Tag: CSK

  • ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮರಳಿ ಪಡೆದ ಬಳಿಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಬಾರಿ ಐಪಿಎಲ್‍ನಲ್ಲಿ ನೂತನ ಜವಾಬ್ದಾರಿಯ ಮೂಲಕ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.

    ನಿನ್ನೆ ಪುಣೆಯಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮೊದಲು ವೀಕ್ಷಕ ವಿವರಣೆಗಾರ ಡ್ಯಾನಿ ಮಾರಿಸನ್, ಧೋನಿ ನೀವು ಮುಂದಿನ ಬಾರಿ ಐಪಿಎಲ್‍ನಲ್ಲಿ ಹಳದಿ ಜೆರ್ಸಿಯಲ್ಲಿ ಕಾಣಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಧೋನಿ ಖಂಡಿತ ನಾನು ಮುಂದಿನ ಬಾರಿಯೂ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಎಂದರು. ಇದನ್ನೂ ಓದಿ: ಧೋನಿಯಿಂದ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್ 

    ಮಾತು ಮುಂದುವರಿಸಿದ ಧೋನಿ ಮುಂದಿನ ಬಾರಿಯ ಐಪಿಎಲ್‍ನಲ್ಲಿ ಖಂಡಿತವಾಗಿಯೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಲಿದ್ದೀರಿ. ಆದರೆ ಈ ಹಳದಿ ಜೆರ್ಸಿಯಲ್ಲೋ ಅಥವಾ ಬೇರೆ ಹಳದಿ ಜೆರ್ಸಿಯಲ್ಲೋ ಗೊತ್ತಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿದರು. ಇದನ್ನೂ ಓದಿ: ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

    ಈ ಮೂಲಕ ಧೋನಿ ಮುಂದಿನ ಐಪಿಎಲ್ ವೇಳೆ ಸಿಎಸ್‍ಕೆ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುವ ಸುಳಿವನ್ನು ನೀಡಿದ್ದಾರೆ. ಆದರೆ ಧೋನಿ ಎಂದರೇ ಅಚ್ಚರಿ ನಿರ್ಧಾರಗಳಿಗೆ ಹೆಸರುವಾಸಿಯಾದವರು. ಹಾಗಾಗಿ ಧೋನಿ ಮುಂದಿನ ಬಾರಿಯ ಐಪಿಎಲ್‍ನಲ್ಲಿ ಆಟಗಾರನಾಗಿಯೂ ಆಡಬಹುದು ಅಥವಾ ಸಹಾಯಕ ಕೋಚ್ ಆಗಿಯೂ ತಂಡದಲ್ಲಿ ಕಾಣಿಸಿಕೊಳ್ಳಬಹುದು ಧೋನಿ ನಿರ್ಧಾರದ ಮೇಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!

    15ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ತಮ್ಮ ಬದಲು ಮೊದಲನೇ ಆಯ್ಕೆಯಾಗಿ ರವೀಂದ್ರ ಜಡೇಜಾರನ್ನು ರಿಟೈನ್‌ ಮಾಡಿಕೊಳ್ಳುವಂತೆ ಧೋನಿ ಚೆನ್ನೈ ತಂಡಕ್ಕೆ ಸಲಹೆ ನೀಡಿದ್ದರು. ಆ ಬಳಿಕ ಟೂರ್ನಿ ಆರಂಭಕ್ಕೂ ಮೊದಲು ನಾಯಕತ್ವ ತ್ಯಜಿಸಿ ಜಡೇಜಾಗೆ ಪಟ್ಟ ಕಟ್ಟಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡು ಚೆನ್ನೈ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಈ ಮೂಲಕ ಧೋನಿ ತಮ್ಮ ಅಚ್ಚರಿಯ ನಿರ್ಧಾರಗಳ ಸರಣಿಯನ್ನು ಮುಂದುವರಿಸಿದ್ದಾರೆ.

  • ಧೋನಿಯಿಂದ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್

    ಧೋನಿಯಿಂದ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್

    ಮುಂಬೈ: ಎಂಎಸ್ ದೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಮತ್ತೆ ಅಲಂಕರಿಸಿದ ಬಳಿಕ ತಂಡದಲ್ಲಿ ಮತ್ತೆ ಹುರುಪು ಎದ್ದು ಕಾಣಿಸುತ್ತಿದೆ. ಐಪಿಎಲ್‌ನ 15ನೇ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಸಿಎಸ್‌ಕೆ ತಂಡ 6 ಪಂದ್ಯಗಳಲ್ಲಿ ಸೋಲನ್ನನುಭವಿಸಿತ್ತು. ಬಳಿಕ ಸಿಎಸ್‌ಕೆ ತಂಡದ ಕ್ಯಾಪ್ಟನ್ಸಿಯನ್ನು ತೊರೆದ ರವೀಂದ್ರ ಜಡೇಜಾ ಸ್ಥಾನಕ್ಕೆ ಮತ್ತೆ ಧೋನಿ ಮರಳಿದ್ದಾರೆ.

    ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪಂದ್ಯದಲ್ಲಿ ಧೋನಿ ತಂಡ 13 ರನ್‌ಗಳ ಜಯ ಸಾಧಿಸಿತು. ಸಿಎಸ್‌ಕೆ ಗೆಲುವಿನ ಸಂಭ್ರಮದಲ್ಲಿರುವಾಗಲೇ ದಕ್ಷಿಣ ಆಫ್ರಿಕಾದ ಆಟಗಾರ ಡೇಲ್ ಸ್ಟೇನ್ ಧೋನಿಯ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

    ಡೇಲ್ ಸ್ಟೇನ್ ತಮ್ಮ ಜೆರ್ಸಿಯಲ್ಲಿ ಧೋನಿಯ ಹಸ್ತಾಕ್ಷರ ಪಡೆದಿರುವ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇಬ್ಬರು ಕ್ರಿಕೆಟ್ ದಿಗ್ಗಜರು ತಮ್ಮ ಅಭಿಮಾನವನ್ನು ಹಂಚಿಕೊಂಡಿರುವ ಹೃದಯಸ್ಪರ್ಶಿ ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಶತಕ ವಂಚಿತ ಗಾಯಕ್ವಾಡ್‌ – ಧೋನಿ ಟೀಂ ಗೆ 13 ರನ್‌ಗಳ ಜಯ

    ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್‌ಕೆ ತಂಡ ಹೈದರಾಬಾದ್ ವಿರುದ್ಧ 13 ರನ್‌ಗಳ ಜಯ ಸಾಧಿಸಿತು. ಚೆನ್ನೈ ನೀಡಿದ 203 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಹೈದರಾಬಾದ್ ತಂಡ 189 ರನ್ ಪೇರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

     

  • ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!

    ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!

    ಮುಂಬೈ: ಐಪಿಎಲ್ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕತ್ವ ತೊರೆದು ಆಲ್‍ರೌಂಡರ್ ರವೀಂದ್ರ ಜಡೇಜಾಗೆ ನಾಯಕತ್ವ ವಹಿಸಿದ್ದರು. ಆದರೆ ಟೂರ್ನಿಯ ಮಧ್ಯದಲ್ಲೇ ಜಡೇಜಾ ನಾಯಕತ್ವ ತ್ಯಜಿಸಿ ಮತ್ತೆ ಧೋನಿ ನಾಯಕತ್ವ ನಿರ್ವಹಿಸುವಂತೆ ಕೇಳಿಕೊಂಡಿದ್ದಾರೆ.

    ಇದೀಗ ಜಡೇಜಾ ಬದಲು ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ನಡುವೆ ಜಡೇಜಾ ಯಾಕೆ ನಾಯಕತ್ವ ತ್ಯಜಿಸಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಜಡೇಜಾ ನಾಯಕತ್ವ ತ್ಯಜಿಸಲು ಆ ಒಂದು ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಸಿಎಸ್‌ಕೆ ನಾಯಕತ್ವ ಮರಳಿ ಪಡೆಯುತ್ತಿದ್ದಂತೆ ಧೋನಿ ಅಭಿಮಾನಿಗಳಿಂದ ಮೀಮ್ಸ್ ಸುರಿಮಳೆ

    ಹೌದು 15ನೇ ಆವೃತ್ತಿ ಐಪಿಎಲ್‍ನಲ್ಲಿ ಜಡೇಜಾ ಸಾರಥ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ಪಂದ್ಯಗಳಲ್ಲಿ 2 ಜಯ ಮತ್ತು 6 ಸೋಲು ಕಂಡು ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 9ನೇ ಸ್ಥಾನ ಪಡೆದಿದೆ. ಇದಕ್ಕೆ ಪ್ರಮುಖ ಕಾರಣ ಜಡೇಜಾ ನಾಯತ್ವದ ಜೊತೆಗೆ ತಮ್ಮ ವೈಯಕ್ತಿಕ ಆಟದಲ್ಲೂ ಕಳಪೆ ಪ್ರದರ್ಶನ ನೀಡಿರುವುದು. ಹೌದು ಜಡೇಜಾ 15ನೇ ಆವೃತ್ತಿಯ ಐಪಿಎಲ್‍ನಲ್ಲಿ 8 ಪಂದ್ಯಗಳಿಂದ 112 ರನ್ ಮತ್ತು ಕೇವಲ 5 ವಿಕೆಟ್ ಪಡೆದಿದ್ದಾರೆ. ಈ ಹಿಂದಿನ ಆವೃತ್ತಿಗಳಲ್ಲಿ ಯಾವುದೇ ಹೊರೆ ಇಲ್ಲದೆ ಫ್ರೀ ಯಾಗಿ ಬ್ಯಾಟ್‍ಬೀಸುತ್ತಿದ್ದ ಜಡೇಜಾ ಬ್ಯಾಟಿಂಗ್ ಈ ಬಾರಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತಿದೆ. ಜೊತೆಗೆ ಜಡೇಜಾ ನಾಯಕತ್ವದ ಹೊರೆಯನ್ನು ನಿಭಾಯಿಸಲು ಚಡಪಡಿಸುತ್ತಿದ್ದಾರೆ. ಇದು ಪ್ರತಿ ಪಂದ್ಯದಲ್ಲೂ ಎದ್ದು ಕಾಣುತ್ತಿತ್ತು. ಜೊತೆಗೆ ಧೋನಿ ಸಲಹೆಗಳು ಕೂಡುತ್ತಿದ್ದುದು ಕಂಡುಬರುತ್ತಿತ್ತು.

    ಜಡೇಜಾ ನಾಯಕತ್ವದ ಹೊರೆಯಿಂದಾಗಿ ತಮ್ಮ ವೈಯಕ್ತಿಕ ಆಟದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಜಡೇಜಾ ಮುಂದಿನ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಾಯಕತ್ವ ತ್ಯಜಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ

    ಐಪಿಎಲ್‍ನಲ್ಲಿ ರವಿ ಚಂದ್ರನ್ ಅಶ್ವಿನ್, ರಾಹುಲ್ ತೇವಾಟಿಯಾ, ಶಾರ್ದೂಲ್ ಠಾಕೂರ್ ಸಹಿತ ಕೆಲ ಆಟಗಾರರು ಆಲ್‍ರೌಂಡರ್ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದಾರೆ. ಇದು ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಗಮನಿಸುತ್ತಿದೆ. ಈ ವೇಳೆ ಜಡೇಜಾ ಪ್ರದರ್ಶನ ಕೂಡ ಗಮನ ಹರಿಸುತ್ತಾರೆ ಹಾಗಾಗಿ ಜಡೇಜಾ ತಮ್ಮ ವೈಯಕ್ತಿಕ ಆಟವನ್ನು ಐಪಿಎಲ್‍ನಲ್ಲಿ ಉತ್ತಮ ಪಡಿಸಿಕೊಂಡು ಟಿ20 ವಿಶ್ವಕಪ್ ಟೀಂನಲ್ಲಿ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

    ಏನೇ ಆದರೂ ಜಡೇಜಾ ನಾಯಕತ್ವದ ಹೊರೆಯಿಂದ ಹೊರಬಂದು ತಮ್ಮ ನೈಜ ಆಟವನ್ನು ಆಡುವಂತಾಗಲಿ ಎಂಬುದು ನಮ್ಮ ಆಶಯ. ಇದನ್ನೂ ಓದಿ: ರಾಜಸ್ಥಾನಕ್ಕೆ ಸೋಲಿನ ಶಾಕ್ – ಕಡೆಗೂ ಗೆದ್ದು ಬೀಗಿದ ಮುಂಬೈ

  • ಸಿಎಸ್‌ಕೆ ನಾಯಕತ್ವ ಮರಳಿ ಪಡೆಯುತ್ತಿದ್ದಂತೆ ಧೋನಿ ಅಭಿಮಾನಿಗಳಿಂದ ಮೀಮ್ಸ್ ಸುರಿಮಳೆ

    ಸಿಎಸ್‌ಕೆ ನಾಯಕತ್ವ ಮರಳಿ ಪಡೆಯುತ್ತಿದ್ದಂತೆ ಧೋನಿ ಅಭಿಮಾನಿಗಳಿಂದ ಮೀಮ್ಸ್ ಸುರಿಮಳೆ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. ಆದರೆ 2022ರ ಐಪಿಎಲ್ ಆರಂಭಕ್ಕೂ ಮೊದಲು ಎಂಎಸ್ ಧೋನಿ ಸಿಎಸ್‌ಕೆ ನಾಯಕತ್ವವನ್ನು ತೊರೆದು, ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದ್ದರು.

    ಧೋನಿ ಬಳಿಕ ಸಿಎಸ್‌ಕೆ ನಾಯಕತ್ವವನ್ನು ವಹಿಸಿಕೊಂಡಿದ್ದ ರವೀಂದ್ರ ಜಡೇಜಾ ಶನಿವಾರ ತಮ್ಮ ಸ್ಥಾನವನ್ನು ಧೋನಿಗೆ ಮರಳಿ ನೀಡುತ್ತಿರುವುದರ ಬಗ್ಗೆ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚೆದ್ದಿರುವ ಧೋನಿ ಅಭಿಮಾನಿಗಳು ಮೀಮ್ಸ್ ಸುರಿಮಳೆಯನ್ನೇ ಹರಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ

    ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದ ಸಿಎಸ್‌ಕೆ ತಂಡ, ಈ ಬಾರಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿದೆ. ಈ ಹಿನ್ನೆಲೆಯಲ್ಲಿ ಜಡೇಜಾ ತಮ್ಮ ಆಟದ ಮೇಲೆ ಕೆಂದ್ರೀಕರಿಸುವ ಸಲುವಾಗಿ ಸಿಎಸ್‌ಕೆ ನಾಯಕತ್ವವನ್ನು ಧೋನಿಗೆ ವಾಪಾಸ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಸೋಲಿನ ಶಾಕ್ – ಕಡೆಗೂ ಗೆದ್ದು ಬೀಗಿದ ಮುಂಬೈ

    ಈ ಬಾರಿಯ ಐಪಿಎಲ್ ಮ್ಯಾಚ್‌ನಲ್ಲಿ ಸಿಎಸ್‌ಕೆ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದೆ. 15ನೇ ಆವೃತ್ತಿ ಐಪಿಎಲ್ ಪ್ರಾರಂಭದಲ್ಲಿ ಸತತ 4 ಪಂದ್ಯಗಳನ್ನು ಸೋತ ಬಳಿಕ 5ನೇ ಪಂದ್ಯದಲ್ಲಿ ಸಿಎಸ್‌ಕೆ ಮೊದಲ ಬಾರಿ ಗೆಲುವು ಸಾಧಿಸಿತು. ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಸಿಎಸ್‌ಕೆ ನಂತರ ಮತ್ತೆ ಸೋಲಿನತ್ತ ಮುಖ ಮಾಡಿದೆ. ಇದೀಗ ಜಡೇಜಾ ಬದಲು ಧೋನಿ ನಾಯಕತ್ವ ನಿರ್ವಹಿಸಲು ಮುಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

  • ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ

    ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾ ತೊರೆದಿದ್ದಾರೆ. ಆ ಬಳಿಕ ಇದೀಗ ಮಹೇಂದ್ರ ಸಿಂಗ್ ಧೋನಿಗೆ ಮತ್ತೆ ನಾಯಕತ್ವದ ಪಟ್ಟ ಕಟ್ಟಲಾಗಿದೆ.

    15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ, ಆಲ್‍ರೌಂಡರ್ ಜಡೇಜಾಗೆ ನಾಯಕತ್ವ ವಹಿಸಿದ್ದರು. ಆದರೆ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಬಗ್ಗೆ ಸಿಎಸ್‍ಕೆ ತಮ್ಮ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ತಿಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ನ  ನಾಯಕತ್ವವನ್ನು ರವೀಂದ್ರ ಜಡೆಜಾ ತೊರೆದಿದ್ದು, ಎಂ.ಎಸ್. ಧೋನಿ ಅವರು ನೂತನವಾಗಿ ನಾಯಕರಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    CSK

    ಚೆನ್ನೈ ತಂಡ 15ನೇ ಆವೃತ್ತಿ ಐಪಿಎಲ್‍ನಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿದ್ದು, 2 ಜಯ ಮತ್ತು 6 ಸೋಲು ಕಂಡು 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಈಗಾಗಲೇ ಬಹುತೇಕ ಪ್ಲೆ ಆಫ್ ಅವಕಾಶ ಕಳೆದುಕೊಂಡಿರುವ ಚೆನ್ನೈ ಇನ್ನುಳಿದ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲೆರುವ  ಪ್ರಯತ್ನದಲ್ಲಿದೆ. ಇದನ್ನೂ ಓದಿ: ಗುಜರಾತ್‌ ಟೈಟನ್ಸ್‌ಗೆ ರೋಚಕ ಜಯ – ಬಹುತೇಕ ಪ್ಲೇ ಆಫ್‌ಗೆ ಎಂಟ್ರಿ

  • ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 187 ರನ್‌ಗಳಿಸಿದ ಕಿಂಗ್ಸ್ ಪಂಜಾಬ್ ತಂಡವು ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ ಅವರ ಅಬ್ಬರ ಆಟದಿಂದ 11 ರನ್‌ಗಳ ಗೆಲುವು ದಾಖಲಿಸಿದೆ.

    ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್‌ಗಳ ಮೊತ್ತಗಳಿಸಿತು. 187 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 176 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    Dhavan

    ಚೆನ್ನೈ ಮೊದಲ 6 ಎಸೆತಗಳಲ್ಲಿ 10 ರನ್‌ಗಳನ್ನು ಗಳಿಸಿತು. ನಂತರದಲ್ಲಿ ರಾಬಿನ್ ಉತ್ತಪ್ಪ. ಶಿವಂ ದುಬೆ ಬಹುಬೇಗನೇ ನಿರ್ಗಮಿಸಿದರು. ಆದರೆ 2ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ ಆಗಿ ಕ್ರೀಸ್‌ಗಿಳಿದ ಅಂಬಟಿ ರಾಯುಡು 78ರನ್ (39 ಎಸೆತ, 7 ಬೌಂಡರಿ, 6 ಸಿಕ್ಸರ್) ಗಳನ್ನು ಚಚ್ಚುವ ಮೂಲಕ ಪಂಜಾಬ್ ಬೌಲರ್‌ಗಳ ಬೆವರಳಿಸಿದ್ದರು. ಇದರಿಂದಾಗಿ ಚೆನ್ನೈ ತಂಡಕ್ಕೆ ಗೆಲುವಿನ ಕನಸು ಚಿಗುರಿತ್ತು. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    RAYUDU CSK.png IPl

    ರಾಯುಡು ಆಟಕ್ಕೆ ಬ್ರೇಕ್ ಹಾಕುವಲ್ಲಿ ರಬಾಡಾ ಯಶಸ್ವಿಯಾದರು. 39ನೇ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿ ಹೊರನಡೆದರು. 5ನೇ ಕ್ರಮಾಂಕದಲ್ಲಿ ಬಂದ ಮಹೇಂದ್ರ ಸಿಂಗ್ ಧೋನಿ ಅವರು ಬಿರುಸಿನ ಆಟವನ್ನೇ ಆಡಿದರು. ಕೊನೆಯ 7ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಧೋನಿ ಕೊನೆಯ ಓವರ್‌ನಲ್ಲಿ ತಮ್ಮಲ್ಲೇ ಸ್ಟ್ರೈಕ್‌ ಉಳಿಸಿಕೊಂಡರು. 6 ಎತೆಗಳಿಗೆ 28 ರನ್‌ಗಳಷ್ಟೇ ಬೇಕಿತ್ತು. ಮೊದಲ ಬಾಲ್‌ಗೆ ಸಿಕ್ಸರ್ ಬಾರಿಸಿದರು. ಆದರೆ, 2ನೇ ಎಸೆತ ಬೌನ್ಸ್ ಆದ ಹಿನ್ನೆಲೆ ಮತ್ತೊಂದು ಸಿಕ್ಸ್ ಹೊಡೆಯುವ ಪ್ರಯತ್ನವೂ ಕೈತಪ್ಪಿತು. 3ನೇ ಎಸೆತವೂ ವಿಫಲವಾಯಿತು. ನಾಲ್ಕನೆ ಎಸೆತದಲ್ಲಿ ಸಿಕ್ಸ್ ಎತ್ತುವ ಪ್ರಯತ್ನದಲ್ಲಿದ್ದ ಧೋನಿ ಕ್ಯಾಚ್ ನೀಡಿ ನಿರ್ಗಮಿಸಿದರು. ಚೆನ್ನೈ ಅನಿವಾರ್ಯವಾಗಿ ಸೋಲಿನ ಹೊಣೆ ಹೊರಬೇಕಾಯಿತು. ಋತುರಾಜ್ ಗಾಯಕ್ವಾಡ್ 30(27), ರಾಬಿನ್ ಉತ್ತಪ್ಪ 1 (7), ಮಿಚೆಲ್ ಸ್ಯಾಟ್ನರ್ 9 (15), ಶಿವಂ ದುಬೆ 8 (7) ರನ್‌ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ(2/42) ಹಾಗೂ ಮಹೀಶ್ ತೀಕ್ಷಣ(1/32) ವಿಕೆಟ್ ಪಡೆದರು.

    CSK

    ಟಾಸ್ ಸೋತು ಬ್ಯಾಂಟಿಂಗ್ ಇಳಿದ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ(42) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 187 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು.

    ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಮಯಾಂಕ್ ಅಗರ್ವಾಲ್(18) ಬಹುಬೇಗನೆ ನಿರ್ಗಮಿಸಿದರು. ಆದರೆ 2ನೇ ಜೊತೆಯಾದ ಶಿಖರ್ ಧವನ್ 88 ರನ್(59 ಬಾಲ್, 9 ಬೌಂಡರಿ, 2 ಸಿಕ್ಸ್) ಐಪಿಎಲ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಬನುಕಾ ರಾಜಪಕ್ಸ 42 ರನ್(32 ಬಾಲ್, 2 ಬೌಂಡರಿ, 2 ಸಿಕ್ಸ್) ಬ್ಯಾಟಿಂಗ್ ಪ್ರದರ್ಶಿಸಿದರು. ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 2ನೇ ವಿಕೆಟ್‌ಗೆ 110(71) ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

    panjab

    ರಾಜಪಕ್ಸ ವಿಕೆಟ್ ಪತನದ ನಂತರ ಬಂದ ಲಿಯಮ್ ಲಿವಿಂಗ್‌ಸ್ಟೋನ್ 19 ರನ್ (7 ಬಾಲ್, 1 ಬೌಂಡರಿ, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ ಧವನ್ ಹಾಗೂ ಲಿವಿಂಗ್‌ಸ್ಟೋನ್ 3ನೇ ವಿಕೆಟ್‌ಗೆ 27(11 ಎಸೆತ) ಜೊತೆಯಾಟದ ಕಾಣಿಕೆ ನೀಡಿದರು. ನಂತರ ಬಂದ ಇಂಗ್ಲೆಂಡ್ ಟೀಂನ ಆರಂಭಿಕ ಆಟಗಾರ ಜಾನಿ ಬ್ರೈಸ್ಟೋ 3 ಎಸೆತಗಳಲ್ಲಿ ಕೇವಲ 6 ರನ್‌ಗಳನ್ನು ಗಳಿಸಿ ರನೌಟ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿ ನಡೆದರು. ಬೌಲಿಂಗ್‌ನಲ್ಲಿ ಕಾಗಿಸೋ ರಬಾಡಾ ಹಾಗೂ ರಿಶಿ ಧವನ್ ತಲಾ 2 ವಿಕೆಟ್‌ಗಳನ್ನು ಪಡೆದುಕೊಳ್ಳುವ ಮೂಲಕ ತಂಡದ ಗೆಲುವಿಗೆ ನೆರವಾದರು.

    IPL 2022 PBKS VS CSK

    ರನ್ ಏರಿಕೆಯಾಗಿದ್ದು ಹೇಗೆ?
    74 ಎಸೆತಗಳಲ್ಲಿ 50 ರನ್
    75 ಎಸೆತಗಳಲ್ಲಿ 100 ರನ್
    108 ಎಸೆತಗಳಲ್ಲಿ 150 ರನ್
    120 ಎಸೆತಗಳಲ್ಲಿ 187 ರಬ್

  • ಧೋನಿ ಧಮಾಕ – ಮುಂಬೈಗೆ ಸತತ 7ನೇ ಸೋಲು

    ಧೋನಿ ಧಮಾಕ – ಮುಂಬೈಗೆ ಸತತ 7ನೇ ಸೋಲು

    ಮುಂಬೈ: ಕೊನೆಯ 4 ಎಸೆತಗಳಲ್ಲಿ 16 ರನ್ ಚಚ್ಚಿದ ಧೋನಿ ಚೆನ್ನೈ ತಂಡಕ್ಕೆ ಮುಂಬೈ ವಿರುದ್ಧ 3 ವಿಕೆಟ್‍ಗಳ ರೋಚಕ ಜಯ ತಂದುಕೊಟ್ಟರು.

    ಕೊನೆಯ 6 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 17 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್ ವಿಕೆಟ್ ಕಳೆದುಕೊಂಡಿತು. ನಂತರ ಬ್ರಾವೊ 1 ರನ್ ಕಸಿದರು. ಆ ಬಳಿಕ ಕೊನೆಯ 4 ಎಸೆತಗಳಲ್ಲಿ 16 ರನ್ ಬೇಕಾಗಿತ್ತು. ಧೋನಿ 2ರನ್ ಓಡಿ, 1 ಸಿಕ್ಸ್, 2 ಬೌಂಡರಿ ಸಿಡಿಸಿ ಕೊನೆಯ ಎಸೆತದಲ್ಲಿ ಮ್ಯಾಚ್ ಫಿನಿಶ್ ಮಾಡಿದರು. ಚೆನ್ನೈ ತಂಡ 7 ವಿಕೆಟ್ ಕಳೆದುಕೊಂಡು 156 ರನ್ ಸಿಡಿಸಿ 3 ವಿಕೆಟ್‍ಗಳಿಂದ ಜಯ ಸಾಧಿಸಿತು. ಧೋನಿ ಅಜೇಯ 28 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ಚಚ್ಚಿ ಚೆನ್ನೈಗೆ 2ನೇ ಗೆಲುವಿನ ಉಡುಗೊರೆ ನೀಡಿದರು.

    156 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡ ಆರಂಭಿ ಆಘಾತ ಅನುಭವಿಸಿತು. ಋತುರಾಜ್ ರಾಜ್ ಗಾಯಕ್ವಾಡ್ ಶೂನ್ಯ ಸುತ್ತಿದ್ದರು. ಆದರೆ ಇನ್ನೋರ್ವ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಮಾತ್ರ ಬೌಂಡರಿ, ಸಿಕ್ಸರ್ ಸಿಡಿಸುತ್ತ ಕೆಲ ಕಾಲ ಚೆನ್ನೈಗೆ ನೆರವಾದರು. ಅಲ್ಲದೆ ಅಂಬಾಟಿ ರಾಯುಡು ಜೊತೆ 3ನೇ ವಿಕೆಟ್‍ಗೆ 50 ರನ್ (39 ಎಸೆತ) ಜೊತೆಯಾಟವಾಡಿದರು. ಉತ್ತಪ್ಪ 30 ರನ್ (25 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ರಾಯುಡು 40 ರನ್ (35 ಎಸೆತ, 2 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು.

    ಮುಂಬೈಗೆ ಚಾರ್ಜ್ ಮಾಡಿದ ಚೌಧರಿ:
    ಟಾಸ್ ಗೆದ್ದ ಚೆನ್ನೈ ತಂಡ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಚೆನ್ನೈ ನಾಯಕ ನಿರ್ಧಾರದಂತೆ ಮುಂಬೈ ಬ್ಯಾಟ್ಸ್‍ಮ್ಯಾನ್‍ಗಳಿಗೆ ಆರಂಭದಲ್ಲೇ ಕಡಿವಾಣ ಹಾಕಿದ ಚೆನ್ನೈ ಬೌಲರ್ ಮುಖೇಶ್ ಚೌಧರಿ ಆರಂಭಿಕ ಆಟಗಾರರನ್ನು ಮೊದಲ ಓವರ್‌ನಲ್ಲೇ ಪೆವಿಲಿಯನ್ ಸೇರಿಸಿದರು. ಆ ಬಳಿಕ ಡೆವಾಲ್ಡ್ ಬ್ರೆವಿಸ್ ವಿಕೆಟ್ ಕಿತ್ತ ಚೌಧರಿ ಮುಂಬೈ ತಂಡದ ಅಗ್ರ ಕ್ರಮಾಂಕವನ್ನು ಮುರಿದರು.

    ಆ ಬಳಿಕ ಮುಂಬೈ ತಂಡಕ್ಕೆ ಚೇತರಿಕೆ ನೀಡಿದ ಸೂರ್ಯಕುಮಾರ್ ಯಾದವ್ 32 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತಿಲಕ್ ವರ್ಮಾ ಮಾತ್ರ ಮುಂಬೈಗೆ ಆಸರೆಯಾದರು. ಚೆನ್ನೈ ಬೌಲರ್‌ಗಳ ಬಿಗಿ ದಾಳಿಯನ್ನು ಸಮರ್ಥವಾಗಿ ಎದುರಿಸಿದ ತಿಲಕ್ ವರ್ಮಾ ಅಜೇಯ 51 ರನ್ (43 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಜಯದೇವ್ ಉನದ್ಕತ್ 19 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತ 150ರ ಗಡಿದಾಟಿಸಿದರು.

    ಅಂತಿಮವಾಗಿ ಮುಂಬೈ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 155 ರನ್ ಪೇರಿಸಿತು. ಚೆನ್ನೈ ಪರ ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಚೌಧರಿ 3, ಬ್ರಾವೊ 2, ಸ್ಯಾಂಟ್ನರ್ ಮತ್ತು ಮಹೇಶ್ ತೀಕ್ಷಣ ತಲಾ 1 ವಿಕೆಟ್ ಪಡೆದರು.

  • ಪಾರ್ಟಿ ಮೂಡ್‌ನಲ್ಲಿ ಸಿಎಸ್‌ಕೆ ಅಂಡ್ ಟೀಂ – ಸಾಂಪ್ರದಾಯಿಕ ಉಡುಗೆಯ ಸಂಭ್ರಮ

    ಪಾರ್ಟಿ ಮೂಡ್‌ನಲ್ಲಿ ಸಿಎಸ್‌ಕೆ ಅಂಡ್ ಟೀಂ – ಸಾಂಪ್ರದಾಯಿಕ ಉಡುಗೆಯ ಸಂಭ್ರಮ

    ಮುಂಬೈ: ಐಪಿಎಲ್ ಬ್ಯೂಸಿ ಶೆಡ್ಯೂಲ್ ನಡುವೆಯು ಚೆನ್ನೈ ಸೂಪರ್‌ಕಿಂಗ್ಸ್ (CSK) ತಂಡವು ಫ್ರೀವೆಡ್ಡಿಂಗ್ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ

    CSK TEAM SPIRIT (2)

    ನ್ಯೂಜಿಲೆಂಡ್ ಹಾಗೂ ಚೆನ್ನೈಸೂಪರ್‌ಕಿಂಗ್ಸ್ ತಂಡದ ಕ್ರಿಕೆಟಿಗ ಡಿವೈನ್ ಕಾನ್ವೇ ಹಾಗೂ ಕಿಮ್ ವಾಟ್ಸನ್ ಅವರ ಫ್ರೀವೆಡ್ಡಿಂಗ್ (ವಿವಾಹಪೂರ್ವ) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಿಎಸ್‌ಕೆ ಅಂಡ್ ಟೀಂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಸಂಭ್ರಮಿಸಿದ್ದಾರೆ. ಭಾರತೀಯ ಸಂಪ್ರದಾಯಿಕ ಶೈಲಿಯ ಉಡುಗೆಗಳನ್ನೇ ಧರಿಸಿದ್ದ ಪ್ರಮುಖ ಕ್ರಿಕೆಟಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಮಹೇಂದ್ರಸಿಂಗ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಿವಂ ದುಬೆ, ಮೊಯಿನ್ ಅಲಿ, ಕೋಚ್ ಸ್ಟೀಫನ್ ಫ್ಲೆಮಿಂಗ್, ಋತುರಾಜ್ ಗಾಯಕ್ವಾಡ್ ಸೇರಿದಂತೆ ಹಲವರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

    15ನೇ ಆವೃತ್ತಿಯಲ್ಲಿ 1 ಕೋಟಿ ರೂ.ಗೆ ಖರೀದಿಯಾಗಿ ಚೆನ್ನೈ ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ ಕಾನ್ವೇ ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 3 ರನ್‌ಗಳಿಸಿ ನಿರ್ಗಮಿಸಿದ್ದರು. ಅದಾದ ಬಳಿಕ ಯಾವುದೇ ಮ್ಯಾಚ್‌ನಲ್ಲೂ ಅವರು ಆಟವಾಡಲಿಲ್ಲ. ಇದೀಗ ತಮ್ಮ ವಿವಾಹ ಮುಗಿದಿದ್ದು, ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಸಿಎಸ್‌ಕೆ ತಂಡದಿಂದ ಕಣಕ್ಕಿಳಿಯಲಿದ್ದಾರೆ.

  • 6 ಸಿಕ್ಸ್, 8 ಫೋರ್ ಚಚ್ಚಿ ಮಿಲ್ಲರ್ ಮಿಂಚಿಂಗ್ – ಗುಜರಾತ್‍ಗೆ ರೋಚಕ ಜಯ

    6 ಸಿಕ್ಸ್, 8 ಫೋರ್ ಚಚ್ಚಿ ಮಿಲ್ಲರ್ ಮಿಂಚಿಂಗ್ – ಗುಜರಾತ್‍ಗೆ ರೋಚಕ ಜಯ

    ಪುಣೆ: ರೋಚಕವಾಗಿ ಕೂಡಿದ ಕಾದಾಟದಲ್ಲಿ ಬ್ಯಾಟಿಂಗ್‍ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದ ಡೇವಿಡ್ ಮಿಲ್ಲರ್ ಆಟಕ್ಕೆ ಚೆನ್ನೈ ಶರಣಾಗಿದೆ.

    ಆರಂಭದಿಂದ ಕೊನೆಯ ವರೆಗೆ ಗುಜರಾತ್ ಗೆಲುವಿಗಾಗಿ ಶತಾಯ ಗತಾಯ ಹೋರಾಡಿದ ಡೇವಿಡ್ ಮಿಲ್ಲರ್ ಅಜೇಯ 94 ರನ್ (51 ಎಸೆತ, 8 ಬೌಂಡರಿ, 6 ಸಿಕ್ಸ್) ಬಾರಿಸಿ ಇನ್ನೂ 1 ಎಸೆತ ಬಾಕಿ ಇರುವಂತೆ ಗುಜರಾತ್‍ಗೆ 3 ವಿಕೆಟ್‍ಗಳ ರೋಚಕ ಜಯ ತಂದುಕೊಟ್ಟರು.

    170 ರನ್ ಗುರಿ ಪಡೆದ ಗುಜರಾತ್ ತಂಡ ಕೂಡ ಉತ್ತಮ ಆರಂಭ ಪಡುವಲ್ಲಿ ವಿಫಲವಾಯಿತು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಬೇಗನೆ ವಿಕೆಟ್ ಕೈ ಚೆಲ್ಲಿಕೊಂಡು ಪೆವಿಲಿಯನ್ ಸೇರಿಕೊಂಡರು. ನಂತರ ಡೇವಿಡ್ ಮಿಲ್ಲರ್ ಜೊತೆ ಸೇರಿ ನಾಯಕ ರಶೀದ್ ಖಾನ್ ಭರ್ಜರಿ ಬ್ಯಾಟ್ ಬೀಸಿದರು. ಚೆನ್ನೈ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ ರಶೀದ್ ಖಾನ್ 40 ರನ್ (21 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು.

    ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ತಂಡ ಆರಂಭದಲ್ಲೇ ಪಟಪಟನೇ ಮೊದಲ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಒಂದು ಕಡೆ ಆರಂಭಿಕ ಆಟಗಾರ ಋತುರಾಜ್ ಗಾಯಾಕ್ವಾಡ್ ಅಬ್ಬರಿಸಲು ಆರಂಭಿಸಿದರು. ಈ ಹಿಂದಿನ ಬ್ಯಾಟಿಂಗ್ ವೈಫಲ್ಯವನ್ನು ಮರೆಮಾಚುವಂತೆ ಗಾಯಕ್ವಾಡ್ ಬ್ಯಾಟ್ ಬೀಸಿದರು.

    ಗಾಯಕ್ವಾಡ್‍ಗೆ ಉತ್ತಮ ಸಾಥ್ ನೀಡಿದ ಅಂಬಾಟಿ ರಾಯುಡು 46 ರನ್ (31 ಎಸೆತ, 4 ಬೌಂಡರಿ) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈ ಚೆಲ್ಲಿಕೊಂಡರು. ಈ ಮೊದಲು ಗಾಯಕ್ವಾಡ್ ಜೊತೆಗೆ 3ನೇ ವಿಕೆಟ್‍ಗೆ 92 ರನ್ (56 ಎಸೆತ) ಜೊತೆಯಾಟವಾಡಿದರು. ಇವರ ವಿಕೆಟ್ ಕಳೆದುಕೊಂಡ ಬಳಿಕ ಕೆಲಕಾಲ ಆರ್ಭಟಿಸಿದ ಗಾಯಕ್ವಾಡ್ 73 ರನ್ (48 ಎಸೆತ, 5 ಬೌಂಡರಿ, 5 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ಬೌಂಡರಿ, ಸಿಕ್ಸರ್‌ಗಳ ನೆರವಿನಿಂದ ಶಿವಂ ದುಬೆ 19 ರನ್ (17 ಎಸೆತ, 2 ಬೌಂಡರಿ) ಮತ್ತು ಜಡೇಜಾ ಅಜೇಯ 22 ರನ್ (12 ಎಸೆತ, 2 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿತು.

  • 74 ಎಸೆತಗಳಲ್ಲಿ 165 ರನ್‌ ಚಚ್ಚಿದ ಉತ್ತಪ್ಪ, ದುಬೆ – ಚೆನ್ನೈಗೆ 23 ರನ್‌ಗಳ ಜಯ

    74 ಎಸೆತಗಳಲ್ಲಿ 165 ರನ್‌ ಚಚ್ಚಿದ ಉತ್ತಪ್ಪ, ದುಬೆ – ಚೆನ್ನೈಗೆ 23 ರನ್‌ಗಳ ಜಯ

    ಮುಂಬೈ: ಶಿವಂ ದುಬೆ ಮತ್ತು ರಾಬಿನ್‌ ಉತ್ತಪ್ಪ ಅವರ ಸ್ಫೋಟಕ ಅರ್ಧಶತಕದಿಂದ ಆರ್‌ಸಿಬಿ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 23 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 217 ರನ್‌ಗಳ ಕಠಿಣ ಗುರಿ ಪಡೆದ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 193 ರನ್‌ ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಸೋತಿದ್ದ ಚೆನ್ನೈ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ.

    ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿದ ಆರ್‌ಸಿಬಿ 50 ರನ್‌ಗಳಿಸುವಷ್ಟರಲ್ಲೇ 4 ವಿಕೆಟ್‌ ಕಳೆದುಕೊಂಡಿತ್ತು. ನಂತರ ಮ್ಯಾಕ್ಸ್‌ವೆಲ್‌ 26 ರನ್‌(11 ಎಸೆತ, 2 ಬೌಂಡರಿ, 2 ಸಿಕ್ಸರ್‌) ಶಬಾಜ್‌ ಅಹ್ಮದ್‌ 41 ರನ್‌(27 ಎಸೆತ, 4 ಬೌಂಡರಿ) ಪ್ರಭುದೇಸಾಯಿ 34 ರನ್‌(18 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆದರೆ 34 ರನ್‌(14 ಎಸೆತ, 2 ಬೌಂಡರಿ, 3 ಸಿಕ್ಸರ್‌) ಹೊಡೆದ ವೇಳೆ ಸಿಕ್ಸ್‌ ಸಿಡಿಸಲು ಹೋಗಿ ಬೌಂಡರಿ ಗೆರೆಯ ಬಳಿ ಜಡೇಜಾ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ಇದನ್ನೂ ಓದಿ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

    ಸ್ಫೋಟಕ ಅರ್ಧಶತಕ: 6.4 ಓವರ್‌ ಆಗಿದ್ದಾಗ ಚೆನ್ನೈ 36 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಉತ್ತಪ್ಪ ಮತ್ತು ಶಿವಂ ದುಬೆ ನಿಧನವಾಗಿ ರನ್‌ ಏರಿಸತೊಡಗಿದರು.

    10 ಓವರ್‌ಗೆ 60 ರನ್‌ಗಳಿಸಿದ್ದ ಚೆನ್ನೈ ನಂತರದ 10 ಓವರ್‌ನಲ್ಲಿ ಬರೋಬ್ಬರಿ 156 ರನ್‌ ಗಳಿಸಿತ್ತು. ಉತ್ತಪ್ಪ ಮತ್ತು ದುಬೆ ಮೂರನೇ ವಿಕೆಟ್‌ಗೆ ಕೇವಲ 74 ಎಸೆತಗಳಲ್ಲಿ 165 ರನ್‌ ಚಚ್ಚಿದರು.

    ಮ್ಯಾಕ್ಸ್‌ವೆಲ್‌ ಎಸೆದ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಉತ್ತಪ್ಪ 3 ಸಿಕ್ಸ್‌ ಸಿಡಿಸಿದರು. ಸಿರಾಜ್‌ ಎಸೆದ 18ನೇ ಓವರ್‌ನಲ್ಲಿ 24 ರನ್‌ ಬಂತು.

    ಅಂತಿಮವಾಗಿ ಉತ್ತಪ್ಪ 88 ರನ್‌(50 ಎಸೆತ, 4 ಬೌಂಡರಿ, 9 ಸಿಕ್ಸರ್‌) ಶಿವಂ ದುಬೆ 95 ರನ್‌(46 ಎಸೆತ, 5 ಬೌಂಡರಿ, 8 ಸಿಕ್ಸರ್‌) ಸಿಡಿಸಿ ಔಟಾದರು. 4 ಬೈ, 2 ಲೆಗ್‌ ಬೈ, 1 ನೋಬಾಲ್‌, 6 ವೈಡ್‌ ಹಾಕಿದ ಆರ್‌ಸಿಬಿ ಇತರ ರೂಪದಲ್ಲಿ 13 ರನ್‌ ನೀಡಿತ್ತು. ಆಕಾಶ್‌ ದೀಪ್‌ 4 ಓವರ್‌ ಎಸೆದು 58 ರನ್‌ ನೀಡಿ ದುಬಾರಿಯಾದರು.

    ರನ್‌ ಏರಿದ್ದು ಹೇಗೆ?
    50 ರನ್‌ – 52 ಎಸೆತ
    100 ರನ್‌ -78 ಎಸೆತ
    150 ರನ್‌ – 98 ಎಸೆತ
    200 ರನ್‌ -112 ಎಸೆತ
    216 ರನ್‌ – 120 ಎಸೆತ