Tag: Cubbon Park Police

  • ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

    ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

    ಬೆಂಗಳೂರು: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ.

    ಪ್ರತ್ಯೇಕ ಸ್ಥಳ ಮೀಸಲಿಡದೆ ಧೂಮಪಾನಕ್ಕೆ ಅವಕಾಶ ನೀಡಿದ್ದಕ್ಕಾಗಿ ಬೆಂಗಳೂರಿನ (Bengaluru) ಕಸ್ತೂರ್‌ಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಬಾರ್ & ರೆಸ್ಟೋರೆಂಟ್‌ನ (One 8 Commune Restro-Bar) ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Mysuru | 60 ಗ್ರಾಂ ಚಿನ್ನ ಕದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ

    ಮೇ 29ರಂದು ಕಬ್ಬನ್ ಪಾರ್ಕ್ ಪೊಲೀಸರು (Cubbon Park Police)  ಬಾರ್ ಮೇಲೆ ದಾಳಿ ಮಾಡಿ, ಸ್ವಯಂಪ್ರೇರಿತವಾಗಿ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದರು. ಇದೀಗ ನ್ಯಾಯಾಲಯದ ಅನುಮತಿ ಪಡೆದು, ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದಕ್ಕೂ ಮುನ್ನ 2024ರ ಜುಲೈನಲ್ಲಿ ಇದೇ ಬಾರ್ ಮೇಲೆ ಅವಧಿ ಮೀರಿ ಪಬ್ ನಡೆಸುತ್ತಿದ್ದರು ಎಂದು ದೂರು ದಾಖಲಾಗಿತ್ತು. ಜು.6 ರಂದು ರಾತ್ರಿ 1:20ರವರೆಗೆ ಪಬ್ ತೆರೆದಿತ್ತು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರುವುದಾಗಿ ಮಾಹಿತಿ ಇತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವಧಿ ಮುಗಿದಿದ್ದರೂ ಗ್ರಾಹಕರು ಇದ್ದರು. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಇದನ್ನೂ ಓದಿ: ಚಪ್ಪಲಿಯಿಂದ ಹೊಡೆದ ಪ್ರಕರಣ – ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ

  • ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

    ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

    – ಲೈಕ್ಸ್, ವೀವ್ಸ್‌ಗಾಗಿ ಹುಚ್ಚಾಟ, ಮ್ಯಾಚ್ ನೋಡೋ ಭಾಗ್ಯ ಕಳಕೊಂಡ ಯುವಕ

    ಬೆಂಗಳೂರು: ಶನಿವಾರ ಬೆಂಗಳೂರಿನ(Bengaluru) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(Chinnaswamy Stadium) ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯಲಿದ್ದು, ಇಲ್ಲೊಬ್ಬ ಯುವಕ ಮ್ಯಾಚ್ ವೇಳೆ ಸ್ಟೇಡಿಯಂ ನುಗ್ತೀನಿ ಎಂದು ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾಗಿದ್ದಾನೆ.

    ಇಂದು ಬೆಂಗಳೂರಿನಲ್ಲಿ ನಡೆಯುವ ಆರ್‌ಸಿಬಿ ವರ್ಸಸ್ ಕೆಕೆಆರ್ ಪಂದ್ಯದಲ್ಲಿ ಗ್ರೌಂಡ್‌ಗೆ ನುಗ್ತೀನಿ ಎಂದು ಕಬ್ಜ ಶರಣ್ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಶರಣ್ ವೀಡಿಯೋ ಪೋಸ್ಟ್ ಹಾಕಿದ್ದ. ಅಲ್ಲದೇ ಗ್ರೌಂಡ್ ಒಳಗೆ ಹೋಗಿ ವಿರಾಟ್ ಕೊಹ್ಲಿನ(Virat Kohli) ಹಗ್ ಮಾಡ್ತೀನಿ ಅಂತಾನೂ ಚಾಲೆಂಜ್ ಹಾಕಿದ್ದ. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅನುಮಾನ ಸೇನೆ ಬಗ್ಗೆ ಅಲ್ಲ, ಬಿಜೆಪಿ ನಾಯಕರ ಬಗ್ಗೆ: ರಾಮಲಿಂಗಾ ರೆಡ್ಡಿ

    ಶರಣ್ ವಿಡಿಯೋ ವೈರಲ್ ಆಗ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸರು(Cubbon Park Police) ಠಾಣೆಗೆ ಕರೆಸಿ ವೀಡಿಯೋ ಡಿಲೀಟ್ ಮಾಡಿಸಿದ್ದರು. ಇಂದು ಮ್ಯಾಚ್ ಇರೋ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಶರಣ್‌ನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪಾಕ್‌ ಏಜೆಂಟರ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ: ರವಿಕುಮಾರ್ ಕಿಡಿ

    ಇನ್ಸ್ಟಾಗ್ರಾಂ ಲೈಕ್ಸ್ ಹಾಗೂ ವೀವ್ಸ್‌ಗಾಗಿ ಹುಚ್ಚಾಟ ಮಾಡಿದ್ದ ಯುವಕನಿಗೆ ಪೊಲೀಸರ ತಕ್ಕ ಪಾಠ ಕಲಿಸಿದ್ದು, ಸ್ಟೇಡಿಯಂ ನುಗ್ತೀನಿ ಅಂದವನಿಗೆ ಮ್ಯಾಚ್ ನೋಡೋ ಭಾಗ್ಯವೂ ಇಲ್ಲವಾಗಿದೆ. ಇದೀಗ ತಪ್ಪಾಯ್ತು ಎಂದು ವೀಡಿಯೋ ಮಾಡಿರುವ ಶರಣ್, ಇವತ್ತು ಮ್ಯಾಚ್ ಮುಗಿಯುವರೆಗೆ ಠಾಣೆಯಲ್ಲಿ ಇರ್ತಿನಿ ಅಂತಾ ಸ್ಟೋರಿ ಹಾಕಿದ್ದಾನೆ. ಇದನ್ನೂ ಓದಿ: ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು

    ಇನ್ಸ್ಟಾಗ್ರಾಂನಲ್ಲಿ 1 ಲಕ್ಷ ಫಾಲೋವರ್ಸ್‌ಗಾಗಿ ಹುಚ್ಚಾಟದ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದ ಯುವಕ, ಇಂದು ನಡೆಯುವ ಆರ್‌ಸಿಬಿ(RCB) ಪಂದ್ಯ ನೋಡಲಾಗದೇ ಪರಿತಪಿಸುತ್ತಿದ್ದಾನೆ.

  • ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ

    ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ

    ಬೆಂಗಳೂರು: ಹದಿನಾರನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯ ಐದು ಪಂದ್ಯಗಳನ್ನು ಸೋತು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಕಿಟ್ ಕೂಡ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಅದರಲ್ಲೂ ತಂಡದ ಎಲ್ಲಾ ಆಟಗಾರರಿಗೆ ಹೊಸ ಕಿಟ್‍ನೊಂದಿಗೆ ಏ.20ರ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ತನ್ನ ಮೊದಲ ಗೆಲುವನ್ನು ಸಂಭ್ರಮಿಸಿತ್ತು. ಆದರೆ ಇದೀಗ ಡೆಲ್ಲಿ ತಂಡ ಸಂಭ್ರಮ ದುಪ್ಪಟ್ಟಾಗಿದೆ. ಕಳುವಾಗಿದ್ದ ಬ್ಯಾಟ್‍ಗಳು ಮತ್ತು ಕಿಟ್‍ಗಳನ್ನು ಪತ್ತೆ ಮಾಡುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು (Cubbon Park Police) ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

    ಕಿಟ್ ಪತ್ತೆಯಾದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಅಧಿಕೃತ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕಳ್ಳರನ್ನು ಪತ್ತೆ ಮಾಡಲಾಗಿದೆ, ಕೆಲ ವಸ್ತುಗಳು ಇನ್ನು ಲಭ್ಯವಾಗಿಲ್ಲ, ಪೊಲೀಸರಿಗೆ ಧನ್ಯವಾದಗಳು ಎಂದು ವಾರ್ನರ್ ತಮ್ಮ ಇನ್‍ಸ್ಟಾ ವಾಲ್ ಮೇಲೆ ಶುಕ್ರವಾರ ಪ್ರಕಟಿಸಿದ್ದರು. ಇದನ್ನೂ ಓದಿ: ಜಡೇಜಾ ಜಾದು, ಕಾನ್ವೆ ಕಿಕ್‌ – ತವರಿನಲ್ಲಿ ತಿಣುಕಾಡಿ ಗೆದ್ದ ಚೆನ್ನೈ; ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಜಯ

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಏ.15 ರಂದು ನಡೆದ ಪಂದ್ಯದಲ್ಲಿ 23 ರನ್‍ಗಳ ಸೋಲುಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಮನೆಯಂಗಣಕ್ಕೆ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಡೆಲ್ಲಿ ತಂಡದ 17 ಕಿಟ್‍ಗಳು ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಪ್ರತಿ ಕಿಟ್ ಕನಿಷ್ಠ 1 ಲಕ್ಷ ರೂ. ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿತ್ತು. ಅದರಲ್ಲೂ ವಿದೇಶಿ ಆಟಗಾರರು ಬಳಕೆ ಮಾಡುವ ಬ್ಯಾಟ್‍ಗಳು ಒಂದು ಕನಿಷ್ಠ 1 ಲಕ್ಷ ರೂ. ಮೌಲ್ಯದ್ದು ಎಂದು ಹೇಳಲಾಗಿತ್ತು.

    ಇದೀಗ ಪೊಲೀಸರ ಚುರುಕು ಕಾರ್ಯಾಚರಣೆಯಿಂದಾಗಿ ಕಳುವಾಗಿದ್ದ ಕಿಟ್‍ಗಳು ಪತ್ತೆಯಾಗಿವೆ. ಒಟ್ಟಾರೆ 17 ಬ್ಯಾಟ್‍ಗಳು, ಜೊತೆಗೆ ಗ್ಲೌಸ್, ಹೆಲ್ಮೆಟ್ ಸೇರಿ ಹಲವು ವಸ್ತುಗಳು ಪತ್ತೆ ಮಾಡುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲ ಸಾಮಗ್ರಿಗಳು ಕಾಣಿಸುತ್ತಿಲ್ಲ ಎಂದು ಡೇವಿಡ್ ವಾರ್ನರ್ ಬರೆದುಕೊಂಡಿದ್ದಾರೆ.

    ಹಳೆಯ ಕಿಟ್ ಕಳುವಾಗಿ, ಹೊಸ ಕಿಟ್‍ನೊಂದಿಗೆ ಅಂಗಳಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಓವರ್‍ವರೆಗೂ ಪ್ರಯತ್ನ ನಡೆಸಿ 4 ವಿಕೆಟ್‍ಗಳ ಜಯ ದಕ್ಕಿಸಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಎದುರು ಏ.24 ರಂದು ಪೈಪೋಟಿ ನಡೆಸಲಿದೆ.

    ಕಿಟ್‍ಗಳು ಕಳುವಾಗಿರುವ ವಿಚಾರ ಒಂದು ದಿನದ ಬಳಿಕ ಗಮನಕ್ಕೆ ಬಂದಿದೆ. ನಾಯಕ ಡೇವಿಡ್ ವಾರ್ನರ್ ಮತ್ತು ಸ್ಟಾರ್ ಬ್ಯಾಟರ್ ಮಿಚೆಲ್ ಸ್ಟಾರ್ಕ್ ತಲಾ 2 ಬ್ಯಾಟ್ ಕಳೆದುಕೊಂಡರೆ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಮೂರು ಬ್ಯಾಟ್ ಕಳೆದುಕೊಂಡಿದ್ದರು. ಯುವ ಬ್ಯಾಟ್ಸ್‍ಮನ್ ಯಶ್ ಧುಲ್ 5 ಬ್ಯಾಟ್‍ಗಳನ್ನು ಕಳೆದುಕೊಂಡಿದ್ದರು ಎಂದು ಈ ಮೊದಲು ವರದಿಯಾಗಿತ್ತು. ಆಟಗಾರರ ಸರಕು ಸಾಗಾಟದ ಒಪ್ಪಂದವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿತ್ತು. ಹೀಗಾಗಿ ಆಟಗಾರರು ಕಿಟ್‍ಗಳ ಬಗ್ಗೆ ವೈಯಕ್ತಿಕವಾಗಿ ಗಮನ ಕೊಡುವುದಿಲ್ಲ. ಸರಕು ನಿರ್ವಹಣೆಯ ಸಂಸ್ಥೆಯು ಒಂದು ದಿನ ತಡವಾಗಿ ಕಳ್ಳತನದ ಸಂಗತಿಯನ್ನು ಡೆಲ್ಲಿ ಫ್ರಾಂಚೈಸಿಗೆ ತಿಳಿಸಿತ್ತು.

    ನಂತರ ಎಚ್ಚೆತ್ತುಕೊಂಡ ಡೆಲ್ಲಿ ಫ್ರಾಂಚೈಸಿ ಪೊಲೀಸರಿಗೆ ದೂರು ನೀಡಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕಿಟ್ ಕಳುವಾಗಿರುವ ವಿಚಾರ ಮುಟ್ಟಿಸಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಕಿಟ್ ಕಳುವಾದ ಶಂಕೆಯಿಂದ ಇಲ್ಲಿನ ಪೊಲೀಸರಿಗೆ ತಂಡ ಮಾಹಿತಿ ರವಾನಿಸಿತ್ತು. ಇದರ ಫಲವಾಗಿ ಬಹುತೇಕ ವಸ್ತುಗಳನ್ನು ಮರಳಿ ಪಡೆಯಲು ಸಾಧ್ಯವಾಗಿದೆ.

    ಕೆಕೆಆರ್ (KKR) ವಿರುದ್ಧದ ಪಂದ್ಯದಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾ 2 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು. 2021ರ ಬಳಿಕ ಐಪಿಎಲ್‍ಗೆ ಮರಳಿದ್ದ ಇಶಾಂತ್ ಮೊದಲ ಪಂದ್ಯದಲ್ಲೇ ತಮ್ಮ ಅನುಭವ ಪ್ರದರ್ಶಿಸಿ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. ಪಂದ್ಯದಲ್ಲಿ ನಾಯಕ ಡೇವಿಡ್ ವಾರ್ನರ್ ಕೂಡ ಮನಮೋಹಕ ಅರ್ಧಶತಕ ಸಿಡಿಸಿ ಗೆಲುವಿಗೆ ಸಹಕರಿಸಿದ್ದರು. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?