Tag: CSK

  • IPL 2026 | ಸಂಜು ಸ್ಯಾಮ್ಸನ್‌ ಆರ್‌ಸಿಬಿ ಸೇರೋದು ಪಕ್ಕಾನಾ?

    IPL 2026 | ಸಂಜು ಸ್ಯಾಮ್ಸನ್‌ ಆರ್‌ಸಿಬಿ ಸೇರೋದು ಪಕ್ಕಾನಾ?

    ಮುಂಬೈ: ರಾಜಸ್ಥಾನ್‌ ರಾಯಲ್ಸ್ (Rajasthan Royals) ಜೊತೆಗಿನ ಸಂಬಂಧ ಹದಗೆಟ್ಟಿರುವುದರಿಂದ ಸಂಜು ಸ್ಯಾಮ್ಸನ್ ಅವರು 2026ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನವೇ ಫ್ರಾಂಚೈಸಿಯಿಂದ ಹೊರಬರಲು ಇಚ್ಛಿಸಿದ್ದಾರೆ. ಈ ಬೆನ್ನಲ್ಲೇ ವೈರಲ್‌ ಆಗಿರುವ ಫೋಟೋಗಳು ಸಂಜು ಸ್ಯಾಮ್ಸನ್‌ (Sanju Samson) ಆರ್‌ಸಿಬಿ ಸೇರೋದು ಪಕ್ಕಾ ಎಂದು ಹೇಳುತ್ತಿವೆ.

    ಹೌದು. 2026ರ ಐಪಿಎಲ್‌ಗೆ (IPL 2025) ಮುಂಚಿತವಾಗಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ತಮ್ಮನ್ನು ಫ್ರಾಂಚೈಸಿಯಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದಾರಂತೆ. ಈ ಬೆನ್ನಲ್ಲೇ ಸಂಜು ಆರ್‌ಸಿಬಿ (RCB) ಥ್ರೋ ಡೌನ್ ಸ್ಪೆಷಲಿಸ್ಟ್ ಜೊತೆ ತರಬೇತಿ ಪಡೆಯುತ್ತಿರುವ ಫೋಟೋಗಳು ವೈರಲ್‌ ಆಗಿದ್ದು, ಭಾರೀ ಹೈಪ್‌ ಕ್ರಿಯೆಟ್‌ ಮಾಡಿದೆ.

    ಕಳೆದ ತಿಂಗಳು ಮುಕ್ತಾಯಗೊಂಡ ಟಿ20 ಏಷ್ಯಾಕಪ್‌ (T20 Asia Cup) ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿದ್ದರು. ಅಲ್ಲದೇ ಅಕ್ಟೋಬರ್‌ 29ರಿಂದ ಶುರುವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾಗೆ (Australia) ಪ್ರಯಾಣಿಸಲಿದ್ದಾರೆ. ಅದಕ್ಕೂ ಮುನ್ನ ಸಂಜು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಥ್ರೋ-ಡೌನ್ ಸ್ಪೆಷಲಿಸ್ಟ್ ಗೇಬ್ರಿಯಲ್ ಅವರಿಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಸ್ಯಾಮ್ಸನ್‌ ಆರ್‌ಆರ್‌ ತೊರೆಯಲು ಕಾರಣ ಏನು?
    ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿದ್ದ ಸಂಜು ಸ್ಯಾಮ್ಸನ್‌ 2025ರ ಐಪಿಎಲ್‌ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದಿದ್ದರು. ರಿಯಾನ್‌ ಪರಾಗ್‌ ನಾಯಕನಾಗಿ ಅನೇಕ ಪಂದ್ಯಗಳನ್ನ ಮುನ್ನಡೆಸಿದ್ದರು. ಇದು ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. ಅಲ್ಲದೇ ಜೋಸ್‌ ಬಟ್ಲರ್‌ ಅವರನ್ನ ಫ್ರಾಂಚೈಸಿಯಿಂದ ಕೈಬಿಟ್ಟಿದ್ದು ಸಹ ಸಂಜುಗೆ ಬೇಸರ ತರಿಸಿತ್ತಂತೆ. ಹೀಗಾಗಿ 2025ರ ಟೂರ್ನಿ ಮುಗಿದ ಬೆನ್ನಲ್ಲೇ ತನ್ನನ್ನು ಹರಾಜಿನಲ್ಲಿ ಬಿಡುಗಡೆ ಮಾಡಲು ಅಥವಾ ಬೇರೆ ಫ್ರಾಂಚೈಸಿ ಜೊತೆಗೆ ವಿನಿಮಯ ಮಾಡುವಂತೆ ಕೇಳಿಕೊಂಡಿದ್ದರು. ಆರಂಭದಲ್ಲಿ ಸಂಜು ಸಿಎಸ್‌ಕೆ ಸೇರಿಕೊಳ್ಳಲಿದ್ದು, ಧೋನಿ ಬಳಿಕ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಅವರು ಆರ್‌ಸಿಬಿ ಫ್ರಾಂಚೈಸಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    IPL RR VS RCB 2

    ಈಗಾಗಲೇ 2026ರ ಐಪಿಎಲ್‌ನ ಮಿನಿ ಹರಾಜಿಗೆ ತಯಾರಿ ನಡೆಯುತ್ತಿದೆ. ನವೆಂಬರ್‌ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸುವಂತೆ ಐಪಿಎಲ್‌ ಮಂಡಳಿ ತಿಳಿಸಿದೆ. ಡಿಸೆಂಬರ್‌ 13 ರಿಂದ 15ರ ಒಳಗೆ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಮಾತ್ರವೆ ಮೆಗಾ ಹರಾಜು ನಡೆಯಲಿದೆ.

  • IPL Auction 2026 | ಡಿಸೆಂಬರ್‌ನಲ್ಲಿ ಮಿನಿ ಹರಾಜು – ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌!

    IPL Auction 2026 | ಡಿಸೆಂಬರ್‌ನಲ್ಲಿ ಮಿನಿ ಹರಾಜು – ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌!

    – ಐವರು ಸ್ಟಾರ್‌ ಪ್ಲೇಯರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
    – ಫ್ರಾಂಚೈಸಿಗಳ ಪರ್ಸ್‌ ಮೊತ್ತ 151 ಕೋಟಿಗೆ ಹೆಚ್ಚಳ

    ಮುಂಬೈ: ಮುಂದಿನ ಡಿಸೆಂಬರ್‌ 13 ರಿಂದ 15ರ ಅವಧಿಯಲ್ಲಿ 2026ರ ಐಪಿಎಲ್‌ ಟೂರ್ನಿಗೆ ಮಿನಿ ಹರಾಜು (IPL Mini Auction) ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡಲಾಗಿದೆ.

    ಮುಂದಿನ ನವೆಂಬರ್‌ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಐಪಿಎಲ್‌ ಮಂಡಳಿ ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    3 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯಲಿದೆ. 2025ರ ಐಪಿಎಲ್‌ ಟೂರ್ನಿ ವೇಳೆ ಮೆಗಾ ಹರಾಜು ನಡೆದಿತ್ತು. ಆದ್ದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಆದ್ರೆ ಬಿಸಿಸಿಐ (BCCI) ಈಗಾಗಲೇ ವಿಧಿಸಿರುವಂತೆ ಕಳೆದಬಾರಿಗಿಂತ ಫ್ರಾಂಚೈಸಿಗಳ ಪರ್ಸ್‌ ಮೊತ್ತ ಹಿಗ್ಗಲಿದೆ.

    ಪರ್ಸ್‌ ಮೊತ್ತ ಇನ್ನಷ್ಟು ಹೆಚ್ಚಳ
    ಈ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್‌ ಫ್ರಾಂಚೈಸಿಗಳ ಪರ್ಸ್‌ 2023-24ರ ಐಪಿಎಲ್‌ ಟೂರ್ನಿಯಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮೂರು ವರ್ಷಗಳ ಅವಧಿಗೆ ವೇತನ ಸೇರಿ ಪರ್ಸ್‌ ಮೊತ್ತವನ್ನ 157 ಕೋಟಿ ರೂ.ಗಳ ವರೆಗೆ ಹೆಚ್ಚಿಸಿದೆ. ಅದರಂತೆ 2025ರ ಐಪಿಎಲ್‌ ಟೂರ್ನಿಯಲ್ಲಿ ಫ್ರಾಂಚೈಸಿಗಳು ಸಂಬಳ ಮಿತಿ ಸೇರಿ ತಲಾ 146 ಕೋಟಿ ರೂ. ಬಳಕೆ ಮಾಡಿದ್ದವು. 2026ರ ಟೂರ್ನಿಗೆ 151 ಕೋಟಿ ರೂ. ಬಳಕೆ ಮಾಡಲಿದ್ದು, 2027ರ ಟೂರ್ನಿಗೆ 157 ಕೋಟಿ ರೂ.ಗಳನ್ನು ಫ್ರಾಂಚೈಸಿಗಳು ಬಳಸಲಿವೆ. ಇದನ್ನೂ ಓದಿ: 2027ರ ವಿಶ್ವಕಪ್‌ ಆಡೋದು ಡೌಟ್‌ – ಆಸೀಸ್‌ ಸರಣಿ ಬಳಿಕ ʻಹಿಟ್‌ಮ್ಯಾನ್‌, ಕ್ರಿಕೆಟ್‌ ಲೋಕದ ಕಿಂಗ್‌ ಯುಗ ಅಂತ್ಯ?

    ಐವರು ಸ್ಟಾರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
    ಇನ್ನೂ ಮಿನಿ ಹರಾಜಿಗೂ ಮುನ್ನ ರಿಟೇನ್‌ ಆಟಗಾರರ ಪಟ್ಟಿ ಬಿಡುಗಡೆಗೊಳಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡ್ತಿದ್ದಂತೆ ದೀಪಕ್ ‌ಹೂಡ, ವಿಜಯ್‌ ಶಂಕರ್‌, ರಾಹುಲ್‌ ತ್ರಿಪಾಟಿ, ಸ್ಯಾಮ್‌ ಕರ್ರನ್‌, ಡಿವೋನ್‌ ಕಾನ್ವೆ ಅವರನ್ನ ತಂಡದಿಂದ ಹೊರಬ್ಬಲು ಫ್ರಾಂಚೈಸಿ ನಿರ್ಧರಿಸಿದೆ ಎಂಧು ತಿಳಿದುಬಂದಿದೆ. ಈ ಬಗ್ಗೆ ಸಿಎಸ್‌ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

  • CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

    CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

    ಚೆನ್ನೈ: 2026ರ ಐಪಿಎಲ್‌ (IPL 2025) ಟೂರ್ನಿಯ ಮಿನಿ ಹರಾಜಿಗೆ ಇನ್ನೂ ಕೆಲ ತಿಂಗಳು ಬಾಕಿಯಿದೆ. ಅದಕ್ಕೂ ಮುನ್ನವೇ 5 ಬಾರಿ ಐಪಿಎಲ್‌ ಚಾಂಪಿಯನ್‌ ಆಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ತೊರೆಯಲು ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಈ ಕುರಿತು ಎಂ.ಎಸ್‌ ಧೋನಿ ಹಾಗೂ ನಾಯಕ ರುತುರಾಜ್‌ ಗಾಯಕ್ವಾಡ್‌ ಅವರೊಂದಿಗೆ ಚರ್ಚಿಸಿದ ಬಳಿಕ ಅಧಿಕೃತವಾಗಿ ತಿಳಿಸುವುದಾಗಿ ಅಶ್ವಿನ್‌ (R Ashwin) ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದೂರವಾದಾಗಲೇ ಬೆಲೆ ತಿಳಿಯೋದು – ಮತ್ತೆ ಒಂದಾಗುತ್ತೇವೆಂದ ಸೈನಾ ನೆಹ್ವಾಲ್ ದಂಪತಿ

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್‌ 2025ರ ಋತುವಿನಲ್ಲ ಸ್ಥಿರ ಪ್ರದರ್ಶನವನ್ನೂ ನೀಡಲಾಗಲಿಲ್ಲ. ಕೇವಲ 9 ಪಂದ್ಯಗಳಲ್ಲಿ ಮಾತ್ರವೇ ಕಾಣಿಸಿಕೊಂಡು 7 ವಿಕೆಟ್‌ ಪಡೆದಿದ್ದರು. ಕಳಪೆ ಪ್ರದರ್ಶನದಿಂದಾಗಿ ಅವರನ್ನು 5 ಪಂದ್ಯಗಳಿಗೆ ಬೆಂಚ್‌ನಲ್ಲಿ ಇರಿಸಲಾಗಿತ್ತು. ಅಲ್ಲದೇ ಸಿಎಸ್‌ಕೆ ಕೂಡ ಕೇವಲ 4 ಪಂದ್ಯಗಳಲ್ಲಿ ಗೆದ್ದು, ಕೊನೇ ಸ್ಥಾನದಲ್ಲೇ 18ನೇ ಆವೃತ್ತಿ ಮುಗಿಸಿತ್ತು. ಸದ್ಯ ಸಿಎಸ್‌ಕೆ ತೊರೆಯಲು ನಿರ್ಧರಿಸಿರುವ ಅಶ್ವಿನ್‌ ಮತ್ತೆ ರಾಜಸ್ಥಾನ್‌ ರಾಯಲ್ಸ್‌ ತಂಡ ಸೇರಲಿದ್ದಾರೆ ಎಂಬ ವದಂತಿಗಳೂ ಹಬ್ಬಿವೆ. ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಸಿಎಸ್‌ಕೆಗೆ ಸಂಜು ಸ್ಯಾಮ್ಸನ್‌
    ಮತ್ತೊಂದು ಕಡೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಮತ್ತು ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್‌ ಸಂಜು ಸ್ಯಾಮ್ಸನ್ (Sanju Samson) ಫ್ರಾಂಚೈಸಿ ತೊರೆಯಲು ಬಯಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್‌ (Rajasthan Royals) ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹಾಗೂ ಅತಿಹೆಚ್ಚು ರನ್‌ ಗಳಿಸಿದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ ಸಂಜು ಸ್ಯಾಮ್ಸನ್‌. ಹರಾಜಿಗೂ ಮುನ್ನವೇ ತಮ್ಮನ್ನು ತಂಡದಿಂದ ಬಿಡುಗಡೆ ಮಾಡಲು ಅಥವಾ ವಿನಿಯಮ ಮಾಡಿಕೊಳ್ಳಲು ರಿಕ್ವೆಸ್ಟ್‌ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬಾಗಲಕೋಟೆ | ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಭ್‌ ಪಂತ್ ಆರ್ಥಿಕ ನೆರವು

    ವರದಿಗಳು ಹರಿದಾಡುತ್ತಿದ್ದಂತೆ ಸಂಜು ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್‌ಕೆ ಬಯಸಿದೆ. ಈ ಬಗ್ಗೆ ಸಂಜು ಸ್ಯಾಮ್ಸನ್‌ ಮುಖ್ಯಕೋಚ್‌ ಸ್ಟೀಫನ್ ಫ್ಲೆಮಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ಸಹ ನಡೆಸಿದ್ದರು ಎಂದು ಹೇಳಲಾಗಿದೆ. ಆದ್ರೆ ಉಭಯ ಫ್ರಾಂಚೈಸಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಚೆನ್ನೈ ಗುನ್ನಕ್ಕೆ ಗುಜರಾತ್‌ ಧೂಳಿಪಟ – CSKಗೆ 83 ರನ್‌ಗಳ ಭರ್ಜರಿ ಜಯ, ಆರ್‌ಸಿಬಿಗಿದೆಯಾ ನಂ.1 ಪಟ್ಟಕ್ಕೇರುವ ಚಾನ್ಸ್‌?

    ಚೆನ್ನೈ ಗುನ್ನಕ್ಕೆ ಗುಜರಾತ್‌ ಧೂಳಿಪಟ – CSKಗೆ 83 ರನ್‌ಗಳ ಭರ್ಜರಿ ಜಯ, ಆರ್‌ಸಿಬಿಗಿದೆಯಾ ನಂ.1 ಪಟ್ಟಕ್ಕೇರುವ ಚಾನ್ಸ್‌?

    – 18ನೇ ಆವೃತ್ತಿಯ ಐಪಿಎಲ್‌ಗೆ ಗೆಲುವಿನ ವಿದಾಯ ಹೇಳಿದ ಚೆನ್ನೈ

    ಅಹಮದಾಬಾದ್‌: ಸಿಡಿಲಬ್ಬರದ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವು ಗುಜರಾತ್‌ ಟೈಟಾನ್ಸ್‌ (Gujart Titans) ವಿರುದ್ಧ 83 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.‌ ತನ್ನ ಕೊನೆಯ ಪಂದ್ಯವಾಡಿದ ಸಿಎಸ್‌ಕೆ ಅದ್ಭುತ ಗೆಲುವಿನೊಂದಿಗೆ 18ನೇ ಆವೃತ್ತಿಗೆ ವಿದಾಯ ಹೇಳಿದೆ. ಇನ್ನೂ ಲೀಗ್‌ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಗುಜರಾತ್‌ ಟೈಟಾನ್ಸ್‌ ಹೀನಾಯ ಸೋಲಿನಿಂದ ನಂ.1 ಪಟ್ಟ ಕಳೆದುಕೊಳ್ಳುವ ಆತಂಕದಲ್ಲಿದೆ.

    ಹೌದು.. ಈಗಾಗಲೇ ಗುಜರಾತ್‌ ಟೈಟಾನ್ಸ್‌, ಪಂಜಾಬ್‌ ಕಿಂಗ್ಸ್‌, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ಪ್ಲೇ ಆಫ್‌ ಪ್ರವೇಸಿವೆ. ಆದ್ರೆ ನಾಲ್ಕು ತಂಡಗಳ ನಡುವೆ ನಂ.1 ಪಟ್ಟಕ್ಕೆ ಹಣಾಹಣಿ ನಡೆಯುತ್ತಿದೆ. ಸದ್ಯ 14 ಪಂದ್ಯಗಳಲ್ಲಿ 9 ಗೆಲುವಿನೊಂದಿಗೆ 18 ಅಂಕ ಪಡೆದುಕೊಂಡಿರುವ ಟೈಟಾನ್ಸ್‌ ಅಗ್ರಸ್ಥಾನದಲ್ಲಿದೆ. ಉಳಿದ ಮೂರು ತಂಡಗಳಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವ ಕಾರಣ ಗುಜರಾತ್‌ ಟೈಟಾನ್ಸ್‌ಗೆ ನಂ.1 ಸ್ಥಾನ ತಪ್ಪುವ ಆತಂಕದಲ್ಲಿದೆ. ಒಂದು ವೇಳೆ ಮುಂಬೈ ಇಂಡಿಯನ್ಸ್‌‌ ಮುಂದಿನ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸೋತು, ಆರ್‌ಸಿಬಿ ಲಕ್ನೋ ವಿರುದ್ಧ ಉತ್ತಮ ರನ್‌ರೇಟ್‌ನಿಂದ ಗೆದ್ದರೆ, ಆರ್‌ಸಿಬಿಯೇ ನಂ.1 ಪಟ್ಟಕ್ಕೇರುವ ಅವಕಾಶವಿದೆ. ಇಲ್ಲದಿದ್ದರೆ, ಮೊದಲೆರಡು ಸ್ಥಾನಗಳು ಮುಂಬೈ ಮತ್ತು ಪಂಜಾಬ್‌ ಕಿಂಗ್ಸ್‌ ಪಾಲಾಗುವ ಸಾಧ್ಯತೆಯಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 67ನೇ ಐಪಿಎಲ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಸಿಎಸ್‌ಕೆ ತಂಡ ಬ್ಯಾಟಿಂಗ್ ಆಯ್ದುಕೊಂಡು 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 230 ರನ್ ಕಲೆ ಹಾಕಿತು. 231 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ 18.3 ಓವರ್‌ಗಳಿಗೆ 147 ರನ್‌ಗಳಿಗೆ ಸರ್ವಪತನ ಕಂಡಿತು.

    ಗುಜರಾತ್ ತಂಡದಿಂದ ಮೊದಲಿಗೆ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಜೊತೆಯಾಟಾವಾಡಿ 15 ಎಸೆತಗಳಿಗೆ 24 ರನ್ ಗಳಿಸಿದರು. ಶುಭಮನ್ ಗಿಲ್ 9 ಎಸೆತಗಳಿಗೆ 13 ರನ್ (1 ಬೌಂಡರಿ, 1 ಸಿಕ್ಸ್) ಗಳಿಸಿ ಔಟಾದರು. ಬಳಿಕ ಕ್ರೀಸ್‌ಗಿಳಿದ ಜೋಸ್ ಬಟ್ಲರ್ 5 ರನ್ ಗಳಿಸಿ ಔಟಾದರೇ, ಶೆರ್ಫೇನ್ ರುದರ್‌ಫೋರ್ಡ್ ಯಾವುದೇ ರನ್ ಗಳಿಸದೇ ಪೆವಿಲಿಯನ್‌ಗೆ ಮರಳಿದರು. ಬಳಿಕ ಶಾರುಖ್ ಖಾನ್ ಹಾಗೂ ಸಾಯಿ ಸುದರ್ಶನ್ ಜೊತೆಯಾಟವಾಡಿ 34 ಎಸೆತಗಳಿಗೆ 55 ರನ್ ಕಲೆಹಾಕಿದರು. ಶಾರುಖ್ ಖಾನ್ 15 ಎಸೆತಗಳಿಗೆ 19 ರನ್ (2 ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿದರೇ, ಸಾಯಿ ಸುದರ್ಶನ್ 28 ಎಸೆತಗಳಿಗೆ 41 ರನ್ (6 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರಶೀದ್ ಖಾನ್ 8 ಎಸೆತಗಳಿಗೆ 12 ರನ್ (1 ಬೌಂಡರಿ, 1 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ಗೆರಾಲ್ಡ್ ಕೋಟ್ಜಿ 5 ಎಸೆತಗಳಿಗೆ 5 ರನ್ ಗಳಿಸಿ ಔಟಾದರು. ರಾಹುಲ್ ತೆವಾಟಿಯಾ 10 ಎಸೆತಗಳಿಗೆ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅರ್ಶದ್ ಖಾನ್ 14 ಎಸೆತಗಳಿಗೆ 20 ರನ್ ಗಳಿಸಿ ಔಟಾದರೆ, ಸಾಯಿ ಕಿಶೋರ್ 7 ಎಸೆತಗಳಿಗೆ 3 ರನ್ ಗಳಿಸಿ ಆಲೌಟ್ ಆದರು. ಮೊಹಮ್ಮದ್ ಸಿರಾಜ್ 4 ಎಸೆತಗಳಿಗೆ 3 ರನ್ ಗಳಿಸಿದರು.

    ಸಿಎಸ್‌ಕೆ ತಂಡದಿಂದ ಮೊದಲು ಬ್ಯಾಟ್ ಬೀಸಿದ ಆಯುಷ್ ಮ್ಹಾತ್ರೆ ಹಾಗೂ ಡೆವೊನ್ ಕಾನ್ವೆ ಜೊತೆಯಾಟವಾಡಿ 22 ಎಸೆತಗಳಿಗೆ 44 ರನ್ ಕಲೆಹಾಕಿದರು. ಆಯುಷ್ 17 ಎಸೆತಗಳಿಗೆ 34 ರನ್ (3 ಬೌಂಡರಿ, 3 ಸಿಕ್ಸ್) ಗಳಿಸಿ ಮೊದಲ ವಿಕೆಟ್ ಒಪ್ಪಿಸಿದರು. ಬಳಿಕ ಡೆವೊನ್ ಹಾಗೂ ರ‍್ವಿಲ್ ಪಟೇಲ್ ಜೊತೆಯಾಟವಾಡಿ 34 ಎಸೆತಗಳಿಗೆ 63 ರನ್ ಗಳಿಸಿ ತಂಡವನ್ನು ಮುನ್ನಡೆಸಿದರು. ಉರ್ವಿಲ್ ಪಟೇಲ್ 19 ಎಸೆತಗಳಿಗೆ 37 ರನ್ (4 ಬೌಂಡರಿ, 2 ಸಿಕ್ಸ್) ಗಳಿಸಿ ಔಟಾದರು. ಬಳಿಕ ಶಿವಂ ದುಬೆ ಹಾಗೂ ಡೆವೊನ್ ಕಾನ್ವೆ ಜೊತೆಯಾಟದಲ್ಲಿ 19 ಬಾಲ್‌ಗಳಿಗೆ 37 ರನ್ ಗಳಿಸಿಕೊಟ್ಟರು. ಹಾಗೂ ಶಿವಂ ದುಬೆ 8 ಎಸೆತಗಳಿಗೆ 17 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಡೆವೊನ್ ಕಾನ್ವೆ 35 ಎಸೆತಗಳಿಗೆ 52 ರನ್ (6 ಫೋರ್, 2 ಸಿಕ್ಸ್) ಸಿಡಿಸಿ ಮಿಂಚಿದರು. ಡೆವಾಲ್ಡ್ ಬ್ರೇವಿಸ್ 23 ಎಸೆತಗಳಿಗೆ 57 ರನ್ (4 ಬೌಂಡರಿ, 5 ಸಿಕ್ಸ್) ಗಳಿಸಿ ಗಮನ ಸೆಳೆದರು. ರವೀಂದ್ರ ಜಡೆಜಾ 18 ಬಾಲ್‌ಗಳಿಗೆ 21 ರನ್‌ಗಳಿಸಿ ಅಜೇಯರಾಗಿ ಉಳಿದು ಆಟ ಮುಗಿಸಿದರು.

    ಗುಜರಾತ್ ಪರ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಿತ್ತರೆ, ಸಾಯಿ ಕಿಶೋರ್, ರಶೀದ್ ಖಾನ್ ಹಾಗೂ ಶಾರುಖ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಸಿಎಸ್‌ಕೆ ಪರ ನೂರ್ ಅಹ್ಮದ್ ಹಾಗೂ ಅನ್ಶುಲ್ ತಲಾ 3 ವಿಕೆಟ್ ಪಡೆದರೆ, ರವೀಂದ್ರ ಜಡೆಜಾ 2 ವಿಕೆಟ್ ಹಾಗೂ ಖಲೀಲ್ ಅಹ್ಮದ್ ಹಾಗೂ ಮಥೀಶಾ ಪತಿರಾನ ತಲಾ 1 ವಿಕೆಟ್ ಕಿತ್ತರು.

  • ಡೋಂಟ್ವರಿ ಸಿಎಸ್‌ಕೆ ಬೇಬಿಮಾ – ಸಿಎಸ್‌ಕೆ ಅಭಿಮಾನಿಗಳನ್ನ ರೊಚ್ಚಿಗೆದ್ದು ಕಿಚಾಯಿಸಿದ ಆರ್‌ಸಿಬಿ ಫ್ಯಾನ್ಸ್‌

    ಡೋಂಟ್ವರಿ ಸಿಎಸ್‌ಕೆ ಬೇಬಿಮಾ – ಸಿಎಸ್‌ಕೆ ಅಭಿಮಾನಿಗಳನ್ನ ರೊಚ್ಚಿಗೆದ್ದು ಕಿಚಾಯಿಸಿದ ಆರ್‌ಸಿಬಿ ಫ್ಯಾನ್ಸ್‌

    17 ಆವೃತ್ತಿ ಕಳೆದರೂ ಒಂದೇ ಒಂದು ಬಾರಿ ಕಪ್‌ ಗೆದ್ದಿಲ್ಲ.. ಪ್ರತೀ ಸೀಸನ್‌ನಲ್ಲೂ ಕಪ್‌ ಗೆಲ್ಲುವ ಲೆಕ್ಕಾಚಾರ.. ಕೊನೆಗೆ ಕಣ್ಣೀರ ವಿದಾಯ… ಆದಾಗ್ಯೂ ಆರ್‌ಸಿಬಿ ಅಭಿಮಾನಿಗಳ (RCB Fans) ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ. ಪ್ರತಿಬಾರಿಯೂ ಹೊಸ ಉರುಪಿನೊಂದಿಗೆ ನಿರೀಕ್ಷೆಗಿಂತಲೂ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಅದೇ ರೀತಿ ನಿನ್ನೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಬೆಂಕಿ ಬಿರುಗಾಳಿಯ ಹಗ್ಗಜಗ್ಗಾಟ ಜೋರಾಗಿಯೇ ಇತ್ತು. ಪಂದ್ಯದ ಕೊನೇ ಎಸೆತದವರೆಗೂ ರೋಚಕತೆಯಿಂದ ಕೂಡಿತ್ತು. ಆದ್ರೆ ಪಂದ್ಯ ಗೆದ್ದ ಬಳಿಕ ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಫ್ಯಾನ್ಸ್‌ಗಳಿಗೆ (CSK Fans) ಸಿಕ್ಕಾಪಟ್ಟೆ ಟಾಂಗ್‌ ಕೊಡಲು ಶುರು ಮಾಡಿದ್ದಾರೆ.

     

    View this post on Instagram

     

    A post shared by Amith Dollin (@amith_adda)

    ಕೆಲವರು ರಸ್ತೆಯಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ ಹಾಗೂ ಮೆಟ್ರೋ ಟ್ರೈನ್‌ಗಳಲ್ಲಿ (Metro Train) ಸಿಎಸ್‌ಕೆ ಫ್ಯಾನ್ಸ್‌ಗಳನ್ನ ಕೆಣಕಿದ್ದಾರೆ. ಕೆಲವರು ಹದ್ದು ಮೀರಿ ವರ್ತಿಸಿದ್ದು ಪೊಲೀಸರಿಂದ ಗೂಸಾ ಸಹ ತಿಂದಿದ್ದಾರೆ. ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆದ ವಿಡಿಯೋನಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಸಿನಿಮಾ ಹಾಡೊಂದಕ್ಕೆ ಹೋಲಿಕೆ ಮಾಡಿ ಸಿಎಸ್‌ಕೆ ಮತ್ತು ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ʻಮರಳಿ ಬಾರದ ಊರಿಗೆ ಸಿಎಸ್‌ಕೆ ಹೋಗಯ್ತೆ.. ಹೋಗಯ್ತೆ ತಮಿಳ್‌ ನಾಡಿಗೆ, ಧೋನಿ ಹಾರ್ಟು ರಿಚ್ಚು, ಸಿಎಸ್‌ಕೆ ಫ್ಯಾನ್ಸ್‌ಗೆ ಹಿಡಿತು ಹುಚ್ಚು… ಇನ್ಮೇಲೆ ವಿಸಿಲ್‌ ಪೋಡು ಅನ್ನಂಗಿಲ್ಲ…. ಡೋಂಟ್ವರಿ ಸಿಎಸ್‌ಕೆ ಬೇಬಿಮಾ, ಇನ್ಮೆಲ್‌ ವಿಸಿಲ್‌ ಪೋಡೊ ಅನ್ನೋದೆಲ್ಲ ಬಿಟ್ಬಿಡಮ್ಮ.. ಅಂತ ಹಾಡು ಹೇಳಿ ಕಿಚಾಯಿಸಿದ್ದಾರೆ. ಇದನ್ನೂ ಓದಿ: IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

    ಮ್ಯಾಚ್‌ ಮಾತ್ರ ಸೂಪರ್‌ ಆಗಿತ್ತು. ಯಶ್‌ ದಯಾಳ್‌ ಕೊನೇ ಓವರ್‌ನಲ್ಲಿ ನೋಬಾಲ್‌ ಹಾಕಿದಾಗ ನನಗೆ ಹೆವಿ ಟೆನ್ಶನ್‌ ಆಗಿತ್ತು, ಅಲ್ಲೊಬ್ಬ ತಲಾ ತಲಾ ಪುಡಿ ಪುಡಿ ಅಂತ ಕೂಗ್ತಾ ಇದ್ದ.. ಅವೆಲ್ಲ ಮಸ್ತ್‌ ಆಗಿತ್ತು. ಏನೇ ಆಗಲಿ ನಮಗೆ ನಂ.7 ಗಿಂತ ನಂ.18 ಮುಖ್ಯ. ಬೆಂಗಳೂರಿನ ಭಗವಂತ ಕಿಂಗ್‌ ಕೊಹ್ಲಿ ಅಂತ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಸ್ಫೋಟಕ ಫಿಫ್ಟಿ – ಕನ್ನಡಿಗ ಕೆ.ಎಲ್‌ ರಾಹುಲ್‌ ದಾಖಲೆ ಸರಿಗಟ್ಟಿದ ರೊಮಾರಿಯೊ ಶೆಫರ್ಡ್

    ಮಧ್ಯರಾತ್ರಿಯಲ್ಲೂ ಕುಗ್ಗದ ಅಭಿಮಾನಿಗಳ ಉತ್ಸಾಹ
    ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ಬಾರಿ ಬಗ್ಗು ಬಡಿದ ರಾಯಲ್ ಪಡೆಗೆ ಅಭಿಮಾನಿಗಳು ಮಧ್ಯರಾತ್ರಿ ನೀಡಿದ ಸ್ವಾಗತ ನೋಡಿ ಖುದ್ದು ಆರ್​ಸಿಬಿ ಆಟಗಾರರೇ ರೋಮಾಂಚನಗೊಂಡಿದ್ದರು. ರಸ್ತೆಯುದ್ದಕ್ಕೂ ಕಾದು ನಿಂತಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮಧ್ಯರಾತ್ರಿಯವರೆಗೆ ಕಾದು ನಿಂತು ತೋರಿದ ಈ ಅಭಿಮಾನಕ್ಕೆ ಆರ್​ಸಿಬಿ ಆಟಗಾರರು ಪುಳಕಿತರಾಗಿದ್ದಾರೆ. ಅಷ್ಟೇ ಅಲ್ಲದೇ ಈ ಕ್ರೇಝ್ ನೋಡಿ ರೋಮಾಂಚನಗೊಂಡ ಕೃನಾಲ್ ಪಾಂಡ್ಯ, ಈ ಸಲ ಇವರಿಗಾಗಿ ನಾವು ಕಪ್ ಗೆಲ್ಲಲೇಬೇಕು ಎಂದು ಶಪಥ ಮಾಡಿದ್ದಾರೆ. ಇದೀಗ ಆರ್​ಸಿಬಿ ಅಭಿಮಾನಿಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

    ಆರ್​ಸಿಬಿಗೆ ಮುಂದಿನ ಎದುರಾಳಿಗಳು ಯಾರು?
    ಲೀಗ್​ ಹಂತದಲ್ಲಿ ಆರ್​ಸಿಬಿ ತಂಡಕ್ಕೆ ಉಳಿದಿರುವುದು ಕೇವಲ 3 ಮ್ಯಾಚ್​ಗಳು ಮಾತ್ರ. ಈ ಪಂದ್ಯಗಳಲ್ಲಿ ಆರ್​ಸಿಬಿ ಲಕ್ನೋ ಸೂಪರ್ ಜೈಂಟ್ಸ್ (ಮೇ 9), ಸನ್​ರೈಸರ್ಸ್ ಹೈದರಾಬಾದ್ (ಮೇ 13) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಮೇ 17) ತಂಡಗಳನ್ನು ಎದುರಿಸಲಿದೆ. ಆದ್ರೆ ಈಗಾಗಲೇ ಬಹುತೇಕ ಪ್ಲೇ ಆಫ್‌ ಹಾದಿಯನ್ನು ಖಚಿತಪಡಿಸಿಕೊಂಡಿರುವ ಆರ್‌ಸಿಬಿ ಇನ್ನೊಂದು ಪಂದ್ಯ ಗೆದ್ದರೆ ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಅಬ್ಬರದ ಆಟ – ಆರ್‌ಸಿಬಿ ಪರ ಸಿಕ್ಸರ್‌ನಿಂದಲೇ ದಾಖಲೆ ಬರೆದ ಕಿಂಗ್‌ ಕೊಹ್ಲಿ

  • ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವು – ರೊಚ್ಚಿಗೆದ್ದ ಸಿಎಸ್‌ಕೆ ಅಭಿಮಾನಿಗಳಿಂದ ಹಾಸ್ಟೆಲ್ ಸಾಮಗ್ರಿ ಧ್ವಂಸ

    ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವು – ರೊಚ್ಚಿಗೆದ್ದ ಸಿಎಸ್‌ಕೆ ಅಭಿಮಾನಿಗಳಿಂದ ಹಾಸ್ಟೆಲ್ ಸಾಮಗ್ರಿ ಧ್ವಂಸ

    ಚಿತ್ರದುರ್ಗ: ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋತಿದ್ದಕ್ಕೆ ಸಿಟ್ಟುಗೊಂಡು ವಿದ್ಯಾರ್ಥಿಗಳು ಹಾಸ್ಟೆಲ್‌ ಸಾಮಗ್ರಿಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಹೊರವಲಯದಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ.

    ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 2 ರನ್‌ಗಳ ರೋಚಕ ಜಯ ಸಾಧಿಸಿತು. ಹಾಸ್ಟೆಲ್‌ನಲ್ಲಿ ಸಿಎಸ್‌ಕೆ ಫ್ಯಾನ್ಸ್ ರೊಚ್ಚಿಗೆದ್ದು, ಹಾಸ್ಟೆಲ್‌ನಲ್ಲಿರುವ ತಟ್ಟೆ, ಲೋಟ ಮತ್ತು ಟ್ರಂಕ್ ಸೇರಿದಂತೆ ಸರ್ಕಾರಿ ಹಾಸ್ಟೆಲ್‌ಗೆ ಸೇರಿದ ಹಲವು ಸಾಮಗ್ರಿಗಳನ್ನು ಎತ್ತಿ ಹಾಕಿ ದಾಂಧಲೆ ಮಾಡಿದ್ದಾರೆ.

    ಐಪಿಎಲ್ ಶುರುವಾದಾಗಿನಿಂದಲೂ ಈ ಹಾಸ್ಟೆಲ್‌ನಲ್ಲಿ ಇಂತಹ ಘಟನೆ ಮಾಮೂಲಿಯಾಗಿದ್ದು, ಐಪಿಎಲ್ ಪ್ರಿಯರ ಆಟೋಟೋಪಗಳಿಂದ ಇಲ್ಲಿ ಓದುತ್ತಿರುವ ಪ್ರಾಮಾಣಿಕ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಇದರಿಂದಾಗಿ ‌ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಈ ವರ್ತನೆಯನ್ನು ತಹಬದಿಗೆ ತರಲು ಇಲ್ಲಿರುವ ವಾರ್ಡನ್ ಸಹ ಮುಂದಾಗಿಲ್ಲ ಎಂಬುದು ಹಲವು ವಿದ್ಯಾರ್ಥಿಗಳ ಆರೋಪವಾಗಿದೆ.

    ಇಲ್ಲಿರುವ ವಿದ್ಯಾರ್ಥಿಗಳಿಗೆ ಐಪಿಎಲ್ ಬೆಟ್ಟಿಂಗ್ ಗೀಳು ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರಿ ಹಾಸ್ಟೆಲ್‌ನಲ್ಲಿ ಇಂತಹ ರಂಪಾಟ ಮಾಡುವ ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಕಲಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆಂಬ ಆರೋಪ ಇಲ್ಲಿನ ಪ್ರಾಮಾಣಿಕ ವಿದ್ಯಾರ್ಥಿಗಳು ಹಾಗೂ ಸ್ಥಳೀಯರದ್ದಾಗಿದೆ.

  • ಮದ್ವೆ ಮನೆಯಲ್ಲಿ ಆರ್‌ಸಿಬಿ ಮ್ಯಾಚ್‌ – ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಮದ್ವೆ ಮನೆಯಲ್ಲಿ ಆರ್‌ಸಿಬಿ ಮ್ಯಾಚ್‌ – ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ಪಂದ್ಯನ್ನು ಮದುವೆ (Marriage) ಮನೆಯಲ್ಲೇ ನೇರಪ್ರಸಾರ ಮಾಡಲಾಗಿದೆ.

    ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಮದಗಜಗಳ ಕಾಳಗ ಇದ್ದಂತೆ. ಎರಡೂ ತಂಡಗಳಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕೆ ಬಂದ ಆರ್‌ಸಿಬಿ ಅಭಿಮಾನಿಗಳು ಪಂದ್ಯ ವೀಕ್ಷಿಸುವಂತೆ ಮಾಡಲು ಆರತಕ್ಷತೆ ಕಾರ್ಯಕ್ರಮದಲ್ಲೇ ದೊಡ್ಡ ಸ್ಕ್ರೀನ್‌ನಲ್ಲಿ ಪಂದ್ಯವನ್ನು ನೇರ ಪ್ರಸಾರ ಮಾಡಲಾಗಿತ್ತು  ಇದನ್ನೂ ಓದಿ: ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಶನಿವಾರದ ಪಂದ್ಯ ಅಂತೂ ಕೊನೆಯ ಎಸೆತವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಲು 15 ರನ್‌ ಬೇಕಿದ್ದರೆ ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಲು ಚೆನ್ನೈಗೆ 4 ರನ್‌ಗಳ ಅಗತ್ಯವಿತ್ತು. ಯಶ್‌ ದಯಾಳ್‌ ಎಸೆದ ಕೊನೆಯ ಎಸೆತದಲ್ಲಿ ಶಿವಂ ದುಬೆ 1 ರನ್‌ ಓಡುತ್ತಿದ್ದಂತೆ ಹಾಲ್‌ನಲ್ಲಿದ್ದ ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮಿಸಿ ಜೈ ಆರ್‌ಸಿಬಿ ಎಂದು ಘೋಷಣೆ ಕೂಗಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಹೆಚ್ಚು ಹರಿದಾಡುತ್ತಿದೆ.

     

    View this post on Instagram

     

    A post shared by Mansa (@_mxnsx_shetty_)

    ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ 2 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 5 ವಿಕೆಟ್‌ ನಷ್ಟಕ್ಕೆ 211 ರನ್‌ ಹೊಡೆದು ರೋಚಕ ಸೋಲನ್ನು ಅನುಭವಿಸಿತು. ಇದನ್ನೂ ಓದಿ: IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿರಲಿಲ್ಲ. ಮಾರ್ಚ್‌ 28 ರಂದು ನಡೆದ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳ ಜಯ ಸಾಧಿಸಿತ್ತು. ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆದರೆ ಚೆನ್ನೈ 8 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದಿತ್ತು.

  • ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಬೆಂಗಳೂರು: ಶನಿವಾರ ರಾತ್ರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ (CSK) ಡೆವಾಲ್ಡ್ ಬ್ರೆವಿಸ್ (Dewald Brevis) ಎಲ್‌ಬಿಡಬ್ಲ್ಯೂ (LBW) ತೀರ್ಪು ಈಗ ಚರ್ಚೆಗೆ ಗ್ರಾಸವಾಗಿದೆ.

    ಕೊನೆಯ 24 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 43 ರನ್‌ ಬೇಕಿತ್ತು. ಕ್ರೀಸ್‌ನಲ್ಲಿ ಜಡೇಜಾ (Ravindra Jadeja) ಮತ್ತು ​ ಆಯುಷ್ ಮ್ಹಾತ್ರೆ ಇದ್ದರು. ಎರಡನೇ ಎಸೆತದಲ್ಲಿ ​ ಆಯುಷ್ ಮ್ಹಾತ್ರೆ ಕ್ಯಾಚ್‌ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಕ್ರೀಸಿಗೆ ಬಂದ ಬ್ರೆವಿಸ್ ಪ್ಯಾಡ್‌ಗೆ ಬಾಲ್ ಬಡಿಯಿತು.

    ಎನ್‌ಗಿಡಿ ಮನವಿಯ ಬೆನ್ನಲ್ಲೇ ಅಂಪೈರ್‌ ಔಟ್‌ ತೀರ್ಪು ನೀಡಿದರು. ಬಾಲ್‌ ಹಿಂದಕ್ಕೆ ಹೋದ ಕಾರಣ ಬ್ರೆವಿಸ್‌ ಮತ್ತು ಜಡೇಜಾ ರನ್‌ ಓಡಿದರು. ಇದನ್ನೂ ಓದಿ: IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

     

    ರನ್‌ ಓಡಿದ ನಂತರ ರಿವ್ಯೂ ಪರಿಶೀಲನೆಗೆ ಮನವಿ ಮಾಡಿದರು. ಆದರೆ ಅಂಪೈರ್‌ ಈ ಮನವಿಯನ್ನು ಪುರಸ್ಕರಿಸಲಿಲ್ಲ. ಈ ವಿಚಾರಕ್ಕೆ ಜಡೇಜಾ ಅಂಪೈರ್‌ ಬಳಿ, ಯಾಕೆ ರಿವ್ಯೂ ಪರಿಶೀಲನೆ ಮಾಡಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಅಂಪೈರ್‌ 15 ಸೆಕೆಂಡ್‌ ಒಳಗಡೆ ಕೇಳದ ಕಾರಣ ಮನವಿ ಪುರಸ್ಕರಿಸುವುದಿಲ್ಲ ಎಂದು ತಿಳಿಸಿದರು. ಕೊನೆಗೆ ಅಸಮಾಧಾನದಿಂದ ಬ್ರೆವಿಸ್‌ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು.

    ರಿಪ್ಲೈಯಲ್ಲಿ ಬಾಲ್‌ ವಿಕೆಟ್‌ಗೆ ತಾಗದೇ ಲೆಗ್‌ ಸೈಡ್‌ಗೆ ಹೋಗುತ್ತಿತ್ತು. ಒಂದು ವೇಳೆ ರನ್‌ ಓಡದೇ ಡಿಆರ್‌ಎಸ್‌ (DRS) ತೆಗೆದುಕೊಂಡಿದ್ದರೆ ಬ್ರೆವಿಸ್‌ ನಾಟೌಟ್‌ ಆಗುತ್ತಿದ್ದರು. ಬ್ರೆವಿಸ್‌ ಔಟಾಗದೇ ಇದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆ ಇತ್ತು.

     

     

     

    ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ 2 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 5 ವಿಕೆಟ್‌ ನಷ್ಟಕ್ಕೆ 211 ರನ್‌ ಹೊಡೆದು ರೋಚಕ ಸೋಲನ್ನು ಅನುಭವಿಸಿತು.

    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿರಲಿಲ್ಲ. ಮಾರ್ಚ್‌ 28 ರಂದು ನಡೆದ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳ ಜಯ ಸಾಧಿಸಿತ್ತು. ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆದರೆ ಚೆನ್ನೈ 8 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದಿತ್ತು.

  • RCB vs CSK ಪಂದ್ಯದ ಟಿಕೆಟ್‌ ಬ್ಲಾಕ್‌ನಲ್ಲಿ ಮಾರಾಟ – ನಾಲ್ವರು ಅರೆಸ್ಟ್‌

    RCB vs CSK ಪಂದ್ಯದ ಟಿಕೆಟ್‌ ಬ್ಲಾಕ್‌ನಲ್ಲಿ ಮಾರಾಟ – ನಾಲ್ವರು ಅರೆಸ್ಟ್‌

    – 32 ಟಿಕೆಟ್‌, 1 ಲಕ್ಷ ನಗದು ಸೀಜ್‌

    ಬೆಂಗಳೂರು: ಐಸಿಸಿ ಕ್ರಿಕೆಟ್‌ ಟೂರ್ನಿಗಳಲ್ಲಿ ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಹೇಗೋ, ಹಾಗೆಯೇ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಬಿಸಿಸಿಐ ಹಾಗೂ ಐಪಿಎಲ್‌ ಮಂಡಳಿ ಪಾಲಿಗೆ ಚಿನ್ನದ ಮೊಟ್ಟೆ. ಉಭಯ ತಂಡಗಳ ನಡುವಿನ ರೋಚಕ ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ದುಪ್ಪಟ್ಟು ಬೆಲೆಯಾದರೂ ಯೋಚಿಸದೇ ಟಿಕೆಟ್‌ ಖರೀದಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಬ್ಲಾಕ್‌ನಲ್ಲಿ ಟಿಕೆಟ್‌ (Black Ticket) ಮಾರಾಟ ಮಾಡ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಚರಣ್ ರಾಜ್, ಹರ್ಷವರ್ಧನ ಸಕ್ಲೇಚ, ವಿನಯ್, ವೆಂಕಟಸಾಯಿ ಬಂಧಿತ ಆರೋಪಿಗಳು. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುವ ಆರ್‌ಸಿಬಿ vs ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್‌ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 32 ಟಿಕೆಟ್‌ಗಳು ಹಾಗೂ 1 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

    ಪ್ರೇಕ್ಷಕರ ಅಗತ್ಯತೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಿಂತು 1,200 ರೂ. ಬೆಲೆಯ ಟಿಕೆಟ್‌ ಅನ್ನು 10,000 ರೂ.ಗೆ ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದ ಸಿಸಿಬಿ ವಿಶೇಷ ತಂಡ ಟಿಕೆಟ್‌ ಖರೀದಿಸುವ ನೆಪದಲ್ಲಿ ಬಂದು ದಂಧೆಕೋರರನ್ನ ಬಂಧಿಸಿದ್ದಾರೆ.

    ಇಂದು ರಾತ್ರಿ 7:30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯ ಶುರುವಾಗಲಿದೆ. ಆರ್‌ಸಿಬಿ ಚಿನ್ನಸ್ವಾಮಿಯಲ್ಲಿ ಆಡುತ್ತಿರುವ 100ನೇ ಪಂದ್ಯವೂ ಇದಾಗಿದೆ.

  • IPL 2025 | ಸೂಪರ್‌ ಸಂಡೇನಲ್ಲಿ ಚೆನ್ನೈ Vs ಮುಂಬೈ ಮೆಗಾ ಫೈಟ್‌

    IPL 2025 | ಸೂಪರ್‌ ಸಂಡೇನಲ್ಲಿ ಚೆನ್ನೈ Vs ಮುಂಬೈ ಮೆಗಾ ಫೈಟ್‌

    ಮುಂಬೈ: ಐಪಿಎಲ್‌ (IPL 2025) ಇತಿಹಾಸದಲ್ಲಿ ತಲಾ ಐದು ಬಾರಿ ಚಾಂಪಿಯನ್‌ ಪಟ್ಟ ಗೆದ್ದು ಅತ್ಯಂತ ಯಶಸ್ವಿ ತಂಡಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (CSK vs MI) 18ನೇ ಆವೃತ್ತಿ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿವೆ. ಉಭಯ ತಂಡಗಳು ಗೆಲುವಿಗಾಗಿ ಹಾತೊರೆಯುತ್ತಿದ್ದು, ಮಹತ್ವದ ಪಂದ್ಯದಲ್ಲಿ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ.

    ಇಂದು ಸಂಜೆ 7:30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede stadium) ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳು ಈವರೆಗೆ 38 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 18ರಲ್ಲಿ ಸಿಎಸ್‌ಕೆ, 20 ಪಂದ್ಯಗಳಲ್ಲಿ ಮುಂಬೈ ಗೆಲುವು ಸಾಧಿಸಿದೆ. ಪ್ರಸ್ತುತ ಆವೃತ್ತಿಯಲ್ಲಿ ಮುಂಬೈ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ಕೇವಲ 2 ಪಂದ್ಯಗಳಲ್ಲಿ ಗೆದ್ದು ಕೊನೆಯ ಸ್ಥಾನದಲ್ಲಿದೆ.

    ಈಗಾಗಲೇ ಉಭಯ ತಂಡಗಳು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಎದುರಾಗಿದ್ದು, ಚೆನ್ನೈ ಜಯಭೇರಿ ಬಾರಿಸಿತ್ತು. ಅಲ್ಲದೇ ಚೆನ್ನೈ ಕಳೆದ 5 ಮುಖಾಮುಖಿಯಲ್ಲಿ ಎರಡೂ ಬಾರಿಯೂ ಮುಂಬೈಯನ್ನು ಸೋಲಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಮುಂಬೈ ತಂಡ ಕಾಯುತ್ತಿದೆ. ನ್ನೈಗೆ ಹೋಲಿಸಿದ್ರೆ ಮುಂಬೈ ತಂಡ ಬಲಿಷ್ಠವಾಗಿದೆ.

    ರೋಹಿತ್ ಶರ್ಮಾ ಅವರು ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದರು, ರಿಕಲ್ಟನ್‌, ತಿಲಕ್ ವರ್ಮಾ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಮುಂತಾದವರು ಬ್ಯಾಟಿಂಗ್‌ನಲ್ಲಿ ಬಲ ತುಂಬುತ್ತಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ ಜಸ್ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌, ಮಿಚೆಲ್‌ ಸ್ಯಾಂಟ್ನರ್‌ ತಂಡಗಳ ಕೈ ಹಿಡಿಯುವ ನಿರೀಕ್ಷೆಯಲ್ಲಿದೆ. ಅಲ್ಲದೇ ಉಭಯ ತಂಡಗಳಿಗೆ ಇದು ನಿರ್ಣಾಯಕ ಪಂದ್ಯ ಎನಿಸಿದ್ದು, ಯಾರು ಸೋತರು ಪ್ಲೇ ಆಫ್ಸ್‌ ಹಾದಿ ಬಹುತೇಕ ಬಂದ್‌ ಆಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್‌ ವಿಶ್ಲೇಷಕರು ಅಂದಾಜಿಸಿದ್ದಾರೆ.