ಕೊಪ್ಪಳ: ಸರ್ಕಾರದ ಆದೇಶವನ್ನು ಉಲ್ಲೇಂಘಿಸಿದಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಪುತ್ರ ಝೈದ್ ಖಾನ್ (Zaid Khan) ಮತ್ತು ರಚಿತಾ ರಾಮ್ (Rachita Ram) ಅಭಿನಯದ ಕಲ್ಟ್ (Cult) ಸಿನಿಮಾದ ಶೂಟಿಂಗ್‌ಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು ಚಿತ್ರೀಕರಣ ಸ್ಥಗಿತಗೊಂಡಿದೆ.
ಕಳೆದ ಕೆಲ ದಿನಗಳಿಂದ ಕಲ್ಟ್ ಚಿತ್ರ ತಂಡವು ಹಂಪಿ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಅದೇ ರೀತಿಯಾಗಿ ತಾಲೂಕಿನ ರಂಗಾಪೂರ, ಸಣಾಪೂರ ಕೆರೆ ಭಾಗದಲ್ಲಿ ಚಿತ್ರೀಕರಣಕ್ಕೆ ಸೆಟ್ ಹಾಕಿತ್ತು.
ಸಣಾಪೂರ ಗ್ರಾಮದ ತುಂಗಭದ್ರಾ ನದಿ (Tungabhadra River) ದಡದಲ್ಲಿ ಬೆಂಕಿ ಹಚ್ಚಿ ಚಿತ್ರೀಕರಣ ಮಾಡಲು ಮುಂದಾಗಿದೆ. ಅನುಮತಿ ಪಡೆಯದೇ ಶೂಟಿಂಗ್‌ಗೆ ಮುಂದಾಗಿದ್ದಕ್ಕೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ತಡೆ ನೀಡಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ
ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಂಡಿದ್ದ ಸ್ಥಳ ಅರಣ್ಯ ಪ್ರದೇಶ ಹಾಗೂ ನೀರುನಾಯಿ ಸಂರಕ್ಷಿತ ಪ್ರದೇಶವಾಗಿರುವ ಕಾರಣ ಅರಣ್ಯ ಇಲಾಖೆ ಚಿತ್ರೀಕರಣವನ್ನು ತಡೆ ಹಿಡಿದಿದೆ.
ಪರವಾನಿಗೆ ಪಡೆದ ನಂತರ ಚಿತ್ರೀಕರಣ ಮಾಡಲು ಅವಕಾಶ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕಲ್ಟ್ ಚಿತ್ರ ತಂಡಕ್ಕೆ ಸೂಚನೆಯನ್ನು ನೀಡಿದ್ದಾರೆ.
ಅರಣ್ಯ (Forest) ಪ್ರದೇಶದಲ್ಲಿ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ (Shooting) ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಪ್ರಕಟಿಸಿದೆ.
ಬೆಂಗಳೂರು: ಕಲ್ಟ್ ಚಿತ್ರತಂಡದ (Cult Cinema Team) ಯಡವಟ್ಟಿನಿಂದಾಗಿ ಸಚಿವ ಜಮೀರ್ ಅಹ್ಮದ್ ಪುತ್ರ ಹಾಗೂ ಚಿತ್ರನಟ ಜೈದ್ ಖಾನ್ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ (Magadi Police Station) ದೂರು ದಾಖಲಾಗಿದೆ.
ಏನಿದು ಪ್ರಕರಣ?
ಇದೇ ತಿಂಗಳ ನ.25ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರತಂಡ ಶೂಟಿಂಗ್ ನಡೆಸುತ್ತಿತ್ತು. ಕಲ್ಟ್ ಚಿತ್ರಕ್ಕೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ (Drone Technician) ಆಗಿ ಕೆಲಸ ಮಾಡುತ್ತಿದ್ದರು. ಹಲವು ಸಿನಿಮಾಗಳಿಗೆ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿರುವ ಸಂತೋಷ್ ಸ್ವಂತವಾಗಿ ಡ್ರೋನ್ ಹೊಂದಿದ್ದರು. 25 ಲಕ್ಷ ರೂ. ಸಾಲಸೋಲ ಮಾಡಿ ಡ್ರೋನ್ ಖರೀದಿಸಿದ್ದ ಸಂತೋಷ್ ಸಿನಿಮಾ ಶೂಟಿಂಗ್‌ಗಾಗಿ ದಿನಕ್ಕೆ 25,000 ರೂ. ಚಾರ್ಜ್ ಮಾಡುತ್ತಿದ್ದರು. ಇದನ್ನೂ ಓದಿ: ವಿಶೇಷ ಚೇತನರ ಅನುದಾನಕ್ಕೂ ಸರ್ಕಾರ ಕೊಕ್ಕೆ – 80% ರಷ್ಟು ಅನುದಾನ ಕಡಿತ ಆರೋಪ!
ಮಾರ್ಟಿನ್, ಯುವ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್, ಕಲ್ಟ್ ಚಿತ್ರಕ್ಕೂ ಶೂಟಿಂಗ್ ಮಾಡುವ ಕೆಲಸಕ್ಕೆ ಒಪ್ಪಿಕೊಂಡಿದ್ದರು. ಡ್ರೋನ್‌ನಲ್ಲಿ ಚಿತ್ರೀಕರಣ ಮಾಡುವುದು ರಿಸ್ಕ್ ಇದೆ ಅಂತ ಎಚ್ಚರಿಕೆ ಕೊಟ್ಟಿದ್ದರೂ ನಿರ್ದೇಶಕ ಮಾಡಲೇಬೇಕು ಎಂದು ಒತ್ತಾಯ ಮಾಡಿದ್ರು ಎನ್ನಲಾಗಿದೆ. ಶೂಟಿಂಗ್ ವೇಳೆ ಡ್ರೋನ್ ವಿಂಡ್ ಫ್ಯಾನ್‌ಗೆ ಟಚ್ ಆಗಿ ಪೀಸ್ ಪೀಸ್ ಆಗಿತ್ತು. ಇದಾದ ಬಳಿಕ ಸಂತೋಷ್‌ಗೆ ಕೊಂಚವೂ ನಷ್ಟ ಕಟ್ಟಿಕೊಡದ ಚಿತ್ರತಂಡ ಕಲ್ಟ್ ಚಿತ್ರವನ್ನ ಸಚಿವ ಜಮೀರ್ ಪುತ್ರ ಜೈದ್ ನಿರ್ಮಾಣ ಮಾಡುತ್ತಿದ್ರು. ಹೀಗಾಗಿ ಸಂತೋಷ್ ಜೈದ್ ಬಳಿಯೇ ಪರಿಹಾರ ನೀಡುವಂತೆ ಕೇಳಿಕೊಂಡಿದ್ದ. ಆದ್ರೆ ಸಂತೋಷ್ ಬಳಿ ವೈಟ್ ಪೇಪರ್ ಮೇಲೆ ಜಮೀರ್ ಪುತ್ರ ಜೈದ್ ಸಹಿ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದೂವರೆ ಲಕ್ಷ ರೂ. ಮೌಲ್ಯದ ಫುಟೇಜ್ ರೆಕಾರ್ಡಿಂಗ್ ಆಗಿದ್ದ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ, ಆಧಾರ್ ಕಾರ್ಡ್ ನಂಬರ್ ಸಹ ಬರೆಸಿಕೊಂಡು ಅವಮಾನ ಮಾಡಿದ್ದಾರೆ. ಇದರಿಂದ ಮನನೊಂದು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಘಟನೆ ಬಳಿಕ ಸಂತೋಷ್ ಸಹೋದರಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾದರು. ಆದ್ರೆ ಪೊಲೀಸರು ದೂರು ಸ್ವೀಕರಿಸದೇ ವಾಪಸ್ ಕಳುಹಿಸಿದ್ದರು ಅನ್ನೋ ಆರೋಪವೂ ಇದೆ. ನಂತರ ಆಸ್ಪತ್ರೆಯ ಮೇಮೊ ಮೇಲೆ ಎನ್‌ಸಿಆರ್ ದಾಖಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ʻಕಲ್ಟ್ʼ ಚಿತ್ರತಂಡವನ್ನ ಸಂಪರ್ಕಿಸಿದ್ದಾರೆ. ಘಟನೆ ಸಂಬಂಧ ಸಿನಿಮಾ ನಿರ್ದೇಶಕನಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಒಂದು ದೇಶ, ಒಂದು ಚಂದಾದಾರಿಕೆ – ಏನಿದು ಯೋಜನೆ? ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನಗಳೇನು?
ಸಂಜು ವೆಡ್ಸ್ ಗೀತಾ 2 ಸಿನಿಮಾ ಮುಗಿಯುತ್ತಿದ್ದಂತೆಯೇ ರಚಿತಾ ರಾಮ್ ತಮ್ಮ ಫ್ಯಾನ್ಸ್ ಗೆ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ (Zaid Khan) ನಟನೆಯ ಹೊಸ ಸಿನಿಮಾಗೆ ರಚಿತಾ ರಾಮ್ (Rachita Ram) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ಝೈದ್ ಖಾನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಬಹಿರಂಗ ಪಡಿಸಿದ್ದಾರೆ.
ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ರಚಿತಾ ರಾಮ್ ಇದೀಗ ಇನ್ನೊಂದು ನಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. `ಕಲ್ಟ್’ ಸಿನಿಮಾ ತಂಡಕ್ಕೆ ರಚಿತಾ ರಾಮ್ ಸೇರಿಕೊಂಡಿದ್ದಾರೆ. ಈ ವಿಚಾರ ಆಫಿಷಿಯಲ್ ಘೋಷಣೆಯಾಗಿದೆ. ಕಲ್ಟ್ ಇದು ಝೈದ್ ಖಾನ್ ಅಭಿನಯದ ಎರಡನೇ ಚಿತ್ರ. ಬನಾರಸ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಝೈದ್ ಖಾನ್ ಇದೀಗ ಕಲ್ಟ್ (Cult) ಶೀರ್ಷಿಕೆಯಡಿ ಚಿತ್ರ ಮಾಡುತ್ತಿದ್ದಾರೆ. ಝೈದ್‌ಗೆ ಜೋಡಿಯಾಗಿ ರಚಿತಾ ರಾಮ್ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಅನಿಲ್ ಕುಮಾರ್ ನಿರ್ದೇಶಿಸುತ್ತಿರುವ `ಕಲ್ಟ್’ ಚಿತ್ರ ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ವೈರಲ್ ಆಗಿತ್ತು. ಇದೀಗ ಝೈದ್‌ಖಾನ್ ಅವರ `ಬ್ಲಡ್ಡೀ ಲವ್’ಗೆ ಬಣ್ಣ ಹಚ್ಚುತ್ತಿದ್ದಾರೆ ರಚಿತಾ. ಮ್ಯಾಟ್ನಿ ಬಳಿಕ ರಚಿತಾ ಒಪ್ಪಿಕೊಂಡ ನಯಾ ಪ್ರಾಜೆಕ್ಟ್ ಇದು. ಇದೀಗ ಕಲ್ಟ್ಗೆ ನಾಯಕಿಯಾಗೋದ್ರ ಮೂಲಕ ದಶಕದಿಂದ ಬೇಡಿಕೆ ಉಳಿಸಿಕೊಂಡಿರುವ ಸ್ಯಾಂಡಲ್‌ವುಡ್ ನಟಿ ಎಂಬ ಹೆಗ್ಗಳಿಕೆ ರಚಿತಾ ಪಾಲಾಗುತ್ತೆ.
ಸ್ಟಾರ್ ನಟರು-ಯುವ ನಟರಿಗೂ ಜೋಡಿಯಾಗಿ ಹೊಂದಿಕೆಯಾಗುವ ರಚಿತಾ ಇದೀಗ ವಿಭಿನ್ನ ಕಥೆಯ ಚಿತ್ರದಲ್ಲಿ ಝೈದ್‌ಗೆ ಜೋಡಿಯಾಗಿದ್ದಾರೆ. ಕಲ್ಟ್ ಚಿತ್ರ ಆ್ಯಕ್ಷನ್ ರೊಮ್ಯಾಂಟಿಕ್ ಜಾನರ್ ಚಿತ್ರವಾಗಿದ್ದು ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಒಂದೊಂದಾಗೇ ಹೊರಬೀಳಲಿದೆ.
ಬನಾರಸ್ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಝೈದ್ ಖಾನ್ (Zaid Khan) ಹಾಗೂ ಈ ವರ್ಷದ ಮೊದಲ ಹಿಟ್ ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ (Anil Kumar) ಕಾಂಬಿನೇಶನ್ ನಲ್ಲಿ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಈ ಚಿತ್ರಕ್ಕೆ ಕಲ್ಟ್ (Cult) ಎಂದು ಹೆಸರಿಡಲಾಗಿದೆ.
ಝೈದ್ ಖಾನ್ ನಟನೆಯ ಎರಡನೇ ಚಿತ್ರ ಇದಾಗಿದ್ದು, ಶೀರ್ಷಿಕೆ (Title) ಅರ್ಥದ ಬಗ್ಗೆ ಈಗಿನಿಂದಲೇ ಕುತೂಹಲ ಮೂಡಿಸಿದೆ. ಮೊನ್ನೆಯಷ್ಟೇ ಈ ಚಿತ್ರದ ಕುರಿತಂತೆ ಪೋಸ್ಟರ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಪೋಸ್ಟರ್ ನಲ್ಲೇ ಚಿತ್ರದ ಕುರಿತಂತೆ ಕುತೂಹಲ ಮೂಡಿಸಿತ್ತು.
ಇಂದು ಅನಾವರಣವಾಗಿರುವ ಟೈಟಲ್ ಪೋಸ್ಟರ್ ಬಗ್ಗೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಶೀರ್ಷಿಕೆ ಮತ್ತು ಅದಕ್ಕೆ ಬಳಸಿರುವಂಥ ಫೋಟೋ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಹೆಣ್ಣಿನ ಕಾಲುಗಳನ್ನು ಬಳಸಿಕೊಂಡು ಸಿಗರೇಟು ಸೇದುವಂತಹ ಕಲ್ಪನೆಗೆ ನಾನಾ ಅರ್ಥ ಕಲ್ಪಿಸಲಾಗುತ್ತಿದೆ.
ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.