Tag: Cubbon Park Police Station

  • Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

    Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕ್ಟರಿ ಸೆಲೆಬ್ರೇಷನ್ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದಾರೆ. ಈ ಪ್ರಕರಣದ (Chinnaswamy Stampede Case) ತನಿಖೆ ನಡೆಸಿರುವ ಇದೀಗ ಯುಡಿಆರ್ ಬದಲಿಗೆ ಎಫ್‌ಐಆರ್‌ (FIR) ದಾಖಲಿಸಿದ್ದಾರೆ.

    ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಇವೆಂಟ್ ಮ್ಯಾನೇನ್ಮೆಂಟ್‌ ಸಂಸ್ಥೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ 105 (ಮಾನವ ನರಹತ್ಯೆ), BNS 106, 118(1), 118(2), 190, 132, 125A,125(B) ಅಡಿಯಲ್ಲಿ ಕೇಸ್ ದಾಖಲು ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಡ್ಯ | ಮದ್ವೆಗೆ ಹುಡುಗಿ ನೋಡಿಕೊಂಡು ಬೆಂಗಳೂರಿಗೆ ಹೋದವನು ಮನೆಗೆ ಹಿಂತಿರುಗಿದ್ದು ಶವವಾಗಿ…

    ಈ ಮೊದಲು ಯುಡಿಆರ್‌ (UDR) ದಾಖಲಿಸಲಾಗಿತ್ತು, ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಬಗ್ಗೆ ʻಪಬ್ಲಿಕ್‌ ಟಿವಿʼ ಪ್ರಶ್ನೆ ಮಾಡಿತ್ತು. ಯುಡಿಆರ್ ಅಂದ್ರೆ, ಅನ್ ನ್ಯಾಚುರಲ್ ಡೆತ್ ರಿಪೋರ್ಟ್ (ಅಸಹಜ ಸಾವಿನ ವರದಿ) ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ ಇಲಾಖೆ ಎಫ್‌ಐಆರ್‌ ದಾಖಲಿಸಿದೆ. ಇದನ್ನೂ ಓದಿ: ಜಮೀರ್ ಮಗ, ರಿಜ್ವಾನ್ ಮಗ, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಿದ್ರಾ: ಸರ್ಕಾರದ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    ಅನುಮಾನ ಮೂಡಲು ಮೂರು ಕಾರಣ
    ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು (KSCA) ಹೊಣೆಗಾರರನ್ನಾಗಿ ಮಾಡಿಲ್ಲ. ಪೊಲೀಸ್ ಇಲಾಖೆಯ ಅನುಮತಿ ಪಡೆಯದೇ ಸಾಮಾಜಿಕ ಜಾಲತಾಣದಲ್ಲಿ ಇವತ್ತು (ಜೂ. 4) ಆರ್‌ಸಿಬಿ ತಂಡದ ವಿಕ್ಟರಿ ಪರೇಡ್ ಇದೆ ಅಂತ ಪ್ರಕಟಣೆ ನೀಡಿ, ಆ ಮೂಲಕ ಲಕ್ಷಾಂತರ ಜನರು ಜಮಾವಣೆಯಾಗಲು ನೇರ ಕಾರಣವಾಗಿರುವ ಆರ್‌ಸಿಬಿ ಮ್ಯಾನೇಜ್ ಮೆಂಟ್ ಅನ್ನು ಹೊಣೆಗಾರರನ್ನಾಗಿಸಿಲ್ಲ. ಇನ್ನು, ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದ ಡಿಎನ್ಎ ಇವೆಂಟ್ ಮ್ಯಾನೇಜ್ ಮೆಟ್ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: Stampede Case | ಮೃತಪಟ್ಟ 11 ಸಂತ್ರಸ್ತರ ಕುಟುಂಬಗಳಿಗೆ RCB ಆಡಳಿತ ಮಂಡಳಿಯಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು. ಇವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು. ಇದನ್ನೂ ಓದಿ: ಮಗಳಿಗೆ ಮದುವೆ ಮಾಡಲು ಯೋಜಿಸಿದ್ದೆವು, ನಮ್ಮ ಕಷ್ಟ ಯಾವ ತಂದೆ-ತಾಯಿಗೂ ಬೇಡ: ಮೃತ ಟೆಕ್ಕಿ ತಂದೆ ಕಣ್ಣೀರು

    ಇವತ್ತು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್‌ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

  • ಕುಮಾರಸ್ವಾಮಿಯವರ ಹೇಳಿಕೆ ಸ್ವಾಗತಿಸುತ್ತೇನೆ: ದಿನೇಶ್ ಕಲ್ಲಹಳ್ಳಿ

    ಕುಮಾರಸ್ವಾಮಿಯವರ ಹೇಳಿಕೆ ಸ್ವಾಗತಿಸುತ್ತೇನೆ: ದಿನೇಶ್ ಕಲ್ಲಹಳ್ಳಿ

    ಬೆಂಗಳೂರು: ನಾನು ಕುಮಾರಸ್ವಾಮಿಯವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ಯಾರು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೋ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ದಿನೇಶ್ ಕಲ್ಲಹಳ್ಳಿಯವರು ಹೇಳಿದ್ದಾರೆ.

    ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ವೈಯಕ್ತಿಕವಾಗಿ ಯಾವುದೇ ಭದ್ರತೆ ನೀಡಿರಲಿಲ್ಲ, ಕೇವಲ ಮನೆಗೆ ಮಾತ್ರ ಭದ್ರತೆ ನೀಡಿದ್ದರು. ಆದರೆ ಇಂದು ಭದ್ರತೆ ಒದಗಿಸಿದ್ದಾರೆ ಹಾಗಾಗಿ ತನಿಖೆಗೆ ಸಹಕಾರ ನೀಡುವ ಸಲುವಾಗಿ ವಿಚಾರಣೆಗೆಂದು ಠಾಣೆಗೆ ಬಂದಿದ್ದೇನೆ ಎಂದರು.

    ನಾನು ಕುಮಾರಸ್ವಾಮಿಯವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಯಾರು ಬ್ಲಾಕ್‍ಮೇಲ್ ಮಾಡುತ್ತಿದ್ದರೋ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ತಿಳಿಸಿದರು. ಇನ್ನೂ ಸಂತ್ರಸ್ತೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಬಂದ ಮಾಹಿತಿಯನ್ನು ಪಡೆದು ದೂರು ಉಲ್ಲೇಖಿಸಿದ್ದೇನೆ. ಪೊಲೀಸ್ ಇಲಾಖೆಯವರು ತನಿಖೆ ಮಾಡಿ ಉಳಿದ ಮಾಹಿತಿಯನ್ನು ಪತ್ತೆ ಮಾಡಬೇಕು. ಈಗಾಗಲೇ ಎಲ್ಲವನ್ನು ದೂರಿನಲ್ಲಿ ಸ್ಪಷ್ಟವಾಗಿ ತಿಳಿಸಿಲಾಗಿದೆ. ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಹೇಳಿದರು

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸಿನವರು ಉತ್ತಮವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆ ಪೂರಕವಾಗಿ ಏನು ನೀಡಬೇಕೆಂದು ನಂತರ ನಾನು ತಿಳಿಸುತ್ತೇನೆ ಎಂದು ನುಡಿದರು.

  • ಶಾಸಕ ಹ್ಯಾರಿಸ್ ಮಗನಿಂದ ಹಲ್ಲೆ ಪ್ರಕರಣ- ಹಲ್ಲೆಗೊಳಗಾದ ಯುವಕನ ಮೇಲೂ ಎಫ್‍ಐಆರ್

    ಶಾಸಕ ಹ್ಯಾರಿಸ್ ಮಗನಿಂದ ಹಲ್ಲೆ ಪ್ರಕರಣ- ಹಲ್ಲೆಗೊಳಗಾದ ಯುವಕನ ಮೇಲೂ ಎಫ್‍ಐಆರ್

    ಬೆಂಗಳೂರು: ಶಾಂತಿನಗರ ಎಂಎಲ್‍ಎ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ಇದೀಗ ಹಲ್ಲೆಗೊಳಗಾದ ವಿದ್ವತ್ ಮೇಲೆಯೂ ಪೊಲೀಸರು ಎಫ್‍ಐ ಆರ್ ದಾಖಲಿಸಿದ್ದಾರೆ.

    ಯುವಕನ ಮೇಲೆ ಕಬ್ಬನ್‍ಪಾರ್ಕ್ ಪೊಲೀಸರು ಎಫ್‍ಐಆರ್ ದಾಖಲು ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಫೆ.17ರಂದು ವಿದ್ವತ್ ತನ್ನ ಸ್ನೇಹಿತರೊಂದಿಗೆ ಊಟ ಮಾಡಲು ಬಂದಿದ್ದರು. ಈ ವೇಳೆ ವಿದ್ವತ್ ಕಾಲು ನಾಲಪ್ಪಾಡ್ ಸ್ನೇಹಿತನಿಗೆ ತಗುಲಿದ್ದಕ್ಕೆ ಜಗಳವಾಗಿತ್ತು. ಜಗಳದ ಸಮಯದಲ್ಲಿ ನಾನು ಯಾರು ಗೊತ್ತಾ..? ನನ್ನನ್ನು ಕೇಳಲು ನೀನು ಯಾರು ನನ್ನಪ್ಪ ಯಾರು ಗೊತ್ತಾ ಎಂದು ವಿದ್ವತ್ ಪ್ರಶ್ನಿಸಿದ್ದರು. ಅಲ್ಲದೇ ವಿದ್ವತ್ ಹಾಗೂ ಸ್ನೇಹಿತರು ಏಕಾಏಕಿ ಅರುಣ್ ಬಾಬು ಮೇಲೆ ಹಲ್ಲೆ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ಕೂಡ ನಿಂದನೆ ಮತ್ತು ಜೀವ ಬೆದರಿಕೆ ಆರೋಪ ಮಾಡಲಾಗಿದೆ.

    ಉದ್ಯಮಿ ಲೋಕಿ ಅಲಿಯಾಸ್ ಲೋಕನಾಥನ್ ಪುತ್ರ ವಿದ್ವತ್, ಅತಿಯಾಗಿ ಕುಡಿದಿದ್ದರಿಂದ ಸ್ವತಃ ಬಿದ್ದು ಮುಖಕ್ಕೆ ಗಾಯವಾಗಿದೆ ಎಂದು ಅರುಣ್ ಬಾಬು ದೂರು ನೀಡಿದ್ದರು. ಆದ್ರೆ ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ವೈದ್ಯಕೀಯ ತಪಾಸಣೆ ನಡೆಸಿರೋ ವೈದ್ಯರು, ವಿದ್ವತ್ ಮದ್ಯ ಸೇವನೆ ಮಾಡಿಲ್ಲ ಎಂದು ಹೇಳಿದ್ದರು.

    ಸದ್ಯ ಪ್ರಕರಣ ಸಂಬಂಧಿಸಿದಂತೆ ಎ1 ಆರೋಪಿ ಮಹಮ್ಮದ್ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದು, ಈತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಎಲ್ಲಿದ್ದ ನಲಪಾಡ್?: ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಸಂಬಂಧ ಕೇಸ್ ದಾಖಲಾಗುತ್ತಿದ್ದಂತೆ ನಲಪಾಡ್ ಎಸ್ಕೇಪ್ ಆಗಿದ್ದು, ಕಬ್ಬನ್‍ಪಾರ್ಕ್ ಠಾಣೆ ಕೂಗಳತೆಯಲ್ಲೇ ಅಡಗಿಕೊಂಡಿದ್ದನು. ಯುಬಿ ಸಿಟಿ ಪಕ್ಕದಲ್ಲಿರುವ ಐಷಾರಾಮಿ 7 ಸ್ಟಾರ್ ಹೋಟೆಲ್‍ನ ರೂಂ ನಂಬರ್ 882 ನಲ್ಲಿ ಯಾವುದೇ ಭಯವಿಲ್ಲದೇ ಪಾರ್ಟಿಯೊಂದಲ್ಲಿ ಪಾಲ್ಗೊಂಡಿದ್ದನು. ಇದೀಗ ಅಪ್ಪ ಮಾಧ್ಯಮದ ಮುಂದೆ ಮಾತನಾಡಿದ ಕೇವಲ ಒಂದು ಗಂಟೆಯಲ್ಲಿಯೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿರೋ ನಲಪಾಡ್ ವಿರುದ್ಧ ಸೆಕ್ಷನ್ 307 ಅಡಿ (ಕೊಲೆ ಯತ್ನ) ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂದು ಆರೋಪಿ ನಲಪಾಡ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.