Tag: cruser

  • ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕ್ರೂಸರ್- ಎರಡು ಸಾವು, 15 ಮಂದಿಗೆ ಗಾಯ

    ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕ್ರೂಸರ್- ಎರಡು ಸಾವು, 15 ಮಂದಿಗೆ ಗಾಯ

    ರಾಯಚೂರು: ಬೈಕ್ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತವಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನ ಸಿರವಾರ ತಾಲೂಕಿನ ಪಾತಾಪೂರ ಗ್ರಾಮದ ಬಳಿ ನಡೆದಿದೆ.

    ಚಂದಪ್ಪ ಮೃತ ಬೈಕ್ ಸವಾರ. ಮೃತ ಹಿಂಬದಿ ಬೈಕ್ ಸವಾರನ ಗುರುತು ತಿಳಿದು ಬಂದಿಲ್ಲ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಮಠ ಗ್ರಾಮದಿಂದ ಶ್ರೀ ಶೈಲಕ್ಕೆ ಹೊರಟಿದ್ದ ಕ್ರೂಸರ್ ಬೈಕ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪಲ್ಟಿಯಾಗಿದ್ದರಿಂದ ಕ್ರೂಸರ್ ನಲ್ಲಿದ್ದ 15 ಜನರು ಗಾಯಗೊಂಡಿದ್ದಾರೆ.

    ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ, ಕ್ರೂಸರ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ 12 ಮಂದಿಗೆ ಗಾಯ

    ಲಾರಿ, ಕ್ರೂಸರ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ 12 ಮಂದಿಗೆ ಗಾಯ

    ದಾವಣಗೆರೆ: ಲಾರಿ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ 12 ಮಂದಿಗೆ ಗಾಯಗಳಾದ ಘಟನೆ ನಡೆದಿದೆ.

    ಜಗಳೂರು ತಾಲೂಕಿನ ದೇವಿಕೆರೆ ಬಳಿ ಇಂದು ಮುಂಜಾನೆ ಈ ಅವಘಡ ಸಂಭವಿಸಿದೆ. ಇಬ್ಬರು ಚಿಕ್ಕಮಕ್ಕಳು ಸೇರಿದಂತೆ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ದಾವಣಗೆರೆ ನಿಟ್ಟುವಳ್ಳಿಯ ಶ್ರಿನಿವಾಸ್, ಪರಶುರಾಮ, ದೀಪಿಕಾ, ಮಹಾಲಕ್ಷ್ಮಿ, ರೇಣುಕಮ್ಮ, ಸಿಂಚನಾ, ಇಂಚರಾ, ರವಿಕುಮಾರ್, ನೇತ್ರಾವತಿ, ಶಶಿಕಲಾ, ಮಣಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.

    ಪಾವಗಡ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ದೇವಿಕೆರೆ ಸಮೀಪ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ನ ಮುಂಭಾಗದಲ್ಲಿ ಕುಳಿತವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎಲ್ಲಾ ಗಾಯಾಳುಗಳನ್ನು ದಾವಣಗೆರೆ ಬಾಪೂಜೆ, ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಜಗಳೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.