Tag: ctravi

  • ಸಿ.ಟಿ.ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್ ಎಥಿಕ್ಸ್ ಕಮಿಟಿಗೆ ರವಾನೆ: ಬಸವರಾಜ್ ಹೊರಟ್ಟಿ

    ಸಿ.ಟಿ.ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್ ಎಥಿಕ್ಸ್ ಕಮಿಟಿಗೆ ರವಾನೆ: ಬಸವರಾಜ್ ಹೊರಟ್ಟಿ

    ಬೆಂಗಳೂರು : ಸಿ.ಟಿ.ರವಿ  (C.T Ravi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡುವಿನ ಪ್ರಕರಣವನ್ನು ವಿಧಾನ ಪರಿಷತ್‌ನ ಎಥಿಕ್ಸ್ ಕಮಿಟಿಗೆ ಕೊಡಲಾಗಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ (Bsavaraj Horatti) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಗಲಾಟೆ ಕೇಸ್, ಈಗಾಗಲೇ ಅಂತ್ಯ ಆಗಿದೆ. ಬೆಳಗಾವಿಯಲ್ಲೇ ನಾನು ಅದಕ್ಕೆ ರೂಲಿಂಗ್ ಕೊಟ್ಟಿದ್ದೆ. ಆದರೆ ಇಬ್ಬರೂ ಮತ್ತೆ ದೂರು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರಿಗೂ ಸಂಧಾನ ಮಾಡೋ ಕೆಲಸಕ್ಕೆ ಮುಂದಾಗಿದ್ದೆ. ಆದರೆ ಇದಕ್ಕೆ ಯಾರು ಒಪ್ಪಿಲ್ಲ. ಹೀಗಾಗಿ ಪ್ರಕರಣವನ್ನ ಎಥಿಕ್ಸ್ ಕಮಿಟಿಗೆ ನೀಡಿದ್ದೇನೆ. ಎಥಿಕ್ಸ್ ಕಮಿಟಿ ವರದಿ ಕೊಟ್ಟ ಮೇಲೆ ಮುಂದಿನ ತೀರ್ಮಾನ ಮಾಡುತ್ತೇನೆ. ಒಂದು ತಿಂಗಳಲ್ಲಿ ವರದಿ ಕೊಡಲು ಹೇಳಿದ್ದೇನೆ. ಈ ವಿಷಯ ಸದನದಲ್ಲಿ ಚರ್ಚೆ ಆಗುವುದಿಲ್ಲ. ಎಥಿಕ್ಸ್ ಕಮಿಟಿಯಲ್ಲಿ ಸಿ.ಟಿ ರವಿ ‌ಇದ್ದರೂ, ಈಗ ಅವರದ್ದೇ ಕೇಸ್ ಬಂದಿರೋದ್ರೀಂದ ಅವರನ್ನು ಎಥಿಕ್ಸ್ ಕಮಿಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

    ಸದನದಲ್ಲಿ ಮುಗಿದದ್ದನ್ನ ಅಲ್ಲೇ ಮುಗಿಸಬೇಕಿತ್ತು. ಸದನ ನಡೆದಾಗ ನಡೆದಿದ್ದರೆ ಹೀಗೆ ಆಗ್ತಿರಲಿಲ್ಲ. ಸದನ ನಡಯದೇ ಇದ್ದಾಗ ಇದು ನಡೆದಿರೋದಕ್ಕೆ ಇಷ್ಟು ದೊಡ್ಡದು ಆಗಿದೆ. ಹೀಗಾಗಿ ಎಥಿಕ್ಸ್ ಕಮಿಟಿಗೆ ಕೊಡಲಾಗಿದೆ. ಎಥಿಕ್ಸ್ ಕಮಿಟಿ ವರದಿ ಕೊಡಲಿ ನೋಡೋಣ. ಎಥಿಕ್ಸ್ ಕಮಿಟಿಯಲ್ಲಿಯೇ 99% ಸಮಸ್ಯೆ ಪರಿಹಾರ ಆಗೋ ವಿಶ್ವಾಸ ಇದೆ. ಇಲ್ಲದೇ ಹೋದ್ರೆ ಎಥಿಕ್ಸ್ ಕಮಿಟಿ ವರದಿಯನ್ನು ಅಧಿವೇಶನದಲ್ಲಿ ಮಂಡನೆ ಮಾಡ್ತೀವಿ ಎಂದು ತಿಳಿಸಿದ್ದಾರೆ.

  • ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಲಕ್ಷಾಂತರ ಕಾರ್ಯಕರ್ತರಿಗೆ ದುಃಖ ಉಂಟು ಮಾಡಿದೆ: ಸಿ.ಟಿ.ರವಿ

    ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಲಕ್ಷಾಂತರ ಕಾರ್ಯಕರ್ತರಿಗೆ ದುಃಖ ಉಂಟು ಮಾಡಿದೆ: ಸಿ.ಟಿ.ರವಿ

    ಬೆಂಗಳೂರು : ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟಕ್ಕೆ ಸ್ವಪಕ್ಷದವರೇ ಈಗ ತಿರುಗಿ ಬಿದ್ದಿದ್ದಾರೆ. ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪರಿಷತ್‌ ಸದಸ್ಯ ಸಿಟಿ ರವಿ (CT Ravi) ಬಿಜೆಪಿಯಲ್ಲಿ (BJP) ಕಿತ್ತಾಟಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

    ಬಿಜೆಪಿ ರೆಬಲ್ಸ್ ಗಳಿಂದ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿರುವ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಲಕ್ಷಾಂತರ ಕಾರ್ಯಕರ್ತರಿಗೆ ನನ್ನನ್ನು ಸೇರಿ ದುಃಖ ತಂದಿದೆ. ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಆಲೋಚನೆ ಮಾಡುವ ಅವಶ್ಯಕತೆ ಇದೆ. ಎಷ್ಟೋ ಜನ ತಮ್ಮ ಜೀವನವನ್ನು ಕೊಟ್ಟು, ಮನೆ ಮಠ ಹಾಳು ಮಾಡಿಕೊಂಡು ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ.ಅಧಿಕಾರ ಮರಿಚಿಕೆಯಾಗಿದ್ದ ಕಾಲದಲ್ಲಿ ದುಡಿದ್ದಾರೆ. ಕಾಂಗ್ರೆಸ್ ಇವತ್ತು ಜನ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ನಿತ್ಯ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾವು ತಪ್ಪಿದ್ದಿಲ್ಲ. ಕಳಪೆ ಔಷಧಿ ಕಾರಣಕ್ಕೆ ಬಾಣಂತಿಯರು, ಮಕ್ಕಳು ಸಾಯ್ತಿದ್ದಾರೆ. ಅಭಿವೃದ್ಧಿ ನಿಂತ ಸ್ಥಿತಿಯಲ್ಲಿ ನಿಂತಿದೆ. ಆಡಳಿತ ಪಕ್ಷದವರಿಗೆ ಅಸಹನೆ ನಿರ್ಮಾಣ ಮಾಡಿದೆ. ನಾವು ಇಂತಹ ಸಮಯದಲ್ಲಿ ಜನರ ಪರವಾಗಿ ಹೋರಾಟ ಮಾಡಬೇಕು.ನಮ್ಮ ಕರ್ತವ್ಯ ಜನರ ಪರ ಹೋರಾಟ ಮಾಡೋದಾಗಿತ್ತು. ಆದರೆ ನಾವು ಮಾಡ್ತಿಲ್ಲ ಅಂತ ಆಕ್ರೋಶ ಹೊರ ಹಾಕಿದರು.

    ನಮ್ಮ ಪಕ್ಷದ ಬೆಳವಣಿಗೆ ನನಗೆ ಸಮಾಧಾನ ತಂದಿಲ್ಲ. ಪಕ್ಷಕ್ಕೆ ಮಾಲೀಕರು ಪಕ್ಷದ ಸಾಮಾನ್ಯ ಕಾರ್ಯಕರ್ತರು. ಅವರಿಗೆ ನೋವಾಗುವಂತೆ,ಅವರಿಗೆ ದುಃಖ ತರುವಂತೆ ನಾವು ನಡೆದುಕೊಳ್ಳಬಾರದು. ಜನಹಿತ ಮರೆತು ರಾಜಕಾರಣ ಮಾಡಬಾರದು. ಜನಪರವಾದ ಹೋರಾಟ ಮಾಡದೇ ಹೋದರೆ ನಾವು ಕಳೆದು ಹೋಗುತ್ತೇವೆ. ಪಕ್ಷಕ್ಕೂ ನಷ್ಟ ಆಗುತ್ತದೆ ಅಂತ ಅಸಮಾಧಾನ ಹೊರ ಹಾಕಿದರು.  ಇದನ್ನೂ ಓದಿ: ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ವಿಜಯೇಂದ್ರ ಬದಲಾವಣೆಗೆ ರೆಬಲ್ಸ್ ಗಳ ಪಟ್ಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಹೊರಗೆ ಮಾತನಾಡುವುದಿಲ್ಲ. ನಮಗೆ ಹೇಳುವ ಜಾಗ ಇವೆ ಹೇಳಿದ್ದೇವೆ‌. ಹೇಳುವ ವ್ಯಕ್ತಿಗಳ ಹತ್ರ ಹೇಳಿದ್ದೇವೆ. ಪಕ್ಷದ ಬಗ್ಗೆ ಗೌರವ ಇದೆ. ನಮಗೆ ಎರಡನೇ ಆಯ್ಕೆ ಇಲ್ಲ. ಸೈದ್ಧಾಂತಿಕ ಕಾರಣಕ್ಕೆ ನಾವು ಬಿಜೆಪಿ ಆಯ್ಕೆ ಮಾಡಿಕೊಂಡಿದ್ದೇವೆ. 36 ವರ್ಷಗಳ ಹಿಂದೆ ಆಯ್ಕೆ ಮಾಡಿಕೊಂಡಿದ್ದು. ನಮಗೆ ಎರಡನೇ ಆಯ್ಕೆ ಇಲ್ಲ. ಸುಖ ದುಃಖದಲ್ಲೂ ಪಕ್ಷದ ಜೊತೆ ಇರುತ್ತೇವೆ. ಪಕ್ಷ ಸರಿ ಮಾಡಲು ಪ್ರಾಮಾಣಿಕ ಪ್ರಯತ್ನ ನಮ್ಮ ಕಡೆಯಿಂದ ಮಾಡುತ್ತೇವೆ. ಹೈಕಮಾಂಡ್ ಮನಸಿನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ ಅಂತ ತಿಳಿಸಿದರು.

     

    ವಿಜಯೇಂದ್ರ ಹಿರಿಯರನ್ನ ಕಡೆ ಕಣಿಸುತ್ತಿದ್ದಾರೆ ಎಂಬ ರಮೇಶ್ ಜಾರಕಿಹೋಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದನ್ನೂ ಸಾರ್ವಜನಿಕವಾಗಿ ಕಾಮೆಂಟ್ ಮಾಡೋಕೆ ಬಯಸೊಲ್ಲ. ಸಾಮಾನ್ಯ ಕಾರ್ಯಕರ್ತ ಆಗಿದ್ದ ನನಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಕ್ಷ ಮಾಡಿದೆ. ಕೆಲವು ಕಾಲ ನಾವು ನೇಪಥ್ಯಕ್ಕೆ ಸರಿದಿದ್ದೇವೆ ಅಂದರೆ ಶಾಶ್ವತವಾಗಿ ನೇಪಥ್ಯಕ್ಕೆ ಸರಿದ್ದೇವೆ ಅಂತ ಅಲ್ಲ. ಸಂಕಷ್ಟವೂ ಕೂಡಾ ನಮ್ಮ ಸಾಮರ್ಥ್ಯ ಹೆಚ್ಚು ಮಾಡಲು ಬರುತ್ತದೆ. ನಮ್ಮ ಆತ್ಮ ವಿಶ್ವಾಸ ಪರೀಕ್ಷೆ ಮಾಡೋಕೆ ಸಂಕಷ್ಟ ಬರುತ್ತದೆ. ನನ್ನ ಜೀವನದಲ್ಲಿ ಬರುವ ಸಂಕಷ್ಟಗಳನ್ನ ನನ್ನ ಸಾಮರ್ಥ್ಯ ಹೆಚ್ಚಳಕ್ಕೆ ಬರುತ್ತದೆ ಅಂತ ನನ್ನ ಭಾವನೆ. ಸಂಕಷ್ಟ ಕಾಲದಲ್ಲಿ ಹಿಂದೆ ಹೆಜ್ಜೆ ಇಟ್ಟಿಲ್ಲ. ಸಂಕಷ್ಟ ಕಾಲ ಹೀಗೆ ಇರೊಲ್ಲ ಅಂತ ಭಗವದ್ಗೀತೆಯಲ್ಲಿ ಹೇಳಿದೆ. ಕಾಲ ಹೀಗೆ ಇರುವುದಿಲ್ಲ.. ಕಾಲ ಸರಿಬೇಕು ನೋಡೋಣ ಅಂತ ಮಾರ್ಮಿಕವಾಗಿ ಮಾತನಾಡಿದರು.

  • ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

    ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

    ಹುಬ್ಬಳ್ಳಿ: ದೀಪಾವಳಿ ಒಳಗಡೆ ಕಾಂಗ್ರೆಸ್‌ ಸರ್ಕಾರ (Congress Government) ಢಮಾರ್ ಆಗೋದು ಪಕ್ಕಾ ಎಂದು ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ (CT Ravi) ಭವಿಷ್ಯ ನುಡಿದಿದ್ದಾರೆ.

    ಸಿದ್ದರಾಮಯ್ಯ (Siddaramaiah) ಅವರ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ ಈಗ ಟೈಮ್ ಬಾಂಬ್ ಫಿಕ್ಸ್ ಮಾಡಿದೆ. ಸಿದ್ದರಾಮಯ್ಯ ಜೊತೆಗೆ ಬಂಡೆಯಂತೆ ಜೊತೆಗಿರುತ್ತೇನೆ ಎನ್ನುತ್ತಿರುವವರೇ ಡೇಂಜರ್‌. ಡಿಕೆ ಶಿವಕುಮಾರ್ ಒಂದು ಬಾಂಬ್, ಪ್ರಿಯಾಂಕಾ ಖರ್ಗೆ, ಎಂಬಿ ಪಾಟೀಲ್ ಯಾವ ಯಾವ ಬಾಂಬ್ ಇಟ್ಟಿದ್ದಾರೆ ಅವರಿಗೆ ಕೇಳಬೇಕು ಎಂದರು. ಇದನ್ನೂ ಓದಿ: ‘ಡಿ’ ಗ್ಯಾಂಗ್‌ಗೆ ಜೈಲೇ ಗತಿ – ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಣೆ

     

    ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಮತ್ತು ಮುಖಂಡರು ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ. ರಾಜೀನಾಮೆಗೆ ಸಮಯವನ್ನೂ ನಿಗದಿಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ಸಚಿವರು ತಾವು ಸಹ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ವಿವಿಧ ಹಗರಣದಗಳು ಸರ್ಕಾರದ ವಿರುದ್ಧ ಕೇಳಿ ಬಂದಿವೆ ಹೀಗಾಗಿ ಬಹಳ‌ ದಿನ ಸಿದ್ದರಾಮಯ್ಯ ಸಿಎಂ ಆಗಿ ಇರುವುದಿಲ್ಲ ಎಂದು ತಿಳಿಸಿದರು.

     

  • ಭವ್ಯ ಮಂದಿರದ ಮುಂದೆ ನಿಂತಾಗ ಕಣ್ಣೀರು ತುಂಬಿ ಬಂತು- ಸಿ.ಟಿ.ರವಿ ದಂಪತಿಯಿಂದ ಬಾಲರಾಮನ ದರ್ಶನ

    ಭವ್ಯ ಮಂದಿರದ ಮುಂದೆ ನಿಂತಾಗ ಕಣ್ಣೀರು ತುಂಬಿ ಬಂತು- ಸಿ.ಟಿ.ರವಿ ದಂಪತಿಯಿಂದ ಬಾಲರಾಮನ ದರ್ಶನ

    ಬೆಂಗಳೂರು: ಮಾಜಿ ಸಚಿವ ಸಿ.ಟಿ.ರವಿ (C.T.Ravi) ದಂಪತಿ ಅಯೋಧ್ಯೆಗೆ ತೆರಳಿ ಬಾಲರಾಮನ (BalaRama) ದರ್ಶನವನ್ನು ಪಡೆದಿದ್ದಾರೆ.

    ಪ್ರಭು ಶ್ರೀರಾಮನ ದರ್ಶನ ಪಡೆದ ರವಿ ಅವರು ಫೋಟೋದೊಂದಿಗೆ ಬಾಲರಾಮನ ದರ್ಶನದ ಅನುಭವವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ  (Social Media) ಪೋಸ್ಟ್ ಮಾಡಿದ್ದಾರೆ. ಭವ್ಯ ಮಂದಿರದ ಮುಂದೆ ನಿಂತುಕೊಂಡವನಿಗೆ ಮೈಯೆಲ್ಲಾ ರೋಮಾಂಚನ, ಜೀವನ ಪಾವನವಾದ ಭಾವ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ:  ಈಗ ಪರ್ಸಂಟೇಜ್ ಕಡಿಮೆ ಆಗಿದೆ, ಆದ್ರೆ ಎಷ್ಟಾಗಿದೆ ಗೊತ್ತಿಲ್ಲ- ಉಲ್ಟಾ ಹೊಡೆದ ಕೆಂಪಣ್ಣ

    ಅಯೋಧ್ಯಾ ರಾಮ ಜನ್ಮ ಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಹೋರಾಟದ ನೆನಪಾಗಿ ಕಣ್ಣಲ್ಲಿ ನೀರು ತುಂಬಿ ಬಂತು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿರುವ ಸಂತೋಷಕ್ಕೋ ಅಥವಾ ಮಂದಿರ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದ ಲಕ್ಷಾಂತರ ಜನರಿಗಾಗಿ ಮೂಡಿದ ಅಶ್ರುತರ್ಪಣವೋ? ನಾನರಿಯೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಏನು ಮನೆ-ಮನೆ ಬೆಡ್‌ರೂಮ್‌ಗೆ ಹೋಗುತ್ತಾ? – ಲಿವ್‌ಇನ್‌ ರಿಲೇಷನ್‌ ನೋಂದಣಿ ಕಡ್ಡಾಯಕ್ಕೆ ಮಹಿಳಾ ಹೋರಾಟಗಾರ್ತಿ ವಿರೋಧ

    ಸರಯೂ ತೀರದಲ್ಲಿ ಗುಲಾಮಗಿರಿಯ ಪ್ರತೀಕವಾಗಿ ನಿಂತಿದ್ದ ವಿವಾದಿತ ಕಟ್ಟಡವನ್ನು ಕೆಡವಲು, ರಾಷ್ಟ್ರ ಪುರುಷ ರಾಮನಿಗೆ ಭವ್ಯ ರಾಷ್ಟ್ರ  ಮಂದಿರವನ್ನು ಕಟ್ಟಲು ನಡೆಸಿದ ಕರಸೇವೆ, ಜೊತೆಗಿದ್ದ ಕರಸೇವಕರು, ಸರಯೂ ನದಿಯಿಂದ ತಂದ ಮರಳಿನ ರಾಶಿ, ಮೈ ಮೇಲಿದ್ದ ಲಾಠಿಯೇಟಿನ ಬಾಸುಂಡೆಗಳು, ಗುಮ್ಮಟ ಪತನ, ತಾತ್ಕಾಲಿಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಹೊತ್ತದ್ದು, ಹುತಾತ್ಮ ಕರಸೇವಕರ ದೇಹಗಳು, ನೋವಿನಿಂದ ನರಳುತ್ತಿದ್ದ ಕರಸೇವಕರು, ಕರಸೇವಕರನ್ನು ಮಕ್ಕಳ ಹಾಗೆ ನೋಡಿಕೊಂಡ ದೇಶದ ಮಾತೆಯರು, ಇವರೆಲ್ಲರೂ ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋದರು. ಇಂದು ಪತ್ನಿಯೊಂದಿಗೆ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಪ್ರಭು ಶ್ರೀರಾಮ ಚಂದ್ರನ ದರ್ಶನ ಮಾಡುವಂತಾಗಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್‌ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ ಭೂಪ!

  • ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

    ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಹೇಳಿಕೆಯ ಬೆನ್ನಲ್ಲೇ ಭಾನುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರು ಎರಡೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ್ದಾರೆ.

    ಬಿ.ಎಲ್ ಸಂತೋಷ್ ಜೊತೆಗಿನ ಸಭೆ, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತುಕತೆ ನಡೆಸಿದ್ದಾರೆ.

    ಬಿಜೆಪಿ ಗೃಹ ಸಚಿವ ಅಮಿತ್‌ ಶಾ ರಾಜ್ಯ ಪ್ರವಾಸದ ಬಗ್ಗೆ ನಾಯಕರು ಸಭೆ ನಡೆಸಿದ್ದಾರೆ ಎಂದು ನಾಯಕರು ಹೇಳಿದ್ದಾರೆ. ಆದರೆ ಬಿಎಲ್‌ ಸಂತೋಷ್‌ ಮೈಸೂರಿನಲ್ಲಿ ನೀಡಿದ ಹೇಳಿಕೆಯ ಬೆನ್ನಲ್ಲೇ ನಾಯಕರು ಎರಡೂವರೆ ಗಂಟೆ ಸಭೆ ನಡೆಸಿದ್ದರಿಂದ ಸಂಪುಟ ಪುನಾರಚನೆ, ಕೆಲ ಮಹತ್ವದ ಬದಲಾವಣೆ ಬಗ್ಗೆ ಚರ್ಚೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.

    ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮೈಸೂರಿನಲ್ಲಿ ಶನಿವಾರ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಪಕ್ಷದ ಕಾರ್ಯಕರ್ತರಿಗೆ, ಹೊಸ ಮುಖಗಳಿಗೆ ಅವಕಾಶ ನೀಡುವ ಪ್ರಯೋಗ ನಡೆಸುವ ಧೈರ್ಯವನ್ನು ಬಿಜೆಪಿ ತೋರುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಕ್ಯಾಂಪಸ್‌ ಪ್ರವೇಶಕ್ಕೆ ರಾಹುಲ್‌ಗೆ ಅನುಮತಿ ನೀಡದ ವಿವಿ – ಉಸ್ಮಾನಿಯಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಸಂಪುಟ ಪುನರ್‌ರಚನೆ ಸರ್ಕಸ್‌ ನಡೆಯುತ್ತಿರುವಾಗಲೇ , ಸಂಘಟನೆಗಾಗಿ ದುಡಿದ ಹೊಸ ಮುಖಗಳಿಗೆ ಹೆಚ್ಚು ಅವಕಾಶ ನೀಡುತ್ತಿರುವುದಾಗಿ ಬಿಎಲ್‌ ಸಂತೋಷ್‌ ನೀಡಿರುವ ಹೇಳಿಕೆ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ.

    ಬೆಂಗಳೂರಿಗೆ ಅಮಿತ್ ಷಾ ಆಗಮಿಸುವ ಎರಡು ದಿನ ಮೊದಲೇ ಸಂತೋಷ್ ಅವರ ಮಾತುಗಳ ಹಿಂದಿನ ಮರ್ಮ ಏನು ಎಂಬುದರ ಬಗ್ಗೆ ನಾನಾ ದೃಷ್ಟಿಕೋನಗಳಿಂದ ಬಿಜೆಪಿ ಒಳಗೆ ಚರ್ಚೆಗಳು ಶುರುವಾಗಿವೆ. ಸಂಘಟನೆಯ ನಾಯಕತ್ವದಲ್ಲಿ ಬದಲಾವಣೆ ತರಬಹುದಾ? ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ತರಬಹುದಾ? ಮುಂದಿನ ಚುನಾವಣೆಯ ಭವಿಷ್ಯದ ನಾಯಕತ್ವದಲ್ಲಿಬದಲಾವಣೆ ತರುವ ಮಾತುಗಳ ಎಂಬುದಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ. ಕುಟುಂಬ ರಾಜಕಾರಣ ವಿರೋಧಿಸಿ ಸಿಎಂ ಕುರ್ಚಿಗೆ ವಯಸ್ಸಿನ ಮಿತಿಯನ್ನ ಫಿಕ್ಸ್ ಮಾಡಿ ಸಂತೋಷ್ ಆಡಿರುವ ಮಾತುಗಳು ಹೆಚ್ಚು ಮಹತ್ವವನ್ನ ಪಡೆದುಕೊಂಡಿವೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಜತೆ ಕಂಗನಾ ರಣಾವತ್ ಮೀಟಿಂಗ್?

    ಈಗಾಗಲೇ ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿ ಹಿರಿಯ ನಾಯಕರನ್ನು ಕೈ ಬಿಟ್ಟು ಯುವ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ನೀಡಿದ ಈ ಪ್ರಯೋಗ ಯಶಸ್ವಿಯಾಗಿದ್ದು ಎರಡೂ ಕಡೆಯೂ ಬಿಜೆಪಿ ಜಯಗಳಿಸಿದೆ. ಮುಂದೆ ಕರ್ನಾಟಕದಲ್ಲೂ ಚುನಾವಣೆ ನಡೆಯಲಿರುವ ಕಾರಣ ಇಲ್ಲೂ ಈ ಪ್ರಯೋಗ ನಡೆಯುತ್ತಾ ಎನ್ನುವುದೇ ಕುತೂಹಲ.

  • ಹುಬ್ಬಳ್ಳಿ ಗಲಭೆ- ಹಲಾಲ್ ಪ್ರಚೋದಿತ ಘಟನೆಯೇ? – ಸಿ.ಟಿ.ರವಿ

    ಹುಬ್ಬಳ್ಳಿ ಗಲಭೆ- ಹಲಾಲ್ ಪ್ರಚೋದಿತ ಘಟನೆಯೇ? – ಸಿ.ಟಿ.ರವಿ

    ಬಳ್ಳಾರಿ: ಹುಬ್ಬಳ್ಳಿಯಲ್ಲಿನ ಗಲಭೆ ಹಲಾಲ್ ಪ್ರಚೋದಿತ ಘಟನೆಯೇ? ವೋಟಿಗಾಗಿ ಜೊಲ್ಲು ಸುರಿಸುವವರು ಇದಕ್ಕೂ ಹಲಾಲ್ ಸರ್ಟಿಫಿಕೇಟ್ ಕೊಡ್ತಾರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

    ವಿಜನಯನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಲವು ಮತಗಳು ತಮ್ಮ ಮತಾಂಧತೆಯನ್ನು ತೋರಿಸುವುದಕ್ಕೇ ಭಯ ಹುಟ್ಟಿಸುತ್ತಾರೆ. ಇದು ಅವರ ತಂತ್ರಗಾರಿಕೆಯ ಭಾಗ. ಶೇ.15 ರಷ್ಟಿದ್ದ ಕಲ್ಲು 40ರಷ್ಟು ಹೆಚ್ಚಾಗಿದೆ ಅಂದರೆ, ಅರ್ಥ ಮಾಡಿಕೊಳ್ಳಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    CT RAVI

    ಇತ್ತೀಚೆಗೆ ರಾಮನವಮಿ ಮೆರವಣಿಗೆ ವೇಳೆ ಜಾರ್ಖಂಡ್, ಗುಜರಾತ್, ರಾಜಾಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಗಲಭೆ ಎಬ್ಬಿಸಿ, ಕಲ್ಲು ತೂರಾಟ ನಡೆಸಿದ್ದವರೇ, ಪೂರ್ವ ನಿಯೋಜಿತವಾಗಿ ಇಲ್ಲಿ ಗಲಭೆ ನಡೆಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದಾರೆ ಎಂದಿದ್ದಾರೆ.

    ಇವರು ಸಣ್ಣ-ಸಣ್ಣ ಸಂಗತಿಗಳಿಗೆ ಯಾಕೆ ಕೆರಳುತ್ತಾರೆ? ವಿವಾದಾತ್ಮಕ ಸ್ಟೇಟಸ್ ಹಾಕಿದ್ದರೆ, ಅವನ ವಿರುದ್ಧ ದೂರು ಕೊಡಲಿ. ಕಾನೂನು ಇದೆ, ಕ್ರಮ ಕೈಗೊಳ್ಳುತ್ತದೆ. ಇವರೇಕೆ ಕಾನೂನು ಕೈಗೆತ್ತಿಕೊಳ್ಳುತ್ತಾರೆ? ಜಾತ್ಯಾತೀಯ ಎನ್ನುವವರು ಈಗ್ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗೃಹಸಚಿವರು ಚತ್ರಿ ಆಗಬೇಕು – ಯತ್ನಾಳ್ ಕುಟುಕಿದ್ದೇಕೆ?

    hbl (2)

    7ನೇ ಶತಮಾನದಿಂದಲೂ ಇಂತಹ ಘಟನೆ ನಡೆಯುತ್ತಲೇ ಬಂದಿದೆ. ಒಂದು ಕೋಮು ವ್ಯವಸ್ಥಿತ ರೀತಿಯಲ್ಲಿ ಸಂಚು ಮಾಡುತ್ತಿದ್ದು, ದೇಶದಲ್ಲಿ ಹರಾಜಕತೆ ಹುಟ್ಟುಹಾಕುತ್ತಿದೆ. ದಂಗೆ ಎಬ್ಬಿಸಿ ಜನರನ್ನು ಭಯಡಿಸುತ್ತಾರೆ, ಕೊನೆಗೆ ರಕ್ಷಣೆಗೆ ಸಂವಿಧಾನವೇ ಬೇಕೆಂದು ಓಡಿ ಬರ್ತಾರೆ? ಅವರಿಗೆ ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು, ಸಮುದಾಯದ ಮುಖಂಡರೇ ಈ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

  • ತಬ್ಲಿಘಿ ಬಗ್ಗೆ ಪೋಸ್ಟ್ ಶೇರ್ ಮಾಡಿದ್ರೆ ತಪ್ಪೇನು – ಸಿಟಿ ರವಿ

    ತಬ್ಲಿಘಿ ಬಗ್ಗೆ ಪೋಸ್ಟ್ ಶೇರ್ ಮಾಡಿದ್ರೆ ತಪ್ಪೇನು – ಸಿಟಿ ರವಿ

    – ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಿ

    ಬೆಂಗಳೂರು: ಕೊರೊನಾ ಸಂಬಂಧ ತಬ್ಲಿಘಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು ಎಂದು ಕನ್ನಡ ಮತ್ತು ಸಂಸ್ಕøತಿ ಖಾತೆಯ ಸಚಿವ ಸಿಟಿ ರವಿ ಪ್ರಶ್ನಿಸಿದ್ದಾರೆ.

    ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ವಿಚಾರಕ್ಕೆ, ಕೊರೊನಾ ಸಂಬಂಧ ತಬ್ಲಿಘಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ತಬ್ಲಿಘಿಗಳ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಇದೆ ನನ್ನ ಪ್ರಥಮ ಆದ್ಯತೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಏ.9 ರಂದು ಟ್ವೀಟ್ ಮಾಡಿದ್ದರು.

  • ಮನೆ-ಮನೆಗೆ ತೆರಳಿ ಭಿಕ್ಷೆ ಬೇಡಿದ ಸಚಿವ ಸಿ.ಟಿ ರವಿ

    ಮನೆ-ಮನೆಗೆ ತೆರಳಿ ಭಿಕ್ಷೆ ಬೇಡಿದ ಸಚಿವ ಸಿ.ಟಿ ರವಿ

    ಚಿಕ್ಕಮಗಳೂರು: ದತ್ತಾತ್ರೇಯನಿಗೆ ಮಡಿ ಹಾಗೂ ಜಾತಿಭೇದ ಇಲ್ಲ. ಹೀಗಿರುವಾಗ ಅರ್ಚಕರಲ್ಲಿ ಮಡಿ ಹಾಗೂ ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ. ದತ್ತಾತ್ರೇಯನಿಗೆ ಯಾರೇ ಅರ್ಚಕರಾದರೂ ಸರಿ. ಆದರೆ, ಹಿಂದೂ ಅರ್ಚಕರು ನೇಮಕವಾಗಿ ದತ್ತಪೀಠದಲ್ಲಿ ಹಿಂದೂ ಪದ್ಧತಿ ಪ್ರಕಾರ ಪೂಜೆಯಾಗಬೇಕು ಅನ್ನೋದಷ್ಟೆ ನಮ್ಮ ಬೇಡಿಕೆ ಎಂದು ಮಾಲಾಧಾರಿ, ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ಮಾಲಾಧಾರಿಯಾಗಿ ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ (ಪಡಿ ಸಂಗ್ರಹ) ನಡೆಸಿ ಮಾತನಾಡಿದ ಅವರು, ಭಕ್ತಿ-ಭಾವದ ಸಮ್ಮಿಲನದೊಂದಿಗೆ ದತ್ತಪೀಠಕ್ಕೆ ಹೋಗುತ್ತಿದ್ದೇವೆ. 43 ವರ್ಷದ ಪರಿಶ್ರಮ-ಸಂಕಲ್ಪ, ಭಕ್ತಿ-ಶಕ್ತಿಯ ಆಂದೋಲನ ಅಯೋಧ್ಯೆ ಮಾದರಿಯಲ್ಲಿ ಗುರಿ ಮುಟ್ಟುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ಹಾಗೂ ತತ್ವಬದ್ಧವಾದ ಹೋರಾಟವಾಗಿದ್ದು, ದತ್ತಪೀಠದ ತೀರ್ಪು ನಮ್ಮಂತೆಯೇ ಬರುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದರು.

    ಜೆಡಿಎಸ್‍ಗೆ ನಿಲುವಿಗೆ ಸ್ವಾಗತ:
    ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಜೆಡಿಎಸ್ ದಲಿತ ಅರ್ಚಕರನ್ನ ನೇಮಕ ಮಾಡಲಿ ಎಂದು ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದಲಿತ ಅಥವಾ ವೇದ-ಆಗಮನ ಕಲಿತ ಯಾರೇ ಅರ್ಚಕರಾದರೂ ಅದನ್ನ ಸ್ವಾಗತಿಸುತ್ತೇವೆ. ಆದರೆ ಹಿಂದೂ ಅರ್ಚಕರು ನೇಮಕವಾಗಬೇಕು ಎಂದು ಜೆಡಿಎಸ್‍ಗೆ ಟಾಂಗ್ ಕೊಟ್ಟಿದ್ದಾರೆ. ಕಡೆಗೂ ಜೆಡಿಎಸ್ ತನ್ನ ನಿಲುವು ಬದಲಿಸಿಕೊಂಡು ಅರ್ಚಕರ ನೇಮಕಕ್ಕೆ ಒತ್ತಾಸೆಯಾಗಿ ನಿಂತು, ಬಹುಕಾಲದ ದತ್ತಪೀಠ ಮುಕ್ತಿಯ ಹೋರಾಟಕ್ಕೆ ತಾವು ಬೆಂಬಲಿಸುವಂತೆ ಸಹಕರಿಸಿರೋದನ್ನ ನಾನೂ ಬೆಂಬಲಿಸ್ತೇನೆ ಎಂದಿದ್ದಾರೆ.

    ಸಚಿವ ಸಿ.ಟಿ.ರವಿ ದತ್ತಪೀಠದ ಹೋರಾಟವನ್ನ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೇ ನೀಡಿದ ಸಿ.ಟಿ.ರವಿ, ದತ್ತಪೀಠ ಮುಕ್ತಿಯ ಹೋರಾಟಕ್ಕೆ ತನ್ನನ್ನ ತಾನು ತೊಡಗಿಸಿಕೊಂಡಾಗ ನಾನು ಯಾವುದೇ ಪಕ್ಷದ ಸದಸ್ಯನೂ ಆಗಿರಲಿಲ್ಲ ಎಂದು ಆರೋಪಿತರಿಗೆ ತಿರುಗೇಟು ನೀಡಿದ್ದಾರೆ.

  • ದೇವೇಗೌಡ್ರ ಮಾತುಗಳನ್ನು ಅನುಮಾನದಿಂದ ನೋಡಲ್ಲ – ಸಿ.ಟಿ ರವಿ

    ದೇವೇಗೌಡ್ರ ಮಾತುಗಳನ್ನು ಅನುಮಾನದಿಂದ ನೋಡಲ್ಲ – ಸಿ.ಟಿ ರವಿ

    ರಾಯಚೂರು: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಒಬ್ಬ ಅನುಭವಿ ರಾಜಕಾರಣಿ. ನಾನು ಅವರ ಮಾತುಗಳನ್ನ ಅನುಮಾನದಿಂದ ನೋಡಲ್ಲ ಎಂದು ಸಿಎಂಗೆ ಎಚ್‌ಡಿಡಿ ಕರೆ ಮಾಡಿ ಮಾತನಾಡಿರುವ ವಿಚಾರಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಹಿನ್ನೆಲೆಯಲ್ಲಿ ದೇವೇಗೌಡರು ಸರ್ಕಾರ ಸುಭದ್ರವಾಗಿರಲಿ ಅಂತ ಹೇಳಿದ್ದಾರೆ ಗೊತ್ತಿಲ್ಲ. ಒಂದು ವೇಳೆ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಸರ್ಕಾರ ಉರುಳಿಸಲು ನಡೆದಿರುವ ಯಾವ ಪ್ರಯತ್ನಗಲೂ ಸಾಧ್ಯವಾಗುವುದಿಲ್ಲ. ಮೈತ್ರಿ ವಿಚಾರ ಮಾತನಾಡಲು ನಾನು ಅಷ್ಟು ದೊಡ್ಡವನಲ್ಲ. ಕಾಂಗ್ರೆಸ್ ನವರದ್ದು ಗರತಿ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.

    ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಆರು ಜನ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಸೆಳೆದಿತ್ತು. ಸಿ.ಭೈರೇಗೌಡರ ಸಿಡಿಯನ್ನ ವೀರಪ್ಪಮೊಯ್ಲಿ ಮೂಲಕ ಹೊರ ಬಿದ್ದಿತ್ತು. 1999-2004ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಮತ್ತು ಜೆಡಿಯು ಶಾಸಕರನ್ನ ತೆಕ್ಕೆಗೆ ಹಾಕೊಂಡಿತ್ತು. ಇದು ಯಾವ ಸೀಮೆಯ ರಾಜಕಾರಣ ಎಂದು ಸಚಿವರು ಪ್ರಶ್ನಿಸಿದರು.

    ಚಲುರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ಅಹ್ಮದ್, ಶ್ರೀನಿವಾಸ್ ಯಾವ ಪಕ್ಷದಲ್ಲಿದ್ದರು. ಇವರನ್ನೆಲ್ಲ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲಿಲ್ವಾ? ಈವಾಗ ಕಾಂಗ್ರೆಸ್ ಪಕ್ಷ ಬಿಜೆಪಿ ಬಗ್ಗೆ ಮಾತನಾಡುತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಬಂದಂಗಾಯ್ತು.ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದು ಕಿಡಿಕಾರಿದರು.

    ಸಿಎಂ ಇಬ್ರಾಹಿಂರಂತಹ ಗರತಿಯರು ರಾಜಕಾರಣದಲ್ಲಿ ಬೇಕಾ?. ಒಂದು ಪಕ್ಷದಲ್ಲಿ ಉಪಮುಖ್ಯಮಂತ್ರಿ ಇದ್ದು ಅಹಿಂದ ರಾಜಕೀಯ ಮಾಡಿದ್ದು ಗರತಿ ರಾಜಕಾರಣವಾ? ನಾವು ಮುಳ್ಳಿನಿಂದ ಮುಳ್ಳು ತೆಗೆಯುವ ಕೆಲಸ ಮಾಡುತ್ತೇವೆ. ರಾಜಕೀಯ ವ್ಯವಸ್ಥೆಗೆ ಕಾಂಗ್ರೆಸ್ ಮಗ್ಗುಲ ಮುಳ್ಳು. ಮಹಾತ್ಮ ಗಾಂಧೀಜಿ ಕುಟುಂಬ ರಾಜಕೀಯ ಬೇಡ ಎಂದಿದ್ದರು. ಈಗಿನ ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ಹಳೆಯ ಕಾಂಗ್ರೆಸ್ ಕಟ್ಟುವ ಕೆಲಸ ಮಾಡುತ್ತಿತ್ತು. ಈಗಿನ ಕಾಂಗ್ರೆಸ್ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಣೆ ಮಾಡಿದೆ. ನರೇಂದ್ರ ಮೋದಿ ರೈತರ ರಕ್ಷಣೆ ಮಾಡುತ್ತಾರೋ ಇಲ್ಲವೊ ಎನ್ನುತ್ತಿದ್ದರು. ಒಂದು ವೇಳೆ ನೆಹರು ಇದ್ದರೆ ಈ ಒಪ್ಪಂದ ಒಪ್ಪಿಕೊಳ್ಳುತ್ತಿದ್ದರೇನೊ? ಆದರೆ ಮೋದಿ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದರು.

  • ಟಿಪ್ಪು ವಿವಾದವನ್ನು ಬೈ ಎಲೆಕ್ಷನ್‍ಗೆ ಬಳಸಿಕೊಳ್ಳುವ ಅಗತ್ಯವಿಲ್ಲ- ಸಿ.ಟಿ ರವಿ

    ಟಿಪ್ಪು ವಿವಾದವನ್ನು ಬೈ ಎಲೆಕ್ಷನ್‍ಗೆ ಬಳಸಿಕೊಳ್ಳುವ ಅಗತ್ಯವಿಲ್ಲ- ಸಿ.ಟಿ ರವಿ

    ಬೆಂಗಳೂರು: ಟಿಪ್ಪು ಸುಲ್ತಾನ್ ಇತಿಹಾಸವನ್ನು ಅಧ್ಯಯನ ಮಾಡಿದರೆ ಯಾರು ಮತಾಂಧರು ಅನ್ನೋದು ತಿಳಿಯುತ್ತದೆ. ಬಿಜೆಪಿಗೆ ಟಿಪ್ಪು ವಿವಾದವನ್ನು ಬೈ ಎಲೆಕ್ಷನ್‍ಗೆ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ಒಡೆದು ಆಳುವ ನೀತಿ ಪಾಲಿಸುತ್ತಿದೆ. 72 ವರ್ಷದಿಂದ ಆಚರಣೆ ಮಾಡಲಾಗದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿಯೇ ಜಾರಿಗೆ ತಂದಿದೆ. ಇಷ್ಟು ವರ್ಷಗಳ ಕಾಲ ನಾಡಧ್ವಜದ ಬಗ್ಗೆಯೂ ಇಲ್ಲದ ಕಾಳಜಿ ಚುನಾವಣೆಗೆ ಒಂದು ವರ್ಷವಿದ್ದಾಗ ವಿವಾದ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಲಿಂಗಾಯತ-ವೀರಶೈವ ವಿವಾದವನ್ನು ಚುನಾವಣಾ ವೇಳೆಯೇ ಶುರುಮಾಡಿದೆ. ಸಿದ್ದರಾಮಯ್ಯನವರೇ ಒಡೆದು ಆಳುವ ವಿಚಾರದಲ್ಲಿ ಕಿಂಗ್ ಆ್ಯಂಡ್ ಕಿಂಗ್ ಮೇಕರ್ ಎಂದು ಕಿಡಿಕಾರಿದರು.

    ಸಿದ್ದರಾಮಯ್ಯನವರು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಾರೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ ಮಾಡಿದ್ದರು ಅಂತಾರೆ. ಬ್ರಿಟಿಷರ ವಿರುದ್ಧ ಡಚ್ಚರು, ಪೋರ್ಚುಗೀಸರು ಸಹ ಹೋರಾಟ ಮಾಡಿದ್ದರು. ಹಾಗಾದರೆ ಅವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಾ ಎಂದು ಸಿಟಿ ರವಿ ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಬಿಜೆಪಿಯವರನ್ನು ಮತಾಂಧರು ಎಂದು ಹೇಳುತ್ತಾರೆ. ಮತಾಂಧನಾದ ಟಿಪ್ಪು ಪರ ಇರುವ ಸಿದ್ದರಾಮಯ್ಯ ಅವರೇ ಮತಾಂಧರು ಎಂದು ಗರಂ ಆದರು.

    ಬಿಜೆಪಿ ಸರ್ಕಾರ ಸತ್ತೋಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಸರ್ಕಾರ ಸತ್ತ ಬಳಿಕವೇ ನಮ್ಮ ಸರ್ಕಾರ ಹುಟ್ಟಿಕೊಂಡಿದೆ. ಕಾಂಗ್ರೆಸ್ ಈಗ ಸತ್ತೋಗಿರುವ ಪಕ್ಷ. ಹಾಗಾಗಿ ಅವರು ಸಾವಿನ ಬಗ್ಗೆಯೇ ಮಾತನಾಡುತ್ತಾರೆ. ನೆರೆ ಪರಿಹಾರವಾಗಿ 50 ಸಾವಿರ 1 ಲಕ್ಷ ಹಣವನ್ನು ಯಾರು ಕೊಟ್ಟಿದ್ದು?. ಸತ್ತಿರುವವರು ಪರಿಹಾರ ಕೋಡೊಕೆ ಆಗುತ್ತಾ?, ಹತಾಶಾ ಮನೋಭಾವದಿಂದ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

    ಹೆಚ್‍ಡಿಕೆ ಬಿಜೆಪಿಯತ್ತ ಒಲವು ತೋರಿರುವ ವಿಚಾರ ಸಂಬಂಧ ಮಾತನಾಡಿ, ಹೆಚ್‍ಡಿಕೆಯವರದ್ದು ಪಿತ್ರಾರ್ಜಿತ ರಾಜಕೀಯ. ನಮ್ಮದು ಸ್ವಯಾರ್ಜಿತ ರಾಜಕೀಯ. ಅವರು ಯಾವಾಗ, ಯಾವ ಉದ್ದೇಶದ ದಾಳ ಉರುಳಿಸುತ್ತಾರೋ ಗೊತ್ತಿಲ್ಲ. ಪಿತ್ರಾರ್ಜಿತ ರಾಜಕೀಯದಲ್ಲಿ ಎಲ್ಲೋ ದಾಳ ಇಟ್ಟುಕೊಂಡು ಎಲ್ಲಿ ಬೇಕಾದರೂ ದಾಳಿ ಉರುಳಿಸಬಹುದು. ಅವರು ಯಾವ ಉದ್ದೇಶದಿಂದ ಸರ್ಕಾರ ಬೀಳಲು ಬಿಡಲ್ಲ ಎಂದು ಹೇಳಿದ್ದಾರೋ ಅದರ ಹಿನ್ನೆಲೆ ಗೊತ್ತಿಲ್ಲ. ನಾವು ಕೂಡ ಅದರ ರಾಜಕೀಯ ಲಾಭ ಪಡೆಯುವ ಉತ್ಸುಕದಲಿದ್ದೇವೆ. ಹೀಗಾಗಿ ಆ ಬಗ್ಗೆ ಏನೂ ಹೇಳಲ್ಲ ಎಂದರು.