Tag: crush

  • ರಶ್ಮಿಕಾ ನನ್ನ ಕ್ರಶ್ ಅಲ್ಲ: ಸಿಟ್ಟಿಗೆದ್ದ ಕ್ರಿಕೆಟಿಗ ಶುಭ್‍ಮನ್ ಗಿಲ್

    ರಶ್ಮಿಕಾ ನನ್ನ ಕ್ರಶ್ ಅಲ್ಲ: ಸಿಟ್ಟಿಗೆದ್ದ ಕ್ರಿಕೆಟಿಗ ಶುಭ್‍ಮನ್ ಗಿಲ್

    ಯುವ ಕ್ರಿಕೆಟಿಗ ಶುಭ್‍ಮನ್ ಗಿಲ್ (Shubman Gill) ಕೋಪಗೊಂಡಿದ್ದಾರೆ. ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ. ಹಲವು ದಿನಗಳಿಂದ ರಶ್ಮಿಕಾ ಮತ್ತು ಗಿಲ್ ವಿಚಾರ ಬಹಳ ಸುದ್ದಿಯಾಗಿತ್ತು. ಆಕೆ ನನ್ನ ಕ್ರಶ್ (Crush) ಎಂದು ಗಿಲ್ ಹೇಳಿದ್ದಾರೆ ಎನ್ನುವುದು ಭಾರಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆ ಪೋಸ್ಟ್ ಹರಿದಾಡಿತ್ತು. ಅದನ್ನು ಕಂಡ ಗಿಲ್ ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

    ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಇದೊಂದು ಕಪೋಕಲ್ಪತ ವರದಿ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ನನ್ನ ಕ್ರಶ್ ಅಲ್ಲ ಎಂದು ಅವರು ಉತ್ತರಿಸಿದ್ದಾರೆ. ಯಾವ ಮಾಧ್ಯಮದಲ್ಲೂ ನಾನು ಆ ರೀತಿಯಾಗಿ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಗಿಲ್ ಜೊತೆ ಈ ಹಿಂದೆ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರಿ ಸಾರಾ (Sara) ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಜೊತೆಗಿದ್ದ ಫೋಟೋಗಳು ಕೂಡ ಸಿಕ್ಕಿದ್ದವು. ಆ ಸಮಯದಲ್ಲಿ ಸಾರಾ ಮತ್ತು ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಅವರು ಏನೂ ಹೇಳಿಕೆ ನೀಡಿರಲಿಲ್ಲ. ಆದರೆ, ರಶ್ಮಿಕಾ ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ.

    ಗಿಲ್ ತಮ್ಮನ್ನು ಇಷ್ಟಪಟ್ಟಿದ್ದರು ಎನ್ನುವುದು ರಶ್ಮಿಕಾಗೆ ಸಂಭ್ರಮದ ಸಂಗತಿಯಾಗಿತ್ತು. ರಶ್ಮಿಕಾ ಅಭಿಮಾನಿಗಳು ಕೂಡ ಖುಷಿಗೊಂಡಿದ್ದರು. ಆದರೆ, ಈ ಎಲ್ಲ ಖುಷಿಯನ್ನು ಒಟ್ಟಿಗೆ ಇಲ್ಲವಾಗಿಸಿದ್ದಾರೆ ಗಿಲ್. ಆದರೆ, ಸಾರಾ ವಿಷಯದಲ್ಲಿ ಮಾತ್ರ ಅವರು ದಿವ್ಯಮೌನ ತಾಳಿದ್ದಾರೆ. ಹಾಗಾಗಿ ಸಾರಾ ಮತ್ತು ಗಿಲ್ ಇನ್ನೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿದೆ.

  • ರಶ್ಮಿಕಾ ಮಂದಣ್ಣಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ

    ರಶ್ಮಿಕಾ ಮಂದಣ್ಣಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ

    ಬಾಲಿವುಡ್ (Bollywood) ನಟಿ ರಶ್ಮಿಕಾ ಮಂದಣ್ಣ (Rashmika Mandanna), ನ್ಯಾಷನಲ್ ಕ್ರಶ್ ಆಗಿ ಮಿಂಚ್ತಿದ್ದಾರೆ. ಅದೆಷ್ಟೋ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದಾರೆ. ದಿನದಿಂದ ದಿನಕ್ಕೆ ನಟಿಯ ಫ್ಯಾನ್ಸ್ ಬೇಸ್ ಹಿರಿದಾಗುತ್ತಲೇ ಇದೆ. ಭಾರತ ತಂಡದ ಯುವ ಆಟಗಾರ ರಶ್ಮಿಕಾ ಮಂದಣ್ಣಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಪ್ರಪೋಸಲ್ (Praposal) ಕೂಡ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: `ಶಾಕುಂತಲಂ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ

    ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇನ್ನೂ ರಶ್ಮಿಕಾ ಹಾಟ್‌ನೆಸ್ ಮತ್ತು ಕ್ಯೂಟ್‌ನೆಸ್‌ಗೆ ಬೋಲ್ಡ್ ಆಗದವರೇ ಇಲ್ಲ. ಹೀಗಿರುವಾಗ ಯುವ ಆಟಗಾರ ಶುಭಮನ್ ಗಿಲ್ ಕೂಡ ರಶ್ಮಿಕಾಗೆ ಬೋಲ್ಡ್ ಆಗಿದ್ದಾರೆ.

    ಹೌದು.. ಯುವ ಕ್ರಿಕೆಟಿಗ ಶುಭಮನ್ ಗಿಲ್ (Shubman Gill) ರಶ್ಮಿಕಾಗೆ ಮದುವೆ (Wedding) ಆಗುವ ಪ್ರಸ್ತಾವನೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ಸಂದರ್ಶನದಲ್ಲಿ ಶುಭಮನ್‌ಗೆ ನಿಮ್ಮ ಕ್ರಶ್ ಯಾರು ಎಂದು ಕೇಳಿದಾಗ, ರಶ್ಮಿಕಾ ಮಂದಣ್ಣ ನನ್ನ ಕ್ರಶ್ (Crush) ಎಂದು ನಟಿಯ ಬಗ್ಗೆ ಮಾತನಾಡಿದ್ದಾರೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಈ ವಿಷ್ಯ ಕೇಳಿದ್ರೆ ರಶ್ಮಿಕಾ ಕೂಡ ಖುಷಿಪಡುತ್ತಾರೆ. ನಟಿಯ ರಿಯಾಕ್ಷನ್‌ಗಾಗಿ ನೆಟ್ಟಿಗರು ಕೂಡ ಎದುರು ನೋಡ್ತಿದ್ದಾರೆ.

  • ನನ್ನ ಕ್ರಶ್ ಯಶ್ ತರಹನೇ ಇದ್ದ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೌಡ ಬಹಿರಂಗ

    ನನ್ನ ಕ್ರಶ್ ಯಶ್ ತರಹನೇ ಇದ್ದ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೌಡ ಬಹಿರಂಗ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬಹಿರಂಗಗೊಳ್ಳುತ್ತಿವೆ. ಅದರಲ್ಲಿ ಬಹುಪಾಲು ಪ್ರೀತಿ, ಪ್ರೇಮ, ಬ್ರೇಕ್ ಅಪ್, ಕ್ರಶ್ ಕುರಿತದ್ದೇ ಆಗಿರುತ್ತವೆ. ಬಿಗ್ ಬಾಸ್ ಓಟಿಟಿ ನಡೆದ ಸಂದರ್ಭದಲ್ಲಂತೂ ದೊಡ್ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳಿಗೆ ಲವ್ ಫೆಲ್ಯುವರ್ ಆಗಿತ್ತು. ಎರಡನೇ ಸಂಬಂಧವನ್ನೂ ಇಟ್ಟುಕೊಂಡವರಿದ್ದರು. ತಮ್ಮ ಜೀವನದಲ್ಲಾದ ಘಟನೆಗಳನ್ನು ಕ್ಯಾಮೆರಾ ಮುಂದೆ ಬಿಚ್ಚಿಟ್ಟು ನೋಡುಗರು ಆಡಿಕೊಂಡು ನಗುವಂತೆ ಮಾಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲೂ ಅದು ಮುಂದುವರೆದಿದೆ.

    ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಡಿಗ್ಲಾಮ್ ಪಾತ್ರ ಮಾಡಿದ್ದ, ಅಳುಮುಂಜಿ ಹುಡುಗಿ ಎಂದೇ ಖ್ಯಾತರಾಗಿದ್ದ ಕಾವ್ಯಶ್ರೀ ಗೌಡ (Kavyashree Gowda) ತಮ್ಮ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಒಂದಲ್ಲ, ಎರಡೆರಡು ಕ್ರಶ್ ಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳುವಾಗ ಅವರು ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನೂ ನೆನಪಿಸಿಕೊಂಡಿದ್ದಾರೆ. ಎರಡು ಕ್ರಶ್ ಗಳಲ್ಲಿ ಒಂದಕ್ಕೆ ಯಶ್ ಸ್ಪೂರ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸಮಂತಾ ಬದುಕಿನಲ್ಲಿ ಮತ್ತೆ ಬ್ರೇಕಪ್ ಬಿರುಗಾಳಿ

    ಇವರಿಗೆ ಪ್ರಪ್ರಥಮ ಬಾರಿಗೆ ಕ್ರಶ್ (Crush) ಆಗಿದ್ದು ಅಜ್ಜಿ ಊರಿಗೆ ಜಾತ್ರೆಗೆ ಹೋದಾಗಂತೆ. ಅಜ್ಜಿ ಊರಿಗೆ ಜಾತ್ರೆಗೆಂದು ಹೋಗಿದ್ದೆ. ಅಲ್ಲೊಂದು ಗುಂಪಿತ್ತು. ಆ ಗುಂಪಿನಲ್ಲಿದ್ದ ಒಬ್ಬ ಹುಡುಗ ಥೇಟ್ ಯಶ್ ತರಹವೇ ಇದ್ದ. ಹಾಗಾಗಿ ಅವನ ಮೇಲೆ ಮೊದಲ ಬಾರಿಗೆ ಕ್ರಶ್ ಆಯಿತು. ಆ ಹುಡುಗರ ಗುಂಪು ನನ್ನನ್ನೇ ಫಾಲೋ ಮಾಡುತ್ತಿತ್ತು. ತೀರಾ ಹತ್ತಿರ ಬರೋಕೆ ಶುರುವಾಯಿತು. ನನಗೆ ಭಯನೋ ಭಯ. ಯಶ್ ರೀತಿಯಲ್ಲೇ ಕಾಣುತ್ತಿದ್ದ ಆ ಹುಡುಗ ತೀರಾ ಸಮೀಪಕ್ಕೆ ಬಂದು ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ತನ್ನ ಫೋನ್ ನಂಬರ್ ಇರುವ ಚೀಟಿ ಹಾಕಿದ್ದ ಎಂದು ನೆನಪಿಸಿಕೊಂಡಿದ್ದಾರೆ ಕಾವ್ಯಶ್ರೀ ಗೌಡ.

    ಮತ್ತೊಮ್ಮೆ ಕ್ರಶ್ ಆಗಿದ್ದು ಕೂಡ ದೇವಸ್ಥಾನದಲ್ಲೇ ಎಂದಿದ್ದಾರೆ ನಟಿ. ಇವರು ತಿರುಪತಿ ಬೆಟ್ಟ ಹತ್ತುವಾಗ ಇವರನ್ನೇ ಫಾಲೋ ಮಾಡುತ್ತಿದ್ದ ಹುಡುಗನ ಮೇಲೆ ಕ್ರಶ್ ಆಗಿತ್ತಂತೆ. ‘ನಾನು ಮತ್ತು ನನ್ನ ತಾಯಿ ತಿರುಪತಿ ಬೆಟ್ಟ ಏರುತ್ತಿದ್ದವು. ಆ ಹುಡುಗ, ನಮ್ಮನ್ನೇ ಫಾಲೋ ಮಾಡಿಕೊಂಡು ಬರುತ್ತಿದ್ದ. ಬೆಟ್ಟ ಹತ್ತುವಾಗ ನಮಗಿಂತ ಮುಂಚೆ ಇರುತ್ತಿದ್ದ, ನಂತರ ಮತ್ತೆ ಹಿಂದುಳಿಯುತ್ತಿದ್ದ. ಅವನು ಯಾಕೆ ಹಾಗೆ ಮಾಡುತ್ತಿದ್ದಾನೆ ಎನ್ನುವುದು ಅರ್ಥವಾಗುವ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಅವನು ಲಡ್ಡು ಇಟ್ಟುಬಿಟ್ಟಿದ್ದ. ಜೊತೆಗೆ ಫೋನ್ ನಂಬರ್ ಇರುವ ಚೀಟಿನೂ ಇತ್ತು’ ಎಂದು ಎರಡನೇ ಕ್ರಶ್ ಬಗ್ಗೆ ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ನಿರಾಸೆ ಮಾಡಿದ ರಕ್ಷಿತ್ ಶೆಟ್ಟಿ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ನಿರಾಸೆ ಮಾಡಿದ ರಕ್ಷಿತ್ ಶೆಟ್ಟಿ

    ತೀ ಶೀಘ್ರದಲ್ಲೇ ಜೊತೆಯಾಗಿ ಕೆಲಸ ಮಾಡೋಣ ಎಂದು ರಕ್ಷಿತ್ ಶೆಟ್ಟಿ ಅವರಿಗೆ ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇನ್ಸ್ಟಾದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದರು. ಹೀಗಾಗಿ ರಮ್ಯಾ ಅವರು ರಕ್ಷಿತ್ ಶೆಟ್ಟಿ ಅವರ ಸಿನಿಮಾ ಮೂಲಕ ಕಮ್  ಬ್ಯಾಕ್ ಆಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಕಳೆದ ಕೆಲವು ತಿಂಗಳಿಂದ ಸಿನಿಮಾ ರಂಗದಲ್ಲಿ ರಮ್ಯಾ ಸಕ್ರೀಯರಾದ ಕಾರಣದಿಂದಾಗಿ ಸಿನಿಮಾ ಬಂದೇ ಬಿಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ರಕ್ಷಿತ್ ಹೇಳಿದ್ದೇ ಬೇರೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಅಂದುಕೊಂಡಂತೆ ಆಗಿದ್ದರೆ ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಜೊತೆಯಾಗಿ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಈ ಸಿನಿಮಾದ ಕಥೆಯು ರಮ್ಯಾ ಅವರಿಗೆ ಅರ್ಥವಾಗಲಿಲ್ಲವಂತೆ. ಕಥೆಯೇ ಅರ್ಥವಾಗಲಿಲ್ಲ ಸಿನಿಮಾದಲ್ಲಿ ನಟಿಸುವುದು ಹೇಗೆ? ಎಂದು ಕೇಳಿದ್ದರಂತೆ. ಹಾಗಾಗಿ ಈ ಚಿತ್ರದಲ್ಲಿ ರಮ್ಯಾ ನಟಿಸಲಿಲ್ಲವಂತೆ. ಆನಂತರ ಮತ್ತೆ ಜೊತೆಯಾಗಿ ಕೆಲಸ ಮಾಡುವಂತಹ ಸನ್ನಿವೇಶವೇ ಸೃಷ್ಟಿ ಆಗಲಿಲ್ಲ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಇದೀಗ ರಮ್ಯಾ ಅವರು ರಕ್ಷಿತ್ ಶೆಟ್ಟಿ ಜೊತೆಗೆ ನಟಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ, ರಕ್ಷಿತ್ ಬಳಿ ಸದ್ಯಕ್ಕೆ ರಮ್ಯಾ ಜೊತೆ ಕೆಲಸ ಮಾಡುವಂತಹ ಕಥೆಯು ಇಲ್ಲವಂತೆ. ಈಗ ಬರೆದುಕೊಂಡಿರುವ ಕಥೆಯಲ್ಲಿ ರಮ್ಯಾ ಅವರಿಗೆ ಸೂಕ್ತವಾಗುವಂತಹ ಪಾತ್ರಗಳೂ ಇಲ್ಲವಂತೆ. ಹಾಗಾಗಿ ಸದ್ಯಕ್ಕೆ ರಮ್ಯಾ ಮತ್ತು ರಕ್ಷಿತ್ ಕಾಂಬಿನೇಷನ್ ನ ಸಿನಿಮಾ ಬರುವುದು ಅನುಮಾನ. ಇದನ್ನೂ ಓದಿ : ಬಾಲ್ಯದ ಗೆಳೆಯನ ಮದ್ವೆಯಲ್ಲಿ ಯಶ್ ದಂಪತಿ ಭಾಗಿ

    RAMYA

    ಹಾಗಂತ ಸಿನಿಮಾ ಬರುವುದೇ ಇಲ್ಲ ಎಂದು ಹೇಳಲಾರೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಸದ್ಯಕ್ಕೆ ಬರೆದ ಕಥೆಗಳಲ್ಲಿ ರಮ್ಯಾ ಅವರು ಮಾಡುವಂತಹ ಪಾತ್ರವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅವರೊಟ್ಟಿಗೆ ಕೆಲಸ ಮಾಡಬೇಕು ಎನ್ನುವ ತುಡಿತ ನನಗೂ ಇದೆ ಎಂದು ಕುತೂಹಲ ಮೂಡಿಸಿದ್ದಾರೆ ರಕ್ಷಿತ್ ಶೆಟ್ಟಿ.

  • ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ತ್ತೀಚಿನ ದಿನಗಳಲ್ಲಿ ರಮ್ಯಾ ಜೊತೆ ಓಡಾಡುತ್ತಿರುವ ಮತ್ತೊಂದು ಹೆಸರು ರಕ್ಷಿತ್ ಶೆಟ್ಟಿ ಅವರದ್ದು. ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿದ ಗಾಸಿಪ್ ಗೆ ಲೆಕ್ಕವಿಟ್ಟವರಿಲ್ಲ. ಅಷ್ಟರ ಮಟ್ಟಿಗೆ ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಹೆಸರು ಚಾಲ್ತಿಯಲ್ಲಿದೆ. ಇಬ್ಬರೂ ಪ್ರೀತಿಸ್ತಾ ಇದ್ದಾರೆ ಎನ್ನುವುದರಿಂದ ಹಿಡಿದು, ಒಟ್ಟಿಗೆ ಇನ್ನೇನು ಸಿನಿಮಾ ಮಾಡಲಿದ್ದಾರೆ ಎನ್ನುವಲ್ಲಿಗೆ ಗಾಸಿಪ್ ಹರಡಿಕೊಂಡಿತ್ತು. ಇದನ್ನೂ ಓದಿ : ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗೆ ಧೋನಿ ಸಿನಿ ರಂಗಕ್ಕೆ ಎಂಟ್ರಿ

    ಈ ಕುರಿತು ಮಾಧ್ಯಮವೊಂದರಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಮಾತನಾಡಿದ್ದಾರೆ. ರಮ್ಯಾ ಮತ್ತು ತಮ್ಮ ಜೊತೆಗಿನ ಬಾಂಧವ್ಯವನ್ನು ಅವರು ತೆರೆದಿಟ್ಟಿದ್ದಾರೆ. ಅಸಲಿಯಾಗಿ ಈವರೆಗೂ ರಮ್ಯಾ ಅವರನ್ನು ರಕ್ಷಿತ್ ಮುಖತಃ ಭೇಟಿ ಆಗದೇ ಇದ್ದರೂ, ಕಾಲೇಜು ದಿನಗಳಲ್ಲಿ ರಮ್ಯಾ ಮೇಲೆ ಅವರಿಗೆ ಕ್ರಶ್ ಆಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

    ರಮ್ಯಾ ಹೆಸರಾಂತ ತಾರೆ. ಸಹಜವಾಗಿ ಕಾಲೇಜು ದಿನಗಳಲ್ಲಿ ಕ್ರಶ್ ಆಗಿಯೇ ಆಗುತ್ತದೆ. ನನಗಷ್ಟೇ ಅಲ್ಲ, ಅದೆಷ್ಟೋ ಹುಡುಗರಿಗೆ ರಮ್ಯಾ ಅವರ ಮೇಲೆ ಕ್ರಶ್ ಆಗಿದೆ. ಹಾಗೆಯೇ ನನಗೂ ಆಗಿತ್ತು. ಅಷ್ಟೇ, ಅದರ ಹೊರತಾಗಿ ಉಳಿದದ್ದೆಲ್ಲ ಶುದ್ಧ ನಾನ್ಸೆನ್ಸ್ ಎನ್ನುತ್ತಾರೆ ರಕ್ಷಿತ್ ಶೆಟ್ಟಿ. ನಾನು ಯಾವುದೇ ಹುಡುಗಿಯ ಜತೆ ಫೋಟೋ ಶೇರ್ ಮಾಡಿದರೂ, ಅವರೊಂದಿಗೆ ಸಂಬಂಧ ಕಟ್ಟಿ ಗಾಸಿಪ್ ಮಾಡುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ರಕ್ಷಿತ್ ಹೇಳಿದ್ದಾರೆ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ರಮ್ಯಾ ಜೊತೆಗಿನ ಸಿನಿಮಾದ ಬಗ್ಗೆಯೂ ಮಾತನಾಡಿರುವ ರಕ್ಷಿತ್, ‘ಉಳಿದವರು ಕಂಡಂತೆ ಸಿನಿಮಾದಲ್ಲಿ ರಮ್ಯಾ ಅವರೇ ನಾಯಕಿ ಪಾತ್ರ ಮಾಡಬೇಕು ಎನ್ನುವುದು ನನ್ನಾಸೆ ಆಗಿತ್ತು. ಹಾಗಾಗಿ ಅವರಿಗೆ ಕಥೆ ಹೇಳಿದ್ದೆ. ಈ ಸಿನಿಮಾದ ಕಥೆಯು ನನಗೆ ಅರ್ಥವಾಗಲಿಲ್ಲ ಎಂದು ಹೇಳಿ ಒಪ್ಪಿಕೊಳ್ಳಲಿಲ್ಲ. ಆನಂತರ ಮತ್ತೆ ನಾನು ಅವರೊಂದಿಗೆ ಕೆಲಸ ಮಾಡಲಿಲ್ಲ. ಅವರ ಜೊತೆ ಕೆಲಸ ಮಾಡುವ ಆಸೆಯಿದೆ. ಆದರೆ, ಸದ್ಯಕ್ಕಲ್ಲ’ ಎಂದು ಮಾತನಾಡಿದ್ದಾರೆ.

  • ಕ್ರಶ್ ಗುಟ್ಟು ಬಿಚ್ಚಿಟ್ಟ ಅದಿತಿ ಪ್ರಭುದೇವಾ

    ಕ್ರಶ್ ಗುಟ್ಟು ಬಿಚ್ಚಿಟ್ಟ ಅದಿತಿ ಪ್ರಭುದೇವಾ

    ಬೆಂಗಳೂರು: ಚಂದನವನದ ಕ್ಯೂಟ್ ಬೆಡಗಿ ಅದಿತಿ ಪ್ರಭುದೇವಾ ಸ್ಯಾಂಡಲ್‍ವುಡ್‍ನಲ್ಲಿ ಇತೀಚೆಗೆ ಕಿಕ್ಕೇರಿಸುತ್ತಿರುವ ಬೆಡಗಿ ಎಂದರೆ ತಪ್ಪಾಗಲಾರದು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಪಡ್ಡೆ ಹುಡುಗರ ಕನಸಿನಲ್ಲಿ ಕಾಡುತ್ತಾರೆ ಸಹ. ಅಲ್ಲದೆ ಇತ್ತೀಚಿನ ಬ್ಯುಸಿಯೆಸ್ಟ್ ನಟಿಯರಲ್ಲಿ ಅದಿತಿ ಕೂಡ ಒಬ್ಬರು. ಹೀಗಿರುವಾಗ ತಮ್ಮ ಕ್ರಶ್ ಕುರಿತು ಹೇಳಿದರೆ ಯಾರ ಕಿವಿ ನಿಮಿರುವುದಿಲ್ಲ ಹೇಳಿ.

    ಅದಿತಿ ಪ್ರಭುದೇವ ಅವರು ಬ್ರಹ್ಮಚಾರಿ ಸಿನಿಮಾ ನಂತರ ಹಲವರಿಗೆ ಫೆವರಿಟ್ ನಟಿಯಾಗಿದ್ದು, ತಮ್ಮ ನಟನೆ ಮೂಲಕ ಹುಡುಗರ ಮನಸ್ಸು ಕದ್ದಿದ್ದಾರೆ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿಭಾಯಿಸಬಲ್ಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅವರು ಇತ್ತೀಚೆಗೆ ನಟಿಸಿರುವ ‘ಒಂಬತ್ತನೇ ದಿಕ್ಕು’ ಸಿನಿಮಾ. ಈ ಸಿನಿಮಾದಲ್ಲಿ ಲೂಸ್ ಮಾದ ಹಾಗೂ ಅದಿತಿ ಪ್ರಭುದೇವ ವೃದ್ಧರ ಪಾತ್ರವನ್ನು ನಿರ್ವಹಿಸಿದ್ದಾರೆ.

    ಹೌದು ದಯಾಳ್ ಪದ್ಮನಾಭನ್ ನಿರ್ದೆಶನದ ‘ಒಂಬತ್ತನೇ ದಿಕ್ಕು’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರಲ್ಲಿ ಅದಿತಿ ಹಾಗೂ ಲೂಸ್ ಮಾದ ವೃದ್ಧರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದ್ದು, ಲಾಕ್‍ಡೌನ್ ಮುಗಿದ ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಲೂಸ್ ಮಾದಾ ಹಾಗೂ ಅದಿತಿ ಪ್ರಭುದೇವಾ ಅವರಿಗೆ ಮಕ್ಕಳು, ಮೊಮ್ಮಕ್ಕಳು ಕೂಡ ಇರಲಿದ್ದಾರಂತೆ.

    ಈ ಹಿಂದೆ ಬ್ರಹ್ಮಚಾರಿ ಸಿನಿಮಾದಲ್ಲಿ ಹೆಂಡತಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ಅದಿತಿ, ಈಗ ವೃದ್ಧೆಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಓಲ್ಡ್ ಮಾಂಕ್ ಸಿನಿಮಾಗೆ ಸಹ ಸಹಿ ಹಾಕಿದ್ದಾರೆ. ಹೀಗೆ ನಾನಾ ಪಾತ್ರಗಳಲ್ಲಿ ಅದಿತಿ ಪ್ರಯೋಗ ನಡೆಸುತ್ತಿದ್ದಾರೆ. ಆದರೆ ಇದೀಗ ತಮ್ಮ ಕ್ರಶ್ ಬಗ್ಗೆ ಮಾಹಿತಿ ನೀಡಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇವಲ ಹುಡುಗರಿಗೆ ಮಾತ್ರವಲ್ಲ, ಬಹುತೇಕ ಹುಡುಗಿಯರಿಗೂ ಬೈಕ್‍ಗಳ ಮೇಲೆ ಕ್ರಶ್ ಆಗುತ್ತದೆ. ವಿಶೇಷವಾಗಿ ರಾಯಲ್ ಎನ್ಫೀಲ್ಡ್ ಎಂದು ಬರೆದುಕೊಂಡಿದ್ದಾರೆ. ಹಳೆಯ ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಕುಳಿತಿರುವ ಫೋಟೋಗಳನ್ನು ಹಾಕಿದ್ದಾರೆ. ಈ ಮೂಲಕ ರಾಯಲ್ ಎನ್ಫೀಲ್ಡ್ ಬೈಕ್ ಮೇಲಿನ ತಮ್ಮ ಕ್ರಶ್ ಹೊರ ಹಾಕಿದ್ದಾರೆ.

  • ‘Wait And See’ ಹೇಳುತ್ತಲೇ 5 ದಿನದಲ್ಲಿ ಕ್ರಶ್ ಸೇರಿ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್

    ‘Wait And See’ ಹೇಳುತ್ತಲೇ 5 ದಿನದಲ್ಲಿ ಕ್ರಶ್ ಸೇರಿ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್

    ಲಕ್ನೋ: ತನ್ನ ಮನದರಸಿ ಸೇರಿ 5 ದಿನದಲ್ಲಿ ಮೂವರನ್ನು ಟಿಕ್ ಟಾಕ್ ಬಳಕೆದಾರನೊಬ್ಬ ಕೊಲೆಗೈದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಬಿಜ್ನೋರ್ ಎಂಬಲ್ಲಿ ನಡೆದಿದೆ.

    ಆರೋಪಿಯನ್ನು ಅಶ್ವನಿ ಅಲಿಯಾಸ್ ಜಾನಿ ದಾದ ಎಂದು ಗುರುತಿಸಲಾಗಿದೆ. ಆರೋಪಿ ಡ್ರಗ್ ಸೇವನೆ ಮಾಡುತ್ತಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸದ್ಯ ಆತನ ಹುಡುಕಾಟಕ್ಕಾಗಿ ಭಾರೀ ಪ್ರಯತ್ನಗಳು ನಡೆದವು. ಕ್ಷಿಪ್ರ ಕಾರ್ಯಪಡೆ(ಆರ್‍ಎಎಫ್) ಅಧಿಕಾರಿಗಳು ಕೂಡ ಪೊಲೀಸರ ಜೊತೆ ಸೇರಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು.

    5 ದಿನಗಳಲ್ಲಿ ಆರೋಪಿ ಮೂವರನ್ನು ಕೊಲೆ ಮಾಡಿದ್ದಾನೆ. ಈತ ತನ್ನ ಕ್ರಶ್ ನಿಟಿಕಾ, ರಾಹುಲ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಎಂಬವರನ್ನು ಕೊಲೆ ಮಾಡಿದ್ದಾನೆ. ರಾಹುಲ್, ಕೃಷ್ಣ ಸಂಬಂಧಿಕರಾಗಿದ್ದು, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

    ಅಶ್ವನಿ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸುವ ಮೂಲಕ ಸಕ್ರಿಯನಾಗಿದ್ದನು. ಅಲ್ಲದೆ ಅವುಗಳಿಗೆ `ನನ್ನ ಹಾನಿ ನೋಡಿ’ ‘ಎಲ್ಲವನ್ನೂ ನಾನು ನಾಶ ಮಾಡುತ್ತೇನೆ, ವೈಟ್ ಆ್ಯಂಡ್ ಸೀ’ ಎಂದು ತಲೆ ಬರಹ ಕೊಡುತ್ತಿದ್ದನು. ಈತ ಇರುವ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಅಶ್ವನಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಮಾಹಿತಿಗಳ ಪ್ರಕಾರ ಅಶ್ವನಿ ಸ್ಯೋಹಾರ ಪ್ರದೇಶದ ಬಿಜ್ನೋರ್ ನಿವಾಸಿಯಾಗಿದ್ದು, 3 ದಿನಗಳ ಹಿಂದೆ ಈತ ತನ್ನ ಕ್ರಶ್ ನನ್ನು ಕೊಲೆ ಮಾಡಿದ್ದನು.

    2002ರಲ್ಲಿ ನಿಟಿಕ ತನ್ನ ಅಂಕಲ್ ಮನೆಗೆ ಬಂದಿದ್ದಳು. ಈ ವೇಳೆ ಅಶ್ವನಿಗೆ ಆಕೆಯ ಮೇಲೆ ಕ್ರಶ್ ಆಗಿದೆ. ಇದನ್ನು ನಿರಾಕರಿಸಿದ ನಿಟಿಕಾ ದುಬೈಗೆ ತೆರಳಿದ್ದಳು. ಅಲ್ಲಿಯೇ ಆಕೆ ಉದ್ಯೋಗ ಮಾಡಿಕೊಂಡಿದ್ದಳು. ಆದರೆ ಇತ್ತೀಚೆಗೆ ಆಕೆಗೆ ಮದುವೆ ಕೂಡ ಆಗಿದ್ದು, ಹೀಗಾಗಿ ನಿಟಿಕಾ ದೌಲತಾಬಾದ್ ಗೆ ತೆರಳಿದ್ದಳು. ಈ ವಿಚಾರ ಆರೋಪಿ ಗಮನಕ್ಕೆ ಬಂದಿದ್ದು, ಅಶ್ವಾನಿ ನೇರವಾಗಿ ಆಕೆಯ ಮನೆಗೆ ತೆರಳಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ನಿಟಿಕಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

    ಈ ಕೊಲೆ ವಿಚಾರ ಬೆಳಕಿಗೆ ಬಂದ ಬಳಿಕ ಪೊಲೀಸರು ಅಶ್ವನಿಯನ್ನು ಬಂಧಿಸಲು 21 ನಿಲ್ದಾಣಗಳಲ್ಲಿ ಪೊಲೀಸರ ತಂಡವನ್ನು ನಿಯೋಜನೆ ಮಾಡಲಾಗಿದೆ. ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ ಸಂಜೀವ್ ತ್ಯಾಗಿ ತಿಳಿಸಿದ್ದಾರೆ.