Tag: CSK

  • ನಾಳೆಯಿಂದ ಐಪಿಎಲ್‌ ಹಬ್ಬ – ಚಿನ್ನಸ್ವಾಮಿಗೆ ಪ್ರತಿ ಪಂದ್ಯಕ್ಕೆ 75,000 ಲೀ. ನೀರು ಪೂರೈಸಲು ಗ್ರೀನ್‌ ಸಿಗ್ನಲ್‌

    ನಾಳೆಯಿಂದ ಐಪಿಎಲ್‌ ಹಬ್ಬ – ಚಿನ್ನಸ್ವಾಮಿಗೆ ಪ್ರತಿ ಪಂದ್ಯಕ್ಕೆ 75,000 ಲೀ. ನೀರು ಪೂರೈಸಲು ಗ್ರೀನ್‌ ಸಿಗ್ನಲ್‌

    ಚೆನ್ನೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17ನೇ ಆವೃತ್ತಿ ಆರಂಭಗೊಳ್ಳಲು ಒಂದು ದಿನವಷ್ಟೇ ಬಾಕಿಯಿದೆ.

    ಮಾರ್ಚ್​ 22ರಿಂದ ಮಹತ್ವದ ಟೂರ್ನಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಇತ್ತಂಡಗಳು ಕಾದಾಟ ನಡೆಸಲಿದ್ದು, ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ: RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

    ಅಲ್ಲದೇ ಈ ಬಾರಿ ಬೇಸಿಗೆಯ ಬಿಸಿ ಐಪಿಎಲ್‌ ಟೂರ್ನಿಗೂ ತಟ್ಟಿದ್ದು, ಪಂದ್ಯದ ವೇಳೆ ಮೈದಾನ ಹದಗೊಳಿಸಲು ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

    ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸುವಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ರಾಮ್ ಪ್ರಸಾತ್ ಮನೋಹರ್ ಅವರನ್ನ ಭೇಟಿ ಮಾಡಿ, ಮನವಿಯನ್ನೂ ಸಲ್ಲಿಸಿದ್ದರು. ಪಂದ್ಯಾವಳಿ ಸಂದರ್ಭದಲ್ಲಿ ದಿನಕ್ಕೆ 75,000 ಲೀಟರ್ ನೀರು ಅವಶ್ಯಕತೆಯಿದ್ದು, ಕಬ್ಬನ್ ಪಾರ್ಕ್‌ನ ತ್ಯಾಜದ ನೀರನ್ನು ಸಂಸ್ಕರಿಸಿ, ಕ್ರೀಡಾಂಗಣಕ್ಕೆ ಪೂರೈಸುವಂತೆ ಕೋರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ

    ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿರುವ ಡಾ.ರಾಮ್ ಪ್ರಸಾತ್ ಮನೋಹರ್, ಸದ್ಯ ನಗರದಲ್ಲಿ ನೀರಿನ ಸಮಸ್ಯೆಯಿದೆ. ಕಾವೇರಿ ನೀರು ಮತ್ತು ಕೊಳವೆ ಬಾವಿ ನೀರು ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಸಂಸ್ಕೃರಿಸಿದ ನೀರನ್ನು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲೂ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಬಳಸುವುದೇ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ ತಂಡಕ್ಕೆ ನಾಯಕ ಬದಲಾದ ಬಳಿಕ ಮೊದಲ ಬಾರಿಗೆ ರೋಹಿತ್‌-ಹಾರ್ದಿಕ್‌ ಮುಖಾಮುಖಿ

    ಬೆಂಗಳೂರಿನಲ್ಲಿ ಯಾವಾಗ ಪಂದ್ಯಗಳು?
    ಮಾರ್ಚ್‌ 25 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಮಾರ್ಚ್‌ 29 ರಂದು ಕೆಕೆಆರ್‌ ವಿರುದ್ಧ, ಏಪ್ರಿಲ್‌ 2 ರಂದು ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಆರ್‌ಸಿಬಿ ತವರು ಕ್ರೀಡಾಂಗಣದಲ್ಲಿ ಸೆಣಸಲಿದೆ.

  • ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಐಪಿಎಲ್‌ ಪ್ರಿಯರಿಗೆ ಶಾಕ್‌!

    ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಐಪಿಎಲ್‌ ಪ್ರಿಯರಿಗೆ ಶಾಕ್‌!

    ಮುಂಬೈ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಐಪಿಎಲ್‌ (IPL 2024) ಪ್ರೇಮಿಗಳಿಗೆ ಭಾರೀ ಆಘಾತವಾಗಿದೆ. ಐಪಿಎಲ್‌ನ ದ್ವಿತೀಯಾರ್ಧವನ್ನು ದುಬೈಗೆ (ಯುನೈಟೆಡ್ ಅರಬ್ ಎಮಿರೇಟ್ಸ್‌ – UAE) ಸ್ಥಳಾಂತರಿಸಲಾಗುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕಾರಿ ಮೂಲಗಳು ತಿಳಿಸಿವೆ.

    ಏಪ್ರಿಲ್‌ 19 ರಿಂದ ಆರಂಭಗೊಂಡು ಜೂನ್‌ 4ರ ವರೆಗೆ ಚುನಾವಣಾ (Lok Sabha Elections) ಪ್ರಕ್ರಿಯೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ದ್ವಿತೀಯಾರ್ಧದ ಪಂದ್ಯಗಳನ್ನು ದುಬೈನಲ್ಲಿ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೆರ್ರಿ ಆಲ್‌ರೌಂಡರ್‌ ಆಟ – ಮುಂಬೈ ವಿರುದ್ಧ ಜಯ, ಪ್ಲೇ ಆಫ್‌ಗೆ ಆರ್‌ಸಿಬಿ

    ದುಬೈನಲ್ಲಿ ಆಯೋಜನೆ ಇದೇ ಮೊದಲೇನಲ್ಲ:
    ಯುಎಇನಲ್ಲಿ ಐಪಿಎಲ್‌ ಆಯೋಜನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. 2014, 2019ರ ಲೋಕಸಭಾ ಚುನಾವಣೆ ವೇಳೆಯೂ ಐಪಿಎಲ್‌ನ ದ್ವಿತೀಯಾರ್ಧ ಭಾಗತವನ್ನು ಯುಎಇನಲ್ಲಿ ನಡೆಸಲಾಗಿತ್ತು. ಈ ಬಾರಿ ಆಯೋಜಿಸುತ್ತಿರುವುದು ಸೇರಿದರೆ 3ನೇ ಬಾರಿ ದುಬೈನಲ್ಲಿ ಐಪಿಎಲ್‌ ಆಯೋಜಿಸಿದಂತಾಗುತ್ತದೆ. ಸದ್ಯ ಈ ಬಗ್ಗೆ ಬಿಸಿಸಿಐ ಅಥವಾ ಐಪಿಎಲ್‌ ಸಮಿತಿ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ, ಸ್ಥಳಾಂತರಿವುದು ಖಚಿತವಾಗಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಹಾಲಿ ಚಾಂಪಿಯನ್ಸ್‌ ಮುಂಬೈ ಮನೆಗೆ – ಆರ್‌ಸಿಬಿ ಮೊದಲಬಾರಿ ಫೈನಲ್‌ಗೆ

    ಐಪಿಎಲ್‌ ಆರಂಭ ಯಾವಾಗ?
    ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಇದೇ ಮಾರ್ಚ್‌ 22 ರಿಂದ ಆರಂಭವಾಗಲಿದೆ. ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಮೊದಲ 15 ದಿನಗಳು ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿ ಸದ್ಯಕ್ಕೆ ಪ್ರಕಟಿಸಲಾಗಿದೆ. ಮಾ. 22ರಿಂದ ಏಪ್ರಿಲ್ 7ರ ತನಕ 21 ಪಂದ್ಯಗಳು ನಡೆಯಲಿದ್ದು, ಈ ಪೈಕಿ 4 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. ಡಬಲ್ ಹೆಡ್ಡರ್ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಇದನ್ನೂ ಓದಿ: ಕೊಹ್ಲಿ ಜೊತೆಗೆ ಬಾಬರ್‌, ಧೋನಿ ಜೊತೆಗೆ ರಿಜ್ವಾನ್‌, ಬುಮ್ರಾ ಜೊತೆಗೆ ಶಾಹೀನ್‌ ಶಾ ಅಫ್ರಿದಿ?

    ಯಾರ ನಡುವೆ, ಯಾವ ದಿನ, ಎಲ್ಲಿ ಪಂದ್ಯ?
    1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಾರ್ಚ್ 22 ಚೆನ್ನೈ,
    2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ,
    3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ
    4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ
    5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್
    6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು
    7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26, ಚೆನ್ನೈ
    8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್
    9. ಆರ್‌ಆರ್‌ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ
    10. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು
    11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ
    12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್
    13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ
    14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ
    15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2, ಬೆಂಗಳೂರು
    16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ
    17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4, ಅಹಮದಾಬಾದ್
    18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5, ಹೈದರಾಬಾದ್
    19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6, ಜೈಪುರ
    20. ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7, ಮುಂಬೈ
    21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7, ಲಕ್ನೋ

  • ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್‌ – ಸಿಎಸ್‌ಕೆಗೆ ಭಾರೀ ಆಘಾತ

    ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್‌ – ಸಿಎಸ್‌ಕೆಗೆ ಭಾರೀ ಆಘಾತ

    – ಆರಂಭಿಕನಾಗಿ ರಚಿನ್‌ ರವೀಂದ್ರ ಕಣಕ್ಕಳಿಯುವ ಸಾಧ್ಯತೆ

    ಚೆನ್ನೈ: ಇದೇ ಮಾರ್ಚ್‌ 22ರಿಂದ 2024ರ ಐಪಿಎಲ್‌ (IPL 2024) ಟೂರ್ನಿ ಆರಂಭಗೊಳ್ಳಲಿದೆ. ಈ ಹೊತ್ತಿನಲ್ಲೇ ಹಾಲಿ ಚಾಂಪಿಯನ್ಸ್‌ ತಂಡಕ್ಕೆ ಭಾರೀ ಆಘಾತವಾಗಿದೆ. ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಆರಂಭಿಕ ಆಟಗಾರ ಡಿವೋನ್‌ ಕಾನ್ವೆ (Devon Conway) ಮೊದಲ ಸುತ್ತಿನ 4 ಪಂದ್ಯಗಳಿಂದ (ಮಾ.22 ರಿಂದ ಏ.7ರ ವರೆಗೆ ನಡೆಯಲಿರುವ ಪಂದ್ಯಗಳು) ಹೊರಗುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಬಿಗ್‌ಬ್ಯಾಶ್‌ ಲೀಗ್‌ ಟಿ20 (BBL T20I) ಸರಣಿಯಲ್ಲಿ ಕಾನ್ವೆ, ತಮ್ಮ ಎಡಗೈನ ಹೆಬ್ಬೆರಳಿಗೆ ಪೆಟ್ಟಾಗಿಸಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅನೇಕ ಬಾರಿ ಸ್ಕ್ಯಾನ್‌ ಮಾಡಿದ ನಂತರ ತುಂಬಾ ಪೆಟ್ಟಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಕಾನ್ವೆ 8 ವಾರಗಳ ಕಾಲ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಮಾರ್ಚ್‌ 22ರಿಂದ ಏಪ್ರಿಲ್‌ 7ರ ವರೆಗೆ ನಡೆಯಲಿರುವ ಮೊದಲ 21 ಪಂದ್ಯಗಳಿಗೆ ಕಾನ್ವೆ ಗೈರಾಗಲಿದ್ದಾರೆ ಎಂದು ಸಿಎಸ್‌ಕೆ ತಂಡದ ಮೂಲಗಳು ಹೇಳಿವೆ.

    ಮೇ ತಿಂಗಳಿನಿಂದ ಅವರು ಚೆನ್ನೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮೊದಲ ಸುತ್ತಿಗೆ ಅವರು ಗೈರಾಗುವುದರಿಂದ ಆರಂಭಿಕ ಋತುರಾಜ್‌ ಗಾಯಕ್ವಾಡ್‌ ಅವರೊಂದಿಗೆ ರಚಿನ್‌ ರವೀಂದ್ರ ಕಣಕ್ಕಿಳಿಯಲಿದ್ದಾರೆ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    2023ರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸ್ಫೋಟಕ ಪ್ರದರ್ಶನ ನೀಡಿದ್ದ ಡಿವೋನ್‌ ಕಾನ್ವೆ 16 ಪಂದ್ಯಗಳಿಂದ 6 ಅರ್ಧಶತಕಗಳೊಂದಿಗೆ 672 ರನ್‌ ಗಳಿಸಿದ್ದರು. ಈ ಮೂಲಕ 16ನೇ ಆವೃತ್ತಿಯ ಸೀರಿಸ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ್ದ 3ನೇ ಆಟಗಾರನಾಗಿ ಹೊರಹೊಮ್ಮಿದ್ದರು.

    ಮಾರ್ಚ್‌ 22ರಿಂದ ಐಪಿಎಲ್‌: ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಮೊದಲ 15 ದಿನಗಳ ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಮುಂದಿನ ವೇಳಾಪಟ್ಟಿ ಪ್ರಕಟಿಸುವುದಾಗಿ ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. ಇದನ್ನೂ ಓದಿ: 20 ಕೋಟಿಯ ಸರದಾರ ಪ್ಯಾಟ್‌ ಕಮ್ಮಿನ್ಸ್‌ ಈಗ ಸನ್‌ರೈಸರ್ಸ್‌ ನಾಯಕ

    ಯಾರ ನಡುವೆ, ಯಾವ ದಿನ, ಎಲ್ಲಿ ಪಂದ್ಯ?
    1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಾರ್ಚ್ 22 ಚೆನ್ನೈ,
    2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ,
    3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ
    4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ
    5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್
    6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು
    7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26, ಚೆನ್ನೈ
    8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್
    9. ಆರ್‌ಆರ್‌ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ
    10. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು
    11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ
    12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್
    13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ
    14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ
    15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2, ಬೆಂಗಳೂರು
    16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ
    17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4, ಅಹಮದಾಬಾದ್
    18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5, ಹೈದರಾಬಾದ್
    19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6, ಜೈಪುರ
    20. ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7, ಮುಂಬೈ
    21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7, ಲಕ್ನೋ

  • 2024ರ ಐಪಿಎಲ್‌ ಧೋನಿಯ ಕೊನೆಯ ಸೀಸನ್‌ ಅಲ್ಲ – ಸುಳಿವು ಬಿಟ್ಟುಕೊಟ್ಟ ಬಾಲ್ಯದ ಗೆಳೆಯ

    2024ರ ಐಪಿಎಲ್‌ ಧೋನಿಯ ಕೊನೆಯ ಸೀಸನ್‌ ಅಲ್ಲ – ಸುಳಿವು ಬಿಟ್ಟುಕೊಟ್ಟ ಬಾಲ್ಯದ ಗೆಳೆಯ

    ಚೆನ್ನೈ: 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದಲೂ ಲೆಜೆಂಡ್‌ ಎಂ.ಎಸ್‌ ಧೋನಿ (MS Dhoni) ಅವರ ನಿವೃತ್ತಿಯ ಸುದ್ದಿ ಸದ್ದು ಮಾಡುತ್ತಲೇ ಇದೆ. ನಿರೀಕ್ಷೆಯಂತೆ 2024ರ ಐಪಿಎಲ್‌ (IPL 2024) ಟೂರ್ನಿಯಲ್ಲೂ ಸಿಎಸ್‌ಕೆ ಪರ ನಾಯಕನಾಗಿ ಕಣಕ್ಕಿಳಿಯಲಿರುವ ಮಹಿ ಮುಂದಿನ ಸೀಸನ್‌ಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಬಗ್ಗೆ ಅವರ ಬಾಲ್ಯದ ಗೆಳೆಯ ಪರಮ್‌ಜಿತ್ ಸಿಂಗ್ (Paramjit Singh) ಸುಳಿವು ಕೊಟ್ಟಿದ್ದಾರೆ.

    ಹೌದು. 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಚಾಂಪಿಯನ್‌ (CSK) ಕಿರೀಟ ಮುಡಿಗೇರಿಸಿಕೊಳ್ಳುತ್ತಿದ್ದಂತೆ, ಧೋನಿ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ಮಹಿ, 2024ರ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಅವರು ಚೆನ್ನೈ ತಂಡದ ಭಾಗವಾಗಿದ್ದಾರೆ. ಇದನ್ನೂ ಓದಿ: WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

    ಬಾಲ್ಯದ ಗೆಳೆಯ ಹೇಳಿದ್ದೇನು?
    2024ರ ಐಪಿಎಲ್‌ ಟೂರ್ನಿಯೇ ಧೋನಿ ಅವರ ಕೊನೆಯ ಸೀಸನ್‌ ಆಗಿರುತ್ತದೆ ಎಂದು ನಾನು ಭಾವಿಸುವುದಿಲ್ಲ. ಅವರು ಇನ್ನೂ ಫಿಟ್‌ ಆಗಿದ್ದಾರೆ. ಇನ್ನೂ ಒಂದು ಅಥವಾ ಎರಡು ಸೀಸನ್‌ಗಳನ್ನು ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂಬುದಾಗಿ ಪರಮ್‌ಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಅಯ್ಯರ್‌, ಕಿಶನ್‌ ಕಾಂಟ್ರವರ್ಸಿ; ಸೋಶಿಯಲ್‌ ಮೀಡಿಯಾದಲ್ಲೂ ಟ್ರೆಂಡ್‌ – ಬಿಸಿಸಿಐ ಪರ ಪಾಕ್‌ ಮಾಜಿ ಕ್ರಿಕೆಟಿಗ ಬ್ಯಾಟಿಂಗ್‌

    ನೆಟ್ಸ್‌ನಲ್ಲಿ ಬೆವರಿಳಿಸಿದ ಮಹಿ:
    17ನೇ ಆವೃತ್ತಿಯ ಐಪಿಎಲ್ ಇದೇ ತಿಂಗಳ ಮಾರ್ಚ್ 22 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೆಣಸಲಿವೆ. ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳಿಗೆ ಮಾತ್ರ ಸಮಯ ನಿಗದಿಪಡಿಸಿದ್ದು, ಚುನಾವಣಾ ದಿನಾಂಕ ಬಿಡುಗಡೆಯಾದ ನಂತರ ಮುಂದಿನ ವೇಳಾಪಟ್ಟಿ ಪ್ರಕಟಿಸುವುದಾಗಿ ಐಪಿಎಲ್‌ ಮಂಡಳಿ ತಿಳಿಸಿದೆ. 22ರಿಂದಲೇ ಟೂರ್ನಿ ಆರಂಭವಾಗುವ ಹಿನ್ನೆಲೆಯಲ್ಲಿ ಧೋನಿ ಅವರು ನೆಟ್ಸ್‌ನಲ್ಲಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಸದ್ಯ ಕೆಲ ದಿನಗಳಮಟ್ಟಿಗೆ ಅನಂತ್‌ ಅಂಬಾನಿ ಅವರ ಪ್ರೀ-ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: T20 World Cup 2024: ಟೀಂ ಇಂಡಿಯಾ ಆಯ್ಕೆಗೆ ಡೆಡ್‌ಲೈನ್‌ ಫಿಕ್ಸ್‌

    2023ರ ಐಪಿಎಲ್‌ ಫೈನಲ್‌ ನಂತ್ರ ಮಹಿ ಹೇಳಿದ್ದೇನು?
    ಐಪಿಎಲ್‌ ಫೈನಲ್‌ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ್ದ ಮಹಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ. ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕರಾಗಿದ್ದರು.

    ರೋಚಕ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದದ್ದು ಹೇಗೆ?
    2023ರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ 215 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 3 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಬಳಿಕ ತಡರಾತ್ರಿ 12:10ಕ್ಕೆ ಪಂದ್ಯ ಆರಂಭಗೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್‌ ಲೂಯಿಸ್‌ ನಿಯಮ ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್‌ ಗಳ ಬೃಹತ್‌ ಮೊತ್ತದ ಟಾರ್ಗೆಟ್‌ ಪಡೆಯಿತು. ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸಿಎಸ್‌ಕೆ ನಿಗದಿತ ಓವರ್‌ಗಳಲ್ಲಿ ರನ್‌ ಪೂರೈಸುವಲ್ಲಿ ಯಶಸ್ವಿಯಾಯಿತು. ಮಧ್ಯ ರಾತ್ರಿಯಲ್ಲಿ ಆರಂಭಗೊಂಡ ಪಂದ್ಯ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿತ್ತು.

  • ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    – ಚೆನ್ನೈ ತವರು ಕ್ರೀಡಾಂಗಣದಲ್ಲಿ ಗೆದ್ದು ಬೀಗುತ್ತಾ ಆರ್‌ಸಿಬಿ?
    – ಈ ಸಲ ಕಪ್‌ ಯಾರದ್ದು?

    ಚೆನ್ನೈ: ಕ್ರಿಕೆಟ್‌ ಪ್ರೇಮಿಗಳಿಗೆ ಬಿಸಿಸಿಐ (BCCI) ಸಿಹಿ ಸುದ್ದಿ ಕೊಟ್ಟಿದ್ದು, ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳಾಪಟ್ಟಿಯನ್ನು (IPL 2024 Schedule) ಪ್ರಕಟಿಸಿದೆ.

    ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಮೊದಲ 15 ದಿನಗಳು ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಮುಂದಿನ ವೇಳಾಪಟ್ಟಿ ಪ್ರಕಟಿಸುವುದಾಗಿ ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. 2019ರ ಲೋಕಸಭಾ ಚುನಾವಣೆ ಅವಧಿಯಲ್ಲೂ ಇದೇ ವಿಧಾನ ಅನುಸರಿ ಎರಡು ಹಂತಗಳಲ್ಲಿ ಟೂರ್ನಿಯನ್ನು ನಡೆಸಲಾಗಿತ್ತು. ಇದನ್ನೂ ಓದಿ: 2024ರ ಐಪಿಎಲ್‌ ಟೂರ್ನಿಯಿಂದಲೇ ಶಮಿ ಔಟ್‌ – ಗುಜರಾತ್‌ ಟೈಟಾನ್ಸ್‌ಗೆ ಭಾರೀ ಆಘಾತ

    2024ರ ಐಪಿಎಲ್​ ಟೂರ್ನಿ ಮಾರ್ಚ್​ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಇತ್ತಂಡಗಳು ನಡುವೆ ಕಾದಾಟ ನಡೆಸಲಿವೆ. ಇದನ್ನೂ ಓದಿ: ಫೋಟೋ ಶೂಟ್‌ನಲ್ಲಿ ಮಿಂಚಿದ RCB ಸ್ಟಾರ್ಸ್‌ – ʻಈ ಸಲ ಕಪ್‌ ನಮ್ದೇʼ ಮತ್ತೆ ಶುರುವಾಯ್ತು ಟ್ರೆಂಡ್‌!

    ಸದ್ಯ ಮಾ. 22ರಿಂದ ಏಪ್ರಿಲ್ 7ರ ತನಕ 21 ಪಂದ್ಯಗಳು ನಡೆಯಲಿದ್ದು, ಈ ಪೈಕಿ 4 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. ಡಬಲ್ ಹೆಡ್ಡರ್ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಇದನ್ನೂ ಓದಿ: 10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    ಯಾರ ನಡುವೆ, ಯಾವ ದಿನ, ಎಲ್ಲಿ ಪಂದ್ಯ?
    1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಾರ್ಚ್ 22 ಚೆನ್ನೈ,
    2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ,
    3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ
    4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ
    5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್
    6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು
    7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26, ಚೆನ್ನೈ
    8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್
    9. ಆರ್‌ಆರ್‌ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ
    10. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು
    11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ
    12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್
    13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ
    14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ
    15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2, ಬೆಂಗಳೂರು
    16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ
    17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4, ಅಹಮದಾಬಾದ್
    18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5, ಹೈದರಾಬಾದ್
    19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6, ಜೈಪುರ
    20. ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7, ಮುಂಬೈ
    21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7, ಲಕ್ನೋ

  • ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್‌ ಕೊಟ್ಟ ಶಿವಂ ದುಬೆ

    ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್‌ ಕೊಟ್ಟ ಶಿವಂ ದುಬೆ

    ಇಂದೋರ್‌: ಅಫ್ಘಾನಿಸ್ತಾನ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಟೀಂ ಇಂಡಿಯಾ ಆಲ್‌ರೌಂಡರ್‌ ಶಿವಂ ದುಬೆ (Shivam Dube), ತನ್ನ ಯಶಸ್ಸನ್ನು ಎಂ.ಎಸ್‌ ಧೋನಿ (MS Dhoni) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಅರ್ಪಿಸಿದ್ದಾರೆ.

    ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶಿವಂ ದುಬೆ, ತಮ್ಮ ವೃತ್ತಿಜೀವನದಲ್ಲಿ ಮೇಲೇಳುವಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಕೊಡುಗೆ ಅಪಾರ. ನಾಯಕ ಎಂ.ಎಸ್ ಧೋನಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಸೂಪರ್ ಕಿಂಗ್ಸ್‌ ತಂಡದ ಹಿರಿಯ ಆಟಗಾರರು ನನ್ನ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್‌ ಪಾದ ಮುಟ್ಟಿ‌, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ

    ನನಗೆ ಸಲ್ಲುತ್ತಿರುವ ಶ್ರೇಯಸ್ಸು, ಸಿಎಸ್‌ಕೆ ತಂಡ ಮತ್ತು ಮಹಿ ಅಣ್ಣನಿಗೆ ಸಲ್ಲಬೇಕು. ನಾನು ನನ್ನ ಆಟ ಆಡುತಿದ್ದೆ, ಆದರೆ ಸಿಎಸ್‌ಕೆ ನನ್ನ ನಿಜವಾದ ಪ್ರತಿಭೆಯನ್ನು ಹೊರತಂದಿದೆ. ತಂಡವು ನನ್ನಲ್ಲಿ ಆ ಆತ್ಮವಿಶ್ವಾಸ ತುಂಬಿದೆ. ನಾನು ಐಪಿಎಲ್‌ನಲ್ಲಿ ರನ್ ಗಳಿಸಲು ಸಾಧ್ಯವಿದೆ ಎಂಬುದನ್ನು ಅವರು ನನಗೆ ಮನವರಿಕೆ ಮಾಡಿದರು. ಅಲ್ಲದೇ ನನ್ನ ಮೇಲೆ ನಂಬಿಕೆ ಇಟ್ಟರು. ಮೈಕ್‌ ಹಸ್ಸಿ ಮತ್ತು ಫ್ಲೆಮಿಂಗ್ ಅವರಂಥ ಹಿರಿಯರು ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದು ಭಾವುಕರಾಗಿದ್ದಾರೆ.

    ನಾನು ಸಿಎಸ್‌ಕೆ ತಂಡದಲ್ಲಿದ್ದಾಗ, ಮಹಿ ಅಣ್ಣ ನನಗೆ ಚೆನ್ನಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಆದರೆ ಸ್ಮಾರ್ಟ್‌ ಆಗಿ ಆಡಲು ಅವರು ಹೇಳಿದರು. ಹೀಗಾಗಿ ನಾನು ನನ್ನ ಮಿತಿಗಳನ್ನು ನೋಡಿಕೊಂಡು ಇನ್ನೂ ಉತ್ತಮವಾಗಿ ಆಡಲು ಏನು ಮಾಡಬಹುದು ಎಂಬುದರ ಮೇಲೆ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್‌, ಬೌಂಡರಿ ಸುರಿಮಳೆ – ಯಶಸ್ವಿ, ದುಬೆ ಸ್ಫೋಟಕ ಫಿಫ್ಟಿ; ಅಫ್ಘಾನ್‌ ವಿರುದ್ಧ ಭಾರತಕ್ಕೆ ಸರಣಿ ಜಯ

    ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ:
    ಯುವ ಆಲ್‌ರೌಂಡರ್‌ ಶಿವಂ ದುಬೆ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಹಿರಿಯ ಆಟಗಾರರ ಗಮನ ಸೆಳೆದಿದ್ದಾರೆ. ಅಫ್ಘಾನ್‌ ವಿರುದ್ಧ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 2 ಸಿಕ್ಸರ್‌, 5 ಬೌಂಡರಿಗಳೊಂದಿಗೆ 60 ರನ್‌ ಚಚ್ಚಿದ ದುಬೆ, 2ನೇ ಪಂದ್ಯದಲ್ಲಿ 32 ಎಸೆತಗಳಲ್ಲಿ ಸ್ಫೋಟಕ 63 ರನ್‌ (4 ಸಿಕ್ಸರ್‌, 5 ಬೌಂಡರಿ) ಬಾರಿಸಿ ಮಿಂಚಿದ್ದಾರೆ. ಅಲ್ಲದೇ ಎರಡೂ ಪಂದ್ಯಗಳಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದ್ದಾರೆ. ಜನವರಿ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಪಂದ್ಯ ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಭಾರತಕ್ಕೆ ಸರಣಿ ಜಯ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್‌ವಾಶ್‌ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡವು ಗುಲ್ಬದೀನ್ ನಯೀಬ್ ಅವರ ಅರ್ಧಶತಕದ ನೆರವಿನಿಂದ 20 ಓವರ್​​​ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ್ದ ಭಾರತ ಯಶಸ್ವಿ ಜೈಸ್ವಾಲ್‌, ಶಿವಂ ದುಬೆ ಸ್ಫೋಟಕ ಅರ್ಧಶತಕಗಳ ನೆರವಿನಿಂದ 15.4 ಓವರ್‌ಗಳಲ್ಲೇ 173 ರನ್‌ ಗಳಿಸಿ ಗೆಲುವು ಸಾಧಿಸಿತು.

  • RCB ಕಪ್‌ ಗೆಲ್ಲುವಂತೆ ಬೆಂಬಲಿಸಿ ಎಂದ ‌ಅಭಿಮಾನಿ – ಲೆಜೆಂಡ್‌ ಮಹಿ ಕೊಟ್ಟ ಉತ್ತರ ಏನು?

    RCB ಕಪ್‌ ಗೆಲ್ಲುವಂತೆ ಬೆಂಬಲಿಸಿ ಎಂದ ‌ಅಭಿಮಾನಿ – ಲೆಜೆಂಡ್‌ ಮಹಿ ಕೊಟ್ಟ ಉತ್ತರ ಏನು?

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ‌16 ಆವೃತ್ತಿ ಕಳೆದರೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2024ರ ಟೂರ್ನಿಯಲ್ಲಿ ಚಾಂಪಿಯನ್ ಟ್ರೋಫಿ ಗೆಲ್ಲುವಂತೆ ಬೆಂಬಲಿಸಿ ಎಂದು ಆರ್‌ಸಿಬಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್‌ ಧೋನಿ (MS Dhoni) ಉತ್ತರ ಕೊಟ್ಟಿದ್ದಾರೆ.

    ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು (RCB Fan) 17ನೇ ಆವೃತ್ತಿಯಲ್ಲಿ ಆರ್‌ಸಿಬಿ ಕಪ್‌ (RCB Trophy) ಗೆಲ್ಲುವಂತೆ ನೀವು ಬೆಂಬಲಿಸಬೇಕು ಎಂದು ಧೋನಿ ಅವರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಲೆಜೆಂಡ್‌, ಬೆಂಗಳೂರು ನಿಜಕ್ಕೂ ಉತ್ತಮ ತಂಡವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಬಲಿಷ್ಠವಾಗಿವೆ. ಎಲ್ಲ ತಂಡಗಳು ಟ್ರೋಫಿ ಗೆಲ್ಲಲಿ ಎಂದು ನಾನು ಶುಭಕೋರಬಹುದು, ಆದ್ರೆ ನನ್ನ ತಂಡದಿಂದ ಆಚೆ ಬಂದು ಪ್ರತ್ಯೇಕವಾಗಿ ಮತ್ತೊಂದು ತಂಡವನ್ನು ಬೆಂಬಲಿಸೋದಕ್ಕೆ ಆಗಲ್ಲ. ಹಾಗೆ ಮಾಡಿದ್ರೆ ನನ್ನ ತಂಡದ ಅಭಿಮಾನಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

    ಐಪಿಎಲ್ ಟೂರ್ನಿಯ ಕುರಿತು ಮಾತನಾಡುವುದಾದ್ರೆ ಎಲ್ಲಾ 10 ತಂಡಗಳು ಉತ್ತಮ ಆಟಗಾರರನ್ನ ಹೊಂದಿವೆ. ಆರ್‌ಸಿಬಿ ನಿಜಕ್ಕೂ ಉತ್ತಮ ತಂಡ. ಆದ್ರೆ ನಾವು ಮೊದಲು ಕ್ರಿಕೆಟ್‌ನಲ್ಲಿ ಹೇಗೆ ಪ್ಲ್ಯಾನ್‌ ಮಾಡ್ತೀವಿ ಅನ್ನೋದನ್ನ ಅರಿತುಕೊಳ್ಳಬೇಕು. ಟೂರ್ನಿಯಲ್ಲಿ ವೈಯಕ್ತಿಕ ಕಾರಣಗಳು, ಗಾಯದ ಸಮಸ್ಯೆಗಳಿಂದ ಪ್ರಮುಖ ಆಟಗಾರರ ಸೇವೆ ಕಳೆದುಕೊಂಡಾಗ ನಿಜವಾದ ಸಮಸ್ಯೆ ಎದುರಾಗುತ್ತದೆ. ಅಲ್ಲದೇ ಎಲ್ಲ ಯೋಜನೆಗಳು ನಾವು ಹಾಕಿಕೊಂಡಂತೆ ಸಾಗುವುದಿಲ್ಲ ಎಂದು ಮಹಿ ಹೇಳಿದ್ದಾರೆ. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

    ಸದ್ಯದ ಪರಿಸ್ಥಿತಿಯಲ್ಲಿ ನನ್ನ ಸ್ವಂತ ತಂಡದಲ್ಲೂ ಕೆಲವು ಸಂಗತಿಗಳ ಕುರಿತು ಚಿಂತಿಸುತ್ತಿದ್ದೇನೆ. ನಾನು ಎಲ್ಲ ತಂಡಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಅದಕ್ಕಿಂತ ಹೆಚ್ಚಿನದ್ದನ್ನು ಏನು ಮಾಡಲು ಸಾಧ್ಯವಿಲ್ಲ. ಬೇರೆ ತಂಡಗಳಿಗೆ ನೆರವು ನೀಡಲು ಹೋದ್ರೆ, ಸಿಎಸ್‌ಕೆ ಅಭಿಮಾನಿಗಳಿಗೆ ಏನನ್ನಿಸುತ್ತೆ ಅನ್ನೋದನ್ನ ಯೋಚಿಸಿ ಎಂದು ತಿಳಿಸಿದ್ದಾರೆ.

    ಹರಾಜಿನಲ್ಲಿ ಸಿಎಸ್‌ಕೆ ಪಾಲಾದ ಆಟಗಾರರು:
    2024ರ ಐಪಿಎಲ್ ಟೂರ್ನಿಗಾಗಿ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿ, ರಚಿನ್ ರವೀಂದ್ರ (1.80 ಕೋಟಿ ರೂ.), ಶಾರ್ದೂಲ್‌ ಠಾಕೂರ್ (4 ಕೋಟಿ ರೂ.), ಡೇರಿಲ್‌ ಮಿಚೆಲ್ (14 ಕೋಟಿ ರೂ.), ಸಮೀರ್ ರಿಜ್ವಿ (8.40 ಕೋಟಿ ರೂ.), ಮುಸ್ತಾಫಿಝರ್‌ (2 ಕೋಟಿ ರೂ.), ಅವನೀಶ್ ರಾವ್ ಅರವೆಲ್ಲಿ (20 ಲಕ್ಷ ರೂ.) ಸೇರಿದಂತೆ 6 ಆಟಗಾರರನ್ನು ಖರೀದಿಸಿತು. ಇದನ್ನೂ ಓದಿ: IPL 2024 Auction: ಚೆನ್ನೈ ಪಾಲಾದ ಕನ್ನಡಿಗ ರಚಿನ್‌ – ಕಿವೀಸ್‌ ಫ್ಲೇವರ್‌ ಆಯ್ತು ಸೂಪರ್‌ ಕಿಂಗ್ಸ್‌!

    2023ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್ ಟೈಟಾನ್ಸ್‌ ತಂಡ 20 ಓವರ್‌ಗಳಲ್ಲಿ 214 ರನ್‌ ಬಾರಿಸಿತ್ತು. ಆದ್ರೆ ಮಳೆ ಅಡಿಯುಂಟು ಮಾಡಿದ್ದರಿಂದ ಸಿಎಸ್‌ಕೆಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಯಿತು. ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್‌ ಶುರುಮಾಡಿದ ಸಿಎಸ್‌ಕೆ 5 ವಿಕೆಟ್‌ಗಳ ಗೆಲುವು ಸಾಧಿಸಿ 5ನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಸಿಎಸ್‌ಕೆ 5 ಬಾರಿ ಟ್ರೋಫಿ ಗೆದ್ದ ಸಾಧನೆಗೆ ಪಾತ್ರವಾಗಿವೆ.

  • IPL 2024 Auction: ಇಂದು ಮಿನಿ ಹರಾಜು – RCBಗಿಂತಲೂ ಚೆನ್ನೈ, ಗುಜರಾತ್‌ ಜೋಳಿಗೆಯಲ್ಲಿದೆ ಹೆಚ್ಚು ಹಣ

    IPL 2024 Auction: ಇಂದು ಮಿನಿ ಹರಾಜು – RCBಗಿಂತಲೂ ಚೆನ್ನೈ, ಗುಜರಾತ್‌ ಜೋಳಿಗೆಯಲ್ಲಿದೆ ಹೆಚ್ಚು ಹಣ

    ದುಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮಿನಿ ಹರಾಜು (IPL 2024 Auction) ಪ್ರಕ್ರಿಯೆ ಮಂಗಳವಾರ (ಇಂದು) ದುಬೈನಲ್ಲಿ ನಡೆಯಲಿದೆ.

    ದುಬೈನ ಕೋಕಾ ಕೋಲಾ ಅರೆನಾದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1:00 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಮಿನಿ ಹರಾಜಿಗೆ ಒಟ್ಟು 333 ಆಟಗಾರರನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. ಈ ಪೈಕಿ 214 ಭಾರತೀಯ ಆಟಗಾರರು ಹಾಗೂ 119 ವಿದೇಶಿ ಆಟಗಾರರು ಇದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡವನ್ನು ಮತ್ತಷ್ಟು ಬಲಪಡಿಸಲು ಎದುರುನೋಡುತ್ತಿದ್ದು, ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ. ಅದರಲ್ಲೂ ಆಸೀಸ್‌ ಆಟಗಾರರಾದ ಮಿಚೆಲ್‌ ಸ್ಟಾರ್ಕ್‌ (Mitchell Starc), ಪ್ಯಾಟ್‌ ಕಮ್ಮಿನ್ಸ್‌, ಟ್ರಾವಿಸ್‌ ಹೆಡ್‌, ಕಿವೀಸ್‌ನ ರಚಿನ್‌ ರವೀಂದ್ರ (Rachin Ravindra), ಡೇರಿಲ್‌ ಮಿಚೆಲ್‌ ಹಾಗೂ ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೋಟ್ಜಿ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

    2023ರ ಐಪಿಎಲ್‌ ಟೂರ್ನಿಗೆ ಇಂಗ್ಲೆಂಡ್‌ನ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ 18.50 ಕೋಟಿ ರೂ.ಗೆ ಬಿಕರಿಯಾಗಿ ಇತಿಹಾಸ ನಿರ್ಮಿಸಿದ್ದರು. ಈ ಬಾರಿ ಮಿನಿ ಹರಾಜಿನಲ್ಲಿ ಯಾರು ಹೆಚ್ಚಿನ ಬೆಲೆಗೆ ಹರಾಜಾಗುತ್ತಾರೆ ಅನ್ನೂದು ಕುತೂಹಲ ಮೂಡಿಸಿದೆ.

    ಯಾವ ಫ್ರಾಂಚೈಸಿಯಲ್ಲಿ ಎಷ್ಟು ಹಣ ಬಾಕಿಯಿದೆ? – ರೂ.ಗಳಲ್ಲಿ ನೀಡಲಾಗಿದೆ:

    ಚೆನ್ನೈ ಸೂಪರ್‌ ಕಿಂಗ್ಸ್‌
    ಖರ್ಚು ಮಾಡಿದ ಒಟ್ಟು ಹಣ – 68.60 ಕೋಟಿ
    ಬಾಕಿ ಉಳಿದಿರುವ ಹಣ – 31.40 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಡೆಲ್ಲಿ ಕ್ಯಾಪಿಟಲ್ಸ್‌
    ಖರ್ಚು ಮಾಡಿದ ಒಟ್ಟು ಹಣ – 71.05 ಕೋಟಿ
    ಬಾಕಿ ಉಳಿದಿರುವ ಹಣ – 28.95 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 9

    ಗುಜರಾತ್‌ ಟೈಟಾನ್ಸ್
    ಖರ್ಚು ಮಾಡಿದ ಒಟ್ಟು ಹಣ – 61.85 ಕೋಟಿ
    ಬಾಕಿ ಉಳಿದಿರುವ ಹಣ – 38.15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಕೋಲ್ಕತ್ತಾ ನೈಟ್‌ರೈಡರ್ಸ್‌
    ಖರ್ಚು ಮಾಡಿದ ಒಟ್ಟು ಹಣ – 67.3 ಕೋಟಿ
    ಬಾಕಿ ಉಳಿದಿರುವ ಹಣ – 32.70 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 12

    ಲಕ್ನೋ ಸೂಪರ್‌ ಜೈಂಟ್ಸ್‌
    ಖರ್ಚು ಮಾಡಿದ ಒಟ್ಟು ಹಣ – 86.85 ಕೋಟಿ
    ಬಾಕಿ ಉಳಿದಿರುವ ಹಣ – 13.15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಮುಂಬೈ ಇಂಡಿಯನ್ಸ್
    ಖರ್ಚು ಮಾಡಿದ ಒಟ್ಟು ಹಣ -‌ 82.25 ಕೋಟಿ
    ಬಾಕಿ ಉಳಿದಿರುವ ಹಣ – 17.75 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಪಂಜಾಬ್‌ ಕಿಂಗ್ಸ್‌
    ಖರ್ಚು ಮಾಡಿದ ಒಟ್ಟು ಹಣ – 70.90 ಕೋಟಿ
    ಬಾಕಿ ಉಳಿದಿರುವ ಹಣ – 29.10 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
    ಖರ್ಚು ಮಾಡಿದ ಒಟ್ಟು ಹಣ – 76.75
    ಬಾಕಿ ಉಳಿದಿರುವ ಹಣ – 23.25
    ಲಭ್ಯವಿರುವ ಸ್ಲಾಟ್‌ಗಳು – 6

    ರಾಜಸ್ಥಾನ್‌ ರಾಯಲ್ಸ್‌
    ಖರ್ಚು ಮಾಡಿದ ಒಟ್ಟು ಹಣ – 85.50 ಕೋಟಿ
    ಬಾಕಿ ಉಳಿದಿರುವ ಹಣ – 14.50 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಸನ್‌ ರೈಸರ್ಸ್‌ ಹೈದರಾಬಾದ್‌
    ಖರ್ಚು ಮಾಡಿದ ಒಟ್ಟು ಹಣ – 66 ಕೋಟಿ
    ಬಾಕಿ ಉಳಿದಿರುವ ಹಣ – 34 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    10 ತಂಡಗಳ ಲೆಕ್ಕಾಚಾರ
    ತಂಡಗಳಿಗೆ ನಿಗದಿ ಮಾಡಿದ ಹಣ – 100 ಕೋಟಿ (ತಲಾ)
    ಒಟ್ಟು ಖರ್ಚು ಮಾಡಿರುವ ಹಣ – 737.05 ಕೋಟಿ
    ಬಾಕಿ ಉಳಿಸಿಕೊಂಡಿರುವ ಹಣ – 262.95 ಕೋಟಿ
    ಬಾಕಿ ಉಳಿದಿರುವ ಸ್ಲಾಟ್‌ಗಳು – 77

  • IPL Mock Auction: 18.50 ಕೋಟಿ ರೂ.ಗೆ RCB ಪಾಲಾದ ಮಿಚೆಲ್‌ ಸ್ಟಾರ್ಕ್‌ – ಯಾರ ಪರ್ಸ್‌ನಲ್ಲಿ ಎಷ್ಟು ಹಣವಿದೆ?

    IPL Mock Auction: 18.50 ಕೋಟಿ ರೂ.ಗೆ RCB ಪಾಲಾದ ಮಿಚೆಲ್‌ ಸ್ಟಾರ್ಕ್‌ – ಯಾರ ಪರ್ಸ್‌ನಲ್ಲಿ ಎಷ್ಟು ಹಣವಿದೆ?

    ಮುಂಬೈ: ಬಹುನಿರೀಕ್ಷಿತ 2024ರ ಐಪಿಎಲ್‌ ಹರಾಜು (IPL 2024 Auction) ಪ್ರಕ್ರಿಯೆ ಮಂಗಳವಾರ (ಡಿ.19) ದುಬೈನಲ್ಲಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ.

    10 ಫ್ರಾಂಚೈಸಿಗಳು ತಂಡವನ್ನು ಇನ್ನಷ್ಟು ಬಲಪಡಿಸಲು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ. ಅದರಲ್ಲೂ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಸೀಸ್‌ ಆಟಗಾರರ ಮೇಲೆ ಕಣ್ಣು ನೆಟ್ಟಿದೆ. ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ (Travis Head), ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಿಚೆಲ್‌ ಸ್ಟಾರ್ಕ್‌ (Mitchell Starc) ಹಾಗೂ ಪ್ಯಾಟ್‌ ಕಮ್ಮಿನ್ಸ್‌ ಅವರ ಮೇಲೆ ಫ್ರಾಂಚೈಸಿಗಳು ಗಮನಹರಿಸಿವೆ.

    ವಿಶ್ವಕಪ್‌ನಲ್ಲಿ ಮಿಂಚಿದ ಕಿವೀಸ್‌ ಆಟಗಾರರ ಮೇಲೂ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಮಿಚೆಲ್‌‌ ಸ್ಟಾರ್ಕ್‌ ಅವರನ್ನು ಆರ್‌ಸಿಬಿ ಹಾಗೂ ರಚಿನ್‌ ರವೀಂದ್ರ (Rachin Ravindra) ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೆಳೆಯುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: IPL 2024 Retention: 10 ತಂಡಗಳಲ್ಲಿ 173 ಜನ ಸೇಫ್‌ – 50 ಆಟಗಾರರಿಗೆ ಗೇಟ್‌ಪಾಸ್‌ – ಇಲ್ಲಿದೆ ಡಿಟೇಲ್ಸ್‌

    ಸೋಮವಾರ (ಇಂದು) ಜಿಯೋಸಿನಿಮಾ ನಡೆದ ಅಣುಕು ಹರಾಜಿನಲ್ಲಿ ಆಸೀಸ್‌ನ ಮಿಚೆಲ್‌ ಸ್ಟಾರ್ಕ್‌ ದಾಖಲೆಯ 18.50 ಕೋಟಿ ರೂ.ಗಳಿಗೆ ಆರ್‌ಸಿಬಿ ಪಾಲಾಗಿದ್ದಾರೆ. ಇನ್ನುಳಿದಂತೆ ಜೆರಾಲ್ಡ್ ಕೋಟ್ಜಿ 18 ಕೋಟಿ ರೂ.ಗೆ ಗುಜರಾತ್‌ ಟೈಟಾನ್ಸ್‌ ಪರ, ಪ್ಯಾಟ್‌ ಕಮ್ಮಿನ್ಸ್‌ 17.50 ಕೋಟಿ ರೂ.ಗೆ ಹೈದರಾಬಾದ್‌ ಪರ, ಶಾರ್ದೂಲ್‌ ಠಾಕೂರ್‌ 14 ಕೋಟಿ ರೂ.ಗೆ ಕಿಂಗ್ಸ್‌ ಪಂಜಾಬ್‌ ಪರ ಹಾಗೂ ದಿಲ್ಶಾನ್‌ ಮದುಸಂಕ 10.50 ಕೋಟಿ ರೂ.ಗಳಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಕರಿಯಾಗಿದ್ದಾರೆ.

    ಐಪಿಎಲ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ 18.50 ಕೋಟಿ ರೂ.ಗೆ ಹರಾಜಾಗಿರುವುದು ದಾಖಲೆಯಾಗಿದೆ. ಈ ಬಾರಿ ಯಾರು ದುಬಾರಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: IPL 2024 Auction: ರಚಿನ್‌ ರವೀಂದ್ರ, ಮಿಚೆಲ್‌ ಸ್ಟಾರ್ಕ್‌ ಸೇರಿ 1,116 ಆಟಗಾರರು ನೋಂದಣಿ

    ಯಾವ ಫ್ರಾಂಚೈಸಿಯಲ್ಲಿ ಎಷ್ಟು ಹಣ ಬಾಕಿಯಿದೆ?

    ಚೆನ್ನೈ ಸೂಪರ್‌ ಕಿಂಗ್ಸ್‌

    ಖರ್ಚು ಮಾಡಿದ ಒಟ್ಟು ಹಣ – 68.6 ಕೋಟಿ
    ಬಾಕಿ ಉಳಿದಿರುವ ಹಣ – 31.40 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಡೆಲ್ಲಿ ಕ್ಯಾಪಿಟಲ್ಸ್‌

    ಖರ್ಚು ಮಾಡಿದ ಒಟ್ಟು ಹಣ – 71.05 ಕೋಟಿ
    ಬಾಕಿ ಉಳಿದಿರುವ ಹಣ – 28.95 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 9

    ಗುಜರಾತ್‌ ಟೈಟಾನ್ಸ್

    ಖರ್ಚು ಮಾಡಿದ ಒಟ್ಟು ಹಣ – 61.85 ಕೋಟಿ
    ಬಾಕಿ ಉಳಿದಿರುವ ಹಣ – 38.15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಕೋಲ್ಕತ್ತಾ ನೈಟ್‌ರೈಡರ್ಸ್‌

    ಖರ್ಚು ಮಾಡಿದ ಒಟ್ಟು ಹಣ – 67.3 ಕೋಟಿ
    ಬಾಕಿ ಉಳಿದಿರುವ ಹಣ – 32.70 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 12

    ಲಕ್ನೋ ಸೂಪರ್‌ ಜೈಂಟ್ಸ್‌

    ಖರ್ಚು ಮಾಡಿದ ಒಟ್ಟು ಹಣ – 86.85 ಕೋಟಿ
    ಬಾಕಿ ಉಳಿದಿರುವ ಹಣ – 13.15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಮುಂಬೈ ಇಂಡಿಯನ್ಸ್

    ಖರ್ಚು ಮಾಡಿದ ಒಟ್ಟು ಹಣ -‌ 82.25 ಕೋಟಿ
    ಬಾಕಿ ಉಳಿದಿರುವ ಹಣ – 17.75 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಪಂಜಾಬ್‌ ಕಿಂಗ್ಸ್‌

    ಖರ್ಚು ಮಾಡಿದ ಒಟ್ಟು ಹಣ – 70.9 ಕೋಟಿ
    ಬಾಕಿ ಉಳಿದಿರುವ ಹಣ – 29.1 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಆರ್‌ಸಿಬಿ

    ಖರ್ಚು ಮಾಡಿದ ಒಟ್ಟು ಹಣ – 76.75
    ಬಾಕಿ ಉಳಿದಿರುವ ಹಣ – 23.25
    ಲಭ್ಯವಿರುವ ಸ್ಲಾಟ್‌ಗಳು – 6

    ರಾಜಸ್ಥಾನ್‌ ರಾಯಲ್ಸ್‌

    ಖರ್ಚು ಮಾಡಿದ ಒಟ್ಟು ಹಣ – 85.5 ಕೋಟಿ
    ಬಾಕಿ ಉಳಿದಿರುವ ಹಣ – 14.50 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಸನ್‌ ರೈಸರ್ಸ್‌ ಹೈದರಾಬಾದ್‌

    ಖರ್ಚು ಮಾಡಿದ ಒಟ್ಟು ಹಣ – 66 ಕೋಟಿ
    ಬಾಕಿ ಉಳಿದಿರುವ ಹಣ – 34 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    10 ತಂಡಗಳ ಲೆಕ್ಕಾಚಾರ

    ತಂಡಗಳಿಗೆ ನಿಗದಿ ಮಾಡಿದ ಹಣ – 100 ಕೋಟಿ (ತಲಾ)
    ಒಟ್ಟು ಖರ್ಚು ಮಾಡಿರುವ ಹಣ – 737.05 ಕೋಟಿ
    ಬಾಕಿ ಉಳಿಸಿಕೊಂಡಿರುವ ಹಣ – 262.95 ಕೋಟಿ
    ಬಾಕಿ ಉಳಿದಿರುವ ಸ್ಲಾಟ್‌ಗಳು – 77

  • RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

    RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

    – ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿದ ಐಪಿಎಲ್‌ ಮಂಡಳಿ

    ಮುಂಬೈ: 16 ಆವೃತ್ತಿ ಕಳೆದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಈ ಬಾರಿ ಬಲಿಷ್ಠ ಆಟಗಾರರ ಪಡೆ ಕಟ್ಟಿ, ಟ್ರೋಫಿ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಕಳೆದ ಆವೃತ್ತಿಯಲ್ಲಿದ್ದ 11 ಆಟಗಾರರಿಗೆ ಗೇಟ್‌ ಪಾಸ್‌ ನೀಡಿದ್ದು, 18 ಆಟಗಾರರನ್ನ ತಂಡದಲ್ಲಿ ಉಳಿಸಿಕೊಂಡಿದೆ.

    ಅಲ್ಲದೇ ಪರ್ಸ್‌ನಲ್ಲಿ 40.75 ಕೋಟಿ ರೂ. ಉಳಿಸಿಕೊಂಡಿದ್ದ ಆರ್‌ಸಿಬಿ, ಟ್ರೇಡ್‌ ವಿಂಡೋ (T) ನಿಯಮದಲ್ಲಿ ಮುಂಬೈ ತಂಡದಿಂದ 17.5 ಕೋಟಿ ರೂ.ಗೆ ಕ್ಯಾಮರೂನ್‌ ಗ್ರೀನ್‌ (Cameron Green) ಅವರನ್ನು ಖರೀದಿ ಮಾಡಿದೆ. ಇದರಿಂದ ಆರ್‌ಸಿಬಿ (RCB) ಪರ್ಸ್‌ ಮೊತ್ತ 23.25 ಕೋಟಿ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: IPL 2024 Retention: 10 ತಂಡಗಳಲ್ಲಿ 173 ಜನ ಸೇಫ್‌ – 50 ಆಟಗಾರರಿಗೆ ಗೇಟ್‌ಪಾಸ್‌ – ಇಲ್ಲಿದೆ ಡಿಟೇಲ್ಸ್‌

    ಕ್ಯಾಮರೂನ್‌ ಗ್ರೀನ್‌ ಅವರನ್ನು ಖರೀದಿಸಿರುವ ಬಗ್ಗೆ ಆರ್‌ಸಿಬಿ ಕೂಡ ತನ್ನ ಅಧಿಕೃತ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗ್ರೀನ್‌ ಕೂಡ ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಐಪಿಎಲ್‌ (IPL 2023) ಪ್ರವೇಶಿಸಿದ ಗ್ರೀನ್‌ 16 ಪಂದ್ಯಗಳಿಂದ 50.22 ಸರಾಸರಿಯಲ್ಲಿ 425 ರನ್‌ ಗಳಿಸಿದ್ದಾರೆ. ಇದರಲ್ಲಿ 1 ಶತಕ, 2 ಅರ್ಧಶತಕಗಳೂ ಸೇರಿವೆ. ಬೌಲಿಂಗ್‌ನಲ್ಲಿ 9.50 ಎಕಾನಮಿಯಲ್ಲಿ 6 ವಿಕೆಟ್‌ ಪಡೆದಿದ್ದಾರೆ. ಇದನ್ನೂ ಓದಿ: IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಯಾವ ಫ್ರಾಂಚೈಸಿಯಲ್ಲಿ ಎಷ್ಟು ಹಣ ಬಾಕಿಯಿದೆ?

    ಚೆನ್ನೈ ಸೂಪರ್‌ ಕಿಂಗ್ಸ್‌
    ಖರ್ಚು ಮಾಡಿದ ಒಟ್ಟು ಹಣ – 68.6 ಕೋಟಿ
    ಬಾಕಿ ಉಳಿದಿರುವ ಹಣ – 31.4 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಡೆಲ್ಲಿ ಕ್ಯಾಪಿಟಲ್ಸ್‌
    ಖರ್ಚು ಮಾಡಿದ ಒಟ್ಟು ಹಣ – 71.05 ಕೋಟಿ
    ಬಾಕಿ ಉಳಿದಿರುವ ಹಣ – 28.95 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 9

    ಗುಜರಾತ್‌ ಟೈಟಾನ್ಸ್
    ಖರ್ಚು ಮಾಡಿದ ಒಟ್ಟು ಹಣ – 61.85 ಕೋಟಿ
    ಬಾಕಿ ಉಳಿದಿರುವ ಹಣ – 38-15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಕೋಲ್ಕತ್ತಾ ನೈಟ್‌ರೈಡರ್ಸ್‌
    ಖರ್ಚು ಮಾಡಿದ ಒಟ್ಟು ಹಣ – 67.3 ಕೋಟಿ
    ಬಾಕಿ ಉಳಿದಿರುವ ಹಣ – 32.7 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 12

    ಲಕ್ನೋ ಸೂಪರ್‌ ಜೈಂಟ್ಸ್‌
    ಖರ್ಚು ಮಾಡಿದ ಒಟ್ಟು ಹಣ – 86.85 ಕೋಟಿ
    ಬಾಕಿ ಉಳಿದಿರುವ ಹಣ – 13.15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಮುಂಬೈ ಇಂಡಿಯನ್ಸ್
    ಖರ್ಚು ಮಾಡಿದ ಒಟ್ಟು ಹಣ -‌ 82.25 ಕೋಟಿ
    ಬಾಕಿ ಉಳಿದಿರುವ ಹಣ – 17.75 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಪಂಜಾಬ್‌ ಕಿಂಗ್ಸ್‌
    ಖರ್ಚು ಮಾಡಿದ ಒಟ್ಟು ಹಣ – 70.9 ಕೋಟಿ
    ಬಾಕಿ ಉಳಿದಿರುವ ಹಣ – 29.1 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಆರ್‌ಸಿಬಿ
    ಖರ್ಚು ಮಾಡಿದ ಒಟ್ಟು ಹಣ – 76.75
    ಬಾಕಿ ಉಳಿದಿರುವ ಹಣ – 23.25
    ಲಭ್ಯವಿರುವ ಸ್ಲಾಟ್‌ಗಳು – 6

    ರಾಜಸ್ಥಾನ್‌ ರಾಯಲ್ಸ್‌
    ಖರ್ಚು ಮಾಡಿದ ಒಟ್ಟು ಹಣ – 85.5 ಕೋಟಿ
    ಬಾಕಿ ಉಳಿದಿರುವ ಹಣ – 14.5 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಸನ್‌ ರೈಸರ್ಸ್‌ ಹೈದರಾಬಾದ್‌
    ಖರ್ಚು ಮಾಡಿದ ಒಟ್ಟು ಹಣ – 66 ಕೋಟಿ
    ಬಾಕಿ ಉಳಿದಿರುವ ಹಣ – 34 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    10 ತಂಡಗಳ ಲೆಕ್ಕಾಚಾರ
    ತಂಡಗಳಿಗೆ ನಿಗದಿ ಮಾಡಿದ ಹಣ – 100 ಕೋಟಿ (ತಲಾ)
    ಒಟ್ಟು ಖರ್ಚು ಮಾಡಿರುವ ಹಣ – 737.05 ಕೋಟಿ
    ಬಾಕಿ ಉಳಿಸಿಕೊಂಡಿರುವ ಹಣ – 262.95 ಕೋಟಿ
    ಬಾಕಿ ಉಳಿದಿರುವ ಸ್ಲಾಟ್‌ಗಳು – 77