Tag: Cruise Missiles

  • ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ಕೀವ್: ರಷ್ಯಾ ವಾಯುಪಡೆಯು ಮಂಗಳವಾರ ಉಕ್ರೇನಿನ (Ukraine) ಕೀವ್ ಮೇಲೆ ನಡೆಸಿದ ದಾಳಿಯನ್ನ ತಡೆಯುವಲ್ಲಿ ಉಕ್ರೇನ್ ಸೇನೆ ಯಶಸ್ವಿಯಾಗಿದ್ದು, ರಷ್ಯಾದ 18 ಕ್ಷಿಪಣಿಗಳನ್ನ (Cruise Missiles) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರ ತಡರಾತ್ರಿ ರಷ್ಯಾದ ಕ್ಷಿಪಣಿಗಳು ವಾಯು, ಸಮುದ್ರ ಹಾಗೂ ಭೂಸೇನೆ ಸೇರಿದಂತೆ ಮೂರು ವಿಭಾಗಳಿಂದ ಉಕ್ರೇನಿನ ರಾಜಧಾನಿ ಕೀವ್ ಮೇಲೆ ದಾಳಿ (Russian Air Attack) ನಡೆಸಿತ್ತು. ಆದ್ರೆ ಪಾಶ್ಚಿಮಾತ್ರ ರಾಷ್ಟ್ರಗಳು ಸರಬರಾಜು ಮಾಡಿದ್ದ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನ್ ರಷ್ಯಾ ದಾಳಿಯನ್ನ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಯಾವುದೇ ಸಾವು ನೋವುಗಳಾಗಿಲ್ಲ ಎಂದು ತಿಳಿದುಬಂದಿದೆ.

    ರಷ್ಯಾ ಕಳೆದ ರಾತ್ರಿ ಉಕ್ರೇನ್ ರಾಜಧಾನಿಯನ್ನ ಗುರಿಯಾಗಿಸಿ MiG-31K ಯುದ್ಧವಿಮಾನದಿಂದ 6 Kinzhal ಏರೋ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಕಪ್ಪು ಸಮುದ್ರದ ಹಡಗುಗಳಿಂದ 9 ಕ್ರೂಸ್ ಕ್ಷಿಪಣಿ ಹಾಗೂ ಮೂರು ಭೂ ಆಧಾರಿತ S-400 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಲ್ಲದೇ ಇರಾನ್ ಡ್ರೋನ್‌ಗಳಿಂದಲೂ ದಾಳಿ ನಡೆಸಿತ್ತು ಎಂದು ಉಕ್ರೇನ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೆ ಪ್ರತಿದಾಳಿ ನಡೆಸಿದ ಉಕ್ರೇನ್ ಅಮೆರಿಕ ನಿರ್ಮಿತ ಪೇಟ್ರಿಯಾಟಿಕ್ ಕ್ಷಿಪಣಿಗಳನ್ನು ಒಳಗೊಂಡಂತೆ ಉಕ್ರೇನಿನ ಮಿತ್ರರಾಷ್ಟ್ರಗಳು ಒದಗಿಸಿದ್ದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ರಷ್ಯಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್‌

    ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಸತತವಾಗಿ ಮುಂದುವರಿಸಿದೆ. ಈ ತಿಂಗಳಲ್ಲಿ ರಷ್ಯಾ 8ನೇ ಬಾರಿಗೆ ರಾಜಧಾನಿಯನ್ನು ಗುರಿಯಾಗಿಸಿ ವಾಯುಸೇನೆಯ ಮೇಲೆ ದಾಳಿ ನಡೆಸಿದೆ. ನಡುವೆ ಒಂದು ವಾರ ಬಿಡುವು ನೀಡಲಾಗಿತ್ತು. ಬಳಿಕ ಮತ್ತೆ ರಷ್ಯಾ ತನ್ನ ಆಕ್ರಮಣ ಮುಂದುವರಿಸಿದೆ. ಇದಕ್ಕೆ ವಿವಿಧ ದೇಶಗಳಿಂದ ಸಹಾಯ ಪಡೆಯುತ್ತಿರುವ ಉಕ್ರೇನ್ ಪ್ರತಿದಾಳಿಯನ್ನ ಸಮರ್ಥವಾಗಿ ಎದುರಿಸುತ್ತಿದೆ. ಇದನ್ನೂ ಓದಿ: Layoff: 11 ಸಾವಿರ ಜಾಬ್ ಕಟ್‌ಗೆ ವೊಡಾಫೋನ್ ಪ್ಲ್ಯಾನ್

  • ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ಕೀವ್/ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ ನಂತರ ಈಗ ಡ್ರೋನ್ (Drone) ದಾಳಿ ನಡೆಯುತ್ತಿದೆ.

    ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯಗೊಳಿಸಿದ ರಷ್ಯಾ  (Russia) ಇದೀಗ ಕಾಮಿಕೇಜ್ ಡ್ರೋನ್ ದಾಳಿಯನ್ನು ಮುಂದುವರಿಸಿದೆ.

    ಮೊಪೆಡ್ ಸೌಂಡ್ ಕೇಳಿಬಂದ್ರೇ ಉಕ್ರೇನ್ ಜನ ಬೆಚ್ಚಿ ಬೀಳ್ತಿದ್ದಾರೆ. ಭಾರೀ ಶಸ್ತ್ರಾಸ್ತ್ರ ಬಳಸಿ ಸಿಕ್ಕಾಪಟ್ಟೆ ನಷ್ಟ ಹೋಗಿರುವ ರಷ್ಯಾ ಇದೀಗ ಅಗ್ಗದ ಬೆಲೆ ಅಸ್ತ್ರಗಳನ್ನು ಉಕ್ರೇನ್ ವಿರುದ್ಧ ಬಳಸತೊಡಗಿದೆ. ಇರಾನ್‌ನಿಂದ (Iranian Drones) ಆಮದು ಮಾಡಿಕೊಂಡ ಶಾಹಿದ್ ಸರಣಿಯ ಡ್ರೋನ್‌ಗಳನ್ನು ಬಳಸಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಇದನ್ನೂ ಓದಿ: ನ.11ರಂದು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ – ಆದಿಚುಂಚನಗಿರಿ ಶ್ರೀಗಳ ಜತೆ ಸಚಿವರ ಸಮಾಲೋಚನೆ

    https://twitter.com/Euan_MacDonald/status/1582056362200031236

    ಕೀವ್‌ನಲ್ಲಿಂದು (Kyiv) ಕೆಲವೇ ನಿಮಿಷಗಳ ಅಂತರದಲ್ಲಿ 3 ಡ್ರೋನ್ ದಾಳಿ ನಡೆದಿವೆ. ಈ ಡ್ರೋನ್‌ಗಳಲ್ಲಿ ಮೊಪೆಡ್‌ಗಳಲ್ಲಿ ಬಳಸುವ 50 ಹಾರ್ಸ್ ಪವರ್‌ನ 2 ಸ್ಟ್ರೋಕ್‌ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಇವು 40 ಕೆಜಿ ಸ್ಫೋಟಕ ಹೊತ್ತು ಗಾಳಿಯಲ್ಲಿ ಎಗರುವಾಗ ಮೊಪೆಡ್ ಸೌಂಡ್ ಬರುತ್ತದೆ. ಇವುಗಳನ್ನು ಟ್ರಕ್ ಮೇಲ್ಭಾಗ ನಿಂತು ಹಾರಿಸಲಾಗುತ್ತದೆ. ಇದನ್ನೂ ಓದಿ: ದರೋಡೆಗೆ ಬಂದವನಿಗೆ ಕಟ್ಟಿಂಗ್ ಪ್ಲೆಯರ್ ತೋರಿಸಿ ಓಡಿಸಿದ ಲೇಡಿ ಬ್ಯಾಂಕ್ ಮ್ಯಾನೇಜರ್

    ಇತ್ತೀಚೆಗಷ್ಟೇ ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು (Crimean Bridge) ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ನಡೆಸಿತು. ಸತತವಾಗಿ 75 ಕ್ಷಿಪಣಿಗಳು, 5 ಡೆಡ್ಲಿ ರಾಕೆಟ್‌ಗಳನ್ನು ಉಕ್ರೇನ್ ಮೇಲೆ ಹಾರಿಬಿಟ್ಟಿತ್ತು. ಇದಾದ ಒಂದು ವಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ಹೇಳಿದ್ದರು. ಇದೀಗ ಮತ್ತೆ ಡ್ರೋನ್ ದಾಳಿಯನ್ನು ಮುಂದುವರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಇನ್ನುಮುಂದೆ ಸಾಮೂಹಿಕ ಕ್ಷಿಪಣಿ ದಾಳಿ (Missile Strikes) ನಡೆಸುವುದಿಲ್ಲ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)  ಹೇಳಿದ್ದಾರೆ.

    ತನ್ನ ಕನಸಿನ ಕ್ರಿಮಿಯಾ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿದ ಬಳಿಕ ಡೆಡ್ಲಿ ರಾಕೆಟ್‌ಗಳ ಮೂಲಕ ಸತತ ದಾಳಿ ನಡೆಸಿದ ರಷ್ಯಾ ಇದೀಗ ಕ್ಷಿಪಣಿ ದಾಳಿ ನಡೆಸುವುದಿಲ್ಲ. ಪಾಶ್ಚಿಮಾತ್ಯ ದೇಶವನ್ನು ನಾಶಗೊಳಿಸುವುದು ಕ್ರೆಮ್ಲಿನ್ (Kremlin) ಉದ್ದೇಶವಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ರಷ್ಯಾದ ಮಾರಣಾಂತಿಕ ಕ್ಷಿಪಣಿ ದಾಳಿಯು ಉಕ್ರೇನ್‌ನ ಹಲವು ಮೂಲ ಸೌಕರ್ಯಗಳಿಗೆ ಹೊಡೆತ ನೀಡಿದೆ. ಅಲ್ಲದೇ ಅಮಾಯಕರ ಪ್ರಾಣ ಬಲಿ ತೆಗೆದುಕೊಂಡಿದೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಉಕ್ರೇನ್ ನಗರವು ಕತ್ತಲೆಯಲ್ಲಿ ಕಳೆಯುವಂತಾಗಿದೆ. ರಷ್ಯಾದ ಮಿಲಿಟರಿ ದಾಳಿಯನ್ನು ವಿಶ್ವದ ಅನೇಕ ನಾಯಕರು ಖಂಡಿಸಿದರು. ಇದರಿಂದ ರಷ್ಯಾ ತನ್ನ ಕ್ಷಿಪಣಿ (Missile) ದಾಳಿಯಿಂದ ಹಿಂದೆ ಸರಿದಿದೆ. ಇದನ್ನೂ ಓದಿ: ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯಿಸಿ, ಉಕ್ರೇನ್ ವಿರುದ್ಧ ವ್ಯಾಪಕ ದಾಳಿಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಕ್ರಿಮಿಯಾ-ರಷ್ಯಾ ಸಂಪರ್ಕಿಸುವ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.

    ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.

    ಸೇತುವೆ ಧ್ವಂಸಗೊಳಿಸಿದ ಬಳಿಕ ಕೆರಳಿದ ರಷ್ಯಾ ಪ್ರತಿಯಾಗಿ 75 ಕ್ಷಿಪಣಿ ಹಾಗೂ 5 ಡೆಡ್ಲಿ ರಾಕೆಟ್‌ಗಳ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಇರಾನಿ ಡ್ರೋನ್‌ಗಳ (Iranian Drones) ಮೂಲಕ ಅಟ್ಯಾಕ್ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]