Tag: CSK

  • ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ (MS Dhoni) ಅವರು 10 ವರ್ಷದ ಹಿಂದೆ ಆಲ್‌ರೌಂಡರ್‌ ಆಟಗಾರ ಜಡೇಜಾ (Jadeja) ಅವರನ್ನು ಹೊಗಳಿ ಮಾಡಿದ ಟ್ವೀಟ್‌ (Tweet) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಶನಿವಾರ ನಡೆದ ಪಂದ್ಯದಲ್ಲಿ ಜಡೇಜಾ ಮುಂಬೈ (Mumbai Indians) ತಂಡದ ಬ್ಯಾಟ್ಸ್‌ಮನ್‌ ಕ್ಯಾಮರೂನ್‌ ಗ್ರೀನ್‌ ಅವರನ್ನು ಕ್ಯಾಚ್‌ ಹಿಡಿದು ಔಟ್‌ ಮಾಡಿದ್ದರು.

    ಜಡೇಜಾ ಎಸೆದ ಇನ್ನಿಂಗ್ಸ್‌ನ 9ನೇ ಓವರ್‌ನ ಎರಡನೇ ಎಸೆತವನ್ನು ಬಲವಾಗಿ ಬೌಲರ್‌ ತಲೆಯ ಮೇಲೆ ಬೌಂಡರಿ ಹೊಡೆಯಲು ಗ್ರೀನ್‌ ಯತ್ನಿಸಿದರು.  ಈ ಚೆಂಡಿನಿಂದ ತಪ್ಪಿಸಿಕೊಳ್ಳಲು ಅಂಪೈರ್‌ ಕೆಳಗಡೆ ಬಾಗಿದ್ದರು. ಆದರೆ ಚೆಂಡನ್ನು ಜಡೇಜಾ ಒಂದೇ ಕೈಯಲ್ಲಿ ಹಿಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದನ್ನೂ ಓದಿ: IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

    ತಮ್ಮದೇ ಬೌಲಿಂಗ್‌ನಲ್ಲಿ ಅಸಾಧ್ಯವಾದ ಕ್ಯಾಚ್‌ ಅನ್ನು ಜಡೇಜಾ ಹಿಡಿದ ಬೆನ್ನಲ್ಲೇ ಧೋನಿ ಹಳೇಯ ಟ್ವೀಟ್‌ ವೈರಲ್‌ ಆಗಿದೆ.

    “ಸರ್‌ ಜಡೇಜಾ ಕ್ಯಾಚ್ ತೆಗೆದುಕೊಳ್ಳಲು ಓಡುವುದಿಲ್ಲ. ಆದರೆ ಚೆಂಡು ಅವರನ್ನೇ ಹುಡುಕುತ್ತದೆ ಮತ್ತು ಅವರ ಕೈಗೆ ಬೀಳುತ್ತದೆ” ಎಂದು ಧೋನಿ 2013ರ ಏಪ್ರಿಲ್‌ 9 ರಂದು ಟ್ವೀಟ್‌ ಮಾಡಿದ್ದರು.

    ಮೊದಲು ಬ್ಯಾಟ್‌ ಮಾಡಿದ ಮುಂಬೈ 8 ವಿಕೆಟ್‌ ನಷ್ಟಕ್ಕೆ 157ರನ್‌ ಗಳಿಸಿತ್ತು. ಚೆನ್ನೈ ಅಜಿಂಕ್ಯಾ ರೆಹಾನೆ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 18.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್‌ ಹೊಡೆದು 7 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಜಡೇಜಾ 20 ರನ್‌ ನೀಡಿ 3 ವಿಕೆಟ್‌ ಪಡೆದಿದ್ದರು.

  • IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

    IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಅಜಿಂಕ್ಯ ರಹಾನೆ (Ajinkya Rahane) ಸ್ಫೋಟಕ ಬ್ಯಾಟಿಂಗ್‌, ರವೀಂದ್ರ ಜಡೇಜಾ (Ravindra Jadeja) ಸ್ಪಿನ್‌ ಜಾದು ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಮುಂಬೈ ಇಂಡಿಯನ್ಸ್‌ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 16ನೇ ಐಪಿಎಲ್‌ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು, ತವರಿನಲ್ಲಿ ಸೋತು ಮುಂಬೈ ಮುಖಭಂಗ ಅನುಭವಿಸಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ (Mumbai Indians) ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ 18.1 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ಡಿವೋನ್‌ ಕಾನ್ವೆ 4 ಎಸೆತಗಳಲ್ಲಿ ಯಾವುದೇ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. 2ನೇ ವಿಕೆಟ್‌ಗೆ ಕಣಕ್ಕಿಳಿದ ರಹಾನೆ ಸಿಕ್ಸರ್‌, ಬೌಂಡರಿ ಮಳೆ ಸುರಿಸುತ್ತಾ ಮುಂಬೈ ಬೌಲರ್‌ಗಳನ್ನು ಬೆಂಡೆತ್ತಿದರು. 2ನೇ ವಿಕೆಟ್‌ ಜೊತೆಯಾಟಕ್ಕೆ ರಹಾನೆ, ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಜೋಡಿ 44 ಎಸೆತಗಳಲ್ಲಿ ಭರ್ಜರಿ 82 ರನ್‌ ಗಳಿಸಿತ್ತು. ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದ ರಹಾನೆ 27 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್) ಚಚ್ಚಿ ಔಟಾದರು. ನಂತರ ಬಂದ ಶಿವಂ ದುಬೆ 26 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 28 ರನ್‌ ಗಳಿಸಿದರು.

    ಇನ್ನೂ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಮತ್ತೋರ್ವ ಆರಂಭಿಕ ಋತುರಾಜ್‌ ಗಾಯಕ್ವಾಡ್‌ ಕೊನೆಯವರೆಗೂ ಹೋರಾಡಿ 36 ಎಸೆತಗಳಲ್ಲಿ 40 ರನ್‌ (1 ಸಿಕ್ಸರ್‌, 2 ಬೌಂಡರಿ) ಗಳಿಸಿದರು. ಕೊನೆಯಲ್ಲಿ ಕಣಕ್ಕಿಳಿದ ಅಂಬಟಿ ರಾಯುಡು (Ambati Rayudu) 16 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 20 ರನ್‌ ಚಚ್ಚಿ ಗೆಲುವಿನ ನಗೆ ಬೀರಿದರು.

    ಮುಂಬೈ ಪರ ಜೇಸನ್ ಬೆಹ್ರೆನ್ಡಾರ್ಫ್, ಪಿಯೂಷ್‌ ಚಾವ್ಲಾ ಹಾಗೂ ಕುಮಾರ್‌ ಕಾರ್ತಿಕೇಯ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

    ಮುಂಬೈ ಇಂಡಿಯನ್ಸ್ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಇಶಾನ್ ಕಿಶನ್ (Ishan Kishan) ಉತ್ತಮ ಆರಂಭ ನೀಡಿದರು. ಈ ಜೋಡಿ 4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 38 ರನ್ ಜೊತೆಯಾಟ ನೀಡಿತ್ತು. ನಾಯಕ ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ನಂತರ ಬಂದ ಕ್ಯಾಮೆರೂನ್‌ ಗ್ರೀನ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ಸೂರ್ಯಕುಮಾರ್ ಯಾದವ್ ಕೇವಲ 1 ರನ್ ಗಳಿಸಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು.

    ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ತಿಲಕ್ ವರ್ಮಾ 18 ಎಸೆತಗಳಲ್ಲಿ 22 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅರ್ಷದ್ ಖಾನ್ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದ ಮುಂಬೈಗೆ ಆಘಾತ ಎದುರಾಗಿತ್ತು. ಈ ನಡುವೆ ಟಿಮ್ ಡೇವಿಡ್ 22 ಎಸೆತಗಳಲ್ಲಿ 31 ರನ್ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 5 ರನ್, ಹೃತಿಕ್ ಶೋಕೆನ್ 13 ಎಸೆತಗಳಲ್ಲಿ 3 ಬೌಂಡರಿ ಸಮೇತ 18 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು.

    ಜಡೇಜಾ ಸ್ಪಿನ್‌ ಜಾದು: ಬೌಲಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಿತ್ತರು. ತುಷಾರ್ ದೇಶಪಾಂಡೆ 3 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರೆ, ಸಿಸಾಂಡ ಮಗಲ 4 ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್‌ ಪಡೆದು ಮಿಂಚಿದರು.

  • IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

    IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

    ಮುಂಬೈ: 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಪರ ಮೊದಲ ಪಂದ್ಯವಾಡಿದ ಕ್ರಿಕೆಟಿಗ ಅಜಿಂಕ್ಯ ರಹಾನೆ (Ajinkya Rahane) ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೆಲ ದಿನಗಳ ಹಿಂದೆ ಕಳಪೆ ಬ್ಯಾಟಿಂಗ್‌ನಿಂದ ಟೀಕೆಗೆ ಗುರಿಯಾಗಿದ್ದ ರಹಾನೆ ಇದೀಗ ತಮ್ಮ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟಿದ್ದಾರೆ.

    ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 19 ಎಸೆತಗಳಲ್ಲೇ ಅರ್ಧ ಶತಕ ಸಿಡಿಸುವ ಮೂಲಕ 2023ರ ಐಪಿಎಲ್‌ ಆವೃತ್ತಿಯಲ್ಲಿ ವೇಗದ ಅರ್ಧಶತಕ ಬಾರಿಸಿದ ಮೊದಲಿಗ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

    ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಆರಂಭಿಕ ಆಟಗಾರ ಜೋಸ್‌ ಬಟ್ಲರ್‌ (Jos Buttler) 20 ಎಸೆತಗಳಲ್ಲಿ 50 ರನ್‌ (6 ಬೌಂಡರಿ, 3 ಭರ್ಜರಿ ಸಿಕ್ಸರ್‌) ಚಚ್ಚಿದ್ದರು. ಕಳೆದ ಎರಡು ದಿನಗಳ ಹಿಂದೆಯೂ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ ತಂಡದ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಈ ವರ್ಷದ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ 2ನೇ ಆಟಗಾರ ಹಾಗೂ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು.

    ಇದೀಗ ಅಜಿಂಕ್ಯ ರಹಾನೆ ಕೇವಲ 19 ಎಸೆತಗಳಲ್ಲೇ 50 ರನ್‌ ಸಿಡಿಸಿ ಸಾಧನೆ ಮಾಡಿದ್ದಾರೆ.  ಇದರಲ್ಲಿ 6 ಬೌಂಡರಿ, 3 ಭರ್ಜರಿ ಸಿಕ್ಸರ್‌ ಸೇರಿವೆ. ಈ ಪಂದ್ಯದಲ್ಲಿ ರಹಾನೆ 27 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಇದನ್ನೂ ಓದಿ: IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    ಕೆಲ ದಿನಗಳ ಹಿಂದೆ ರಹಾನೆ ಬ್ಯಾಟಿಂಗ್‌ ಲಯ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದರು. ಇದೇ ಕಾರಣಕ್ಕೆ 2022ರ ಸಾಲಿನಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಯಿಂದಲೂ ರಹಾನೆಗೆ ಭಾರತ ತಂಡದಿಂದ ಕೊಕ್‌ ಕೊಡಲಾಗಿತ್ತು. ಆ ನಂತರ 2022-23ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಮುಂಬೈ ಪರ ಆಡುವ ಮೂಲಕ ಉತ್ತಮ ಕಮ್‌ಬ್ಯಾಕ್‌ ಮಾಡಿದ್ದರು.

  • ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಕೋಲ್ಕತ್ತಾ: 3 ವರ್ಷಗಳ ಬಳಿಕ ಅದ್ಧೂರಿ ಐಪಿಎಲ್‌ (IPL 2023) ಆವೃತ್ತಿ ಆರಂಭಗೊಂಡಿದ್ದು, ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಸಂಭ್ರಮ ಹೆಚ್ಚಾಗಿದೆ. ಪ್ರತಿ ಪಂದ್ಯದಲ್ಲೂ ಕ್ರಿಕೆಟಿಗರು ಒಂದಿಲ್ಲೊಂದು ದಾಖಲೆ ಬರೆಯುತ್ತಿದ್ದು, ಐತಿಹಾಸಿಕ ಗೆಲುವಿನ ದಾಖಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬ್ಯಾಟರ್‌ಗಳು ಗ್ರೌಂಡ್‌ನಲ್ಲಿ ನಿಂತು ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಿದ್ದರೆ, ಇತ್ತ‌ ವಿಶೇಷ ವೇದಿಕೆಯಲ್ಲಿ ಮಿರಿಮಿರಿ ಮಿಂಚುವ ಉಡುಗೆಯಲ್ಲಿ ಹೆಜ್ಜೆ ಹಾಕುತ್ತಾ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದಾರೆ ಚಿಯರ್‌ ಗರ್ಲ್ಸ್‌ (Cheer Girls) ಅಥವಾ ಚಿಯರ್‌ ಲೀಡರ್ಸ್‌.

    ಕಳೆದ 3 ವರ್ಷಗಳಿಂದ ಐಪಿಎಲ್‌ ನಡೆದರೂ ಕೋವಿಡ್‌ ಕಾರಣದಿಂದಾಗಿ ಚಿಯರ್‌ಗರ್ಲ್ಸ್‌ ತಂಡಕ್ಕೆ ಕಡಿವಾಣ ಹಾಕಲಾಗಿತ್ತು. ಇದರಿಂದ ಪ್ರೇಕ್ಷಕರ ಕೊರತೆ ಎದುರಾಗಿತ್ತು. ಆದರೀಗ ಅದ್ಧೂರಿ ಐಪಿಎಲ್ ‌ಆವೃತ್ತಿಯಲ್ಲಿ ಚಿಯರ್‌ ಗರ್ಲ್ಸ್‌ ಕಮಾಲ್‌ ಜೋರಾಗಿಯೇ ನಡೆದಿದೆ. ಕಡಿಮೆ ಬಟ್ಟೆ, ಹುರುಪಿನ ಕುಣಿತ ಮುಂತಾದವುಗಳಿಂದ ಪ್ರೇಕ್ಷಕರನ್ನ ತಮ್ಮತ್ತ ಸೆಳೆಯುತ್ತಿದ್ದಾರೆ. ಎಷ್ಟೋ ಕ್ರಿಕೆಟ್‌ ಅಭಿಮಾನಿಗಳು ಐಪಿಎಲ್ ಕ್ರೀಡಾಂಗಣದಲ್ಲಿ ಇವರ ಕುಣಿತ ನೋಡಲೆಂದೇ ನೆರೆಯುತ್ತಿದ್ದಾರೆ. ಆದರೆ ಈ ಚಿಯರ್‌ ಗರ್ಲ್ಸ್‌ಗಳಿಗೆ ನೀಡುವ ಸಂಭಾವನೆ ಕಡಿಮೆಯೇನಿಲ್ಲ ಬಿಡಿ. ಇದನ್ನೂ ಓದಿ: IPL 2023 – ಚಿಯರ್‌ ಗರ್ಲ್ಸ್‌ ಝಲಕ್‌ ನೋಡಿ

    ಹಿಂದೆಲ್ಲ ಚಿಯರ್‌ ಲೀಡರ್ಸ್‌ ತಂಡದಲ್ಲಿ ವಿದೇಶಿಗರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಪ್ರತಿ ಪಂದ್ಯಕ್ಕೆ ಸುಮಾರು 3 ಸಾವಿರ ರೂ. ನೀಡಲಾಗುತ್ತಿತ್ತು. ಈಗ ಭಾರತೀಯರೂ ಕಾಣಿಸಿಕೊಳ್ಳುತ್ತಿದ್ದು, ದುಬಾರಿ ಬೆಲೆ ಪಾವತಿಸಬೇಕಿದೆ. ಇದನ್ನೂ ಓದಿ: IPL 2023: ಬ್ಯೂಸಿ ಶೆಡ್ಯೂಲ್‌ನಲ್ಲೂ ತವರಿನಲ್ಲಿ ಐಪಿಎಲ್ ವೀಕ್ಷಿಸಿದ ಬಾಲಿವುಡ್ ಬಾದ್ ಷಾ

    ಚಿಯರ್‌ ಗರ್ಲ್ಸ್‌ಗೆ ಸಂಭಾವನೆ ಎಷ್ಟು?
    ಚೀಯರ್‌ ಗರ್ಲ್ಸ್‌ 16ನೇ ಐಪಿಎಲ್‌ ಆವೃತ್ತಿಯಲ್ಲಿ 14 ರಿಂದ 17 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಕಿಂಗ್ಸ್‌ ಪಂಜಾಬ್‌ (PBKS), ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals), ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳು ತಮ್ಮ ಚಿಯರ್‌ ಗರ್ಲ್ಸ್‌ಗೆ ಪ್ರತಿ ಪಂದ್ಯಕ್ಕೆ 12 ಸಾವಿರ ರೂ. ಪಾವತಿಸಿದರೆ, ಮುಂಬೈ ಇಂಡಿಯನ್ಸ್‌ ಹಾಗೂ ಆರ್‌ಸಿಬಿ ತಂಡಗಳು ಸುಮಾರು 20 ಸಾವಿರ ರೂ. ಪಾವತಿಸುತ್ತಾರೆ. ಆದ್ರೆ ಕೆಕೆರ್‌ ತಂಡವು 24 ಸಾವಿರ ರೂ. ಪಾವತಿಸುತ್ತಿದ್ದು, ಅತಿಹೆಚ್ಚು ಸಂಭಾವನೆ ಪಾವತಿಸುವ ತಂಡವಾಗಿದೆ. ಪ್ರತಿ ತಂಡ ಲೀಗ್‌ನಲ್ಲಿ 14 ಪಂದ್ಯಗಳನ್ನು ಆಡುವುದರಿಂದ ಚಿಯರ್‌ ಗರ್ಲ್ಸ್‌ ಒಬ್ಬರಿಗೇ ಸುಮಾರು 2 ರಿಂದ 5 ಲಕ್ಷದಷ್ಟು ಹಣ ಪಾವತಿಸಬೇಕಾಗುತ್ತೆ. ಅಷ್ಟೇ ಅಲ್ಲದೇ ಭರ್ಜರಿ ಡಾನ್ಸ್‌ ಪ್ರದರ್ಶನ ನೀಡಿದವರಿಗೆ ಬೋನಸ್‌ ನೀಡಲಾಗುತ್ತೆ. ಜೊತೆಗೆ ಗೆದ್ದ ತಂಡಗಳಿಂದ ಐಷಾರಾಮಿ ಉಡುಗೊರೆಗಳೂ ಸಿಗುತ್ತೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಚಿಯರ್‌ ಗರ್ಲ್ಸ್‌ ಆಯ್ಕೆ ಹೇಗೆ?
    ಸಾಮಾನ್ಯವಾಗಿ ಚಿಯರ್‌ ಗರ್ಲ್ಸ್‌ ಆಗಿ ಆಯ್ಕೆಯಾಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಪ್ರತ್ಯೇಕ ಸಂದರ್ಶನಗಳನ್ನ ನಡೆಸಿ, ಮೌಲ್ಯಮಾಪನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಚಿಯರ್‌ ಗರ್ಲ್ಸ್‌ ಆಗಬೇಕೆನ್ನುವವರು ನೃತ್ಯ, ಮಾಡೆಲಿಂಗ್‌ ಜೊತೆಗೆ ಬಾರೀ ಪ್ರೇಕ್ಷಕರ ಮುಂದೆ ಡಾನ್ಸ್‌ ಮಾಡಿದ ಅನುಭವ ಹೊಂದಿರಬೇಕಾಗುತ್ತದೆ.

  • IPL 2023: ಈ ಬಾರಿ ಹೊಸ ರೂಲ್ಸ್‌ಗಳೇನು ಗೊತ್ತಾ? – ಫ್ಯಾನ್ಸ್‌ ತಿಳಿಯಲೇಬೇಕಾದ ಸಂಗತಿಗಳಿವು

    IPL 2023: ಈ ಬಾರಿ ಹೊಸ ರೂಲ್ಸ್‌ಗಳೇನು ಗೊತ್ತಾ? – ಫ್ಯಾನ್ಸ್‌ ತಿಳಿಯಲೇಬೇಕಾದ ಸಂಗತಿಗಳಿವು

    ಮುಂಬೈ: 16ನೇ ಆವೃತ್ತಿಯ ಅದ್ಧೂರಿ ಐಪಿಎಲ್‌ (IPL 2023) ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅದ್ಧೂರಿ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಭರ್ಜರಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

    ಮೇ 28ರ ವರೆಗೆ ನಡೆಯಲಿರುವ ಐಪಿಎಲ್‌ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳನ್ನ ತರಲಾಗಿದೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    1. ಟಾಸ್ ಬಳಿಕ ಪ್ಲೇಯಿಂಗ್-11 ಬದಲಾವಣೆ:
    ಐಪಿಎಲ್ ಮಂಡಳಿಯ ನೂತನ ನಿಯಮದ ಪ್ರಕಾರ ಟಾಸ್ ಪ್ರಕ್ರಿಯೆ ನಂತರವೂ ಕ್ಯಾಪ್ಟನ್​ಗಳು ತಮ್ಮ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡಬಹುದು. ಈ ಮೊದಲು ಟಾಸ್​ಗೂ ಮುನ್ನ ಉಭಯ ತಂಡಗಳ ನಾಯಕರು ಪ್ಲೇಯಿಂಗ್-11 ಪಟ್ಟಿ ಸಲ್ಲಿಸಬೇಕಿತ್ತು. ಈ ಬಾರಿ ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಇದನ್ನೂ ಓದಿ: IPL 2023: ಧೋನಿಗೆ ಮೊಣಕಾಲು ಗಾಯ – ಆರಂಭಿಕ ಪಂದ್ಯ ಆಡುವುದು ಡೌಟ್‌

    2. ಇಂಪ್ಯಾಕ್ಟ್ ಪ್ಲೇಯರ್:
    ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದು. ಹೊಸ ನಿಯಮದ ಪ್ರಕಾರ, ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಬೌಲರ್, ಬ್ಯಾಟ್ಸ್‌ಮ್ಯಾನ್‌ ಅಥವಾ ಫೀಲ್ಡಿಂಗ್‌ಗೆ ಆಟಗಾರರನ್ನ ಬದಲಾವಣೆ ಮಾಡಬಹುದು. ಆದರೆ ಕ್ಯಾಪ್ಟನ್‌ಗಳಾಗಿ ತಂಡವನ್ನು ಮುನ್ನಡೆಸಲು ಆಗುವುದಿಲ್ಲ.

    3. ವೈಡ್-ನೋ ಬಾಲ್​ಗೆ ಡಿಆರ್‌ಎಸ್‌:
    ಇದೇ ಮೊದಲ ಬಾರಿಗೆ ವೈಡ್ ಮತ್ತು ನೋ ಬಾಲ್‌ಗೆ ನಿರ್ಧಾರ ಪರಿಶೀಲಿಸುವ ಡಿಆರ್‌ಎಸ್‌ (DRS) ನಿಯಮ ಜಾರಿಗೆ ತರಲಾಗಿದೆ. ಈ ಹಿಂದೆ ಕೇವಲ ಅಂಪೈರ್ ನೀಡಿದ ಔಟ್ ನಿರ್ಣಯದ ವಿರುದ್ಧ ಡಿಆರ್​ಎಸ್​ ತೆಗದುಕೊಳ್ಳಲಾಗುತ್ತಿತ್ತು. ಆದರೆ ಈಗ ವೈಡ್‌ ಮತ್ತು ನೋ ಬಾಲ್‌ ನಿರ್ಧಾರದ ವಿರುದ್ಧವೂ ಡಿಆರ್​ಎಸ್ ತೆಗೆದುಕೊಳ್ಳಬಹುದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ವೈಡ್‌ಗೆ ಡಿಆರ್‌ಎಸ್‌ ಮೊರೆ ಹೋಗುವ ನಿಯಮ ಬಳಸಲಾಗಿತ್ತು.

    4. ಆಟಗಾರರ ಅನಗತ್ಯ ಬದಲಾವಣೆಗೆ ಬ್ರೇಕ್‌:
    ಐಪಿಎಲ್​ನಲ್ಲಿ ಬೌಲಿಂಗ್​ ಮಾಡುವ ವೇಳೆ ಬ್ಯಾಟ್ಸ್‌ಮ್ಯಾನ್‌ ಬಾಲ್‌ ಹೊಡೆಯುವುದಕ್ಕೂ ಮುನ್ನ ವಿಕೆಟ್ ಕೀಪರ್ ಅಥವಾ ಫೀಲ್ಡರ್​ ತಮ್ಮ ಸ್ಥಾನ ಬದಲಾವಣೆ ಮಾಡುವುದು ಕಂಡು ಬಂದರೆ ಪೆನಾಲ್ಟಿ ಕೂಡ ಹಾಕಲಾಗುತ್ತದೆ.

    5. ನಿಧಾನಗತಿಯ ಬೌಲಿಂಗ್‌ ಮಾಡಿದ್ರೆ ಪೆನಾಲ್ಟಿ:
    ಐಪಿಎಲ್‌ನಲ್ಲಿ ಒಂದು ಪಂದ್ಯಕ್ಕೆ 3 ಗಂಟೆ ಸಮಯ ನಿಗದಿಯಾಗಿರುತ್ತದೆ. ಹಾಗಾಗಿ ಪ್ರತಿ ತಂಡ 90 ನಿಮಿಷಗಳ ಒಳಗೆ 20 ಓವರ್​ಗಳ ಕೋಟಾ ಮುಗಿಸಬೇಕಿರುತ್ತದೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಲ್ಲಿ, ಪ್ರತಿ ಓವರ್‌ನಲ್ಲಿ ಹೆಚ್ಚುವರಿ ಆಟಗಾರರನ್ನು 30 ಯಾರ್ಡ್‌ ವೃತ್ತದೊಳಗೆ ಇರಿಸಬೇಕಾಗುತ್ತದೆ. ಇದು ಎದುರಾಳಿ ತಂಡ ಮತ್ತಷ್ಟು ರನ್‌ ಗಳಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

  • ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಮುಂಬೈ: ಕ್ರಿಕೆಟ್‌ (Cricket) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರತಿಷ್ಠಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2023) ಟೂರ್ನಿಯು ಮಾರ್ಚ್‌ 31 ರಿಂದ ಆರಂಭಗೊಳ್ಳಲಿದ್ದು, ಕಳೆದ ಆವೃತ್ತಿಯಂತೆ ಈ ಬಾರಿಯೂ ಒಟ್ಟು 10 ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾದಾಟ ನಡೆಸಲಿವೆ.

    ಮಾರ್ಚ್‌ 31 ರಿಂದ ಮೇ 21ರ ವರೆಗೆ ಲೀಗ್‌ ಹಂತದಲ್ಲಿ 18 ಡಬಲ್ ಹೆಡರ್ ಸೇರಿ ಒಟ್ಟು 70 ಲೀಗ್‌ ಪಂದ್ಯಗಳು ನಡೆಯಲಿವೆ. ಕೊನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ನಾಲ್ಕು ತಂಡಗಳು ಪ್ಲೇ ಆಫ್‌ ಪ್ರವೇಶಿಸಲಿವೆ. ಇದನ್ನೂ ಓದಿ: ʻಈ ಸಲ ಕಪ್‌ ನಮ್ದೆʼ – RCB ಅಭಿಮಾನಿಗಳನ್ನ ಹಾಡಿ ಹೊಗಳಿದ ಎಬಿಡಿ

    ಐಪಿಎಲ್‌ 2023 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡಗಳು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಮೇ 23-26ರ ವರೆಗೆ ಪ್ಲೇ-ಆಫ್‌ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

    ಎಲ್ಲೆಲ್ಲಿ ಪಂದ್ಯಗಳು ?
    ಈ ಬಾರಿ ಅಹಮದಾಬಾದ್, ಮೊಹಾಲಿ, ಲಖನೌ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ ಮತ್ತು ಧರ್ಮಶಾಲಾ ಸ್ಟೇಡಿಯಂ ಸೇರಿದಂತೆ ಒಟ್ಟು ದೇಶದ 12 ಸ್ಟೇಡಿಯಂಗಳಲ್ಲಿ ಐಪಿಎಲ್‌ ಟೂರ್ನಿ ನಡೆಯಲಿದೆ.

    ಐಪಿಎಲ್‌ ತಂಡಗಳ ಪ್ಲೇಯಿಂಗ್ – 11 ಹೀಗಿದೆ:

    1. ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB): ಫಫ್ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಮಹಿಪಾಲ್‌ ಲೊಮ್ರೋರ್‌, ದಿನೇಶ್‌ ಕಾರ್ತಿಕ್‌ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್‌, ವಾನಿಂದು ಹಸರಂಗ, ಹರ್ಷಲ್‌ ಪಟೇಲ್‌, ಜಾಶ್‌ ಹೇಝಲ್‌ವುಡ್‌, ಮೊಹಮ್ಮದ್‌ ಸಿರಾಜ್‌.

    2. ಸನ್‌ರೈಸರ್ಸ್‌ ಹೈದರಾಬಾದ್‌ (SRH): ಮಯಾಂಕ್‌ ಅಗರ್ವಾಲ್‌, ಅಭಿಷೇಕ್‌ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್‌ ಮಾರ್ಕ್ರಮ್‌ (ನಾಯಕ), ಹ್ಯಾರಿ ಬ್ರೂಕ್, ಗ್ಲೇನ್‌ ಫಿಲಿಪ್ಸ್, ಮಾರ್ಕೊ ಯೆನ್ಸನ್‌, ವಾಷಿಂಗ್ಟನ್‌ ಸುಂದರ್‌, ಟಿ. ನಟರಾಜನ್, ಭುವನೇಶ್ವರ್‌ ಕುಮಾರ್‌, ಉಮ್ರಾನ್ ಮಲಿಕ್‌.

    3. ರಾಜಸ್ಥಾನ್ ರಾಯಲ್ಸ್‌ (RR): ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌ (ನಾಯಕ), ದೇವದತ್‌ ಪಡಿಕ್ಕಲ್‌, ರಿಯಾನ್‌ ಪರಾಗ್‌, ಶಿಮ್ರಾನ್‌ ಹೆಟ್ಮಾಯರ್‌, ಜೇಸನ್‌ ಹೋಲ್ಡರ್‌, ಆರ್‌.ಅಶ್ವಿನ್‌, ಟ್ರೆಂಟ್‌ ಬೋಲ್ಟ್‌, ಕುಲ್‌ದೀಪ್‌ ಸೇನ್‌, ಯುಜುವೇಂದ್ರ ಚಾಹಲ್‌.

    4. ಡೆಲ್ಲಿ ಕ್ಯಾಪಿಟಲ್ಸ್‌ (DC): ಡೇವಿಡ್‌ ವಾರ್ನರ್‌ (ನಾಯಕ), ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌, ಮನೀಷ್‌ ಪಾಂಡೆ, ಸರ್ಫರಾಝ್ ಖಾನ್‌, ರೊವ್ಮನ್‌ ಪೊವೆಲ್‌, ಅಕ್ಷರ್ ಪಟೇಲ್‌, ಲಲಿತ್‌ ಯಾದವ್‌, ಏನ್ರಿಕ್‌ ನೊರ್ಕಿಯಾ, ಕುಲ್‌ದೀಪ್‌ ಯಾದವ್‌, ಖಲೀಲ್‌ ಅಹ್ಮದ್‌.

    5. ಲಖನೌ ಸೂಪರ್ ಜೈಂಟ್ಸ್‌ (LSG): ಕೆ.ಎಲ್‌ ರಾಹುಲ್‌ (ನಾಯಕ), ಕ್ವಿಂಟನ್‌ ಡಿ ಕಾಕ್‌, ದೀಪಕ್‌ ಹೂಡ, ಮನನ್‌ ವೋಹ್ರ, ನಿಕೋಲಸ್‌ ಪೂರನ್, ಮಾರ್ಕಸ್‌ ಸ್ಟೋಯ್ನಿಸ್‌, ಕೃಣಾಲ್ ಪಾಂಡ್ಯ, ರವಿ ಬಿಷ್ಣೋಯ್‌, ಜಯದೇವ್‌ ಉನಾದ್ಕಟ್‌, ಆವೇಶ್‌ ಖಾನ್‌, ಮಾರ್ಕ್‌ವುಡ್‌

    6. ಕೋಲ್ಕತಾ ನೈಟ್‌ ರೈಡರ್ಸ್(KKR): ವೆಂಕಟೇಶ್‌ ಅಯ್ಯರ್‌, ರೆಹಮಾನುಲ್ಹಾ ಗರ್ಬಾಝ್‌, ಎನ್‌. ಜಗದೀಸನ್, ನಿತೀಶ್‌ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್‌, ಶಾರ್ದುಲ್‌ ಠಾಕೂರ್‌, ಸುನೀಲ್‌ ನರೇನ್, ಉಮೇಶ್‌ ಯಾದವ್‌, ವರುಣ್‌ ಚಕ್ರವರ್ತಿ, ಲಾಕಿ ಫರ್ಗ್ಯೂಸನ್‌.

    7. ಪಂಜಾಬ್‌ ಕಿಂಗ್ಸ್(PBKS): ಶಿಖರ್‌ ಧವನ್‌ (ನಾಯಕ), ಪ್ರಭಾಸಿಮ್ರಾನ್‌ ಸಿಂಗ್‌, ಭಾನುಕ ರಾಜಪಕ್ಷ, ಲಿಯಾಮ್ ಲಿವಿಂಗ್‌ಸ್ಟೋನ್‌, ಶಾರುಖ್‌ ಖಾನ್‌, ಜಿತೇಸ್‌ ಶರ್ಮಾ, ಸ್ಯಾಮ್ ಕರನ್‌, ಕಗಿಸೊ ರಬಾಡ, ರಾಹುಲ್‌ ಚಹಾರ್‌, ಅರ್ಷ್‌ದೀಪ್‌ ಸಿಂಗ್‌, ವಿದ್ವತ್‌ ಕಾವೇರಪ್ಪ.

    8. ಗುಜರಾತ್‌ ಟೈಟಾನ್ಸ್‌ (GT): ಶುಭಮನ್ ಗಿಲ್‌, ವೃದ್ದಿಮಾನ್ ಸಹಾ, ಕೇನ್ ವಿಲಿಯಮ್ಸನ್‌, ಹಾರ್ದಿಕ್ ಪಾಂಡ್ಯ, ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್‌, ಶಿವಂ ಮಾವಿ, ಅಲ್ಝಾರಿ ಜೋಸೆಫ್‌, ಮೊಹಮ್ಮದ್‌ ಶಮಿ, ಯಶ್‌ ದಯಾಳ್‌.

    9. ಚೆನ್ನೈ ಸೂಪರ್‌ ಕಿಂಗ್ಸ್ (CSK): ಋತುರಾಜ್‌ ಗಾಯಕ್ವಾಡ್‌, ಬೆನ್‌ ಸ್ಟೋಕ್ಸ್‌, ಮೊಯೀನ್‌ ಅಲಿ, ಶಿವಂ ದುಬೆ, ಅಂಬಾಟಿ ರಾಯುಡು, ಎಂ.ಎಸ್‌ ಧೋನಿ (ನಾಯಕ), ರವೀಂದ್ರ ಜಡೇಜಾ, ಮಿಚೆಲ್‌ ಸ್ಯಾಂಟ್ನರ್‌, ದೀಪಕ್‌ ಚಹರ್‌, ಸಿಮ್ರಾನ್‌ಜೀತ್‌ ಸಿಂಗ್‌, ಮಹೇಶ್‌ ತೀಕ್ಷಣ

    10. ಮುಂಬೈ ಇಂಡಿಯನ್ಸ್‌(MI): ಇಶಾನ್‌ ಕಿಶನ್‌, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಕ್ಯಾಮರೂನ್‌ ಗ್ರೀನ್‌, ಟಿಮ್‌ ಡೇವಿಡ್‌, ಹೃತಿಕ್‌ ಶೋಕಿನ್, ಜೋಫ್ರಾ ಆರ್ಚರ್‌, ಕುಮಾರ ಕಾರ್ತಿಕೇಯ, ಜೆಸನ್‌ ಬೆಹ್ರನ್‌ಡ್ರಾಫ್‌, ಅರ್ಷದ್‌ ಖಾನ್‌.

  • ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

    ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

    ಚೆನ್ನೈ: ಮಾರ್ಚ್ 31 ರಿಂದ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭವಾಗುತ್ತಿದ್ದು, ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ.

    ಈಗಾಗಲೇ ಫ್ರಾಂಚೈಸಿಗಳು ತಮ್ಮ ತವರಿನಲ್ಲಿ ಅಭ್ಯಾಸ ಆರಂಭಿಸಿವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    ಸೋಮವಾರ ಸಂಜೆ ನಡೆದ ಅಭ್ಯಾಸ ಪಂದ್ಯದ ವೇಳೆ 41 ವರ್ಷ ವಯಸ್ಸಿನ ಎಂ.ಎಸ್‌ ಧೋನಿ (MS Dhoni) ಚಿರ ಯುವಕನಂತೆ ಸಿಕ್ಸರ್‌ಗಳ ಸುರಿಮಳೆ ಸುರಿಸಿದ್ದಾರೆ. ಇದನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಧೋನಿ ಸಿಕ್ಸರ್‌ ಬಾರಿಸುತ್ತಿರುವ ವೀಡಿಯೋ ತುಣುಕನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ಧೋನಿ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಈವೆರೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಐಪಿಎಲ್‌ನಲ್ಲಿ 4 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಪ್ಲೆ ಆಫ್‌ನಿಂದ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹಲವು ಆಟಗಾರರ ಬದಲಾವಣೆಯೊಂದಿಗೆ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. 16.25 ಕೋಟಿ ರೂ. ದುಬಾರಿ ಬೆಲೆಗೆ ಬಿಕರಿಯಾದ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಸಹ ಸಿಎಸ್‌ಕೆ ತಂಡದಲ್ಲಿದ್ದು, ಆನೆಬಲ ಬಂದಂತಾಗಿದೆ.

    ಅಲ್ಲದೇ ಈಗಾಗಲೇ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗಳಲ್ಲಿ ನಿವೃತ್ತಿಯಾಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ ಈ ಬಾರಿ ಕೊನೆಯ ಐಪಿಎಲ್ ಆಡಲಿದ್ದಾರೆ. ಆದ್ದರಿಂದ ಚೆನ್ನೈ ತಂಡ ಮಾಹಿಗೆ ಗೆಲುವಿನ ವಿದಾಯ ನೀಡಲು ಕಪ್ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿದೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇಯಿಂಗ್-11:
    ಎಂ.ಎಸ್.ಧೋನಿ (ನಾಯಕ), ಡಿವೋನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಮ್ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಮಹೇಶ್ ತೀಕ್ಷಣ ಹಾಗೂ ಮುಖೇಶ್ ಛೌಧರಿ.

    ಟೂರ್ನಿಗೆ ಸಿಎಸ್‌ಕೆ ತಂಡ: 
    ಎಂ.ಎಸ್ ಧೋನಿ (ನಾಯಕ), ಡಿವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಮುಖರ್ ದೇಶ್‌ಗಾವ್, ತುಷಾರ್ ದೇಶ್‌ಗಾವ್, ತುಷಾರ್ ದೇಶ್‌ಗಾವ್, , ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಶೇಕ್ ರಶೀದ್, ನಿಶಾಂತ್ ಸಿಧು, ಅಜಯ್ ಮಂಡಲ್, ಸಿಸಂದ ಮಗಳ.

  • ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಮುಂಬೈ: ಭಾರತೀಯ ಕ್ರಿಕೆಟಿಗ (Indian Cricketer) ಕೇದಾರ್‌ ಜಾಧವ್‌ (Kedar Jadhav) ಅವರ ತಂದೆ ನಾಪತ್ತೆಯಾಗಿದ್ದಾರೆ ಎಂದು ಜಾಧವ್‌ ಸೋಮವಾರ ಪುಣೆಯ (Pune) ಅಲಂಕಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 75 ವರ್ಷದ ಮಹದೇವ್ ಸೋಪಾನ್ ಜಾಧವ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಮೂಲಗಳ ಪ್ರಕಾರ, ಕೇದಾರ್ ಜಾಧವ್‌ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರುಡ್ ಪ್ರದೇಶದ ನಿವಾಸಿಗಳು. ಮಹದೇವ್‌ ಸೋಮವಾರ ಮನೆಯವರಿಗೆ ತಿಳಿಸದೇ ಹೊರಗಡೆ ಹೋಗಿದ್ದಾರೆ. ಬಹಳ ಹೊತ್ತಾದರೂ ಮನೆಗೆ ಹಿಂದಿರುಗಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸಂಜೆವರೆಗೂ ಹುಡುಕಾಡಿದರೂ ಸಿಗದಿದ್ದಾಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಆರಂಭಿಸಿದ್ದು, ಇತರ ಪೊಲೀಸ್‌ ಠಾಣೆಗೂ ಜಾಧವ್‌ ಅವರ ತಂದೆ ಫೋಟೋವನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

  • IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    ಬೆಂಗಳೂರು: ಮಾರ್ಚ್ 31 ರಿಂದ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭವಾಗುತ್ತಿದ್ದು, ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (GT) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ.

    ಐಪಿಎಲ್ ಆರಂಭಕ್ಕೆ ದಿನಗಣನೆ ಬಾಕಿಯಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (BCB) ತಂಡಗಳು ಬಲಿಷ್ಠ ತಂಡದ ಪಟ್ಟಿಯನ್ನ ಬಿಡುಗಡೆ ಮಾಡಿವೆ. ಇದನ್ನೂ ಓದಿ: IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯವರ (Virat Kohli) ಅದ್ಭುತ ಫಾರ್ಮ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯುತ್ತಿದೆ. ಇಲ್ಲಿಯವರೆಗೂ ಬೆಂಗಳೂರು ಮೂಲದ ತಂಡ ಐಪಿಎಲ್ ಟೂರ್ನಿಯಲ್ಲಿ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಆದ್ದರಿಂದ ಈ ಬಾರಿ ತನ್ನ ಪ್ರಶಸ್ತಿ ಗೆಲುವಿನ ಬರ ನೀಗಿಸಿಕೊಳ್ಳಲಿದೆಯೇ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    2022ರ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿತ್ತು. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ವಿರುದ್ಧ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಸೋತು ನಿರಾಶೆ ಅನುಭವಿಸಿತ್ತು.

    ಕಳೆದ ಬಾರಿ ಪ್ಲೆ ಆಫ್‌ನಿಂದ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹಲವು ಆಟಗಾರರ ಬದಲಾವಣೆಯೊಂದಿಗೆ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. 16.25 ಕೋಟಿ ರೂ. ದುಬಾರಿ ಬೆಲೆಗೆ ಬಿಕರಿಯಾದ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಸಹ ಸಿಎಸ್‌ಕೆ ತಂಡಲ್ಲಿದ್ದು, ಆನೆಬಲ ಬಂದಂತಾಗಿದೆ.

    ಅಲ್ಲದೇ ಈಗಾಗಲೇ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗಳಲ್ಲಿ ನಿವೃತ್ತಿಯಾಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ (MS Dhoni) ಈ ಬಾರಿ ಕೊನೆಯ ಐಪಿಎಲ್ ಆಡಲಿದ್ದಾರೆ. ಆದ್ದರಿಂದ ಚೆನ್ನೈ ತಂಡ ಮಾಹಿಗೆ ಗೆಲುವಿನ ವಿದಾಯ ನೀಡಲು ಕಪ್ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿದೆ.

    ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ -11:
    ಫಾಫ್ ಡು ಪ್ಲೆಸಿಸ್ (ನಾಯಕ, ಓಪನರ್) ವಿರಾಟ್ ಕೊಹ್ಲಿ (ಓಪನರ್), ರಜತ್ ಪಾಟಿದಾರ್ (ಬ್ಯಾಟ್ಸ್ಮನ್), ಗ್ಲೆನ್ ಮ್ಯಾಕ್ಸ್ವೆಲ್ (ಆಲ್‌ರೌಂಡರ್), ಮಹಿಪಾಲ್ ಲೊಮ್ರೋರ್ (ಬ್ಯಾಟ್ಸ್ಮನ್), ದಿನೇಶ್ ಕಾರ್ತಿಕ್ (ವಿ.ಕೀ), ಶಹಬಾಝ್ ಅಹ್ಮದ್ (ಆಲ್‌ರೌಂಡರ್), ವಾನಿಂದು ಹಸರಂಗ (ಆಲ್‌ರೌಂಡರ್), ಹರ್ಷಲ್ ಪಟೇಲ್ (ವೇಗದ ಬೌಲರ್), ಜೋಶ್ ಹೇಝಲ್‌ವುಡ್ (ವೇಗದ ಬೌಲರ್), ಮೊಹಮ್ಮದ್ ಸಿರಾಜ್ (ವೇಗದ ಬೌಲರ್).

    ಟೂರ್ನಿಗೆ ಆರ್‌ಸಿಬಿ ತಂಡ:
    ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್(ವಿ.ಕೀ), ಅನುಜ್ ರಾವತ್, ಫಿನ್ ಆಲೆನ್, ಗ್ಲೆನ್ ಮ್ಯಾಕ್ಸ್ವೆಲ್, ವಾನಿಂದು ಹಸರಂಗ, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲೀ, ಕರಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜಾಶ್ ಹೇಝಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟಾಪ್ಲಿ, ಹಿಮಾಂಶು ಶರ್ಮಾ, ಮೈಕಲ್ ಬ್ರೇಸ್‌ವೆಲ್, ಮನೋಜ್ ಭಾಂಡಗಿ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.

    ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಪ್ಲೇಯಿಂಗ್-11:
    ಎಂ.ಎಸ್.ಧೋನಿ (ನಾಯಕ), ಡಿವೋನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಮ್ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಮಹೇಶ್ ತೀಕ್ಷಣ ಹಾಗೂ ಮುಖೇಶ್ ಛೌಧರಿ.

    ಟೂರ್ನಿಗೆ ಸಿಎಸ್‌ಕೆ ತಂಡ:
    ಎಂ.ಎಸ್ ಧೋನಿ (ನಾಯಕ), ಡಿವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಮುಖರ್ ದೇಶ್‌ಗಾವ್, ತುಷಾರ್ ದೇಶ್‌ಗಾವ್, ತುಷಾರ್ ದೇಶ್‌ಗಾವ್, , ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಶೇಕ್ ರಶೀದ್, ನಿಶಾಂತ್ ಸಿಧು, ಅಜಯ್ ಮಂಡಲ್, ಸಿಸಂದ ಮಗಳ.

  • IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಮುಂಬೈ: 16ನೇ ಐಪಿಎಲ್ (IPL 2023) ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ದೇಶದ ವಿವಿಧೆಡೆ 12 ಕ್ರೀಡಾಂಗಣಗಳಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.

    ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದಿರುವ ದಿಗ್ಗಜರು ಈ ಐಪಿಎಲ್‌ನೊಂದಿಗೆ ವಿದಾಯ ಹೇಳುವ ಸಾಧ್ಯತೆಗಳೂ ಇವೆ. ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ (S. Sreesanth) ಖಾಸಗಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) 2023ರ ಐಪಿಎಲ್ ಟ್ರೋಫಿ ಗೆಲ್ಲುತ್ತೆ ಅನ್ನಿಸಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸೋಫಿ ಬೆಂಕಿ ಬ್ಯಾಟಿಂಗ್‌ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    ಹೊಸ ತಂಡಗಳು ಟ್ರೋಫಿ ಗೆದ್ದರೆ ಖುಷಿಯಾಗುತ್ತೆ. ಅದರಲ್ಲೂ ಆರ್‌ಸಿಬಿ (RCB) ತಂಡ 2023ರ ಟ್ರೋಫಿ ಗೆದ್ದರೆ ನಾನು ತುಂಬಾನೇ ಖುಷಿಪಡುತ್ತೇನೆ. ಏಕೆಂದರೆ ಭಾರತೀಯ ಕ್ರಿಕೆಟ್ ಜಗತ್ತಿಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ಕೊಹ್ಲಿ (Virat Kohli) ಸಾಕಷ್ಟು ಕೊಡುಗೆ ನೀಡಿದ್ದಾರೆ. ಆರ್‌ಸಿಬಿ ಈವರೆಗೆ ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕಪ್ ಗೆದ್ದರೆ ಖುಷಿಪಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    ಮುಂಬೈ ಇಂಡಿಯನ್ಸ್ (Mumbai Indians) 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 2021ರ ಆವೃತ್ತಿ ಸೇರಿ 4 ಬಾರಿ ಚಾಂಪಿಯನ್ ಆಗಿದೆ. ಕೋಲ್ಕತ್ತಾ ನೈಟ್‌ರೈಡರ್ಸ್ 2 ಬಾರಿ ಪ್ರಶಸ್ತಿ ಬಾಚಿಕೊಂಡಿದ್ದು, 3ನೇ ಸ್ಥಾನದಲ್ಲಿದೆ. 2022ರ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.