Tag: CSK

  • ಕೊಹ್ಲಿ ವಿಕೆಟ್ ಪಡೆದ್ರು ಸಂತೋಷ ಪಟ್ಟಿಲ್ಲ ಯಾಕೆ: ಜಡೇಜಾ ಹೇಳ್ತಾರೆ ಓದಿ

    ಕೊಹ್ಲಿ ವಿಕೆಟ್ ಪಡೆದ್ರು ಸಂತೋಷ ಪಟ್ಟಿಲ್ಲ ಯಾಕೆ: ಜಡೇಜಾ ಹೇಳ್ತಾರೆ ಓದಿ

    ಪುಣೆ: ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದ ವೇಳೆ ತಾನು ಇನ್ನಿಂಗ್ಸ್ ನ ಮೊದಲ ಬೌಲ್ ಎಸೆದ ಕಾರಣ ಸೆಲೆಬ್ರೇಟ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಎಸ್‍ಕೆ ಬೌಲರ್ ರವೀಂದ್ರ ಜಡೇಜಾ ಹೇಳಿದ್ದಾರೆ.

    ಶನಿವಾರ ಚೆನ್ನೈ ಹಾಗೂ ಆರ್ ಸಿಬಿ ನಡುವಿನ ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಜಡೇಜಾ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಸಂತಸ ತಂದಿದೆ. ನನ್ನ ಬೌಲಿಂಗ್ ಎಂಜಾಯ್ ಮಾಡಿದ್ದೇನೆ ಎಂದರು.

    ಈ ಹಿಂದಿನ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ದುಬಾರಿ ಬೌಲಿಂಗ್ ಮಾಡಿದ ಜಡೇಜಾ ಆರ್ ಸಿಬಿ ವಿರುದ್ಧ ಮೂರು ವಿಕೆಟ್ ಪಡೆದು ಮಿಂಚಿದ್ದರು. ಪಂದ್ಯದಲ್ಲಿ ಮೊದಲ ಪವರ್ ಪ್ಲೇ ಮುಗಿದ ಬಳಿಕ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಅವರಿಗೆ ಬೌಲ್ ಮಾಡುವ ಅವಕಾಶವನ್ನು ಪಡೆದಿದ್ದರು. ಮೊದಲ ಎಸೆತದಲ್ಲೇ ಕೊಹ್ಲಿ ಬಿಗ್ ವಿಕೆಟ್ ಪಡೆದ ರವೀಂದ್ರ ಜಡೇಜಾ ಯಾವುದೇ ಸಂಭ್ರಮಾಚರಣೆ ಮಾಡದಿರುವುದನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. (ಗಮನಕ್ಕೆ ಸರ್ ರವೀಂದ್ರ ಜಡೇಜಾ  ಅಧಿಕೃತ ಟ್ವಿಟ್ಟರ್ ಖಾತೆಯಲ್ಲ)

     

     

    https://twitter.com/Iambadri11/status/992722422318039041

  • ಶುಭಮನ್ ಗಿಲ್ ನೋಡಿ ಕೆಲ ಹುಡುಗರು ಅಸೂಯೆ ಪಡ್ತಾರೆ: ದಿನೇಶ್ ಕಾರ್ತಿಕ್

    ಶುಭಮನ್ ಗಿಲ್ ನೋಡಿ ಕೆಲ ಹುಡುಗರು ಅಸೂಯೆ ಪಡ್ತಾರೆ: ದಿನೇಶ್ ಕಾರ್ತಿಕ್

    ಕೋಲ್ಕತ್ತಾ: ಕೆಕೆಆರ್ ಹಾಗೂ ಟೀಂ ಇಂಡಿಯಾ ಅಂಡರ್ 19 ತಂಡದ ಆಟಗಾರನಾಗಿರುವ ಶುಭಮನ್ ಗಿಲ್ ಸುತ್ತ ಹುಡುಗಿಯರು ಕಾಣಿಸಿಕೊಂಡ ವೇಳೆ ಇತರೇ ಹುಡುಗರು ಅಸೂಯೆ ಪಡುತ್ತಾರೆ ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕಾಲೆಳೆದಿದ್ದಾರೆ.

    ಐಪಿಎಲ್ ಚೊಚ್ಚಲ ಪಂದ್ಯಕ್ಕೆ ತಂಡದ ಪರ ಶುಭಮನ್ ಗಿಲ್ ಅವರಿಗೆ ದಿನೇಶ್ ಕಾರ್ತಿಕ್ ಸ್ವಾಗತ ಕೋರಿ ಮಾತನಾಡಿದರು. ಪಂದ್ಯಕ್ಕೂ ಮುನ್ನ ನಡೆದ ಮಾತುಕತೆಯಲ್ಲಿ ಇಬ್ಬರ ನಡುವೆ ಈ ಚರ್ಚೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಪಂದ್ಯವಾಡಿದ ಗಿಲ್ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗಿಲ್ ಆಕರ್ಷಕ ಅರ್ಧಶತಕ ಗಳಿಸಿದ್ದರು. ಕೇವಲ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಮೂಲಕ ಅಂಡರ್ 19 ವಿಶ್ವಕಪ್ ನಲ್ಲಿ ತೋರಿದ ಪ್ರದರ್ಶನವನ್ನು ಐಪಿಎಲ್‍ನಲ್ಲೂ ಮುಂದುವರೆಸಿದರು.

  • ಐಪಿಎಲ್ 2018 – ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್: ಟಾಪ್ 3 ಆಟಗಾರರ ಪಟ್ಟಿ ಇಲ್ಲಿದೆ

    ಐಪಿಎಲ್ 2018 – ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್: ಟಾಪ್ 3 ಆಟಗಾರರ ಪಟ್ಟಿ ಇಲ್ಲಿದೆ

    ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ಭರಪುರ ಮನರಂಜನೆಯನ್ನು ನೀಡುತ್ತಿದ್ದು, ಇದುವರೆಗೂ ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್ ಸಿಡಿಸಿದ ಟಾಪ್ 3 ಸ್ಥಾನಗಳನ್ನು ಪಡೆದಿರುವ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    ಆರೆಂಜ್ ಕ್ಯಾಪ್
    1. ಅಂಬಟಿ ರಾಯುಡು  – 370 ರನ್ – ಸಿಎಸ್‍ಕೆ
    2. ವಿರಾಟ್ ಕೊಹ್ಲಿ        – 349 ರನ್ – ಆರ್‌ಸಿಬಿ
    3. ಕೇನ್ ವಿಲಿಯಮ್ಸ್    – 322 ರನ್ -ಎಸ್‍ಆರ್ ಎಚ್

    ಪರ್ಪಲ್ ಕ್ಯಾಪ್
    1. ಹಾರ್ದಿಕ್ ಪಾಂಡ್ಯ         – 11 ವಿಕೆಟ್ – ಮುಂಬೈ
    2. ಮಯಾಂಕ್ ಮಾರ್ಕಡೆ  – 11 ವಿಕೆಟ್ – ಮುಂಬೈ
    3. ಸಿದ್ದಾರ್ಥ್ ಕೌಲ್           – 11 ವಿಕೆಟ್ – ಮುಂಬೈ

    ಸಿಕ್ಸರ್
    1. ಕ್ರಿಸ್ ಗೇಲ್             – 23 – ಪಂಜಾಬ್
    2. ಎಬಿಡಿವಿಲಿಯರ್ಸ್   – 23 – ಆರ್‌ಸಿಬಿ
    3. ಆಂಡ್ರೆ ರುಸೆಲ್      – 23 – ಕೆಕೆಆರ್

    ಬೆಸ್ಟ್ ಎಕಾನಮಿ
    1. ಸಂದೀಪ್ ಶರ್ಮಾ    – 4.0 ಇ/ಆರ್ – ಎಸ್‍ಆರ್ ಎಚ್
    2. ಜೋಫ್ರಾ ಆರ್ಚರ್   – 6.00 ಇ/ಆರ್ – ಆರ್ ಆರ್
    3. ಅಂಕಿತ್ ರಜಪೂತ್  – 6.27 ಇ/ಆರ್ – ಪಂಜಾಬ್

    ಕಳೆದ ಬಾರಿಯ ಟೂರ್ನಿಯಲ್ಲಿ ಆಸೀಸ್, ಹೈದರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ (641 ರನ್) ಆರೆಂಜ್ ಕ್ಯಾಪ್ ಪಡೆದಿದ್ದರು. ಭುವನೇಶ್ವರ್ ಕುಮಾರ್ 26 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು.

  • ಚೆನ್ನೈ ವಿರುದ್ಧ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್: ಕೊಹ್ಲಿಗೆ ಭಾರೀ ದಂಡ

    ಚೆನ್ನೈ ವಿರುದ್ಧ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್: ಕೊಹ್ಲಿಗೆ ಭಾರೀ ದಂಡ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಿಧಾನಗತಿ ಬೌಲಿಂಗ್ ಮಾಡಿದಕ್ಕೆ ನಾಯಕ ವಿರಾಟ್ ಕೊಹ್ಲಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

    ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರ್ಣಗೊಳಿಸದ ಕಾರಣ ಪಂದ್ಯದ ರೆಫರಿ ನಾಯಕ ಕೊಹ್ಲಿಗೆ 12 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ. ಈ ಮೂಲಕ 2018ರ ಐಪಿಎಲ್ ಆವೃತ್ತಿಯಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಮೊದಲ ತಂಡ ಎಂಬ ಕುಖ್ಯಾತಿಯನ್ನು ಆರ್‌ಸಿಬಿ ಪಡೆದುಕೊಂಡಿದೆ.

    ಚೆನ್ನೈ ಹಾಗೂ ಆರ್‌ಸಿಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯ ಕಾರಣ ಕ್ರೀಡಾಂಗಣದ ತುಂಬಾ ಅಭಿಮಾನಿಗಳು ತುಂಬಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ತಂಡ 205 ರನ್‍ಗಳ ಸವಾಲಿನ ಮೊತ್ತವನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಪರ ರಾಯುಡು ಹಾಗೂ ನಾಯಕ ಎಂಎಸ್ ಧೋನಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಧೋನಿ ಕೇವಲ 30 ಎಸೆತಗಳಲ್ಲಿ ಅಜೇಯ 70 ರನ್ (3ಬೌಂಡರಿ, 8 ಸಿಕ್ಸರ್) ಸಿಡಿಸಿದರೆ, ಇದಕ್ಕೂ ಮುನ್ನ ಅಂಬಟಿ ರಾಯುಡು 82 (53 ಎಸೆತ 3 ಬೌಂಡರಿ, 8 ಸಿಕ್ಸರ್) ರನ್ ಸಿಡಿಸಿದ್ದರು.

    ಚೆನ್ನೈ ತಂಡದ ಬ್ಯಾಟಿಂಗ್ ಕಟ್ಟಿ ಹಾಕಲು ಯತ್ನಿಸಿದ ಕೊಹ್ಲಿ ಹಲವು ಬಾರಿ ಬೌಲಿಂಗ್ ನಲ್ಲಿ ಬದಲಾವಣೆಯನ್ನು ತಂದರು. ಅದರು ಆರ್‌ಸಿಬಿ ಬೌಲರ್ ಗಳನ್ನು ಸಮರ್ಥವಾಗಿ ದಂಡಿಸಿದ ಚೆನ್ನೈ ಆಟಗಾರರು ಗೆಲುವಿನ ಸಿಹಿ ಪಡೆದರು.

  • ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

    ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

    ಮೊಹಾಲಿ: ಕ್ರಿಕೆಟ್ ಆಡಲು ದೇವರು ನನಗೆ ಶಕ್ತಿ ಕೊಟ್ಟಿದ್ದಾನೆ. ಆಟದಲ್ಲಿ ನಾನು ಹೆಚ್ಚು ಸೊಂಟದ ಮೇಲೆ ಒತ್ತಡವನ್ನು ನೀಡುವುದಿಲ್ಲ. ನನ್ನ ಕೈಗಳಿಗೆ ಮಾತ್ರ ಹೆಚ್ಚಿನ ಶ್ರಮ ನೀಡುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕವೂ ಚೆನ್ನೈ 4 ರನ್ ಅಂತರದಲ್ಲಿ ಸೋಲುಂಡಿತ್ತು.

    ಪಂಜಾಬ್ ತಂಡದ ನೀಡಿದ್ದ 198 ರನ್ ಗುರಿಯನ್ನು ಬೆನ್ನತ್ತಿದ್ದ ಸಿಎಸ್‍ಕೆ ಗೆಲುವಿಗಾಗಿ ರೋಚಕ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಧೋನಿ 44 ಎಸೆತಗಳಲ್ಲಿ 79 ರನ್ (6 ಬೌಂಡರಿ, 5 ಸಿಕ್ಸರ್) ಸಿಡಿಸಿದ್ದರು. ಆದರೆ ಪಂದ್ಯದ ನಡುವೆ ಧೋನಿ ಬೆನ್ನು ನೋವಿನಿಂದ ಬಳಲಿದ್ದರೂ ಬಳಿಕ ಮೈದಾನದಿಂದಲೇ ಚಿಕಿತ್ಸೆ ಪಡೆದು ಆಟ ಮುಂದುವರೆಸಿದ್ದರು. ಪಂದ್ಯದ ಕೊನೆಯ ಓವರ್ ವರೆಗೂ ಗೆಲುವಿಗಾಗಿ ಧೋನಿ ನಡೆಸಿದ ಹೋರಾಟಕ್ಕೆ ಮೋಹಿತ್ ಶರ್ಮಾ ಉತ್ತಮ ಪ್ರತಿರೋಧ ನಡೆಸಿದ್ದರು. ಧೋನಿ ಪಂದ್ಯದಲ್ಲಿ ಸಮಸ್ಯೆಗೆ ಒಳಗಾದರೂ ಗೆಲುವಿಗಾಗಿ ನಡೆಸಿದ ಹೋರಾಟಕ್ಕೆ ಹಲವು ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಸಿಎಸ್‍ಕೆ ನ ಎರಡು ಪಂದ್ಯಗಳ ಗೆಲುವಿಗೆ ಸ್ಯಾಮ್ ಬಿಲ್ಲಿಂಗ್ ಮತ್ತು ಬ್ರಾವೋ ಕಾರಣರಾಗಿದ್ದರು. ಆದರೆ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಬ್ರಾವೋ ಅವರ ಸ್ಥಾನದಲ್ಲಿ ಜಡೇಜಾ ಅವರನ್ನು ಬ್ಯಾಟಿಂಗ್ ಕಳುಹಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ ಆಲ್ ರೌಂಡರ್ ಜಡೇಜಾ ಭಾರೀ ಹೊಡೆತ ಸಿಡಿಸುವ ನಂಬಿಕೆ ಇತ್ತು. ಅದ್ದರಿಂದಲೇ ಅವರ ಬ್ಯಾಟಿಂಗ್ ಕ್ರಮದಲ್ಲಿ ಉನ್ನತಿ ನೀಡಲಾಗಿತ್ತು ಎಂದರು. ಬಳಿಕ ಮುಂದಿನ ಪಂದ್ಯಕ್ಕೆ ಮೂರು ದಿನಗಳ ಸಮಯ ಇರುವುದರಿಂದ ತಮ್ಮ ಸಮಸ್ಯೆಯಿಂದ ಬೇಗ ಹೊರ ಬರುತ್ತೇನೆ ಎಂದು ಹೇಳಿದ್ದಾರೆ.

  • ಐಪಿಎಲ್ ಗೊಂದಲ: ಧೋನಿ ಚೆನ್ನೈ ತಂಡದಲ್ಲಿ ಆಡೋದು ಡೌಟ್!

    ಐಪಿಎಲ್ ಗೊಂದಲ: ಧೋನಿ ಚೆನ್ನೈ ತಂಡದಲ್ಲಿ ಆಡೋದು ಡೌಟ್!

    ಮುಂಬೈ: ಫೆಬ್ರವರಿಯಲ್ಲಿ ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಇಂಗ್ಲೆಂಡ್‍ನಲ್ಲಿ ನಡೆಸಲು ಎರಡು ತಂಡಗಳ ಮಾಲೀಕರು ಮನವಿ ಮಾಡಿದ್ದಾರೆ. ಆದರೆ ಉಳಿದ ಫ್ರಾಂಚೈಸಿಗಳು ಇದಕ್ಕೆ ಸಮ್ಮತಿ ಸೂಚಿಸದ ಕಾರಣ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ.

    ಐಪಿಎಲ್ 11ನೇ ಆವೃತ್ತಿಗೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆ ಮುಂಬೈನಲ್ಲಿ ನಡೆಯಿತು. ಇದೇ ವೇಳೆ ತಂಡದಲ್ಲಿ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವ `ರಿಟೇನ್’ ಪದ್ಧತಿಯನ್ನು ಕೈ ಬಿಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಆಗ್ರಹಿಸಿವೆ.

    ಮೂಲಗಳ ಪ್ರಕಾರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 5 ರಿಂದ 6 ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಫಾಪ್ ಡುಪ್ಲೆಸ್ಸಿ, ಹಾಗೂ ಡ್ವೈನ್ ಬ್ರಾವೋರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ಲಾನ್ ಮಾಡಿದೆ. ಇದಕ್ಕೆ ಇನ್ನೊಂದು ತಂಡ ವಿರೋಧ ವ್ಯಕ್ತಪಡಿಸಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್, ಸನ್‍ರೈಸರ್ಸ್ ಹೈದ್ರಾಬಾದ್ ಹಾಗೂ ಡೆಲ್ಲಿ ಡೇರ್ ಡೇವಿಲ್ಸ್ ತಲಾ ಮೂರು ಅಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿವೆ.

    ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕಿಂಗ್ಸ್ ಇಲೆವನ್ ಪಂಜಾಬ್ ಮನವಿ ಮಾಡಿದೆ. ಆದರೆ ರಿಟೇನ್ ಪದ್ಧತಿಯ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಒಂದು ವೇಳೆ ರಿಟೇನ್ ಪದ್ಧತಿಯನ್ನು ಕೈ ಬಿಟ್ಟರೆ ಐಪಿಎಲ್ ತಂಡಗಳ ಸಂಪೂರ್ಣ ಚಿತ್ರಣವೇ ಬದಲಾಗಲಿದೆ. ಈ ವೇಳೆ ಸಿಎಸ್‍ಕೆಗೆ ಮರಳಲು ತುದಿಗಾಲಲ್ಲಿ ನಿಂತಿರುವ ಕೂಲ್ ಕ್ಯಾಪ್ಟನ್ ಧೋನಿ, ಅದೇ ತಂಡಕ್ಕೆ ಮರಳುವುದು ಸಂದೇಹವಾಗಿದೆ.

    ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಐಪಿಎಲ್‍ನಿಂದ ಎರಡು ವರ್ಷಗಳ ಕಾಲ ಟೂರ್ನಿಯಿಂದ ಅಮಾನತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಟೂರ್ನಿಗೆ ಮರಳಲಿವೆ. ಈ ತಂಡಗಳ ಆಟಗಾರರು ಕಳೆದೆರಡು ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಜಯಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಈ ಬಾರಿ ಮತ್ತೆ ಎಲ್ಲಾ ಅಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸಭೆಯ ಬಳಿಕ ಮಾತನಾಡಿದ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ರಿಟೇನ್ ಪದ್ಧತಿ, ಆಟಗಾರರ ಸಂಬಳ, ತಂಡದ ಸದಸ್ಯರ ಸಂಖ್ಯೆ, ಪಂದ್ಯಗಳ ಹಕ್ಕು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಕುರಿತು ಮುಂದಿನ ಕೆಲ ವಾರಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.

    ಇದನ್ನೂ ಓದಿ: ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

     

    https://www.facebook.com/MSDhoni/posts/1926010637622156

    https://www.facebook.com/Seenumama/photos/pcb.1103706643095460/1103706599762131/?type=3&theater

    https://www.facebook.com/Seenumama/photos/pcb.1103706643095460/1103706619762129/?type=3&theater

    https://www.facebook.com/msdhoni7781/photos/pcb.1453118581403674/1453118448070354/?type=3&theater

    https://www.facebook.com/msdhoni7781/photos/pcb.1453118581403674/1453118384737027/?type=3&theater

    https://www.facebook.com/msdhoni7781/photos/pcb.1453118581403674/1453118424737023/?type=3&theater

  • ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮತ್ತೆ ಆಡಲಿದ್ದಾರಾ ಧೋನಿ?

    ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮತ್ತೆ ಆಡಲಿದ್ದಾರಾ ಧೋನಿ?

    ನವದೆಹಲಿ: 2018ರ ಇಂಡಿಯನ್ ಪ್ರೀಯರ್ ಲೀಗ್(ಐಪಿಎಲ್) ಆವೃತ್ತಿಯಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಆಡುವ ಸಾಧ್ಯತೆ ಹೆಚ್ಚಾಗಿದೆ.

    ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‍ಕೆ) ಮತ್ತು ರಾಜಸ್ತಾನ್ ರಾಯಲ್(ಆರ್‍ಆರ್) ತಂಡಗಳು ಮತ್ತೆ 2018 ರ ಆವೃತ್ತಿಯಲ್ಲಿ ಭಾಗವಹಿಸುತ್ತಿವೆ. ಈ ಎರಡು ತಂಡಗಳ ಪರ ಆಡುತ್ತಿದ್ದ ಆಟಗಾರರನ್ನು ಮತ್ತೆ ತಂಡಕ್ಕೆ ಮರಳಿ ಪಡೆಯಲು ಅವಕಾಶವನ್ನು ನೀಡುವಂತೆ ಐಪಿಎಲ್ ಆಡಳಿತ ಮಂಡಳಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಈ ಹಿಂದೆ ಸಿಎಸ್‍ಕೆ ಮತ್ತು ಆರ್‍ಆರ್ ತಂಡಗಳ ಪರ ಆಡುತ್ತಿದ್ದ ಹಲವು ಆಟಗಾರರು ಕಳೆದ ಎರಡು ವರ್ಷಗಳ ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಮತ್ತು ಗುಜರಾತ್ ಲಯನ್ಸ್ ಪರ ಆಡಿದ್ದರು. ಈ ಕುರಿತು ಹೇಳಿಕೆ ನೀಡಿರುವ ಐಪಿಎಲ್ ಆಡಳಿತ ಮಂಡಳಿ, ಒಬ್ಬ ಭಾರತೀಯ ಆಟಗಾರ ಹಾಗೂ ಇಬ್ಬರು ವಿದೇಶಿ ಆಡಗಾರರನ್ನು ಸೇರಿ ಕನಿಷ್ಠ ಪಕ್ಷ ಮೂವರು ಆಟಗಾರರನ್ನು ಹಿಂಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದೆ.

    ಇನ್ನೂಳಿದಂತೆ ಸಿಎಸ್‍ಕೆ ಪರ ಆಡುತ್ತಿದ್ದ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ಸಹ ತಂಡವನ್ನು ಮರಳುವ ನಿರೀಕ್ಷೆ ಇದೆ.

    ಈ ಕುರಿತು ತಂಡದ ಪ್ರಾಂಚೈಸಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮೂರು ಅಥವಾ ಐವರು ಆಟಗಾರರನ್ನು ಹಿಂಪಡೆಯುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

    ಈ ಹಿಂದೆ ಭಾರತ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ವೇಳೆ ಧೋನಿ ಚೆನ್ನೈನಲ್ಲಿ ಇಂಡಿಯಾ ಸಿಮೆಂಟ್ಸ್ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆಯೇ ಧೋನಿ ಮತ್ತೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಅದಕ್ಕೂ ಮೊದಲು ಧೋನಿ ಜುಲೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿ ಧರಿಸಿದ್ದ ಫೋಟೋವನ್ನು ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡುವ ಮೂಲಕ ಮರಳಿ ತಂಡಕ್ಕೆ ಹಿಂದಿರುಗವ ಬಗ್ಗೆ ಸುಳಿವು ನೀಡಿದ್ದರು.

    https://www.facebook.com/MSDhoni/posts/1926010637622156

    https://www.facebook.com/Seenumama/photos/pcb.1103706643095460/1103706599762131/?type=3&theater

    https://www.facebook.com/Seenumama/photos/pcb.1103706643095460/1103706619762129/?type=3&theater

    https://www.facebook.com/msdhoni7781/photos/pcb.1453118581403674/1453118448070354/?type=3&theater

    https://www.facebook.com/msdhoni7781/photos/pcb.1453118581403674/1453118384737027/?type=3&theater

    https://www.facebook.com/msdhoni7781/photos/pcb.1453118581403674/1453118424737023/?type=3&theater