Tag: CSK

  • ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?

    ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?

    ಚೆನ್ನೈ: ಐಪಿಎಲ್‍ನಲ್ಲಿ ಯಶಸ್ವಿ ತಂಡವಾಗಿ 4 ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ತಲಾ ಮಹೇಂದ್ರ ಸಿಂಗ್ ಧೋನಿಯನ್ನು ರೀಟೈನ್ ಮಾಡಿಕೊಳ್ಳಲು ಚೆನ್ನೈ ಫ್ರಾಂಚೈಸಿ ಮುಂದಾಗಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

    ಚೆನ್ನೈ ತಂಡದೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿರುವ ಧೋನಿ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಚೆನ್ನೈ ತಂಡದ ಪರ ಧೋನಿ ಆಡುತ್ತಿರುವುದರಿಂದಾಗಿ ಧೋನಿ ಬಗ್ಗೆ ಅಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಗೌರವವಿದೆ. ಧೋನಿ ಕೂಡ ತಮ್ಮ ಫ್ರಾಂಚೈಸಿ ಬಗ್ಗೆ ತುಂಬಾ ಅಭಿಮಾನ ಹೊಂದಿದ್ದಾರೆ. ಇದೀಗ 15ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದ್ದು ಈ ಹರಾಜಿನಲ್ಲಿ ಧೋನಿಯನ್ನು ಮತ್ತೆ ತಂಡದಲ್ಲಿ ಉಳಿಸಿಕೊಳ್ಳಲು ಚೆನ್ನೈ ತಂಡ ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ. ಆದರೆ ಧೋನಿ ಜೊತೆ ಚೆನ್ನೈ ತಂಡದ ಪರ ಆಡುತ್ತಿರುವ ಆತ್ಮೀಯ ಸ್ನೇಹಿತ ಸುರೇಶ್ ರೈನಾರನ್ನು ಕೈ ಬಿಡಲು ಫ್ರಾಂಚೈಸಿ ನಿರ್ಧರಿಸಿದೆ. ಇದನ್ನೂ ಓದಿ: ಗೆಳತಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ ಶ್ರೇಯಸ್ ಗೋಪಾಲ್

    ಧೋನಿ ಈ ಹಿಂದೆ ಮೆಗಾ ಹರಾಜಿನಲ್ಲಿ ನನ್ನ ಪರ ಹಣ ಹಾಕಬೇಡಿ ಎಂದು ಚೆನ್ನೈ ಫ್ರಾಂಚೈಸಿಯೊಂದಿಗೆ ಕೇಳಿಕೊಂಡಿದ್ದರು. ಆದರೆ ಫ್ರಾಂಚೈಸಿ ಮಾತ್ರ ಧೋನಿಯನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಮುಂದಿನ ಐಪಿಎಲ್‍ನ ನಿಯಮದ ಪ್ರಕಾರ ಈಗಿರುವ ತಂಡಗಳಲ್ಲಿ 4 ಜನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಚೆನ್ನೈ ತಂಡ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಗ್ವಾಡ್, ಮೊಯಿನ್ ಅಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ಲಾನ್ ಮಾಡಿದೆ.

    ಈ ನಡುವೆ ಧೋನಿ ಚಿಪಾಕ್‍ನಲ್ಲಿ ಚೆನ್ನೈ ತಂಡದ ಪರ ಕೊನೆಯ ಪಂದ್ಯವನ್ನಾಡಿ ಐಪಿಎಲ್‍ಗೆ ನಿವೃತ್ತಿ ಘೋಷಿಸಬೇಕೆಂಬ ಮನದಾಸೆಯಲ್ಲಿದ್ದಾರೆ. ಈ ಮನದಾಸೆಯ ಪೂರೈಕೆ ವೇಳೆ ಆತ್ಮೀಯ ಸ್ನೇಹಿತ ರೈನಾ ಕೂಡ ಜೊತೆಗಿದ್ದರೆ ಅದು ಇನ್ನಷ್ಟು ಸಂತೋಷವಾಗಿರುತ್ತದೆ ಹಾಗಾಗಿ ರೈನಾ ಕೂಡ ತಂಡದಲ್ಲಿರಲಿ ಎಂಬುದು ಅಭಿಮಾನಿಗಳ ಮನದಾಸೆಯಾಗಿದೆ. ಇದನ್ನೂ ಓದಿ: ಗಿಲ್, ಅಯ್ಯರ್, ಜಡೇಜಾ ಅರ್ಧಶತಕ – ಮೊದಲ ದಿನದ ಗೌರವ ಪಡೆದ ಟೀಂ ಇಂಡಿಯಾ

  • 14ನೇ ಆವೃತ್ತಿಯ ಐಪಿಎಲ್‍ನ ಕುತೂಹಲಕಾರಿ ಸಂಗತಿಗಳಿವು

    14ನೇ ಆವೃತ್ತಿಯ ಐಪಿಎಲ್‍ನ ಕುತೂಹಲಕಾರಿ ಸಂಗತಿಗಳಿವು

    ದುಬೈ: 14ನೇ ಆವೃತ್ತಿಯ ಐಪಿಎಲ್ ಅರಬ್‍ರ ನಾಡಲ್ಲಿ ಯಶಸ್ವಿಯಾಗಿ ಮುಗಿದಿದೆ. ಚೆನ್ನೈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ನಡುವೆ ಈ ಬಾರಿಯ ಐಪಿಎಲ್‍ನಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳು ನಡೆದಿದೆ. ಆ ಸಂಗತಿಗಳು ಯಾವುವು ಎಂಬ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಲೇ ಬೇಕು.

    ಐಪಿಎಲ್ ಎಂಬ ಮಿಲಿಯನ್ ಡಾಲರ್ ಟೂರ್ನಿ ಕ್ರಿಕೆಟ್ ಪ್ರಿಯರಿಗೆ ಒಂದು ಹಬ್ಬ ಇಲ್ಲಿ ಒಂದೇ ರಾತ್ರಿಯಲ್ಲಿ ಸಾಕಷ್ಟು ಆಟಗಾರರು ಸ್ಟಾರ್ ಆಗಿ ಗುರುತಿಸಿಕೊಂಡ ನಿದರ್ಶನಗಳಿವೆ. ಜೊತೆಗೆ ಮೈದಾನದ ಒಳಗೆ ಮತ್ತು ಹೊರಗೆ ಹಲವು ರೋಮಾಂಚನಕಾರಿ ಕ್ಷಣಗಳು ಐಪಿಎಲ್ ವೇಳೆ ಕಾಣಸಿಗುತ್ತದೆ. ಈ ಬಾರಿಯ ಐಪಿಎಲ್‍ನಲ್ಲೂ ಕೂಡ ಇಂತಹ ರೋಮಾಂಚಕ, ಕುತೂಹಲಕಾರಿ ಘಟನೆಗಳು ನಡೆದಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ

    14ನೇ ಆವೃತ್ತಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧದಲ್ಲಿ ಸ್ಥಗಿತಗೊಂಡು ಆರಂಭಗೊಂಡಿದ್ದು, ಮೊದಲ ಕುತೂಹಲಕಾರಿ ವಿಷಯವಾಗಿದೆ. ಭಾರತದಲ್ಲಿ ಕೊರೊನಾ ಕಾರಣದಿಂದಾಗಿ ರದ್ದುಗೊಂಡ ಐಪಿಎಲ್ ಬಳಿಕ ದುಬೈನಲ್ಲಿ ಸೆಕೆಂಡ್ ಇನ್ನಿಂಗ್ಸ್ ನಡೆಯಿತು.ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ

    ಈ ಬಾರಿಯ ಐಪಿಎಲ್‍ನ ಇನ್ನೊಂದು ಕೂತುಹಲಕಾರಿ ಅಂಶವೆಂದರೆ ಅನ್‍ಕ್ಯಾಪ್ಡ್ ಆಟಗಾರರಾದ ಚೆನ್ನೈ ತಂಡದ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್‍ನಲ್ಲಿ ಅತೀ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದರೆ, ಆರ್​ಸಿಬಿ ಆಟಗಾರ ಹರ್ಷಲ್ ಪಟೇಲ್ ಅತೀ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ

    14ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ. ಚೆನ್ನೈ ತಂಡವನ್ನು ಮುನ್ನಡೆಸಿದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಂದಲೂ ನಿವೃತ್ತರಾಗಿ ಐಪಿಎಲ್ ಟ್ರೋಫಿಗೆದ್ದ ಮೊದಲ ನಾಯಕ ಎಂಬ ದಾಖಲೆಯ ಅಂಶ ಕೂಡ ಈ ಬಾರಿಯ ಐಪಿಎಲ್‍ನ ವಿಶೇಷವಾಗಿದೆ.

  • ದಾಖಲೆಯೊಂದಿಗೆ ಐಪಿಎಲ್ ಫೈನಲ್ ಪ್ರವೇಶ – ಚೆನ್ನೈ ತಂಡದ ಹಿನ್ನೋಟ

    ದಾಖಲೆಯೊಂದಿಗೆ ಐಪಿಎಲ್ ಫೈನಲ್ ಪ್ರವೇಶ – ಚೆನ್ನೈ ತಂಡದ ಹಿನ್ನೋಟ

    ದುಬೈ: ಅರಬ್‍ರ ನಾಡಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್ ಕೊನೆಯ ಹಂತಕ್ಕೆ ತಲುಪಿದ್ದು, ಮೊದಲ ಕ್ವಾಲಿಫೈಯರ್‍ ನಲ್ಲಿ ಗೆದ್ದಿರುವ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿ ದಾಖಲೆ ಬರೆದಿದೆ.

    ಐಪಿಎಲ್‍ನಲ್ಲಿ ಯಶಸ್ವಿ ತಂಡಗಳ ಪೈಕಿ ಧೋನಿಯ ಚೆನ್ನೈ ತಂಡ ಕೂಡ ಒಂದು. ಐಪಿಎಲ್ ಆರಂಭದಿಂದ ಚೆನ್ನೈ ತಂಡದ ಪರ ಆಡುತ್ತಿರುವ ಧೋನಿ ತಂಡದ ಪ್ರಮುಖ ಶಕ್ತಿ. 2008ರಲ್ಲಿ ಪ್ರಾರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇದೀಗ 14 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ತಂಡಗಳ ಪೈಕಿ ಅತೀ ಹೆಚ್ಚು 9 ಬಾರಿ ಚೆನ್ನೈ ತಂಡ ಫೈನಲ್‍ಗೆ ಲಗ್ಗೆ ಇಟ್ಟು 3 ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದನ್ನೂ ಓದಿ: ಐಪಿಎಲ್ ಫೈನಲ್‍ಗೆ ಚೆನ್ನೈ – ಸಿಕ್ಸರ್, ಬೌಂಡರಿ ಸಿಡಿಸಿ ದಡ ಸೇರಿಸಿದ ಧೋನಿ

    ಚೆನ್ನೈ ತಂಡ 2008ರ ಮೊದಲ ಆವೃತ್ತಿಯಿಂದ ಹಿಡಿದು, 2010, 2011, 2012, 2013, 2015, 2018, 2019, 2021 ಸೇರಿ ಒಟ್ಟು 9 ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಇದನ್ನು ಹೊರತು ಪಡಿಸಿ ಮುಂಬೈ ಇಂಡಿಯನ್ಸ್ ತಂಡ 6 ಬಾರಿ ಪ್ರಶಸ್ತಿ ಸುತ್ತಿಗೆ ಏರಿ ಸಾಧನೆ ಮಾಡಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದರೆ ಸಿಗುವ ನಗದು ಬಹುಮಾನವೆಷ್ಟು ಗೊತ್ತಾ?

    14 ಆವೃತ್ತಿಗಳ ಪೈಕಿ 12 ಆವೃತ್ತಿಗಳಲ್ಲಿ ಚೆನ್ನೈ ತಂಡ ಭಾಗವಹಿಸಿದರೆ, 2016 ಮತ್ತು 2017ನೇ ವರ್ಷದಲ್ಲಿ ಬ್ಯಾನ್ ಆಗಿತ್ತು. ನಂತರ ಮತ್ತೆ ಕಂಬ್ಯಾಕ್ ಮಾಡಿದ ಚೆನ್ನೈ 2018 ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ಇದೀಗ ಮತ್ತೆ ಫೈನಲ್ ಪ್ರವೇಶಿಸಿದ್ದು, 4ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

  • ಐಪಿಎಲ್ ಫೈನಲ್‍ಗೆ ಚೆನ್ನೈ – ಸಿಕ್ಸರ್, ಬೌಂಡರಿ ಸಿಡಿಸಿ ದಡ ಸೇರಿಸಿದ ಧೋನಿ

    ಐಪಿಎಲ್ ಫೈನಲ್‍ಗೆ ಚೆನ್ನೈ – ಸಿಕ್ಸರ್, ಬೌಂಡರಿ ಸಿಡಿಸಿ ದಡ ಸೇರಿಸಿದ ಧೋನಿ

    ದುಬೈ: ಡೆಲ್ಲಿ ವಿರುದ್ಧ 4 ವಿಕೆಟ್‍ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲ್ ಪ್ರವೇಶಿಸಿದೆ. ಈ ಮೂಲಕ 9 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದಂತಾಗಿದೆ.

    ಡೆಲ್ಲಿ ತಂಡ ನೀಡಿದ 173 ರನ್‍ಗಳ ಗುರಿ ಪಡೆದ ಚೆನ್ನೈ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಬ್ಯಾಟಿಂಗ್ ನೆರವಿನಿಂದ 19.4 ಓವರ್‍ಗಳಲ್ಲಿ 173 ರನ್ ಸಿಡಿಸಿ ರೋಚಕ ಜಯ ದಾಖಲಿಸಿದೆ. ಈ ಮೂಲಕ ಕಳೆದ ಬಾರಿ ಲೀಗ್ ಹಂತದಲ್ಲೇ ಹೊರ ಬಿದ್ದಿದ್ದ ಚೆನ್ನೈ ಈ ಬಾರಿ ಫೈನಲ್ ಪ್ರವೇಶಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

    ಉತ್ತಪ್ಪ, ಗಾಯಕ್ವಾಡ್ ಬೊಂಬಾಟ್ ಬ್ಯಾಟಿಂಗ್:
    173ರನ್‍ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಆರಂಭದಲ್ಲಿ ಫಾಫ್ ಡು ಪ್ಲೆಸಿಸ್ 1ರನ್ ಸಿಡಿಸಿ ಔಟ್ ಆದರು ಬಳಿಕ ಒಂದಾದ ಉತ್ತಪ್ಪ ಮತ್ತು ಗಾಯಕ್ವಾಡ್ 2ನೇ ವಿಕೆಟ್‍ಗೆ 110 ರನ್ (77 ಎಸೆತ) ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಉತ್ತಪ್ಪ 63 ರನ್ (44 ಎಸೆತ, 7 ಬೌಂಡರಿ, 2 ಸಿಕ್ಸ್) ಬಾರಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶ್ರೇಯಸ್ ಅಯ್ಯರ್ ಹಿಡಿದ ಉತ್ತಮವಾದ ಕ್ಯಾಚ್‍ಗೆ ಬಳಿಯಾದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದರೆ ಸಿಗುವ ನಗದು ಬಹುಮಾನವೆಷ್ಟು ಗೊತ್ತಾ?

    ಕೊನೆಯಲ್ಲಿ ಧೋನಿ ಔಟಾಗದೇ 18 ರನ್(6 ಎಸೆತ, 3 ಬೌಂಡರಿ, 1 ಸಿಕ್ಸರ್), ಮೊಯಿನ್ ಆಲಿ 16 ರನ್(12 ಎಸೆತ, 2 ಬೌಂಡರಿ) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಈ ಮೊದಲು ಕ್ವಾಲಿಫೈಯರ್ ಪಂದ್ಯದ ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ದು ಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡ ಚೆನ್ನೈ ಲೆಕ್ಕಾಚಾರದಂತೆ ಆರಂಭದಲ್ಲಿ ಶಿಖರ್ ಧವನ್ 7 ರನ್ (7 ಎಸೆತ, 1 ಬೌಂಡರಿ) ಸಿಡಿಸಿ ಜೋಶ್ ಹೇಜಲ್‍ವುಡ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ಶ್ರೇಯಸ್ ಅಯ್ಯರ್ ಬಂದಷ್ಟೇ ವೇಗವಾಗಿ 1ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಆರಂಭದಲ್ಲಿ ಚೆನ್ನೈ ಮೇಲುಗೈ ಪಡೆದುಕೊಂಡಿತು. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

    ನಂತರ ಬಂದ ಅಕ್ಷರ್ ಪಟೇಲ್ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ 10 ರನ್ (11 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಆ ಬಳಿಕ ಬಂದ ರಿಷಬ್ ಪಂತ್, ಒಂದು ಕಡೆಯಲ್ಲಿ ಆರಂಭಿಕನಾಗಿ ಬಂದು ಅಬ್ಬರಿಸುತ್ತಿದ್ದ ಪೃಥ್ವಿ ಶಾ ಜೊತೆಗೂಡಿ ಇನ್ನಷ್ಟು ರನ್ ಹೆಚ್ಚಿಸಲು ಆರಂಭಿಸುತ್ತಿದ್ದಂತೆ, ಪೃಥ್ವಿ ಶಾ 60 ರನ್ (34 ಎಸೆತ 7 ಬೌಂಡರಿ, 3 ಸಿಕ್ಸ್) ಚಚ್ಚಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಶಿಮ್ರಾನ್ ಹೆಟ್ಮಾಯೆರ್ ಜೊತೆಗೂಡಿದ ಪಂತ್ ಅಬ್ಬರಿಸಲು ಆರಂಭಿಸಿದರು. ಈ ಜೊಡಿ 5ನೇ ವಿಕೆಟ್‍ಗೆ 83 ರನ್ (50 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿತು. ಹೆಟ್ಮಾಯೆರ್ 37 ರನ್ (24 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಕೊನೆಯವರೆಗೆ ಬ್ಯಾಟ್‍ಬೀಸಿದ ಪಂತ್ 51 ರನ್ ( 35 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು ಜೊತೆಗೆ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್‍ ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಮಾಡಿತು.

    ಚೆನ್ನೈ ಪರ ಜೋಶ್ ಹೇಜಲ್‍ವುಡ್ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ಮೊಯಿನ್ ಆಲಿ ಮತ್ತು ಬ್ರಾವೋ ತಲಾ ಒಂದುವಿಕೆಟ್ ಪಡೆದರು.

  • ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

    ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

    ದುಬೈ: ಕೆಲದಿನಗಳ ಹಿಂದೆ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡುತ್ತೇನೆ ಎಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

    ದುಬೈನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್‍ನ ಪಂಜಾಬ್ ವಿರುದ್ಧದ ಟಾಸ್ ವೇಳೆ ಮಾತನಾಡಿದ ಧೋನಿ, ನೀವು ನನ್ನನ್ನು ಹಳದಿ ಜೆರ್ಸಿತೊಟ್ಟು ಇನ್ಮುಂದೆ ಚೆನ್ನೈ ಪರ ನೋಡುತ್ತಿರೋ ಇಲ್ಲವೋ ಗೊತ್ತಿಲ್ಲ. ಮುಂದಿನ ಐಪಿಎಲ್ ಆವೃತ್ತಿಗೆ 2 ಹೊಸ ತಂಡಗಳು ಸೇರ್ಪಡೆಗೊಳ್ಳುವುದರಿಂದಾಗಿ ಹಲವು ಬದಲಾವಣೆಗಳು ಸಂಭವಿಸಲಿದ್ದು, ಫ್ರಾಂಚೈಸಿಗಳು ಎಷ್ಟು ವಿದೇಶಿ ಆಟಗಾರರು ಮತ್ತು ಎಷ್ಟು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಮುಂದಿನ ಐಪಿಎಲ್‍ನಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ

    ಧೋನಿಯ ಈ ರೀತಿಯ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 2022ರ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುವ 2 ಹೊಸ ತಂಡಗಳ ಪೈಕಿ ಒಂದು ತಂಡ ಧೋನಿಯನ್ನು ಈಗಾಗಲೇ ಆಹ್ವಾನಿಸಿದೆ ಎಂದು ವರದಿಯಾಗಿದ್ದು, ಈ ಮೂಲಕ 2022ರ ಆವೃತ್ತಿಯ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ, ಧೋನಿ ಚೆನ್ನೈ ತಂಡವನ್ನು ತೊರೆಯುವ ಬಗ್ಗೆ ಮತ್ತು ಹೊಸ ತಂಡಗಳ ಸೇರ್ಪಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಅಭಿಮನ್ಯು ಮಿಥುನ್

    ಈ ನಡುವೆ ಧೋನಿ ಧೋನಿಯ ಐಪಿಎಲ್‍ನಲ್ಲಿ ಬ್ಯಾಟಿಂಗ್ ಪ್ರದರ್ಶನ ನೋಡಿದರೆ ಧೋನಿ ಹಿಂದಿನ ಚಾರ್ಮ್ ಕಳೆದುಕೊಂಡಂತೆ ಕಾಣಿಸುತ್ತಿದ್ದು, ಐಪಿಎಲ್‍ಗೆ ನಿವೃತ್ತಿ ಘೋಷಿಸದೆ ಸಿಎಸ್‍ಕೆ ತಂಡದಿಂದ ಹೊರ ನಡೆದರೆ, ಧೋನಿಯನ್ನು ಖರೀದಿಸಲು ಯಾವ ತಂಡ ಮುಂದೆ ಬರಬಹುದು ಎಂಬ ಅಂಶ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಈ ನಡುವೆ ಧೋನಿ ನಡೆ ಅನುಮಾನಗಳೆಡೆಗೆ ಎಂಬಂತಾಗಿದೆ. ಇದನ್ನೂ ಓದಿ: ಗೆಳತಿಗೆ ಸ್ಟೇಡಿಯಂನಲ್ಲೇ ಪ್ರಪೋಸ್‌ ಮಾಡಿದ ದೀಪಕ್‌ ಚಹರ್‌

  • ಗೆಳತಿಗೆ ಸ್ಟೇಡಿಯಂನಲ್ಲೇ ಪ್ರಪೋಸ್‌ ಮಾಡಿದ ದೀಪಕ್‌ ಚಹರ್‌

    ಗೆಳತಿಗೆ ಸ್ಟೇಡಿಯಂನಲ್ಲೇ ಪ್ರಪೋಸ್‌ ಮಾಡಿದ ದೀಪಕ್‌ ಚಹರ್‌

    ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹರ್ ಗುರುವಾರ ಗೆಳತಿ ಜಯಾ ಭಾರದ್ವಾಜ್‌ ಅವರಿಗೆ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿದ್ದಾರೆ.

    ಪಂಜಾಬ್‌ ಕಿಂಗ್ಸ್‌ ಪಂದ್ಯದ ಬಳಿಕ ಚಹರ್‌ ಎಲ್ಲರೆದುರೇ ಪ್ರಪೋಸ್‌ ಮಾಡಿದ್ದಾರೆ. ದೀಪಕ್‌ ಪ್ರಪೋಸ್‌ ಮಾಡಲು ಮುಂದಾಗುತ್ತಿದ್ದಂತೆ ಜಯಾ ಒಮ್ಮೆ ಶಾಕ್‌ ಆಗಿದ್ದಾರೆ.

     

    View this post on Instagram

     

    A post shared by Deepak Chahar (@deepak_chahar9)


    ನಟ ಮತ್ತು ಬಿಗ್‌ಬಾಸ್‌ 13ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿಯಾಗಿರುವ ದೆಹಲಿಯ ಜಯಾ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

    ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ದೀಪಕ್ ಚಹರ್‌ ಗೆಳತಿ ಜಯಾ ಅವರನ್ನು ಟೀಂ ಇಂಡಿಯಾದ ಆಟಗಾರರಿಗೆ ಪರಿಚಯಿಸಿದ್ದಾರೆ ಎಂದು ವರದಿಯಾಗಿದೆ.

    ಬಾಲಿವುಡ್ ಮಾಡೆಲ್ ಮತ್ತು ನಟಿ ಮಾಲ್ತಿ ಚಹರ್‌ ಅವರ ತಮ್ಮನಾಗಿರುವ ದೀಪಕ್‌ ಚಹರ್‌ ಅವರು ಕ್ರಿಕೆಟಿಗ ರಾಹುಲ್‌ ಚಹರ್‌ ಅವರ ಅಣ್ಣನಾಗಿದ್ದಾರೆ. ಐಪಿಎಲ್‌ ಎರಡನೇ ಆವೃತ್ತಿ ಸಮಯದಲ್ಲಿ ದೀಪಕ್‌ ಜೊತೆ ಜಯಾ ಸಹ ಯುಎಇಗೆ ತೆರಳಿದ್ದರು. ದೀಪಕ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್‌ ಮಾಡಿ ʼSpecial momentʼ ಎಂದು ಬರೆದು ಹೃದಯದ ಎಮೋಜಿ ಹಾಕಿದ್ದಾರೆ.

  • ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ದುಬೈ: ನಾಯಕ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 135 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ 13 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 139 ರನ್‌ ಹೊಡೆಯುವ ಮೂಲಕ ಗುರಿಯನ್ನು ತಲುಪಿತು. ಇನ್ನಿಂಗ್ಸ್‌ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ರಾಹುಲ್‌ ಔಟಾಗದೇ 98 ರನ್‌(42 ಎಸೆತ, 7 ಬೌಂಡರಿ, 8 ಸಿಕ್ಸರ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಈ ಪಂದ್ಯಕ್ಕೂ ಮೊದಲು ಪಂಜಾಬ್‌ ರನ್‌ ರೆಟ್‌ -0.241ಇತ್ತು. ಈಗ ಇದು -0.001 ಏರಿಕೆಯಾಗಿದೆ. ಪಂಜಾಬ್‌ ಪರ ರಾಹುಲ್‌ ಬಿಟ್ಟರೆ ಮಯಾಂಕ್‌ ಅಗರವಾಲ್‌ 12 ರನ್‌, ಏಡನ್ ಮಾರ್ಕ್ರಮ್ 13 ರನ್‌ ಗಳಿಸಿ ಔಟಾದರು.

    ಇಂದಿನ ಪಂದ್ಯವನ್ನು ಪಂಜಾಬ್‌ ಗೆದ್ದರೂ ಪ್ಲೇ ಆಫ್‌ಗೆ ಹೋಗುವ ಆಸೆ ಬಹಳ ಕ್ಷೀಣವಾಗಿದೆ. ಯಾಕೆಂದರೆ ರಾಜಸ್ಥಾನ ವಿರುದ್ಧ ಕೋಲ್ಕತ್ತಾ ಭಾರೀ ಅಂತರದಿಂದ ಸೋಲಬೇಕು. ಅಷ್ಟೇ ಅಲ್ಲದೇ ನಾಳೆ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ಗೆಲ್ಲಬೇಕು. ಸದ್ಯದ ಮಟ್ಟಿಗೆ ಈ ಫಲಿತಾಂಶ ಬರುವುದು ಬಹಳ ಕಷ್ಟ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಚೆನ್ನೈ ಪಂಜಾಬ್‌ ಬೌಲರ್‌ಗಳ ಬಿಗಿಯಾದ ದಾಳಿಗೆ 6 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು. ಫಾಫ್‌ ಡುಪ್ಲೆಸಿಸ್‌ 76 ರನ್‌(55 ಎಸೆತ, 8 ಬೌಂಡರಿ, 2 ಸಿಕ್ಸರ್‌) ಹೊಡೆದು ಪ್ರತಿರೋಧ ತೋರಿದ್ದು ಬಿಟ್ಟರೆ ಬೇರೆ ಆಟಗಾರರಿಂದ ಹೋರಾಟ ಕಂಡು ಬರಲಿಲ್ಲ.

    ರವೀಂದ್ರ ಜಡೇಜಾ ಔಟಾಗದೇ 15 ರನ್‌, ಧೊನಿ ಮತ್ತು ಋತುರಾಜ್‌ ಗಾಯಕ್‌ವಾಡ್‌ 12 ರನ್‌ ಹೊಡೆದು ಔಟಾದರು. ಚೆನ್ನೈ ಪರ ಕ್ರಿಸ್‌ ಜೋರ್ಡನ್‌, ಅರ್ಶದೀಪ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರೆ ಮೊಹಮ್ಮದ್‌ ಶಮಿ, ರವಿ ಬಿಶ್ನೋಯಿ ತಲಾ 1 ವಿಕೆಟ್‌ ಪಡೆದರು.

  • ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ

    ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ

    ದುಬೈ: ಭಾರತ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ತಮ್ಮ ಕೊನೆಯ ಪಂದ್ಯವನ್ನು ತಮ್ಮ ಅತ್ಯಂತ ಪ್ರೀತಿ ಪಾತ್ರವಾದ ಅಭಿಮಾನಿಗಳೊಂದಿಗೆ ಆಡಬೇಕೆಂಬ ಹೆಬ್ಬಯಕೆಯನ್ನು ತೋಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಬಳಿಕ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗೆ ತೆರೆ ಬಿದ್ದಿದೆ.

    ಐಸಿಸಿಯ ಎಲ್ಲಾ ಮಾದರಿಯ ಟ್ರೋಫಿ ಜೊತೆಗೆ ಐಪಿಎಲ್ ಕಿರೀಟವನ್ನು ಗೆದ್ದಿರುವ ಧೋನಿ 2020ರ ಆಗಸ್ಟ್ 15 ರಂದು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು. ಆ ಬಳಿಕ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಧೋನಿಗೆ ಈ ಬಾರಿ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕೊನೆಯ ಐಪಿಎಲ್ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ವತಃ ಧೋನಿ ಮಾತನಾಡಿದ್ದು, ತಮ್ಮ ಆ ಒಂದು ಆಸೆಯಿಂದಾಗಿ ಈ ಬಾರಿ ಐಪಿಎಲ್‍ಗೆ ವಿದಾಯ ಘೋಷಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಧೋನಿ ಟೀಂ ಇಂಡಿಯಾ ಬಳಿಕ ಅತೀ ಹೆಚ್ಚು ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಐಪಿಎಲ್ 2008ರಲ್ಲಿ ಆರಂಭವಾದ ಬಳಿಕ ಚೆನ್ನೈ ಪರ ಆಡುತ್ತಿರುವ ಧೋನಿ ವಿಶೇಷವಾದ ಸಂಬಂಧವನ್ನು ಚೆನ್ನೈ ತಂಡ ಮತ್ತು ತಮಿಳುನಾಡಿನ ಜನರೊಂದಿಗೆ ಹೊಂದಿದ್ದಾರೆ. ಹಾಗಾಗಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈ ನಗರದ ಎಂ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಅಚ್ಚು-ಮೆಚ್ಚಿನ ಪ್ರೇಕ್ಷಕರ ಮುಂದೆ ಆಡಿ ನಿವೃತ್ತಿ ಘೋಷಿಸುವ ಆಸೆಯನ್ನು ಧೋನಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್

    14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆಡುತ್ತಿರುವ ಧೋನಿ ಇಂಡಿಯಾ ಸಿಮೆಂಟ್ಸ್ ಅವರ ವರ್ಚುವಲ್ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಇದು ಕೊನೆಯ ಐಪಿಎಲ್ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಅಲ್ಲ. ನಾನು ಚಿದಂಬರಂ ಕ್ರೀಡಾಗಂಣದಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡಲು ಬಯಸುತ್ತಿದ್ದೇನೆ ಎಂದಿದ್ದಾರೆ. ಇದರಿಂದಾಗಿ ಧೋನಿ ಮುಂದಿನ ಆವೃತ್ತಿ ಐಪಿಎಲ್‍ನಲ್ಲಿಯೂ ಕಾಣಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇದನ್ನೂ ಓದಿ: ಬಾಲಿವುಡ್ ನನ್ನ ಕಪ್ ಆಫ್ ಟೀ ಅಲ್ಲ: ಧೋನಿ

    ಕಳೆದ ಬಾರಿ ಐಪಿಎಲ್‍ನಲ್ಲಿ ನಿರಾಸ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದ್ದ ಚೆನ್ನೈ ತಂಡ ಮತ್ತೆ ಪುಟಿದೇಳಲಿದೆ ಎಂದು ಕಳೆದ ಬಾರಿ ಧೋನಿ ಹೇಳಿದ್ದರು. ಅದರಂತೆ ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ಇದೀಗ ಪ್ಲೇ ಆಫ್ ತಲುಪಿದೆ. ಈ ನಡುವೆ ಧೋನಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು ಕೂಡ ನಿವೃತ್ತಿ ಬಗ್ಗೆ ಅನುಮಾನಗಳು ಇದೆ. ಯಾಕೆಂದರೆ ಧೋನಿ ತಮ್ಮ ದಿಢೀರ್ ನಿರ್ಧಾರಗಳಿಂದ ಶಾಕ್ ಕೊಡುವವರು. ಹಾಗಾಗಿ ಧೋನಿ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

  • ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಚೆನ್ನೈ – ಡೆಲ್ಲಿಗೆ 3 ವಿಕೆಟ್ ರೋಚಕ ಜಯ

    ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಚೆನ್ನೈ – ಡೆಲ್ಲಿಗೆ 3 ವಿಕೆಟ್ ರೋಚಕ ಜಯ

    ದುಬೈ: ಕ್ಯಾಚ್‌ ಕೈಚೆಲ್ಲಿದ ಸಿಎಸ್‌ಕೆ ಮ್ಯಾಚ್‌ ಸೋತಿದೆ. ಪಂದ್ಯದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಡೆಲ್ಲಿ ತಂಡದ ಶಿಮ್ರಾನ್ ಹೆಟ್ಮಾಯೆರ್ ಹೊಡೆದ ಹೊಡೆತವನ್ನು ಕ್ಯಾಚ್ ಹಿಡಿಯಲು ವಿಫಲವಾದ ಚೆನ್ನೈ ತಂಡದ ಗೌತಮ್ ಅದನ್ನು ಬೌಂಡರಿಗೆ ಬಿಟ್ಟುಕೊಟ್ಟರು. ಇದರ ಲಾಭ ಪಡೆದ ಡೆಲ್ಲಿ ತಂಡ ಅಂತಿಮವಾಗಿ ಚೆನ್ನೈ ವಿರುದ್ಧ 3 ವಿಕೆಟ್‍ಗಳಿಂದ ಗೆದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    137 ರನ್‍ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ತಂಡ ಕೂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪೃಥ್ವಿ ಶಾ 18 ರನ್ (12 ಎಸೆತ, 3 ಬೌಂಡರಿ) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಶ್ರೇಯಸ್ ಅಯ್ಯರ್ ಕೇವಲ 2 ರನ್‍ಗಳಿಗೆ ಸುಸ್ತಾದರೆ, ರಿಷಬ್ ಪಂತ್ 15 ರನ್ (12 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಶಿಖರ್ ಧವನ್ ಗೆಲುವಿಗಾಗಿ ಹೋರಾಟ ನಡೆಸಿದರು ಕೂಡ 39 ರನ್ (35 ಎಸೆತ, 3 ಬೌಂಡರಿ, 2ಸಿಕ್ಸ್) ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮಾಯೆರ್  ಅಜೇಯ 28 ರನ್ (18 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡಕ್ಕೆ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಚೆನ್ನೈ ಪರ ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರೆ, ಜೋಶ್ ಹೇಜಲ್‍ವುಡ್, ದೀಪಕ್ ಚಹರ್, ಬ್ರಾವೋ ತಲಾ 1 ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಚೆನ್ನೈ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ 13 ರನ್ (13 ಎಸೆತ, 2 ಬೌಂಡರಿ) ಮತ್ತು ಫಾಫ್ ಡು ಪ್ಲೆಸಿಸ್ 10 ರನ್ (8 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗುವ ಮೂಲಕ ಉತ್ತಮ ಆರಂಭವನ್ನು ನೀಡಲು ವಿಫಲವಾದರು. ಬಳಿಕ ಬಂದ ಕನ್ನಡಿಗ ರಾಬಿನ್ ಉತ್ತಪ್ಪ 19 ರನ್ (19 ಎಸೆತ, 1 ಬೌಂಡರಿ) ಬಾರಿಸಿ ಅಶ್ವಿನ್ ಸ್ಪೀನ್ ಮೋಡಿಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಹೈದಾರಾಬಾದ್‍ಗೆ ಬೇಡವಾದ ಡೇವಿಡ್ ವಾರ್ನರ್

    ರಾಯುಡು ಅರ್ಧಶತಕ: ಚೆನ್ನೈ ತಂಡ 59 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಅಂಬಾಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ 5ನೇ ವಿಕೆಟ್‍ಗೆ 70 ರನ್ (64 ಎಸೆತ)ಗಳ ಜೊತೆಯಾಟವಾಡಿತು. ಧೋನಿ 18 ರನ್ (27 ಎಸೆತ) ಅವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರೆ, ರಾಯುಡು ತಂಡಕ್ಕೆ ಆಸರೆಯಾಗುವ ಜೊತೆಗೆ 55 ರನ್ (43 ಎಸೆತ, 5 ಬೌಂಡರಿ, 2 ಸಿಕ್ಸ್) ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ನಿಗದಿತ ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 136ರನ್ ಗಳಿಸಿತು.

    ಡೆಲ್ಲಿ ಪರ ಅಕ್ಷರ್ ಪಟೇಲ್ 2 ವಿಕೆಟ್ ಪಡೆದರೆ, ಅವೇಶ್ ಖಾನ್, ಅನ್‌ರಿಚ್ ನಾಟ್ರ್ಜೆ, ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಹಂಚಿಕೊಂಡರು.

  • ಧೋನಿಯ ಹಸ್ತಾಕ್ಷರದ ಬ್ಯಾಟ್, ಜೆರ್ಸಿ ಪಡೆದ ಯಶಸ್ವಿ ಜೈಸ್ವಾಲ್

    ಧೋನಿಯ ಹಸ್ತಾಕ್ಷರದ ಬ್ಯಾಟ್, ಜೆರ್ಸಿ ಪಡೆದ ಯಶಸ್ವಿ ಜೈಸ್ವಾಲ್

    ದುಬೈ: ರಾಜಸ್ಥಾನ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರಿಂದ ಬ್ಯಾಟ್ ಹಾಗೂ ಜೆರ್ಸಿಗೆ ಸಹಿ ಪಡೆದುಕೊಂಡು ಸಂಭ್ರಮಪಟ್ಟಿದ್ದಾರೆ.

    14ನೇ ಆವೃತ್ತಿಯ ಐಪಿಎಲ್‍ನ 47ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಜಸ್ಥಾನ ತಂಡದ ಯುವ ಆರಂಭಿಕ ಆಟಗಾರ 50ರನ್(21 ಎಸೆತ, 6 ಬೌಂಡರಿ, 3 ಸಿಕ್ಸ್) ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಸಿಎಸ್‍ಕೆ ವಿರುದ್ಧ ರಾಜಸ್ಥಾನ ತಂಡ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ಐಪಿಎಲ್‍ನಲ್ಲಿ ಮಿಂಚುತ್ತಿರುವ ಅನ್ ಕ್ಯಾಪ್ಡ್ ಪ್ಲೇಯರ್ಸ್

    ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್ ಕೂಲ್ ಕ್ಯಾಪ್ಟನ್ ಧೋನಿ ಬಳಿ ಹೋಗಿ ತಮ್ಮ ಒಂದು ಜೆರ್ಸಿ ಮತ್ತು ತಾನು ಅರ್ಧಶತಕ ಸಿಡಿಸಿದ ಬ್ಯಾಟ್‍ಗೆ ಸಹಿ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?