Tag: CSK

  • ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

    ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

    ಮುಂಬೈ: ಐಪಿಎಲ್ ಮಿನಿ ಹರಾಜು (IPL Auction 2023) ಮುಗಿದಿದೆ. ಫ್ರಾಂಚೈಸ್‍ಗಳು ತಮಗೆ ಬೇಕಾಗಿದ್ದ ಆಟಗಾರರನ್ನು ಖರೀದಿಸಿದ್ದಾರೆ. ಈ ನಡುವೆ 2021ರ ಹರಾಜಿನಲ್ಲಿ ಬರೋಬ್ಬರಿ 15 ಕೋಟಿ ರೂ. ನೀಡಿ ಕೈಲ್ ಜೇಮಿಸನ್‍ರನ್ನು (Kyle Jamieson) ಆರ್​ಸಿಬಿ ಖರೀದಿಸಿತ್ತು. ಆ ಬಳಿಕ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತ್ತು. ಇದೀಗ ಚೆನ್ನೈ ಕೇವಲ 1 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ.

    27 ವರ್ಷದ ಜೇಮಿಸನ್ ನ್ಯೂಜಿಲೆಂಡ್ ಪರ ಆಡುವ ಆಲ್‍ರೌಂಡರ್ ಆಟಗಾರ. 2022ರ ಹರಾಜಿನಲ್ಲಿ ಭಾರೀ ಬೇಡಿಕೆ ಹೊಂದಿದ್ದ ಜೇಮಿಸನ್‍ರನ್ನು 15 ಕೋಟಿ ರೂ. ನೀಡಿ ಆರ್​ಸಿಬಿ ಖರೀದಿತ್ತು. ಆದರೆ ಜೇಮಿಸನ್ ಆರ್​ಸಿಬಿ ಪರ ಪ್ಲಾಫ್ ಆದರು. ಹಾಗಾಗಿ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತು. ನಿನ್ನೆ ನಡೆದ ಹರಾಜಿನಲ್ಲಿ ಜೇಮಿಸನ್ 1 ಕೋಟಿ ರೂ. ಮೂಲಬೆಲೆ ಹೊಂದಿದ್ದರು. ಈ ಮೂಲಬೆಲೆಗೆ ಚೆನ್ನೈ ಜೇಮಿಸನ್‍ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್

    2021ರ ಐಪಿಎಲ್‍ನಲ್ಲಿ ಜೇಮಿಸನ್ ಆರ್​ಸಿಬಿ ಪರ 9 ಪಂದ್ಯವಾಡಿದ್ದು, ಕೇವಲ 9 ವಿಕೆಟ್ ಮತ್ತು 65 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು. ಇದೀಗ ಚೆನ್ನೈ ಪಡೆ ಸೇರಿಕೊಂಡಿರುವ ಜೇಮಿಸನ್ ಪ್ರದರ್ಶನ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಮಿನಿ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ ಬೆನ್‍ಸ್ಟೋಕ್ಟ್‌ರನ್ನು 16.25 ಕೋಟಿ ರೂ. ನೀಡಿ ಖರೀದಿಸಿದರೆ, ಆ ಬಳಿಕ ಜೇಮಿಸಿನ್‍ಗೆ 1 ಕೋಟಿ ರೂ. ಮತ್ತು ಅಜಿಂಕ್ಯಾ ರಹಾನೆಗೆ 50 ಲಕ್ಷ ರೂ. ನೀಡಿ ಖರೀದಿಸಿರುವುದು ಹೆಚ್ಚಿನ ಮೊತ್ತವಾಗಿದೆ. ಇದನ್ನೂ ಓದಿ: RCB ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ

    Live Tv
    [brid partner=56869869 player=32851 video=960834 autoplay=true]

  • ಐಪಿಎಲ್‍ಗೆ ನಿವೃತ್ತಿ ಘೋಷಿಸಿದ ಬ್ರಾವೋ – ಚೆನ್ನೈ ತಂಡದಲ್ಲಿ ಮುಂದುವರಿಕೆ

    ಐಪಿಎಲ್‍ಗೆ ನಿವೃತ್ತಿ ಘೋಷಿಸಿದ ಬ್ರಾವೋ – ಚೆನ್ನೈ ತಂಡದಲ್ಲಿ ಮುಂದುವರಿಕೆ

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದಲ್ಲಿದ್ದ ಸ್ಟಾರ್ ಆಲ್‍ರೌಂಡರ್ ಡ್ವೇನ್ ಬ್ರಾವೋ (Dwayne Bravo) ಐಪಿಎಲ್‍ಗೆ (IPL) ನಿವೃತ್ತಿ ಘೋಷಿಸಿದ್ದಾರೆ. ಆದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹೊಸ ರೋಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    2022ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿದ್ದ ಬ್ರಾವೋ ಅವರನ್ನು 2023ರ ಐಪಿಎಲ್ ಮಿನಿ ಹರಾಜಿಗೆ (IPLAuction) ಸಿಎಸ್‍ಕೆ ತಂಡ ಬಿಟ್ಟುಕೊಟ್ಟಿತ್ತು. ಇದೀಗ ಬ್ರಾವೋ ಐಪಿಎಲ್‍ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಸಿಎಸ್‍ಕೆ ತಂಡ ಬ್ರಾವೋರನ್ನು ತಂಡದ ನೂತನ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ನಾನು ಈವರೆಗೆ ಸಿಎಸ್‍ಕೆ ಪರ ಆಡಿದ್ದೆ ಇದೀಗ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ಈವರೆಗೆ ಇದ್ದ ಹಾಗೆ ತಂಡದ ಜೊತೆ ಇರುತ್ತೇನೆ. ಆದರೆ ನಾನು ಮೈದಾನದ ಒಳಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ

    KKR

    ಬ್ರಾವೋ 161 ಪಂದ್ಯಗಳಿಂದ 183 ವಿಕೆಟ್‍ಗಳೊಂದಿಗೆ ಐಪಿಎಲ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ವೀರರಾಗಿದ್ದಾರೆ. ಆಲ್‍ರೌಂಡರ್ ಆಗಿ ಬ್ರಾವೋ 130ರ ಸ್ಟ್ರೈಕ್‍ರೇಟ್‍ನಲ್ಲಿ ಈವರೆಗೆ 1,560 ರನ್ ಬಾರಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ನ ಅನೇಕ ರೋಚಕ ಜಯಗಳಲ್ಲಿ ಬ್ರಾವೋ ಪ್ರಮುಖ ಪಾತ್ರ ವಹಿಸಿದ್ದಾರೆ.

    ಬ್ರಾವೋ 2011 ರಿಂದ ಸಿಎಸ್‍ಕೆ ಪರ ಆಡುತ್ತಿದ್ದು, ಐಪಿಎಲ್‍ನಲ್ಲಿ 2011, 2018 ಮತ್ತು 2021ರಲ್ಲಿ ಮತ್ತು 2014ರ ಚಾಂಪಿಯನ್ಸ್ ಲೀಗ್ ಚಾಂಪಿಯನ್ ಆಗಿದ್ದಾಗ ಬ್ರಾವೋ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಜೊತೆಗೆ 2013 ಮತ್ತು 2015ರಲ್ಲಿ ಎರಡು ಬಾರಿ ಸಿಎಸ್‍ಕೆ ಪರ ಅತಿ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಪಡೆದಿದ್ದರು. ಬ್ರಾವೋ ಈವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ 144 ಪಂದ್ಯಗಳನ್ನು ಆಡಿ 168 ವಿಕೆಟ್ ಮತ್ತು 1,556 ರನ್ ಸಿಡಿಸಿದ್ದಾರೆ. ಇದಲ್ಲದೆ ಬ್ರಾವೋ ಅದ್ಭುತ ಫೀಲ್ಡರ್ ಆಗಿದ್ದೂ ಕ್ಯಾಚ್ ಹಿಡಿದ ಬಳಿಕ ಮೈದಾನಲ್ಲೇ ನೃತ್ಯದ ಮೂಲಕ ರಂಜಿಸುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

  • ನನ್ನ ನೆಚ್ಚಿನ ಕ್ರಿಕೆಟಿಗ ರಾಸ್‌ ಟೇಲರ್‌: ಜೈಶಂಕರ್‌

    ನನ್ನ ನೆಚ್ಚಿನ ಕ್ರಿಕೆಟಿಗ ರಾಸ್‌ ಟೇಲರ್‌: ಜೈಶಂಕರ್‌

    ನವದೆಹಲಿ: ನನಗೆ ವೈಯಕ್ತಿಕವಾಗಿ ನೆಚ್ಚಿನ ಆಟಗಾರ ನ್ಯೂಜಿಲೆಂಡ್ (New Zealand) ಕ್ರಿಕೆಟಿಗ ರಾಸ್ ಟೇಲರ್ (Ross Taylor) ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (S. Jaishankar) ತಿಳಿಸಿದರು.

    ಭಾರತ (India) ಮತ್ತು ನ್ಯೂಜಿಲೆಂಡ್‌ ನಡುವಿನ ಕ್ರಿಕೆಟ್‌ ಬಾಂಧವ್ಯವನ್ನು ಶ್ಲಾಘಿಸಿದ ಅವರು, ನಮಗೆ ನ್ಯೂಜಿಲೆಂಡ್‌ ಎಂದಾಗ ಅನೇಕ ವಿಷಯಗಳು ಮನಸ್ಸಿಗೆ ಬರುತ್ತದೆ. ಆದರೆ ಅದಕ್ಕೆ ಉತ್ತಮ ಉದಾಹರಣೆಯೆಂದರೆ ಕ್ರಿಕೆಟ್‌ (Cricket) ಎಂದು ಹೇಳುತ್ತೇನೆ. ಭಾರತ ಹಾಗೂ ನ್ಯೂಜಿಲೆಂಡ್‌ ದೇಶಗಳು ಕ್ರಿಕೆಟ್‌ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿಯನ್ನು ಹೊಂದಿವೆ ಎಂದು ಹೇಳಿದರು.

    ಭಾರತೀಯರು ಎಂದಿಗೂ ಜಾನ್ ರೈಟ್ ಅವರನ್ನು ಮರೆಯುವುದಿಲ್ಲ ಎಂದ ಅವರು, ಭಾರತೀಯರಿಗೆ ಹೆಚ್ಚು ತಿಳಿದಿರುವ ನ್ಯೂಜಿಲೆಂಡ್ ಆಟಗಾರ ವಿಲಿಯಮ್ಸನ್ ಆಗಿದ್ದಾರೆ. ಅವರು ನಮ್ಮ ದೇಶದ ವಿರುದ್ಧ ಆಡುವುದನ್ನು ಹೊರತು ಪಡಿಸಿ ಹೆಚ್ಚಿನ ಸಮಯ ನಾವು ಅವರನ್ನು ಇಷ್ಟ ಪಡುತ್ತೇವೆ. ಆದರೆ ನನ್ನ ನೆಚ್ಚಿನ ಆಟಗಾರ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಆದರೆ ಅದು ಬೇರೆ ವಿಷಯ ಎಂದು ಈ ವೇಳೆ ತಿಳಿಸಿದರು.

    ಭಾರತದ ಮಾಜಿ ಕೋಚ್‌ ನ್ಯೂಜಿಲೆಂಡ್‌ನ ಜಾನ್‌ ರೈಟ್‌, ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ (CSK) ಮುಖ್ಯ ಕೋಚ್‌ ನೈಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್‌ ಫ್ಲೆಮಿಂಗ್‌ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದರು. ಫ್ಲೆಮಿಂಗ್‌ 2010, 2011, 2018 ಹಾಗೂ 2021ರಲ್ಲಿ CSK ಟೀಂಗೆ ಕೋಚ್‌ ಆಗಿ ಮಾರ್ಗದರ್ಶನ ನೀಡಿದ್ದರು. ಈ ಸಮಯದಲ್ಲಿ ಐಪಿಎಲ್‌ನ ಕಿರೀಟವನ್ನು CSK ತಂಡ ತನ್ನದಾಗಿಸಿಕೊಂಡಿತ್ತು. ಇದರ ಜೊತೆಗೆ ಕಿವೀಸ್‌ನ ನಾಯಕ ವಿಲಿಯಮ್ಸನ್‌ ಸನ್‌ರೈಸರ್ಸ್‌ ಹೈದರಾಬಾದ್‌ನ ಪ್ರಸ್ತುತ ನಾಯಕರಾಗಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ

    ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ತವರಿನ ಅಭಿಮಾನಿಗಳ ಮುಂದೆ ಐಪಿಎಲ್‍ಗೆ (IPL) ನಿವೃತ್ತಿ ಘೋಷಿಸುವುದು ಬಹುತೇಕ ಖಚಿತಗೊಂಡಿದೆ.

    15ನೇ ಆವೃತ್ತಿ ಐಪಿಎಲ್ ಧೋನಿಯ ಕೊನೆಯ ಆವೃತ್ತಿ ಎಂದು ಹೇಳಲಾಗಿತ್ತು. ಆದರೆ ಧೋನಿ ನಾನು 16ನೇ ಆವೃತ್ತಿ ಐಪಿಎಲ್ ಆಡುವುದಾಗಿ ಹೇಳಿದ್ದರು. ಜೊತೆಗೆ ಒಂದು ಮಹತ್ತರವಾದ ಆಸೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಆ ಆಸೆ ನೆರವೇರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 2022ರಲ್ಲಿ ಭಾರತ ಆಡಿದ್ದು 27 ಟಿ20 ಪಂದ್ಯ – ಬುಮ್ರಾ ಆಡಿದ್ದು ಬರೀ 3 ಪಂದ್ಯ!

    ಧೋನಿ ಟೀಂ ಇಂಡಿಯಾ ಬಳಿಕ ಅತೀ ಹೆಚ್ಚು ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಐಪಿಎಲ್ 2008ರಲ್ಲಿ ಆರಂಭವಾದ ಬಳಿಕ ಚೆನ್ನೈ ಪರ ಆಡುತ್ತಿರುವ ಧೋನಿ ವಿಶೇಷವಾದ ಸಂಬಂಧವನ್ನು ಚೆನ್ನೈ ತಂಡ ಮತ್ತು ತಮಿಳುನಾಡಿನ ಜನರೊಂದಿಗೆ ಹೊಂದಿದ್ದಾರೆ. ಹಾಗಾಗಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈ ನಗರದ ಎಂ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಅಚ್ಚು-ಮೆಚ್ಚಿನ ಪ್ರೇಕ್ಷಕರ ಮುಂದೆ ಆಡಿ ನಿವೃತ್ತಿ ಘೋಷಿಸುವ ಆಸೆಯನ್ನು ಧೋನಿ ವ್ಯಕ್ತಪಡಿಸಿದ್ದರು. ನನ್ನ ಕೊನೆಯ ತವರಿನ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ ಇರಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ನಿಜಕ್ಕೂ ಗೊತ್ತಿಲ್ಲ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಓಡೆನ್ ಸ್ಮಿತ್, ಬೇಬಿ ಎಬಿಡಿ ಹೊಡಿಬಡಿ ಆಟ – ತಲಾ ಆರಾರು ಎಸೆತ ಐದೈದು ಸಿಕ್ಸ್ 60 ರನ್‌

    ಇದೀಗ ಧೋನಿ ಆಸೆಯಂತೆ ಅವರ ಕೊನೆಯ ಪಂದ್ಯ ಚೆನ್ನೈನಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ 2023ರ ಐಪಿಎಲ್ ಪಂದ್ಯಗಳು ತವರಿನ ಚರಣದ ಪಂದ್ಯಗಳೊಂದಿಗೆ ನಡೆಯಲಿದೆ ಎಂದು ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿ ಹೊರಬಿದ್ದ ಬಳಿಕ ಧೋನಿ ನಿವೃತ್ತಿ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂಬುದು ಬಹತೇಕ ಖಚಿಗೊಂಡಿದೆ. ಇದು ಧೋನಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.

    2019ರ ಬಳಿಕ ಧೋನಿ ಚೆನ್ನೈನಲ್ಲಿ ಆಡಿಲ್ಲ. ಕೊರೊನಾದಿಂದಾಗಿ (Corona) 2020ರ ಐಪಿಎಲ್ ಯುಎಇನಲ್ಲಿ (UAE) ನಡೆದರೆ, 2021ರ ಐಪಿಎಲ್ ಮೊದಲ ಚರಣ ಭಾರತದಲ್ಲಿ ನಡೆದರೆ, ಎರಡನೇ ಚರಣ ಯುಎಇನಲ್ಲಿ ನಡೆದಿತ್ತು. 2022ರ ಐಪಿಎಲ್ ಮುಂಬೈ ಮತ್ತು ಪುಣೆ ನಗರದಲ್ಲಿ ಮಾತ್ರ ನಡೆದಿತ್ತು. ಇದೀಗ 2023ರ ಐಪಿಎಲ್ ಎಲ್ಲಾ ನಗರದಲ್ಲೂ ನಡೆಯಲಿದ್ದು, ಪ್ರತಿ ತಂಡಗಳಿಗೆ ತವರಿನ ಪಂದ್ಯ ಕೂಡ ಸಿಗಲಿದೆ. ಹಾಗಾಗಿ ಧೋನಿ ಮತ್ತೆ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡುವ ಬಯಕೆ ಈಡೇರಲಿದೆ. ಇದನ್ನೂ ಓದಿ: ಹಸುಗಳನ್ನು ರಕ್ಷಿಸಿ – ಲಂಪಿ ವೈರಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಿಖರ್ ಧವನ್

    ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2008, 2012, 2013, 2015, 2019ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಧೋನಿ ಆರಂಭಿಕ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿರುವುದು ವಿಶೇಷ. ಮಧ್ಯದಲ್ಲಿ ಚೆನ್ನೈ ತಂಡ ಐಪಿಎಲ್‍ನಲ್ಲಿ ಬ್ಯಾನ್ ಆದಾಗ ಮಾತ್ರ ಧೋನಿ ಇತರ ಫ್ರಾಂಚೈಸ್ ಪರ ಆಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಾಕ್ ವಿರುದ್ಧ ಪಂದ್ಯದ ಗೆಲುವಿಗೆ ಧೋನಿ, ಸಿಎಸ್‌ಕೆ ಸ್ಫೂರ್ತಿ: ದಸುನ್ ಶನಕ

    ಪಾಕ್ ವಿರುದ್ಧ ಪಂದ್ಯದ ಗೆಲುವಿಗೆ ಧೋನಿ, ಸಿಎಸ್‌ಕೆ ಸ್ಫೂರ್ತಿ: ದಸುನ್ ಶನಕ

    ದುಬೈ: ಭಾನುವಾರ ದುಬೈನಲ್ಲಿ(Dubai) ನಡೆದ ಏಷ್ಯಾ ಕಪ್ 2022ರ(Asia Cup 2022) ಫೈನಲ್‌ನಲ್ಲಿ ಶ್ರೀಲಂಕಾ(Sri Lanka) ತಂಡ ಪಾಕಿಸ್ತಾನವನ್ನು ಸೋಲಿಸಿತು. ಈ ಗೆಲುವಿಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ(MS Dhoni) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ 2021ರ ಐಪಿಎಲ್ ಗೆಲುವೇ ಸ್ಫೂರ್ತಿ ಎಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ(Dasun Shanaka) ತಿಳಿಸಿದ್ದಾರೆ.

    ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಶನಕ ಬಹಿರಂಗಪಡಿಸಿದ್ದಾರೆ. ಇದೀಗ ನಾವು ಏಷ್ಯಾಕಪ್ ಗೆದ್ದಿದ್ದೇವೆ. ನಮ್ಮ ಈ ಗೆಲುವನ್ನು ನಮ್ಮ ದೇಶಕ್ಕೆ ಅರ್ಪಿಸಲು ಬಯಸುತ್ತೇವೆ ಎಂದು ಶನಕ ಪಂದ್ಯದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

    ಭಾನುವಾರ ಪಾಕಿಸ್ತಾನ ಹಾಗೂ ಶ್ರೀಲಂಕಾದ ನಡುವಿನ 15ನೇ ಆವೃತ್ತಿಯ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿ ಏಷ್ಯಾಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

    ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಯಾರೂ ನಿರೀಕ್ಷೆ ಮಾಡಿರದಂತಹ ಆಟವನ್ನು ಆಡಿ ಕ್ರಿಕೆಟ್ ಪ್ರಿಯರ ಮನಗೆದ್ದಿತು. ಶ್ರೀಲಂಕಾ ನೀಡಿದ 172 ರನ್‌ಗಳ ಟಾರ್ಗೆಟ್ ಅನ್ನು ಹಿಂದಿಕ್ಕಲಾಗದೇ 147 ರನ್‌ಗಳ ಮೂಲಕ ಪಾಕಿಸ್ತಾನ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    ಚೆನ್ನೈ: ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

    2023ರ ಐಪಿಎಲ್‌ ಸರಣಿಗೆ ನಮ್ಮ ತಂಡವನ್ನು ಧೋನಿಯೇ ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ತಂಡ ಸಿಇಒ ಕಾಸಿ ವಿಶ್ವನಾಥನ್‌ ತಿಳಿಸಿದ್ದಾರೆ.

    ಧೋನಿ 2020ರಲ್ಲೇ ಎಲ್ಲ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರೂ ಐಪಿಎಲ್‌ಗೆ ನಿವೃತ್ತಿ ಹೇಳಿಲ್ಲ. ಕಳೆದ ವರ್ಷದ ಐಪಿಎಲ್‌ನಲ್ಲೇ ಧೋನಿ ನಿವೃತ್ತಿ ಹೇಳಬಹುದು ಎಂವ ವದಂತಿ ಹರಡಿತ್ತು. ಆದರೆ ಧೋನಿ ನಿವೃತ್ತಿ ನಿರ್ಧಾರ ಕೈಗೊಂಡಿರಲಿಲ್ಲ.  ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    MS DHONI (2)

    ಕಳೆದ ನವೆಂಬರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನನ್ನ ಕೊನೆಯ ತವರಿನ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ ಇರಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ನಿಜಕ್ಕೂ ಗೊತ್ತಿಲ್ಲ ಎಂದು ಹೇಳಿದ್ದರು.

    ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. 2008, 2012, 2013, 2015, 2019ರಲ್ಲಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು.

    Live Tv
    [brid partner=56869869 player=32851 video=960834 autoplay=true]

  • ಧೋನಿ ಹುಟ್ಟುಹಬ್ಬಕ್ಕಾಗಿ 41 ಅಡಿ ಎತ್ತರದ ಕಟೌಟ್‌ ಹಾಕಿದ ಫ್ಯಾನ್ಸ್

    ಧೋನಿ ಹುಟ್ಟುಹಬ್ಬಕ್ಕಾಗಿ 41 ಅಡಿ ಎತ್ತರದ ಕಟೌಟ್‌ ಹಾಕಿದ ಫ್ಯಾನ್ಸ್

    ಅಮರಾವತಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬಕ್ಕಾಗಿ 41 ಅಡಿ ಎತ್ತರದ ಬೃಹತ್ ಕಟೌಟ್ ಸ್ಥಾಪಿಸುವ ಮೂಲಕ ವಿಜಯವಾಡದ ಅಭಿಮಾನಿಗಳು ಅದ್ದೂರಿಯಾಗಿ ಬರ್ತ್ ಡೇ‌ ಆಚರಿಸಲು ಮುಂದಾಗಿದ್ದಾರೆ.

    ಧೋನಿ ಜುಲೈ 7 ನಾಳೆ 41ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಅಭಿಮಾನಿಗಳು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ವಿಜಯವಾಡದ ಅಭಿಮಾನಿಗಳು 41 ಅಡಿ ಎತ್ತರದ ಕಟೌಟ್‌ನಲ್ಲಿ ಧೋನಿಯ ಹೆಲಿಕಾಪ್ಟರ್ ಶಾಟ್‍ನ ಭಂಗಿ ರಾರಾಜಿಸುತ್ತಿದೆ. ಇದನ್ನೂ ಓದಿ: IND Vs ENG T20 ಸರಣಿ: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ ಭಾರತ

    ಇದೀಗ ಧೋನಿಯ ಈ ಕಟೌಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧೋನಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಇದೀಗ ಐಪಿಎಲ್‍ನಲ್ಲಿ ಮಾತ್ರ ಆಡುತ್ತಿದ್ದಾರೆ. 2022ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಧೋನಿ ಮುಂದಿನ ಆವೃತ್ತಿಯಲ್ಲಿ ಆಟಗಾರನಾಗಿ ಕಾಣಿಸುವುದರಲ್ಲಿ ಅನುಮಾನಗಳಿವೆ. ಆದರೆ ಅಭಿಮಾನಿಗಳು ಮಾತ್ರ ಧೋನಿ ಆಟಗಾರನಾಗಿ ಆಡಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    Live Tv
    [brid partner=56869869 player=32851 video=960834 autoplay=true]

  • ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‍ಪಿಎಲ್) ಆರನೇ ಆವೃತ್ತಿ ಆರಂಭಗೊಂಡಿದ್ದು, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವೆ ಟೂರ್ನಿಯ ಮೊದಲ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ತಂಡದ ಆಟಗಾರ ಎನ್.ಜಗದೀಶನ್ ನೆಲ್ಲೈ ರಾಯಲ್ ಕಿಂಗ್ಸ್ ಬೌಲರ್ ಬಾಬಾ ಅಪರಾಜಿತ್ ಮಂಕಡ್ ಮೂಲಕ ಔಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿ ಅನುಚಿತ ವರ್ತನೆ ತೋರಿದ್ದಾರೆ.

    ಎನ್. ಜಗದೀಶನ್ ಚೆನ್ನೈ ಸೂಪರ್ ಗಿಲ್ಲೀಸ್ ಪರ ಆರಂಭಿಕನಾಗಿ ಕಣಕ್ಕಿಳಿದು 25 ರನ್ (15 ಎಸೆತ, 4 ಬೌಂಡರಿ) ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ದಾಳಿಗಿಳಿದ ಬಾಬಾ ಅಪರಾಜಿತ್ ಮಂಕಡ್ ರನ್ ಔಟ್ ಮೂಲಕ ಜಗದೀಶನ್‍ರನ್ನು ಔಟ್ ಮಾಡಿದರು. ಇದರಿಂದ ತೀವ್ರ ಬೇಸರಕ್ಕೊಳಗಾದ ಜಗದೀಶನ್ ಡಗೌಟ್‍ಗೆ ತೆರಳುವ ಮುನ್ನ ಬೌಲರ್‌ಗೆ ಮಧ್ಯದ ಬೆರಳನ್ನು ತೋರಿಸಿ ಹತಾಶೆಯಿಂದ ಹೊರ ನಡೆದರು. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

    ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಆದರೂ ಮಂಕಡ್ ರನ್ ಔಟ್‍ನಿಂದಾಗಿ ಹತಾಶರಾದ ಜಗದೀಶನ್ ಮೈದಾನದಲ್ಲೇ ದುರ್ವತನೆ ತೋರಿದ್ದಾರೆ. ಈ ವರ್ತನೆಗೆ ಕಂಡ ಕ್ರಿಕೆಟ್ ಪ್ರೇಮಿಗಳು ಕಿಡಿಕಾರುತ್ತಿದ್ದು, ಸಮಾಜಿಕ ಜಾಲತಾಣದಲ್ಲಿ ಜಗದೀಶನ್ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಈ ಪ್ರಸಂಗದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜಗದೀಶನ್, ನಿನ್ನೆಯ ಪಂದ್ಯದಲ್ಲಿ ನನ್ನ ವರ್ತನೆಯಿಂದ ನಿಮಗೆಲ್ಲರಿಗೂ ಬೇಸರವಾಗಿರಬಹುದು. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಯಾವಾಗಲೂ ಕ್ರಿಕೆಟ್‍ಗಾಗಿ ಬದುಕುತ್ತೇನೆ. ನನಗೆ ಕ್ರಿಕೆಟ್ ಮತ್ತು ಆಟಗಾರರ ಮೇಲೆ ಗೌರವವಿದೆ. ಆದರೆ ನಿನ್ನಯ ಪಂದ್ಯದಲ್ಲಿ ನಡೆದ ಆ ಘಟನೆಯಿಂದ ಕೋಪಗೊಂಡು ಈ ರೀತಿ ವರ್ತಿಸಿದ್ದೇನೆ ಕ್ಷಮಿಸಿ ಎಂದು ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

    ಎನ್. ಜಗದೀಶನ್ ಐಪಿಎಲ್‍ನಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದು, 15ನೇ ಆವೃತ್ತಿ ಐಪಿಎಲ್‍ನಲ್ಲಿ ಕೆಲ ಪಂದ್ಯಗಳಲ್ಲಿ ಜಗದೀಶನ್ ಆರಂಭಿಕರಾಗಿ ಕಣಕ್ಕಿಳಿದ್ದಿದ್ದರು.

    ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವಿನ ಟೂರ್ನಿಯ ಮೊದಲ ಪಂದ್ಯವೇ ಸೂಪರ್ ಓವರ್ ರೋಚಕತೆಗೆ ಸಾಕ್ಷಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನೆಲ್ಲೈ ರಾಯಲ್ ಕಿಂಗ್ಸ್ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು. ಬಳಿಕ 185 ರನ್‍ಗಳ ಗುರಿಯನ್ನು ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲಿಸ್ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿ ಮ್ಯಾಚ್ ಟೈ ಮಾಡಿಕೊಂಡಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ವಿರುದ್ಧ ನೆಲ್ಲೈ ರಾಯಲ್ ಕಿಂಗ್ಸ್ ಜಯ ಸಾಧಿಸಿತು.

    Live Tv

  • ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ

    ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ

    ಮುಂಬೈ: ಕೊಹ್ಲಿ, ಗೇಲ್, ಎಬಿಡಿಯಂತಹ ಕೆಲ ಸ್ಟಾರ್ ಆಟಗಾರರಿಗೆ ಐಪಿಎಲ್‍ನಲ್ಲಿ ಒಮ್ಮೆಯೂ ಕಪ್ ಗೆಲ್ಲುವ ಅವಕಾಶ ಸಿಕ್ಕಿಲ್ಲ. ಆದರೆ ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಡೊಮಿನಿಕ್ ಡ್ರೇಕ್ಸ್ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯವಾಡದೇ ಎರಡು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ.

    ಹೌದು ವೆಸ್ಟ್ ಇಂಡೀಸ್ ಲೀಗ್‍ನಲ್ಲಿ ಆಲ್‍ರೌಂಡರ್ ಆಟದ ಮೂಲಕ ಗಮನಸೆಳೆದ ಡೊಮಿನಿಕ್ ಡ್ರೇಕ್ಸ್ ಮೇಲೆ ಇತರ ದೇಶದಲ್ಲಿ ನಡೆಯುವ ಫ್ರಾಂಚೈಸ್ ಲೀಗ್‍ನ ಮಾಲೀಕರು ಕಟ್ಟಿದ್ದರು. ಅದರಂತೆ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ಸ್ಯಾಮ್ ಕರ್ರನ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಾಗ ಸಿಎಸ್‍ಕೆ ತಂಡ ಡೊಮಿನಿಕ್ ಡ್ರೇಕ್ಸ್‌ಗೆ ಮಣೆಹಾಕಿತು. ಆದರೆ ಡ್ರೇಕ್ಸ್ ಚೆನ್ನೈ ಪರ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಿಎಸ್‍ಕೆ ತಂಡ 2021ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿತ್ತು. ಈ ವೇಳೆ ಡ್ರೇಕ್ಸ್ ತಂಡದಲ್ಲಿದ್ದರಿಂದ ಚಾಂಪಿಯನ್ ತಂಡದ ಆಟಗಾರನಾಗಿದ್ದರು. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

    ಆ ಬಳಿಕ ಇದೀಗ ಮುಕ್ತಾಯಗೊಂಡ 15ನೇ ಆವೃತ್ತಿ ಐಪಿಎಲ್‍ನಲ್ಲಿ ಚಾಂಪಿಯನ್ ತಂಡ ಗುಜರಾತ್ ಟೈಟಾನ್ಸ್‌ನಲ್ಲಿ ಡೊಮಿನಿಕ್ ಡ್ರೇಕ್ಸ್ ಇದ್ದರು. ಆದರೆ ಟೈಟಾನ್ಸ್ ಪರ ಕೂಡ ಡ್ರೇಕ್ಸ್‌ಗೆ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ಆದರೆ ತಂಡ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಡ್ರೇಕ್ಸ್ ಸತತ 2 ಐಪಿಎಲ್‍ನಲ್ಲಿ ಟ್ರೋಫಿಗೆದ್ದ ತಂಡದ ಸದಸ್ಯನಾಗಿ ಅದೃಷ್ಟ ಖುಲಾಯಿಸಿದೆ. ಇದನ್ನೂ ಓದಿ: ಹೊಸ ಹೆಜ್ಜೆಯತ್ತ ದಾದಾ – ಗಂಗೂಲಿ ರಾಜಕೀಯ ಪ್ರವೇಶ ಫಿಕ್ಸ್?

    ಇದೀಗ ಡ್ರೇಕ್ಸ್ ಅದೃಷ್ಟದ ಆಟಗಾರ ಎಂಬ ಬಿರುದನ್ನು ಕ್ರಿಕೆಟ್ ಪ್ರೇಮಿಗಳು ನೀಡಿದ್ದು, ಡ್ರೇಕ್ಸ್ ಮಾತ್ರ ಇನ್ನೂ ಕೂಡ ಐಪಿಎಲ್‍ನ ಪದಾರ್ಪಣೆ ಪಂದ್ಯ ಕೂಡ ಆಡದಿರುವುದು ವಿಪರ್ಯಾಸ.

  • ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR

    ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR

    ಮುಂಬೈ: ನ್ಯೂ ಗ್ಲೋಬಲ್ ಇಂಡಿಯಾ ಲಿಮಿಟೆಡ್‌ನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    `ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್’ ನಿಂದ ಪಡೆದ 30 ಲಕ್ಷ ರೂಪಾಯಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿರುವ ಎಸ್‌ಕೆ ಎಂಟರ್‌ಪ್ರೈಸಸ್ ಹೆಸರಿನ ಕಂಪನಿಯು ಬೇಗುಸರಾಯ್‌ನ ಸಿಜೆಎಂ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದೆ. ಅಂದಹಾಗೆ ಎಂಎಸ್ ಧೋನಿ ಈ ಉತ್ಪನ್ನವನ್ನು ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ

    ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪ್ರಕರಣವನ್ನು ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಅಜಯ್ ಕುಮಾರ್ ಮಿಶ್ರಾ ಅವರಿಗೆ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಜೂನ್ 28 ರಂದು ನಡೆಯಲಿದೆ. ಇದನ್ನೂ ಓದಿ: ಹಾಕಿ ಏಷ್ಯಾ ಕಪ್ 2022: ಭಾರತಕ್ಕೆ ಕಂಚಿನ ಪದಕ

    ಏನಿದು ಘಟನೆ?: ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್‌ನಿಂದ 30 ಲಕ್ಷ ರೂ. ಮೌಲ್ಯದ ರಸಗೊಬ್ಬರದ ಆದೇಶವನ್ನು ಎಸ್‌ಕೆ ಎಂಟರ್‌ಪ್ರೈಸ್ ಸ್ವೀಕರಿಸಿತ್ತು. ಅದರಂತೆ ಎಸ್‌ಕೆ ಎಂಟರ್‌ಪ್ರೈಸಸ್ ರಸಗೊಬ್ಬರನ್ನು ನೀಡಿತ್ತು. ಆದರೆ ಡೀಲರ್ ಈ ಹಿಂದಿನ ಒಪ್ಪಂದಕ್ಕೆ ಬದ್ಧವಾಗಿದರ ಕಾರಣ ಸಾಕಷ್ಟು ಉತ್ಪನ್ನಗಳು ಮಾರಾಟವಾಗದೆ ಹಾಗೆಯೇ ಉಳಿದಿದ್ದವು. ನಂತರ ಕಂಪನಿ ಅವುಗಳನ್ನು ಹಿಂದಕ್ಕೆ ಪಡೆದು, ಏಜೆನ್ಸಿ ಮೂಲಕ 30 ಲಕ್ಷ ರೂ. ಚೆಕ್ ಅನ್ನು ನೀಡಿತ್ತು. ಆದರೆ ಚೆಕ್ ಅನ್ನು ಬ್ಯಾಂಕ್‌ಗೆ ಹಾಕಿದ ಬಳಿಕ ಬೌನ್ಸ್ ಆಗಿರುವುದು ಬೆಳಕಿಗೆ ಬಂದಿದೆ.

    IPL 2022 RR VS LSG

    ಈ ಸಂಬಂಧ ಗ್ಲೋಬಲ್ ಇಂಡಿಯಾ ಕಂಪನಿಗೆ ನೋಟಿಸ್ ನೀಡಲಾದರೂ ಯಾವುದೇ ಪ್ರತಿಕ್ರಿಯೆ ಸ್ವೀಕರಿಸದ ಹಿನ್ನೆಲೆಯಲ್ಲಿ ಎಸ್‌ಕೆ ಎಂಟರ್‌ಪ್ರೈಸಸ್‌ನ ಮಾಲೀಕ ನೀರಜ್ ಕುಮಾರ್ ನಿರಾಲಾ ಅವರು ಸಂಬಂಧಿಸಿದ ಉತ್ಪನ್ನವನ್ನು ಪ್ರಚಾರ ಮಾಡಿದ ಎಂ.ಎಸ್.ಧೋನಿ ಮತ್ತು ಇತರ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.