Tag: custard powder

  • ರುಚಿಕರವಾದ ಕಸ್ಟರ್ಡ್ ಪೌಡರ್ ಹಲ್ವಾ ಮಾಡಿ ಸವಿಯಿರಿ

    ರುಚಿಕರವಾದ ಕಸ್ಟರ್ಡ್ ಪೌಡರ್ ಹಲ್ವಾ ಮಾಡಿ ಸವಿಯಿರಿ

    ನೆಗೆ ನೆಂಟರು ಒಂದಿಷ್ಟು ಜನ ಬಂದಾಗ ಬೇಗನೆ ಸಿಹಿ ಮಾಡುವುದು ಗೃಹಿಣಿಯರಿಗೆ ಸವಾಲು. ಇಂತಹ ಸಮಯದಲ್ಲಿ ಫಟಾಫಟ್ ಅಂತ ಮಾಡಬಹುದು ಈ ಕಸ್ಟರ್ಡ್ ಪೌಡರ್ ಹಲ್ವಾ (Custard Powder Halwa). ಕಸ್ಟರ್ಡ್ ಪೌಡರ್, ಸಕ್ಕರೆ, ತುಪ್ಪದಿಂದ ತಯಾರಿಸಲಾಗುವ ಸಿಹಿಯನ್ನು ಮಾಡುವುದು ಹೇಗೆಂದು ಕಲಿತುಕೊಳ್ಳಿ. ಕಸ್ಟರ್ಡ್ ಪೌಡರ್ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಸಕ್ಕರೆ – 1 ಕಪ್
    ಕಸ್ಟರ್ಡ್ ಪೌಡರ್ – ಅರ್ಧ ಕಪ್ (ನಿಮ್ಮ ಆಯ್ಕೆಯ ಯಾವ ಫ್ಲೇವರ್ ಕೂಡಾ ಬಳಸಬಹುದು)
    ನೀರು – 1 ಕಪ್
    ತುಪ್ಪ – 2 ಟೀಸ್ಪೂನ್
    ಕೇಸರಿ ದ್ರಾವಣ – 1 ಟೀಸ್ಪೂನ್
    ಕತ್ತರಿಸಿದ ಗೋಡಂಬಿ – 5 ಇದನ್ನೂ ಓದಿ: ಕಾಜು ಬರ್ಫಿ ಮಾಡುವ ಸುಲಭ ವಿಧಾನ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಸಕ್ಕರೆ ಮತ್ತು ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
    * ಅದಕ್ಕೆ 1 ಕಪ್ ನೀರಿನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
    * ಸಕ್ಕರೆ ಸಂಪೂರ್ಣವಾಗಿ ಕರಗಿ, ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಪಕ್ಕಕ್ಕೆ ಇರಿಸಿ.
    * ಈಗ ಒಂದು ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಗೊಂಡಂಬಿಯನ್ನು ಹುರಿಯಿರಿ.
    * ಈಗ ಸಕ್ಕರೆ ಹಾಗೂ ಕಸ್ಟರ್ಡ್ ಪೌಡರ್‌ನ ಮಿಶ್ರಣವನ್ನು ಸುರಿದು, ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ.
    * ಈಗ ಅದಕ್ಕೆ ಕೇಸರಿ ದ್ರಾವಣವನ್ನು ಹಾಕಿ, ಮಿಶ್ರಣ ದಪ್ಪವಾಗುವವರೆಗೆ ನಿರಂತರವಾಗಿ ಮಿಕ್ಸ್ ಮಾಡಿ.
    * ಈಗ ಟ್ರೇ ಅಥವಾ ಬಟ್ಟಲಿಗೆ ತುಪ್ಪವನ್ನು ಗ್ರೀಸ್ ಮಾಡಿ, ಅದಕ್ಕೆ ಮಿಶ್ರಣವನ್ನು ಸುರಿಯಿರಿ.
    * ಅದನ್ನು ತಣ್ಣಗಾಗಲು 30 ನಿಮಿಷಗಳವರೆಗೆ ಬಿಡಿ.
    * ಇದೀಗ ಕಸ್ಟರ್ಡ್ ಪೌಡರ್ ಹಲ್ವಾ ತಯಾರಾಗಿದ್ದು, ಗೋಡಂಬಿಯಿಂದ ಅಲಂಕರಿಸಿ, ಸವಿಯಿರಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಸಿಹಿಯಾದ ಹಯಗ್ರೀವ

    Live Tv
    [brid partner=56869869 player=32851 video=960834 autoplay=true]