Tag: customer care platform

  • ಪೈನಾನ್ಸ್ ಕಂಪನಿಯ ಮಹಾ ಮೋಸ ಬಯಲು – ಗ್ರಾಹಕರ ವೇದಿಕೆಗೆ ದೂರು

    ಪೈನಾನ್ಸ್ ಕಂಪನಿಯ ಮಹಾ ಮೋಸ ಬಯಲು – ಗ್ರಾಹಕರ ವೇದಿಕೆಗೆ ದೂರು

    ದಾವಣಗೆರೆ: ಫೈನಾನ್ಸ್ ಕಂಪೆನಿಯಲ್ಲಿ ಕೊಂಡುಕೊಳ್ಳದ ವಸ್ತುಗಳಿಗೆ ಇಎಂಐ ಕಟ್ ಮಾಡ್ತಾ ಗ್ರಾಹಕರಿಗೆ ಮೋಸ ಮಾಡಿದ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ.

    ನಗರದ ಬಜಾಜ್ ಫೈನಾನ್ಸ್‍ನಿಂದ ಕೆಲ ತಿಂಗಳ ಹಿಂದೆ ಜೈರಾಂ ಗೌಡ, ಸಂತೋಷ್ ಹಾಗೂ ವೀರೇಶ್ ಅನ್ನೋರು ಇಎಂಐ ಮೂಲಕ ಪ್ರಿಡ್ಜ್, ಟಿವಿಗಳನ್ನು ಖರೀದಿಸಿದ್ದರು. ಪ್ರತಿ ತಿಂಗಳು ಇಎಂಐ ಕಟ್ಟಿ ಎನ್‍ಒಸಿಯನ್ನು ಪಡೆದುಕೊಂಡರು. ಆದರೆ ಇದೀಗ ಅವರ ಹೆಸರಿನಲ್ಲಿ 90 ಸಾವಿರ ರೂ. ಸಾಲವಿದೆ ಅಂತ ಪ್ರತಿ ತಿಂಗಳು ಖಾತೆಯಿಂದ ಹಣ ಕಡಿತವಾಗುತ್ತಿದೆ.

    ಈ ಬಗ್ಗೆ ಬಜಾಜ್ ಫೈನಾನ್ಸ್‍ನ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಕಂಪನಿಯಿಂದ ನೋಟಿಸ್ ಕೂಡ ಬಂದಿದೆ. ಇದರಿಂದ ಬೇಸತ್ತ ಗ್ರಾಹಕರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದು, ಫೈನಾನ್ಸ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.