Tag: curd

  • ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಏರಿಕೆ – ಸರ್ಕಾರದಿಂದ ಸುಳಿವು

    ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಏರಿಕೆ – ಸರ್ಕಾರದಿಂದ ಸುಳಿವು

    ಬೆಳಗಾವಿ: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು (Nandini Milk, Curd) ದರ ಹೆಚ್ಚಾಗುವ ಸಾಧ್ಯತೆಯಿದೆ.

    ಈ ಸಂಬಂಧ ಅಧಿವೇಶನದಲ್ಲಿ (Belagavi Session) ಸರ್ಕಾರ ದರ ಏರಿಸುವ ಸುಳಿವು ನೀಡಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ (Karnataka Government) ಹೇಳಿದೆ.

    ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಉತ್ತರ ನೀಡಿದ್ದಾರೆ. ಇತರೇ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

     

    ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ

    ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಈಗಾಗಲೇ ಚಿಂತನೆ ನಡೆಸಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.

     
    ಬೆಲೆ ಏರಿಕೆ ಯಾಕೆ?
    ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ.

    ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು. ಸದ್ಯ ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ.

     

  • ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

    ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

    ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ಇಷ್ಟಪಡದವರು ಹೆಚ್ಚಾಗಿ ನಾನ್‌ವೆಜ್ ಖಾದ್ಯವನ್ನು ದೂರವಿಡುತ್ತಾರೆ. ಏಕೆಂದರೆ ನಾನ್‌ವೆಜ್ ಖಾದ್ಯವನ್ನು ಹೆಚ್ಚು ಮಸಾಲೆಯುಕ್ತವಾಗಿಯೇ ಮಾಡಲಾಗುತ್ತದೆ. ಆದರೆ ಬಂಗಾಳದ ಫೇಮಸ್ ಡೋಯಿ ಮಾಚ್ (Doi Maach) ಹಾಗಲ್ಲ. ಕನಿಷ್ಠ ಮಸಾಲೆ ಪದಾರ್ಥಗಳನ್ನು ಬಳಸಿ ಈ ಮೀನು ಸಾರನ್ನು ಮಾಡಲಾಗುತ್ತದೆ. ಡೋಯಿ ಎಂದರೆ ಮೊಸರು ಹಾಗೂ ಮಾಚ್ ಎಂದರೆ ಮೀನು. ಹೆಸರೇ ಹೇಳಿದಂತೆ ಈ ಮೀನು ಸಾರಿಗೆ ಬೇಕಾದ ಮುಖ್ಯ ಪದಾರ್ಥವೇ ಮೊಸರು. ಹಾಗಿದ್ದರೆ ಬೆಂಗಾಲಿ ಸ್ಟೈಲ್‌ನ ಮೀನು ಸಾರು ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮ್ಯಾರಿನೇಷನ್‌ಗೆ:
    ಉಪ್ಪು – ಕಾಲು ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಮೀನು – 4-5 ತುಂಡುಗಳು
    ಮೊಸರು ಮಿಶ್ರಣಕ್ಕೆ:
    ಮೊಸರು – 2 ಕಪ್
    ಕಡಲೆ ಹಿಟ್ಟು – ಅರ್ಧ ಟೀಸ್ಪೂನ್
    ಈರುಳ್ಳಿ ರಸ – ಅರ್ಧ
    ಕರಿ ತಯಾರಿಸಲು:
    ಸಾಸಿವೆ ಎಣ್ಣೆ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
    ತುಪ್ಪ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಲವಂಗ -2
    ಏಲಕ್ಕಿ – 2
    ಹಸಿರು ಮೆಣಸಿನಕಾಯಿ – 3
    ದಾಲ್ಚಿನಿ – 1 ಇಂಚು ಇದನ್ನೂ ಓದಿ: ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಮೀನಿನ ತುಂಡುಗಳಿಗೆ ಅರಿಶಿನ ಹಾಗೂ ಉಪ್ಪು ಹಚ್ಚಿ ಮ್ಯಾರಿನೇಟ್ ಮಾಡಿ.
    * ಬಾಣಲೆ ಬಿಸಿ ಮಾಡಿ ಸಾಸಿವೆ ಎಣ್ಣೆ ಸೇರಿಸಿ ಅದರಲ್ಲಿ ಮೀನಿನ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿ ಫ್ರೈ ಮಾಡಿಕೊಳ್ಳಿ.
    * ಈಗ ಬಾಣಲೆಯನ್ನು ತೆಗೆದು ಹೆಚ್ಚುವರಿ ಎಣ್ಣೆಯನ್ನು ಪೇಪರ್ ಟವಲ್‌ಗೆ ಹರಿಸಿ, ಪಕ್ಕಕ್ಕಿಡಿ.
    * ಒಂದು ಬಟ್ಟಲು ತೆಗೆದುಕೊಂಡು, ಅದಕ್ಕೆ ಮೊಸರು ಹಾಕಿ ಕಡಲೆ ಹಿಟ್ಟು ಹಾಗೂ ಈರುಳ್ಳಿ ರಸ ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಈಗ ಮೀನು ಹುರಿದಿಟ್ಟಿದ್ದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಏಲಕ್ಕಿ, ಕರಿಬೇವಿನ ಎಲೆ, ಲವಂಗ ಹಾಗೂ ದಾಲ್ಚಿನಿ ಸೇರಿಸಿ.
    * ಬಳಿಕ ಮೊಸರನ್ನು ಸೇರಿಸಿ, ಮಿಶ್ರಣ ಮಾಡಿ, 1 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
    * ರುಚಿಗೆ ತಕ್ಕಷ್ಟು ಉಪ್ಪು ಹಸಿರು ಮೆಣಸಿನಕಾಯಿ ಹಾಗೂ ಗರಂ ಮಸಾಲೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
    * ಮೀನನ್ನು ಹೆಚ್ಚು ಬೆರೆಸಬೇಡಿ, ಇದರಿಂದ ಮೀನಿನ ತುಂಡು ಮುರಿಯುವ ಸಾಧ್ಯತೆಯಿರುತ್ತದೆ. ಉರಿಯನ್ನು ಹೆಚ್ಚು ಮಾಡಿ ಮತ್ತೆ 1 ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಬೆಂಗಾಲಿ ಸ್ಟೈಲ್ ಮೊಸರಿನ ಮೀನು ಸಾರು ತಯಾರಾಗಿದ್ದು, ಬಿಸಿಬಿಸಿ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ

  • ನ.20ರ ನಂತರ ಹಾಲಿನ ಬೆಲೆ ಏರಿಕೆ ನಿರ್ಧಾರ: ಸಿಎಂ ಬೊಮ್ಮಾಯಿ

    ನ.20ರ ನಂತರ ಹಾಲಿನ ಬೆಲೆ ಏರಿಕೆ ನಿರ್ಧಾರ: ಸಿಎಂ ಬೊಮ್ಮಾಯಿ

    ಕಲಬುರಗಿ: ನಂದಿನಿ ಹಾಲು ಮತ್ತು ಮೊಸರಿನ(Milk and Curd) ದರ ಏರಿಕೆಯ ಬಗ್ಗೆ ನ.20ರ ನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

    ಹಾಲಿನ ದರ 3 ರೂಪಾಯಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನ.20 ರ ನಂತರ ಹಾಲು ಒಕ್ಕೂಟದ ಮಹಾಮಂಡಳ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುತ್ತದೆ. ಜನರಿಗೆ ಭಾರ ಆಗದಂತೆ, ರೈತರಿಗೆ ಅನುಕೂಲವಾಗುವಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ ಹಾಲು ಮತ್ತು ಮೊಸರಿನ ದರ 3 ರೂ. ಏರಿಕೆ ಮಾಡಲು ಕೆಎಂಎಫ್‌ ಮುಂದಾಗಿತ್ತು.  ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್‌ಗೆ 5 ರೂ. ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲ್ಯಾನ್‌ ಮಾಡಲಾಗಿದೆ.

    ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಭಾರೀ ಏರಿಕೆಯಾಗಿದೆ. ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ, ವಿದ್ಯುತ್, ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲು ಕೆಎಂಎಫ್‌ ಮುಂದಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ

    ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ

    ಬೆಂಗಳೂರು: ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ(Nandini) ಹಾಲು ಮತ್ತು ಮೊಸರಿನ(Milk and Curd) ದರ 3 ರೂ. ಏರಿಕೆಯಾಗಲಿದೆ

    ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲಾನ್ ಮಾಡಲಾಗಿದೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!


    ಬೆಲೆ ಏರಿಕೆಗೆ ಕಾರಣ?
    ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಭಾರೀ ಏರಿಕೆಯಾಗಿದೆ. ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ , ವಿದ್ಯುತ್ , ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಾಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೇರೆಲ್ಲಾ ಚಟ್ನಿಗಳಿಗಿಂತ ವಿಭಿನ್ನ ಮೊಸರು ಚಟ್ನಿ

    ಬೇರೆಲ್ಲಾ ಚಟ್ನಿಗಳಿಗಿಂತ ವಿಭಿನ್ನ ಮೊಸರು ಚಟ್ನಿ

    ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೋಸೆ, ಚಪಾತಿ, ರೊಟ್ಟಿಗೆ ಮೊಸರು ಚಟ್ನಿ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಕೊತ್ತಂಬರಿ- ಸ್ವಲ್ಪ
    * ಪುದಿನಾ – ಸ್ವಲ್ಪ
    * ಹಸಿಮೆಣಸಿನಕಾಯಿ- 3
    * ಬೆಳ್ಳುಳ್ಳಿ- 1
    * ಶುಂಠಿ- ಸ್ವಲ್ಪ
    * ಮೊಸರು – 2 ಕಪ್
    * ಜೀರಿಗೆ ಪುಡಿ- ಸ್ವಲ್ಪ
    * ನಿಂಬೆ ರಸ- 1 ಚಮಚ
    * ಚಾಟ್ ಮಸಾಲಾ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸಿ ಜಾರ್‌ನಲ್ಲಿ ಕೊತ್ತಂಬರಿ, ಪುದಿನಾ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ನಿಂಬೆ ರಸವನ್ನು ಹಾಕಿ
    * ಅಗತ್ಯವಿದ್ದರೆ ಮಾತ್ರ ನೀರನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ರುಬ್ಬಿದ ಮಿಶ್ರಣ, ಮೊಸರು, ಜೀರಿಗೆ ಪುಡಿ, ಚಾಟ್ ಮಸಾಲಾ, ಉಪ್ಪನ್ನು ಸೇರಿಸಿದರೆ ರುಚಿಯಾದ ಮೊಸರು ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಹಾಲು ಅಂತ ಮೊಸರು ಕದ್ದು ತಂದು ನಿರ್ಮಾಪಕರ ಕಾರಿಗೆ ಅಭಿಷೇಕ ಮಾಡಿದ್ರು ಅಭಿಮಾನಿಗಳು!

    ಹಾಲು ಅಂತ ಮೊಸರು ಕದ್ದು ತಂದು ನಿರ್ಮಾಪಕರ ಕಾರಿಗೆ ಅಭಿಷೇಕ ಮಾಡಿದ್ರು ಅಭಿಮಾನಿಗಳು!

    ಮುಂಬೈ: ಸಿನಿಮಾ ತಾರೆಯರು ಎಂದರೆ ಅಭಿಮಾನಿಗಳಿಗೆ ಸಖತ್ ಕ್ರೇಜ್‌ ಇರುತ್ತದೆ. ನಟ, ನಟನಿಯರ ಜೊತೆಗೆ ಫೊಟೋ ತೆಗೆಸಿಕೊಳ್ಳುವುದು, ನೆಚ್ಚಿನ ತಾರೆಯರ ಸಿನಿಮಾ ರಿಲೀಸ್ ಆದಾಗ ಹೀರೋ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಾರೆ. ಆದರೆ ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ ಮಾಡಿರುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಕಾಲಿವುಡ್ ಖ್ಯಾತ ನಟ ಅಜಿತ್ ಕುಮಾರ್ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ  ಕಾರಿಗೆ ಮೊಸರಿನ ಅಭಿಷೇಕ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ವಲಿಮೈ ಸಿನಿಮಾ ಬಿಡುಗಡೆ ಆಗಿದೆ. ಜನರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿದುಕೊಳ್ಳಲು ಚಿತ್ರಮಂದಿರಕ್ಕೆ ಬಂದಿದ್ದ ಬೋನಿ ಕಪೂರ್ ಅವರ ಕಾರಿನ ಮೇಲೆ ಅಭಿಮಾನಿಗಳು ಮೊಸರಿನ ಅಭಿಷೇಕ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಈ ಮೊಸರನ್ನು ಅಭಿಮಾನಿಗಳು ಯಾವುದೋ ಅಂಗಡಿಯಿಂದ ಕದ್ದು ತಂದಿದ್ದು ಎಂಬ ಮಾಹಿತಿ ಕೂಡ ಕೇಳಿಬಂದಿದೆ. ಆ ಸಂದರ್ಭದಲ್ಲಿ ಅವರ ಮೇಲೆ ಯಾರೋ ಕಿಡಿಗೇಡಿಗಳು ಪೆಟ್ರೋಲ್​ ಬಾಂಬ್​ ಎಸೆದಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ:  ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

    ಬಹಳ ತಿಂಗಳಿಂದಲೂ ವಲಿಮೈ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಪದೇಪದೇ ರಿಲೀಸ್ ಡೇಟ್ ಬದಲಾಗುತ್ತಲೇ ಇತ್ತು. ಕೊನೆಗೂ ಫೆ.24ರಂದು ಸಿನಿಮಾ ಬಿಡುಗಡೆ ಆಯಿತು. ಗುರುವಾರ ಬಿಡುಗಡೆ ಆಗಿರುವ ವಲಿಮೈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಜಿತ್ ನಟಿಸಿದ್ದಾರೆ.  ಇದನ್ನೂ ಓದಿ : ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆದಾಗ ಅವರ ಕಟೌಟ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಾರೆ. ಅಜಿತ್ ಫ್ಯಾನ್ಸ್ ಕೂಡ ಅದೇ ಪ್ಲ್ಯಾನ್ ಹಾಕಿಕೊಂಡಿದ್ದರು. ಆದರೆ ದುಡ್ಡು ಕೊಟ್ಟು ಹಾಲು ಖರೀದಿಸುವ ಬದಲು ಯಾವುದೋ ಅಂಗಡಿಯಲ್ಲಿ ಕಳ್ಳತನ ಮಾಡಿ ತಂದಿದ್ದಾರೆ. ನಗೆಪಾಟಲಿನ ಸಂಗತಿ ಏನೆಂದರೆ, ಹಾಲಿನ ಬದಲಾಗಿ ಮೊಸರಿನ ಪ್ಯಾಕೆಟ್ ಕದ್ದು ತಂದು ನಿರ್ಮಾಪಕ ಬೋನಿ ಕಪೂರ್ ಅವರ ಕಾರಿನ ಮೇಲೆ ಸುರಿದಿದ್ದಾರೆ.

  • ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ

    ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ

    ಮೊಸರನ್ನು ಅನ್ನಕ್ಕೆ ಹಾಕಿ ಊಟ ಮಾಡುವ ಬದಲು ನೀವು ಸಾಂಬಾರ್ ಮಾಡಿದರೆ ಸಖತ್ ಟೇಸ್ಟ್ ಆಗಿರುತ್ತದೆ. ಈ ಮೊಸರು ಬೆಂಡೆಕಾಯಿ ಸಾರಿನ ರುಚಿ ಒಂದು ಹಿಡಿ ಅನ್ನವನ್ನು ಹೆಚ್ಚೇ ನಿಮ್ಮ ಹೊಟ್ಟೆ ತಲುಪುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

    ಬೇಕಾಗುವ ಸಾಮಗ್ರಿಗಳು:
    * ಬೆಂಡೆಕಾಯಿ- ಕಾಲು ಕೆಜಿ
    * ಈರುಳ್ಳಿ-1
    * ಟೊಮೆಟೋ-1
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಮೊಸರು 2 ಕಪ್ ಸ್ವಲ್ಪ
    * ತೆಂಗಿನ ತುರಿ- ಸ್ವಲ್ಪ
    * ಗೋಡಂಬಿ 6-7
    * ಗರಂ ಮಸಾಲ- 1 ಚಮಚ
    * ಖಾರದ ಪುಡಿ- 1ಚಮಚ
    * ಅರಿಶಿಣ ಪುಡಿ- ಅರ್ಧ
    * ಅಡುಗೆ ಎಣ್ಣೆ- 4 ಚಮಚ
    * ರುಚಿಗೆ ತಕ್ಕ ಉಪ್ಪು
    * ಇಂಗು, ಸಾಸಿವೆ, ಜೀರಿಗೆ, ಉದ್ದಿನ ಬೇಳೆ- ಸ್ವಲ್ಪ
    * ಒಣ ಮೆಣಸು-3
    * ಕರಿ ಬೇವು- ಸ್ವಲ್ಪ

    ಮಾಡುವ ವಿಧಾನ:
    * ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಂಡೆ ಕಾಯಿ ಹಾಕಿ ಫ್ರೈ ಮಾಡಿಕೊಳ್ಳಬೇಕು.
    * ಗೋಡಂಬಿ, ತೆಂಗಿನ ತುರಿ ಹಾಕಿ ನುಣ್ಣನೆ ರುಬ್ಬಿ. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಇಂಗು ಹಾಕಿ, ಈರುಳ್ಳಿ, ಒಣ ಮೆಣಸನ್ನು ಹಾಕಿ ಫ್ರೈ ಮಾಡಿಕೊಳ್ಳಿ.

    * ನಂತರ ಈಗಾಗಲೇ ರುಬ್ಬಿದ ಗೋಡಂಬಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಪುಡಿ, ಅರಿಶಿಣ ಪುಡಿ, ಮೊಸರು, ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿಕೊಳ್ಳಿ. ಇದನ್ನೂ ಓದಿ:  ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ

    * ಸಾರು ಕುದಿ ಬರುವಾಗ ಫ್ರೈ ಮಾಡಿದ ಬೆಂಡೆ ಕಾಯಿ ಹಾಕಿದರೆ ರುಚಿಯಾದ ಮೊಸರು ಬೆಂಡೆಕಾಯಿ ಸಾರು ಸವಿಯಲು ಸಿದ್ಧವಾಗುತ್ತದೆ.

  • ಫಟಾಫಟ್ ಅಂತ ಮಾಡಿ ರುಚಿಯಾದ ಮೊಸರು ಅವಲಕ್ಕಿ

    ಫಟಾಫಟ್ ಅಂತ ಮಾಡಿ ರುಚಿಯಾದ ಮೊಸರು ಅವಲಕ್ಕಿ

    ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಬೆಳಗಿನ ತಿಂಡಿಯನ್ನು ಸಿದ್ಧ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ನೀವು ಆಫೀಸ್‍ಗೆ ಹೋಗುತ್ತಿದ್ದರೆ ಬೆಳಗ್ಗೆ ಅಡುಗೆ ಮಾಡಲು ಸಮಯ ಸಿಗುವುದಿಲ್ಲ. ಹೀಗಾಗಿ ನೀವು 5 ನಿಮಿಷದಲ್ಲಿ ಮಾಡಬಹುದಾದ ರುಚಿಯಾದ ಮೊಸರು ಅವಲಕ್ಕಿ ರೆಸಿಪಿ ಇಲ್ಲಿದೆ ನೋಡಿ. ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಅವಲಕ್ಕಿ- 1 ಕಪ್
    * ಮೊಸರು- 1 ಕಪ್
    * ಬೆಲ್ಲ- ಸ್ವಲ್ಪ
    * ಡ್ರೈ ಫ್ರೂಟ್ಸ್- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು


    ಮಾಡುವ ವಿಧಾನ:
    * ಮೊದಲು ಅವಲಕ್ಕಿಯನ್ನು ಚೆನ್ನಾಗಿ ತೊಳೆದ ಮೇಲೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅವಲಕ್ಕಿ ಮತ್ತು ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಅದಕ್ಕೆ ಸ್ವಲ್ಪ ಉಪ್ಪು, ಬೆಲ್ಲ, ಡ್ರೈ ಫ್ರೂಟ್ಸ್ ಹಾಕಿ ಎಲ್ಲ ಪದಾರ್ಥಗಳು ಸರಿಯಾಗಿ ಮಿಶ್ರಣವಾಗುವವರೆಗೆ ಕಲಸಿಕೊಂಡರೆ ರುಚಿಯಾದ ಮೊಸರು ಅವಲಕ್ಕಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • 10 ನಿಮಿಷದಲ್ಲಿ ತಯಾರಿಸಿ ಮೊಸರು ಗೊಜ್ಜು

    10 ನಿಮಿಷದಲ್ಲಿ ತಯಾರಿಸಿ ಮೊಸರು ಗೊಜ್ಜು

    ಲಾಕ್‍ಡೌನ್ ಇದೆ ಹೊರಗಡೆ ಹೋಗಿ ತರಕಾರಿ ಹಾಗೂ ಇನ್ನಿತರ ವಸ್ತಗಳನ್ನು ಖರೀದಿಸುವುದು ಕಷ್ಟವಾಗುತ್ತದೆ. ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಸರಳವಾಗಿ 10 ನಿಮಿಷದಲ್ಲಿ ಮೊಸರು ಗೊಜ್ಜು ಮಾಡಿಕೊಂಡು ಅನ್ನ ಮತ್ತು ರೊಟ್ಟಿ ಜೊತೆಗೆ ಸವಿಯಲು ಇಲ್ಲಿದೆ ಮಾಡುವ ವಿಧಾನ…

    ಬೇಕಾಗುವ ಸಾಮಗ್ರಿಗಳು
    * ಮೊಸರು – 1 ಕಪ್
    * ಕೆಂಪುಮೆಣಸಿನ ಪುಡಿ – 1 ಟೀ ಸ್ಪೂನ್
    * ಕೊತ್ತಂಬರಿ ಪುಡಿ- ಅರ್ಧ ಚಮಚ
    * ಜೀರಿಗೆ ಪುಡಿ- ಅರ್ಧ ಚಮಚ
    * ಅರಿಶಿಣ -ಅರ್ಧ ಚಮಚ
    * ಗರಂಮಸಾಲೆ ಪುಡಿ – ಕಾಲು ಚಮಚ
    * ಬೆಳ್ಳುಳ್ಳಿ – 1
    * ಅಡುಗೆ ಎಣ್ಣೆ- 3 ಟೀ ಸ್ಪೂನ್
    * ಸಾಸಿವೆ- ಅರ್ಧ ಚಮಚ
    * ಜೀರಿಗೆ – ಅರ್ಧ ಚಮಚ
    * ಒಣಮೆಣಸು – 2
    * ಕರಿಬೇವು
    * ಇರುಳ್ಳಿ – 1 ದೊಡ್ಡಗಾತ್ರದ್ದು
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಮೊಸರನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಆ ಪಾತ್ರೆಗೆ ಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿಣ, ಗರಂಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ: ಘಮ್ ಎನ್ನುವ ಗಸಗಸೆ ಪಾಯಸ ಮಾಡುವುದು ಹೇಗೆ ಗೊತ್ತಾ?

    * ಒಂದು ಬಾಣಲೆಗೆ ಅಡುಗೆಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ಅದಕ್ಕೆ ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು, ಬೆಳ್ಳುಳ್ಳಿ, ಇರುಳ್ಳಿ ಹಾಕಿ ಫ್ರೈ ಮಾಡಬೇಕು.

    * ನಂತರ ಈ ಪಾತ್ರೆಗೆ ಈ ಮೊದಲೇ ತಯಾರಿಸಿಟ್ಟ ಮೊಸರಿನ ಮಸಲಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಕುದಿಸಿದರೆ ರುಚಿಯಾದ ಮೊಸರು ಗೊಜ್ಜು ಸವಿಯಲು ಸಿದ್ಧವಾಗುತ್ತದೆ.

  • ಲಾಕ್‍ಡೌನ್ ಎಫೆಕ್ಟ್ -ಹಾಲು, ಮೊಸರು ಕಳ್ಳತನ

    ಲಾಕ್‍ಡೌನ್ ಎಫೆಕ್ಟ್ -ಹಾಲು, ಮೊಸರು ಕಳ್ಳತನ

    ಕಾರವಾರ: ಬೆಳ್ಳಿ, ಬಂಗಾರ, ನಗನಾಣ್ಯಗಳ ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೋರ್ವ ಭೂಪ ಬೆಳಗ್ಗೆ ಮಾರಾಟಕ್ಕೆ ಇಳಿಸಿದ್ದ ಹಾಲು, ಮೊಸರು, ಮಜ್ಜಿಗೆಯನ್ನೂ ಕಳ್ಳತನ ಮಾಡಿದ್ದಾನೆ. ಈ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸ್ ಬಳಿಯ ಗೀತಾ ಕೊಲ್ಡ್ರಿಂಕ್ಸ್ ಅಂಗಡಿಯಲ್ಲಿ ಇಂತಹದೊಂದು ಕಳ್ಳತನ ನಡೆದಿದೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ವ್ಯಕ್ತಿ ಬೆಳಗಿನ ಜಾವ 4 ಗಂಟೆಗೆ ಬಂದು ಅಂಗಡಿ ಎದುರು ಇರಿಸಿದ್ದ ಹಾಲು, ಮೊಸರು, ಮಜ್ಜಿಗೆ ಪ್ಯಾಕೇಟ್ ಗಳನ್ನು ಕಳ್ಳತನ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಒಂದೆರಡು ಹಾಲಿನ ಪ್ಯಾಕೇಟ್ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತವೆ ಆದರೆ ಈ ಬಾರಿ ಅತಿ ಹೆಚ್ಚಿನ ಮೊತ್ತದ ಹಾಲು ಕದ್ದಿದ್ದಾರೆ ಎಂದು ಅಂಗಡಿ ಮಾಲೀಕ ಚಂದ್ರಕಾಂತ್ ಹೇಳುತ್ತಾರೆ. ಒಂದೇ ವಾರದಲ್ಲಿ ಎರಡು ಬಾರಿ ಕಳ್ಳತನವಾಗಿದೆ. ಕಳ್ಳತನ ನಡೆಸಿದ ವ್ಯಕ್ತಿ ಅಪರಿಚಿತನಾಗಿದ್ದು, ಈತನ ಮುಖಚಹರೆಯ ಬಗ್ಗೆ ಸ್ಥಳೀಯರಿಗೂ ಮಾಹಿತಿ ಇಲ್ಲ. ಇದೀಗ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.