Tag: CSKvsRCB

  • IPL 2024: ಟಾಪ್‌ ಟು ಬಾಟಮ್‌ ದಾಖಲೆ ಇರೋದು ಆರ್‌ಸಿಬಿ ಹೆಸರಲ್ಲೇ – ಇದು ಅಭಿಮಾನಿಗಳಿಗೆ ಹೆಗ್ಗಳಿಕೆ

    IPL 2024: ಟಾಪ್‌ ಟು ಬಾಟಮ್‌ ದಾಖಲೆ ಇರೋದು ಆರ್‌ಸಿಬಿ ಹೆಸರಲ್ಲೇ – ಇದು ಅಭಿಮಾನಿಗಳಿಗೆ ಹೆಗ್ಗಳಿಕೆ

    ಚೆನ್ನೈ: 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ (IPL 2024) ಇಂದಿನಿಂದ (ಮಾ.22) ಆರಂಭಗೊಳ್ಳುತ್ತಿದೆ. ಆರ್‌ಸಿಬಿ – ಸಿಎಸ್‌ಕೆ (RCB vs CSK) ನಡುವಿನ ಹೈವೋಲ್ಟೇಜ್‌ ಕದನಕ್ಕೆ ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಸಜ್ಜಾಗಿದೆ. ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

    ಐಪಿಎಲ್‌ ಕ್ರಿಕೆಟ್‌ ಇತಿಹಾಸದಲ್ಲಿ ಚೆನ್ನೈ ಮತ್ತು ಆರ್‌ಸಿಬಿ ತಂಡಗಳು ತಮ್ಮದೇ ಆದ ಫ್ಯಾನ್ಸ್‌ ಬೇಸ್‌ ಹೊಂದಿವೆ. ಭಾರತ-ಪಾಕಿಸ್ತಾನ ಪಂದ್ಯದಷ್ಟೇ ಇತ್ತಂಡಗಳ ಕಾದಾಟ ರೋಚಕವಾಗಿರುತ್ತದೆ. ಆದ್ರೆ ಐಪಿಎಲ್‌ನಲ್ಲಿ ರನ್‌ ಹೊಳೆ ಹರಿಸಿ ಇತಿಹಾಸ ನಿರ್ಮಿಸಿದ್ದು, ಕಳಪೆ ಮೊತ್ತಕ್ಕೆ ಆಲೌಟ್‌ ಆಗಿ ದಾಖಲೆ ಬರೆದಿರುವ ಹೆಸರು ಇರುವುದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡದ ಹೆಸರಿನಲ್ಲಿಯೇ ಅನ್ನೋದು ವಿಶೇಷ. ಅದನ್ನು ನಾವಿಲ್ಲಿ ಮೆಲುಕು ಹಾಕಬಹುದು.

    ಅತಿಹೆಚ್ಚು ರನ್‌ ಗಳಿಸಿ ಇತಿಹಾಸ ನಿರ್ಮಿಸಿದ ಟಾಪ್‌-5 ತಂಡಗಳು
    * ಆರ್‌ಸಿಬಿ – 263 ರನ್‌ – ಪುಣೆ ವಾರಿಯರ್ಸ್‌ ವಿರುದ್ಧ – 2013
    * ಲಕ್ನೋ ಸೂಪರ್‌ ಜೈಂಟ್ಸ್‌- 257 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2023
    * ಆರ್‌ಸಿಬಿ – 248 ರನ್‌ – ಗುಜರಾತ್‌ ಲಯನ್ಸ್‌ – 2016
    * ಸಿಎಸ್‌ಕೆ – 246 ರನ್‌ – ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ – 2010
    * ಕೆಕೆಆರ್‌ – 245 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2018

    ಅತೀ ಕಡಿಮೆ ರನ್‌ಗಳಿಗೆ ಆಲೌಟ್‌ ಆಗಿ ಕೆಟ್ಟ ದಾಖಲೆ ಬರೆದ ಅಗ್ರ-5 ತಂಡಗಳು
    * ಆರ್‌ಸಿಬಿ – 49 ರನ್‌ – ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ – 2017
    * ರಾಜಸ್ಥಾನ್‌ ರಾಯಲ್ಸ್ – 58 ರನ್‌ – ಆರ್‌ಸಿಬಿ ವಿರುದ್ಧ – 2009
    * ರಾಜಸ್ಥಾನ ರಾಯಲ್ಸ್‌ – 59 ರನ್‌ – ಆರ್‌ಸಿಬಿ ವಿರುದ್ಧ – 2023
    * ಡೆಲ್ಲಿ ಡೇರ್‌ ಡೆವಿಲ್ಸ್‌ – 66 ರನ್‌ – ಮುಂಬೈ ಇಂಡಿಯನ್ಸ್‌ ವಿರುದ್ಧ – 2017
    * ಡೆಲ್ಲಿ ಡೇರ್‌ ಡೆವಿಲ್ಸ್‌ – 67 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2017

  • IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಮುಂಬೈ: 16ನೇ ಐಪಿಎಲ್ (IPL 2023) ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ದೇಶದ ವಿವಿಧೆಡೆ 12 ಕ್ರೀಡಾಂಗಣಗಳಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.

    ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದಿರುವ ದಿಗ್ಗಜರು ಈ ಐಪಿಎಲ್‌ನೊಂದಿಗೆ ವಿದಾಯ ಹೇಳುವ ಸಾಧ್ಯತೆಗಳೂ ಇವೆ. ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ (S. Sreesanth) ಖಾಸಗಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) 2023ರ ಐಪಿಎಲ್ ಟ್ರೋಫಿ ಗೆಲ್ಲುತ್ತೆ ಅನ್ನಿಸಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸೋಫಿ ಬೆಂಕಿ ಬ್ಯಾಟಿಂಗ್‌ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    ಹೊಸ ತಂಡಗಳು ಟ್ರೋಫಿ ಗೆದ್ದರೆ ಖುಷಿಯಾಗುತ್ತೆ. ಅದರಲ್ಲೂ ಆರ್‌ಸಿಬಿ (RCB) ತಂಡ 2023ರ ಟ್ರೋಫಿ ಗೆದ್ದರೆ ನಾನು ತುಂಬಾನೇ ಖುಷಿಪಡುತ್ತೇನೆ. ಏಕೆಂದರೆ ಭಾರತೀಯ ಕ್ರಿಕೆಟ್ ಜಗತ್ತಿಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ಕೊಹ್ಲಿ (Virat Kohli) ಸಾಕಷ್ಟು ಕೊಡುಗೆ ನೀಡಿದ್ದಾರೆ. ಆರ್‌ಸಿಬಿ ಈವರೆಗೆ ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕಪ್ ಗೆದ್ದರೆ ಖುಷಿಪಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    ಮುಂಬೈ ಇಂಡಿಯನ್ಸ್ (Mumbai Indians) 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 2021ರ ಆವೃತ್ತಿ ಸೇರಿ 4 ಬಾರಿ ಚಾಂಪಿಯನ್ ಆಗಿದೆ. ಕೋಲ್ಕತ್ತಾ ನೈಟ್‌ರೈಡರ್ಸ್ 2 ಬಾರಿ ಪ್ರಶಸ್ತಿ ಬಾಚಿಕೊಂಡಿದ್ದು, 3ನೇ ಸ್ಥಾನದಲ್ಲಿದೆ. 2022ರ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.