Tag: Cure

  • ನಾನು ಆರೋಗ್ಯವಾಗಿದ್ದೇನೆ – ಆಸ್ಪತ್ರೆಯಿಂದ ರಂಭಾಪುರಿ ಶ್ರೀ ಸಂದೇಶ

    ನಾನು ಆರೋಗ್ಯವಾಗಿದ್ದೇನೆ – ಆಸ್ಪತ್ರೆಯಿಂದ ರಂಭಾಪುರಿ ಶ್ರೀ ಸಂದೇಶ

    ಚಿಕ್ಕಮಗಳೂರು: ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ರಂಭಾಪುರಿ ಪೀಠದ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಪ್ರತಿಕ್ರಿಯೆ ನೀಡಿದ್ದಾರೆ.

    ನನಗೆ ಕೊರೊನಾ ಸೋಂಕು ತಗುಲಿದೆ ಎಂದು ಗೊತ್ತಾಗಿ ನಾಡಿನಾದ್ಯಂತ ಭಕ್ತರು ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ಕೊರೊನಾ ಜೀವಕ್ಕೆ ತೊಂದರೆ ಕೊಡುವ ಕಾಯಿಲೆಯಲ್ಲ, ನಾನು ಆರೋಗ್ಯವಾಗಿದ್ದೇನೆ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಅಷ್ಟೇ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

    ನಾಡಿನಾದ್ಯಂತ ಭಕ್ತರು ತೋರುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಇನ್ನು ಎರಡು ದಿನದ ನಂತರ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಹಿಂದಿರುಗಲಿದ್ದೇನೆ. ನನಗೆ ಪೀಠದ ಮೂಲ ಪಂಚಚಾರ್ಯರ ಅನುಗ್ರಹ, ಶಿವನ ಆಶೀರ್ವಾದವಿದೆ. ಅನಾರೋಗ್ಯದಿಂದ ಶೀಘ್ರವೇ ಮುಕ್ತನಾಗಿ ಭಕ್ತರಿಗೆ ದರ್ಶನ ನೀಡಲಿದ್ದೇನೆ ಎಂದು ವಿಡಿಯೋ ಸಂದೇಶದಲ್ಲಿ ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ.

  • ಹಾಸನದಲ್ಲಿ ಕೊರೊನಾ ಜಯಿಸಿ ಬಂದ 85 ವರ್ಷದ ದಂಪತಿ

    ಹಾಸನದಲ್ಲಿ ಕೊರೊನಾ ಜಯಿಸಿ ಬಂದ 85 ವರ್ಷದ ದಂಪತಿ

    ಹಾಸನ: ಇಡೀ ಜಗತ್ತೆ ಕೊರೊನಾದಿಂದ ತತ್ತರಿಸಿ ಹೋಗುತ್ತದ್ದರೆ ಹಾಸನದಲ್ಲಿ 85 ವರ್ಷದ ವೃದ್ಧ ದಂಪತಿ ಕೊರೊನಾ ಗೆದ್ದು ಬಂದಿದ್ದು, ನಾವು ಧೈರ್ಯವಾಗಿದ್ದರೆ ಏನೇ ಕಷ್ಟ ಎದುರಾದರೂ ಮಣಿಸಬಹುದು ಅಂತಾ ಗೆಲುವಿನ ನಗು ಬೀರುತ್ತಿದ್ದಾರೆ.

    ಹಾಸನದ ದಾಸರಕೊಪ್ಪಲು ನಿವಾಸಿಗಳಾದ ಜಯರಾಮ್ ಮತ್ತು ಜಯಮ್ಮ ದಂಪತಿಗೆ ಕಳೆದ 15 ದಿನದ ಹಿಂದೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಯರಾಮ್ ಅವರಿಗೆ 85 ವರ್ಷ ವಯಸ್ಸಾಗಿದ್ದರೆ, ಜಯಮ್ಮ ಅವರಿಗೆ 75 ವರ್ಷ ವಯಸ್ಸಾಗಿತ್ತು. ಇದೀಗ ಕೊರೊನಾ ಗೆದ್ದು ಬಂದಿರುವ ಹಿರಿಯ ಜೋಡಿ ತಮ್ಮ ಅನುಭವವನ್ನು ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.

    ನಮಗೆ ಕೊರೊನಾ ಬಂದಾಗ ಬಹಳಷ್ಟು ಭಯ ಆಯ್ತು. ನಾನು ಎಲ್ಲಿದ್ದೇನೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಮಾತಾಡುವ ಶಕ್ತಿಯೂ ಇರಲಿಲ್ಲ. ಆಸ್ಪತ್ರೆಗೆ ಬಂದಾಗ ನಾನು ಎಲ್ಲಿದ್ದೇನೆ ಎಂದು ಕೇಳಿದ್ದೇನೆ. ಊಟದ ಮೇಲೆ ನಿಗಾ ಇರಲಿಲ್ಲ. ಆನಂತರ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಬಂದಿದ್ದರಿಂದ ಕೊರೊನಾ ಜಯಿಸಿದ್ದೇವೆ. ಕೊರೊನಾ ಬಗ್ಗೆ ಯಾವ ಆತಂಕವೂ ಬೇಡ. ಗೆಲ್ಲಲು ಧೈರ್ಯವೇ ಮಖ್ಯ ಕಾರಣ. ಈಗ ನಮಗೆ ತುಂಬಾ ಸಂತೋಷ ಆಗುತ್ತಿದೆ. ಆಸ್ಪತ್ರೆಯಲ್ಲೂ ಕೂಡ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡರು ಎಂದು ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  • 10 ದಿನದಲ್ಲಿ ಕೊರೊನಾ ಗೆದ್ದ 99 ವರ್ಷದ ಬೆಂಗಳೂರಿನ ಅಜ್ಜಿ

    10 ದಿನದಲ್ಲಿ ಕೊರೊನಾ ಗೆದ್ದ 99 ವರ್ಷದ ಬೆಂಗಳೂರಿನ ಅಜ್ಜಿ

    ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಿ 99 ವರ್ಷದ ಅಜ್ಜಿಯೊಬ್ಬರು 10 ದಿನದಲ್ಲಿ ಗುಣಮುಖರಾಗಿದ್ದಾರೆ.

    ಕೆಮ್ಮು ಜ್ವರದಿಂದ ಬಳಲುತ್ತಿದ್ದ ಬೆಂಗಳೂರಿನ 99 ವರ್ಷದ ಅಜ್ಜಿ 10 ದಿನಕ್ಕೆ ಕೊರೊನಾ ಗೆದ್ದು ಮನೆಗೆ ವಾಪಾಸ್ ಆಗಿದ್ದಾರೆ. ಆಗಸ್ಟ್ 1ರಂದು ಮಲ್ಲೇಶ್ವರಂನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ 99 ವರ್ಷದ ಅಜ್ಜಿ ಆಗಸ್ಟ್ 11ರಂದು ಕೊರೊನಾ ಗೆದ್ದು ಡಿಸ್ಚಾರ್ಜ್ ಆಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಣಿಪಾಲ್ ಆಸ್ಪತ್ರೆಯ ಸೂಪರಿಡೆಂಟ್ ಡಾ.ಸೌಮ್ಯ, 99 ವರ್ಷದ ಅಜ್ಜಿ ಕೊರೊನಾದಿಂದ ಬೇಗ ಗುಣಮುಖವಾಗಿದ್ದು, ಖುಷಿಯಾಗಿದೆ. ಕೊರೊನಾ ಬಂದ ತಕ್ಷಣ ಯಾರೂ ಕೂಡ ಗಾಬರಿಯಾಗಬೇಕಿಲ್ಲ. ಕೊರೊನಕ್ಕೆ ಹೆದರಬೇಕಿಲ್ಲ. ಸೋಂಕಿದಿಂದ ವಯಸ್ಸಾದವರೂ ಕೂಡ ಬೇಗ ಚೇತರಿಕೆ ಕಾಣುತ್ತಾರೆ ಎಂದು ತಿಳಿಸಿದ್ದಾರೆ.

  • ಗುಡ್ ನ್ಯೂಸ್ – ಕೊರೊನಾದಿಂದ ದಾಖಲೆ ಪ್ರಮಾಣ ಮಂದಿ ಗುಣಮುಖ

    ಗುಡ್ ನ್ಯೂಸ್ – ಕೊರೊನಾದಿಂದ ದಾಖಲೆ ಪ್ರಮಾಣ ಮಂದಿ ಗುಣಮುಖ

    ನವದೆಹಲಿ: ಕಳೆದ 24 ಗಂಟೆಯಲ್ಲಿ 56,383 ಮಂದಿ ಕೊರೊನಾ ಸೋಂಕಿನಿಂದ ಗುಣಮುಖವಾಗಿದ್ದು ಈವರೆಗೂ ದಿನವೊಂದಕ್ಕೆ ಗುಣಮುಖವಾದರ ಸಂಖ್ಯೆಯಲ್ಲಿ ಇದು ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

    ಈ ಮೂಲಕ ದೇಶದಲ್ಲಿ ಸೋಂಕಿನಿಂದ ಗುಣಮುಖವಾದ ಸಂಖ್ಯೆ 17 ಲಕ್ಷದ (16,95,982) ಸನಿಹದಲ್ಲಿದೆ. ಸಾವಿನ ಸಂಖ್ಯೆಯಲ್ಲೂ ನಿಯಂತ್ರಣ ಸಾಧಿಸಿದ್ದು 1.96% ಪ್ರಮಾಣಕ್ಕೆ ಇಳಿಕೆ ಕಂಡಿದೆ.

    ಬುಧವಾರ ಒಂದೇ ದಿನ 66,999 ಮಂದಿಯಲ್ಲಿ ಸೋಂಕು ಪತ್ತೆಯಾದರೆ, ನಿನ್ನೆ ಕೊರೊನಾದಿಂದ 942 ಸಾವನ್ನಪ್ಪಿದ್ದಾರೆ. ಸದ್ಯ 6,53,622 ಸಕ್ರಿಯ ಪ್ರಕರಣಗಳಿದ್ದರೆ ಕೊರೊನಾದಿಂದ ಒಟ್ಟು 16,95,982 ಮಂದಿ ಗುಣಮುಖವಾಗಿದ್ದಾರೆ. ಈವರೆಗೆ ದೇಶದಲ್ಲಿ ಒಟ್ಟು 47,033 ಜನ ಕೊರೊನಾಗೆ ಬಲಿಯಾಗಿದ್ದಾರೆ.

    ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಐಸಿಎಂಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಿದ್ದು, ಬುಧವಾರ ಒಂದೇ ದಿನ. 8,30,391 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಈ ಮೂಲಕ ದೇಶದ ಈವರೆಗೂ 2,68,45,688 ಮಂದಿಗೆ ಪರೀಕ್ಷೆ ನಡೆಸಲಾಗಿದೆ.

  • ಕೊರೊನಾ ಗೆದ್ದು ಬಂದ ಸಂಚಾರಿ ಪೊಲೀಸ್ ಠಾಣೆ ಸೇನಾನಿಗಳಿಗೆ ಸ್ವಾಗತ ಸನ್ಮಾನ

    ಕೊರೊನಾ ಗೆದ್ದು ಬಂದ ಸಂಚಾರಿ ಪೊಲೀಸ್ ಠಾಣೆ ಸೇನಾನಿಗಳಿಗೆ ಸ್ವಾಗತ ಸನ್ಮಾನ

    ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶತಾಯ ಗತಾಯ ಹೋರಾಟ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಬೆನ್ನುಬಿಡದೇ ಕಾಡುತಿದೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಿ ಜಯಗಳಿಸಿದ ಜಿಲ್ಲೆಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪಿ.ಬಿ.ಕಾಟೆ, ಎನ್.ಸಿ.ಪೂಜಾರ, ಗದಿಗೆಪ್ಪ ಕಿತ್ತೂರ ಅವರು ಕೊರೊನಾ ವೈರಸ್ ನಿಂದ ಗುಣಮುಖರಾಗಿ ಇಂದು ವೃತ್ತಿಗೆ ಆಗಮಿಸಿದ್ದು, ಎಲ್ಲರಲ್ಲಿಯೂ ಸಂತೋಷದ ವಾತಾವರಣ ನಿರ್ಮಾಣವಾಯಿತು.

    ಈ ವೇಳೆ ಮಾತನಾಡಿದ ಗದಿಗೆಪ್ಪ ಕಿತ್ತೂರ, ಜನರು ಕೊರೊನಾ ವೈರಸ್‍ಗೆ ಹೆದರುವ ಅವಶ್ಯಕತೆ ಇಲ್ಲ. ಆದರೆ ಜಾಗರೂಕತೆಯಿಂದ ಜೀವನ ನಡೆಸಬೇಕಿದೆ. ಅಲ್ಲದೇ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಅತಿ ಅಗತ್ಯವಾಗಿದ್ದು, ಸ್ವಯಂ ರಕ್ಷಣೆ ಅತಿ ಅಗತ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್. ಎಸ್. ದೇಸಾಯಿ, ಎಸ್. ಎಂ.ಹಳ್ಳಕರ, ವಿ.ಎ.ಗುರವ, ನವೀನ ತುಪ್ಪಳಕಟ್ಟಿ ಸೇರಿದಂತೆ ಇತರರು ಇದ್ದರು.

  • ಕೊರೊನಾ ಗೆದ್ದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ

    ಕೊರೊನಾ ಗೆದ್ದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ

    – ಎಲ್ಲರಿಗೂ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ

    ಬೆಂಗಳೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಪುತ್ರಿ ನಟಿ ಐಶ್ವರ್ಯ ಅರ್ಜುನ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಕಳೆದ ವಾರ ನಟಿ ಐಶ್ವರ್ಯ ಅರ್ಜುನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಸ್ವತಃ ಈ ಬಗ್ಗೆ ತಾವೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಐಶ್ವರ್ಯ, ಮದ್ರಾಸ್‍ನಲ್ಲಿರುವ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈಗ ಅವರು ಕೊರೊನಾದಿಂದ ಗುಣಮುಖವಾಗಿದ್ದಾರೆ.

    ಇತ್ತೀಚೆಗೆ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಈ ಬಳಿಕ ಚಿಕಿತ್ಸೆ ಪಡೆದುಕೊಂಡ ದಂಪತಿಗಳಿಬ್ಬರು ಗುಣಮುಖರಾಗಿದ್ದರು. ಈಗ ಕೊರೊನಾದಿಂದ ನಟಿ ಐಶ್ವರ್ಯ ಅರ್ಜುನ್ ಕೂಡ ಗುಣಮುಖರಾಗಿದ್ದು, ಕೊರೊನಾದಿಂದ ನಾನು ಸೇಫಾಗಿದ್ದು, ತನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಜೊತೆಗೆ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ತಮಗೆ ಕೊರೊನಾ ಬಂದಿರುವ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದ ಐಶ್ವರ್ಯ, ನಾನು ಇತ್ತೀಚೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ಈಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಅಲ್ಲದೇ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದರು.

  • ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಬಳ್ಳಾರಿ: ಕೊರೊನಾ ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಜನರ ಉದಾಹರಣೆಗೆ ನಮಗೆ ಸಿಗುತ್ತೆ. ಆದರೆ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ರಾಜ್ಯದ ಮೊದಲ ಶತಾಯುಷಿ ಅಜ್ಜಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಬರೋಬ್ಬರಿ ನೂರು ವರ್ಷದ ಅಜ್ಜಿ ಸೋಂಕಿನಿಂದ ಗುಣಮುಖ ಆಗಿದ್ದಾರೆ. ವಿಶೇಷ ಅಂದರೆ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ತಮ್ಮ ಮನೆಯ ಹಿರಿಯ ಮಗನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಿರಿಯ ಮಗನ ಪ್ರಾಥಮಿಕ ಹಂತದ ಸಂಪರ್ಕ ಹೊಂದಿರುವ ಕಾರಣ ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಮನೆಯ ಉಳಿದ ನಾಲ್ವರ ಸ್ವಾಬ್ ಟೆಸ್ಟ್ ಮಾಡಿದಾಗ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿತ್ತು.

    ಹಿರಿಯ ಮಗನನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಮನೆಯ ಮಂದಿಯ ಜೊತೆಯಲ್ಲಿ ಅಜ್ಜಿಯ ಸಹ ಗುಣಮುಖ ಆಗಿದ್ದಾರೆ. 80 ವರ್ಷದ ಮೇಲ್ಪಟ್ಟ ಜನರಲ್ಲಿ ಸೋಂಕು ಕಾಣಿಸಿಕೊಂಡರೇ ಬಹಳ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಅಜ್ಜಿ ಸೋಂಕಿತರ ಭಯವನ್ನು ದೂರ ಮಾಡಿದ್ದಾರೆ. ವೈದ್ಯರ ನೀಡಿದ ಔಷಧಿ ಹಾಗೂ ಬಿಸಿ ನೀರು ಕುಡಿಯುವುದು ಇದೆಲ್ಲವನ್ನೂ ಅಜ್ಜಿ ಚಾಚು ತಪ್ಪದೆ ಪಾಲನೆ ಮಾಡಿದ್ದಾರೆ. ಹೀಗಾಗಿ ಅಜ್ಜಿ ಬೇಗ ಗುಣಮುಖ ಆಗಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.

  • ಕೊರೊನಾ ಗೆದ್ದ 101 ವರ್ಷದ ಅಜ್ಜ- ಆಸ್ಪತ್ರೆ ಸಿಬ್ಬಂದಿಗೆ ಆಶ್ಚರ್ಯ

    ಕೊರೊನಾ ಗೆದ್ದ 101 ವರ್ಷದ ಅಜ್ಜ- ಆಸ್ಪತ್ರೆ ಸಿಬ್ಬಂದಿಗೆ ಆಶ್ಚರ್ಯ

    – ಡಿಸ್ಚಾರ್ಜ್ ಮುನ್ನಾದಿನ 101ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಜ್ಜ

    ಮುಂಬೈ: ಕೊರೊನಾದಿಂದಾಗಿ ವೃದ್ಧರು ಹೆಚ್ಚು ಸಾವನ್ನಪ್ಪಿದ್ದಾರೆ ಎಂಬ ಆತಂಕದ ನಡುವೆಯೇ 101 ವರ್ಷದ ವೃದ್ಧರೊಬ್ಬರು ಕೊರೊನಾ ಗೆದ್ದು ಬಂದಿರುವ ಅಪರೂಪದ ಪ್ರಕರಣ ನಡೆದಿದೆ.

    ಮುಂಬೈನ ಹಿಂದೂ ಹೃದಯ ಸಾರ್ಮಾಟ್ ಬಾಳಾಸಾಹೇಬ್ ಠಾಕ್ರೆ ಆಸ್ಪತ್ರೆಯಿಂದ ಅರ್ಜುನ್ ಗೋವಿಂದ್ ನರಿಂಗ್ರೆಕರ್ ಅವರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನೂ ವಿಶೇಷವೆಂದರೆ ನರಿಂಗ್ರೆಕರ್ ಅವರು ಡಿಸ್ಚಾರ್ಜ್ ಆಗುವುದಕ್ಕೂ ಹಿಂದಿನ ದಿನವೇ ತಮ್ಮ 101ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ ಡಬಲ್ ಖುಷಿಯಲ್ಲಿ ಮುಳುಗಿದ್ದಾರೆ. ಈ ಮೂಲಕ ವ್ಯದ್ಯರಿಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ.

    ಇದೇ ಮೊದಲಲ್ಲ ಈ ಹಿಂದೆ ಸಹ ಹಲವು ವೃದ್ಧರು ಕೊರೊನಾ ಗೆದ್ದಿದ್ದು, ಜೂನ್ 12ರಂದು 93 ವರ್ಷದ ವ್ಯಕ್ತಿ ಕೊರೊನಾದಿಂದ ಗುಣಮುಖರಾಗಿ ಆಗ್ರಾದ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಮೂಲಕ ವೃದ್ಧರು ಸಹ ಕೊರೊನಾದಿಂದ ಗುಣಮುಖರಾಗುವ ಮೂಲಕ ಭರವಸೆ ಮೂಡಿಸಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಇತ್ತೀಚೆಗೆ ರಾಜ್ಯದಲ್ಲಿ ಸಹ ಅಜ್ಜಿಯೊಬ್ಬರು ಕೊರೊನಾದಿಂದ ಗುಣಮುಖರಾಗಿದ್ದರು.

    ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತರರಿಗಿಂತ ವೃದ್ಧರಿಗೆ ಹಾಗೂ ಈಗಾಗಲೇ ಇತರೆ ಖಾಯಿಲೆಗಳಿರುವವರಿಗೆ ಕೊರೊನಾ ಹೆಚ್ಚು ಕಾಡುತ್ತದೆ ಎಂದು ಹೇಳಿದೆ. ಅಲ್ಲದೆ ವೃದ್ಧರಲ್ಲಿ ಕೊರೊನಾ ವೈರಸ್ ಕಂಡು ಬಂದರೆ ಅವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಪ್ರತ್ಯೇಕಮಾರ್ಗಸೂಚಿಗಳನ್ನು ಸಹ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದೆ. ಇದೇ ರೀತಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದೆ. ಆದರೆ ಇದೀಗ ದೇಶದಲ್ಲಿ ಹೆಚ್ಚು ವೃದ್ಧರು ಕೊರೊನಾದಿಂದಾಗಿ ಗುಣಮುಖರಾಗುವ ಮೂಲಕ ಇತರರಲ್ಲಿ ಭರವಸೆ ಮೂಡಿಸಿದ್ದಾರೆ.

  • ಬೆಂಗ್ಳೂರಲ್ಲಿ ಒಂಬತ್ತೇ ದಿನದಲ್ಲಿ ಕೊರೊನಾ ಗೆದ್ದ 99 ವರ್ಷದ ಅಜ್ಜಿ

    ಬೆಂಗ್ಳೂರಲ್ಲಿ ಒಂಬತ್ತೇ ದಿನದಲ್ಲಿ ಕೊರೊನಾ ಗೆದ್ದ 99 ವರ್ಷದ ಅಜ್ಜಿ

    – ಮಗ, ಸೊಸೆ ಇನ್ನೂ ಆಸ್ಪತ್ರೆಯಲ್ಲಿ

    ಬೆಂಗಳೂರು: ತನ್ನ 99ನೇ ವಯಸ್ಸಿನಲ್ಲಿ ಅಜ್ಜಿಯೊಬ್ಬರು ಕೇವಲ ಒಂಬತ್ತೇ ದಿನಕ್ಕೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಈ ಅಜ್ಜಿ ಜೊತೆ ಆತನ ಮಗ ಮತ್ತು ಸೊಸೆಗೂ ಕೊರೊನಾ ಸೋಂಕು ತಗಲಿತ್ತು. ಆದರೆ ಶುಕ್ರವಾರ ಅಜ್ಜಿ ಕೊರೊನಾದಿಂದ ಸಂಪೂರ್ಣ ಗುಣವಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಜ್ಜಿಗಿಂತ ಚಿಕ್ಕವರಾದ ಆಕೆಯ ಮಗ ಮತ್ತು ಸೊಸೆ ಮಾತ್ರ ಇನ್ನೂ ಗುಣವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಿದ್ದ ಅಜ್ಜಿಯ ಸೊಸೆಗೆ ಮೊದಲು ಕೊರೊನಾ ಪಾಸಿಟಿವ್ ಅನ್ನೋದು ಗೊತ್ತಾಗಿತ್ತು. ಜೊತೆಗೆ ಅಜ್ಜಿಯ ಮಗ ಹಾಗೂ ಮೊಮ್ಮಗನಿಗೂ ಪಾಸಿಟಿವ್ ಇತ್ತು. ಇವರ ಜೊತೆ ಪ್ರಾಥಮಿಕ ಸಂಪರ್ಕದಲಿದ್ದ ಅಜ್ಜಿಗೂ ಕೊರೊನಾ ಪಾಸಿಟಿವ್ ಬಂದಿದೆ. ಆ ನಂತರ ಜೂನ್ 18ರಂದು ಇಡೀ ಕುಟುಂಬ ವಿಕ್ಟೋರಿಯಾ ಆಸ್ಪತ್ರೆಯ ಕೊರೊನಾ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈಗ ಅಜ್ಜಿ ಮಾತ್ರ ಗುಣಮುಖರಾಗಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು, ಅಜ್ಜಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಹೈಪರ್ ಟೆನ್ಶನ್ ಸಮಸ್ಯೆ ಬಿಟ್ಟರೆ ಬೇರೆ ಯಾವ ತೊಂದರೆಯೂ ಇರಲಿಲ್ಲ. ಅಜ್ಜಿಗೆ ಕೊರೊನಾ ಗುಣಲಕ್ಷಣವೂ ಇರಲಿಲ್ಲ. ಮೈಲ್ಡ್ ಆಕ್ಸಿಜನ್ ವ್ಯವಸ್ಥೆ ಅಜ್ಜಿಗೆ ನೀಡಲಾಯ್ತು. ಈಗ ನಿನ್ನೆ ಎರಡು ಬಾರಿ ಸ್ವಾಬ್ ಟೆಸ್ಟ್ ಮಾಡಿದಾಗ ರಿಪೋರ್ಟ್ ನೆಗೆಟಿವ್ ಬಂದಿದೆ. ಅಜ್ಜಿ ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಿದ್ದಾರೆ.

    ಅಜ್ಜಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ ಅವರ ಮಗ ಮತ್ತು ಸೊಸೆ ಮಾತ್ರ ಇನ್ನೂ ರಿಕವರಿಯಾಗದೇ ಆಸ್ಪತ್ರೆಯಲ್ಲೇ ಇದ್ದಾರೆ. ಆ ಊಟ ಕೊಡಿ ಈ ಊಟ ಕೊಡಿ ಎನ್ನುವ ಯಾವ ಡಿಮ್ಯಾಂಡ್ ಕೂಡ ಅಜ್ಜಿ ಮಾಡುತ್ತಿರಲಿಲ್ಲ. ತುಂಬಾ ಚೆನ್ನಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಅಜ್ಜಿಯ ಸ್ಪೀಡ್ ರಿಕವರಿ ನಮಗೂ ಖುಷಿ ಕೊಟ್ಟಿದೆ. ಆಕೆ ಚಿಕಿತ್ಸೆ ವೇಳೆ ತುಂಬಾ ಪಾಸಿಟಿವ್ ಆಗಿದ್ದರು ಎಂದು ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಸೋಂಕು ಏರಿಕೆ ನಡುವೆ ಗುಡ್ ನ್ಯೂಸ್ – ದೇಶದಲ್ಲಿ ಶೇ.51 ಮಂದಿ ಗುಣಮುಖ

    ಕೊರೊನಾ ಸೋಂಕು ಏರಿಕೆ ನಡುವೆ ಗುಡ್ ನ್ಯೂಸ್ – ದೇಶದಲ್ಲಿ ಶೇ.51 ಮಂದಿ ಗುಣಮುಖ

    ನವದೆಹಲಿ: ಪ್ರತಿ ನಿತ್ಯ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ಗಣನೀಯ ಏರಿಕೆಯ ನಡುವೆ ಒಳ್ಳೆ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ಕೊರೊನಾದಿಂದ ಗುಣಮುಖವಾಗುತ್ತಿರುವ ಪ್ರಮಾಣ ಶೇ.51 ಏರಿಕೆಯಾಗಿದೆ.

    ಕೇಂದ್ರ ಆರೋಗ್ಯ ಇಲಾಖೆ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ ಭಾರತದಲ್ಲಿ 3,32,424 ಮಂದಿಯಲ್ಲಿ ಈವರೆಗೂ ಸೋಂಕು ಕಂಡು ಬಂದಿದೆ. ಈ ಪೈಕಿ 1,69,797 ಮಂದಿ ಚೇತರಿಸಿಕೊಂಡು ಗುಣಮುಖವಾಗಿದ್ದಾರೆ. ಸದ್ಯ 1,53,106 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಸರ್ಕಾರದ ಈ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳು ಹೆಚ್ಚಿದ್ದು, ಈ ಪ್ರಮಾಣ ಶೇ. 51 ಆಗಿದೆ. ಗುಣಮುಖವಾಗುವವರ ಸಂಖ್ಯೆ ಹಂತ ಹಂತವಾಗಿ ಏರಿಕೆ ಕಾಣುತ್ತಿದ್ದು ಭಾರತದ ಮಟ್ಟಿಗೆ ಉತ್ತಮ ಬೆಳವಣಿಗೆಯಾಗಿದೆ.