Tag: cry

  • ಪ್ರತಿ ಬಾರಿಯೂ ನನ್ನ ಬಳಸಿಕೊಂಡು ನಂತ್ರ ಕೈ ಬಿಡ್ತಾರೆ: ರಾಖಿ ಕಣ್ಣೀರು

    ಪ್ರತಿ ಬಾರಿಯೂ ನನ್ನ ಬಳಸಿಕೊಂಡು ನಂತ್ರ ಕೈ ಬಿಡ್ತಾರೆ: ರಾಖಿ ಕಣ್ಣೀರು

    ಮುಂಬೈ: ಎರಡನೇ ಬಾರಿಯೂ ಬಿಗ್ ಬಾಸ್ ರಿಯಾಲಿಟಿ ಶೋನಿಂದ ನಟಿ ರಾಖಿ ಸಾವಂತ್ ಹೊರಗುಳಿದ್ದಿದ್ದು, ಈ ಸಂಬಂಧ ಇದೀಗ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

    ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನಟಿ ಎಂದಿನಿಂತೆ ಜಿಮ್ ಗೆ ತೆರಳುತ್ತಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು, ಬಿಗ್ ಬಾಸ್ ನಿಂದ ಎರಡನೇ ಬಾರಿ ಹೊರ ಬಂದಿರುವುದಕ್ಕೆ ಅಸಮಾಧಾನ ಹೊರಹಾಕಿದರು.

    ಪ್ರತಿ ವರ್ಷ ನೀವು ನನಗೆ ಕರೆ ಮಾಡುತ್ತೀರಿ. ಮತ್ತು ನಿಮಗೆ ಬೇಕಾದಂತೆ ನನ್ನನ್ನು ಬಳಸಿಕೊಳ್ಳುತ್ತೀರಿ ಎಂಬುದನ್ನು ಇದು ತೋರಿಸುತ್ತಿದೆ. ನಾನು ಟಿಶ್ಯೂ ಪೇಪರ್ ಅಲ್ಲ ಆದರೆ ಜೀವಂತ, ಉಸಿರಾಡುವ ಮನುಷ್ಯ. ಕಿತ್ತಳೆ ಹಣ್ಣಿನಲ್ಲಿ ರಸ ಇರುವವರೆಗೆ ಅದನ್ನು ಹಿಂಡುತ್ತೀರಿ ನಂತರ ಸಿಪ್ಪೆಯನ್ನು ಎಸೆಯುತ್ತೀರಿ. ಅಂತೆಯೇ ನನ್ನ ಮನರಂಜನೆ ಬೇಕಾಗುವವರೆಗೆ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದೀರಿ. ನಾನು ಕಿತ್ತಳೆ, ನಿಂಬೆ ಅಥವಾ ಟಿಶ್ಯೂ ಪೇಪರ್ ಅಲ್ಲ, ನೀವು ನನ್ನಿಂದ ಎಲ್ಲಾ ಮನರಂಜನೆಯನ್ನು ಪಡೆಯುತ್ತೀರಿ. ಆದರೆ ನನ್ನ ಬಿಟ್ಟು ಇತರರನ್ನು ಅಂತಿಮ ಹಂತಕ್ಕೆ ಕರೆದೊಯ್ಯುತ್ತೀರಿ. ಬಿಗ್ ಬಾಸ್, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಟ್ರೋಫಿಗೆ ಅರ್ಹನಾಗಿದ್ದೆ ಎಂದು ಹೇಳುತ್ತಾ ರಾಖಿ ಕಣ್ಣೀರು ಹಾಕಿದರು.

    ಸದ್ಯ ರಾಖಿ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ರಾಖಿ ಕಣ್ಣೀರಿಗೆ ಕರಗಿದ್ದಾರೆ. ಹೌದು ನಿಮಗೆ ಮತ್ತೆ ಅನ್ಯಾಯವಾಗಿದೆ, ಇನ್ನೊಮದು ಬಾರಿ ಕರೆದರೆ ಹೋಗಬೇಡಿ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ಮತ್ತೊಬ್ಬರು. ಹೌದು ಅಲ್ಲಿ ಟಿಆರ್‍ಪಿ ಕಡಿಮೆಯಾಗುತ್ತಿದ್ದಂತೆಯೇ ಇವರ ಅವಶ್ಯಕತೆ ಅಲ್ಲಿ ಬೇಕಾಯಿತು. ಆದರೆ ಫಿನಾಲೆವರೆಗೆ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ ಎಮದು ಮತ್ತೊಬ್ಬ ಅಭಿಮಾನಿ ಕಿಡಿಕಾರಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

  • ಚರ್ಚ್, ದೇವಸ್ಥಾನದಲ್ಲಿ ಗಳಗಳನೆ ಕಣ್ಣೀರಿಟ್ಟ ಜನಾರ್ದನ ಪೂಜಾರಿ

    ಚರ್ಚ್, ದೇವಸ್ಥಾನದಲ್ಲಿ ಗಳಗಳನೆ ಕಣ್ಣೀರಿಟ್ಟ ಜನಾರ್ದನ ಪೂಜಾರಿ

    ಮಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ಇಂದು ದೇವಸ್ಥಾನ ಹಾಗೂ ಚರ್ಚ್ ನಲ್ಲಿ ಗಳಗಳನೆ ಅತ್ತುಬಿಟ್ಟರು.

    ಜನಾರ್ದನ ಪೂಜಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಚರ್ಚ್ ಗೆ ತೆರಳಿದ್ದರು. ಈ ವೇಳೆ ಅಲ್ಲಿ ಆಸ್ಕರ್ ಅವರನ್ನು ಕಂಡು ಪೂಜಾರಿ ಅವರು ಬೇಸ್ತು ಬಿದ್ದರು.

    ಆಸ್ಕರ್ ಫೆರ್ನಾಂಡಿಸ್ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಮಾಹಿತಿ ತಿಳಿದ ಪೂಜಾರಿಯವರು ದಿಢೀರನೆ ದೇವಸ್ಥಾನ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಗೆ ತೆರಳಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿಸಿದ ಪೂಜಾರಿ, ಅಲ್ಲಿ ಆಸ್ಕರ್ ನೆನೆದು ಗಳಗಳನೆ ಅತ್ತಿದ್ದೂ ಆಗಿತ್ತು. ಬಳಿಕ ನಗರದ ರೊಸಾರಿಯೋ ಚರ್ಚ್ ಗೆ ಪ್ರಾರ್ಥನೆಗಾಗಿ ತೆರಳಿದ ಸಂದರ್ಭದಲ್ಲಿ ಸ್ವತಃ ಆಸ್ಕರ್ ಫೆರ್ನಾಂಡಿಸ್ ಚರ್ಚ್ ನಲ್ಲಿರುವುದನ್ನು ಕಂಡು ಪೂಜಾರಿ ಒಂದು ಕ್ಷಣ ವಿಚಲಿತರಾದರು.

    ಬಳಿಕ ಆಸ್ಕರ್ ಜೊತೆಗೆ ಚರ್ಚ್ ನಲ್ಲಿ ಪ್ರಾರ್ಥನೆ ನಡೆಸಿದ ಪೂಜಾರಿ ಅವರು ಪರಸ್ಪರ ಆಲಿಂಗಿಸಿಕೊಂಡರು. ಆಸ್ಕರ್ ಅವರಿಗೆ ಹುಷಾರಿಲ್ಲ ಎಂದು ಪೂಜಾರಿಯವರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವ ಪೂಜಾರಿ, ದೇವರಲ್ಲಿ ಪ್ರಾರ್ಥನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ್ದರು. ಎದ್ದು ನಡೆಯಲಾಗದ ಸ್ಥಿತಿಯಲ್ಲಿರುವ ಜನಾರ್ದನ ಪೂಜಾರಿ ಅವರು, ತಮಗಿಂತ ಕಿರಿಯರಾಗಿರುವ ಆಸ್ಕರ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ತೆರಳುವಂತೆ ಮಾಡಿದ್ದು ಯಾರೆಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

  • ಕೊಡಗು ಪ್ರವಾಹ: ಮಗಳು, ಅಕ್ಕನ ಶವ ಹುಡುಕಿಕೊಡುವಂತೆ ವ್ಯಕ್ತಿ ಕಣ್ಣೀರು

    ಕೊಡಗು ಪ್ರವಾಹ: ಮಗಳು, ಅಕ್ಕನ ಶವ ಹುಡುಕಿಕೊಡುವಂತೆ ವ್ಯಕ್ತಿ ಕಣ್ಣೀರು

    ಮಡಿಕೇರಿ: ಕೊಡಗು ಪ್ರವಾಹದ ಬಳಿಕ ಇದೀಗ ಜಿಲ್ಲೆಯಲ್ಲಿ ಮಳೆರಾಯ ಕೊಂಚ ಬಿಡುವು ನೀಡಿದ್ದು, ಸದ್ಯ ಶವಗಳ ಹುಡುಕಾಟ ನಡೆಯುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬರು ತನ್ನ ಅಕ್ಕ ಹಾಗೂ ಮಗಳ ಶವವನ್ನು ಹುಡುಕಿಕೊಡುವಂತೆ ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಜೋಡುಪಾಲ ಗುಡ್ಡ ಕುಸಿದು ನಾಲ್ವರು ಕೊಚ್ಚಿಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿಲ್ಲ. ಹೀಗಾಗಿ ಅಲ್ಲಿನ ನಿವಾಸಿ ಸೋಮಯ್ಯ ತನ್ನ ಮಗಳು ಹಾಗೂ ಅಕ್ಕನ ಶವಗಳನ್ನ ಹುಡುಕಿಕೊಡುವಂತೆ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ ಕೊನೆಗೂ ಪತ್ತೆ!

    ಮಹಾಮಳೆಗೆ ಗುಡ್ಡ ಕುಸಿದು ಸೋಮಯ್ಯ ಮಗಳು ಮಂಜುಳಾ, ಅಕ್ಕ ಗೌರಮ್ಮ, ಬಾವಾ ಬಸಪ್ಪ, ಅಕ್ಕನ ಮಗಳು ಮೋನಿಷಾ ಕೊಚ್ಚಿಹೋಗಿದ್ದರು. ಆಗಸ್ಟ್ 17ರಂದು ಮನೆ ಸಮೇತ ಈ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಆಗಸ್ಟ್ 17ರಂದು ಬಸಪ್ಪ ಮೃತದೇಹ, ಆ.18ಕ್ಕೆ ಸಿಕ್ಕಿದ ಮೋನಿಷಾ ಶವ ಪತ್ತೆಯಾಗಿತ್ತು. ಆದ್ರೆ ಸೋಮಯ್ಯ ಮಗಳು ಹಾಗೂ ಅಕ್ಕನ ಮೃತದೇಹ ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ವಿದ್ಯಾಭ್ಯಾಸಕ್ಕಾಗಿ ಮಗಳನ್ನ ಅಕ್ಕನ ಮನೆಯಲ್ಲಿ ಬಿಟ್ಟಿದ್ದೆ. ನಮ್ಮ ಮನೆಯಿಂದ ಶಾಲೆಗೆ ಹೋಗಬೇಕಾದ್ರೆ ಸುಮಾರು 4 ಕಿ.ಮೀ ನಡೆಯಬೇಕಿತ್ತು. ಅಲ್ಲದೇ ನಮ್ಮ ಗ್ರಾಮದಲ್ಲಿ ಒಂದೇ ಬಸ್ ಇರುವುದು. ಹೀಗಾಗಿ ನಾನು ಆಕೆಯನ್ನು ಅಕ್ಕನ ಮನೆಯಲ್ಲಿ ಶಾಲೆಗೆ ಹೋಗಲೆಂದು ಬಿಟ್ಟಿದ್ದೆ. ಆದ್ರೆ ಮೊನ್ನೆ ಗುಡ್ಡ ಕಲುಸಿತವಾಗಿದ್ದು, ಅಕ್ಕನ ಮೆನೆಯ ಹತ್ತಿರವಿದ್ದ ತೋಡು, ದೊಡ್ಡ ಹೊಳೆಯಾಗಿ ಬಂದು ಅವರ ಮನೆಯನ್ನೇ ಕೊಚ್ಚಿಕೊಂಡು ಹೋಗಿದೆ ಅಂತ ಭಾವುಕರಾದ್ರು.  ಇದನ್ನೂ ಓದಿ: ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ

    ಸದ್ಯ ಕಾರ್ಯಾಚರಣೆ ನಡೆಯುತ್ತಿದೆ. ಆದ್ರೆ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಅಂತ ಕೇಳ್ಪಟ್ಟೆ. ಘಟನಾ ಪ್ರದೇಶಕ್ಕೆ ನಮಗೂ ಹೋಗಲು ಸಾಧ್ಯವಿಲ್ಲದಂತಾಗಿದೆ ಅಂತ ಸೋಮಯ್ಯ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತನ್ನ ದುಃಖ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಪರಿಸ್ಥಿತಿಯನ್ನು ಬೆಂಗ್ಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ- ವೃದ್ಧೆಯ ಅಳಲು

    ನನ್ನ ಪರಿಸ್ಥಿತಿಯನ್ನು ಬೆಂಗ್ಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ- ವೃದ್ಧೆಯ ಅಳಲು

    ಮಂಗಳೂರು: ದಕ್ಷಿಣ ಕನ್ನಡ-ಕೊಡಗು ಗಡಿಭಾಗ ಸಂಪಾಜೆಯ ಜೋಡುಪಾಲ ವ್ಯಾಪ್ತಿಯ ಜನರ ಪಾಡು ನರಕವಾಗಿದೆ. ತಮ್ಮದೆಲ್ಲವನ್ನೂ ಕಳೆದುಕೊಂಡು ಬಡ ಜನರು ಬೀದಿಗೆ ಬಿದ್ದಿದ್ದಾರೆ. ಜೋಡುಪಾಲದ 2 ನೇ ಮೊಣ್ಣಂಗೇರಿ ನಿವಾಸಿ 60ರ ವೃದ್ಧೆ ಗಿರಿಜಾ ಎಂಬವರು ನನ್ನ ಪರಿಸ್ಥಿತಿ ಬೆಂಗಳೂರಿನಲ್ಲಿರುವ ಮಗಳಿಗೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಗಿರಿಜಾರ ಮಗಳು ಲತಾಮಣಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಕೆಗೆ ನನ್ನ ಪರಿಸ್ಥಿತಿ ಬಗ್ಗೆ ತಿಳಿಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೊಣ್ಣಂಗೇರಿಯ ಮನೆಯಲ್ಲಿ ನಾನೊಬ್ಬಳೇ ವಾಸವಿದ್ದು, ನೋಡನೋಡುತ್ತಲೇ ಕಲ್ಲು ಬಂಡೆಗಳು ನೀರಿನೊಂದಿಗೆ ಉರುಳಿ ಬಂದು ತನ್ನ ಮನೆಯನ್ನು ಸೀಳಿಕೊಂಡು ಹೋಯಿತು. ಕೆಲಹೊತ್ತಿನಲ್ಲಿ ಕಾಡಿನಿಂದ ಆನೆಗಳು ಘೀಳಿಟ್ಟವು. ಬೆಳಗಿನವರೆಗೂ ಅಲ್ಲೆ ಪಕ್ಕದಲ್ಲಿ ಕೂತು, ಆರು ಗಂಟೆಗೆ ಇಳಿದು ಬಂದಿದ್ದೇನೆ ಎಂದು ಹೇಳಿದ್ದಾರೆ.

    ನನ್ನ ಮಗಳು ಲತಾಮಣಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಾಳೆ. ಲತಾಳನ್ನು ಸಂಪರ್ಕಿಸಲು ಮೊಬೈಲ್ ನಂಬರ್ ಗೊತ್ತಿಲ್ಲ. ಏನು ಕೆಲಸ ಅನ್ನೋದೂ ಗೊತ್ತಿಲ್ಲ. ನನಗೆ ಹೀಗಾಗಿದ್ದು ಮಗಳಿಗೆ ಗೊತ್ತಿರಲಿಕ್ಕಿಲ್ಲ ಅಂತಾ ಅಲವತ್ತುಕೊಂಡಿದ್ದಾರೆ. ಸದ್ಯಕ್ಕೆ ಗಿರಿಜಾ ಸಂಪಾಜೆಯ ಗಂಜಿ ಕೇಂದ್ರದಲ್ಲಿದ್ದಾರೆ. ಬೆಂಗಳೂರಿನ ಮಂದಿ ನನ್ನ ಪರಿಸ್ಥಿತಿಯನ್ನು ಮಗಳಿಗೆ ತಿಳಿಸಲು ಸಾಧ್ಯವೇ ಅಂತಾ ಕೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗು ಅತ್ತಿದ್ದಕ್ಕೆ ದಂಪತಿಗೆ Bloody Indians ಎಂದ್ರು- ಕೊನೆಗೆ ವಿಮಾನದಿಂದಲೇ ಕೆಳಗೆ ಇಳಿಸಿದ್ರು!

    ಮಗು ಅತ್ತಿದ್ದಕ್ಕೆ ದಂಪತಿಗೆ Bloody Indians ಎಂದ್ರು- ಕೊನೆಗೆ ವಿಮಾನದಿಂದಲೇ ಕೆಳಗೆ ಇಳಿಸಿದ್ರು!

    ನವದೆಹಲಿ: 3 ವರ್ಷದ ಕಂದಮ್ಮ ಅಳುತ್ತಿದೆ ಅಂತಾ ಭಾರತೀಯ ಪೋಷಕರಿಗೆ ಬ್ಲಡಿ ಇಂಡಿಯನ್ಸ್ ಎಂದು ಅವಾಚ್ಯವಾಗಿ ಬೈದು, ಬಲವಂತವಾಗಿ ಲಂಡನ್‍ನಲ್ಲಿ ವಿಮಾನದಿಂದ ಕೆಳಗಿಸಲಾಗಿದೆ.

    ಜುಲೈ 23 ರಂದು ಲಂಡನ್- ಬರ್ಲಿನ್‍ಗೆ ಪ್ರಯಾಣ ಬೆಳೆಸಿದ್ದ (ಬಿಎ 8495) ಬ್ರಿಟಿಷ್ ಏರ್‍ವೇಸ್‍ನ ವಿಮಾನ ಸಿಬ್ಬಂದಿಯೇ ಹೀಗೆ ಅಮಾನವೀಯವಾಗಿ ನಡೆದುಕೊಂಡಿದೆ. ಈಗ ಜನಾಂಗೀಯ ನಿಂದನೆ ಮೂಲಕ ನಮ್ಮನ್ನು ಅವಮಾನಿಸಿ, ವಿಮಾನದಿಂದ ಕೆಳಗೆ ಇಳಿಸಲಾಗಿದೆ. ವಿಮಾನ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.

    ನಡೆದದ್ದು ಏನು?
    ಜುಲೈ 23ರಂದು ಭಾರತೀಯ ದಂಪತಿ ತಮ್ಮ 3 ತಿಂಗಳ ಮಗುವಿನ ಜೊತೆಗೆ ವಿಮಾನದಲ್ಲಿ ಲಂಡನ್‍ನಿಂದ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಟೇಕ್ ಆಫ್ ಆಗುವಾಗ ಸಮಾಧಾನವಾಗಿದ್ದ ಮಗು, ನಂತರ ಅಳಲು ಪ್ರಾರಂಭಿಸಿದೆ. ತಕ್ಷಣವೇ ತಾಯಿ ಮಗುವನ್ನು ಸಮಾಧಾನ ಪಡಿಸುತ್ತಿದ್ದರು. ವಿಮಾನ ಸಿಬ್ಬಂದಿಯೊಬ್ಬರು ಬಂದು, ಮಗುವಿಗೆ ಸೀಟ್ ಬೆಲ್ಟ್ ಕಟ್ಟಿ ಎಂದು ಬೆದರಿಸಿದರು. ಆಗ ಮಗು ಮತ್ತಷ್ಟು ಜೋರಾಗಿ ಅಳಲು ಪ್ರಾರಂಭಿಸಿತ್ತು.

    ಮಗುವಿನ ಅಳು ನಿಲ್ಲಿಸಲು ದಂಪತಿಯ ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದ ಭಾರತೀಯ ಕುಟುಂಬವೊಂದು ಬಿಸ್ಕೇಟ್ ಗಳನ್ನು ನೀಡಿತ್ತು. ಬಳಿಕ ಮಗುವಿನ ತಾಯಿನ್ನು ಆಸನದಲ್ಲಿ ಕೂರಿಸಿದ್ದಲ್ಲದೆ, ಮಗು ಅಳುತ್ತಿದ್ದಾಗಲೇ ಸೀಟ್ ಬೆಲ್ಟ್ ಹಾಕಿದ್ದರು. ವಿಮಾನ ಸಿಬ್ಬಂದಿ ದಂಪತಿಯ ಬಳಿ ಬಂದು ಸಮ್ಮನೆ ಇರಿ ಇಲ್ಲ ಅಂದರೆ ವಿಮಾನದ ಕಿಟಕಿಯಿಂದ ಹೊರಗೆ ತಳ್ಳಬೇಕಾಗುತ್ತದೆ, ‘ಬ್ಲಡಿ ಇಂಡಿಯನ್ಸ್’ ಎಂದೂ ಅವಾಚ್ಯವಾಗಿ ನಿಂದಿಸಿದ್ದರು. ಮಗು ಅಳು ನಿಲ್ಲಿಸಲಿಲ್ಲ ಅಂತಾ ವಿಮಾನವನ್ನು ಟರ್ಮಿನಲ್‍ಗೆ ತಂದು ದಂಪತಿ, ಅವರ ಮಗು ಹಾಗೂ ಬಿಸ್ಕೇಟ್ ನೀಡಿದ್ದ ಕುಟುಂಬವನ್ನು ಕೆಳಗೆ ಇಳಿಸಿ ಸಿಬ್ಬಂದಿ ಹೋಗಿದ್ದಾರೆ.

    ಪ್ರಕರಣದ ಕುರಿತು ತನಿಖೆ ಕೈಗೊಂಡು, ಬ್ರಿಟಿಷ್ ಏರ್‍ವೇಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಪತ್ರದ ಮೂಲಕ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಾಂಗ್ರೆಸ್ಸಿನವರನ್ನು ಕೆಟ್ಟವರನ್ನಾಗಿ ಬಿಂಬಿಸಿ ಸಿಂಪತಿಗಿಟ್ಟಿಸಲು ಅಪ್ಪ-ಮಗ ಕಣ್ಣೀರು: ಆಯನೂರು ಮಂಜುನಾಥ್

    ಕಾಂಗ್ರೆಸ್ಸಿನವರನ್ನು ಕೆಟ್ಟವರನ್ನಾಗಿ ಬಿಂಬಿಸಿ ಸಿಂಪತಿಗಿಟ್ಟಿಸಲು ಅಪ್ಪ-ಮಗ ಕಣ್ಣೀರು: ಆಯನೂರು ಮಂಜುನಾಥ್

    ಶಿವಮೊಗ್ಗ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅವರ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕುತ್ತಾರೆ. ಬಯಸಿದ ಕೂಡಲೇ ಕಣ್ಣೀರು ಹಾಕುವವರು ದೇವೇಗೌಡರು ಹಾಗೂ ಕುಮಾರಸ್ವಾಮಿ ಅಂತ ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ನಲ್ಲಿ ಕುಮಾರಸ್ವಾಮಿಯವರು ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನ ಮುಂದುವರಿಸುತ್ತೆನೆ ಎಂದು ಹೇಳಿದ್ದರು. ದಿನಬೆಳಗಾದರೆ ಹಿಂದಿನ ಸರ್ಕಾರದ ಯೋಜನೆ ಬಗ್ಗೆ ಏನೆಲ್ಲಾ ಆಗುತ್ತಿದೆ ಅನ್ನೋದನ ನೋಡಲಾಗುತ್ತಿದೆ. ಕುಮಾರಸ್ವಾಮಿ ಆಡಳಿತದಲ್ಲಿ ವಿಫಲಗೊಂಡರೆ ತಮ್ಮ ವಿಫಲತೆಗೆ ಕಾಂಗ್ರೆಸ್ ಪಕ್ಷ ಕಾರಣ ಅಂತ ಹೇಳಬಹುದು ಅಂದ್ರು.  ಇದನ್ನೂ ಓದಿ: ಕುಮಾರಸ್ವಾಮಿಗೆ ಕಾಂಗ್ರೆಸ್ ವಿಷ ಕೊಟ್ಟಿಲ್ಲ, ಅಮೃತವನ್ನೇ ಕೊಟ್ಟಿದೆ: ಕೈ ಶಾಸಕ

    ಪಾಲುದಾರ ರಾಜಕಿಯ ಪಕ್ಷದ ನಾಯಕರ ವಿರುದ್ಧ ದೇವೇಗೌಡರು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಯವರು ನೂತನ ಬಜೆಟ್ ಮಂಡಿಸುವುದರ ಬದಲಿಗೆ ಪೂರಕ ಬಂಜೆಟ್ ಮಂಡಿಸಿದ್ದಾರೆ. ಅವರ ಸಹೋದರ ಎಚ್.ಡಿ ರೇವಣ್ಣನವರ ಖಾತೆಗೆ ಬಜೆಟ್ ನಲ್ಲಿ ಹೊಸ ಯೋಜನೆಗಳಿಗೆ ಕೋಟಿಗಟ್ಟಲೆ ಹಣವನ್ನ ನೀಡಲಾಗಿದೆ. ಈ ಬಾರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ನಲ್ಲಿ ಹೊಸತನ ಇಲ್ಲ, ಇದು ಅಣ್ಣ- ತಮ್ಮರ ಬಜೆಟ್ ಅಂತ ಟಾಂಗ್ ನೀಡಿದ್ರು.  ಇದನ್ನೂ ಓದಿ: ನಾನು ವಿಷಕಂಠ ಎಂಬ ಸಿಎಂ ಮಾತಿಗೆ ಮಾಜಿ ಸಚಿವ ಎ.ಮಂಜು ತಿರುಗೇಟು

    ಕಾಂಗ್ರೆಸ್ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಕುಮಾರಸ್ವಾಮಿ, ದೇವೇಗೌಡರು ಜನರಿಗೆ ಹೊಡೆಯುತ್ತಿದ್ದಾರೆ. ಅಪ್ಪ-ಮಕ್ಕಳು ಕಣ್ಣೀರು ಹಾಕಿ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ನವರನ್ನು ಕೆಟ್ಟವರನ್ನಾಗಿ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರ ಪ್ರತಿಷ್ಠೆಗೆ ಈ ಬಜೆಟ್ ಮಂಡನೆಯಾಗಿದೆ. ರಾಜ್ಯದಲ್ಲಿ ಅತಿವೃಷ್ಠಿಯಾಗಿದೆ, ಅದಕ್ಕೆ ಯಾವುದೇ ಯೋಜನೆ ಕೈಗೊಂಡಿಲ್ಲ. ಮೊದಲನೇ ಅಧಿವೇಶನ ವ್ಯರ್ಥವಾಗಿದೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ ಹಾಗೇ ಕುಮಾರಸ್ವಾಮಿ ತಾವು ಕೊಟ್ಟ ಭರವಸೆಯನ್ನ ಈಡೇರಿಸಿಲ್ಲ. ಸ್ತ್ರೀ ಶಕ್ತಿ ಸಂಘ, ನೇಕಾರರು, ಮೀನುಗಾರ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ ಅಂತ ಅವರು ಹೇಳಿದ್ರು. ಇದನ್ನೂ ಓದಿ: ಸಿಎಂ ನಟ ಭಯಂಕರ, ತಮ್ಮ ನಟನೆಯಿಂದ ಜನರನ್ನು ಮೂರ್ಖರನ್ನಾಗಿಸ್ತಿದ್ದಾರೆ: ಬಿಜೆಪಿ

  • ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಕಲಬುರಗಿ: ಇಂದು ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದಕ್ಕೆ ಮಾಜಿ ಎಂಎಲ್‍ಸಿ ಶಶೀಲ್ ನಮೋಶಿ ಗಳಗಳನೇ ಅತ್ತಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲಬುರಗಿ ಉತ್ತರದ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇತ್ತು. ಆದ್ರೆ ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಚಂದ್ರಕಾಂತ್ ಬಿ. ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಎಲ್ಲ ವಿಭಾಗಗಳಲ್ಲಿಯೂ ನಾನು ಸಮರ್ಥ ಅಭ್ಯರ್ಥಿಯಾಗಿದ್ದು, 1992ರಿಂದಲೂ ಪಕ್ಷದಲ್ಲಿದ್ದೇನೆ ಎಂದು ಹೇಳಿ ಭಾವುಕರಾಗಿ ಕಣ್ಣೀರು ಹಾಕಿದರು.

    ಇದಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ನಾನು ಯಾರ ವಿರುದ್ಧವೂ ಹೇಳಿಕೆಗಳನ್ನು ನೀಡಲ್ಲ. ಆದ್ರೆ ನನಗೆ ಮೋಸ ಆಗಿದ್ದು ಮಾತ್ರ ಸತ್ಯ. ಬಿಜೆಪಿ ಹೈಕಮಾಂಡ್ ನಡೆಸಿದ ಸರ್ವೆಯಲ್ಲಿ ನನ್ನ ಹೆಸರು ಉಲ್ಲೇಖಿಸಲಾಗಿದೆ ಎಂಬ ಮಾಹಿತಿಗಳು ನನಗೆ ಸಿಕ್ಕಿದ್ದವು. ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ಕೆರೆದು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

  • ಸಹಾಯ ಸ್ಮರಿಸಿದ ಕುಟುಂಬದ ಮಾತು ಕೇಳಿ ಕಣ್ಣೀರು ಹಾಕಿದ ಹೆಚ್‍ಡಿಕೆ

    ಸಹಾಯ ಸ್ಮರಿಸಿದ ಕುಟುಂಬದ ಮಾತು ಕೇಳಿ ಕಣ್ಣೀರು ಹಾಕಿದ ಹೆಚ್‍ಡಿಕೆ

    ಬೆಂಗಳೂರು: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ನೀವೇ ನಮ್ಮ ಕುಟುಂಬಕ್ಕೆ ದೇವರು ಅಂತ ಹೇಳಿದ ಕುಟುಂಬವೊಂದರ ಮಾತಿನಿಂದ ಭಾವುಕರಾಗಿ ಹೆಚ್‍ಡಿಕೆ ಕಣ್ಣೀರು ಹಾಕಿದ್ರು.

    ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಆಟೋ, ಕಾರು, ಲಾರಿ ಚಾಲಕರು ಮತ್ತು ಮಾಲೀಕರ ಸಂವಾದದ ವೇಳೆ ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಹೊಸಕೋಟೆಯ ಎಮ್ಮಂಡಹಳ್ಳಿಯ ಕಾರು ಚಾಲಕ ಸಂಪಂಗಿ ಮತ್ತು ಸಂಧ್ಯಾರಾಣಿ ದಂಪತಿಯ 11 ವರ್ಷ ಮಗಳು ಮೊನಿಕಾಗೆ ರೋಗನಿರೋಧಕ ಶಕ್ತಿ ಇರ್ಲಿಲ್ಲ. ಎಷ್ಟು ಚಿಕಿತ್ಸೆ ಕೊಡಿಸಿದ್ರೂ ಏನೂ ಪ್ರಯೋಜನ ಆಗಿರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆವು. ಆಗ ನೆರವಿಗೆ ಬಂದ ಹೆಚ್‍ಡಿ ಕುಮಾರಸ್ವಾಮಿ 30 ಲಕ್ಷ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ರು. ಅವರೇ ನಮ್ಮ ಕುಟುಂಬಕ್ಕೆ ದೇವರು ಅಂತ ಮೋನಿಕಾ ತಂದೆ ಸಂಪಂಗಿ ಹೇಳಿದ್ರು. ತಮ್ಮಿಂದ ಸಹಾಯ ಪಡೆದ ಕುಟುಂಬದ ಮಾತು ಕೇಳಿ ಕುಮಾರಸ್ವಾಮಿ ಕಣ್ಣಾಲಿಗಳು ಒದ್ದೆ ಆದವು.

    ಸಂವಾದದ ವೇಳೆ ಮಾತನಾಡಿದ ಹೆಚ್‍ಡಿಕೆ, ಚಾಲಕರಿಗೆ ಪ್ರತ್ಯೇಕ ಸಂಸ್ಥೆ ಮಾಡಲು ಪ್ಲಾನ್ ಇದೆ. ಓಲಾ, ಊಬರ್ ನಂತೆ ಸಂಸ್ಥೆ ನಿರ್ಮಿಸಲು ಹೊಸ ಪ್ಲ್ಯಾನ್ ಇದೆ. ಆದ್ರೆ ನಾನು ಏಕಾಂಗಿ, ಪಕ್ಷ ಬೇರೆ ಕಟ್ಟಬೇಕು. ನಾನು ದೇವೇಗೌಡರು ಮಾತ್ರ ಪಕ್ಷ ಕಟ್ಟಬೇಕು ಎಂದರು. ಟ್ಯಾಕ್ಸಿ ಚಾಲಕರಿಗೆ ಉತ್ತಮ ಬದುಕು ನಿರ್ಮಿಸಿಕೊಡಲು ಸಂಸ್ಥೆ ಆರಂಭಿಸಬೇಕು. ಜೆಡಿಎಸ್ ಸರ್ಕಾರ ಬರಲಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ರು.

  • ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ನಟಿ ಐಶ್ವರ್ಯಾ ರೈ

    ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ನಟಿ ಐಶ್ವರ್ಯಾ ರೈ

    ಮುಂಬೈ: ಮಾಜಿ ವಿಶ್ವ ಸುಂದರಿ, ಕರಾವಳಿ ಬೆಡಗಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಸಿನಿಮಾಗಳಿಗಿಂತ ಬೇರೆ ಬೇರೆ ವಿಷಯಗಳಿಗೆ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಅಭಿಷೇಕ್ ಜೊತೆ ಕರಣ್ ಜೋಹರ್ ಮನೆಗೆ ಹೋದಾಗ ಫೋಟೋಗ್ರಾಫ್ ಗಳಿಂದ ಪೇಚಿಗೆ ಸಿಲುಕಿಕೊಂಡಿದ್ದರು.

    ಐಶ್ ಮಗಳು ಆರಾಧ್ಯಾಳ ಹುಟ್ಟುಹಬ್ಬದ ಬೆನ್ನಲ್ಲೇ ಐಶ್ವರ್ಯಾ ರೈ ತಮ್ಮ ತಂದೆ ಕೃಷ್ಣರಾಜ್ ರೈ ಅವರ ಹುಟ್ಟುಹಬ್ಬವನ್ನು ಕೂಡ ವಿಶಿಷ್ಟವಾಗಿ ಆಚರಿಸಿದ್ದರು. ತಂದೆಯ ಹುಟ್ಟುಹಬ್ಬದ ನಿಮಿತ್ತ ಸ್ಮೈಲ್ ಫೌಂಡೇಶನ್ ಜೊತೆಯಲ್ಲಿ 100 ಮಕ್ಕಳಿಗೆ ಉಚಿತ ಸೀಳು ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಲು ಐಶ್ವರ್ಯಾ ನಿರ್ಧರಿಸಿದ್ದರು. ಮಂಗಳವಾರ ಆ ಮಕ್ಕಳನ್ನು ಭೇಟಿ ಮಾಡಲು ಐಶ್ವರ್ಯಾ ರೈ, ಮಗಳು ಆರಾಧ್ಯಳ ಜೊತೆಗೆ ಆಸ್ಪತ್ರೆಗೆ ಬಂದಿದ್ದರು. ಕಾರ್ಯಕ್ರಮಕ್ಕೆ ಪತ್ರಕರ್ತರು ಹಾಜರಾಗಿದ್ದು, ಐಶ್ವರ್ಯಾಗೆ ಬೇಸರ ಮೂಡಿಸಿತ್ತು.

    ಐಶ್ವರ್ಯ ರೈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅವರ ಮುಂದೆ ಒಂದೇ ಸಮನೇ ಫೋಟೋಗಳು ಕ್ಲಿಕ್ ಆಗ ತೊಡಗಿದವು. ಫೋಟೋಗ್ರಾಫರ್ ಗಳ ಫೋಟೋ ಕ್ಲಿಕ್ ಮಧ್ಯೆ ಸ್ವಲ್ಪ ಗದ್ದಲವು ಉಂಟಾಯಿತು. ಹೀಗಾಗಿ ಸ್ಥಳದಲ್ಲಿದ್ದ ಚಿಕ್ಕ ಮಕ್ಕಳು ಅಳಲಾರಂಭಿಸಿದವು. ತನ್ನಿಂದ ಬೇರೆಯವರಿಗೆ ತೊಂದರೆಯಾಗುತ್ತಿರುವುದನ್ನ ಗಮನಿಸಿದ ಐಶ್ವರ್ಯಾ ಫೋಟೋ ಕ್ಲಿಕ್ಕಿಸದಂತೆ, ಗಲಾಟೆ ಮಾಡದಂತೆ ಸೂಚಿಸಿದರು.

    ಇದನ್ನೂ ಓದಿ:  ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್

    ಆದರೂ ಕ್ಯಾಮರಾಗಳು ಮಾತ್ರ ಕ್ಲಿಕ್ ಆಗುತ್ತಿದ್ದವು. ಆಗ ಸಿಟ್ಟಿಗೆದ್ದ ಐಶ್, ಇದು ಪ್ರೀಮಿಯರ್ ಶೋ ಅಲ್ಲ, ಸಾರ್ವಜನಿಕ ಕಾರ್ಯಕ್ರಮವೂ ಅಲ್ಲ ಅಂದ್ರು. ಸ್ವಲ್ಪ ಸುಮ್ಮನಾಗಿ ಎಂದರೂ ಬಿಡದ ಕ್ಯಾಮೆರಾ ಫ್ಲ್ಯಾಶ್ ಕ್ಲಿಕ್ ಆಗುತ್ತಲೇ ಇತ್ತು. ಕೊನೆಗೆ ಐಶು ಭಾವುಕರಾಗಿ ಕಣ್ಣೀರು ಸುರಿಸಿದರು.