Tag: CSK

  • ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಮುಂಬೈ: ರಾಜಸ್ಥಾನ ಗೆಲುವಿಗಾಗಿ ಆರಂಭದಲ್ಲಿ ಜೈಸ್ವಾಲ್ ಹೋರಾಟ ನಡೆಸಿದರೆ, ಕೊನೆಗೆ ಅಶ್ವಿನ್ ಉಪಯುಕ್ತ ಬ್ಯಾಟಿಂಗ್ ಮೂಲಕ ರಾಜಸ್ಥಾನ ತಂಡಕ್ಕೆ ಇನ್ನೂ 2 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟರು. ಈ ಜಯದೊಂದಿಗೆ ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

    ಗೆದ್ದಿದ್ದು ಹೇಗೆ?
    ಗೆಲ್ಲಲು 151 ರನ್ ಗುರಿ ಪಡೆದ ರಾಜಸ್ಥಾನಕ್ಕೆ ಕೊನೆಯ 12 ಎಸೆತಗಳಲ್ಲಿ ಗೆಲುವಿಗೆ 19 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ 12 ರನ್ ಬಂತು ಕೊನೆಯ ಓವರ್‌ನ 6 ಎಸೆತಗಳಲ್ಲಿ ರಾಜಸ್ಥಾನ ಗೆಲುವಿಗೆ 7 ರನ್ ಬೇಕಾಗಿತ್ತು. ಈ 7 ರನ್‍ಗಳನ್ನು ಮೊದಲ 4 ಎಸೆತಗಳಲ್ಲಿ ಬಾರಿಸಿದ ರಾಜಸ್ಥಾನ ಬ್ಯಾಟ್ಸ್‌ಮ್ಯಾನ್‌ಗಳು 5 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಲು ನೆರವಾದರು. ಅಶ್ವಿನ್ ಅಜೇಯ 40 ರನ್ (23 ಎಸೆತ, 2 ಬೌಂಡರಿ, 3 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿಯಾದರು.

    ಇತ್ತ ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿದ ಚೆನ್ನೈ ತಂಡ ಈ ಸೋಲಿನೊಂದಿಗೆ 15ನೇ ಆವೃತ್ತಿ ಐಪಿಎಲ್ ಅಭಿಯಾನ ಕೊನೆಗೊಳಿಸಿದೆ.

    ಜೈಸ್ವಾಲ್ ಏಕಾಂಗಿ ಹೋರಾಟ
    ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ನಿಧಾನವಾಗಿ ಚೆನ್ನೈ ಬೌಲರ್‌ಗಳಿ ಕಾಡಲು ಆರಂಭಿಸಿದರು. ಇತ್ತ ಸಂಜು ಸ್ಯಾಮ್ಸನ್ 15 ರನ್ (20 ಎಸೆತ, 2 ಬೌಂಡರಿ) ಸಿಡಿಸಿ 2ನೇ ವಿಕೆಟ್‍ಗೆ 51 ರನ್ (41 ಎಸೆತ) ಜೊತೆಯಾಟವಾಡಿ ವಿಕೆಟ್ ಒಪ್ಪಿಸಿದರು. ಇತ್ತ ಜೈಸ್ವಾಲ್ ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದರು. ವಿಕೆಟ್‍ಗಳು ಉರುಳುತ್ತಿದ್ದರು ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಜೈಸ್ವಾಲ್ 59 ರನ್ (44 ಎಸೆತ, 8 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ಈ ಮೊದಲು ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 2 ರನ್‍ಗಳಿಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ಆ ಬಳಿಕ ಬಂದ ಮೊಯಿನ್ ಅಲಿ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು.

    ಅಲಿ ಅಟ್ಟಹಾಸ:
    ಡೆವೊನ್ ಕಾನ್ವೇ ಜೊತೆಗೂಡಿದ ಮೊಯಿನ್ ಅಲಿ ರಾಜಸ್ಥಾನ ಬೌಲರ್‌ಗಳ ಪ್ರತಿ ಎಸೆತಗಳಿಗೂ ಲೀಲಾಜಾಲವಾಗಿ ರನ್ ಬಾರಿಸಲು ಮುಂದಾದರು. ಜೊತೆಗೆ ಬೌಂಡರಿ, ಸಿಕ್ಸರ್‌ಗಳ ಮೂಲಕ ಚೆನ್ನೈ ರನ್ ವೇಗವನ್ನು ಏರಿಸಿದರು. ಇತ್ತ ಕಾನ್ವೇ ಮಾತ್ರ ಪರದಾಟ ನಡೆಸಿ 16 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಈ ಮೊದಲು ಅಲಿ ಜೊತೆಗೂಡಿ 2ನೇ ವಿಕೆಟ್‍ಗೆ 83 ರನ್ (39 ಎಸೆತ)ಗಳ ಜೊತೆಯಾಟದಲ್ಲಿ ಭಾಗಿಯಾದರು.

    ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಚೆನ್ನೈ ತಂಡಕ್ಕೆ ನಾಯಕ ಧೋನಿ ಕೆಲ ಹೊತ್ತು ನಿಧಾನಗತಿಯ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಇತ್ತ ಅಲಿ ಮಾತ್ರ ಉತ್ತಮ ಇನ್ನಿಂಗ್ಸ್ ಕಟ್ಟಿದ ಪರಿಣಾಮ ಚೆನ್ನೈ ತಂಡ ಸಾಧಾರಣ ಮೊತ್ತ ಪೇರಿಸಿತು.

    ಡೆತ್ ಓವರ್‌ಗಳಲ್ಲಿ ಧೋನಿ 26 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಇವರ ಹಿಂದೆಯೇ ಅಲಿ 93 ರನ್ (57 ಎಸೆತ, 13 ಬೌಂಡರಿ, 3 ಸಿಕ್ಸ್) ಚಚ್ಚಿ ಔಟ್‌ ಆಗುವ ಮೂಲಕ 7 ರನ್‍ಗಳಿಂದ ಶತಕ ವಂಚಿತರಾದರು. ಅಂತಿಮವಾಗಿ ಚೆನ್ನೈ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಒಟ್ಟುಗೂಡಿಸಿತು.

  • ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

    ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

    ಮುಂಬೈ: 4 ಬಾರಿ ಐಪಿಎಲ್ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಇಂದು 2022ರ ಐಪಿಎಲ್‍ನ ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದೆ. ಈ ನಡುವೆ ಇದು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಕೊನೆಯ ಪಂದ್ಯ ಎಂಬ ಮಾತು ಕೇಳಿ ಬರುತ್ತಿದೆ.

    ರಾಜಸ್ಥಾನ ವಿರುದ್ಧ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಚೆನ್ನೈ ತಂಡದೊಂದಿಗೆ ನಾಯಕ ಧೋನಿಗೂ ಇದು ಕೊನೆಯ ಪಂದ್ಯ ಎಂಬ ಮಾತುಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ #DefinitelyNot ಎಂಬ ಪದ ಟ್ರೆಂಡಿಂಗ್ ಆಗಿದೆ. ಹೌದು ಧೋನಿ ಟೀಂ ಇಂಡಿಯಾಗೆ ಗುಡ್ ಬೈ ಹೇಳಿದ ಬಳಿಕ ಐಪಿಎಲ್‍ನಲ್ಲಿ ಚೆನ್ನೈ ಪರ ಆಡುತ್ತಿದ್ದಾರೆ. ಇದೀಗ ಧೋನಿಗೆ 41 ವರ್ಷ ಹಾಗಾಗಿ ಮುಂದಿನ ಐಪಿಎಲ್‍ನಲ್ಲಿ ಧೋನಿ ಚೆನ್ನೈ ಪರ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದಂತೆ ಧೋನಿ ಅಭಿಮಾನಿಗಳು #DefinitelyNot ಧೋನಿ ಮುಂದಿನ ವರ್ಷ ಚೆನ್ನೈ ಪರ ಆಡಲಿ ಎಂಬ ಕೋರಿಕೆ ಹೆಚ್ಚಾಗಿದೆ. ಇದನ್ನೂ ಓದಿ: Thailand Open – ನಂ.1 ಆಟಗಾರ್ತಿ ಯಮಗುಚಿಯನ್ನು ಸೋಲಿಸಿ ಸೆಮಿಗೆ ಸಿಂಧು ಎಂಟ್ರಿ

    MS DHONI (2)

    2021ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿದ್ದ ಚೆನ್ನೈ ತಂಡ ಈ ಬಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿ ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದೆ. ಈ ನಡುವೆ ನಾಯಕತ್ವದ ಬದಲಾವಣೆ, ಗಾಯಳುಗಳ ಸಮಸ್ಯೆ ತಂಡಕ್ಕೆ ಹೊಡೆತ ನೀಡಿದೆ. ಇದೀಗ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಚೆನ್ನೈ ತಂಡದೊಂದಿಗೆ ಧೋನಿಗೂ ಕೊನೆಯ ಪಂದ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

    ಈ ನಡುವೆ ಈ ಹಿಂದಿನ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರ ಡ್ಯಾನಿ ಮಾರಿಸನ್, ಧೋನಿ ನೀವು ಮುಂದಿನ ಬಾರಿ ಐಪಿಎಲ್‍ನಲ್ಲಿ ಹಳದಿ ಜೆರ್ಸಿಯಲ್ಲಿ ಕಾಣಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಧೋನಿ ಖಂಡಿತ ನಾನು ಮುಂದಿನ ಬಾರಿಯೂ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಖಂಡಿತವಾಗಿಯೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಲಿದ್ದೀರಿ. ಆದರೆ ಈ ಹಳದಿ ಜೆರ್ಸಿಯಲ್ಲೋ ಅಥವಾ ಬೇರೆ ಹಳದಿ ಜೆರ್ಸಿಯಲ್ಲೋ ಗೊತ್ತಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿದರು. ಈ ಹೇಳಿಕೆಯ ಬಳಿಕ ಇದೀಗ ಮುಂದಿನ ಐಪಿಎಲ್‍ನಲ್ಲಿ ಧೋನಿ ಹೊಸ ರೋಲ್‍ನಲ್ಲಿ ತಂಡದಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಮಾಜಿ ಆಟಗಾರರಿಂದ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆಲ್ಲ ಸ್ವತಃ ಧೋನಿ ಮುಂದಿನ ಬಾರಿ ಚೆನ್ನೈ ತಂಡದಲ್ಲಿ ನಾಯಕನಾಗಿ ಇರುತ್ತೇನೆ ಎಂದು ಟಾಸ್‌ ವೇಳೆ ತಿಳಿಸಿದ್ದಾರೆ. ಆದರೂ ಅಭಿಮಾನಿಗಳಲ್ಲಿ ಧೋನಿಯ ನಿರ್ಧಾರದ ಬಗ್ಗೆ ಅನುಮಾನಗಳಿವೆ. ಈ ಅನುಮಾನಗಳಿಗೆ ಮುಂದಿನ ದಿನಗಳಲ್ಲಿ ಧೋನಿ ಉತ್ತರಿಸುವ ಸಾಧ್ಯತೆ ಇದೆ.

  • ಗುಜರಾತ್ ಗುನ್ನಕ್ಕೆ ಚೆನ್ನೈ ಚಿಂದಿ –  ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

    ಗುಜರಾತ್ ಗುನ್ನಕ್ಕೆ ಚೆನ್ನೈ ಚಿಂದಿ –  ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

    ಮುಂಬೈ: ವೃದ್ಧಿಮಾನ್ ಸಾಹಾ ಅವರ ಜವಾಬ್ದಾರಿ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡವು ಚೆನ್ನೈ ವಿರುದ್ಧ 7 ವಿಕೆಟ್‌ಗಳ ಜಯ ದಾಖಲಿಸಿತು.

    ಚೆನ್ನೈ ಸೂಪರ್‌ಕಿಂಗ್ಸ್ ತಂಡವು ನೀಡಿದ 134 ರನ್‌ಗಳ ಗುರಿ ಬೆನ್ನತ್ತಿದ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವು 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್‌ಗಳನ್ನು ಬಾರಿಸುವ ಮೂಲಕ ಹಾಲಿ ಚಾಂಪಿಯನ್ಸ್‌ಗೆ ಸೋಲುಣಿಸಿತು. ಇದನ್ನೂ ಓದಿ: ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ – ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ಆಯೋಜನೆ

    IPL 2022 SCK VS GT 4

    ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ಸಾಧಾರಣ ರನ್‌ಗಳ ಮೊತ್ತವನ್ನು ದಾಖಲಿಸಿತು. 134 ರನ್‌ಗಳ ಗುರಿ ಬೆನ್ನತ್ತಿದ ಟೈಟಾನ್ಸ್ ತಂಡವು 19.1 ಓವರ್‌ನಲ್ಲೇ 137 ರನ್‌ಗಳಿಸುವ ಮೂಲಕ ನಿರಾಯಾಸವಾಗಿ ಸೋಲುಣಿಸಿತು.

    ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ವೃದ್ಧಿಮಾನ್ ಸಾಹಾ ಹಾಗೂ ಶುಭಮನ್‌ಗಿಲ್ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಇಬ್ಬರ ಜೊತೆಯಾಟ 43 ಎಸೆತಗಳಲ್ಲಿ 59 ರನ್‌ಗಳನ್ನು ಕಲೆಹಾಕಿತು. ಇದೇ ವೇಳೆ 17 ಎಸೆತಗಳಲ್ಲಿ 18 ರನ್‌ಗಳಿಸಿದ ಶುಭಮನ್‌ಗಿಲ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

    ಮಿಂಚಿದ ಸಾಹಾ: ಆರಂಭಿಕ ಆಟಗಾರನಾಗಿ ಕ್ರೀಸ್‌ಗಿಳಿದ ವೃದ್ಧಿಮಾನ್‌ ಸಾಹಾ   67 ರನ್‌ಗಳಿಸಿ ಅಜೇಯರಾಗುಳಿದರು. 57 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಾಯದಿಂದ 67 ರನ್‌ಗಳಿಸಿ ಟೈಟಾನ್ಸ್‌ ಗೆಲುವಿಗೆ ನೆರವಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಕ್ರೀಸ್‌ಗಿಳಿದ ಡೇವಿಡ್‌ ಮಿಲ್ಲರ್‌ 20 ಎಸೆತಗಳಲ್ಲಿ 15 ರನ್‌ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

    ವೇಳೆ ಮ್ಯಾಥಿವ್‌ ಏಡ್‌ 15 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 20 ರನ್‌ಗಳಿಸುವ ಮೂಲಕ ಉತ್ತಮ ಸಾಥ್‌ ನೀಡಿದರು. ಹಾರ್ದಿಕ್‌ ಪಾಂಡ್ಯ 7 ರನ್‌ಗಳಿಸಿ ಪೆವಿಲಿಯನ್‌ ಸೇರಿದರು.  ಗುಜರಾತ್ ತಂಡದ ಪರ ಮೊಹಮ್ಮದ್ ಶಮಿ 2 ವಿಕೆಟ್ ಗಳಿಸಿ ಮಿಂಚಿದರು.

    IPL 2022 SCK VS GT

    ಋತುರಾಜ್ ಅರ್ಧಶತಕ: ಋತುರಾಜ್ ಗಾಯಕ್ವಾಡ್‌ ಸಮಯೋಚಿತ ಅರ್ಧಶತಕದ (53) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್-2022 ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.

    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಡಿವೋನ್ ಕಾನ್ವೆ 5 ರನ್‌ಗಳಿಸಿ ನಿರ್ಗಮಿಸಿದರು. 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ ಮತ್ತೋರ್ವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರ ಜೊತೆ ಅರ್ಧಶತಕದ ಆಟಕ್ಕೆ ಜೊತೆಯಾದರು. ರಕ್ಷಣಾತ್ಮಕ ಇನ್ನಿಂಗ್ಸ್ ಕಟ್ಟಿದ ಋತುರಾಜ್ ಅರ್ಧಶತಕ ಗಳಿಸಿದರು. ಆದರೆ 53 ರನ್‌ಗಳ ಬೆನ್ನಲ್ಲೇ ಔಟ್ ಆದರು. 49 ಎಸೆತಗಳನ್ನು ಎದುರಿಸಿದ ಗಾಯಕ್ವಾಡ್‌ ಸಿಕ್ಸರ್ ನೆರವಿನಿಂದ 53 ರನ್ (1 ಸಿಕ್ಸರ್, 4 ಬೌಂಡರಿ) ಗಳಿಸಿದರು.

    ಭರವಸೆ ಆಟಗಾರ ಶಿವಂ ದುಬೆ ಸಹ ಖಾತೆ ತೆರೆಯುವಲ್ಲಿ ವಿಫಲರಾದರು. ನಾಯಕ ಮಹೇಂದ್ರ ಸಿಂಗ್ ಧೋನಿ ಸಹ 7 ರನ್‌ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾರಾಯಣ್ ಜಗದೀಶನ್ 33 ಎಸೆತಗಳಲ್ಲಿ 39 ರನ್‌ಗಳಿಸಿ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಇದು ತಂಡ 130 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

    ಆರಂಭದಿಂದಲೇ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ರನ್‌ಗಳ ಹಿನ್ನಡೆಗೆ ಕಾರಣವಾಯಿತು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಸಾಧ್ಯವಾಯಿತು.

  • IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?

    IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?

    ಮುಂಬೈ: ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಸ್ಟಾರ್ ಕ್ರಿಕೆಟರ್ ಅಂಬಾಟಿ ರಾಯುಡು ಐಪಿಎಲ್ ಆವೃತ್ತಿಗೆ ಗುಡ್‌ಬೈ ಹೇಳುತ್ತಿರುವುದಾಗಿ ಟ್ಟಿಟ್ಟರ್ ಮೂಲಕ ಘೋಷಿಸಿ ಬಳಿಕ, ಕೆಲವೇ ಗಂಟೆಯಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಸಿಎಸ್‌ಕೆ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ರಾಯುಡು ಇದ್ದಕ್ಕಿದ್ದಂತೆ ಐಪಿಎಲ್‌ಗೆ ಗುಡ್‌ಬೈ ಹೇಳುತ್ತಿರುವುದಾಗಿ ಘೋಷಿಸಿ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತರಿಸಿದ್ದು, ಇಂದಿನ ಟ್ವಿಟ್ಟರ್ ಟಾಪ್ ಟ್ರೆಂಡಿಗ್‌ನಲ್ಲೂ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ಅವರಿಗೆ ಶುಭ ಹಾರೈಸುತ್ತಿದ್ದಾರೆ. ಇದನ್ನೂ ಓದಿ: ಟೀಕೆಗಳ ನಡುವೆಯೂ ಮೈಲಿಗಲ್ಲು ಸಾಧಿಸಿದ ಕಿಂಗ್ ಕೊಹ್ಲಿ

    CSK

    ಈ ಕುರಿತು ಟ್ವೀಟ್ ಮಾಡಿರುವ ರಾಯುಡು, ಇದು ನನ್ನ ಕೊನೆಯ ಐಪಿಎಲ್ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಕಳೆದ 13 ವರ್ಷಗಳಿಂದ 2 ಶ್ರೇಷ್ಠ ತಂಡಗಲ್ಲಿ ಅದ್ಭುತ ಸಮಯವನ್ನು ಕಳೆದಿದ್ದೇನೆ. ಈ ಕ್ರಿಕೆಟ್ ಪಯಣಕ್ಕೆ ಅವಕಾಶ ಮಾಡಿಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು. ಆ ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥ್‌ ಸಹ ಅವರು ಐಪಿಎಲ್‌ನಿಂದ ನಿವೃತ್ತಿಯಾಗುವುದಿಲ್ಲ ಎಂದು ಹೇಳಿದ್ದಾರೆ.

    2010ರಲ್ಲಿ 6.75 ಕೋಟಿ ರೂ.ಗಳಿಗೆ ಖರೀದಿಯಾಗಿದ್ದ ಅಂಬಾಟಿ ರಾಯುಡು ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್ ಪ್ರವೇಶಿಸಿದ್ದರು. ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲೇ 12 ಪಂದ್ಯಗಳಲ್ಲಿ 271 ರನ್‌ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

    ಈವರೆಗೆ ಐಪಿಎಲ್‌ನಲ್ಲಿ 187 ಪಂದ್ಯಗಳನ್ನಾಡಿರುವ ರಾಯುಡು 4,187 ರನ್‌ಗಳನ್ನು ಪೇರಿಸಿದ್ದಾರೆ. 296-28 ಸರಾಸರಿ ಉಳಿಸಿಕೊಂಡಿದ್ದು, 127.26  ಸ್ಟ್ರೈಕ್‌ ರೇಟ್‌ನಲ್ಲಿದ್ದಾರೆ.

    2010 ರಿಂದ 2017ರ ವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಾಯುಡು, 2018ರಿಂದ ಚೆನ್ನೈ ಸೂಪರ್‌ಕಿಂಗ್ಸ್ ಪ್ರವೇಶಿಸಿದರು. ಸಾಕಷ್ಟು ಪಂದ್ಯಗಳಲ್ಲಿ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಅವರೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ, ಮಧ್ಯಮಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಿದ್ದರು.

  • ಧೋನಿ ಬಲವಾದ ಮನವಿ ಕಕ್ಕಾಬಿಕ್ಕಿಯಾದ ಅಂಪೈರ್ – ನಿರ್ಧಾರ ಬದಲು!

    ಧೋನಿ ಬಲವಾದ ಮನವಿ ಕಕ್ಕಾಬಿಕ್ಕಿಯಾದ ಅಂಪೈರ್ – ನಿರ್ಧಾರ ಬದಲು!

    ಮುಂಬೈ: 15ನೇ ಆವೃತ್ತಿ ಐಪಿಎಲ್‍ನಲ್ಲಿ ಅಂಪೈರ್‌ಗಳ ಎಡವಟ್ಟು ಮತ್ತೆ ಮತ್ತೆ ಮರುಕಳಿಸುತ್ತಿದೆ. ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಅಂಪೈರ್ ವೈಡ್ ಎಂಬ ತೀರ್ಪು ನೀಡಲು ಮುಂದಾದಗ ಚೆನ್ನೈ ನಾಯಕ ಧೋನಿ ಬಲವಾದ ಮನವಿ ಸಲ್ಲಿಸುತ್ತಿದ್ದಂತೆ ಔಟ್ ಎಂದು ತೀರ್ಪು ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ನಿನ್ನೆಯ ಪಂದ್ಯದಲ್ಲಿ ಅಂಪೈರ್ ಚಿರಾ ರವಿಕಾಂತ್ ರೆಡ್ಡಿ ವೈಡ್ ಎಂದು ತೀರ್ಪು ನೀಡಲು ಕೈ ಮೇಲೆತ್ತುತ್ತಿದ್ದಂತೆ. ಧೋನಿ ಬಲವಾದ ಮನವಿ ಸಲ್ಲಿಸಿದರು ತಕ್ಷಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಮುಂಬೈ ಬ್ಯಾಟ್ಸ್‌ಮ್ಯಾನ್‌ ಹೃತಿಕ್ ಶೋಕೀನ್ ಡಿಆರ್‌ಎಸ್ ಮೊರೆ ಹೋದರು. ಈ ವೇಳೆ ಬ್ಯಾಟ್‍ಗೆ ತಾಗದೆ ಪ್ಯಾಡ್‍ಗೆ ಔಟ್ ಸೈಡ್ ಎಡ್ಜ್ ಆಗಿರುವುದು ಡಿಆರ್‌ಎಸ್‌ನಲ್ಲಿ ಸ್ಪಷ್ಟವಾಗಿ ತಿಳಿಯಿತು. ಬಳಿಕ ಅಂಪೈರ್ ತಮ್ಮ ತೀರ್ಪನ್ನು ಬದಲಾಯಿಸಿಕೊಂಡು ನಾಟ್‌ ಔಟ್ ಎಂದರು. ಇದನ್ನೂ ಓದಿ: ಡಿಆರ್‌ಎಸ್‌ಗೆ ಪವರ್ ಕಟ್ ಕಾಟ – ಟ್ರೋಲಾದ ಶ್ರೀಮಂತ ಕ್ರಿಕೆಟ್ ಲೀಗ್

    ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಧೋನಿ ನೋಡಿ ಅಂಪೈರ್ ಕೂಡ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಅಂಪೈರ್‌ಗೂ ಧೋನಿ ಮೇಲೆ ತುಂಬಾ ನಂಬಿಕೆ ಎಂಬ ಹಲವು ಕಾಮೆಂಟ್‍ಗಳ ಮೂಲಕ ನೆಟ್ಟಿಗರು ಅಂಪೈರ್ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ: ಜಡೇಜಾ ಐಪಿಎಲ್‍ನಿಂದ ಹೊರಗುಳಿದಂತೆ ಸಿಎಸ್‍ಕೆ ಫ್ರಾಂಚೈಸ್ ಇನ್‍ಸ್ಟಾಗ್ರಾಂ ಅನ್‍ಫಾಲೋ ಮಾಡಿದ್ಯಾಕೆ?

    https://twitter.com/sportsgeek090/status/1524793113436618752

    ಪಂದ್ಯದಲ್ಲಿ ಮುಂಬೈ ಬೌಲರ್‌ಗಳ ಅಮೋಘ ಪ್ರದರ್ಶನದ ಮುಂದೆ ಚೆನ್ನೈ 97 ರನ್‍ಗಳಿಗೆ ಸರ್ವಪತನ ಕಂಡಿತು. 98 ರನ್‍ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಚೆನ್ನೈ ಬೌಲರ್‌ಗಳ ಪ್ರತಿರೋಧದ ನಡುವೆಯೂ ತಿಲಕ್ ವರ್ಮಾರ ಜವಾಬ್ದಾರಿಯುತ ಆಟ ಮುಂಬೈ ಗೆಲುವಿಗೆ ನೆರವಾಯಿತು. ತಿಲಕ್ ವರ್ಮಾ ಅಜೇಯ 34 ರನ್ (32 ಎಸೆತ, 4 ಬೌಂಡರಿ) ನೆರವಿನಿಂದ 14.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 103 ಸಿಡಿಸಿ ಇನ್ನೂ 31 ಎಸೆತ ಬಾಕಿ ಇರುವಂತೆ ಮುಂಬೈ 5 ವಿಕೆಟ್‍ಗಳ ಅಂತರದ ಜಯ ದಾಖಲಿಸಿತು.

  • ಚೆನ್ನೈ ವಿರುದ್ಧ ಸಮರ ಸಾರಿದ ಸ್ಯಾಮ್ಸ್ – ಸಿಎಸ್‍ಕೆ ಪ್ಲೇ ಆಫ್ ಕನಸು ಭಗ್ನ

    ಚೆನ್ನೈ ವಿರುದ್ಧ ಸಮರ ಸಾರಿದ ಸ್ಯಾಮ್ಸ್ – ಸಿಎಸ್‍ಕೆ ಪ್ಲೇ ಆಫ್ ಕನಸು ಭಗ್ನ

    ಮುಂಬೈ: ಬೌಲರ್‌ಗಳ ಮೇಲಾಟಕ್ಕೆ ಸಾಕ್ಷಿಯಾದ ಮುಂಬೈ ಮತ್ತು ಚೆನ್ನೈ ನಡುವಿನ ಪಂದ್ಯದಲ್ಲಿ 5 ವಿಕೆಟ್‍ಗಳಿಂದ ಮುಂಬೈ ಗೆದ್ದು ಚೆನ್ನೈಗೆ ತೆರೆದುಕೊಂಡಿದ್ದ ಪ್ಲೇ ಆಫ್ ಬಾಗಿಲನ್ನು ಮುಚ್ಚಿಸಿದೆ.

    98 ರನ್‍ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಚೆನ್ನೈ ಬೌಲರ್‌ಗಳ ಪ್ರತಿರೋಧದ ನಡುವೆಯೂ ತಿಲಕ್ ವರ್ಮಾರ ಜವಾಬ್ದಾರಿಯುತ ಆಟ ಮುಂಬೈ ಗೆಲುವಿಗೆ ನೆರವಾಯಿತು. ತಿಲಕ್‌ ವಮಾ ಅಜೇಯ 34 ರನ್ (32 ಎಸೆತ, 4 ಬೌಂಡರಿ) ನೆರವಿನಿಂದ 14.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 103 ಸಿಡಿಸಿ ಇನ್ನೂ 31 ಎಸೆತ ಬಾಕಿ ಇರುವಂತೆ ಮುಂಬೈ 5 ವಿಕೆಟ್‍ಗಳ ಅಂತರದ ಜಯ ದಾಖಲಿಸಿತು. ಈ ಮೂಲಕ ಟೂರ್ನಿಯ ಮೂರನೇ ಗೆಲುವಿನ ಸಂಭ್ರಮ ಪಟ್ಟಿತು.

    98 ರನ್‍ಗಳ ಅಲ್ಪಮೊತ್ತ ಗುರಿ ಪಡೆದ ಮುಂಬೈ ಕೂಡ ಚೆನ್ನೈ ಬೌಲರ್‌ಗಳ ಮುಂದೆ ಪರದಾಟ ಆರಂಭಿಸಿತು. ಇಶಾನ್ ಕಿಶನ್ 6 ರನ್‍ಗೆ ಆಟ ನಿಲ್ಲಿಸಿದರು. ಆ ಬಳಿಕ ರೋಹಿತ್ ಶರ್ಮಾ 18 ರನ್ (14 ಎಸೆತ, 4 ಬೌಂಡರಿ) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡರು. ನಂತರ ದಿಡೀರ್ ಕುಸಿತ ಕಂಡ ಮುಂಬೈ 33 ರನ್‍ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.  ಆ ಬಳಿಕ ಜೊತೆಯಾದ ತಿಲಕ್‌ ವರ್ಮಾ ಮತ್ತು ಹೃತಿಕ್ ಶೋಕೀನ್ ತಂಡದ ಗೆಲುವಿಗಾಗಿ ಹೋರಾಡಿದರು. ಶೋಕೀನ್‌ 18 ರನ್‌ (23 ಎಸೆತ, 2 ಬೌಂಡರಿ) ಬಾರಿಸಿ ಔಟ್‌ ಆದರು.

    ಈ ಮೊದಲು ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಚೆನ್ನೈ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಇತ್ತ ರೋಹಿತ್ ನಿರ್ಧಾರವನ್ನು ಸರಿಯಾಗಿ ಬಳಸಿಕೊಂಡ ಮುಂಬೈ ಬೌಲರ್‌ಗಳು ನಾ ಮುಂದು ತಾ ಮುಂದು ಎನ್ನುವಂತೆ ವಿಕೆಟ್ ಬೇಟೆ ಆರಂಭಿಸಿದರು.

    ಚೆನ್ನೈ ಬ್ಯಾಟಿಂಗ್ ಬೆನ್ನೆಲುಬು ಮುರಿದ ಸ್ಯಾಮ್ಸ್
    ಆರಂಭದಲ್ಲೇ ಬಿಗಿ ದಾಳಿಯ ಮೂಲಕ ಡೇನಿಯಲ್ ಸ್ಯಾಮ್ಸ್ ಚೆನ್ನೈ ತಂಡದ ಅಕ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ಕಾನ್ವೇ ಮತ್ತು ಅಲಿಯನ್ನು ಶೂನ್ಯಕ್ಕೆ ಪೆವಿಲಿಯನ್‍ಗೆ ಅಟ್ಟಿದರೆ, ಗಾಯಕ್ವಾಡ್‌ರನ್ನು 7 ರನ್‍ಗಳಿಗೆ ಡಗೌಟ್‌ ಸೇರಿಸಿದರು.

    ಒಂದು ಕಡೆ ವಿಕೆಟ್ ಪಟಪಟನೇ ಉರುಳುತ್ತಿದ್ದರೆ, ಇನ್ನೊಂದೆಡೆ ಧೋನಿ ತಂಡಕ್ಕಾಗಿ ಏಕಾಂಗಿ ಹೋರಾಟ ನಡೆಸಿದರು. ಆದರೆ ಇವರಿಗೆ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಸಾಥ್ ನೀಡಲಿಲ್ಲ. ಧೋನಿ ಅಜೇಯ 36 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿದ್ದನ್ನು ಹೊರತು ಪಡಿಸಿ ಬ್ರಾವೋ ಸಿಡಿಸಿದ 12 ರನ್ (15 ಎಸೆತ, 1 ಸಿಕ್ಸ್) ಅತಿ ಹೆಚ್ಚಿನ ಗಳಿಕೆಯಾಯಿತು.

    ಅಂತಿಮವಾಗಿ ಚೆನ್ನೈ ತಂಡ 16 ಓವರ್‌ಗಳಲ್ಲಿ ಸರ್ವ ಪತನ ಕಂಡಿತು. ಮುಂಬೈ ಪರ ಸ್ಯಾಮ್ಸ್ 3 ವಿಕೆಟ್ ಕಿತ್ತು ಮಿಂಚಿದರೆ, ರಿಲೆ ಮೆರೆಡಿತ್ ಮತ್ತು ಕುಮಾರ್ ಕಾರ್ತಿಕೇಯ ತಲಾ 2 ವಿಕೆಟ್ ಪಡೆದರು. ಇನ್ನೂಳಿದ 2 ವಿಕೆಟ್‍ಗಳನ್ನು ತಲಾ ಒಂದೊಂದರಂತೆ ಬುಮ್ರಾ ಮತ್ತು ರಮಣದೀಪ್ ಸಿಂಗ್ ಹಂಚಿಕೊಂಡು ಚೆನ್ನೈ ಬ್ಯಾಟ್ಸ್‌ಮ್ಯಾನ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು.

  • ಜಡೇಜಾ ಐಪಿಎಲ್‍ನಿಂದ ಹೊರಗುಳಿದಂತೆ ಸಿಎಸ್‍ಕೆ ಫ್ರಾಂಚೈಸ್ ಇನ್‍ಸ್ಟಾಗ್ರಾಂ ಅನ್‍ಫಾಲೋ ಮಾಡಿದ್ಯಾಕೆ?

    ಜಡೇಜಾ ಐಪಿಎಲ್‍ನಿಂದ ಹೊರಗುಳಿದಂತೆ ಸಿಎಸ್‍ಕೆ ಫ್ರಾಂಚೈಸ್ ಇನ್‍ಸ್ಟಾಗ್ರಾಂ ಅನ್‍ಫಾಲೋ ಮಾಡಿದ್ಯಾಕೆ?

    ಮುಂಬೈ: ಗಾಯದ ಸಮಸ್ಯೆಯಿಂದ 15ನೇ ಆವೃತ್ತಿ ಐಪಿಎಲ್‍ನ ಉಳಿದ ಪಂದ್ಯಗಳಿಂದ ರವೀಂದ್ರ ಜಡೇಜಾ ಹೊರ ನಡೆದಿದ್ದಾರೆ. ಈ ನಡುವೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಜಡೇಜಾ ಅವರ ಇನ್‍ಸ್ಟಾಗ್ರಾಂ ಖಾತೆಯನ್ನು ಅನ್‍ಫಾಲೋ ಮಾಡಿದೆ. ಇದು ಬಾರಿ ಚರ್ಚೆಗೆ ಗ್ರಾಸವಾಗಿದೆ.

    15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಚೆನ್ನೈ ತಂಡದ ನಾಯಕತ್ವ ತೊರೆದು ಜಡೇಜಾಗೆ ನಾಯಕತ್ವದ ಪಟ್ಟ ಕಟ್ಟಿದ್ದರು. ಆ ಬಳಿಕ ಚೆನ್ನೈ ಹೀನಾಯ ಪ್ರದರ್ಶನ ತೋರಿತು. ನಂತರ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಜಡೇಜಾ ಗಾಯಾಳುವಾಗಿ ತಂಡ ತೊರೆದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ತಂಡದೊಳಗೆ ಕಿತ್ತಾಟ ನಡೆಯುತ್ತಿದೆ ಎಂಬ ಮಾತಿಗೆ ಜೀವ ತುಂಬಿದೆ. ಜಡೇಜಾ ಅವರ ಇನ್‍ಸ್ಟಾಗ್ರಾಂ ಖಾತೆಯನ್ನು ಚೆನ್ನೈ ಫ್ರಾಂಚೈಸ್ ಅನ್‍ಫಾಲೋ ಮಾಡಿರುವುದು‌ ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಜಿಮ್‍ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ಶಿಖರ್ ಧವನ್, ಪ್ರೀತಿ ಜಿಂಟಾ ವೀಡಿಯೋ ವೈರಲ್

    IPL 2022 RR VS LSG

    ಈ ನಡುವೆ ಮಾಜಿ ಆಟಗಾರ ಆಕಾಶ್ ಚೋಪ್ರಾ, ಜಡೇಜಾ ಗಾಯದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಜಡೇಜಾ ಮುಂದಿನ ಐಪಿಎಲ್‍ನಲ್ಲಿ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

    ಚೆನ್ನೈ ತಂಡ ಜಡೇಜಾಗೆ 16 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿತ್ತು. ಆದರೆ ಜಡೇಜಾ 15ನೇ ಆವೃತ್ತಿ ಐಪಿಎಲ್‍ನಲ್ಲಿ ಒಟ್ಟು 10 ಪಂದ್ಯಗಳಿಂದ 116 ರನ್ ಮತ್ತು 3 ವಿಕೆಟ್ ಕಿತ್ತು ಕಳಪೆ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ಜಡೇಜಾರನ್ನು ಗಾಯದ ಸಮಸ್ಯೆ ಎಂದು ಹೊರಗಿಡಲಾಗಿತ್ತು. ಆ ಬಳಿಕ ಜಡೇಜಾ ಟೂರ್ನಿಯಿಂದಲೇ ಔಟ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಆಗುತ್ತಿದೆ.

     

  • ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಪುಣೆ: ಆರ್‌ಸಿಬಿ ಮತ್ತು ಚೆನ್ನೈ ನಡುವೆ ಜಿದ್ದಾಜಿದ್ದಿನ ಕಾದಾಟ ಮೈದಾನದಲ್ಲಿ ನಡೆಯುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಹುಡುಗಿಯೊಬ್ಬಳು ಆರ್‌ಸಿಬಿ ಅಭಿಮಾನಿ ಹುಡುಗನೊಬ್ಬನಿಗೆ ಪ್ರಪೋಸ್ ಮಾಡಿ ಎಲ್ಲರ ಮನಗೆದ್ದಿದ್ದಾಳೆ.

    ಹೌದು ಈ ಬಾರಿಯ ಐಪಿಎಲ್‍ನಲ್ಲಿ ರೋಚಕ ಕಾದಾಟ ಒಂದು ಕಡೆಯಾದರೆ, ಇನ್ನೊಂದೆಡೆ ಸೀಮಿತ ಪ್ರೇಕ್ಷಕರು ಮೈದಾನಕ್ಕೆ ಆಗಮಿಸಿ ಕೊರೊನಾ ಬಳಿಕ ಕ್ರಿಕೆಟ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಆಟಗಾರರು ಭರ್ಜರಿ ಪ್ರದರ್ಶನದ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು, ಕುಣಿಯುವಂತೆ ಮಾಡುತ್ತಿದ್ದಾರೆ. ಇತ್ತ ಅಭಿಮಾನಿಗಳು ಆಟಗಾರರಿಗೆ ವಿಭಿನ್ನ ರೀತಿಯಲ್ಲಿ ಚಿಯರ್ ಅಪ್ ಮಾಡುತ್ತಿದ್ದಾರೆ. ಅದೇ ರೀತಿ ನಿನ್ನೆ ಪುಣೆಯಲ್ಲಿ ನಡೆದ ಆರ್‌ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯದ ವೇಳೆ ಜೋಡಿ ಹಕ್ಕಿಗಳು ಪ್ರೇಮ ನಿವೇದನೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಆರ್‌ಸಿಬಿ ಆರ್ಭಟಕ್ಕೆ ಸೈಲೆಂಟಾದ ಕಿಂಗ್ಸ್ – ಚೆನ್ನೈ ವಿರುದ್ಧ 13 ರನ್‍ಗಳ ಜಯ

    ಆರ್‌ಸಿಬಿ ನೀಡಿದ ಪೈಪೋಟಿಯ ಮೊತ್ತವನ್ನು ಚೆನ್ನೈ ಚೇಸ್ ಮಾಡುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ಹುಡುಗಿಯೊಬ್ಬಳು ಮಂಡಿಯೂರಿ ರಿಂಗ್ ತೋರಿಸಿ ಹುಡುಗನಿಗೆ ಪ್ರಪೋಸ್ ಮಾಡಿದ್ದಾಳೆ. ಈ ದೃಶ್ಯವನ್ನು ಕ್ಯಾಮೆರಾಮ್ಯಾನ್ ಸೆರೆ ಹಿಡಿದ್ದಾನೆ. ಈ ದೃಶ್ಯ ಸೆರೆಯಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಜಯಘೋಷ ಮೊಳಗಿಸಿದ್ದಾರೆ. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ವೈರಲ್ ಆಗುತ್ತಿದ್ದು, ಜೋಡಿ ಹಕ್ಕಿಗಳ ಫೋಟೋ ಹಂಚಿಕೊಂಡು ನೆಟ್ಟಿಗರು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ಈ ದೃಶ್ಯದ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು, ಆರ್‌ಸಿಬಿ ಅಭಿಮಾನಿಗೆ ಸ್ಮಾರ್ಟ್ ಹುಡುಗಿಯ ಪ್ರೇಮ ನಿವೇದನೆ. ಆತ ಆರ್‌ಸಿಬಿ ತಂಡದ ನಿಷ್ಠಾವಂತ ಅಭಿಮಾನಿಯಾಗಿದ್ದರೆ, ಈಕೆಗೂ ನಿಷ್ಠಾವಂತ ಜೋಡಿಯಾಗಿರುತ್ತಾನೆ. ಶುಭವಾಗಲಿ ಈ ಜೋಡಿಗೆ ಎಂದು ಹಾರೈಸಿದ್ದಾರೆ.

    2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಚಹರ್ ಗೆಳತಿ ಜಯಾ ಭಾರದ್ವಾಜ್ ಅವರಿಗೆ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿದ್ದರು.

  • ಆರ್‌ಸಿಬಿ ಆರ್ಭಟಕ್ಕೆ ಸೈಲೆಂಟಾದ ಕಿಂಗ್ಸ್ – ಚೆನ್ನೈ ವಿರುದ್ಧ 13 ರನ್‍ಗಳ ಜಯ

    ಆರ್‌ಸಿಬಿ ಆರ್ಭಟಕ್ಕೆ ಸೈಲೆಂಟಾದ ಕಿಂಗ್ಸ್ – ಚೆನ್ನೈ ವಿರುದ್ಧ 13 ರನ್‍ಗಳ ಜಯ

    ಪುಣೆ: ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿದ ಚೆನ್ನೈ ಬ್ಯಾಟ್ಸ್‌ಮ್ಯಾನ್‌ಗಳ ಮುಂದೆ ಭರ್ಜರಿ ಪ್ರದರ್ಶನ ನೀಡಿದ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ 13 ರನ್‍ಗಳ ಜಯ ದಕ್ಕಿಸಿಕೊಟ್ಟರು.

    ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ತಂಡಕ್ಕೆ ಹರ್ಷಲ್ ಪಟೇಲ್ ಪ್ರಮುಖ ಮೂರು ವಿಕೆಟ್ ಕಿತ್ತು ಚೆನ್ನೈ ಗೆಲುವಿನ ಆಸೆಗೆ ಬ್ರೇಕ್ ಹಾಕಿದರು. ಆರ್‌ಸಿಬಿ ನೀಡಿದ 174 ರನ್‍ಗಳ ಚೇಸ್ ಮಾಡಿದ ಚೆನ್ನೈಗೆ ಕಡೆ ಕ್ಷಣದಲ್ಲಿ ಡ್ವೈನ್ ಪ್ರಿಟೋರಿಯಸ್ ಮತ್ತು ಮಹೇಶ್ ತೀಕ್ಷಣ ಗೆಲುವಿನ ಆಸೆ ಮೂಡಿಸಿದರೂ, ಜಯ ತಂದುಕೊಡುವಲ್ಲಿ ವಿಫಲರಾದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊ0ಂಡು 160 ರನ್ ಬಾರಿಸಿ 13 ರನ್‍ಗಳ ಅಂತರದಿಂದ ಸೋಲು ಕಂಡಿತು.

    ಗೆಲ್ಲಲು 173 ರನ್‍ಗಳ ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಗಾಯಕ್ವಾಡ್ 28 ರನ್ (23 ಎಸೆತ, 3 ಬೌಂಡರಿ, 1 ಸಿಕ್ಸ್) ಡೇವಿಡ್ ಕಾನ್‍ವೇ 56 ರನ್ (37 ಎಸೆತ, 6 ಬೌಂಡರಿ, 2 ಸಿಕ್ಸ್) ಚಚ್ಚಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಇವರಿಬ್ಬರ ವಿಕೆಟ್ ಕಳೆದುಕೊಂಡ ಬಳಿಕ ಚೆನ್ನೈ ತಂಡ ಕುಸಿತಕ್ಕೊಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ 34 ರನ್ (27 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆ ಕಮರಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡಿಯಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‍ಗೆ 62 ರನ್ (44 ಎಸೆತ) ಜೊತೆಯಾಟವಾಡಿ ಚೆನ್ನೈ ಬೌಲರ್‌ಗಳನ್ನು ಕಾಡಿದರು.

    ಕೊಹ್ಲಿ 30 ರನ್ (33 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಡು ಪ್ಲೆಸಿಸ್ 38 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಆ ಬಳಿಕ ರಜತ್ ಪಾಟಿದಾರ್ 21 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ರನ್ ಮಧ್ಯಮಕ್ರಮಾಂಕದಲ್ಲಿ ರನ್ ಹೆಚ್ಚಿಸಿ ಹೊರ ನಡೆದರು.

    ಆರ್‌ಸಿಬಿಗೆ ಕಡಿವಾಣ ಹಾಕಿದ ತೀಕ್ಷಣ
    ಮಹಿಪಾಲ್ ಲೋಮ್ರೋರ್ 42 ರನ್ (27 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ ಅಜೇಯ 26 ರನ್ (17 ರನ್, 1 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.

    ಕೊನೆ ಕ್ಷಣದಲ್ಲಿ ಮಹೇಶ್ ತೀಕ್ಷಣ ಕೆಲ ಕ್ರಮಾಂಕದ 3 ವಿಕೆಟ್ ಬೇಟೆಯಾಡಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಒಟ್ಟು ಗೂಡಿಸಿತು.

  • ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಮುಂಬೈ: ಸಿಎಸ್‍ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈ ತಂಡದ ಆಟಗಾರರು ಇಂದು ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತೆಲಂಗಾಣ ರಾಜ್ಯದ ಅಧಿಕೃತ ಚಂದ್ರ-ವೀಕ್ಷಕ ಸಮಿತಿಯು ಮೇ 2, ಸೋಮವಾರ, ಈದ್-ಉಲ್-ಫಿತರ್ ಎಂದು ಘೋಷಿಸಿತ್ತು. ಇಸ್ಲಾಮಿಕ್ ಕ್ಯಾಲೆಂಡರ್‍ನ 10 ನೇ ತಿಂಗಳಾಗಿರುವ ಶವ್ವಾಲ್‍ನ ಅರ್ಧಚಂದ್ರಾಕೃತಿಯು ಹೈದರಾಬಾದ್‍ನಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಗೋಚರಿಸದ ಕಾರಣ ಮಂಗಳವಾರ ಆಚರಿಸಲಾಗುತ್ತಿದೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಮುಳುವಾದ ರಿಂಕು, ರಾಣಾ ಜೊತೆಯಾಟ – ಕೋಲ್ಕತ್ತಾಗೆ 7 ವಿಕೆಟ್‍ಗಳ ಜಯ

     

    View this post on Instagram

     

    A post shared by Chennai Super Kings (@chennaiipl)

    ಚೆನ್ನೈ ತಂಡದ ಆಟಗಾರರಾದ ಧೋನಿ, ರಾಬಿನ್ ಉತ್ತಪ್ಪ, ಶಿವಂ ದುಬೆ, ರುತುರಾಜ್ ಗಾಯಕ್‍ವಾಡ್, ಮೊಯಿನ್ ಅಲಿ ಸೇರಿದಂತೆ ಅನೇಕ ಆಟಗಾರರು ಕೆಲವು ಬಗೆ ಬಗೆಯ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದ್ದಾರೆ.

    ಐಪಿಎಲ್ 2022ರ ಆವೃತ್ತಿಯಲ್ಲಿ ಸಿಎಸ್‍ಕೆ ತಂಡವು ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದೆ. ತಂಡದ ಪ್ಲೇ-ಆಫ್ ಕನಸು ಬಹುತೇಕ ಕಠಿಣವಾಗಿದ್ದರೂ ತಂಡದ ಆಟಗಾರರ ಮನಸ್ಥಿತಿಯು ಸಾಕಷ್ಟು ಲವಲವಿಕೆಯಿಂದ ಕೂಡಿದೆ. ಇದನ್ನೂ ಓದಿ: ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಈಗಾಗಲೇ ತಂಡವು ಒಟ್ಟು 9 ಪಂದ್ಯಗಳನ್ನಾಡಿ 2 ಜಯ, 6 ಸೋಲುಗಳನ್ನೊಳಗೊಂಡಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಮಧ್ಯೆ, ರವೀಂದ್ರ ಜಡೇಜಾ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಧೋನಿಗೆ ನಾಯಕ ಪಟ್ಟ ನೀಡಿದ್ದರು.

    ಭಾನುವಾರ ಮೇ 1 ರಂದು ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಎಚ್ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್ ) ಅನ್ನು ಸೋಲಿಸಿದ ನಂತರ ಧೋನಿ ಬಳಗವು ಆತ್ಮವಿಶ್ವಾಸದಲ್ಲಿದೆ. ಸಿಎಸ್‍ಕೆ ಮುಂದಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಬುಧವಾರ ಸೆಣಸಲಿದೆ.