Tag: crying

  • ವಿದ್ಯಾರ್ಥಿಯಿಂದ ಅವಾಚ್ಯ ಪೋಸ್ಟ್- ಕಾಲೇಜು ವೇದಿಕೆಯಲ್ಲೇ ಕಣ್ಣೀರಿಟ್ಟ ಸಾ.ರಾ ಮಹೇಶ್

    ವಿದ್ಯಾರ್ಥಿಯಿಂದ ಅವಾಚ್ಯ ಪೋಸ್ಟ್- ಕಾಲೇಜು ವೇದಿಕೆಯಲ್ಲೇ ಕಣ್ಣೀರಿಟ್ಟ ಸಾ.ರಾ ಮಹೇಶ್

    ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಕಾರ್ಯ ವೈಖರಿ ಬಗ್ಗೆ ಅವಾಚ್ಯ ಪದಗಳಲ್ಲಿ ವಿದ್ಯಾರ್ಥಿ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಕಾಲೇಜು ವೇದಿಕೆಯಲ್ಲಿ ಶಾಸಕ ಸಾರಾ ಮಹೇಶ್ ಕಣ್ಣೀರು ಹಾಕುತ್ತಾ ಎಚ್ಚರಿಕೆ ನೀಡಿದ್ದಾರೆ.

    ಮೈಸೂರು ಜಿಲ್ಲೆಯ ಕೆ.ಆರ್. ನಗರ ಕ್ಷೇತ್ರದ ಸರಕಾರಿ ಕಾಲೇಜು ಕಟ್ಟಡ ಉದ್ಘಾಟನೆ ವಿಚಾರವಾಗಿ ಅವಹೇಳಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿ ಪೋಸ್ಟ್ ಹಾಕಿದ್ದ. ಕಾಲೇಜು ಕಟ್ಟಡ ಉದ್ಘಾಟಿಸಿ ಕಾಲೇಜು ವೇದಿಕೆಯಲ್ಲೇ ಕಣ್ಣೀರು ಹಾಕಿದ ಶಾಸಕ ಸಾ.ರಾ. ಮಹೇಶ್, ವಿದ್ಯಾರ್ಥಿ ಹಾಕಿದ್ದ ಪೋಸ್ಟ್ ಓದುತ್ತಾ ವಿದ್ಯಾರ್ಥಿಗೆ ಎಚ್ಚರಿಕೆ ನೀಡಿದರು. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದರೂ ಯಾಕೆ ಈ ರೀತಿ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

    ಇಂತಹ ಆಯೋಗ್ಯನನ್ನು ಇಟ್ಟುಕೊಂಡಿದ್ದರಲ್ಲ ಎಂದು ಪ್ರಾಂಶುಪಾಲರಿಗೆ ಪ್ರಶ್ನಿಸಿದರು. ನಾನು ಮನಸ್ಸು ಮಾಡಿದ್ರೆ ಸಸ್ಪಂಡ್ ಮಾಡಿಸುತ್ತಿದ್ದೆ. ನಮ್ಮ ಅಪ್ಪ-ಅಮ್ಮ ನನಗೆ ಸಂಸ್ಕಾರ ಕಲಿಸಿದ್ದಾರೆ. ನಾನು ನಿಮ್ಮ ಜಾತಿಯವನಲ್ಲ ಎಂಬ ಕಾರಣಕ್ಕೆ ಕೆಟ್ಟ ಪದ ಉಪಯೋಗಿಸಿದ್ದೀರಾ. ನನಗೂ ಸ್ವಾಭಿಮಾನ ಇದೆ. ಪ್ರತಿ ನಿತ್ಯ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗುವ ಮೂಲಕ ವಿದ್ಯಾರ್ಥಿಗಳ ರೀತಿ ಕೆಲಸ ಮಾಡುತ್ತಿದ್ದೇನೆ. ಇಷ್ಟೆಲ್ಲ ಕೆಲಸ ಮಾಡಿದ್ದೇನೆ. ಮನಃಸಾಕ್ಷಿ ಬೇಡ ನಿಮಗೆ ಎಂದು ಕಣ್ಣೀರು ಹಾಕುತ್ತಾ ಪ್ರಶ್ನಿಸಿದರು. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ. ಜಿಲ್ಲಾ ಪಂಚಾಯ್ತಿಯಲ್ಲಿ ಮೂರು ಬಾರಿ ಗೆದ್ದು ಏನೇನು ಮಾಡಿದ್ದಾನೆ ಅಂತ ಕೇಳು ಹೋಗಿ, ಹುಷಾರ್ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು. ನನಗೂ ಇವನಷ್ಟುದ್ದದ ಮಗನಿದ್ದಾನೆ. ಮೊದಲನೇಯವನು ಅವರ ಅಮ್ಮನ ರೀತಿ ಒಳ್ಳೆಯವನು. ಎರಡನೇಯವನು ನನ್ ಥರಾ ಕೆಟ್ಟವನು ಹುಷಾರ್ ಎಂದು ಹೇಳಿದರು.

    ನನಗೆ ಬೈರಿ, ನನ್ನ ತಾಯಿಗೆ ಬೈದ್ರೆ ಹೇಗೆ ಎಂದು ಪ್ರಶ್ನಿಸಿದರು. ಎಷ್ಟು ನೋಯಿಸಿದ್ರು ಅಷ್ಟೇ ಪಣ್ಯಾತ್ಮರು ನನ್ನ ಕೈ ಹಿಡಿಯುತ್ತಾರೆ. ನಿನ್ನಂತವರು ಎಷ್ಟು ಬೊಗಳಿದ್ರು ನಾನು ಏನೂ ಆಗಲ್ಲ. ನಾನು ಹುಟ್ಟುತ್ತಲೇ ಶ್ರೀಮಂತ ಅಲ್ಲ, ಸೈಕಲ್ ಹೊಡ್ಕೊಂಡೆ ಬೆಳೆದದ್ದು. ದೇವರು ನನ್ನ ಚೆನ್ನಾಗಿ ಇಟ್ಟಿದ್ದಾನೆ. ವಿದ್ಯಾರ್ಥಿಗಳು ಸೈಕಲ್ ಮತ್ತು ಸ್ಕೂಟರ್ ಗಳನ್ನ ಸ್ಟ್ಯಾಂಡ್ ನಲ್ಲೇ ನಿಲ್ಲಿಸಬೇಕು. ಕಾಲೇಜಿನ ಕಾರಿಡಾರ್ ನಲ್ಲಿ ಕಂಡ್ರೆ ನೀವ್ ಹುಬ್ಬಳ್ಳಿ, ಅಥವಾ ಧಾರವಾಡದಲ್ಲಿರ್ತೀರಾ ಎಂದು ಹೇಳುತ್ತಾ ವೇದಿಕೆಯಲ್ಲೇ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಬಿಲ್

    ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಬಿಲ್

    ನ್ಯೂಯಾರ್ಕ್: ರೋಗಿಯೊಬ್ಬರು ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ ಹೆಚ್ಚುವರಿ 40 ಡಾಲರ್(3,100 ರೂ.) ಬಿಲ್ ವಿಧಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

    ಈ ಕುರಿತು ಕ್ಯಾಮಿಲಿ ಜಾನ್ಸನ್ ತನ್ನ ಸಹೋದರಿಯ ಆಸ್ಪತ್ರೆಯ ಬಿಲ್‍ನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಆಕೆಯ ಸಹೋದರಿಯು ಅಪರೂಪದ ಕಾಯಿಲೆಯಿಂದಾಗಿ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಭಾವುಕರಾದರು. ಈ ಹಿನ್ನೆಲೆಯಲ್ಲಿ ವೈದ್ಯರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ರೋಗಿಗೆ ಯಾವುದೇ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡದೇ ಹೆಚ್ಚುವರಿ ಶುಲ್ಕ ವಿಧಿಸಿದ್ದಾರೆ ಎಂದು ಕ್ಯಾಮಿಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ

    ಈ ಹಿಂದೆ ಅಮೆರಿಕದ ವೈದ್ಯರೊಬ್ಬರು ಆಸ್ಪತ್ರೆಯ ವಿರುದ್ಧ ಕಿಡಿಕಾರಿದ್ದರು. ರೋಗಿಗಳಿಗೆ ಆರೋಗ್ಯ ಸೇವೆ ನೀಡುವ ಮುನ್ನ ಅವರ ಮಾನಸಿಕ ಸ್ಥಿತಿಯ ಬಗ್ಗೆ ಅಸಂಬಂಧ ಪ್ರಶ್ನೆಗಳನ್ನ ಕೇಳಿ ಅವರನ್ನು ಭಾವುಕರನ್ನಾಗಿ ಮಾಡಿ ಹೆಚ್ಚುವರಿ ಬಿಲ್ ವಿಧಿಸುವುದೇ ಇಲ್ಲಿನ ವೈದ್ಯರ ಕೆಲಸವಾಗಿ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮಳೆಯಿಂದ ಸಂಭವಿಸಿದ ಅವಾಂತರಗಳೇನು?

  • ಸಿದ್ದರಾಮಯ್ಯ ಮುಂದೆ ಬಿಕ್ಕಿ-ಬಿಕ್ಕಿ ಅತ್ತ ಮಹಿಳೆ

    ಸಿದ್ದರಾಮಯ್ಯ ಮುಂದೆ ಬಿಕ್ಕಿ-ಬಿಕ್ಕಿ ಅತ್ತ ಮಹಿಳೆ

    ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹವಾಲು ಸಲ್ಲಿಕೆ ವೇಳೆ ಮಹಿಳೆಯೊಬ್ಬರು ಕಣ್ಣೀರು ಹಾಕಿ ಗೋಳಾಡಿದ ಘಟನೆ ಗುರುವಾರ ನಡೆದಿದೆ.

    ಬಾದಾಮಿ ತಾಲೂಕಿನ ಶಿರಬಡಗಿ ಗ್ರಾಮದ ನಿವಾಸಿ ಸಾವಿತ್ರಿ ಟೆಂಗೇರ್ ಅವರು ಆಶ್ರಯ ಯೋಜನೆಯಡಿ ಮನೆ ಕೊಡಿಸಿ. ನಮ್ಮ ಗೋಳು ಕೇಳೋರು ಯಾರೂ ಇಲ್ಲ ಎಂದು ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಗ್ರಾಮ ಪಂಚಾಯ್ತಿಯಿಂದ ಮನೆ ನೀಡುತ್ತಿಲ್ಲ. ಈ ಹಿಂದೆಯೂ ನಿಮ್ಮನ್ನು ಭೇಟಿಯಾಗಿದ್ದೆ ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.

    ಸುಮಾರು ಮೂರು ತಿಂಗಳ ಬಳಿಕ ಬಾದಾಮಿಗೆ ಆಗಮಿಸಿದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯಗೆ ಅಹವಾಲು ಸಲ್ಲಿಸಲು ಕ್ಷೇತ್ರದ ಜನರು ಮುಗಿಬಿದ್ದರು. ಬಾದಾಮಿ ಪಟ್ಟಣ ಶಾಸಕರ ಗೃಹಕಚೇರಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಬಾದಾಮಿ ತಾಲೂಕಿನ ಮಲ್ಲಾಪುರ ಎಸ್ ಎಲ್ ಗ್ರಾಮದ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಗ್ರಾಮಕ್ಕೆ ಸಂಚರಿಸಲು ರಸ್ತೆಯಿಲ್ಲದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಿಂದ ಗ್ರಾಮಕ್ಕೆ 2 ಕಿ.ಮೀ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಟ್ಟರು.

  • ಶಿವಳ್ಳಿ ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಡಿಕೆಶಿ!

    ಶಿವಳ್ಳಿ ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಡಿಕೆಶಿ!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದಿವಂಗತ ಸಚಿವ ಸಿ.ಎಸ್ ಶಿವಳ್ಳಿ ಅವರನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.

    ಇಂಗಳಗಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ವೇದಿಕೆ ಮೇಲೆ ಮಾತನಾಡುತ್ತಿದ್ದ ಅವರು ಶಿವಳ್ಳಿ ಅವರನ್ನು ಕಳೆದುಕೊಂಡಿರುವುದು ಮನಸ್ಸಿಗೆ ಬಹಳ ನೋವನ್ನು ತಂದಿದೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

    ಶಿವಳ್ಳಿ ಜಾತಿ ಧರ್ಮ ಬೇಧ ಭಾವ ಮಾಡಲಿಲ್ಲ. ನಿಮಗೆ ಯಾವತ್ತಾದ್ರೂ ಅವನು ಕಿರುಕುಳ ನೀಡಿದ್ದಾನಾ ಹೇಳಿ? ಪಾಪ ಶಿವಳ್ಳಿ ಪತ್ನಿ ಕುಸುಮಾ ಅವರು ಇಂದು ಚುನಾವಣೆಗೆ ನಿಂತಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಗೆಲ್ಲಿಸಿ ಮೈತ್ರಿ ಸರ್ಕಾರವನ್ನು ಬಲಗೊಳಿಸಿ ಎಂದು ಹೇಳಿ ಭಾವುಕರಾದರು.

    ಈಗ ಚುನಾವಣೆ ಬಂದಿದೆ ವೋಟ್ ಕೊಡಿ ಎಂದು ಕಣ್ಣಿರು ಹಾಕುತ್ತಿಲ್ಲ. ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಅವನು. ಶಿವಳ್ಳಿಯನ್ನು ಕಳೆದುಕೊಂಡು ನನಗೆ ನೋವಾಗಿದೆ. ಹೀಗಾಗಿ ನನಗೆ ಅಳು ಬಂದಿದೆ. ನಾನು ನಾಟಕ ಮಾಡುತ್ತಿಲ್ಲ ಎಂದು ಹೇಳಿ ಭಾವುಕರಾದರು.

  • ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಪೀಕರ್ ರಮೇಶ್ ಕುಮಾರ್ – ವಿಡಿಯೋ ನೋಡಿ

    ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಪೀಕರ್ ರಮೇಶ್ ಕುಮಾರ್ – ವಿಡಿಯೋ ನೋಡಿ

    ಕೋಲಾರ: ನಗರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ವೇದಿಕೆ ಮೇಲೆಯೇ ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರು ಹಾಕಿದ್ದಾರೆ.

    ಕೋಲಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕುರುಬರ ಸಂಘದ ವತಿಯಿಂದ ನಗರದ ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅದ್ಧೂರಿ ಕನಕ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ರಮೇಶ್ ಕುಮಾರ್ ಅವರು ಭಾವುಕರಾದರು. ಅಲ್ಲದೇ ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ ಎಂದು ಹೇಳಿ ಕಣ್ಣೀರು ಹಾಕಿದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರಕ್ಕೆ ಬರುವಂತೆ ಮನವಿ ಮಾಡಿದ್ದೆ. ಆದರೆ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲು ಅನುಭವಿಸಿದರು. ಸಿದ್ದರಾಮಯ್ಯ ಅವರು ಸೋತಿದ್ದು ತುಂಬಾ ದು:ಖವಾಯಿತು. ಒಬ್ಬ ಕುರಿಕಾಯೋ ಸಮಾಜದಲ್ಲಿ ಹುಟ್ಟಿ 13 ಬಾರಿ ಬಜೆಟ್ ಮಂಡಿಸಿದ ಧೀಮಂತ ನಾಯಕ ಸಿದ್ದರಾಮಯ್ಯ. ಅವರನ್ನ ಏಕವಚನದಲ್ಲಿ ಮಾತನಾಡಿಸುವವರಿಗೆ ತಕ್ಕ ಪಾಠ ಕಲಿಸಿ ಎಂದು ಹೇಳುವ ಮೂಲಕ ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರಿಗೆ ರಮೇಶ್ ಕುಮಾರ್ ಟಾಂಗ್ ನೀಡಿದರು.

    ಸಮಾಜದಲ್ಲಿ ಎಲ್ಲಾ ವರ್ಗದವರ ಒಳಿತಿಗಾಗಿ ಸಿದ್ದರಾಮಯ್ಯ ಅವರು ಶ್ರಮಿಸಿದ್ದಾರೆ. ಅವರ ಆಡಳಿತದಲ್ಲಿ ಯಾರಿಗೂ ಅನ್ಯಾಯ ಮಾಡದೇ ಯಶಸ್ವಿಯಾಗಿ ಸರ್ಕಾರ ನಡೆಸಿದ್ದಾರೆ. ಇಂತಹ ಧೀಮಂತ ನಾಯಕನನ್ನು ಕೆಳಗೆ ಬೀಳಲು ಬಿಡಬಾರದು ಎಂದು ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕಿದ್ರು ಶಿವರಾಮೇಗೌಡ!

    ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕಿದ್ರು ಶಿವರಾಮೇಗೌಡ!

    ಮಂಡ್ಯ: ಜಿಲ್ಲೆಯಲ್ಲಿ ಇದೀಗ ಕಣ್ಣೀರಿನ ಪಾಲಿಟಿಕ್ಸ್ ಆರಂಭವಾಗಿದೆ. ಮಂಡ್ಯ ಲೋಕಸಭಾ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡ ಅವರು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.

    ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಹಿಂದೆ ನಡೆದ ಪತ್ರಕರ್ತನ ಗಂಗಾಧರ ಮೂರ್ತಿ ಕೊಲೆ ಪ್ರಕರಣ ನೆನೆದು ಕಣ್ಣೀರು ಹಾಕಿದ್ದಾರೆ. ಪತ್ರಕರ್ತನ ಕೊಲೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಬಂದಿತ್ತು. ಆರೋಪ ಕೇಳಿ ಬಂದ ಬಳಿಕ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ದೇವರೇ ನನಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ನಿಮಗೆ ಗೊತ್ತು. ಬೇರೆಯವರಿಗೆ ಗೊತ್ತಿಲ್ಲ. ಆದರೆ ನಾನು ನಿರಪರಾಧಿ ಎಂಬುದು ಆನಂತರ ಸಾಬೀತಾಯ್ತು. ಆದರೂ ಕೂಡ ಈಗ ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಲೇ ಸೇರಿದ್ದ ಜನರ ಮುಂದೆ ಅತ್ತುಬಿಟ್ಟರು.

    ಇಂದು ಕುಮಾರಸ್ವಾಮಿ ಅವರು ಶಿವರಾಮೇ ಗೌಡ ಅವರಿಗೆ ಅಧಿಕಾರವಿಲ್ಲ, ಅವರಿಗೆ ಅಧಿಕಾರಿ ಕೊಡಿಸಬೇಕು ಅಂತ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿಕೊಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಯಾವತ್ತೂ ಯಾರ ಜೇಬಿಗೂ ಕೈ ಹಾಕಿಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ ಅಂತ ಅವರು ತಿಳಿಸಿದ್ರು.

    ಕುಡುಕನಲ್ಲಿ ಮನವಿ:
    ಶಿವರಾಮೇಗೌಡರು ಮಾತನಾಡುವಾಗ ಕುಡುಕನೊಬ್ಬ ಪದೇ ಪದೇ ಮಧ್ಯೆ ಮಾತನಾಡುತ್ತಿದ್ದನು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡರು ಕುಡುಕನಲ್ಲಿ, ನಿನ್ನ ದಮ್ಮಯ್ಯ ಕಣೋ ಕಾಲಿಗೆ ಬೀಳುತ್ತೇನೆ ಕುಳಿತುಕೋ.. ಅಂತ ಜೋರಾಗಿ ಗದರಲಾಗದೇ ಸುಮ್ಮನಿರುವಂತೆ ಬೇಡಿಕೊಂಡ ಪ್ರಸಂಗ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕತ್ತಲಾದ್ರೂ ಮನೆಗೆ ಕಳುಹಿಸದ ಅಧಿಕಾರಿಗಳು – ಮಡಿಕೇರಿಯಲ್ಲಿ ಲೇಡಿ ಹೋಮ್‍ಗಾರ್ಡ್ಸ್ ಕಣ್ಣೀರು

    ಕತ್ತಲಾದ್ರೂ ಮನೆಗೆ ಕಳುಹಿಸದ ಅಧಿಕಾರಿಗಳು – ಮಡಿಕೇರಿಯಲ್ಲಿ ಲೇಡಿ ಹೋಮ್‍ಗಾರ್ಡ್ಸ್ ಕಣ್ಣೀರು

    ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಿರಾಶ್ರಿತರ ಜೊತೆ ಮಹಿಳಾ ಪೊಲೀಸರು ಕೂಡ ಪರಿತಾಪ ಪಡುವಂತಾಗಿದೆ. ರಾತ್ರಿಯಾದ್ರೂ ಮನೆಗೆ ಕಳುಹಿಸದಕ್ಕೆ ಮಹಿಳಾ ಹೋಂಗಾರ್ಡ್ ಗಳು ಕಣ್ಣೀರಿಟ್ಟಿದ್ದಾರೆ.

    ವಾಲ್ಮೀಕಿ ಭವನದ ಮುಖ್ಯ ರಸ್ತೆಯಲ್ಲಿ ಬಂದೋಬಸ್ತ್ ಗೆಂದು ನಿಯೋಜಿಸಿದ್ದ ಗೃಹ ರಕ್ಷಕದಳದ ಮಹಿಳಾ ಸಿಬ್ಬಂದಿಯನ್ನು ಕತ್ತಲೆಯಲ್ಲಿ ರಾತ್ರಿ 8 ಗಂಟೆಯಾದ್ರೂ ರಿಲೀವ್ ಮಾಡದೇ ಕರ್ತವ್ಯ ಮುಂದುವರಿಸಿ ಅಂತ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದ್ದಾರೆ. ರಾತ್ರಿ ವೇಳೆ ಕರ್ತವ್ಯ ನಿಭಾಯಿಸುತ್ತಿದ್ದೇವೆ ಕನಿಷ್ಠ ಇಲಾಖೆಯಿಂದ ಟಾರ್ಚ್ ಕೂಡ ನೀಡಿಲ್ಲ ಅಂತ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

    ಸ್ಥಳಕ್ಕೆ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಭೇಟಿ ನೀಡಿ ಮಹಿಳಾ ಸಿಬ್ಬಂದಿ ಆಲಿಸಿ ಸಂಬಂಧಪಟ್ಟವರೊಂದಿಗೆ ಮಾತನಾಡ್ತೀನಿ ಅಂತ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುರ್ಬಳಕೆಯಾಗಿರುವ ಹಣದ ಲೆಕ್ಕ ಕೇಳಿದಕ್ಕೆ ಸಭೆಯಲ್ಲೇ ಅಧ್ಯಕ್ಷೆ ಕಣ್ಣೀರು!

    ದುರ್ಬಳಕೆಯಾಗಿರುವ ಹಣದ ಲೆಕ್ಕ ಕೇಳಿದಕ್ಕೆ ಸಭೆಯಲ್ಲೇ ಅಧ್ಯಕ್ಷೆ ಕಣ್ಣೀರು!

    ಕೋಲಾರ: ದುರ್ಬಳಕೆಯಾಗಿರುವ ಹಣದ ಲೆಕ್ಕ ಕೇಳಿದ್ದಕ್ಕೆ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಗಳಗಳನೆ ಕಣ್ಣೀರು ಹಾಕಿದ ಪ್ರಸಂಗ ಇಂದು ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಕಣ್ಣೀರು ಹಾಕಿದ್ದಾರೆ.

    ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷೆ ಕಣ್ಣೀರು ಹಾಕಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಪಂಚಾಯತಿಯ ಸ್ಟಾಂಪ್ ಡ್ಯೂಟಿ ಹಣ ಹಾಗೂ ಕಟ್ಟಡದ ನವೀಕರಣದ ಗೋಲ್ ಮಾಲ್ ನಡೆದಿದ್ದು ಸಂಪೂರ್ಣ ಮಾಹಿತಿ ನೀಡುವಂತೆ ಸದಸ್ಯರು ಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.

    ದುರ್ಬಳಕೆ ಹಣದ ಲೆಕ್ಕ ಕೇಳಿದ ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೇ ಅಸಹಾಯಕಳಾಗಿ ಗಳಗಳನೆ ಅಧ್ಯಕ್ಷೆ ಕಣ್ಣೀರು ಹಾಕಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಅವರನ್ನು ಸಮಾಧಾನ ಪಡಿಸಿದ ಬಳಿಕ ಮತ್ತೆ ಸಭೆ ಆರಂಭವಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಾತಂತ್ರ್ಯ ದಿನಾಚರಣೆಯಂದೇ ಕಣ್ಣೀರಿಟ್ಟ ಶಾಲಾ ಮಕ್ಕಳು!

    ಸ್ವಾತಂತ್ರ್ಯ ದಿನಾಚರಣೆಯಂದೇ ಕಣ್ಣೀರಿಟ್ಟ ಶಾಲಾ ಮಕ್ಕಳು!

    ಧಾರವಾಡ: ಇಂದು ದೇಶಾದ್ಯಂತ 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದೇ ಧಾರವಾಡ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು ಕಣ್ಣೀರು ಹಾಕಿದ್ದಾರೆ.

    ಹೌದು. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಪಥ ಸಂಚಲನದಲ್ಲಿ ಬ್ಯಾಂಡ್ ಬಾರಿಸಲು ಅವಕಾಶ ನೀಡದ ಕಾರಣ ಮಕ್ಕಳು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಬೇಸರದಿಂದ ಮಕ್ಕಳು ವಾಪಸ್ ಆಗಿದ್ದಾರೆ.

    ಕಣ್ಣೀರು ಹಾಕಿದ್ದು ಯಾಕೆ?:
    ಜಿಲ್ಲಾಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಬ್ಯಾಂಡ್ ಬಾರಿಸಲು ಧಾರವಾಡದ ಪ್ರೆಸೆಂಟೆಷನ್ ಸ್ಕೂಲ್ ಮಕ್ಕಳ ಬ್ಯಾಂಡ್ ತಂಡಕ್ಕೆ ಜಿಲ್ಲಾಧಿಕಾರಿಯೇ ಆಹ್ವಾನ ನೀಡಿದ್ದರು. ಹೀಗಾಗಿ ಡಿಸಿ ಆಹ್ವಾನದ ಮೇರೆಗೆ ಧಾರವಾಡದ ಪ್ರಜೆಂಟೇಶನ್ ಶಾಲೆ ಮಕ್ಕಳು ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದರು. ಆದ್ರೆ ಡಿಸಿ ಅನುಮತಿ ಇದ್ದರೂ ಕೂಡ ಪೊಲೀಸ್ ಬ್ಯಾಂಡ್ ತಂಡವು ಶಾಲಾ ಮಕ್ಕಳನ್ನು ಹೊರಹಾಕಿದೆ. ಈ ಕಾರಣದಿಂದ ಮಕ್ಕಳು ಕಣ್ಣೀರು ಹಾಕುತ್ತಲೇ ಕಾರ್ಯಕ್ರಮದಿಂದ ಹೊರಬಂದಿದ್ದಾರೆ.

    ಕೆಲ ದಿನಗಳಿಂದ ಪೂರ್ವ ತಯಾರಿ ನಡೆಸಿದ್ದ ಮಕ್ಕಳ ಪ್ರತಿಭೆ ಗಮನಿಸಿ ಜಿಲ್ಲಾಧಿಕಾರಿ ಮಂಗಳವಾರ ಸಂಜೆ ಈ ಅನುಮತಿ ನೀಡಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಎಚ್‍ಡಿಕೆ

    ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಎಚ್‍ಡಿಕೆ

    ನವದೆಹಲಿ: ಪಕ್ಷದ ಕಚೇರಿಯಲ್ಲಿ ನಡೆದಂತಹ ಕಾರ್ಯಕ್ರಮ ಅದು ನನ್ನ ಕುಟುಂಬದ ಕಾರ್ಯಕ್ರಮವಾಗಿತ್ತು. ಆ ಕುಟುಂಬದ ಕಾರ್ಯಕ್ರಮದಲ್ಲಿ ನನ್ನಲ್ಲಿರುವಂತಹ ನೋವುಗಳನ್ನು ಹೇಳುತ್ತಿರಬೇಕಾದ್ರೆ ಭಾವಾನಾತ್ಮಕವಾಗಿ ಕಣ್ಣೀರು ಹಾಕಿದ್ದು ಸಹಜ. ಅದು ನನ್ನ ಹುಟ್ಟು ಗುಣ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೊಬ್ಬ ಮಾನವೀಯತೆಯ ಮನುಷ್ಯನಾಗಿದ್ದೇನೆ. ಇದನ್ನು ಮೊದಲಿನಿಂದಲೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಅದರ ಹಿನ್ನೆಲೆಯಲ್ಲಿ ನನ್ನ ಕುಟುಂಬದ ಸದಸ್ಯರ ಜೊತೆ ನನ್ನ ಕೆಲವೊಂದು ನೋವಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿರಬೇಕಾದ್ರೆ ಕಣ್ಣಲ್ಲಿ ನೀರು ಹಾಕಿರುವುದು ಸಹಜ ಅಂದ್ರು.

    ಆ ಕ್ಯಾಸೆಟ್ ನ ರೀವೈಂಡ್ ಮಾಡಿ ಬೇಕಾದ್ರೆ ನೋಡಿ. ಅಲ್ಲಿ ಕಾಂಗ್ರೆಸ್ ಪಕ್ಷ ನನಗೆ ತೊಂದರೆ ಕೊಟ್ಟಿದೆ. ಕಾಂಗ್ರೆಸ್ ನ ನಾಯಕರು ನನಗೆ ತೊಂದರೆ ಕೊಟ್ಟಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ನಾನು ಇಷ್ಟೆಲ್ಲಾ ಕಷ್ಟದಲ್ಲಿದ್ದು ಸಾಲಮನ್ನಾ ಮಾಡತಕ್ಕಂತಹ ಒಂದು ದಿಟ್ಟ ನಿರ್ಧಾರ ಮಾಡಿ ಕಾರ್ಯಕ್ರಮಗಳನ್ನು ಕೊಡ್ತಾ ಇದ್ದೇನೆ. ಉತ್ತಮವಾದ ಒಂದು ಕೆಲಸವನ್ನು ಮಾಡಲು ಎಲ್ಲೋ ಒಂದು ಕಡೆ ಪ್ರೋತ್ಸಾಹ ದೊರಕುತ್ತಿಲ್ಲ. ಸಾರ್ವಜನಿಕರ ಬಗ್ಗೆ ನನ್ನಲ್ಲಿರುವ ಕಮಿಟ್‍ಮೆಂಟ್ ಗಳ ಬಗ್ಗೆ ರಾಜ್ಯದ ಜನತೆಯಲ್ಲಿ ಎಲ್ಲೋ ಒಂದು ಕಡೆ ಇನ್ನೂ ವಿಶ್ವಾಸ ಮೂಡುತ್ತಿಲ್ಲ ಎನ್ನುವ ಹಿನ್ನೆಲೆಯಲ್ಲಿ ನಾನು ಭಾವನಾತ್ಮಕವಾಗಿ ಮಾತಾಡಿದ್ದೇನೆ ಅಂತ ಅವರು ಸ್ಪಷ್ಟನೆ ನೀಡಿದ್ರು.

    ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ಬಗ್ಗೆ ಆ ಸಭೆಯಲ್ಲಿ ನಾನು ಚರ್ಚೆ ಮಾಡಿಲ್ಲ. ಆದ್ರೆ ಈ ವಿಚಾರ ಇಂದು ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿದೆ ಅಂತ ವಿಷಾದ ವ್ತಕ್ತಪಡಿಸಿದ್ರು.