಳಿಗೆ 2.04 ಲಕ್ಷ ಕೋಟಿ ಅನುದಾನ
    * ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿ.ಮೀ. ರಸ್ತೆ ನಿರ್ಮಾಣ

    ಆರೋಗ್ಯ.. ಶಿಕ್ಷಣಕ್ಕೆ ಸಿಕ್ಕಿದ್ದೇನು?
    * 10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತಾ ವಿಮೆ (`ಆಯುಷ್ಮಾನ್ ಭಾರತ್’ ಯೋಜನೆ – 600 ಕೋಟಿ ಅನುದಾನ. ವಿಶ್ವದಲ್ಲೇ ಅತೀ ದೊಡ್ಡ ಸರ್ಕಾರಿ ಅನುದಾನದ ಯೋಜನೆ )
    * 300 ಪ್ರೀಮಿಯಂ ಹಣ ಪಾವತಿಸಿದರೆ 5 ಲಕ್ಷ ರೂ.ವರೆಗೂ ಉಚಿತ ಆರೋಗ್ಯ ಸೇವೆ
    * ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ, 40,000ಕ್ಕೆ ಹೆಚ್ಚಳ
    * ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ 12,000 ಕೋಟಿ ಅನುದಾನ
    * ಜಿಲ್ಲಾಸ್ಪತ್ರೆ ಮೇಲ್ದರ್ಜೆ ಜೊತೆಗೆ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ
    * ಗುಣಮಟ್ಟದ ಶಿಕ್ಷಣಕ್ಕಾಗಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ
    * ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ಶಾಲೆ

    ಬೇರೆ ಹೈಲೈಟ್ಸ್
    ರಾಷ್ಟ್ರಪತಿ ವೇತನ ತಿಂಗಳಿಗೆ 5 ಲಕ್ಷ (1.50 ಇತ್ತು), ಉಪರಾಷ್ಟ್ರಪತಿ ವೇತನ 4 ಲಕ್ಷ (1.30 ಇತ್ತು), ರಾಜ್ಯಪಾಲ 3.50 ಲಕ್ಷ (1.10 ಲಕ್ಷ ಇತ್ತು) – ಜನವರಿ 2018ರಿಂದಲೇ ವೇತನ ಹೆಚ್ಚಳ ಜಾರಿ
    * ಹಣದುಬ್ಬರ ಆಧರಿಸಿ ಸಂಸದರ ವೇತನ ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಿಸಲು ಕಾನೂನು
    * ದೆಹಲಿ ವಾಯು ಮಾಲಿನ್ಯ ನಿರ್ವಹಣೆಗೆ ಹರ್ಯಾಣ, ಪಂಜಾಬ್, ದೆಹಲಿ ಸರ್ಕಾರಕ್ಕೆ ವಿಶೇಷ ಯೋಜನೆ
    * ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 56,619 ಕೋಟಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ 39,135 ಕೋಟಿ
    * ಭಾರೀ ಚರ್ಚೆಯಲ್ಲಿರೋ ಬಿಟ್‍ಕಾಯಿನ್‍ಗೆ ಮಾನ್ಯತೆ ಇಲ್ಲ

  • ಕೇಂದ್ರ ಬಜೆಟ್: ಯಾವುದು ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ

    ಕೇಂದ್ರ ಬಜೆಟ್: ಯಾವುದು ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ 2018ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡಿಸಿದ್ದು, ಅಬಕಾರಿ ಸುಂಕವನ್ನು ಏರಿಸಿದ ಕಾರಣ ಕೆಲವು ಆಮದುಗೊಂಡ ಉತ್ಪನ್ನಗಳ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

    ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ.

    ಮೊಬೈಲ್ ಫೋನ್ ಮೇಲಿನ ಅಬಕಾರಿ ಸುಂಕವನ್ನು 15% ನಿಂದ 20% ಗೆ ಏರಿಸಲಾಗಿದೆ. ಅಲ್ಲಿಗೆ ಆ್ಯಪಲ್ ಐಫೋನ್‍ಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, ಭಾರತದಲ್ಲೇ ಉತ್ಪಾದಿಸುವ ಮೊಬೈಲ್ ಫೋನ್‍ಗಳ ಬೆಲೆಗೆ ಅಂತರ ಹೆಚ್ಚಲಿದೆ.

    ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ ಈಗ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದ್ರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

    ಟಿ.ವಿ ಸೆಟ್ ಬೆಲೆಗಳೂ ಕೂಡ ಏರಿಕೆಯಾಗಲಿದ್ದು, ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್ ಬೆಲೆ ಮೇಲೆ 500 ರೂ. ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಬೆಲೆಗಳು ಅಂದಾಜು ಮೊತ್ತವಾಗಿದ್ದು ನಿರ್ದಿಷ್ಟ ಬೆಲೆ ಏರಿಕೆ ಎಷ್ಟೆಂದು ಸಂಸ್ಥೆಗಳು ಲೆಕ್ಕ ಮಾಡಬೇಕಿದೆ.

    ಆಮದು ತೆರಿಗೆ ಹೆಚ್ಚಳದಿಂದಾಗಿ ಆ್ಯಪಲ್ ನಂತಹ ಸಂಸ್ಥೆಗಳು ಸ್ಥಳೀಯ ಉತ್ಪಾದನಾ ಯೋಜನೆಗಳ ವೇಗ ಹೆಚ್ಚಿಸಲಿದ್ದು, ಇದರಿಂದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಟಿ ಸಿಕ್ಕಂತಾಗುತ್ತದೆ. ಹಾಗೂ ಸ್ಥಳೀಯ ಉತ್ಪಾದಕರಿಕೆ ಆಮದಿನಿಂದ ಹೆಚ್ಚಿನ ಸುರಕ್ಷತೆ ಸಿಕ್ಕಂತಾಗುತ್ತದೆ ಎಂದು ವರದಿಯಾಗಿದೆ.

    ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. 2017ರ ಹಣಕಾಸು ವರ್ಷದಲ್ಲಿ ಭಾರತ ಸರಿಸುಮಾರು 42 ಬಿಲಿಯನ್ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.) ಮೌಲ್ಯದ ಟೆಲಿಕಾಮ್ ವಸ್ತುಗಳು, ಕಂಪ್ಯೂಟರ್ ಹಾರ್ಡ್‍ವೇರ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಾಧನಗಳನ್ನ ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

    ಇನ್ನು ಕಚ್ಛಾ ಗೋಡಂಬಿ ಮೇಲಿನ ತೆರಿಗೆ 5% ನಿಂದ 2.5 % ಗೆ ಇಳಿಕೆಯಾಗಿದೆ. ಅಂದ್ರೆ ಗೋಡಂಬಿ ಬೆಲೆ ಇಳಿಕೆಯಾಗಲಿದೆ.