Tag: Cruise Terminal

  • ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟಿಸಿದ ಮೋದಿ – ವಿಶೇಷತೆಗಳೇನು?

    ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟಿಸಿದ ಮೋದಿ – ವಿಶೇಷತೆಗಳೇನು?

    ಗಾಂಧಿನಗರ:  ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್  (Cruise Terminal) ಅನ್ನು ಪ್ರಧಾನಿ ಮೋದಿ (Narendra Modi) ಶನಿವಾರ ಉದ್ಘಾಟಿಸಿದ್ದಾರೆ.

    ಗುಜರಾತ್‌ನ (Gujarat) ಭಾವನಗರದಲ್ಲಿ ನಡೆದ ‘ಸಮುದ್ರದಿಂದ ಸಮೃದ್ಧಿ’ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಈ ಉದ್ಘಾಟನೆ ಮಾಡಿದರು. ಅಲ್ಲದೇ 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಯೋಜನೆಗಳನ್ನು ಅನಾವರಣಗೊಳಿಸಿ, ಶಂಕುಸ್ಥಾಪನೆ ನೇರವೇರಿಸಿದರು. ಇದನ್ನೂ ಓದಿ: H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    ಇಂದಿರಾ ಡಾಕ್‌ನಲ್ಲಿರುವ ಈ ಅತ್ಯಾಧುನಿಕ ಸೌಲಭ್ಯವು ಭಾರತೀಯ ಕ್ರೂಸ್ ಪ್ರವಾಸೋದ್ಯಮಕ್ಕೆ ಮಹತ್ವದ ದ್ವಾರವಾಗಿ ಹೊರಹೊಮ್ಮಲಿದೆ. ಭಾರತದ ಮಹತ್ವಾಕಾಂಕ್ಷೆಯ ಬಂದರು ಅಭಿವೃದ್ಧಿ ಉಪಕ್ರಮದ ಭಾಗವಾಗಿ ನಿರ್ಮಿಸಲಾದ ಈ ಕ್ರೂಸ್ ಟರ್ಮಿನಲ್ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. 4,15,000 ಚದರ ಅಡಿಗಳಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಅನ್ನು ವರ್ಷಕ್ಕೆ 1 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡಿ ನಿರ್ಮಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ – ಬಾಂಬ್ ಸ್ಕ್ವಾಡ್‌ನಿಂದ ಪರಿಶೀಲನೆ

    ಇದು ಏಕಕಾಲದಲ್ಲಿ 5 ಕ್ರೂಸ್ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪ್ರತಿ ವರ್ಷ 1 ಮಿಲಿಯನ್ ಪ್ರಯಾಣಿಕರನ್ನು ಅಥವಾ ದಿನಕ್ಕೆ ಸುಮಾರು 10,000 ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 72 ಚೆಕ್-ಇನ್ ಮತ್ತು ವಲಸೆ ಕೌಂಟರ್‌ಗಳನ್ನು ಹೊಂದಿರುವ ಟರ್ಮಿನಲ್ ಅನ್ನು ಪ್ರಯಾಣಿಕರಿಗೆ ಸುಗಮ, ಪರಿಣಾಮಕಾರಿ ಮತ್ತು ತೊಂದರೆಮುಕ್ತ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ 300ಕ್ಕೂ ಹೆಚ್ಚು ವಾಹನಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಇದನ್ನೂ ಓದಿ: ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಬಳಿ ಕೇಳಿದ್ದೇವೆ – ಎಂ.ಬಿ ಪಾಟೀಲ್

  • ಪ್ರಧಾನಿ ಮೋದಿಯಿಂದ ಭಾರತದ ಅತಿದೊಡ್ಡ ಕ್ರೂಸ್‌ ಟರ್ಮಿನಲ್‌ ಉದ್ಘಾಟನೆ ಇಂದು

    ಪ್ರಧಾನಿ ಮೋದಿಯಿಂದ ಭಾರತದ ಅತಿದೊಡ್ಡ ಕ್ರೂಸ್‌ ಟರ್ಮಿನಲ್‌ ಉದ್ಘಾಟನೆ ಇಂದು

    ಗಾಂಧೀನಗರ: ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ (Cruise Terminal) ಅನ್ನು ಪ್ರಧಾನಿ ಮೋದಿ (PM Modi) ಅವರು ಶನಿವಾರ ಉದ್ಘಾಟಿಸಲಿದ್ದಾರೆ.

    ಭಾವನಗರದ ಜವಾಹರ್ ಮೈದಾನದಲ್ಲಿ ನಡೆಯಲಿರುವ ಉನ್ನತ ಮಟ್ಟದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಇಂದು ಗುಜರಾತ್‌ಗೆ ಆಗಮಿಸಲಿದ್ದು, ಬಹು ವಲಯಗಳಲ್ಲಿ ಹಲವಾರು ಪರಿವರ್ತನಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ನವರಾತ್ರಿಯಿಂದಲೇ ಹೊಸ GST ದರ ಜಾರಿ; ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? – ಇಲ್ಲಿದೆ ಪೂರ್ಣ ಪಟ್ಟಿ

    ಪ್ರಧಾನಮಂತ್ರಿಗಳು ‘ಸಮುದ್ರದಿಂದ ಸಮೃದ್ಧಿ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಮೋದಿ 7,870 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಉಪಕ್ರಮಗಳು ಭಾರತದ ಪ್ರಮುಖ ಬಂದರುಗಳಲ್ಲಿ ನಿರ್ಣಾಯಕ ಮೂಲಸೌಕರ್ಯ ನವೀಕರಣಗಳನ್ನು ಒಳಗೊಂಡಿವೆ. ಇಂದಿರಾ ಡಾಕ್‌ನಲ್ಲಿ ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ ಮತ್ತು ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಹೊಸ ಕಂಟೇನರ್ ಟರ್ಮಿನಲ್‌ಗೆ ಅಡಿಪಾಯ ಹಾಕುವುದು ಪ್ರಮುಖ ಅಂಶಗಳಲ್ಲಿ ಸೇರಿವೆ. ಇದನ್ನೂ ಓದಿ: ಮಣಿಪುರ | ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ಗುಂಡಿನ ದಾಳಿ – ಇಬ್ಬರು ಯೋಧರು ಹುತಾತ್ಮ, ಐವರಿಗೆ ಗಾಯ

    ಪಾರಾದೀಪ್ ಬಂದರಿನಲ್ಲಿ (ಒಡಿಶಾ) ಹೊಸ ಸರಕು ನಿಲ್ದಾಣ ಮತ್ತು ಕಂಟೇನರ್ ನಿರ್ವಹಣಾ ಸೌಲಭ್ಯಗಳು, ಗುಜರಾತ್‌ನ ಟ್ಯೂನ ಟೆಕ್ರಾ ಮಲ್ಟಿ-ಕಾರ್ಗೋ ಟರ್ಮಿನಲ್, ಮತ್ತು ಕಾಮರಾಜರ್ ಬಂದರು (ಎನ್ನೋರ್, ತಮಿಳುನಾಡು), ಚೆನ್ನೈ ಬಂದರು, ಕಾರ್ ನಿಕೋಬಾರ್ ದ್ವೀಪ, ದೀನದಯಾಳ್ ಬಂದರಿನಲ್ಲಿ (ಕಾಂಡ್ಲಾ) ಆಧುನೀಕರಣ ಯೋಜನೆಗಳು ಮತ್ತು ಪಾಟ್ನಾ ಮತ್ತು ವಾರಣಾಸಿಯಲ್ಲಿ ಒಳನಾಡಿನ ಜಲಮಾರ್ಗ ಸೌಲಭ್ಯಗಳು ಮೊದಲಾದವು ಕಡಲ ಅಭಿವೃದ್ಧಿ ಯೋಜನೆಗಳಾಗಿವೆ.