Tag: Customers

  • ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಕಾರವಾರ: ಅಂಗಡಿಯಲ್ಲಿ ಕೊಂಡ ಸೀರೆ ಪತ್ನಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಗ್ರಾಹಕ ಸ್ನೇಹಿತನೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಮೊಹಮ್ಮದ್ ಹಲ್ಲೆ ಮಾಡಿದ ವ್ಯಕ್ತಿಂ. ಬಲರಾಮ್ ಹಲ್ಲೆಗೊಳಗಾದ ಅಂಗಡಿ ಮಾಲೀಕ. ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಮೊಹಮ್ಮದ್ ಪತ್ನಿಗೆಂದು ಸೀರೆ ತೆಗೆದುಕೊಂಡು ಹೊಗಿದ್ದನು. ಆ ಸೀರೆ ಪತ್ನಿಗೆ ಇಷ್ಟ ಆಗದ ಹಿನ್ನೆಲೆ ಅಂಗಡಿಗೆ ಪುನಃ ಬಂದು ಸೀರೆ ನೋಡಿದ್ದಾನೆ. ಆದರೆ ಅಂಗಡಿಯಲ್ಲಿರುವ ಯಾವುದೇ ಸೀರೆ ಪತ್ನಿಗೆ ಇಷ್ಟ ಆಗಲಿಲ್ಲ. ಹೀಗಾಗಿ ಸಿಟ್ಟುಗೊಂಡ ಮೊಹಮ್ಮದ್ ಒಳ್ಳೆ ಬಟ್ಟೆ ಇಡೋಕೆ ಆಗಲ್ವಾ ಅಂತಾ ಅವಾಚ್ಯ ಪದ ಬಳಕೆ ಮಾಡಿದ್ದ. ಇದನ್ನೂ ಓದಿ: ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ತಡೆದ ಮೆಟ್ರೋ ಸಿಬ್ಬಂದಿ- ಜೊತೆಗೆ ಕರೆದೊಯ್ದ ಸಹ ಪ್ರಯಾಣಿಕರು

    ಅಂಗಡಿ ಮಾಲೀಕ, ನಿನ್ನ ಹಣ ರಿಟರ್ನ್ ಕೊಡ್ತೀನಿ, ತಗೊಂಡು ಹೋಗು ಬೈಬೇಡ ಎಂದಿದ್ದನು. ನಂಗೆ ಹಣ ಏನ್ ಕೊಡ್ತಿಯಾ ಸರಿಯಾಗಿ ಬಟ್ಟೆ ಇಡೋಕೆ ಆಗಲ್ವಾ ಎಂದು ತಕರಾರು ತೆಗೆದು ಹೊರಗಡೆಯಿಂದ ಸರ್ಪರಾಜ್ ಎಂಬ ಗೆಳೆಯನನ್ನು ಕರೆಸಿ ಅಂಗಡಿ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಲೆ ದುಬಾರಿಯಾದ್ರೂ ರೈತರ ಕೈಗೆ ಸಿಗುತ್ತಿಲ್ಲ ಈರುಳ್ಳಿ ಕಾಸು!

    ಬೆಲೆ ದುಬಾರಿಯಾದ್ರೂ ರೈತರ ಕೈಗೆ ಸಿಗುತ್ತಿಲ್ಲ ಈರುಳ್ಳಿ ಕಾಸು!

    ಚಿಕ್ಕೋಡಿ (ಬೆಳಗಾವಿ): ರಾಜ್ಯದಲ್ಲಿ ಟೊಮೆಟೋ (Tomato) ಬಳಿಕ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರ ಕೈ ಸುಡುತ್ತಿದೆ. ಕಳೆದ ವಾರ 30 ರಿಂದ 40 ರೂಪಾಯಿ ಇದ್ದ ಈರುಳ್ಳಿ (Onion) ಬೆಲೆ, ಈಗ 60 ರಿಂದ 80 ರೂ.ಗೆ ತಲುಪಿದೆ. ಹೀಗಾಗಿ ಈರುಳ್ಳಿ ಕೊಂಡುಕೊಳ್ಳುವವರ ಸಂಖ್ಯೆಯೂ ಇಳಿಕೆಯಾಗಿದೆ ಅಂತ ಈರುಳ್ಳಿ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

    ಚಿಕ್ಕೋಡಿಯಲ್ಲಿ ಮಧ್ಯವರ್ತಿಗಳು ಈರುಳ್ಳಿಯನ್ನ ಸ್ಟಾಕ್ ಮಾಡಿಟ್ಟುಕೊಂಡು ಹೆಚ್ಚಿನ ಲಾಭ ಪಡೆಯುವ ಹುನ್ನಾರದಲ್ಲಿ ಇದ್ದಾರೆ. ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಸಿ ಇನ್ನಷ್ಟು ಬೆಲೆ ಏರುವ ನಿರೀಕ್ಷೆಯಲ್ಲಿದ್ದಾರೆ. ಬಡವರ ಪಾಡಂತೂ ಯಾರಿಗೂ ಹೇಳದ ಹಾಗೆ ಆಗಿದೆ. 100 ರೂ.ಗಳಲ್ಲಿ ವಾರದ ಸಂತೆ ಮಾಡುತ್ತಿದ್ದ ಬಡವರು ಒಂದು ಕೆಜಿ ಈರುಳ್ಳಿಗೆ 80 ರೂ. ಕೊಟ್ಟು ಖರೀದಿಸಲು ಕಷ್ಟಪಡುತ್ತಿದ್ದಾರೆ.

    ಬಾಗಲಕೋಟೆಯಲ್ಲೂ (Bagalkote) ಇದೇ ಪರಿಸ್ಥಿತಿ ಕಂಡು ಬಂದಿದೆ. ಗ್ರಾಹಕರಿಗೂ ಖುಷಿಯಿಲ್ಲ, ರೈತರಿಗೂ ಖುಷಿಯಿಲ್ಲ. ಆದ್ರೆ ಮಧ್ಯವರ್ತಿಗಳಿಗೆ ಮಾತ್ರ ಬೆಲೆ ಏರಿಕೆಯಿಂದ ಸಂತಸ ತಂದಿದೆ. ರೈತರು ಬೆಲೆ ಏರಿಕೆಯಾದರೂ ಖುಷಿಪಡುತ್ತಿಲ್ಲ. ಮುಂಗಾರು ಮಳೆ ಕೈ ಕೊಟ್ಟ ಕಾರಣ ಈರುಳ್ಳಿ ಬಿತ್ತನೆಯಲ್ಲೂ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಣಬೇಸಾಯದ ಈರುಳ್ಳಿ ಒಣಗಿ ಹಾಳಾಗಿದೆ. ಬೋರ್ ವೆಲ್ ಅಂತರ್ಜಲ ಕಡಿಮೆಯಾಗಿ ನೀರಾವರಿ ಕೃಷಿಕರ ಈರುಳ್ಳಿ ಕೂಡ ಸರಿಯಾಗಿ ಬೆಳೆದಿಲ್ಲ. ಇದೆಲ್ಲ ಕಾರಣದಿಂದ ಈರುಳ್ಳಿ ಬೆಲೆ ಇಂದು ಗಗನಕ್ಕೆ ಏರಿದೆ. ಆದರೆ ಬೆಲೆ ಏರಿಕೆಯಾದರೂ ರೈತರಿಗೆ ಒಂದು ರೂಪಾಯಿ ಆದಾಯವೂ ಸಿಗ್ತಿಲ್ಲ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಒಟ್ಟಾರೆ ಒಂದು ಕಡೆ ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಆದರೆ ಬೆಲೆ ಏರಿದರೂ ಇಳುವರಿ ಹೊಡೆತದಿಂದ ಲಾಭವಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು – ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್

    ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು – ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್

    ಹಾಸನ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಅಂಗಡಿಯಲ್ಲಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು (Arakalagud) ತಾಲೂಕಿನ ಸಂತೆಮರೂರಿನಲ್ಲಿ ನಡೆದಿದೆ.

    ಸಾವಿತ್ರ ಮಣಿ ಸರ ಕಳೆದುಕೊಂಡ ವೃದ್ಧೆ. ಸಂತೆಮರೂರು-ಅರಕಲಗೂಡು ಮಾರ್ಗದ ರಸ್ತೆ ಬದಿ ಸಾವಿತ್ರ ಮಣಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು ಸಿಗರೇಟ್, ಲೇಸ್, ಜ್ಯೂಸ್ ಖರೀದಿಸಿದ್ದಾರೆ. ನಂತರ ವೃದ್ದೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದಿಯಲು ವೃದ್ದೆಯ ಕುತ್ತಿಗೆಗೆ ಕಳ್ಳರು ಕೈ ಹಾಕಿದ್ದಾರೆ. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಕೂಡಲೇ ಸಾವಿತ್ರಮಣಿ ಚಿನ್ನದ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಸರಗಳ್ಳರ ಕೈಗೆ ಅರ್ಧ ಚಿನ್ನದ ಸರ ಮಾತ್ರ ಸಿಕ್ಕಿದೆ. 45 ಗ್ರಾಂ ಚಿನ್ನದ ಸರದಲ್ಲಿ ಅರ್ಧ ಸರವನ್ನು ಕಸಿದು ಕಳ್ಳರು ಪರಾರಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    Live Tv
    [brid partner=56869869 player=32851 video=960834 autoplay=true]

  • ಬ್ಯಾಂಕ್‍ನ ಒಂದೇ ಶಾಖೆಯ 38 ಸಿಬ್ಬಂದಿಗೆ ಕೊರೊನಾ ಸೋಂಕು

    ಬ್ಯಾಂಕ್‍ನ ಒಂದೇ ಶಾಖೆಯ 38 ಸಿಬ್ಬಂದಿಗೆ ಕೊರೊನಾ ಸೋಂಕು

    – ರ‍್ಯಾಪಿಡ್ ಟೆಸ್ಟ್ ವೇಳೆ ಬಹಿರಂಗ

    ಚೆನ್ನೈ: ಪ್ರಮುಖ ರಾಷ್ಟ್ರೀಯ ಬ್ಯಾಂಕ್‍ನ ಒಂದೇ ಶಾಖೆಯ 38 ಜನ ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿರುವ ಆಘಾತಕಾರಿ ಘಟನೆ ನಡೆದಿದೆ.

    ತಮಿಳುನಾಡಿನ ತಿರುಚ್ಚಿನಾಪಳ್ಳಿಯ ಬ್ಯಾಂಕ್‍ನ ಪ್ರಧಾನ ಶಾಖೆಯ 38 ಜನ ಉದ್ಯೋಗಿಗಳಿಗೆ ಸೋಂಕು ತಗುಲಿದೆ. ಈ ಕುರಿತು ಬ್ಯಾಂಕ್‍ನ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕ ಸೇವೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಬ್ಯಾಂಕ್‍ನ ಶಾಖೆಗೆ ಭೇಟಿ ನೀಡಿದ ಗ್ರಾಹಕರಿಗೂ ಈ ಕುರಿತು ತಿಳಿಸಲಾಗಿದ್ದು, ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ.

    ಇತ್ತೀಚೆಗೆ ಇದೇ ಶಾಖೆಯ ಇತರೆ ಖಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಅಧಿಕಾರಿ ಕೊರೊನಾಗೆ ಬಲಿಯಾಗಿದ್ದಾರೆ. ಬ್ಯಾಂಕ್‍ನಲ್ಲಿ ಇತ್ತೀಚೆಗೆ ನಡೆಸಿದ ಮಾಸ್ ಮೆಡಿಕಲ್ ಸ್ಕ್ರೀನಿಂಗ್ ವೇಳೆ ಈ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಬ್ಯಾಂಕ್‍ಗೆ ಸ್ಯಾನಿಟೈಸ್ ಸೇರಿದಂತೆ ವಿವಿಧ ಬಗೆಯ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲವೂ ಪೂರ್ಣವಾಗಿದೆ. ನಾಳೆಯಿಂದಲೇ ಬ್ಯಾಂಕ್ ಸಾರ್ವಜನಿಕರ ಸೇವೆಗೆ ತೆರೆಯಲಿದೆ ಎಂದು ಬ್ಯಾಂಕ್‍ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ನಗರಸಭೆಯ ಆರೋಗ್ಯಾಧಿಕಾರಿಗಳು ಬ್ಯಾಂಕ್‍ಗೆ ಭೇಟಿ ನೀಡಿದ ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಮಹರಾಷ್ಟ್ರ ಬಳಿಕ ತಮಿಳು ನಾಡು ದೇಶದಲ್ಲೇ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದ್ದು, ಶನಿವಾರದ ವೇಳೆಗೆ ತಮಿಳುನಾಡಿನಲ್ಲಿ ಒಟ್ಟು 2,06,737 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

  • ಕೊರೊನಾ ಭೀತಿ- ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದ ಎಫೆಕ್ಟ್

    ಕೊರೊನಾ ಭೀತಿ- ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದ ಎಫೆಕ್ಟ್

    ಬೆಂಗಳೂರು: ಕೊರೊನಾ ಭೀತಿ ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದೆ. ನಿತ್ಯ ನೂರಾರು ಮನೆಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುವ ಡೆಲಿವರಿ ಬಾಯ್‍ಗಳಲ್ಲಿ ಆತಂಕ ಶುರುವಾಗಿದ್ದು, ಬೆಂಗಳೂರು ಬಿಟ್ಟು ತಮ್ಮ ಊರುಗಳತ್ತ ತೆರಳಿದ್ದಾರೆ.

    ಮನೆ ಮನೆಗಳಿಗೆ ಫುಡ್ ಆರ್ಡರ್ ಕೊಟ್ಟು ಬರುವ ಸಮಯದಲ್ಲಿ ಎಲ್ಲಿ ಸೋಂಕು ನಮಗೆ ಹರಡುತ್ತೋ ಎನ್ನುವ ಭಯದಿಂದ ಬೆಂಗಳೂರು ತೊರೆದಿದ್ದಾರೆ. ನಿತ್ಯ ನೂರಾರು ಡೆಲಿವರಿ ಬಾಯ್‍ಗಳು ಅಪಾರ್ಟ್‌ಮೆಂಟ್‌, ಮನೆ ಇತರೆ ಜಣದಟ್ಟಣೆ ಸ್ಥಳಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುತ್ತಾರೆ.

    ಈಗಾಗಲೇ ಹೋಟೆಲ್‍ಗಳಲ್ಲಿ ವ್ಯಾಪಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಆನ್‍ಲೈನ್‍ನಲ್ಲಿಯೂ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಒಂದೆಡೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಗ್ರಾಹಕರಿಗೆ ಆರ್ಡರ್ ತಲುಪಿಸುವ ಫುಡ್ ಡೆಲವರಿ ಬಾಯ್‍ಗಳ ಸಂಖ್ಯೆ ಕಡಿಮೆಯಾಗುತ್ತಿದೆ.

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಿದರೆ ಡೆಲಿವರಿ ಬಾಯ್‍ಗಳು ಬಾಕ್ಸ್ ಅನ್ನು ಗ್ರಾಹಕರ ಕೈಗೆ ಕೊಡುವ ಬದಲು ಮನೆಯ ಡೋರ್ ಬಳಿಯೇ ಇಟ್ಟು ಹೋಗುತ್ತಾರೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಗ್ರಾಹಕರ ಕೈಗೆ ಫುಡ್ ಬಾಕ್ಸ್ ನೀಡದಿರಲು ಡೆಲಿವರಿ ಬಾಯ್ಸ್ ನಿರ್ಧರಿಸಿದ್ದಾರೆ. ಈಗಾಗಲೇ ಸ್ವಿಗ್ಗಿ ಕಂಪನಿಯಿಂದ ಗ್ರಾಹಕರ ಕೈಗೆ ಪಾರ್ಸೆಲ್ ಬಾಕ್ಸ್ ನೀಡದಂತೆ ತನ್ನ ಸಿಬ್ಬಂದಿಗೆ ಸೂಚಿಸಿದೆ.

  • ಬ್ಯಾಂಕ್ ನೌಕರರ ಮುಷ್ಕರ – ಎಟಿಎಂಗಳ ಬಳಿ ಗ್ರಾಹಕರ ಪರದಾಟ

    ಬ್ಯಾಂಕ್ ನೌಕರರ ಮುಷ್ಕರ – ಎಟಿಎಂಗಳ ಬಳಿ ಗ್ರಾಹಕರ ಪರದಾಟ

    ಬೆಂಗಳೂರು: ವಿವಿಧ ಬೇಡಿಕೆ ಆಧರಿಸಿ ಬ್ಯಾಂಕ್‍ಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ಪರಿಣಾಮ 2 ದಿನ ನೌಕರರ ಮುಷ್ಕರದ ಎಫೆಕ್ಟ್ ಜೊತೆ ಮಧ್ಯೆ ಭಾನುವಾರ ಹಿನ್ನೆಲೆಯಲ್ಲಿ ಇಂದಿನಿಂದ 3 ದಿನ ಬ್ಯಾಂಕ್ ವಹಿವಾಟು ಬಂದ್ ಆಗಿದೆ. ವೇತನ ಒಪ್ಪಂದ ಮಾತುಕತೆ ವಿಫಲ ಹಿನ್ನೆಲೆ ಎಲ್ಲಾ ಬ್ಯಾಂಕ್ ಗಳು ಬಂದ್ ಗೆ ಕರೆ ನೀಡಲಾಗಿದೆ.

    ಬ್ಯಾಂಕ್ ನೌಕರರ ಬೇಡಿಕೆಯಂತೆ 15% ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಬಂದ್ ನಡೆಯುತ್ತಿದ್ದು, ನಗರದ ಬಹುತೇಕ ಕಡೆ ಎಟಿಎಂಗಳಲ್ಲಿ ಹಣ ಖಾಲಿಯಾಗಿದೆ. ಮತ್ತೆ ಕೆಲವೆಡೆ ಎಟಿಎಂ ಸೆಂಟರ್ ಗಳು ಔಟ್ ಆಫ್ ಸರ್ವಿಸ್ ಆಗಿದೆ. ಪರಿಣಾಮ ನಗದಿಗಾಗಿ ಗ್ರಾಹಕರು ಅಲೆದಾಟ ಮಾಡುತ್ತಿರುವ ಸ್ಥಿತಿ ಎದುರಾಗಿದೆ.

    ಮಹಾಲಕ್ಷ್ಮೀ ಲೇಔಟ್, ಲಗ್ಗೆರೆ, ನಂದಿನಿ ಲೇಔಟ್ ಸೇರಿದಂತೆ ಹಲವೆಡೆ ಎಲ್ಲ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಹಣದ ಲಭ್ಯತೆ ಕಡಿಮೆಯಾಗಿದೆ. ಅದರಲ್ಲೂ ಬ್ಯಾಂಕ್ ಅಸೋಸಿಯೇಷನ್ ಕರೆ ನೀಡಿರುವ ಬಂದ್‍ನಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳು ಪೂರ್ಣ ಸ್ಥಗಿತವಾಗಿದೆ. ಪರಿಣಾಮ ಖಾಸಗಿ ಬ್ಯಾಂಕ್ ಎಟಿಎಂಗಳ ಕಡೆ ಗ್ರಾಹಕರು ಮುಖ ಮಾಡಿದ್ದಾರೆ. ಪರಿಣಾಮ ಖಾಸಗಿ ಬ್ಯಾಂಕ್ ಎಟಿಎಂಗಳಲ್ಲೂ ಹಣ ಸಿಗುತ್ತಿಲ್ಲ.

    ಹಲವೆಡೆ 100 ರೂ. ಮುಖ ಬೆಲೆಯ ನಗದು ಮಾತ್ರ ಸಿಗುತ್ತಿಲ್ಲ. 500, 2000 ಸಾವಿರ ಮಾತ್ರ ಕೆಲ ಎಟಿಎಂಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿದೆ. ಬ್ಯಾಂಕ್ ಮುಷ್ಕರದ ಮೊದಲ ದಿನವೇ ಸ್ಥಿತಿ ಹೀಗಿದೆ.

  • 60 ರೂ. ವಿಚಾರವಾಗಿ ಗ್ರಾಹಕರು, ಹೋಟೆಲ್ ಸಿಬ್ಬಂದಿ ನಡುವೆ ಮಾರಾಮಾರಿ

    60 ರೂ. ವಿಚಾರವಾಗಿ ಗ್ರಾಹಕರು, ಹೋಟೆಲ್ ಸಿಬ್ಬಂದಿ ನಡುವೆ ಮಾರಾಮಾರಿ

    ಹುಬ್ಬಳ್ಳಿ: ಚಿಕನ್ ತಿಂದ ನಂತರ ಬಿಲ್ ನೀಡುವ ವಿಚಾರದಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ವಾಗ್ವಾದ ನಡೆದು ಹಲ್ಲೆಯಾಗಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಗರದ ಪಿಬಿ ರಸ್ತೆಯ ನಿಯಾಜ್ ಹೋಟೆಲ್ ನಲ್ಲಿ ಘಟನೆ ನಡೆದಿದ್ದು, ಚಿಕನ್ ತಿಂದ ನಂತರ ಬಿಲ್ ಕೊಡುವ ವಿಚಾರಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕರನ್ನು ಮನಬಂದಂತೆ ಥಳಿಸಿದ್ದಾರೆ.

    ಹುಬ್ಬಳ್ಳಿಯ ಗಬ್ಬೂರು ನಿವಾಸಿಗಳಾದ ಪ್ರಕಾಶ ಬಿದರಕುಂದಿ ಹಾಗೂ ಮುತ್ತಪ್ಪ ಬಿದರಕುಂದಿ ಎಂಬವರು ನಿಯಾಜ್ ಹೋಟೆಲಿನಲ್ಲಿ ಚಿಕನ್ ತಿಂದ ನಂತರ ಊಟ ಮಾಡಿ ಬಿಲ್ ಕೊಡಲು ಹೋಗಿದ್ದಾರೆ. ಆದರೆ ಹೋಟೆಲ್ ಬಿಲ್ ನಲ್ಲಿ 60 ರೂ. ವ್ಯತ್ಯಾಸವಾಗಿದೆ. ಇದರಿಂದ ಅಸಮಾಧಾನಗೊಂಡ ಗ್ರಾಹಕರು 60 ರೂ. ಹೆಚ್ಚು ಬಿಲ್ ಮಾಡಿದ್ದಕ್ಕೆ ಹಣವನ್ನು ಪಾವತಿ ಮಾಡುವುದಿಲ್ಲ ಎಂದಿದ್ದಾರೆ. ಆಗ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಗ್ರಾಹಕ ಹಾಗೂ ಹೊಟೇಲ್ ಸಿಬ್ಬಂದಿ ಮಧ್ಯೆ ಮಾರಾಮಾರಿ ಏರ್ಪಟ್ಟಿದೆ. ಆಗ ಹೋಟೆಲ್ ಸಿಬ್ಬಂದಿ ಗ್ರಾಹಕರಿಬ್ಬರ ಮೇಲೆ ನೀರಿನ ಜಗ್ ಹಾಗೂ ಕಬ್ಬಿಣದ ರಾಡ್ ಗಳಿಂದ ಹಲ್ಲೆ ಮಾಡಿದ್ದಾರೆ.

    ಇಬ್ಬರು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಗ್ರಾಹಕರು ಮದ್ಯ ಸೇವಿಸಿ ಹೋಟೆಲ್ ನಲ್ಲಿ ಗಲಾಟೆ ಮಾಡಿಕೊಂಡಿದ್ದು, ಹಲ್ಲೆ ವಿಡಿಯೋವನ್ನು ಇತರ ಗ್ರಾಹಕರು ಚಿತ್ರಿಕರಿಸಿದ್ದಾರೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈರುಳ್ಳಿ ಬೆಲೆ ಕುಸಿತ – ನಿಟ್ಟುಸಿರು ಬಿಟ್ಟ ಗ್ರಾಹಕರು

    ಈರುಳ್ಳಿ ಬೆಲೆ ಕುಸಿತ – ನಿಟ್ಟುಸಿರು ಬಿಟ್ಟ ಗ್ರಾಹಕರು

    ಬೆಂಗಳೂರು: ಈರುಳ್ಳಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಕಳೆದ ಎರಡು ತಿಂಗಳಿಂದ ಈರುಳ್ಳಿ ಚಿಕನ್‍ಗೆ ಕಾಂಪಿಟೇಷನ್ ಕೊಡುತ್ತಿತ್ತು. ಈರುಳ್ಳಿ ದೋಸೆ, ಈರುಳ್ಳಿ ಪಕೋಡಾ, ಈರುಳ್ಳಿ ಪಲ್ಯೆ ಹೀಗೆ ಯಾವುದೇ ಈರುಳ್ಳಿ ಖಾದ್ಯಗಳು ಹೋಟೆಲ್‍ಗಳಲ್ಲಿ ಸಿಗುತ್ತಿರಲಿಲ್ಲ. ಆದರೆ ಈಗ ಈರುಳ್ಳಿ ಬೆಲೆ ಕಡಿಮೆ ಆಗುವುದರ ಮೂಲಕ ಗ್ರಾಹಕರಿಗೆ ಸಂತಸದ ಸುದ್ದಿ ದೊರೆತಿದೆ.

    ಕಳೆದ ಎರಡು ತಿಂಗಳಿಂದ ಈರುಳ್ಳಿ ದರ ಗಗನಕ್ಕೇರಿದ್ದು, ಕೆ.ಜಿಗೆ 120-150 ರೂ ಆಗಿತ್ತು. ಕೆಲ ಸಮಯದಲ್ಲಿ 200 ರೂ. ಗಡಿ ದಾಟಿತ್ತು. ಈಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂ.ಗೆ ಮಾರಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ ಒಂದು ಕೆ.ಜಿಗೆ 30 ರಿಂದ 40 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ.

    ಈರುಳ್ಳಿ ಬೆಲೆ ದಿಢೀರ್ ಇಳಿಕೆಯಾದ್ದರಿಂದ ಗ್ರಾಹಕರು ಖುಷಿಯಾಗಿದ್ದಾರೆ. ಹುಬ್ಬಳ್ಳಿ, ಬಳ್ಳಾರಿ, ಮಹಾರಾಷ್ಟ್ರ ಸೇರಿದಂತೆ ಹಲವೆಡೆಗಳಿಂದ ಹೊಸ ಈರುಳ್ಳಿ ಬರುತ್ತಿರುವುದೇ ಬೆಲೆ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

  • 1 ಕೆಜಿ ಈರುಳ್ಳಿಗಾಗಿ ಶಾಪಿಂಗ್ ಮಾಲ್‌ನಲ್ಲಿ ಗ್ರಾಹಕರು, ಸಿಬ್ಬಂದಿ ಫೈಟಿಂಗ್

    1 ಕೆಜಿ ಈರುಳ್ಳಿಗಾಗಿ ಶಾಪಿಂಗ್ ಮಾಲ್‌ನಲ್ಲಿ ಗ್ರಾಹಕರು, ಸಿಬ್ಬಂದಿ ಫೈಟಿಂಗ್

    ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಬೇರಿಸ್ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸ್ಪಾರ್ ಸೂಪರ್ ಮಾರ್ಕೆಟ್‌ನಲ್ಲಿ 1 ಕೆ.ಜಿ ಈರುಳ್ಳಿಗಾಗಿ ಗ್ರಾಹಕ, ಸಿಬ್ಬಂದಿ ನಡುವೆ ವಾರ್ ನಡೆದಿದೆ.

    ಕಳೆದ ವಾರ ಈ ಸ್ಪಾರ್ ಸಿಬ್ಬಂದಿ, 1 ಸಾವಿರ ರೂ. ಮೌಲ್ಯದ ವಸ್ತು ಖರೀದಿಸಿದ ಗ್ರಾಹಕರಿಗೆ 19 ರೂಪಾಯಿಗೆ 1 ಕೆಜಿಯ ಈರುಳ್ಳಿ ಕೊಡುವುದಾಗಿ ಕೂಪನ್ ನೀಡಿ, ನ. 6ಕ್ಕೆ ಈರುಳ್ಳಿ ಖರೀದಿಸುವಂತೆ ತಿಳಿಸಿದ್ದರು. ಈ ಕೂಪನ್ ಬಗ್ಗೆ ತಿಳಿದ ತಕ್ಷಣ ಗ್ರಾಹಕರೆಲ್ಲರೂ ಎದ್ನೋಬಿದ್ನೋ ಅಂತಾ ಮಾಲ್‌ಗೆ ಓಡಿ ಬಂದಿದ್ದರು. ವಯಸ್ಸಾದವರು, ಹೆಣ್ಣು ಮಕ್ಕಳೆಲ್ಲಾ ಹೆಚ್ಚು ದರ ನೀಡಿ ಆಟೋ ಮಾಡಿಕೊಂಡು ಈರುಳ್ಳಿಗಾಗಿ ಮಾಲ್‌ಗೆ ಬಂದಿದ್ದರು.

    ಆದರೆ ಇಲ್ಲಿಗೆ ಬರುತ್ತಿದ್ದಂತೆ ಗ್ರಾಹಕರಿಗೆಲ್ಲಾ ಶಾಕ್ ಕಾದಿತ್ತು. ಮಾಲ್‌ಗೆ ಬಂದ ಗ್ರಾಹಕರಿಗೆ ಈ ಸೂಪರ್ ಮಾರ್ಕೆಟ್ ಸಿಬ್ಬಂದಿಗಳು 19 ರೂ. ನ ಕೂಪನ್‌ನಲ್ಲಿರೋ ಸ್ಟಾರ್ ಮಾರ್ಕ್ ತೋರಿಸಿದ್ದಾರೆ. ನಿಬಂಧನೆಗಳು ಅನ್ವಯಿಸುತ್ತದೆ. ನೀವು ಸರಿಯಾಗಿ ನೋಡಿಕೊಳ್ಳಬೇಕು. 19 ರೂ. ಗೆ 1 ಕೆ.ಜಿ ಈರುಳ್ಳಿ ಬೇಕು ಎಂದರೆ 50 ರೂ. ತರಕಾರಿ ಖರೀದಿ ಮಾಡಬೇಕು. ಅದರಲ್ಲೂ ನಿಮಗೆ ಕೊಡೋದು ಕೇವಲ ಒಂದೇ ಕೆ.ಜಿ ಈರುಳ್ಳಿ ಎಂದಿದ್ದಾರೆ.

    ಸಿಬ್ಬಂದಿ ಹೀಗೆ ಹೇಳಿದ್ದೆ ತಡ ಆಕ್ರೋಶಗೊಂಡಿದ್ದ ಗ್ರಾಹಕರು ಮುಖ ಮುಖ ನೋಡಿಕೊಂಡು ಇಲ್ಲಿನ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. 19 ರೂ. ಗೆ ಈರುಳ್ಳಿ ಕೊಡುವುದಾಗಿ ಹೇಳಿ ವಂಚನೆ ಮಾಡ್ತಿದ್ದಿರಾ ಎಂದು ಆರೋಪ ಮಾಡಿ ರೊಚ್ಚಿಗೆದ್ದಿದ್ದಾರೆ. ಆದರೆ ಇದ್ಯಾವುದಕ್ಕೂ ಸಿಬ್ಬಂದಿಗಳು ಬಗ್ಗದೆ ಇದ್ದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ಈರುಳ್ಳಿ ಕೂಪನ್ ಇಟ್ಟುಕೊಂಡು ವಾಪಾಸ್ ತೆರಳಿದ್ದಾರೆ. ಜೊತೆಗೆ ಕೆಲ ಗ್ರಾಹಕರು ಈ ಸ್ಪಾರ್ ಸಿಬ್ಬಂದಿ ಮಾಡಿದ್ದು ಮೋಸ. ಕೂಪನ್‌ನಲ್ಲಿ ನಿಬಂಧನೆಗಳನ್ನು ಕಣ್ಣಿಗೆ ಕಾಣದ ಹಾಗೆ ಹಾಕಿ ಗ್ರಾಹಕರಿಗೆ ವಂಚಿಸುತ್ತಿರೋದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಖಾಲಿ ಹೊಡೀತಿದೆ ಇಂದಿರಾ ಕ್ಯಾಂಟೀನ್- ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ

    ಖಾಲಿ ಹೊಡೀತಿದೆ ಇಂದಿರಾ ಕ್ಯಾಂಟೀನ್- ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ

    ತುಮಕೂರು: ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಬಡವರಿಗೆ ನೀಡಬೇಕೆಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದರು. ಮೊದಮೊದಲು ಚೆನ್ನಾಗಿ ನಡೆಯುತ್ತಿದ್ದ ಇಂದಿರಾ ಕ್ಯಾಂಟೀನ್‍ಗಳು ಇದೀಗ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿದೆ.

    ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯರ ಕನಸಿನ ಕೂಸು. ಅದೆಷ್ಟೋ ಬಡವರು ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅಂಥವರಿಗಾಗಿಯೇ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದರು. ನಂತರ ಜಿಲ್ಲೆಗಳಿಗೂ ವಿಸ್ತರಿಸಿದರು. ಸಾವಿರಾರು ಜನ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ಮಾಡಿ ತಮ್ಮ ಹಸಿವನ್ನು ನೀಗಿಸಿಕೊಂಡರು. ಆದರೆ ಅತ್ತ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಕೂಡ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ.

    ತುಮಕೂರು ನಗರದ ಪಾಲಿಕೆ ಆವರಣ, ಕ್ಯಾತಸಂದ್ರ, ಶಿರಾ ಗೇಟ್ ಹಾಗೂ ಮಂಡಿಪೇಟೆ ಹೀಗೆ ನಗರದ ಒಟ್ಟು ನಾಲ್ಕು ದಿಕ್ಕುಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಮೊದ ಮೊದಲು ಜನ ಕೂಡ ಊಟ, ತಿಂಡಿಗಾಗಿ ಮುಗಿಬೀಳುತ್ತಿದ್ದರು. ಅದೆಷ್ಟೋ ಸಲ ಜನ ಊಟ ಸಿಗದೇ ಕ್ಯಾಂಟೀನ್ ಸಿಬ್ಬಂದಿ ಜೊತೆಗೆ ಜಗಳವಾಡಿರುವ ಪ್ರಸಂಗಗಳೂ ನಡೆದಿದೆ. ಆದರೆ ಇತ್ತೀಚೆಗೆ ಯಾಕೋ ಜನ ಇಂದಿರಾ ಕ್ಯಾಂಟೀನ್‍ನತ್ತ ಸುಳಿಯುತ್ತಿಲ್ಲ.

    ಗ್ರಾಹಕರಿಗೆ ಕೊರತೆ ಆಗಬಾರದೆಂಬ ಕಾರಣಕ್ಕೆ ಗುತ್ತಿಗೆದಾರರು ಪ್ರತಿದಿನ 1500 ಜನರಿಗಾಗಿ ಊಟ-ತಿಂಡಿ ತಯಾರಿಸುತ್ತಿದ್ದಾರೆ. ಆದರೆ ಗ್ರಾಹಕರು ಬಾರದಿದ್ದಾಗ ಅನಿವಾರ್ಯವಾಗಿ ಆಹಾರಗಳನ್ನು ಮೋರಿಗೆ ಎಸೆಯುವ ಸ್ಥಿತಿ ಬಂದಿದೆ. ಗುತ್ತಿಗೆದಾರರು ಮಾತ್ರ ದಿನವೊಂದಕ್ಕೆ 1500 ಟೋಕನ್ ಸೇಲ್ ಆದ ಲೆಕ್ಕ ತೋರಿಸುತ್ತಿದ್ದಾರೆ.