Tag: Cubs

  • ಮಂಗ್ಳೂರಿನಲ್ಲಿ 1 ಹೆಣ್ಣು 4 ಗಂಡು ಮರಿಗಳಿಗೆ ಜನ್ಮ ನೀಡಿದ ಹುಲಿ

    ಮಂಗ್ಳೂರಿನಲ್ಲಿ 1 ಹೆಣ್ಣು 4 ಗಂಡು ಮರಿಗಳಿಗೆ ಜನ್ಮ ನೀಡಿದ ಹುಲಿ

    ಮಂಗಳೂರು: ಜಗತ್ತಿನಾದ್ಯಂತ ಹುಲಿಗಳ ಸಂತತಿ ಅವನತಿಯ ಹಾದಿಯಲ್ಲಿದ್ದರೆ, ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಮಾತ್ರ ಹುಲಿಗಳು ಸದ್ದು ಮಾಡಲಾರಂಭಿಸಿವೆ.

    ಹೆಣ್ಣು ಹುಲಿಯೊಂದು ಒಮ್ಮೆಲೇ ಐದು ಮರಿಗಳಿಗೆ ಜನ್ಮ ನೀಡಿದ್ದು ಪಿಲಿಕುಳದಲ್ಲಿ ಹುಲಿ ಮರಿಗಳ ನಲಿದಾಟ ಆಕರ್ಷಣೆ ಹುಟ್ಟಿಸಿದೆ. ಈವರೆಗೆ 13 ಇದ್ದ ಹುಲಿಗಳ ಸಂಖ್ಯೆ ಈಗ 18 ಕ್ಕೇರಿದ್ದು ನಿಸರ್ಗಧಾಮದ ಹಿರಿಮೆ ಹೆಚ್ಚಿಸಿದೆ. ಪುಟಾಣಿ ಮರಿಗಳು ತಾಯಿ ಹುಲಿ ರಾಣಿಯ ಜೊತೆ ಆಟವಾಡುತ್ತಾ ಕೃತಕ ಕಾಡಿನಲ್ಲಿ ಅಡ್ಡಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಇದನ್ನು ಓದಿ: ಪಿಲಿಕುಳದಲ್ಲಿ ಐದು ಮರಿಗಳ ಜನನ- ಮತ್ತೆ ಅಗ್ರಸ್ಥಾನಕ್ಕೇರಿದ ಕರ್ನಾಟಕ

    ಈಗ ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮರಿಯಾಗಿದ್ದು ಪಿಲಿಕುಳದಲ್ಲಿ ಹೊಸ ಸಂಭ್ರಮ ಮನೆಮಾಡಿದೆ. ಪಿಲಿಕುಳದಲ್ಲಿ ಹೆಚ್ಚಿನ ಪ್ರಾಣಿಗಳನ್ನು ವಿವಿಧ ಕಂಪನಿಗಳು ದತ್ತು ಪಡೆದಿದ್ದು ಅವುಗಳ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿದೆ. ಹೀಗಾಗಿ ವಿವಿಧ ರೀತಿಯ ಅಪರೂಪದ ಕಾಡು ಪ್ರಾಣಿಗಳನ್ನು ಪಿಲಿಕುಳದಲ್ಲಿ ಸಂರಕ್ಷಿಸಲಾಗಿದ್ದು ಸಂತತಿ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಇಲ್ಲಿ ಹೆಚ್ಚುವರಿಯಾದ ಪ್ರಾಣಿಗಳನ್ನು ದೇಶದ ವಿವಿಧ ಮೃಗಾಲಯಗಳಿಗೆ ಎರವಲು ನೀಡಲಾಗುತ್ತಿದೆ.