Tag: CSK

  • ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದ ದುಬೆ – ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ

    ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದ ದುಬೆ – ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ

    ದುಬೈ: ಚೆನ್ನೈ ಬೌಲರ್‌ಗಳ ವಿರುದ್ಧ ಮನಸೋ ಇಚ್ಛೆ ಬ್ಯಾಟ್ ಬೀಸಿದ ರಾಜಸ್ಥಾನದ ಆಲ್‍ರೌಂಡರ್ ಶಿವಂ ದುಬೆ ರಾಜಸ್ಥಾನಕ್ಕೆ 7 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡ ಫ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

    ಚೆನ್ನೈ ನೀಡಿದ 190ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಲು ಮುಂದಾಯಿತು. ಎವಿನ್ ಲೂಯಿಸ್ 27ರನ್(12 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ಯಶಸ್ವಿ ಜೈಸ್ವಾಲ್ 50ರನ್(21 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಘರ್ಜಿಸಿದರು. ಇವರ ನಿರ್ಗಮನದ ಬಳಿಕ ಬಂದ ಶಿವಂ ದುಬೆ ಚೆನ್ನೈ ಬೌಲರ್‌ಗಳಿಗೆ ಅಷ್ಟ ದಿಕ್ಕಿನ ಪರಿಚಯ ಮಾಡಿಸಿದರು. ಸಿಕ್ಸರ್, ಬೌಂಡರಿಗಳನ್ನು ಸಾಲು ಸಾಲು ಹೊಡೆದು ರಾಜಸ್ಥಾನ ತಂಡಕ್ಕೆ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರು. ದುಬೆ 64ರನ್(42 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಐಪಿಎಲ್‍ನಲ್ಲಿ ಮಿಂಚುತ್ತಿರುವ ಅನ್ ಕ್ಯಾಪ್ಡ್ ಪ್ಲೇಯರ್ಸ್

    ಬೃಹತ್ ಮೊತ್ತ ಪೇರಿಸಿದ ಚೆನ್ನೈ

    ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡಕ್ಕೆ ಆರಂಭಿಕ ಆಟಗಾರರಾದ ಫಾಫ್ ಡು ಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಎಂದಿನಂತೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ ಈ ಜೋಡಿ 47ರನ್(41 ಎಸೆತ) ಜೊತೆಯಾಟವಾಡಿತು. ಈ ವೇಳೆ ದಾಳಿಗಿಳಿದ ರಾಹುಲ್ ತೇವಾಟಿಯ ಪ್ಲೆಸಿಸ್ 25ರನ್(19 ಎಸೆತ, 2 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯಲು ಯಶಸ್ವಿಯಾದರು. ನಂತರ ಬಂದ ಸುರೇಶ್ ರೈನಾ 3ರನ್, ಮೊಯಿನ್ ಅಲಿ 21ರನ್(17 ಎಸೆತ, 1 ಬೌಂಡರಿ, 1ಸಿಕ್ಸ್) ಮತ್ತು ಅಂಬಾಟಿ ರಾಯುಡು 2ರನ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

    ಗಾಯಕ್ವಾಡ್, ಜಡೇಜಾ ಅಬ್ಬರ
    ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಸೈಲೆಂಟ್ ಆಗಿ ಬ್ಯಾಟ್ ಬೀಸುತ್ತಿದ್ದ ಗಾಯಕ್ವಾಡ್ ಜಡೇಜಾ ಜೊತೆ ಸೇರಿ ಅಬ್ಬರಿಸಲು ಪ್ರಾರಂಭಿಸಿದರು. ಈ ಜೋಡಿ ರಾಜಸ್ಥಾನ ಬೌಲರ್‍ಗಳನ್ನು ಮನಬಂದಂತೆ ಚಚ್ಚಿ ಬೌಂಡರಿ, ಸಿಕ್ಸರ್‍ ಗಳ ಸುರಿಮಳೆಗೈದರು. ಸಾಧಾರಣ ಮೊತ್ತ ಪೇರಿಸುವಂತ ಸ್ಥಿತಿಯಲ್ಲಿದ್ದ ಚೆನ್ನೈ ತಂಡವನ್ನು ಈ ಜೋಡಿ 180ರ ಗಡಿ ದಾಟಿಸಿತು. ಗಾಯಕ್ವಾಡ್ ಅಂತಿಮ ಎಸೆತದಲ್ಲಿ ಸಿಕ್ಸ್ ಸಿಡಿಸಿ 101ರನ್(60 ಎಸೆತ 9 ಬೌಂಡರಿ, 5 ಸಿಕ್ಸ್) ಶತಕ ಸಿಡಿಸಿ ಸಂಭ್ರಮಮಿಸಿದರು. ಜಡೇಜಾ ಕೇವಲ 15 ಎಸೆತದಲ್ಲಿ 4 ಬೌಂಡರಿ, 1 ಸಿಕ್ಸ್ ಚಚ್ಚಿ 32ರನ್ ಸಿಡಿಸಿದರು. ಅಂತಿಮವಾಗಿ ತಂಡ 4 ವಿಕೆಟ್ ನಷ್ಟಕ್ಕೆ 189ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರಾಜಸ್ಥಾನ ಪರ ರಾಹುಲ್ ತೆವಾಟಿಯಾ 3 ವಿಕೆಟ್ ಕಿತ್ತು ಮಿಂಚಿದರು. ಇನ್ನುಳಿದ 1 ವಿಕೆಟ್ ಚೇತನ್ ಸಕಾರಿಯಾ ಪಡೆದರು. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ರನ್ ಏರಿದ್ದು ಹೇಗೆ?
    50ರನ್ -45 ಎಸೆತ
    100 ರನ್ -82 ಎಸೆತ
    150ರನ್ -106 ಎಸೆತ
    189ರನ್ – 120 ಎಸೆತ

  • ಸಿಕ್ಸರ್ ಮೂಲಕ ಗೇಮ್ ಫಿನಿಶ್ ಮಾಡಿದ ಧೋನಿ- ಹೈದರಾಬಾದ್ ವಿರುದ್ಧ ಚೆನ್ನೈಗೆ 6 ವಿಕೆಟ್ ಜಯ

    ಸಿಕ್ಸರ್ ಮೂಲಕ ಗೇಮ್ ಫಿನಿಶ್ ಮಾಡಿದ ಧೋನಿ- ಹೈದರಾಬಾದ್ ವಿರುದ್ಧ ಚೆನ್ನೈಗೆ 6 ವಿಕೆಟ್ ಜಯ

    ದುಬೈ: ಬಹಳ ದಿನಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಕ್ಸ್ ಸಿಡಿಸುವ ಮೂಲಕ ಗೇಮ್ ಫಿನಿಶ್ ಮಾಡಿದ್ದಾರೆ. ಈ ಮೂಲಕ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿ ಫ್ಲೇ ಆಫ್‍ಗೆ ಮೊದಲ ತಂಡವಾಗಿ ಎಂಟ್ರಿ ಕೊಟ್ಟಿದೆ.

    ಹೈದಾಬಾದ್ ನೀಡಿದ 135ರನ್‍ಗಳ ಸಾಧರಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಋತುರಾಜ್ ಗಾಯಕ್ವಾಡ್ 45ರನ್(38 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಫಾಫ್ ಡು ಪ್ಲೆಸಿಸ್ 41ರನ್(36 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ 75ರನ್(61 ಎಸೆತ)ಗಳ ಜೊತೆಯಾಟವಾಡಿ ಔಟ್ ಆದರು. ಬಳಿಕ ಪಟಪಟನೇ ಎರಡು ವಿಕೆಟ್ ಕಳೆದುಕೊಂಡ ಚೆನ್ನೈ ತಂಡಕ್ಕೆ ನಂತರ ಬಂದ ಅಂಬಾಟಿ ರಾಯುಡು 17ರನ್(13 ಎಸೆತ,1 ಬೌಂಡರಿ, 1 ಸಿಕ್ಸ್) ಮತ್ತು ಧೋನಿ 14ರನ್(11 ಎಸೆತ, 1 ಸಿಕ್ಸ್ 1 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಜೋಶ್ ಹೇಜಲ್‍ವುಡ್ ಮಾರಕ ದಾಳಿ:
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ಜೋಶ್ ಹೇಜಲ್‍ವುಡ್ ಮಾರಕವಾಗಿ ಎರಗಿ ಮೂರು ವಿಕೆಟ್ ಕಿತ್ತು ಮಿಂಚಿದರು. ಆರಂಭಿಕ ಆಟಗಾರ ಜೇಸನ್ ರಾಯ್ ಕೇವಲ 2ರನ್(7 ಎಸೆತ) ಮಾಡಿ ಹೇಜಲ್‍ವುಡ್ ಎಸೆತದಲ್ಲಿ ಧೋನಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸದರು. ಆ ಬಳಿಕ ಬಂದ ಕೇನ್ ವಿಲಿಯಮ್ಸನ್ 11ರನ್(11 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ನಂತರ ಬಂದ ಅಭಿಷೇಕ್ ಶರ್ಮಾ ಮತ್ತು ಅಬ್ದುಲ್ ಸಮದ್ ತಲಾ 18ರನ್ ಸಿಡಿಸಿ ಪೇವಿಲಿಯನ್ ಸೇರಿಕೊಂಡರು.

    ಒಂದು ಕಡೆ ಆರಂಭಿಕನಾಗಿ ಬಂದು ಅಬ್ಬರಿಸಿದ ವೃದ್ಧಿಮಾನ್ ಸಹಾ 44ರನ್(46 ಎಸೆತ 1 ಬೌಂಡರಿ 2 ಸಿಕ್ಸ್) ಸಿಡಿಸಿ ತಂಡಕ್ಕೆ ಆಸರೆಯಾದರು ಅವರ ನಿರ್ಗಮನದ ಬಳಿಕ ಕೊನೆಯಲ್ಲಿ ರಶೀದ್ ಖಾನ್ 17 ರನ್(13 ಎಸೆತ 2 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ ಓವರ್‍ ಗಳ ಅಂತ್ಯಕ್ಕೆ ಹೈದರಾಬಾದ್ 7 ವಿಕೆಟ್ ಕಳೆದುಕೊಂಡು 134ರನ್ ಬಾರಿಸಿತು.

    ಸಿಎಸ್‍ಕೆ ಪರ ಜೋಶ್ ಹೇಜಲ್‍ವುಡ್ 3, ಬ್ರಾವೋ 2 ಜಡೇಜಾ ಮತ್ತು ಠಾಕೂರ್ ತಲಾ 1 ವಿಕೆಟ್ ಕಿತ್ತು ಮಿಂಚಿದರು.

     

  • 5 ಎಸೆತದಲ್ಲಿ 21 ರನ್ ಚಚ್ಚಿದ ಜಡೇಜಾ – ಕೊನೆಯ ಎಸೆತದಲ್ಲಿ ಚೆನ್ನೈಗೆ ರೋಚಕ ಜಯ

    5 ಎಸೆತದಲ್ಲಿ 21 ರನ್ ಚಚ್ಚಿದ ಜಡೇಜಾ – ಕೊನೆಯ ಎಸೆತದಲ್ಲಿ ಚೆನ್ನೈಗೆ ರೋಚಕ ಜಯ

    ಅಬುಧಾಬಿ: ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್‍ಗಳ ರೋಚಕ ಜಯ ದಾಖಲಿಸುವ ಮೂಲಕ 16 ಅಂಕಗಳೊಂದಿಗೆ ಪ್ಲೇ ಆಫ್‍ಗೆ ಬಹುತೇಕ ಲಗ್ಗೆ ಇಟ್ಟಿದೆ. ರವೀಂದ್ರ ಜಡೇಜಾರ ಅಮೋಘ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ನೀಡಿದ್ದ 172 ರನ್‍ಗಳ ಗುರಿ ಬೆನ್ನತ್ತಿ ಕೊನೆಯ ಬಾಲ್‍ನಲ್ಲಿ ಜಯ ತನ್ನದಾಗಿಸಿಕೊಂಡಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಕೆಕೆಆರ್ ತಂಡಕ್ಕೆ ಆರಂಭದಲ್ಲೆ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ರಾಹುಲ್ ತ್ರಿಪಾಠಿ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಜೊತೆಯಾಟ ಆಡಿದರು. 2ನೇ ವಿಕೆಟ್‍ಗೆ ಈ ಜೋಡಿ 40ರನ್‍ಗಳ ಜೊತೆಯಾಟವಾಡಿತು. ಇದನ್ನೂ ಓದಿ: ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್

    ಕೆಕೆಆರ್ ಪರ ತ್ರಿಪಾಠಿ 45ರನ್ (33 ಎಸೆತ 4 ಬೌಂಡರಿ 1 ಸಿಕ್ಸರ್)ಗಳಿಸಿದರೆ ನಿತೀಶ್ ರಾಣಾ 37ರನ್ (27 ಎಸೆತ 3 ಬೌಂಡರಿ 1 ಸಿಕ್ಸರ್) ಹೊಡೆದರು. ಇಬ್ಬರ ವಿಕೆಟ್ ಪತನದ ನಂತರ ಬಿರುಸಿನ ಆಟವಾಡಿದ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಸಿಎಸ್‍ಕೆ ಬೌಲರ್‍ಗಳನ್ನು ಬೆಂಡೆತ್ತಿದ್ದರು. ರಸೆಲ್ 20ರನ್ (15 ಎಸೆತ 2 ಬೌಂಡರಿ 1 ಸಿಕ್ಸರ್) ಗಳಿಸಿದರೆ ಕಾರ್ತಿಕ್ 26 ರನ್ (11 ಎಸೆತ 3 ಬೌಂಡರಿ 1 ಸಿಕ್ಸರ್) ಚಚ್ಚಿದರು. ಸಿಎಸ್‍ಕೆ ಪರ ಹೆಜೆಲ್‍ವುಡ್ ಹಾಗೂ ಠಾಕೂರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.ಇದನ್ನೂ ಓದಿ: ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ಕೆಕೆಆರ್ ಟಾರ್ಗೆಟ್ ಬೆನ್ನತ್ತಿದ ಸಿಎಸ್‍ಕೆಗೆ ಡು ಫ್ಲೆಸಿಸ್ ಹಾಗೂ ಗಾಯಕ್ವಾಡ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ 8.2 ಓವರ್‍ಗಳಲ್ಲಿ 74 ರನ್‍ಗಳನ್ನು ಕಲೆ ಹಾಕಿತು. ಉತ್ತಮವಾಗಿ ಆಡುತ್ತಿದ್ದ ಗಾಯಕ್ವಾಡ್ 40ರನ್ (28 ಎಸೆತ 2 ಬೌಂಡರಿ 3 ಸಿಕ್ಸರ್) ಸಿಡಿಸಿ ರಸೆಲ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ 43 ರನ್ (30 ಎಸೆತ 7 ಬೌಂಡರಿ) ಗಳಿಸಿ ಫಾಫ್ ಡು ಪ್ಲೆಸಿಸ್ ಪ್ರಸಿದ್ಧಕೃಷ್ಣಗೆ ವಿಕೆಟ್ ಕೊಟ್ಟು ಹೊರ ನಡೆದರು. ನಂತರ ಜೊತೆಯದ ಮೊಯಿನ್ ಅಲಿ ಹಾಗೂ ರಾಯುಡು ಉತ್ತಮ ಆಟವಾಡುವ ಲಕ್ಷಣ ತೋರಿಸಿದರು, ರಾಯುಡು ಕೇವಲ 10 ರನ್ ಗಳಿಸಿ ನರೈನ್‍ಗೆ ವಿಕೆಟ್ ಒಪ್ಪಿಸಿದರು.

    ನಂತರ ಧೋನಿ ಹಾಗೂ ಸುರೇಶ್ ರೈನಾ ಗೆಲುವಿನ ದಡ ಸೇರಿಸಲು ವಿಫಲವಾದರು. ಇನ್ನೆನು ಚೆನ್ನೈ ಪಂದ್ಯವನ್ನು ಕೈಚೆಲ್ಲಿತ್ತು ಎನ್ನುವಾಗ ಜಡೇಜಾ ಪ್ರಸಿದ್ಧ ಕೃಷ್ಣ ಎಸೆದ 19ನೇ ಓವರ್‍ನಲ್ಲಿ 22 ರನ್ ಕೆಲೆಹಾಕಿ ಜಯದ ಹೊಸ್ತಿಲಲ್ಲಿ ನಿಲ್ಲಿಸಿದರು. ಈ ಓವರಿನಲ್ಲಿ ಮೊದಲ ಎರಡು ಎಸೆತದಲ್ಲಿ ಸಿಂಗಲ್ ರನ್ ಬಂದರೆ ನಂತರ ಎರಡು ಎಸೆತದಲ್ಲಿ ಸಿಕ್ಸರ್, ಕೊನೆತ ಎರಡು ಎಸೆತದಲ್ಲಿ ಜಡೇಜಾ ಬೌಂಡರಿ ಸಿಡಿಸಿದರು.

    ಕೊನೆಯ ಓವರ್‍ನಲ್ಲಿ ಗೆಲ್ಲಲು 4 ರನ್‍ಗಳ ಬೇಕಾಗಿತ್ತು. ನರೈನ್ ಎಸೆದ ಮೊದಲ ಎಸೆತದಲ್ಲೆ ಸ್ಯಾಮ್ ಕರ್ರ್‍ನ್ ವಿಕೆಟ್ ಒಪ್ಪಿಸಿದರು. ಎರಡನೇ ಎಸೆತವನ್ನು ಠಾಕೂರ್ ಡಾಟ್ ಮಾಡಿದರೇ ಮೂರನೇ ಎಸೆತದಲ್ಲಿ 3 ರನ್ ಗಳಿಸಿದರು 4 ನೇ ಡಾಟ್ ಆಯಿತು. 5ನೇ ಎಸೆತದಲ್ಲಿ ಜಡೇಜಾ ನರೈನ್‍ಗೆ ಎಲ್‍ಬಿ ಬಲೆಗೆ ಬಿದ್ದರು. ಕೊನೆಯ ಎಸೆದಲ್ಲಿ ಗೆಲ್ಲಲು ಒಂದು ರನ್ ಬೇಕಿತ್ತು. ದೀಪಕ್ ಚಹಾರ್ ರನ್ ಹೊಡೆಯುವ ಮೂಲಕ ಚೆನ್ನೈ ರೋಚಕ ಗೆಲುವು ಸಾಧಿಸಿತು. ಚೆನ್ನೈ ಪರ ಜಡೇಜಾ 22ರನ್ ( 8 ಎಸೆತ, 2 ಬೌಂಡರಿ 2 ಸಿಕ್ಸರ್ ) ಸಿಡಿಸಿ ಮಿಂಚಿದರು.

  • ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಬ್ಯಾಟಿಂಗ್‍ಗೆ ಹೆಸರುವಾಸಿ. ಇದೀಗ ಧೋನಿ ಬ್ಯಾಟಿಂಗ್ ಬಿಟ್ಟು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ ಸಹ ಆಟಗಾರ ಜಡೇಜಾರನ್ನು ಕ್ಲೀನ್ ಬೌಡ್ಡ್ ಮಾಡಿದ್ದಾರೆ.

    ದುಬೈನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಚೆನ್ನೈ ತಂಡ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‍ನತ್ತ ಕಣ್ಣಿಟ್ಟಿದೆ. ಈ ನಡುವೆ ತಂಡದ ಆಟಗಾರರು ಕೂಡ ದುಬೈನ ಆನ್ ದಿ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಚೆನ್ನೈ ತಂಡ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಧೋನಿ, ಜಡೇಜಾಗೆ ಬೌಲಿಂಗ್ ಮಾಡಲು ಮುಂದಾಗಿದ್ದಾರೆ. ಜಡೇಜಾ ಉತ್ತಮ ಬ್ಯಾಟಿಂಗ್ ಪರಾಕ್ರಮ ಮೆರೆದು ಬೌಂಡರಿ, ಸಿಕ್ಸ್ ಸಿಡಿಸಿ ಧೋನಿಗೆ ಸವಾಲೆಸೆದರೆ, ಕಡೆಯಲ್ಲಿ ಧೋನಿ ಗೂಗ್ಲಿಗೆ, ಜಡ್ಡು ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದನ್ನೂ ಓದಿ: ಇಂದು ಆರ್​ಸಿಬಿ, ಮುಂಬೈ ಕದನ – ಗೆಲುವಿಗಾಗಿ ವಿರಾಟ್, ರೋಹಿತ್ ಬಿಗ್ ಫೈಟ್

    ಧೋನಿ ಹಾಗೂ ಜಡೇಜಾ ನಡುವಿನ ಕಾದಾಟದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾಕಿಕೊಂಡಿದೆ. ವೀಡಿಯೋದಲ್ಲಿ ಮೊದಲು ಜಡೇಜಾ, ಧೋನಿಯ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ, ಸಿಕ್ಸ್ ಸಿಡಿಸಿದರು. ಆದರೂ ಕೂಡ ಧೋನಿ ಬೌಲಿಂಗ್ ಮುಂದುವರೆಸಿ ಜಡೇಜಾರನ್ನು ಬೌಲ್ಡ್ ಮಾಡುವ ಮೂಲಕ ವಿಕೆಟ್ ಕಿತ್ತು ಸಂಭ್ರಮ ಪಟ್ಟರು. ಇದನ್ನೂ ಓದಿ: ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್‍ಗೆ ರೋಚಕ ಗೆಲುವು

  • ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

    ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

    ದುಬೈ: ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸಿದೆ. ಶಾರ್ಜಾ ಮೈದಾನದಲ್ಲಿ ನಡೆದ ಆರ್​ಸಿಬಿ ಮತ್ತು ಸಿಎಸ್‍ಕೆ ನಡುವಿನ ಪಂದ್ಯದಲ್ಲಿ ಎರಡು ತಂಡದ ಅಭಿಮಾನಿಗಳು ಪರಸ್ಪರ ಕಾಲೆಳೆದುಕೊಂಡರೆ. ಸಿಎಸ್‍ಕೆ ನಾಯಕ ಧೋನಿ ಮತ್ತು ಆರ್​ಸಿಬಿ ಕ್ಯಾಪ್ಟನ್ ಕೊಹ್ಲಿ ಪರಸ್ಪರ ಪ್ರೀತಿಯಿಂದ ತುಂಟಾಟವಾಡಿ ಎಲ್ಲರ ಮನಗೆದ್ದಿದ್ದಾರೆ.

    ಐಪಿಎಲ್‍ನ ಸೌತ್ ಇಂಡಿಯನ್ ಡರ್ಬಿಎಂದೇ ಹೆಸರುವಾಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವೆಂದರೆ ಬಹಳ ರೋಚಕ ಅದರಲ್ಲೂ ಎರಡು ತಂಡಗಳ ಅಭಿಮಾನಿಗಳಂತೂ ಪರಸ್ಪರ ಕಾಲೆಳೆಯುವ ಮೂಲಕ ಪಂದ್ಯಕ್ಕೆ ಇನ್ನಷ್ಟು ಕೂತುಹಲ ಮೂಡಿಸುತ್ತಾರೆ. ಅದೇ ರೀತಿ ಬಹುನಿರೀಕ್ಷಿತ ಈ ತಂಡಗಳು 35ನೇ ಪಂದ್ಯದಲ್ಲಿ ಪರಸ್ಪರ ಎದುರುಬದುರಾದವು. ಈ ಪಂದ್ಯ ಆರಂಭಕ್ಕೂ ಮೊದಲು ಟಾಸ್‍ಗಾಗಿ ಮೈದಾನಕ್ಕೆ ಬಂದ ಧೋನಿ ಮತ್ತು ವಿರಾಟ್ ಕೊಹ್ಲಿ ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು, ತುಂಟಾಟವಾಡಿ ಅಭಿಮಾನಿಗಳಿಗೆ ಖುಷಿ ನೀಡಿದರು. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾಗೆ ಧೋನಿ ಮೆಂಟರ್

    ಧೋನಿ ಮತ್ತು ವಿರಾಟ್ ನಡುವೆ ಉತ್ತಮವಾದ ಬಾಂಧವ್ಯವಿದ್ದು, ಜೊತೆಯಾಗಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಕೊಹ್ಲಿ, ಧೋನಿ ಒಳ್ಳೆಯ ಸ್ನೇಹವನ್ನು ಬೆಳೆಸಿದ್ದರು. ಬಳಿಕ ವಿರಾಟ್‍ಗೆ ನಾಯಕತ್ವದ ಗುರುವಾಗಿ ಧೋನಿ ಕಾಣಿಸಿಕೊಂಡಿದ್ದರು. ವಿರಾಟ್ ಕೂಡ ಹಲವು ಬಾರಿ ಧೋನಿ ನನ್ನ ಪಾಲಿನ ನಾಯಕ ಎಂದು ಹೇಳಿಕೊಂಡಿದ್ದಾರೆ. ಇದೀಗ ಧೋನಿ ಭಾರತ ತಂಡದಲ್ಲಿ ಇಲ್ಲದಿದ್ದರು ಕೂಡ ವಿರಾಟ್, ಧೋನಿ ಸ್ನೇಹ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್‍ನಲ್ಲಿ ಇವರಿಬ್ಬರು ಜೊತೆಯಾಗಿದ್ದ ಫೋಟೋಗಳು ವೈರಲ್ ಆಗುತ್ತಿದೆ.

    https://twitter.com/Proud_VJFan/status/1441442370189361157

    ಟಿ20ವಿಶ್ವಕಪ್‍ಗಾಗಿ ಈಗಾಗಲೇ ವಿರಾಟ್ ಸಾರಥ್ಯದ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಜೊತೆಗೆ ಧೋನಿಯನ್ನು ತಂಡದ ಮೆಂಟರ್ ಆಗಿ ನೇಮಿಸಿದೆ. ಹಾಗಾಗಿ ಐಪಿಎಲ್ ಬಳಿಕ ಧೋನಿ ಮತ್ತು ವಿರಾಟ್‍ರನ್ನು ಭಾರತ ತಂಡದಲ್ಲಿ ಒಟ್ಟಿಗೆ ನೋಡುವ ಅವಕಾಶ ಒದಗಿ ಬರಲಿದೆ. ಇದೀಗ ಐಪಿಎಲ್‍ನಲ್ಲಿ ಈ ಇಬ್ಬರು ಸ್ನೇಹಿತರು ಜೊತೆಯಾಗಿದ್ದನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್‍ಗಳನ್ನು ಹಾಕುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ

     

     

  • ಆರ್​ಸಿಬಿ-ಚೆನ್ನೈ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುತ್ತಿರುವ ಕಿಚ್ಚ

    ಆರ್​ಸಿಬಿ-ಚೆನ್ನೈ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುತ್ತಿರುವ ಕಿಚ್ಚ

    ಶಾರ್ಜಾ: ಐಪಿಎಲ್ ಪಂದ್ಯಗಳನ್ನು ನೋಡುತ್ತ ಎಂಜಾಯ್ ಮಾಡುತ್ತಿರುವ ಕಿಚ್ಚ ಸುದೀಪ್, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿಯನ್ನು ವೀಕ್ಷಿಸುತ್ತಿದ್ದು, ಯುಎಇನ ಶಾರ್ಜಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಹಿಳೆಯೊಬ್ಬರ ಜೊತೆ ತೆಗೆಸಿಕೊಂಡಿರುವ ಫೋಟೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇದನ್ನು ಕಂಡ ಅಭಿಮಾನಿಗಳು ಕಮೆಂಟ್, ಲೈಕ್ ಮಾಡುವ ಮೂಲಕ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ

    ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಯುಎಇಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸುದೀಪ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಆಗಮಿಸಿದ ಕುರಿತು ಫೋಟೋ, ವೀಡಿಯೋಗಳು ವೈರಲ್ ಆಗುತ್ತಿವೆ.

    ಇತ್ತೀಚೆಗೆ ಆರ್​ಸಿಬಿ ಹಾಗೂ ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಆರ್​ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೀನಾಯ ಸೋಲು ಕಂಡು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ತಂಡಗಳ ಆಟವನ್ನು ಸಹ ಕಿಚ್ಚ ವೀಕ್ಷಿಸಿದ್ದರು. ಈ ಕುರಿತು ರಾಜಸ್ಥಾನ್ ರಾಯಲ್ಸ್ ತಂಡದ ಅಧೀಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ, ಹಲೋ ಕಿಚ್ಚ ವಿಯ್ ಸಿ ಯು ಎಂದು ಬರೆಯಲಾಗಿತ್ತು. ಇದಕ್ಕೆ ಸುದೀಪ್ ಸಹ ಪ್ರತಿಕ್ರಿಯಿಸಿ, ಎಂತಹ ಕಾಕತಾಳೀಯ, ನಾನೂ ಸಹ ನಿಮ್ಮನ್ನು ಇಡೀ ಸಮಯ ನೋಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದರು. ಹೀಗೆ ಬಹುತೇಕ ಐಪಿಎಲ್ ಪಂದ್ಯಗಳನ್ನು ಕಿಚ್ಚ ವೀಕ್ಷಿಸಿದ್ದಾರೆ.

  • ಗಾಯಕ್ವಾಡ್ ಘರ್ಜನೆ – ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ರನ್‍ಗಳ ಜಯ

    ಗಾಯಕ್ವಾಡ್ ಘರ್ಜನೆ – ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ರನ್‍ಗಳ ಜಯ

    ದುಬೈ: ಬ್ಯಾಟಿಂಗ್‍ನಲ್ಲಿ ಋತುರಾಜ್ ಗಾಯಕ್ವಾಡ್ ಅವರ ಏಕಾಂಗಿ ಹೋರಾಟ ಮತ್ತು ಚೆನ್ನೈ ಬೌಲರ್‌ಗಳ ಶಿಸ್ತಿನ ದಾಳಿಗೆ ತಲೆಬಾಗಿದ ಮುಂಬೈ ಇಂಡಿಯನ್ಸ್ 20 ರನ್‍ಗಳಿಂದ ಸಿಎಸ್‌ಕೆ ವಿರುದ್ಧ ಸೋಲೊಪ್ಪಿಕೊಂಡಿದೆ.

    ಗೆಲ್ಲಲು 156ರನ್‍ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮ್ಯಾನ್‌ಗಳು ಚೆನ್ನೈ ತಂಡದ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ವಿಕೆಟ್ ಕಳೆದುಕೊಳ್ಳುತ್ತ ಸಾಗಿದರು. ಮುಂಬೈ ಪರ ಸೌರಭ್ ತಿವಾರಿ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದರೂ ಗೆಲುವು ತಂದುಕೊಡುವಲ್ಲಿ ವಿಫಲರಾದರು. ತಿವಾರಿ 50 ರನ್ (40 ಎಸೆತ, 5 ಬೌಂಡರಿ) ಸಿಡಿಸಿ ಅಜೇಯರಾಗಿ ಉಳಿದರು. ಅವರನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಗೆಲುವಿಗೆ ಶ್ರಮಿಸಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ ಮುಂಬೈ ತಂಡ 8 ವಿಕೆಟ್ ಕಳೆದುಕೊಂಡು 136 ರನ್ ಗಳಿಸಲಷ್ಟೇ ಶಕ್ತವಾಗಿ 20 ರನ್‍ಗಳಿಂದ ಸೋಲು ಕಂಡಿತು.

    ಚೆನ್ನೈ ಪರ ಡ್ವೇನ್ ಬ್ರಾವೋ 3 ವಿಕೆಟ್, ದೀಪಕ್ ಚಹರ್ 2 ವಿಕೆಟ್ ಮತ್ತು ಜೋಸ್ ಹ್ಯಾಸಲ್‍ವುಡ್ ಮತ್ತು ಠಾಕೂರ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಆರ್​ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‍ ಬೈ!

    ಋತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟ: ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್‍ಕೆ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಆದರೆ ಒಂದು ಕಡೆಯಲ್ಲಿ ತನ್ನ ಬ್ಯಾಟಿಂಗ್ ವೈಭವ ಮುಂದುವರೆಸಿದ ಗಾಯಕ್ವಾಡ್ 88ರನ್( 58 ಎಸೆತ, 9 ಬೌಂಡರಿ, 4 ಸಿಕ್ಸರ್) ಸಿಡಿಸಿ ಕಡೆಯವರೆಗೂ ಹೋರಾಡಿ ತಂಡ ದ ಮೊತ್ತ 150ರ ಗಡಿದಾಟಿಸಿದರು. ಸಿಎಸ್‍ಕೆ ಸರದಿಯಲ್ಲಿ 3 ಜನ ಆಟಗಾರರು ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. ಚೆನ್ನೈ ತಂಡ ನಿಗದಿತ ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು.

  • ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ

    ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ

    ದುಬೈ: ಕೋವಿಡ್ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ನಾಳೆಯಿಂದ ದುಬೈನಲ್ಲಿ ಪುನಾರಂಭವಾಗಲಿದ್ದು, 8 ತಂಡಗಳು ಸಹ ಅಭ್ಯಾಸದಲ್ಲಿ ನಿರತವಾಗಿದೆ.

    ಕೊರೋನಾ ಕಾರಣದಿಂದ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಈಗ ಮತ್ತೆ ಐಪಿಎಲ್ ಆರಂಭವಾಗುತ್ತಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕಾತರತೆಯನ್ನು ಹೆಚ್ಚಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಬಲಿಷ್ಟ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ. ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು

    ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 8 ಪಂದ್ಯಗಳನ್ನಾಡಿ 6 ಜಯ ಹಾಗೂ 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 7 ಪಂದ್ಯಗಳಲ್ಲಿ 5 ಜಯ ಹಾಗೂ 2 ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮೂರನೇ ಸ್ಥಾನ ಅಲಂಕರಿಸಿದೆ. ಇದನ್ನೂ ಓದಿ:ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್

    ಚುಟುಕು ಕ್ರಿಕೆಟ್‍ನ ಹೊಡಿಬಡಿ ಆಟದಲ್ಲಿ ಈ ಬಾರಿಯ ಐಪಿಎಲ್ ಕೀರಿಟ ಯಾವ ತಂಡದ ಪಾಲಾಗಲಿದೆ ಕಾದುನೋಡಬೇಕಿದೆ.

     

  • ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್

    ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್

    ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಹಾಕಿ, ಲಸಿಕೆಯನ್ನು ಪಡೆಯಿರಿ ಎಂದು ಕ್ಯಾಂಪೇನ್ ಮಾಡಿದ್ದಾರೆ.

    ಐಪಿಎಲ್‍ನ ದ್ವಿತೀಯ ಚರಣದ ಪಂದ್ಯಗಳಿಗಾಗಿ ಈಗಾಗಲೇ ದುಬೈನಲ್ಲಿರುವ ಧೋನಿ, ಖಾಸಗಿ ಆಸ್ಪತ್ರೆಯೊಂದಿಗೆ ಸೇರಿ ಸಾರ್ವಜನಿಕರಿಗೆ ಕೊರೊನಾ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ವಿಶೇಷವಾಗಿ ‘ವಾಕ್ಸಿನ್ ಪೋಡು, ಮಾಸ್ಕ್ ಪೋಡು’ ಎಂಬ ಘೋಷವಾಕ್ಯದೊಂದಿಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು

    ನಮ್ಮ ಆರೋಗ್ಯದ ಸುರಕ್ಷತೆ ನಮ್ಮ ಕೈಯಲ್ಲಿದ್ದು, ಪ್ರತಿಯೊಬ್ಬರು ಲಸಿಕೆ ಪಡೆದು ಮಾಸ್ಕ್ ಧರಿಸಿ ಓಡಾಡಿ ಎಂದು ಧೋನಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಧೋನಿ ಸಿಎಸ್‍ಕೆ ತಂಡದೊಂದಿಗೆ ದುಬೈನಲ್ಲಿದ್ದು, ಐಪಿಎಲ್ ಪಂದ್ಯಾವಳಿಗಾಗಿ ಬಯೋ ಬಬಲ್‍ನಲ್ಲಿದ್ದಾರೆ. ಇದನ್ನೂ ಓದಿ:ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ

    ಐಪಿಎಲ್ ಸೆಪ್ಟೆಂಬರ್ 19 ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಪರಸ್ಪರ ಎದುರುಬದುರಾಗಲಿದೆ. ಇದನ್ನೂ ಓದಿ:ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುತ್ತೇನೆಂದ ವಿರಾಟ್ ಕೊಹ್ಲಿ

  • ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್

    ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್

    ದುಬೈ: ಐಪಿಎಲ್‍ಗಾಗಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿದಿರುವ ಧೋನಿ ದುಬೈ ಕ್ರೀಡಾಂಗಣದಲ್ಲಿ ಸಿಕ್ಸ್ ಗಳ ಮಳೆ ಸುರಿಸಿದ್ದಾರೆ. ಬಳಿಕ ಸಿಕ್ಸ್ ಹೊಡೆದ ಬಾಲ್‍ಗಳು ಕಾಣೆಯಾದಾಗ ತಾವೇ ಹುಡುಕಿ ತಂದು ಗಲ್ಲಿ ಕ್ರಿಕೆಟ್ ನೆನಪಿಸಿದ್ದಾರೆ.

    ಐಪಿಎಲ್ ಆರಂಭಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಈ ನಡುವೆ ಎಲ್ಲ ತಂಡಗಳು ಕೂಡ ದುಬೈನತ್ತ ಪ್ರಯಾಣ ಬೆಳೆಸಿವೆ. ಅದರಂತೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ದುಬೈನಲ್ಲಿ ಬೀಡುಬಿಟ್ಟಿದ್ದು, ಭರ್ಜರಿ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ವೇಳೆ ಧೋನಿ ಸಿಕ್ಸ್ ಮೇಲೆ ಸಿಕ್ಸ್ ಹೊಡೆದು ಮೈದಾನದಿಂದ ಹೊರ ಹೋದ ಬಾಲ್‍ಗಳು ಕಾಣೆಯಾಗುವಂತೆ ಮಾಡಿದ್ದಾರೆ. ಬಳಿಕ ಸ್ವತಃ ತಾವೇ ಪೊದೆಗಳಲ್ಲಿ ಸಿಲುಕೊಂಡಿದ್ದ ಬಾಲ್‍ಗಳನ್ನು ಹೆಕ್ಕಿತಂದಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬರು ಕೂಡ ತಮ್ಮ ಗಲ್ಲಿಕ್ರಿಕೆಟ್ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಸೆಣಸಾಟ

    ಧೋನಿ ಸಿಕ್ಸ್ ಸಿಡಿಸಿ ಬಾಲ್‍ಗಳನ್ನು ಪೊದೆಗಳಲ್ಲಿ ಬ್ಯಾಟ್‍ನಿಂದ ಹುಡುಕುತ್ತಿರುವ ವೀಡಿಯೋವನ್ನು ಸಿಎಸ್‍ಕೆ ಫ್ರಾಂಚೈಸ್ ಪೋಸ್ಟ್ ಮಾಡಿ ಧೋನಿಯ ಸಿಕ್ಸರ್‍ಗಳಿಗೆ ಮತ್ತು ಧೋನಿಯ ಪ್ರೀತಿಗೆ ಗಡಿರೇಖೆಗಳಿಲ್ಲ ಎಂದು ಅಡಿಬರಹ ನೀಡಿದ್ದಾರೆ. ಇದನ್ನು ನೋಡಿದ ಮಾಹಿ ಅಭಿಮಾನಿಗಳು ಖುಷಿಯಾಗಿದ್ದಾರೆ.

    ದುಬೈನಲ್ಲಿ ನಡೆಯುವ ಐಪಿಎಲ್‍ನ ಸೆಕೆಂಡ್ ಇನ್ನಿಂಗ್ಸ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು