Tag: crusier

  • ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ- ಸ್ಥಳದಲ್ಲೇ ಐವರ ದುರ್ಮರಣ

    ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ- ಸ್ಥಳದಲ್ಲೇ ಐವರ ದುರ್ಮರಣ

    ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ (Crusier- Lorry Accident) ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಯಾದಗಿರಿ (Yadagiri) ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಚಿ) ನಲ್ಲಿ ನಡೆದಿದೆ.

    ಮುನೀರ್(40), ನಯಾಮತ್ (40), ಮುದ್ದತ್ ಶಿರ್ (12), ರಮಿಜಾ ಬೇಗಂ (50), ಸುಮ್ಮಿ (12) ಮೃತ ದುರ್ದೈವಿಗಳು. ಮೃತಪಟ್ಟ 5 ಮಂದಿ ಸಂಬಂಧಿಕರಾಗಿದ್ದಾರೆ. ಆಂಧ್ರಪ್ರದೇಶದ ಬಂಡಿ ಆತ್ಮಕೂರು ಗ್ರಾಮದ ತಂದೆ ಮುನೀರ್ ಹಾಗೂ ಪುತ್ರ ಮುದ್ದಸಿರ್ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ವೆಲುಗೋಡ ಗ್ರಾಮದ ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೈ-ಬೆಂ. ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ- ಇಬ್ಬರು ಗಂಭೀರ

    ಕ್ರೂಸರ್, ಆಂಧ್ರಪ್ರದೇಶ (Andhrapradesh) ದ ನಂದ್ಯಾಲ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್ ಜಾತ್ರೆಗೆ ಬರುತ್ತಿತ್ತು. ಈ ವೇಳೆ ಬಳಿಚಕ್ರ ಬಳಿ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಓರ್ವ ಬಾಲಕಿ, ಬಾಲಕ ಸೇರಿ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ನಿದ್ದೆ ಮಂಪರ್ ನಲ್ಲಿದ್ದ ಕ್ರೂಸರ್ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಹಿನ್ನೆಲೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ 13 ಜನರಿಗೆ ಗಾಯಗಳಾಗಿದ್ದು, ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದವರ ಪೈಕಿ 5 ಜನರ ಸ್ಥಿತಿ ಕೂಡ ಚಿಂತಾಜನಕವಾಗಿದೆ.

    ಅಪಘಾತ ಸಂಬಂಧ ಯಾದಗಿರಿ ಎಸ್ ಪಿ ಡಾ ಸಿಬಿ ವೇದಮೂರ್ತಿ ಪ್ರತಿಕ್ರಿಯಿಸಿ, ಹೈವೇ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕ್ರೂಷರ್ ವಾಹನ ಡಿಕ್ಕಿ ಹೊಡೆದಿದೆ. ಕ್ರೂಸರ್ ವಾಹನದಲ್ಲಿದ್ದ ಐದು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ನಂದ್ಯಾಲ ಗ್ರಾಮದ 18 ಜನ ಕ್ರೂಷರ್ ವಾಹನದಲ್ಲಿ ಪ್ರಯಾಣ ಮಾಡ್ತಿದ್ದರು. ಕಲಬುರಗಿ (kalaburagi) ಯ ಖಾಜಾ ಬಂದೇನವಾಜ ಉರುಸ್ ಗೆ ತೆರಳುತ್ತಿದ್ದರು. ನಸುಕಿನ ಜಾವ 4 ಗಂಟೆಗೆ ಈ ಒಂದು ಘಟನೆ ನಡೆದಿದೆ. ಗಾಯಗೊಂಡ 13 ಜನರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದರು.

    ಘಟನೆ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಶ್ರೀನಗರ: ಕ್ರೂಸರ್ (Cruiser) ವಾಹನವೊಂದು ಕಮರಿಗೆ ಬಿದ್ದು 7 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರ (jammu Kashmir) ದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಸುದೇಶ್ ಕುಮಾರ್, ಅಖ್ತರ್ ಹುಸೇನ್, ಅಬ್ದುಲ್ ರಶೀದ್, ಮುಬ್ಶರ್ ಅಹ್ಮದ್, ಇಟ್ವಾ, ರಾಹುಲ್ ಮತ್ತು ಕರಣ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆತನನ್ನು ಕಿಶ್ತ್ವಾದಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ದೇವಾನ್ಶ್ ಯಾದವ್ ಹೇಳಿದರು.

    ದಂಗದೂರು ಅಣೆಕಟ್ಟು ಸಮೀಪ ಪಾಕಲ್ ದುಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕಾಮಗಾರಿ ಸ್ಥಳದಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಎಂದಿನಂತೆ ಸುಮಾರು 10 ಮಂದಿ ಕಾರ್ಮಿಕರು ದಚನ್ ಗ್ರಾಮದಲ್ಲಿರುವ ಕಾಮಗಾರಿ ಸ್ಥಳಕ್ಕೆ ಕ್ರೂಸರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಆಳದ ಕಮರಿಗೆ ಬಿದ್ದಿದೆ.

    ಕ್ರೂಸರ್ ಕಂದಕಕ್ಕೆ ಉರುಳಿದ ಸುದ್ದಿಯಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ವಿವರಿಸಿದ್ದಾರೆ. ಇದನ್ನೂ ಓದಿ: The Kerala Story Effect: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯಿಂದ ಪ್ರಿಯಕರನ ವಿರುದ್ಧ ರೇಪ್ ಕೇಸ್

    ಅಪಘಾತದ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕಿಶ್ತ್ವಾರ್ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

  • ಸಾವಿನಲ್ಲೂ ಸಾರ್ಥಕತೆ ಮೆರೆದ ಕೂಲಿ ಕಾರ್ಮಿಕರು- ಮೃತಪಟ್ಟ 9 ಮಂದಿಯಲ್ಲಿ 6 ಜನರ ನೇತ್ರದಾನ

    ಸಾವಿನಲ್ಲೂ ಸಾರ್ಥಕತೆ ಮೆರೆದ ಕೂಲಿ ಕಾರ್ಮಿಕರು- ಮೃತಪಟ್ಟ 9 ಮಂದಿಯಲ್ಲಿ 6 ಜನರ ನೇತ್ರದಾನ

    ತುಮಕೂರು: ಶಿರಾ ಬಳಿ ನಡೆದ ಅಪಘಾತದಲ್ಲಿ 9 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೂಲಿ ಕಾರ್ಮಿಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಹೌದು. ಅಪಘಾತದಲ್ಲಿ ಮೃತಪಟ್ಟ 9 ಮಂದಿಯಲ್ಲಿ 6 ಜನರು ನೇತ್ರದಾನ ಮಾಡಲು ಮುಂದಾಗಿದ್ದಾರೆ. ನೋವಿನ ಮಧ್ಯೆಯೂ ಕುಟುಂಬಸ್ಥರು ಮನೆ ಮಕ್ಕಳ ನೇತ್ರದಾನ ಮಾಡಿದ್ದಾರೆ. ಮೃತಪಟ್ಟ ಚಾಲಕ ಕೃಷ್ಣ, ಸಿದ್ದಯ್ಯಸ್ವಾಮಿ, ನಿಂಗಣ್ಣ, ಮೀನಾಕ್ಷಿ, ಸುಜಾತಾ, ಪ್ರಭುಸ್ವಾಮಿ ಎಂಬವರ ನೇತ್ರದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಶಿರಾ ತಾಲೂಕಾಸ್ಪತ್ರೆ ಮುಂದೆ ಮೃತರ ಸಂಬಂಧಿಕರ ಗೋಳಾಟ ಹೇಳತೀರದಂತಾಗಿದೆ.

    ಈ ಸಂಬಂಧ ಶಿರಾ ತಹಶಿಲ್ದಾರ್ ಮಮತಾ ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಕುಟುಂಬಸ್ಥರು ಸಾರ್ಥಕ ಕೆಲಸ ಮಾಡಿದ್ದಾರೆ. ಐ ಡೊನೇಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ. 6 ಜನರ ಕುಟುಂಬಸ್ಥರು ಸ್ವ-ಇಚ್ಛೆಯಿಂದ ಕಣ್ಣು ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರ ಬಾಳಲ್ಲಿ ಬೆಳಕಾಗಲು ಬಯಸಿದ್ದಾರೆ. ಆ ಕುಟುಂಬಕ್ಕೆ ಒಳ್ಳೆಯದಾಗಲಿ. ಅಲ್ಲದೆ ದುಃಖ ಸಹಿಸುವ ಶಕ್ತಿ ಬರಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

    ಇತ್ತ ನೇತ್ರದಾನದ ಬಳಿಕ ಮೃತ ಚಾಲಕ ಕೃಷ್ಣನ ತಂದೆ ತಿಪ್ಪಾರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗನನ್ನು ಬೇರೆಯವರ ಕಣ್ಣಿನ ಮೂಲಕ ನೋಡಬೇಕು. ಹಾಗಾಗಿ ಕಣ್ಣು ದಾನ ಮಾಡಿದ್ದೇವೆ. ಕಣ್ಣು ದಾನದ ಮೂಲಕ ಮಗ ಜೀವಂತ ಆಗಿರಬೇಕು ಎಂದು ಬಯಸಿದ್ದೇವೆ. ಹಾಗಾಗಿ ಸ್ವ-ಇಚ್ಛೆಯಿಂದ ನೇತ್ರದಾನ ಮಾಡಿಸಿದ್ದೇವೆ ಎಂದು ಹೇಳಿದರು.

    ಸದ್ಯ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಒಟ್ಟು 4 ಅಂಬುಲೆನ್ಸ್‍ನಲ್ಲಿ ಮೃತದೇಹವನ್ನು ರವಾನಿಸಲಾಗಿದೆ.  ಇದನ್ನೂ ಓದಿ: ತುಮಕೂರಿನ ಶಿರಾದಲ್ಲಿ ಭೀಕರ ಅಪಘಾತ – ಕ್ರೂಸರ್‌ ಚಕ್ರಕ್ಕೆ 9 ಮಂದಿ ಬಲಿ?

    Live Tv
    [brid partner=56869869 player=32851 video=960834 autoplay=true]

  • ಕ್ರೂಸರ್, ಕ್ಯಾಂಟರ್ ಡಿಕ್ಕಿ- 9 ಮಂದಿ ದಾರುಣ ಸಾವು

    ಕ್ರೂಸರ್, ಕ್ಯಾಂಟರ್ ಡಿಕ್ಕಿ- 9 ಮಂದಿ ದಾರುಣ ಸಾವು

    ವಿಜಯಪುರ: ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಕ್ರೂಸರ್-ಕ್ಯಾಂಟರ್ ಡಿಕ್ಕಿಯಾಗಿ 9 ಜನ ಮೃತಪಟ್ಟಿದ್ದಾರೆ.

    ವಿಜಯಪುರ ಜಿಲ್ಲೆಯ ಚಿಕ್ಕಸಿಂದಗಿ ಬಳಿ ಈ ಘಟನೆ ನಡೆದಿದೆ. ಕ್ರೂಸರ್ ಹಾಗೂ ಕ್ಯಾಂಟರ್ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ 9 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕಲಬುರಗಿ ಜಿಲ್ಲೆಯ ಚಿತ್ತಪೂರದವರು ಎಂದು ಹೇಳಲಾಗುತ್ತಿದೆ.

    ಕ್ಯಾಂಟರ್ ಸಿಂದಗಿ ಮೂಲಕ ವಿಜಯಪುರಕ್ಕೆ ಬರುತ್ತಿತ್ತು. ಇತ್ತ ಕ್ರೂಸರ್ ನಲ್ಲಿದ್ದ ಪ್ರಯಾಣಿಕರು ಗೋವಾದಲ್ಲಿ ಪಾರ್ಟಿ ಮುಗಿಸಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ಅಲ್ಲದೆ ಕ್ರೂಸರ್ ನಲ್ಲಿ 15 ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಿಂದಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಪಘಾತದಿಂದಾಗಿ ವಾಹನ ಸಂಪೂರ್ಣ ನಜ್ಜುಗುಜ್ಜು ಆಗಿದ್ದು, ಪರಿಣಾಮ ಮೃತರ ಗುರುತು ಸಿಗುತ್ತಿಲ್ಲ. ಸದ್ಯ ಈ ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಮರಕ್ಕೆ ಕ್ರೂಸರ್ ಡಿಕ್ಕಿ – ವ್ಯಕ್ತಿ ದಾರುಣ ಸಾವು

    ಮರಕ್ಕೆ ಕ್ರೂಸರ್ ಡಿಕ್ಕಿ – ವ್ಯಕ್ತಿ ದಾರುಣ ಸಾವು

    ಕಾರವಾರ: ಕ್ರೂಸರ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, 10 ಮಂದಿಗೆ ಗಾಯಗಳಾದ ಘಟನೆ ಕಾರವಾರ ತಾಲೂಕಿನ ಚಂಡ್ಯಾ ಗ್ರಾಮದ ಬಳಿ ನಡೆದಿದೆ.

    ಮೃತ ದುರ್ದೈವಿಯನ್ನು ನಿಂಗಪ್ಪ ಹನುಮಂತಪ್ಪ (52)ಎಂದು ಗುರುತಿಸಲಾಗಿದೆ. ಕುಷ್ಟಗಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಾಹನ ಅತೀ ವೇಗದಲ್ಲಿ ಸಂಚರಿಸುತ್ತಿದ್ದು ನಿದ್ದೆ ಮಂಪರಿನಲ್ಲಿದ್ದರಿಂದ ಕ್ರೂಸರ್, ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರವಾರ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.