Tag: current shock

  • ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್ – ಯುವಕ ಬಲಿ, ಇಬ್ಬರ ಸ್ಥಿತಿ ಗಂಭೀರ

    ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್ – ಯುವಕ ಬಲಿ, ಇಬ್ಬರ ಸ್ಥಿತಿ ಗಂಭೀರ

    ವಿಜಯಪುರ: ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಪ್ರವಹಿಸಿ (Current Shock) ಓರ್ವ ಯುವಕ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ವಿಜಯಪುರ (Vijayapura) ನಗರದ ಗಾಂಧಿಚೌಕ್ ವೃತ್ತದ ಟಾಂಗಾ ಸ್ಟ್ಯಾಂಡ್ ಬಳಿ ನಡೆದಿದೆ.

    ನಗರದ ಡೋಬಲೆ ಗಲ್ಲಿ ನಿವಾಸಿ ಶುಭಂ ಸಂಕಳ (21) ಮೃತ ದುರ್ದೈವಿ. ಸೋಲಾಪುರದ ಡಿಜೆ ಯುವಕ ಪ್ರಭಾಕರ್ ಜಂಗಲೆ (22), ಡೋಬಲೆ ಗಲ್ಲಿಯ ಲಖನ್ ಶ್ರೀಕಾಂತ್ ಚವ್ಹಾಣ್ (28) ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ವೈರಲ್ ಫೀವರ್ ಹಾವಳಿ; ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲದೇ ರೋಗಿಗಳ ಪರದಾಟ

     7ನೇ ದಿನ ಗಣೇಶನ ವಿಸರ್ಜನೆಗೆ ಮೂರ್ತಿಯನ್ನು ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಣೇಶ ಮೆರವಣಿಗೆ (Ganesha Procession) ವೇಳೆ ಯುವಕರು ಡಿಜೆ ಬಾಕ್ಸ್ ಮೇಲೆ ಕುಳಿತು ಕೋಲಿನಿಂದ ವಿದ್ಯುತ್ ತಂತಿಯನ್ನು ಎತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಶುಭಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುಂದುವರಿದ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

    ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕರೆಂಟ್ ಶಾಕ್ ನೀಡಿ ಮಾವನ ಕೊಲೆ – ಗಾಯ ಮರೆಮಾಚಲು ರೋಸ್ ವಾಟರ್, ಅರಶಿಣ ಪುಡಿ ಹಚ್ಚಿದ ಸೊಸೆ

    ಕರೆಂಟ್ ಶಾಕ್ ನೀಡಿ ಮಾವನ ಕೊಲೆ – ಗಾಯ ಮರೆಮಾಚಲು ರೋಸ್ ವಾಟರ್, ಅರಶಿಣ ಪುಡಿ ಹಚ್ಚಿದ ಸೊಸೆ

    – ಅಪಘಾತದಿಂದ ಸಾವು ಎಂದು ಬಿಂಬಿಸಿದ್ದ ಹಂತಕಿ, ಪ್ರಿಯಕರ ಅರೆಸ್ಟ್

    ರಾಯ್ಪುರ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಕರೆಂಟ್ ಶಾಕ್ ನೀಡಿ ಮಾವನನ್ನು (Father-in-law) ಹತ್ಯೆ ಮಾಡಿ, ಬಳಿಕ ಗಾಯವನ್ನು ಮರೆಮಾಚಲು ಅರಶಿಣ ಪುಡಿ ಹಚ್ಚಿರುವ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ.

    ಮನೋಹರ್ ನಿರ್ಮಲ್ಕರ್ (60) ಕೊಲೆಯಾದ ಮಾವ. ಸೊಸೆ ಗೀತಾ ನಿರ್ಮಲ್ಕರ್ ಮತ್ತು ಆಕೆಯ ಪ್ರಿಯಕರ (Lover) ಲೇಖ್ರಾಮ್ ನಿಶಾದ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಜಲಂಧರ್‌ನಲ್ಲಿ ನೆರವೇರಿತು ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರನ ಅಂತ್ಯಕ್ರಿಯೆ


    ಆರೋಪಿ ಗೀತಾಳಿಗೆ ಹಾಗೂ ಮಾವ ಮನೋಹರ್ ನಡುವೆ ಪ್ರತಿನಿತ್ಯವೂ ಜಗಳವಾಡುತ್ತಿದ್ದರು. ಇಬ್ಬರಿಗೂ ಸರಿ ಹೊಂದುತಿರಲಿಲ್ಲ. ಹೀಗಾಗಿ ಗೀತಾ, ಪ್ರಿಯಕರನೊಂದಿಗೆ ಸೇರಿ ಮಾವನ ಕೊಲೆಗೆ ಮಾಸ್ಟರ್ ಪ್ಯಾನ್ ಮಾಡಿದ್ದಳು. ಇದನ್ನೂ ಓದಿ: ಕಾರವಾರ | ಕಾರಿನ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಸಾವು

    ಮನೋಹರ್ ರಾತ್ರಿ ನಿದ್ರೆಗೆ ಜಾರಿದ್ದ ವೇಳೆ ಗೀತಾ ಹಾಗೂ ಪ್ರಿಯಕರ ಸೇರಿ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದರು. ಈ ವೇಳೆ ಕೊಲೆ ಮಾಡಿದ್ದು ತಾನೇ ಎಂದು ತಿಳಿಯಬಾರೆಂದು ತಲೆ ಉಪಯೋಗಿಸಿದ್ದ ಗೀತಾ, ಕೈಗೆ ಎಲೆಕ್ಟಿçಷಿಯನ್‌ಗಳು ಧರಿಸುವ ಗ್ಲೌಸ್ ಅನ್ನು ಧರಿಸಿ ಕರೆಂಟ್ ಶಾಕ್ ನೀಡಿದ್ದಳು.

    ಬಳಿಕ ಕುಟುಂಬಸ್ಥರ ಬಳಿ ಕುಡಿದ ಮತ್ತಿನಲ್ಲಿ ಬೈಕ್‌ನಿಂದ ಬಿದ್ದು ಮಾವ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಳು. ಅಂತ್ಯಕ್ರಿಯೆಯ ವೇಳೆ ಮನೋಹರ್ ಮೈ ಮೇಲಿನ ಗಾಯಗಳನ್ನು ಕುಟುಂಬಸ್ಥರು ಗಮನಿಸಿದ್ದರು. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ

    ಸ್ಥಳಕ್ಕಾಗಮಿಸಿದ ಪೊಲೀಸರು ಶವದ ಮರಣೋತ್ತರ ಪರೀಕ್ಷೆ ಮಾಡಿದ್ದರು. ಈ ವೇಳೆ ಇದು ಸಹಜ ಸಾವಲ್ಲ, ಕೊಲೆ ಎಂದು ದೃಢಪಡಿಸಿದರು. ಬಳಿಕ ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೇ ಕೊಲೆಯ ಕುರುಹು ಸಿಗಬಾರದೆಂದು ಗಾಯವಾದ ಭಾಗಗಳಿಗೆ ಅರಶಿಣ ಹಾಗೂ ರೋಸ್ ವಾಟರ್ ಹಾಕಿರುವುದಾಗಿ ಬಾಯ್ಬಿಟ್ಟಿದ್ದಾಳೆ.

    ಸದ್ಯ ಪೊಲೀಸರು ಕೊಲೆ ಆರೋಪಿಗಳಾದ ಗೀತಾ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

  • ಶವಯಾತ್ರೆ ವೇಳೆ ವಿದ್ಯುತ್ ಸ್ಪರ್ಶದಿಂದ 3 ಸಾವು; ಶವ ಹೊತ್ತಿದ್ದವರೇ ಹೆಣವಾದ್ರು

    ಶವಯಾತ್ರೆ ವೇಳೆ ವಿದ್ಯುತ್ ಸ್ಪರ್ಶದಿಂದ 3 ಸಾವು; ಶವ ಹೊತ್ತಿದ್ದವರೇ ಹೆಣವಾದ್ರು

    ಕೋಲಾರ: ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಅಂತಿಮ ಶವ ಯಾತ್ರೆ ವೇಳೆ ಶವಕ್ಕೆ ಸಿಂಗರಿಸಿದ್ದ ಪಲ್ಲಕ್ಕಿಗೆ ವಿದ್ಯುತ್ ಸ್ಪರ್ಶವಾಗಿ, ಶವ ಪಲ್ಲಕ್ಕಿ ಹೊರುತ್ತಿದ್ದ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರಲ್ಲಿ ನಡೆದಿದೆ.

    ಕೋಲಾರದ (Kolara) ಗಡಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಕುಪ್ಪಂ ನಗರದ 5 ನೇ ವಾರ್ಡ್‌ನ ತಂಬಿಗಾನಪಲ್ಲಿ ರಾಣಮ್ಮ (65) ಮೃತಪಟ್ಟಿದ್ದರು. ಮಹಿಳೆ ಅಂತ್ಯಸಂಸ್ಕಾರಕ್ಕೆ ಕಬ್ಬಿಣದಿಂದ ಮಾಡಿದ ಪಲ್ಲಕ್ಕಿ ಹೊತ್ತು ತೆರಳುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದಿದೆ. ಕಬ್ಬಿಣದಿಂದ ಶವ ಹೊರಲು ಮಾಡಿದ್ದ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ರಾತ್ರಿ ಮಲಗಲು ಜಾಗ ಸಿಗದೆ ಸ್ಮಶಾನದಲ್ಲೇ ಟೆಂಟ್ ಹಾಕಿದ ವಿದೇಶಿಗರು – ಹೌಹಾರಿದ ಜನ

    ವಿದ್ಯುತ್ ಸ್ಪರ್ಶದಿಂದ ಅಂತಿಮ ಶವಯಾತ್ರೆಯಲ್ಲಿ ಶವಕ್ಕೆ ಹೆಗಲು ಕೊಟ್ಟಿದ್ದ ಮುನೆಪ್ಪ (45), ತಿರುಪತಿ ರಾವ್ (28), ರವೀಂದ್ರ (30) ಮೃತಪಟ್ಟಿದ್ದಾರೆ.

    ತೀವ್ರ ಅಸ್ವಸ್ಥರಾಗಿದ್ದ ಮೂರು ಜನರನ್ನ ಕುಪ್ಪಂ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂರು ಜನರು ಸಾವನ್ನಪ್ಪಿರುವ ಕುರಿತು ವೈದ್ಯರ ಸ್ಪಷ್ಟಪಡಿಸಿದ್ದಾರೆ. ಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಎಂಜಿನಿಯರ್‌ ವಿದ್ಯಾರ್ಥಿನಿ, ಪೇಂಟರ್‌ ನಡುವೆ ಪ್ರೀತಿ – ಮನೆ ಬಿಟ್ಟು ಹೋಗಿ ತಾಳಿ ಕಟ್ಟಿಸಿಕೊಂಡ್ಳು; ಆಮೇಲೆ ನೀನು ಬೇಡ ಅಂದ್ಲು

  • ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ – ತಾಯಿ ಮಗು ಬಲಿ

    ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ – ತಾಯಿ ಮಗು ಬಲಿ

    ಬೆಂಗಳೂರು: ವಾಟರ್ ಹೀಟರ್‌ನಿಂದಾಗಿ (Water Heater) ವಿದ್ಯುತ್ ಶಾಕ್ (Current Shock) ತಗುಲಿ ತಾಯಿ (Mother) ಹಾಗೂ ಮಗು (Child) ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ತಾಯಿ ಜ್ಯೋತಿ ಹಾಗೂ ಆಕೆಯ 4 ವರ್ಷದ ಮಗು ಜಯಾನಂದ್ ವಿದ್ಯುತ್ ಶಾಕ್‌ನಿಂದ ಮೃತಪಟ್ಟವರು. ರಾಯಚೂರು ಮೂಲದ ಜ್ಯೋತಿ ತನ್ನ ಗಂಡ ಹಾಗೂ ಮಗನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನೆಲೆಸಿದ್ದರು. ಆಕೆ ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇದನ್ನೂ ಓದಿ: ತಾನು ಚಿತ್ರ ಚೆನ್ನಾಗಿ ಬಿಡಿಸಲ್ಲ ಅಂತ ಕಲಾ ಪರೀಕ್ಷೆಗೆ ಅಣ್ಣನನ್ನು ಕೂರಿಸಿದ BA ವಿದ್ಯಾರ್ಥಿ

    ಭಾನುವಾರ ಮಧ್ಯಾಹ್ನ ಸ್ನಾನಗೃಹದಲ್ಲಿ ನೀರು ಬಿಸಿ ಮಾಡಲು ಇಟ್ಟಿದ್ದ ವಾಟರ್ ಹೀಟರ್‌ನಿಂದ ಬಾಲಕ ಜಯಾನಂದ್‌ಗೆ ಕರೆಂಟ್ ಶಾಕ್ ತಗುಲಿತ್ತು. ಮಗುವಿಗೆ ಶಾಕ್ ತಗುಲಿ ಒದ್ದಾಡುತ್ತಿರುವುದನ್ನು ಕಂಡ ಜ್ಯೋತಿ ಆತನನ್ನು ಕಾಪಾಡಲು ಮುಂದಾದಾಗ ಆಕೆಗೂ ಕರೆಂಟ್ ಶಾಕ್ ತಗುಲಿದೆ. ಇದರಿಂದ ತಾಯಿ ಹಾಗೂ ಮಗು ಇಬ್ಬರೂ ದಾರುಣವಾಗಿ ಅಂತ್ಯ ಕಂಡಿದ್ದಾರೆ.

    ಭಾನುವಾರ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ಕುಟುಂಬ ಕೆಲ ದಿನಗಳ ಹಿಂದಷ್ಟೇ ರಾಯಚೂರಿನಿಂದ ಬೆಂಗಳೂರಿಗೆ ಬಂದಿತ್ತು. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದಿವರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ

  • ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು

    ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು

    ಬೆಂಗಳೂರು: ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಪಾರಿವಾಳವನ್ನು (Pigeon) ಹಿಡಿಯಲು ಹೋಗಿ ಕರೆಂಟ್‌ ಶಾಕ್‌ಗೆ (Current Shock) ಒಳಗಾಗಿ ಆಸ್ಪತ್ರೆ ಸೇರಿದ್ದ ಮತ್ತೊಬ್ಬ ಬಾಲಕ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

    ಚಂದ್ರು (13) ಮೃತಪಟ್ಟ ಬಾಲಕ. ಈತನಿಗೂ ಶೇ.74 ರಷ್ಟು ದೇಹ ಸುಟ್ಟು ಗಾಯಗಳಾಗಿತ್ತು. ಕಳೆದ 7 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸದ್ಯ ಬಾಲಕನ ಮೃತದೇಹವನ್ನು ಶವಾಗಾರಕ್ಕೆ ಶಿಫ್ಟ್‌ ಮಾಡಲಾಗಿದೆ. ಗುರುವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗುವುದು. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಯರ್ ಸ್ಪರ್ಶಿಸಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು

    ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಪಾರಿವಾಳವನ್ನು (Pigeon) ಹಿಡಿಯಲು ಹೋಗಿ ಚಂದ್ರು ಹಾಗೂ ಸುಪ್ರೀತ್ ಕರೆಂಟ್‌ ಶಾಕ್‌ಗೆ ಒಳಗಾಗಿದ್ದರು. ಮನೆ ಮಾಲೀಕರು ಮಹಡಿಯನ್ನು ಹತ್ತಬೇಡಿ ಎಂಬ ಎಚ್ಚರಿಕೆಯನ್ನು ನೀಡಿದ್ದರೂ ಕೂಡಾ ಮಕ್ಕಳು ಪಾರಿವಾಳದ ಆಸೆಗೆ ಮನೆ ಮೇಲೆ ಹತ್ತಿದ್ದರು. ಈ ವೇಳೆ ಮಕ್ಕಳು ಕಬ್ಬಿಣದ ರಾಡ್‌ನಿಂದ ಹೈಟೆನ್ಷನ್ ವೈರ್ ಅನ್ನು ಮುಟ್ಟಿದ್ದರು. ಈ ವೇಳೆ ಮಕ್ಕಳಿಗೆ ಕರೆಂಟ್ ಶಾಕ್ ತಗುಲಿತ್ತು.

    ಇಬ್ಬರು ಬಾಲಕರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಸುಪ್ರೀತ್‌ ಕೆಲದಿನಗಳ ಹಿಂದಷ್ಟೇ ಕೊನೆಯುಸಿರೆಳೆದಿದ್ದ. ಇಂದು ಚಂದ್ರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಲಕರಿಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್ – ಸ್ಥಿತಿ ಚಿಂತಾಜನಕ

    Live Tv
    [brid partner=56869869 player=32851 video=960834 autoplay=true]

  • ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

    ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

    ಮಡಿಕೇರಿ: ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಯುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಕಬ್ಬಿಣದ ಏಣಿ ತಗುಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

    ಕೊಡಗಿನ ಆರ್ಜಿ ಗ್ರಾಮದ ನಿವಾಸಿ ಸಬಾಸ್ಟಿನ್ ಲೋಬೋ(60) ಮೃತ ದುರ್ದೈವಿ. ಪ್ರತಿ ದಿನದಂತೆ ಬೆಳಗ್ಗೆ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯಕ್ಕೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಇಂದು ಸಬಾಸ್ಟಿನ್ ಲೋಬೋ ಕಾಳು ಮೆಣಸು ಕೊಯ್ಯುವ ವೇಳೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ವಿದ್ಯುತ್ ಕಂಬಕ್ಕೆ ಕಬ್ಬಿಣದ ಏಣಿ ಇಡುವ ಸಂದರ್ಭ ಅಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ.

    ವಿದ್ಯುತ್ ತಂತಿಯಿಂದ ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಬಾಸ್ಟಿನ್ ಸಾವನಪ್ಪಿದ್ದಾರೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

    ಹಾಸನ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 45 ವರ್ಷದ ರೈತ ಚಂದ್ರೇಗೌಡ ಮೃತ ದುರ್ದೈವಿ. ತಮ್ಮ ಹೊಲದಲ್ಲಿ ಬೆಳೆಯಲಾಗಿದ್ದ ಶುಂಠಿ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಹೋಗಿದ್ದಾಗ, ಹೊಲದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮೃತ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕುಟುಂಬದವರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಬೇಲೂರು ಪಿಎಸ್‍ಐ ಅಜೇಯ ಕುಮಾರ್, ಸಹಾಯಕ ಎಂಜಿನಿಯರ್ ಗಳಾದ ಕುಮಾರ್ ಹಾಗೂ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೂಲಿ ಕೆಲ್ಸಕ್ಕೆ ಅಸ್ಸಾಂನಿಂದ ಬಂದ ಅಮ್ಮ ಮಗಳು – ಕರೆಂಟ್ ಶಾಕ್‍ನಿಂದ ಸಾವು

    ಕೂಲಿ ಕೆಲ್ಸಕ್ಕೆ ಅಸ್ಸಾಂನಿಂದ ಬಂದ ಅಮ್ಮ ಮಗಳು – ಕರೆಂಟ್ ಶಾಕ್‍ನಿಂದ ಸಾವು

    ಮಡಿಕೇರಿ: ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಬಂದ ಅಮ್ಮ ಮಗಳು ಕಾಳು ಮೆಣಸು ಕೊಯ್ಯಲು ಹೋಗಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಂದಾ ಗ್ರಾಮದ ಈಚೂರು ಎಂಬಲ್ಲಿ ನಡೆದಿದೆ.

    ಮೃತ ಮಹಿಳೆಯರನ್ನು 45 ವಷ೯ದ ಸ್ವರೂಪ ಖಾತುನ್ ಮತ್ತು 20 ವಷ೯ದ ಹಸೀನಾ ಎಂದು ಗುರುತಿಸಲಾಗಿದೆ. ಈಚೂರು ಗ್ರಾಮದ ರಮೇಶ್ ಅವರ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾಳು ಕೊಯ್ಯಲು ಅಲ್ಯೂಮಿನಿಯಂ ಏಣಿಯನ್ನು ಬಳಸಿದ್ದೆ ಈ ಘಟನೆ ಕಾರಣ ಎನ್ನಲಾಗಿದೆ.

    ಕರಿಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿ ಬಳಕೆ ಮಾಡಬೇಡಿ ಎಂದು ಕಾರ್ಮಿಕ ಇಲಾಖೆಯ ಆದೇಶ ಹೋರಾಡಿಸಿದ್ದರೂ ಕೊಡಗಿನ ಬಹುತೇಕ ಕಾಫಿ ತೋಟದಲ್ಲಿ ಆದೇಶ ಪಾಲನೆ ಆಗುತ್ತಿಲ್ಲ. ಇದರಿಂದಾಗಿ ಇಂದು ಕೂಲಿ ಹುಡುಕಿ ಬಂದ ಎರಡು ಜೀವಗಳು ಬಲಿಯಾಗಿವೆ. ಕಾಳು ಕೊಯ್ಯಲು ಹೋದ ಖಾತುನ್ ಮತ್ತು ಹಸೀನಾ ಅಲ್ಯೂಮಿನಿಯಂ ಏಣಿ ಮೇಲೆ ಹತ್ತಿದ್ದಾರೆ. ಈ ವೇಳೆ ತೋಟದ ಮೇಲೆ ಹಾದುಹೋಗಿದ್ದ 11 ಕೆವಿ ವಿದ್ಯುತ್ ತಂತಿಯಿಂದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮಹಿಳೆಯರಿಗೂ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ವಿದ್ಯುತ್ ಸ್ಪರ್ಶದ ತೀವ್ರತೆ ಇಬ್ಬರು ಮಹಿಳೆಯರ ಕಾಲು ಸುಟ್ಟು ಕರಕಲಾಗಿದೆ. ಮೃತದೇಹಗಳನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್- ಇಬ್ಬರು ಕಾರ್ಮಿಕರು ಸಾವು

    ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್- ಇಬ್ಬರು ಕಾರ್ಮಿಕರು ಸಾವು

    ಕೋಲಾರ: ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್ ತಗಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಿರುಪಾಕ್ಷಿ ಗ್ರಾಮದ ಬಳಿ ನಡೆದಿದೆ.

    ಘಟನೆಯಲ್ಲಿ ಗುತ್ತಿಗೆ ಕಾರ್ಮಿಕರಾದ ಆಂಧ್ರ ಮೂಲದ ರಾಜಬಾಬು (35) ಮತ್ತು ಚಿನ್ನಿಬಾಬು (32) ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ವಿದ್ಯುತ್ ಕಾಮಗಾರಿ ವೇಳೆ ಇಬ್ಬರಿಗೆ ಕರೆಂಟ್ ಶಾಕ್ ತಗುಲಿದ್ದು ಅವರು ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಿಸಲು ಹೋದ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಬಂಧ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕಿಯ ಬಲಗೈನ ಬೆರಳುಗಳು ಕಟ್

    ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕಿಯ ಬಲಗೈನ ಬೆರಳುಗಳು ಕಟ್

    ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿಯ ಬಲಗೈನ ಬೆರಳುಗಳು ಕತ್ತರಿಸಿದ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಹೊಸಕೋಟೆ ತಾಲೂಕಿನ ಲಿಂಗಾಪುರ ಗ್ರಾಮದ ಕೌಸಲ್ಯಾ (12) ಗಂಭೀರವಾಗಿ ಗಾಯಗೊಂಡ ಬಾಲಕಿ. ಕೌಸಲ್ಯಾ ಮನೆಯ ಮೇಲೆ ಹಾದು ಹೋಗಿದ್ದ 11 ಕೆ.ವಿ ವಿದ್ಯುತ್ ಸ್ಪರ್ಶಿಸಿದ್ದಾಳೆ. ಪರಿಣಾಮ ಬಲಗೈನ ಬೆರಳುಗಳು ಕತ್ತರಿಸಿದ್ದು, ದೇಹದ ಮೇಲೆ ಶೇ.70 ರಷ್ಟು ಸುಟ್ಟ ಗಾಯವಾಗಿದೆ.

    ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕಿಯನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಹೆಚ್ಚಿನ ಅಗತ್ಯವಾಗಿದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬೆಸ್ಕಾಂ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.