Tag: CSK

  • USA ಮೇಜರ್‌ ಲೀಗ್‌ ಕ್ರಿಕೆಟ್‌ನಿಂದ ಹಿಂದೆ ಸರಿದ ಅಂಬಾಟಿ ರಾಯುಡು

    USA ಮೇಜರ್‌ ಲೀಗ್‌ ಕ್ರಿಕೆಟ್‌ನಿಂದ ಹಿಂದೆ ಸರಿದ ಅಂಬಾಟಿ ರಾಯುಡು

    ಮುಂಬೈ: ಸಿಎಸ್‌ಕೆ ಫ್ರಾಂಚೈಸಿ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು (Ambati Rayudu) ವೈಯಕ್ತಿಕ ಕಾರಣಗಳಿಂದ ಇದೇ ಮೊದಲ ಬಾರಿಗೆ ನಡೆಯುತ್ತಿದ್ದ USA ಮೇಜರ್‌ ಲೀಗ್‌ ಕ್ರಿಕೆಟ್‌ (USA Major League Cricket) ನಿಂದ ಹಿಂದೆ ಸರಿದಿದ್ದಾರೆ.

    16ನೇ ಆವೃತ್ತಿಯ ಬಳಿಕ ಐಪಿಎಲ್‌ಗೆ (IPL) ಗುಡ್‌ಬೈ ಹೇಳಿದ್ದ ರಾಯುಡು ಬಳಿಕ ಸಿಎಸ್‌ಕೆ ಸಹೋದರ ತಂಡವಾದ ಟೆಕ್ಸಾಸ್‌ ಸೂಪರ್‌ ಕಿಂಗ್ಸ್‌ ಪರ ಆಡಲು ಸಹಿ ಹಾಕಿದ್ದರು. ಆದರೀಗ ರಾಯುಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್‌ ಸಿಗ್ನಲ್‌

    ಏಕೆಂದರೆ ಭಾರತೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ವಿದೇಶಿ ಲೀಗ್​ಗಳಲ್ಲಿ ಆಡಲು ಮುಂದಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಯ ಬಳಿಕ ಈ ಕುರಿತು ಮಾತನಾಡಿರುವ ಕಾರ್ಯದರ್ಶಿ ಜಯ್‌ ಶಾ, ಪೂರ್ವನಿರ್ಧರಿತ ನಿವೃತ್ತಿಯ ಪ್ರವೃತ್ತಿಯನ್ನು ತಡೆಗಟ್ಟಲು ನಾವು ಹೊಸ ನೀತಿಯನ್ನು ಹೊರತರುತ್ತೇವೆ ಎಂದು ಹೇಳಿದ್ದಾರೆ.

    ಸಕ್ರಿಯ ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನ ನಿರ್ಬಂಧಿಸಲಾಗಿದೆ. ಆದ್ರೆ ಈಗಾಗಲೇ ನಿವೃತ್ತಿಯಾಗಿರುವವರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶವಿದೆ ಎಂದು ಬಿಸಿಸಿಐ (BCCI) ತಿಳಿಸಿದೆ. ಇದನ್ನೂ ಓದಿ: Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    ambati rayudu

    ವೈಯಕ್ತಿಕ ಕಾರಣಗಳಿಂದಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಜೊತೆಗಿನ ಎಂಎಲ್‌ಸಿಯ ಮೊದಲ ಸೀಸನ್‌ನಲ್ಲಿ ಭಾಗವಹಿಸಲು ಅಂಬಟಿ ರಾಯುಡು ಲಭ್ಯವಿರುವುದಿಲ್ಲ ಎಂದು ಟೆಕ್ಸಾಸ್‌ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

    ಯುಎಸ್‌ನ ಚೊಚ್ಚಲ ಮೇಜರ್‌ ಕ್ರಿಕೆಟ್‌ ಲೀಗ್‌ ಇದೇ ಜುಲೈ 13 ರಿಂದ 30ರ ವರೆಗೆ ನಡೆಯಲಿದೆ. ಕೆಕೆಆರ್‌, ಮುಂಬೈ ಇಂಡಿಯನ್ಸ್‌ ಸೇರಿದಂತೆ ಐಪಿಎಲ್‌ನ ಫ್ರಾಂಚೈಸಿಗಳು ಸ್ಪರ್ಧೆಯಲ್ಲಿ ತಮ್ಮದೇ ತಂಡಗಳನ್ನ ಹೊಂದಿವೆ.

    2010ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೂಲಕ ಐಪಿಎಲ್‌ ಪ್ರವೇಶಿಸಿದ ರಾಯುಡು, 2013ರಲ್ಲಿ ತಂಡದೊಂದಿಗೆ ಮೊದಲ ಟ್ರೋಫಿಗೆ ಮುತ್ತಿಟ್ಟಿದ್ದರು. 2015, 2017ರಲ್ಲೂ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. ಆ ನಂತರ ಹರಾಜಿನಲ್ಲಿ ಸಿಎಸ್‌ಕೆ ತಂಡದ ಪಾಲಾದರು. ಸಿಎಸ್‌ಕೆ ಪರವೂ 2018, 2021ರ ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ 2023ರ ಆವೃತ್ತಿಯಲ್ಲಿ ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿದ್ದರಿಂದ ಪ್ರತಿ ಇನ್ನಿಂಗ್ಸ್‌ನಲ್ಲೂ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿಯೇ ಕಣಕ್ಕಿಳಿದರು. 2023ರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಭರ್ಜರಿ ಸಿಕ್ಸರ್‌, ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡವನ್ನು ಚಾಂಪಿಯನ್‌ ಹಾದಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೇ 6ನೇ ಬಾರಿಗೆ ಟ್ರೋಫಿ ಗೆಲುವಿನ ಪಾಲುದಾರರೂ ಆಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

    ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

    ಚೆನ್ನೈ: ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಗೆದ್ದು ಐಪಿಎಲ್‌ ಚಾಂಪಿಯನ್‌ (IPL Champion) ಪಟ್ಟ ಅಲಂಕರಿಸಿದ ಬೆನ್ನಲ್ಲೇ ಈಗ ತಮಿಳುನಾಡು (Tamil Nadu) ರಾಜಕೀಯ ನಾಯಕರು ಇದರಲ್ಲೂ ರಾಜಕೀಯ ಮಾಡಿದ್ದಾರೆ.

    ಸಿಎಸ್‌ಕೆ ಜಯಗಳಿಸಿದ ಬೆನ್ನಲ್ಲೇ ಡಿಎಂಕೆ “ಗುಜರಾತ್ ಮಾದರಿಯ ಮೇಲೆ ದ್ರಾವಿಡ ಮಾದರಿಯ ವಿಜಯ” ಎಂದು ಡಿಎಂಕೆ (DMK) ಸಂದೇಶ ಪ್ರಕಟಿಸಿದೆ. ಇದನ್ನೂ ಓದಿ: IPLನಲ್ಲಿ ದುಡ್ಡೋ ದುಡ್ಡು; ಚಾಂಪಿಯನ್ಸ್‌ ತಂಡಕ್ಕೆ 20 ಕೋಟಿ, ಲಕ್ಷ ಲಕ್ಷ ಬಾಚಿಕೊಂಡ ಗಿಲ್‌ – ಯಾರಿಗೆ ಎಷ್ಟೆಷ್ಟು ಲಕ್ಷ?

    ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (K Annamalai), ಜಡೇಜಾ ಬಿಜೆಪಿ ಕಾರ್ಯಕರ್ತ ಮತ್ತು ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿ ನನಗೂ ಹೆಮ್ಮೆ ಇದೆ. ಸಿಎಸ್‌ಕೆಗಿಂತ ಜಿಟಿಯಲ್ಲಿ ಹೆಚ್ಚು ತಮಿಳು ಆಟಗಾರರಿದ್ದರು ಎಂದು ಹೇಳಿದ್ದಾರೆ.

    ರವೀಂದ್ರ ಜಡೇಜಾ (Ravindra Jadeja) ಎಲ್ಲಿಯೂ ಬಿಜೆಪಿಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿಲ್ಲ. ಆದರೆ ಅವರ ಪತ್ನಿ 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ 2022ರ ಚುನಾವಣೆಯಲ್ಲಿ ಜಾಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿ 80 ಸಾವಿರ ಮತಗಳಿಂದ ಜಯಗಳಿಸಿದ್ದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಗುಜರಾತ್‌ 4 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿತ್ತು. ಚೆನ್ನೈ ಬ್ಯಾಟಿಂಗ್‌ ವೇಳೆ ಭಾರೀ ಮಳೆ ಸುರಿದ ಪರಿಣಾಮ ಚೆನ್ನೈಗೆ ಗೆಲುವಿಗೆ 15 ಓವರ್‌ಗಳಲ್ಲಿ 171 ರನ್‌ಗಳ ಟಾರ್ಗೆಟ್‌ ನೀಡಲಾಗಿತ್ತು.

    ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 15 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಗುರಿಯನ್ನು ತಲುಪಿತು. ಕೊನೆಯ ಎರಡು ಎಸೆತಗಳಲ್ಲಿ 10 ರನ್‌ ಬೇಕಿತ್ತು. ಮೋಹಿತ್‌ ಶರ್ಮಾ ಎಸೆದ 15ನೇ ಓವರಿನ 5ನೇ ಎಸೆತದಲ್ಲಿ ಜಡೇಜಾ ಸಿಕ್ಸ್‌ ಸಿಡಿಸಿದರೆ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

  • IPL Champions: ಗುಡ್‌ನ್ಯೂಸ್‌ – ಸದ್ಯಕ್ಕಿಲ್ಲ ನಿವೃತ್ತಿ, ಮುಂದಿನ IPLನಲ್ಲೂ ಕಣಕ್ಕಿಳಿಯಲಿದ್ದಾರೆ ಮಹಿ

    IPL Champions: ಗುಡ್‌ನ್ಯೂಸ್‌ – ಸದ್ಯಕ್ಕಿಲ್ಲ ನಿವೃತ್ತಿ, ಮುಂದಿನ IPLನಲ್ಲೂ ಕಣಕ್ಕಿಳಿಯಲಿದ್ದಾರೆ ಮಹಿ

    ಚೆನ್ನೈ: ನಿನ್ನೆ ನಡೆದ 16ನೇ ಆವೃತ್ತಿಯ ಐಪಿಎಲ್‌ (IPL 2023) ಫೈನಲ್‌ ಪಂದ್ಯದಲ್ಲಿ ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 5ನೇ ಬಾರಿಗೆ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡಿತು.

    ಈ ಮೂಲಕ ಗೆಲುವಿನ ಓಟದಲ್ಲಿ ಸಾಗುತ್ತಿದ್ದ ಗುಜರಾತ್‌ ಟೈಟಾನ್ಸ್‌ (GT) ಆಟಕ್ಕೆ ಬ್ರೇಕ್‌ ಹಾಕುವ ಜೊತೆಗೆ 5 ಬಾರಿ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್‌ (MI) ದಾಖಲೆಯನ್ನ ಸರಿಗಟ್ಟಿತು.

    215 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 3 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಬಳಿಕ ತಡರಾತ್ರಿ 12:10ಕ್ಕೆ ಆರಂಭಗೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್‌ ಲೂಯಿಸ್‌ (DSL) ನಿಯಮ ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್‌ ಗಳ ಬೃಹತ್‌ ಮೊತ್ತದ ಟಾರ್ಗೆಟ್‌ ಪಡೆಯಿತು. ಆದರೆ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದಿಂದ ನಿಗದಿತ ಓವರ್‌ಗಳಲ್ಲಿ ರನ್‌ ಪೂರೈಸುವಲ್ಲಿ ಯಶಸ್ವಿಯಾಯಿತು. ಮಧ್ಯ ರಾತ್ರಿಯಲ್ಲಿ ಆರಂಭಗೊಂಡ ಪಂದ್ಯ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿತ್ತು.

    ಇನ್ನೂ 2023ರ ಐಪಿಎಲ್‌ ಆರಂಭದಿಂದಲೂ ಸಹ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ಧೋನಿ ಬಳಿ ಕೇಳಿದಾಗ ಸ್ಪಷ್ಟ ಉತ್ತರ ಬಂದಿರಲಿಲ್ಲ. ಇದೀಗ ಫೈನಲ್ ಪಂದ್ಯ ಮುಗಿದ ಬಳಿಕ ಎಲ್ಲ ಗೊಂದಲಗಳಿಗೆ ಧೋನಿ ತೆರೆ ಎಳೆದಿದ್ದು, ಮುಂದಿನ ಐಪಿಎಲ್‌ನಲ್ಲೂ ಆಡುವ ಸುಳಿವು ಕೊಟ್ಟಿದ್ದಾರೆ. ಇದು ಮಹಿ ಅಭಿಮಾನಿಗಳಿಗೆ ಹಬ್ಬವಾಗಿದೆ.

    ಐಪಿಎಲ್‌ ಫೈನಲ್‌ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಧೋನಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ ಎಂದು ತಿಳಿಸಿದ್ದಾರೆ.

    ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕರಾಗಿದ್ದಾರೆ.

  • ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

    ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

    ಅಹ್ಮದಾಬಾದ್: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಸ್ಟಾರ್‌ ಆಟಗಾರ ಅಂಬಾಟಿ ರಾಯುಡು (37) (Ambati Rayudu) ಐಪಿಎಲ್‌ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.

    ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ (GT) ಫೈನಲ್‌ ಪಂದ್ಯವು ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ ಎಂದು‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

    5 ಬಾರಿ ಚಾಂಪಿಯನ್ಸ್‌ ಪಟ್ಟ ಗಿಟ್ಟಿಸಿಕೊಂಡಿರುವ ಮುಂಬೈ ಇಂಡಿಯನ್ಸ್‌ (MI) ಹಾಗೂ 4 ಬಾರಿ ಚಾಂಪಿಯನ್‌ ಪಟ್ಟ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ನಂತಹ ಬಲಿಷ್ಠ ತಂಡಗಳನ್ನ ಪ್ರತಿನಿಧಿಸಿದ್ದ ಅಂಬಟಿ ರಾಯುಡು 14 ಆವೃತ್ತಿಯಲ್ಲಿ 204 ಪಂದ್ಯಗಳನ್ನಾಡಿದ್ದಾರೆ. 11 ಬಾರಿ ಪ್ಲೇ ಆಫ್ಸ್‌, 8 ಬಾರಿ ಫೈನಲ್ಸ್‌ ಪ್ರವೇಶಿಸಿದ್ದು ಮತ್ತು 5 ಟ್ರೋಫಿಗಳು. ಇದೀಗ 6ನೇ ಟ್ರೋಫಿ ಗೆಲ್ಲುವ ಅವಕಾಶ ಸಿಗಲಿ ಎಂಬ ಆಶಯದಲ್ಲಿದ್ದೇನೆ. ಇದೊಂದು ಅಮೋಘ ಪಯಣ. ಈ ಬಾರಿ ಐಪಿಎಲ್‌ ಫೈನಲ್‌ ನನ್ನ ಅಂತಿಮ ಐಪಿಎಲ್‌ ಪಂದ್ಯ ಎಂದು ನಿರ್ಧರಿಸಿದ್ದೇನೆ. ಈ ಅದ್ಭುತ ಟೂರ್ನಿಯಲ್ಲಿ ಆಡುವುದನ್ನು ಬಹಳ ಆನಂದಿಸಿದ್ದೇನೆ. ಎಲ್ಲರಿಗೂ ಧನ್ಯವಾದ. ಇಲ್ಲಿ ಯೂ ಟರ್ನ್ ಇಲ್ಲವೇ ಇಲ್ಲʼ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

    2010ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೂಲಕ ಐಪಿಎಲ್‌ ಪ್ರವೇಶಿಸಿದ ರಾಯುಡು, 2013ರಲ್ಲಿ ತಂಡದೊಂದಿಗೆ ಮೊದಲ ಟ್ರೋಫಿಗೆ ಮುತ್ತಿಟ್ಟಿದ್ದರು. 2015, 2017ರಲ್ಲೂ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. ಆ ನಂತರ ಹರಾಜಿನಲ್ಲಿ ಸಿಎಸ್‌ಕೆ ತಂಡದ ಪಾಲಾದರು. ಸಿಎಸ್‌ಕೆ ಪರವೂ 2018, 2021ರ ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ 2023ರ ಆವೃತ್ತಿಯಲ್ಲಿ ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿದ್ದರಿಂದ ಪ್ರತಿ ಇನ್ನಿಂಗ್ಸ್‌ನಲ್ಲೂ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿಯೇ ಕಣಕ್ಕಿಳಿದರು. ಈ ಬಾರಿ ಆಡಿದ ಒಟ್ಟು 15 ಪಂದ್ಯಗಳಲ್ಲಿ ರಾಯುಡು 132.38ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 139 ರನ್‌ ಮಾತ್ರವೇ ಗಳಿಸಿದ್ದಾರೆ.

    ambati rayudu

    ಯಶಸ್ವಿ ಆಟಗಾರ:
    ಯಾವುದೇ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆನೆ ಬಲ ತಂದುಕೊಡಬಲ್ಲ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಅಂಬಾಟಿ ರಾಯುಡು, ಐಪಿಎಲ್‌ ಕೆರಿಯರ್‌ನಲ್ಲಿ ಈವರೆಗೆ ಆಡಿದ 203 ಪಂದ್ಯಗಳಲ್ಲಿ ಬರೋಬ್ಬರಿ 4,329 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಮತ್ತು ಏಕೈಕ ಶತಕವಿದೆ. ಇದನ್ನೂ ಓದಿ: IPL 2023 Finals: ಗಿಲ್‌ ಅಬ್ಬರಕ್ಕೆ ಮುಂಬೈ ಬರ್ನ್‌ – 2ನೇ ಬಾರಿಗೆ ಗುಜರಾತ್‌ ಟೈಟಾನ್ಸ್‌ ಫೈನಲ್‌ಗೆ

    ಟೀಮ್ ಇಂಡಿಯಾದಲ್ಲಿ ನೋ ಚಾನ್ಸ್‌:
    ಐಪಿಎಲ್‌ 2018 ಟೂರ್ನಿಯಲ್ಲಿ ನೀಡಿದ್ದ ಶ್ರೇಷ್ಠ ಪ್ರದರ್ಶನದ ಫಲವಾಗಿ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದಿದ್ದ ಅಂಬಾಟಿ ರಾಯುಡು, ಒಡಿಐ ಮತ್ತು ಟಿ20-ಐನಲ್ಲಿ ಸಿಕ್ಕ ಬೆರಳೆಣಿಕೆಯ ಅವಕಾಶಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆದರೂ ಅವರಿಗೆ ದೀರ್ಘಕಾಲದ ಅವಕಾಶ ಸಿಗದೇ ಹೋದದ್ದು ದುರದೃಷ್ಟವೇ ಸರಿ. 2019 ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲೂ ರಾಯುಡುಗೆ ಟೀಂ ಇಂಡಿಯಾದಲ್ಲಿ ಸ್ಥಾನ ನಿರಾಕರಿಸಲಾಯಿತು.

  • IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

    IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

    ಚೆನ್ನೈ: 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಲೀಗ್‌ ಹಂತದ ಎಲ್ಲಾ ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ಲೇ ಆಫ್‌ ರೋಚಕ ಘಟ್ಟ ತಲುಪಿದೆ. ಮೇ 23 ರಿಂದ ಪ್ಲೇ ಆಫ್‌ (IPL 2023 Playoffs) ಪಂದ್ಯಗಳು ಆರಂಭವಾಗಲಿದೆ.

    10 ತಂಡಗಳ ಪೈಕಿ ಗುಜರಾತ್‌ ಟೈಟಾನ್ಸ್‌ (GT), ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬೈ ಇಂಡಿಯನ್ಸ್‌ (MI) ತಂಡಗಳು ಪ್ಲೇ ಆಫ್‌ನಲ್ಲಿ ಉಳಿದಿವೆ.

    ಮೇ 23ರಂದು ಮೊದಲ ಕ್ವಾಲಿಫೈಯರ್‌ ಪಂದ್ಯ ಗುಜರಾತ್‌ ಟೈಟಾನ್ಸ್‌ ಹಾಗೂ ಸಿಎಸ್‌ಕೆ ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಮೇ 24ರಂದು ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಮೊದಲ ಎಲಿಮಿನೇಟರ್‌ ಪಂದ್ಯಗಳು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    ಇನ್ನೂ ಕ್ವಾಲಿಫೈಯರ್‌ ಮೊದಲ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಅದಾದ ಬಳಿಕ ಕ್ವಾಲಿಫೈಯರ್‌ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡಗಳ ನಡುವೆ ಮೇ 26ರಂದು 2ನೇ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಜಯಭೇರಿ ಬಾರಿಸಿದ ಎರಡು ತಂಡಗಳು ಅಂತಿಮವಾಗಿ ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಸೆಣಸಲಿವೆ. ಇದನ್ನೂ ಓದಿ: IPL Playoffs Schedule: ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್‌

    ಕಳೆದ ವರ್ಷವೂ 2ನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯಗಳು ಅಹಮದಾಬಾದ್‌ನಲ್ಲೇ ನಡೆದಿದ್ದವು. ಮೊದಲ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳು ಕೋಲ್ಕತಾದಲ್ಲಿ ನಡೆದಿತ್ತು. ಈ ವರ್ಷ ಉದ್ಘಾಟನಾ ಸಮಾರಂಭ ಹಾಗೂ ಫೈನಲ್‌ ಪಂದ್ಯಕ್ಕೂ ಮೋದಿ ಕ್ರೀಡಾಂಗಣವನ್ನೇ ಬಿಸಿಸಿಐ (BCCI) ಆಯ್ಕೆ ಮಾಡಿದೆ.

    ಅಲ್ಲದೇ ಸಿಎಸ್‌ಕೆ ತಂಡದ ನಾಯಕ ಎಂ.ಎಸ್‌ ಧೋನಿ ಈ ಬಾರಿ ಐಪಿಎಲ್‌ನೊಂದಿಗೆ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ. ಈ ಹಿನ್ನೆಲೆಯಲ್ಲಿ ತವರು ಅಂಗಳದಲ್ಲಿ ಮಹಿ ಬ್ಯಾಟಿಂಗ್‌ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರವಾಗಿದ್ದಾರೆ.

  • 16.25 ಕೋಟಿಗೆ ಖರೀದಿಸಿದ ಆಟಗಾರ ಗಳಿಸಿದ್ದು 15 ರನ್‌, ಅಬ್ಬಬ್ಬಾ 1 ರನ್‌ ಬೆಲೆ 1.08 ಕೋಟಿ..!

    16.25 ಕೋಟಿಗೆ ಖರೀದಿಸಿದ ಆಟಗಾರ ಗಳಿಸಿದ್ದು 15 ರನ್‌, ಅಬ್ಬಬ್ಬಾ 1 ರನ್‌ ಬೆಲೆ 1.08 ಕೋಟಿ..!

    ಮುಂಬೈ: ಭಾರೀ ನಿರೀಕ್ಷೆಯೊಂದಿಗೆ ದುಬಾರಿ ಮೊತ್ತಕ್ಕೆ ಇಂಗ್ಲೆಂಡ್‌ ತಂಡದ ಬೆನ್‌ಸ್ಟೋಕ್ಸ್‌ (Ben Stokes) ಆಟಗಾರನನ್ನ ಖರೀದಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡವು ಇದೀಗ ನಿರಾಸೆ ಅನುಭವಿಸಿದೆ. ಎರಡು ಪಂದ್ಯಗಳಲ್ಲಿ ಆಡಿದ ಸ್ಟೋಕ್ಸ್‌ ಗಳಿಸಿದ್ದು ಕೇವಲ 15 ರನ್‌ ಮಾತ್ರ. ಹೀಗಾಗಿ ಅವರು ಗಳಿಸಿದ ಒಂದೊಂದು ರನ್‌ ಬೆಲೆ 1.08 ಕೋಟಿ ಮೊತ್ತವನ್ನು ಸಿಎಸ್‌ಕೆ ಫ್ರಾಂಚೈಸಿ ಕೊಟ್ಟಂತಾಗಿದೆ.

    ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes), ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡ ತೊರೆದು ತವರಿಗೆ ಮರಳಲು ಸಿದ್ಧರಾಗಿದ್ದಾರೆ. ತಂಡದ ಅಂತಿಮ ಲೀಗ್ ಪಂದ್ಯದ ಬಳಿಕ ಅವರು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಮುಂದಿನ ತಿಂಗಳು ಮಹತ್ವದ ಆಶಸ್‌ (Ashes) ಟೆಸ್ಟ್‌ ಸರಣಿ ನಡೆಯಲಿದ್ದು, ಇದಕ್ಕೆ ಸಿದ್ಧರಾಗುವ ಸಲುವಾಗಿ ಕೆಲ ಸಮಯ ವಿಶ್ರಾಂತಿ ಪಡೆಯಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಗಿಲ್‌ ಚೊಚ್ಚಲ ಶತಕ, ಶಮಿ, ಮೋಹಿತ್‌ ಬೆಂಕಿ ಬೌಲಿಂಗ್‌ – ಗುಜರಾತ್‌ ಪ್ಲೇ ಆಫ್‌ಗೆ, ಹೈದರಾಬಾದ್‌ ಮನೆಗೆ

    2023 ಐಪಿಎಲ್‌ ಆವೃತ್ತಿಗೆ 2022ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್‌ ಹರಾಜಿನಲ್ಲಿ ಬರೋಬ್ಬರಿ 16.25 ಕೋಟಿ ರೂ.ಗೆ ಸ್ಟೋಕ್ಸ್‌ ಅವರನ್ನ ಸಿಎಸ್‌ಕೆ ತಂಡವು ಖರೀದಿಸಿತ್ತು. ಆದ್ರೆ 31 ವರ್ಷದ ಆಟಗಾರ ಸ್ಟೋಕ್ಸ್‌ ಕೇವಲ ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡು ಕ್ರಮವಾಗಿ 7 ಮತ್ತು 8 ರನ್‌ ಗಳಿಸಿದರು. ಒಂದೇ ಒಂದು ಓವರ್‌ ಬೌಲಿಂಗ್‌ ಮಾಡಿ 18 ರನ್‌ ಕೊಟ್ಟರು. ನಂತರ ಗಾಯಗೊಂಡ ಅವರು ಫಿಟ್‌ನೆಸ್‌ ಸಮಸ್ಯೆಗೆ ಒಳಗಾಗಿ ಪ್ಲೇಯಿಂಗ್‌ 11ನಿಂದ ಹೊರಗುಳಿದರು. ಇದನ್ನೂ ಓದಿ: ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ನಾಯಿಯಿಂದ ಕಚ್ಚಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಪುತ್ರ

    ಜೂನ್ 16ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿ ಆರಂಭವಾಗುತ್ತಿದ್ದು, ಸ್ಟೋಕ್ಸ್ ಶನಿವಾರ ಮಧ್ಯಾಹ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅಂತಿಮ ಲೀಗ್‌ ಪಂದ್ಯದ ಬಳಿಕ ಇಂಗ್ಲೆಂಡ್‌ಗೆ ಮರಳಲಿದ್ದಾರೆ. ಆಶಸ್‌ ಸರಣಿಗೆ ತಯಾರಿಯ ಭಾಗವಾಗಿ, ಇಂಗ್ಲೆಂಡ್ ತಂಡವು ಜೂನ್ 1ರಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಲಿದೆ. ದೀರ್ಘಕಾಲದ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಸ್ಟೋಕ್ಸ್, ಟೆಸ್ಟ್‌ ತಂಡಕ್ಕೆ ಮರಳಲು ಕೆಲ ಕಾಲ ಬಿಡುವು ಸಿಗುತ್ತದೆ ಎಂಬ ಉದ್ದೇಶದಿಂದ ಸಿಎಸ್‌ಕೆ ಕ್ಯಾಂಪ್‌ ತೊರೆಯಲು ನಿರ್ಧರಿಸಿದ್ದಾರೆ ಎಂದು ತಂಡದ ಆಪ್ತ ಮೂಲಗಳು ತಿಳಿಸಿವೆ.

  • ನಿವೃತ್ತಿಯ ಬಗ್ಗೆ ಮತ್ತೊಮ್ಮೆ ಬಿಗ್‌ ಹಿಂಟ್‌ ಕೊಟ್ಟ ಮಹಿ

    ನಿವೃತ್ತಿಯ ಬಗ್ಗೆ ಮತ್ತೊಮ್ಮೆ ಬಿಗ್‌ ಹಿಂಟ್‌ ಕೊಟ್ಟ ಮಹಿ

    ಚೆನ್ನೈ: ಸಿಎಸ್‌ಕೆ (CSK) ತಂಡದ ನಾಯಕ ಎಂ.ಎಸ್‌ ಧೋನಿ (MS Dhoni) ಭಾನುವಾರ‌ ನಡೆದ ಪಂದ್ಯದ ಬಳಿಕ ತಮ್ಮ ನಿವೃತ್ತಿಯ ಬಗ್ಗೆ ದೊಡ್ಡ ಹಿಂಟ್‌ ಕೊಟ್ಟಿದ್ದಾರೆ. ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಗುಡ್‌ಬೈ ಹೇಳಿರುವ ಮಹಿ ಪಾಲಿಗೆ ಈ ಬಾರಿಯ ಐಪಿಎಲ್‌ (IPL 2023) ಕೊನೆಯ ಟೂರ್ನಿಯಾಗಿದೆ.

    ಭಾನುವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ನಡೆದ ಪಂದ್ಯದ ಬಳಿಕ ಚೆಪಾಕ್‌ನ ತವರು ಮೈದಾನದಲ್ಲಿ ನಡೆದ ಕೊನೆಯ ಪಂದ್ಯದ ಬಳಿಕ ವಿಶೇಷ ಲ್ಯಾಪ್ ಆಫ್ ಗೌರವ ಸಲ್ಲಿಸಲಾಯಿತು. ಚೆನ್ನೈ ತಂಡಕ್ಕಾಗಿ ಅನೇಕ ವರ್ಷಗಳಿಂದ ತನಗೆ ಮತ್ತು ತಂಡಕ್ಕೆ ನೀಡಿದ ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ರಿಂಕು, ರಾಣಾ ಬ್ಯಾಟಿಂಗ್‌ ಕಮಾಲ್‌ – ಕೋಲ್ಕತ್ತಾಗೆ 6 ವಿಕೆಟ್‌ಗಳ ಭರ್ಜರಿ ಜಯ

    ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಚೆನ್ನೈ ಸೋತರೂ ಮೈದಾನದ ಸುತ್ತಲೂ ಹೋಗುವಾಗ ನಗುಮುಖದಿಂದಲೇ ಲ್ಯಾಕ್‌ಆಫ್‌ ಮಾಡಿದರು. ಇದೇ ವೇಳೆ ಅಭಿಮಾನಿಗಳಿಗೆ ಚೆಂಡು ಹಾಗೂ ಚೆನ್ನೈ ಜೆರ್ಸಿಯನ್ನು ಗಿಫ್ಟ್‌ ಮಾಡಿ, ತವರು ಮೈದಾನದಿಂದ ಹೊರನಡೆದರು. ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೆ ಆಫ್‌ ಪ್ರವೇಶಿಸಿದರೆ, ಮತ್ತೊಮ್ಮೆ ತವರಿಗೆ ಮರಳು ಸಾಧ್ಯತೆಗಳಿವೆ. ಇದನ್ನೂ ಓದಿ: 59 ರನ್‌ಗಳಿಗೆ ರಾಜಸ್ಥಾನ್‌ ಆಲೌಟ್‌ – RCBಗೆ 112 ರನ್‌ಗಳ ಭರ್ಜರಿ ಜಯ – ಪ್ಲೆ ಆಫ್‌ ಕನಸು ಜೀವಂತ

    ಚೆನ್ನೈ 13 ರಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿ +0.381 ರನ್‌ರೇಟ್‌ನೊಂದಿಗೆ 15 ಅಂಕ ಪಡೆದು 2ನೇ ಸ್ಥಾನದಲ್ಲಿದೆ. 3 ಮತ್ತು 4ನೇ ಸ್ಥಾನದಲ್ಲಿ ಮುಂಬೈ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಕ್ರಮವಾಗಿ ಸ್ಥಾನ ಪಡೆದಿವೆ. ನಂತರದ ಸ್ಥಾನಗಳಲ್ಲಿ ಆರ್‌ಸಿಬಿ, ರಾಜಸ್ಥಾನ್‌ ರಾಯಲ್ಸ್‌, ಕೆಕೆಆರ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳೂ ಸಹ ಪ್ಲೆ ಆಫ್‌ ಹಾದಿಯಲ್ಲಿ ಪೈಪೋಟಿಗೆ ಬಿದ್ದಿವೆ.

    ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ 6 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿತ್ತು. 145 ರನ್‌ ಅಲ್ಪ ಮೊತ್ತದ ಗುರಿ ಪಡೆದ ಕೋಲ್ಕತ್ತಾ ನೈಟ್‌ರೈಡರ್ಸ್‌ 18.3 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ ಗೆಲುವು ಸಾಧಿಸಿತು.

  • IPL 2023: ಪ್ಲೇ ಆಫ್ ಲೆಕ್ಕಾಚಾರ ಏನು? – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ RCB ಫ್ಯಾನ್ಸ್

    IPL 2023: ಪ್ಲೇ ಆಫ್ ಲೆಕ್ಕಾಚಾರ ಏನು? – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ RCB ಫ್ಯಾನ್ಸ್

    ಮುಂಬೈ: ಈ ಬಾರಿ ಐಪಿಎಲ್‌ನಲ್ಲಿ (IPL 2023) ಹಿಂದೆಂದಿಗಿಂತಲೂ ಪೈಪೋಟಿ ಹೆಚ್ಚಾಗಿದೆ. ಕನಿಷ್ಠ ಪ್ಲೇ ಆಫ್ ತಲುಪಲೇಬೇಕೆಂದು ಎಲ್ಲ ತಂಡಗಳು ಪೈಪೋಟಿಗೆ ಬಿದ್ದಿವೆ. ಯಾವ ತಂಡದ ಲೆಕ್ಕಾಚಾರ ಹೇಗಿದೆ ಎಂಬುದನ್ನು ಇಲ್ಲಿ ನೋಡಬಹುದು.

    ಗುಜರಾತ್ ಟೈಟಾನ್ಸ್:
    ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ಸ್ ಪಟ್ಟಕ್ಕೇರಿದ ಗುಜರಾತ್ ಟೈಟಾನ್ಸ್ (Gujarat Taitans) ತಂಡ ತನ್ನ 2ನೇ ಆವೃತ್ತಿಯಲ್ಲೂ ಪ್ಲೆ ಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ. ಈ ಸೀಜನ್‌ನಲ್ಲಿ 11 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿದ್ದು, 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ 1ರಲ್ಲಿ ಗೆದ್ದರೂ ಟೈಟಾನ್ಸ್ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಆಟಕ್ಕೆ ಆರ್‌ಸಿಬಿ ಬರ್ನ್‌ – ಮುಂಬೈಗೆ 6 ವಿಕೆಟ್‌ಗಳ ಭರ್ಜರಿ ಜಯ

    ಸಿಎಸ್‌ಕೆ:
    4 ಬಾರಿ ಐಪಿಎಲ್ ಚಾಂಪಿಯನ್ಸ್ ಪಟ್ಟ ಗಿಟ್ಟಿಸಿಕೊಂಡಿರುವ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) 12ರಲ್ಲಿ 7 ಪಂದ್ಯದಲ್ಲಿ ಗೆಲುವು ಸಾಧಿಸಿದೆ. 4 ಪಂದ್ಯ ಸೋತಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹಾಗಾಗಿ ಸಿಎಸ್‌ಕೆ ತಂಡ 15 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಉಳಿದ 2 ಪಂದ್ಯಗಳಲ್ಲಿ 1 ಅಥವಾ 2ರಲ್ಲಿ ಗೆದ್ದರೂ ಪ್ಲೆ ಆಫ್ ಪ್ರವೇಶಿಸಲಿದೆ. ಇಲ್ಲವಾದಲ್ಲಿ ಪ್ಲೆ ಆಫ್ ಹಾದಿ ಇನ್ನೂ ಕಠಿಣವಾಗಲಿದೆ.

    ಮುಂಬೈ:
    ಕಳೆದ ವಾರವಷ್ಟೇ 7ನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ (Mumbai Indians) ಬ್ಯಾಟಿಂಗ್ ಬಲದಿಂದ 3ನೇ ಸ್ಥಾನಕ್ಕೆ ಜಿಗಿದಿದೆ. 11ರಲ್ಲಿ 6 ಪಂದ್ಯಗಳನ್ನ ಗೆದ್ದಿರುವ ಮುಂಬೈ 12 ಅಂಕ ಗಳಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದರೂ ಪ್ಲೆ ಆಫ್ ಖಚಿತವಾಗಲಿದೆ. ಇದನ್ನೂ ಓದಿ: ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    ಈ ತಂಡಗಳ ನಡುವೆ ಹಣಾಹಣಿ:
    ಈ ಬಾರಿ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG), ರಾಜಸ್ಥಾನ್ ರಾಯಲ್ಸ್, ಕೆಕೆಆರ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಭಾರೀ ಪೈಪೋಟಿ ಇದೆ. ಏಕೆಂದರೆ ಲಕ್ನೋ 11 ಅಂಕ ಗಳಿಸಿ 4ನೇ ಸ್ಥಾನದಲ್ಲಿದ್ದರೆ ಉಳಿದ ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಕ್ರಮವಾಗಿ 5 ರಿಂದ 8 ಸ್ಥಾನದಲ್ಲಿವೆ. ಗುರುವಾರ ನಡೆಯುವ ಪಂದ್ಯದಲ್ಲಿ ಕೆಕೆಆರ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಸೆಣಸಲಿದ್ದು, ಗೆದ್ದ ತಂಡ 4ನೇ ಸ್ಥಾನಕ್ಕೇರಲಿದೆ.

    ಇನ್ನೂ ಪ್ರತಿಬಾರಿ ಈ ಸಲ ಕಪ್ ನಮ್ದೆ ಅನ್ನೋ ಉತ್ಸಾಹದೊಂದಿಗೆ ಬರುವ ಆರ್‌ಸಿಬಿ ಸಹ 11ರ ಪೈಕಿ 5 ಪಂದ್ಯದಲ್ಲಿ ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ. ಉಳಿದ ಎಲ್ಲ ಪಂದ್ಯಗಳೂ ನಿರ್ಣಾಕವಾಗಿದೆ. ಇದನ್ನೂ ಓದಿ: ಗುಜರಾತ್‌ ಟೈಟಾನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ – ಪಾಂಡ್ಯ ಪಡೆ ಬಹುತೇಕ ಪ್ಲೇ ಆಫ್‌ಗೆ; ಈ ಸಲ ಕಪ್‌ ಯಾರದ್ದು?

    ಹೈದರಾಬಾದ್, ಡೆಲ್ಲಿ:
    ಆರಂಭದಿಂದಲೂ ಸೋಲಿನ ಹಾದಿಯಲ್ಲೇ ಮುಂದುವರಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೆ ಆಫ್‌ನಿಂದ ಔಟ್ ಆಗೋದು ಖಚಿತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 8 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಇದೆ. ಆದ್ರೆ 10ರಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಹೈದರಾಬಾದ್ ತಂಡ ಇನ್ನುಳಿದ 4 ಪಂದ್ಯಗಳಲ್ಲೂ ಸತತ ಗೆಲುವು ಸಾಧಿಸಿದರೆ, ಪ್ಲೆ ಆಫ್ ಪ್ರವೇಶಿಸಬಹುದಾಗಿದೆ.

  • ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    ಮುಂಬೈ: ಎಂ.ಎಸ್‌ ಧೋನಿ (MS Dhoni) ಆರ್‌ಸಿಬಿ (RCB) ಕ್ಯಾಪ್ಟನ್‌ ಆಗಿದ್ದಿದ್ದರೆ ಆರ್‌ಸಿಬಿ ತಂಡ ಮೂರು ಬಾರಿ ಐಪಿಎಲ್‌ ಕಪ್‌ (Indian Premier League Title) ಗೆಲ್ಲುತ್ತಿತ್ತು ಎಂದು ಪಾಕಿಸ್ತಾನ (Pakistan) ಕ್ರಿಕೆಟ್‌ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್‌ ಅಭಿಪ್ರಾಯಪಟ್ಟಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2008ರಲ್ಲಿ ಐಪಿಎಲ್‌ ಆರಂಭಗೊಂಡಾಗಿನಿಂದಲೂ ಆರ್‌ಸಿಬಿ ಈವರೆಗೆ ಒಮ್ಮೆಯೂ ಕಪ್‌ ಗೆದ್ದಿಲ್ಲ. 2009ರಲ್ಲಿ ಡೆಕ್ಕನ್‌ ಚಾರ್ಜಸ್‌, 2011ರಲ್ಲಿ ಚೆನ್ನೈಸೂಪರ್‌ ಕಿಂಗ್ಸ್‌ (CSK) ಹಾಗೂ 2016ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತು ಕಪ್‌ ಗೆಲ್ಲುವ ಅವಕಾಶ ಕಳೆದುಕೊಂಡಿತು. ಆದ್ರೆ ಧೋನಿ ಆರ್‌ಸಿಬಿ ನಾಯಕನಾಗಿ ಇರುತ್ತಿದ್ದರೆ ಮೂರು ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುತ್ತಿತ್ತು ಎಂದು ವಾಸಿಂ ಅಕ್ರಮ್‌ (Wasim Akram) ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ – ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

    ಆರ್‌ಸಿಬಿ ತಂಡಕ್ಕೆ ಅಷ್ಟೊಂದು ಸಪೋರ್ಟ್‌ ಇದೆ. ವಿಶ್ವದ ಅಗ್ರ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಒಬ್ಬರಾದ ವಿರಾಟ್‌ ಕೊಹ್ಲಿ ಟೀಂ ನಲ್ಲಿ ಇದ್ದಾರೆ. ಆದರೂ ಈವರೆಗೆ ಕಪ್‌ ಗೆಲ್ಲೂಕೆ ಸಾಧ್ಯವಾಗಿಲ್ಲದೇ ಇರೋದು ದುರದೃಷ್ಟಕರ ಎಂದಿದ್ದಾರೆ. ಇದನ್ನೂ ಓದಿ: IPL 2023: RCB ನನ್ನ ಹೆಮ್ಮೆಯ ತಂಡ – ಇಂದಲ್ಲ ನಾಳೆ ಕಪ್‌ ನಮ್ದೆ ಎಂದ ಸಿದ್ದರಾಮಯ್ಯ

    ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ತಂಡ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಮುಂಬೈ, ಪಂಬಾಜ್‌ ಕಿಂಗ್ಸ್‌ ಸಹ 10 ಅಂಕಗಳೊಂದಿಗೆ ಕ್ರಮವಾಗಿ 6, 7ನೇ ಸ್ಥಾನದಲ್ಲಿದೆ. ಆದ್ರೆ ಬ್ಯಾಟಿಂಗ್‌ ಪಡೆಯ ಸಮಸ್ಯೆ ಎದುರಿಸುತ್ತಿರುವ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಲು ಕನಿಷ್ಠ 4ರಲ್ಲಿ 3 ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ. ಈಗಾಗಲೇ 11ರಲ್ಲಿ 8 ಪಂದ್ಯ ಗೆದ್ದಿರುವ ಗುಜರಾತ್‌ ಟೈಟಾನ್ಸ್‌ ಬಹುತೇಕ ಪ್ಲೆ ಆಫ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಸಿಎಸ್‌ಕೆ 6ರಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ.

  • ನಯನತಾರಾ ದಂಪತಿ IPL ಕ್ರೇಜ್‌ – CSKಗೆ ಬಲ ತುಂಬಿದ ಲೇಡಿ ಸೂಪರ್‌ ಸ್ಟಾರ್‌

    ನಯನತಾರಾ ದಂಪತಿ IPL ಕ್ರೇಜ್‌ – CSKಗೆ ಬಲ ತುಂಬಿದ ಲೇಡಿ ಸೂಪರ್‌ ಸ್ಟಾರ್‌

    ಚೆನ್ನೈ: ಸದಾ ಸಿನಿ ಜರ್ನಿಯಲ್ಲಿ ಬ್ಯೂಸಿಯಾಗಿರುವ ವಿಘ್ನೇಶ್ ಶಿವನ್ (Vignesh Shivan) ಹಾಗೂ ನಯನತಾರಾ (Nayanthara) ದಂಪತಿ ಶನಿವಾರ ಐಪಿಎಲ್‌ (IPL) ಮ್ಯಾಚ್‌ ವೀಕ್ಷಣೆ ಮಾಡಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

    ಶನಿವಾರ ಚೆಪಾಕ್ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಮುಂಬೈ ಇಂಡಿಯನ್ಸ್‌ (Mumbai Indians) ನಡುವಿನ ಪಂದ್ಯಕ್ಕೆ ನಯನತಾರಾ, ವಿಘ್ನೇಶ್‌ ದಂಪತಿ ಹಾಜರಾಗಿದ್ದರು. ಕಾಲಿವುಡ್‌ ಸ್ಟಾರ್‌ ಧನುಷ್‌ (Dhanush) ಹಾಗೂ ಉದಯನಿಧಿ ಸ್ಟಾಲಿನ್‌ (Udhayanidhi Stalin) ಸಹ ಬಿಡುವು ಮಾಡಿಕೊಂಡು ಪಂದ್ಯ ವೀಕ್ಷಣೆ ಮಾಡುವ ಮೂಲಕ ಚೆನ್ನೈ ತಂಡಕ್ಕೆ ಬಲ ತುಂಬಿದರು. ಪ್ರತಿ ಸಿಕ್ಸರ್‌ ಬೌಂಡರಿಗಳನ್ನ ಎಂಜಾಯ್‌ ಮಾಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಈ ಸಂಭ್ರಮದ ಕ್ಷಣಗಳನ್ನು ಫೋಟೋದಲ್ಲಿ ಸೆರೆಹಿಡಿದಿರುವ ನಯನತಾರಾ ದಂಪತಿ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

    2015ರ ತಮಿಳು ಆಕ್ಷನ್‌ ಕಾಮಿಡಿ ʻನಾನುಮ್‌ ರೌಡಿದಾನ್‌ʼ ಸಿನಿ ಚಿತ್ರೀಕರಣದ ವೇಳೆ ನಯನತಾರಾ ಹಾಗೂ ವಿಘ್ನೇಶ್‌ ಅವರ ಪ್ರೀತಿ ಶುರುವಾಗಿತ್ತು. ಕಳೆದ ವರ್ಷ ನಯನತಾರಾ- ವಿಘ್ನೇಶ್ ಶಿವನ್ ಅದ್ಧೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಈ ಜೋಡಿ ಪಡೆದಿದ್ದರು.

    ‘ಲೇಡಿ ಸೂಪರ್ ಸ್ಟಾರ್‌’ ನಯನತಾರಾ ಅವರಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ದಕ್ಷಿಣ ಭಾರತದಲ್ಲಿ ನಯನತಾರಾಗೆ ಸಖತ್ ಬೇಡಿಕೆ ಇದೆ. ಅವರು ಎಲ್ಲೇ ಹೋದರೂ, ಬಂದರೂ ಸಾವಿರಾರು ಜನರು ಸೇರುತ್ತಾರೆ. ಈಗ ಅವರು ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ:
    ಕಳೆದ ವರ್ಷ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆಗೆ ಸಪ್ತಪದಿ ತುಳಿದ ನಟಿ ನಯನತಾರಾ ಅವರು ಈಗ ಎರಡು ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿರುವ ನಯನತಾರಾ, ಮಕ್ಕಳ ಲಾಲನೆ ಪಾಲನೆ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಸಖತ್ ಬ್ಯೂಸಿ ಆಗಿದ್ದಾರೆ. ಈ ವರ್ಷ ಶಾರುಖ್ ಖಾನ್ ಜೊತೆಗೆ ನಯನತಾರಾ ನಟಿಸಿರುವ ‘ಜವಾನ್‌’ ಸಿನಿಮಾವು ತೆರೆಗೆ ಬರಲಿದೆ. ಇದು ನಯನತಾರಾ ಅವರ ಮೊದಲ ಬಾಲಿವುಡ್ ಸಿನಿಮಾವಾಗಿದೆ. ಜೊತೆಗೆ ನಟ ‘ಜಯಂ’ ರವಿ ಜತೆ ‘ಇರೈವನ್‌’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.