Tag: Crude Oil

  • ಜೂನ್‌ನಲ್ಲಿ ರಷ್ಯಾದಿಂದ ಭಾರೀ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಿದ ಭಾರತ

    ಜೂನ್‌ನಲ್ಲಿ ರಷ್ಯಾದಿಂದ ಭಾರೀ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಿದ ಭಾರತ

    ನವದೆಹಲಿ: ಉಕ್ರೇನ್‌ (Ukraine) ಯುದ್ಧ ಆರಂಭವಾದ ಬಳಿಕ ಭಾರತ (India) ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ (Discount Price) ಕಚ್ಚಾ ತೈಲ ಖರೀದಿ ಮಾಡುತ್ತಿರುವುದು ಹಳೆ ಸುದ್ದಿ. ಆದರೆ ಈಗ ಮತ್ತಷ್ಟು ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಖರೀದಿ ಮಾಡುತ್ತಿದೆ.

    ಹೌದು. ಮೇ ತಿಂಗಳಿನಲ್ಲಿ ಒಂದು ಬ್ಯಾರೆಲ್‌ ರಷ್ಯಾದ ಕಚ್ಚಾ ತೈಲವನ್ನು (Russia Crude Oil) 70.17 ಡಾಲರ್‌ (ಅಂದಾಜು 5,800 ರೂ.) ಬೆಲೆಯಲ್ಲಿ ಭಾರತ ಖರೀದಿಸಿದ್ದರೆ, ಜೂನ್‌ನಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲಕ್ಕೆ ಸಾಗಾಣಿಕಾ ವೆಚ್ಚ ಸೇರಿ 68.17 ಡಾಲರ್‌ (ಅಂದಾಜು 5,600 ರೂ.) ನೀಡಿ ಖರೀದಿಸಿದೆ.

    ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕಚ್ಚಾ ತೈಲಕ್ಕೆ ಗರಿಷ್ಠ 60 ಡಾಲರ್‌ ದರವನ್ನೂ ನಿಗದಿ ಪಡಿಸಿದ್ದರೂ ಭಾರತ ಹೆಚ್ಚಿನ ದರ ನೀಡಿ ತೈಲವನ್ನು ಖರೀದಿಸುತ್ತಿದೆ.

    ಜೂನ್‌ ತಿಂಗಳಿನಲ್ಲಿ ಇರಾಕ್‌ನಿಂದ ಖರೀದಿಸುವ ಒಂದು ಬ್ಯಾರೆಲ್‌ ಕಚ್ಚಾ ತೈಲಕ್ಕೆ ಭಾರತ 67.10 ಡಾಲರ್‌ (5,500 ರೂ.) ಪಾವತಿಸಿದ್ದರೆ ಸೌದಿ ಅರೇಬಿಯಾದ ತೈಲಕ್ಕೆ 81.78 ಡಾಲರ್‌ (ಅಂದಾಜು 6,700 ರೂ.) ಪಾವತಿಸಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.  ಇದನ್ನೂ ಓದಿ: Photo Album- ಸ್ಪಂದನಾ-ವಿಜಯ ರಾಘವೇಂದ್ರ ಮುದ್ದಾದ ಜೋಡಿಯ ಫೋಟೋ ಆಲ್ಬಂ

    ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕ, ಯುರೋಪಿಯನ್‌ ಯೂನಿಯನ್‌ ಜೊತೆ ಆಸ್ಟ್ರೇಲಿಯಾ ಒಂದು ಬ್ಯಾರೆಲ್‌ ರಷ್ಯಾದ ಕಚ್ಚಾ ತೈಲಕ್ಕೆ 60 ಡಾಲರ್‌(49 ಸಾವಿರ ರೂ.) ದರವನ್ನು ನಿಗದಿ ಮಾಡಿದೆ.

    ಜಿ7 ದೇಶಗಳು ಮತ್ತು ಮಿತ್ರರಾಷ್ಟ್ರಗಳು ವಿಧಿಸಿದ ತೈಲದ ಮೇಲಿನ ಬೆಲೆ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ರಷ್ಯಾ ಸ್ವಾಗತಿಸಿತ್ತು. ತೈಲ ಮಾರಾಟದಿಂದ ಸಂಗ್ರಹವಾದ ಆದಾಯವನ್ನು ಉಕ್ರೇನ್‌ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿದೆ ಎಂದು ಆರೋಪಿಸಿ ಜಿ7 ದೇಶಗಳು ತೈಲ ದರಕ್ಕೆ ಮಿತಿ ಹೇರುವ ನಿರ್ಧಾರವನ್ನು ಕೈಗೊಂಡಿದ್ದು ಡಿಸೆಂಬರ್‌ 5ರಿಂದ ಜಾರಿಗೆ ಬಂದಿದೆ.

     

    ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಭಾರತ ತೈಲ ಖರೀದಿ ಮಾಡುತ್ತಿರುವುದಕ್ಕೆ ಯುರೋಪ್‌ ಮತ್ತು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತ, ನಮ್ಮ ದೇಶದ ಪ್ರಜೆಗಳ ಹಿತಕ್ಕಾಗಿ ನಾವು ಯಾವ ಕಠಿಣ ನಿರ್ಧಾರ ಬೇಕಾದರೂ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ರಷ್ಯಾದಿಂದ ತೈಲ ಖರೀದಿಸದೇ ಇದ್ದಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ದರ 140 ಡಾಲರ್‌ಗೆ ಏರಿಕೆಯಾದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ತಿರುಗೇಟು ನೀಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸಲು ಮುಂದಾದ ಸೌದಿ – ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

    ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸಲು ಮುಂದಾದ ಸೌದಿ – ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

    ರಿಯಾದ್: ಯುರೋಪ್ ರಾಷ್ಟ್ರಗಳು (European Countries) ಆರ್ಥಿಕ ಹಿಂಜರಿತಕ್ಕೆ ತುತ್ತಾಗಬಹುದು ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆ ಸೌದಿ ಅರೇಬಿಯಾ (Saudi Arabia) ಕಚ್ಚಾ ತೈಲ (Crude Oil) ಉತ್ಪಾದನೆಯನ್ನು ಕಡಿತಗೊಳಿಸಲು ಮುಂದಾಗಿದೆ.

    ಜುಲೈನಿಂದ ಪ್ರತಿದಿನ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಈ ಹಿಂದೆ ಒಪೆಕ್ (OPEC) ಸದಸ್ಯ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತ ಮಾಡಿ ಬೆಲೆಯನ್ನು ಹೆಚ್ಚಿಸಲು ಪ್ರಯತ್ತಿದ್ದವು. ಆದರೆ ಬೆಲೆ ಹೆಚ್ಚಳ ಸಾಧ್ಯವಾಗದಿರುವ ಕಾರಣ ಉತ್ಪಾದನೆಯನ್ನು ಮತ್ತಷ್ಟು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಂಡಿದೆ.

    ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಒಪೆಕ್ ವಿಯೆನ್ನಾದಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ 7 ಗಂಟೆಗಳ ಕಾಲ ಸಭೆ ನಡೆಸಿ ತೈಲ ಬೆಲೆ ಹೆಚ್ಚಿಸುವ ಸಲುವಾಗಿ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದರ ಪ್ರಕಾರ ದಿನಕ್ಕೆ 14 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಯೋಜಿಸಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಭಯೋತ್ಪಾದಕರ ಭೀತಿ- ಭದ್ರತಾ ಪಡೆಗಳೇ ಟಾರ್ಗೆಟ್

    ತೈಲ ಉತ್ಪಾದನೆ ಕಡಿತವನ್ನು ಜುಲೈ ನಂತರ ಪ್ರಾರಂಭಿಸಬಹುದು ಎಂದು ಸೌದಿ ತಿಳಿಸಿದೆ. ಆದರೆ ಇದು ರಷ್ಯಾ, ನೈಜೀರಿಯಾ ಹಾಗೂ ಅಂಗೋಲಾದ ಪ್ರಸ್ತುತ ಉತ್ಪಾದನಾ ಮಟ್ಟಕ್ಕೆ ಅನುಗುಣವಾಗಿ ತರಲು ಸಾಧ್ಯವಿಲ್ಲ.

    ಒಪೆಕ್ ಪ್ರಪಂಚದಲ್ಲಿ 40% ರಷ್ಟು ಕಚ್ಚಾತೈಲ ಉತ್ಪಾದನೆಯ ಪಾಲನ್ನು ಹೊಂದಿದೆ. ಆದರೆ ಅದು ತೆಗೆದುಕೊಳ್ಳುವ ನೀತಿ ನಿರ್ಧಾರಗಳು ಜಾಗತಿಕವಾಗಿ ತೈಲ ಬೆಲೆಗಳ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ

  • ಭಾರತದಂತೆ ನಾನು ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಗೆ ಮುಂದಾಗಿದ್ದೆ: ಇಮ್ರಾನ್ ಖಾನ್

    ಭಾರತದಂತೆ ನಾನು ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಗೆ ಮುಂದಾಗಿದ್ದೆ: ಇಮ್ರಾನ್ ಖಾನ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ಭಾರತದ (India) ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಭಾರತದಂತೆ ಪಾಕಿಸ್ತಾನಕ್ಕೂ ರಷ್ಯಾದಿಂದ (Russia) ಕಚ್ಚಾ ತೈಲವನ್ನು (Crude Oil) ಅಗ್ಗದ ಬೆಲೆಯಲ್ಲಿ ಪಡೆಯಲು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಭಾರತದಂತೆ ನಮಗೂ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಬೇಕಿತ್ತು. ದುರದೃಷ್ಟವಶಾತ್ ಅವಿಶ್ವಾಸ ನಿರ್ಣಯದಿಂದಾಗಿ ನನ್ನ ಸರ್ಕಾರ ಪತನವಾಯಿತು. ಇದರಿಂದ ರಷ್ಯಾದಿಂದ ಕಚ್ಚಾ ತೈಲ ಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ವೀಡಿಯೋ ಸಂದೇಶವೊಂದರಲ್ಲಿ ರಾಷ್ಟ್ರವನ್ನುದ್ದೇಶಿಸಿ ಈ ವಿಚಾರವನ್ನು ತಿಳಿಸಿದ್ದಾರೆ.

    ಕಳೆದ 23 ವರ್ಷಗಳಲ್ಲಿಯೇ ರಷ್ಯಾಗೆ ಭೇಟಿ ನೀಡಿದ್ದ ಮೊದಲ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಆಗಿದ್ದರು. ಕಳೆದ ವರ್ಷ ಉಕ್ರೇನ್‌ನೊಂದಿಗೆ ಯುದ್ಧ ಸಾರುವ ದಿನವೂ ಖಾನ್ ರಷ್ಯಾದಲ್ಲಿಯೇ ಇದ್ದರು. ಹಾಗೂ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದರು. ಆದರೂ ಅವರು ತಮ್ಮ ದೇಶದಲ್ಲಿ ನಗದು ಕೊರತೆ ಇರುವ ಸಮಯದಲ್ಲಿ ಪರಿಹಾರ ಪಡೆದುಕೊಳ್ಳುವಂತಹ ಯಾವುದೇ ಒಪ್ಪಂದಗಳನ್ನು ಮಾಡಲಾಗಲಿಲ್ಲ. ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ಪಾಕಿಸ್ತಾನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ರಷ್ಯಾ ಉಕ್ರೇನ್‌ನೊಂದಿಗೆ ಯುದ್ಧ ನಡೆಸುತ್ತಿದ್ದರೂ ಭಾರತ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಪಡೆಯುತ್ತಿದೆ. ಆದರೆ ಪಾಕಿಸ್ತಾನಕ್ಕೆ ಈ ಅದೃಷ್ಟ ಇಲ್ಲ ಎಂದು ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.

    ಇಮ್ರಾನ್ ಖಾನ್ ಭಾರತದ ನಿರ್ಧಾರಗಳನ್ನು ಶ್ಲಾಘಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2022ರ ಮೇ ನಲ್ಲಿ ಅಮೆರಿಕದ ಒತ್ತಡ ಹಾಗೂ ಕ್ವಾಡ್‌ನ ಭಾಗವಾಗಿದ್ದರೂ ಭಾರತ ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ತೈಲವನ್ನು ಖರೀದಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ಮೆಚ್ಚಿದ್ದರು. ಇದನ್ನೂ ಓದಿ: ಧಾರ್ಮಿಕ ಕಾರ್ಯಕ್ರಮದ ವೇಳೆ ಧರೆಗುರುಳಿದ ಮರ 7 ಸಾವು, ಐವರಿಗೆ ಗಾಯ

  • ಕಚ್ಚಾ ತೈಲ ಮೇಲಿನ ವಿಂಡ್‌ಫಾಲ್‌ ತೆರಿಗೆ ಕಡಿತಗೊಳಿಸಿದ ಭಾರತ

    ಕಚ್ಚಾ ತೈಲ ಮೇಲಿನ ವಿಂಡ್‌ಫಾಲ್‌ ತೆರಿಗೆ ಕಡಿತಗೊಳಿಸಿದ ಭಾರತ

    ನವದೆಹಲಿ: ಕೇಂದ್ರ ಸರ್ಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಚ್ಚಾ ತೈಲದ (Crude Oil) ಮೇಲಿನ ಎಲ್ಲಾ ವಿಂಡ್‌ಫಾಲ್‌ ತೆರಿಗೆ (Windfall Tax) ಕಡಿತಗೊಳಿಸಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

    ತೈಲ ಉತ್ಪಾದಿಸುವ ಒಪೆಕ್‌ (OPEC) ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿ ತೈಲದ ಬೆಲೆ ಏರಿಸಿದ ಪರಿಣಾಮವಾಗಿ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಪ್ರತಿ ಟನ್‌ಗೆ 3,500 ರೂ. ವಿಂಡ್‌ಫಾಲ್‌ ತೆರಿಗೆ ಇತ್ತು. ಇದನ್ನೂ ಓದಿ: ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಒಪೆಕ್‌ ರಾಷ್ಟ್ರಗಳು 1.6 ದಶಲಕ್ಷ ಬ್ಯಾರೆಲ್‌ ಪರ್‌ ಡೇ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದವು.

    ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿ ಮಾಡಿದ ಬಳಿಕ ದೇಶೀಯ ತೈಲ ಕಂಪನಿಗಳು ಸಂಸ್ಕರಿಸಿ ವಿದೇಶಗಳಿಗೆ ಮಾರುತ್ತಿದ್ದವು. ಇದನ್ನು ಮನಗಂಡ ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತು ಮಾಡುವ ತೈಲಗಳಿಗೆ ವಿಂಡ್‌ಫಾಲ್‌ ತೆರಿಗೆ ಹೆಚ್ಚಿಸಿತ್ತು. ಇದನ್ನೂ ಓದಿ: ತಾಯಿಯ ಅಮೆಜಾನ್ ಖಾತೆಯಲ್ಲಿ ಬರೋಬ್ಬರಿ 2.47 ಲಕ್ಷದ ಸಾಮಾಗ್ರಿ ಆರ್ಡರ್ ಮಾಡಿದ ಬಾಲಕಿ

    ಕೇಂದ್ರವು ಕಳೆದ ವರ್ಷ ಜುಲೈನಲ್ಲಿ ಕಚ್ಚಾ ತೈಲದ ಮೇಲೆ ಪ್ರತಿ ಟನ್‌ಗೆ 23,250 ರೂ. ಸೆಸ್ ವಿಧಿಸಿತ್ತು. ಅಂದಿನಿಂದ ಸರ್ಕಾರವು ಕಾಲಕಾಲಕ್ಕೆ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಕಡಿಮೆ ಮಾಡುತ್ತಿದೆ.

  • ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಲಂಡನ್‌/ನವದೆಹಲಿ: ಸೌದಿ ಅರೇಬಿಯಾ ಸೇರಿದಂತೆ ತೈಲ ಉತ್ಪಾದನೆ ಮಾಡುವ ಒಪೆಕ್‌(OPEC) ದೇಶಗಳು ಕಚ್ಚಾ ತೈಲ (Crude Oil) ಉತ್ಪಾದನೆಯನ್ನು ಕಡಿಮೆ ಮಾಡುವ ಶಾಕಿಂಗ್‌ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ದರ ಭಾರೀ ಏರಿಕೆಯಾಗಿದೆ.

    ಸೋಮವಾರ ಒಂದು ಬ್ಯಾರೆಲ್‌ ಕಚ್ಚಾ ಬ್ರೆಂಟ್‌ ಕಚ್ಚಾ ತೈಲ ದರ ಶೇ.5 ರಷ್ಟು ಏರಿಕೆಯಾಗಿದ್ದು ಈಗ 84 ಡಾಲರ್‌ಗೆ (ಅಂದಾಜು 6,900 ರೂ.) ಏರಿಕೆಯಾಗಿದೆ. 2023ರ ಕೊನೆಗೆ ಇದು 90-95 ಡಾಲರ್‌ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಭಾನುವಾರ ಒಪೆಕ್‌ ದೇಶಗಳು 1.16 ದಶಲಕ್ಷ ಬ್ಯಾರೆಲ್‌ ಪರ್‌ ಡೇ(bpd) ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವು ಶಾಕಿಂಗ್‌ ನಿರ್ಧಾರವನ್ನು ಪ್ರಕಟಿಸಿದ್ದವು.

    ಕೋವಿಡ್‌ ಆರಂಭದಲ್ಲಿ ಭಾರೀ ಇಳಿಕೆ ಕಂಡಿದ್ದ ಕಚ್ಚಾ ತೈಲದ ಬೆಲೆಗಳು ರಷ್ಯಾ-ಉಕ್ರೇನ್‌ (Russia-Ukraine) ಯುದ್ಧ ಆರಂಭದಲ್ಲಿ ಸಮಯದಲ್ಲಿ  ಪ್ರತಿ ಬ್ಯಾರೆಲ್‌ ದರ 130 ಡಾಲರ್‌ಗೆ ಏರಿಕೆಯಾಗಿತ್ತು. ನಂತರ ಸ್ವಲ್ಪ ಇಳಿಕೆಯಾಗಿತ್ತು. ಕಳೆದ ತಿಂಗಳು ಪ್ರತಿ ಬ್ಯಾರೆಲ್‌ ಕಚ್ಚಾ ತೈದ ದರ 70 ಡಾಲರ್‌ಗೆ ಇಳಿಕೆಯಾದ ಬೆನ್ನಲ್ಲೇ ಮಾರುಕಟ್ಟೆಯ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ.  ಇದನ್ನೂ ಓದಿ: ಕ್ರಿಕೆಟ್‌ ಪಂದ್ಯದಲ್ಲಿ ʼನೋಬಾಲ್‌ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ

    ಕಡಿತ ಯಾವಾಗದಿಂದ?
    ಮೇ ತಿಂಗಳಿನಿಂದ ಆರಂಭವಾಗಿ ಈ ವರ್ಷದ ಕೊನೆಯವರೆಗೂ ಕಡಿತ ಮುಂದುವರಿಯಲಿದೆ. ಸೌದಿ ಅರೇಬಿಯಾ 5 ಲಕ್ಷ ಬಿಪಿಡಿ, ಇರಾಕ್‌ 2 ಲಕ್ಷ ಬಿಪಿಡಿ ಕಚ್ಚಾ ತೈಲ ಉತ್ಪಾದನೆ ಕಡಿತ ಮಾಡಲಿದೆ. ರಷ್ಯಾ ಈಗಾಗಲೇ 5 ಲಕ್ಷ ಬಿಪಿಡಿ ತೈಲ ಉತ್ಪಾದನೆ ಕಡಿತ ಮಾಡುವುದಾಗಿ ತಿಳಿಸಿದೆ.

    ಭಾರತದ ಮೇಲೆ ಪರಿಣಾಮ ಏನು?
    ಭಾರತ ಶೇ.85 ರಷ್ಟು ತೈಲವನ್ನು ಆಮದು ಮಾಡುತ್ತಿದೆ. ಹಣದುಬ್ಬರವನ್ನು (Inflation) ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಭಾರತದ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಇತ್ಯಾದಿಗಳ ಬೆಲೆಯನ್ನು ಏರಿಕೆ ಮಾಡದ ಪರಿಣಾಮ ತೈಲ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿದೆ. ದರವನ್ನು ಪರಿಷ್ಕರಣೆ ಮಾಡದೇ ಇದ್ದರೆ ಕಂಪನಿಗಳ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ತೈಲ ದರ ಏರಿಕೆ ಮಾಡಿದರೆ ಇತ್ತ ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದೆ.  ಇದನ್ನೂ ಓದಿ: ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ

  • ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

    ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

    ನವದೆಹಲಿ: ಚೀನಾದಿಂದ (China) ಭಾರೀ ಬೇಡಿಕೆಯಿದ್ದರೂ, ಭಾರತಕ್ಕೆ (India) ತೈಲವನ್ನು ಮಾರಾಟ ಮಾಡಲು ರಷ್ಯಾ (Russia) ಒಲವು ತೋರುತ್ತಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ತೈಲವನ್ನು (Crude Oil) ಭಾರತಕ್ಕೆ ಮಾರಾಟ ಮಾಡುತ್ತಿದೆ.

    ಭಾರತವು ವರ್ಷದ ಹಿಂದೆ ರಷ್ಯಾದ ತೈಲವನ್ನು ಖರೀದಿಸಿರಲಿಲ್ಲ. ಆದರೆ ಯುಎಸ್ ಮತ್ತು ಯುರೋಪಿಯನ್ ಒಕ್ಕೂಟವು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ ಭಾರತಕ್ಕೆ ನಿರ್ಣಾಯಕ ಮಾರುಕಟ್ಟೆಯಾಗಿದೆ. ಫೆಬ್ರವರಿಯಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ ಸುಮಾರು 18 ಲಕ್ಷ ಬ್ಯಾರಲ್‌ ತೈಲವನ್ನು ಆಮದು ಮಾಡಿಕೊಂಡಿದೆ. ಇದನ್ನೂ ಓದಿ: ಬದಲಾಯಿತು ಲುಕ್ – ತಲೆ ಕೂದಲು, ಗಡ್ಡ ಟ್ರೀಮ್ ಮಾಡಿದ ರಾಹುಲ್ ಗಾಂಧಿ

    ಅಂತೆಯೇ ಚೀನಾ ಕೂಡ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಕೋವಿಡ್ ಶೂನ್ಯ ನೀತಿಗಳನ್ನು ಕೈಬಿಟ್ಟ ಚೀನಾ ಈಗ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸಬಹುದು. ಆದರೂ ರಷ್ಯಾಗೆ ಭಾರತೀಯ ಮಾರುಕಟ್ಟೆ ಮೇಲೆ ಹೆಚ್ಚಿನ ಒಲವು ಇದೆ.

    ಕಳೆದ ತಿಂಗಳು, ಚೀನಾಕ್ಕೆ ರಷ್ಯಾ ದಿನಕ್ಕೆ 23 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರಫ್ತು ಮಾಡಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧಗಳು ತೆರವಾಗಿದೆ. ಹೀಗಾಗಿ ಏಷ್ಯಾದ ದೈತ್ಯ (ಚೀನಾ) ತೈಲ ಬೇಡಿಕೆಯು ಈ ವರ್ಷದಲ್ಲಿ ದಿನಕ್ಕೆ ಸುಮಾರು 9,00,000 ಬ್ಯಾರೆಲ್‌ಗಳಷ್ಟು ಹೆಚ್ಚಾಗಬಹುದು. ಇದನ್ನೂ ಓದಿ: ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

    ಭಾರತದ ಮಾರುಕಟ್ಟೆ ಮೇಲೆ ರಷ್ಯಾಗೆ ಒಲವೇಕೆ?
    ಭಾರತಕ್ಕೆ ತೈಲ ರಫ್ತು ರಷ್ಯಾಗೆ ಹೆಚ್ಚು ಲಾಭದಾಯಕವಾಗಿದೆ. ರಷ್ಯಾದ ಪಶ್ಚಿಮ ಬಂದರುಗಳಿಂದ ಭಾರತವನ್ನು ತಲುಪಲು ಟ್ಯಾಂಕರ್ ಸರಾಸರಿ 35 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಚೀನಾಕ್ಕೆ 40 ರಿಂದ 45 ದಿನಗಳು ಬೇಕಾಗುತ್ತದೆ ಹೀಗಾಗಿ ಚೀನಾದ ಬೇಡಿಕೆಯಲ್ಲಿ ಹೆಚ್ಚಳ ಕಂಡರೂ ಭಾರತಕ್ಕೆ ರಷ್ಯಾ ಎಷ್ಟು ಸಾಧ್ಯವೋ ಅಷ್ಟು ತೈಲ ಮಾರಾಟವನ್ನು ಮುಂದುವರಿಸಲಿದೆ.

    ಚೀನಾ ತಮ್ಮದೇ ಆದ ಶಿಪ್ಪಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಚೀನಾ ರಿಫೈನರಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಂಡು, ಸಂಸ್ಕರಿಸಿ ಮಾರಾಟ ಮಾಡುತ್ತದೆ. ಇದರಿಂದ ರಷ್ಯಾ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ. ಆದರೆ ಭಾರತದಲ್ಲಿ ತೈಲ ಸಂಸ್ಕರಣಾ ಕಂಪನಿಗಳು ಖಾಸಗಿಯದ್ದಾಗಿವೆ. ರಷ್ಯಾ ಹೆಚ್ಚಿನ ಆದಾಯ ಗಳಿಸಲು ಭಾರತದ ಮಾರುಕಟ್ಟೆ ಸಹಕಾರಿಯಾಗಿದೆ.

  • ಫಸ್ಟ್‌ ಟೈಂ ರಷ್ಯಾದಿಂದ 10 ಲಕ್ಷ ಬಿಪಿಡಿ ತೈಲ ಖರೀದಿಸಿದ ಭಾರತ

    ಫಸ್ಟ್‌ ಟೈಂ ರಷ್ಯಾದಿಂದ 10 ಲಕ್ಷ ಬಿಪಿಡಿ ತೈಲ ಖರೀದಿಸಿದ ಭಾರತ

    ನವದೆಹಲಿ: ರಷ್ಯಾ (Russia) ಕಚ್ಚಾ ತೈಲ (Crude oil) ಆಮದು ಮತ್ತಷ್ಟು ಹೆಚ್ಚಾಗಿದ್ದು ಮೊದಲ ಬಾರಿಗೆ ಭಾರತ (India) ತಿಂಗಳೊಂದರಲ್ಲೇ ಪ್ರತಿ ದಿನ 10 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಆಮದು ಮಾಡಿದೆ.

    ಎನರ್ಜಿ ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾದ ಮಾಹಿತಿಯ ಪ್ರಕಾರ ಡಿಸೆಂಬರ್‌ನಲ್ಲಿ 1.19 ದಶಲಕ್ಷ ಬಿಪಿಡಿ(Barrels Per Day) ತೈಲವನ್ನು ಆಮದು ಮಾಡಿದೆ. ಈ ಮೂಲಕ ಸತತ ಮೂರನೇ ಬಾರಿ ರಷ್ಯಾ ಭಾರತದ ಅತಿ ದೊಡ್ಡ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ.

    2022ರ ಮಾರ್ಚ್‌ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಆಮದು ಮಾಡಿಕೊಂಡ ಒಟ್ಟು ತೈಲ ಪೈಕಿ ರಷ್ಯಾ ಪಾಲು ಶೇ. 0.2 ರಷ್ಟಿತ್ತು. ಅಕ್ಟೋಬರ್ 2022 ರಲ್ಲಿ ಮೊದಲ ಬಾರಿಗೆ ಇರಾಕ್ ಮತ್ತು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ರಷ್ಯಾ ಏರಿತ್ತು.  ಇದನ್ನೂ ಓದಿ: ಈ ತಿಂಗಳಾಂತ್ಯಕ್ಕೆ ಮತ್ತೆ ಅಮಿತ್ ಶಾ ಎಂಟ್ರಿ – ಸಂಕ್ರಾಂತಿ ಬಳಿಕದ ಕ್ರಾಂತಿಗೆ ವೇದಿಕೆ ಸಿದ್ಧವಾಗಿದ್ಯಾ?

    ನವೆಂಬರ್‌ನಲ್ಲಿ 9,09,403, ಅಕ್ಟೋಬರ್‌ನಲ್ಲಿ 9,35,556 ಬಿಪಿಡಿ ತೈಲವನ್ನು ಭಾರತ ರಷ್ಯಾದಿಂದ ಆಮದು ಮಾಡಿದೆ. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆಮದು ಮಾಡುವ ದೇಶವಾಗಿದ್ದು, ಶೇ.85 ರಷ್ಟು ತೈಲವನ್ನು ಆಮದು ಮಾಡುತ್ತಿದೆ.


    ವೋರ್ಟೆಕ್ಸಾ ಪ್ರಕಾರ ಡಿಸೆಂಬರ್‌ನಲ್ಲಿ ಇರಾಕ್‌ನಿಂದ 803,228 ಬಿಪಿಡಿ ಮತ್ತು ಸೌದಿ ಅರೇಬಿಯಾದಿಂದ 718,357 ಬಿಪಿಡಿ ತೈಲವನ್ನು ಭಾರತ ಆಮದು ಮಾಡಿಕೊಂಡಿದೆ.

    ರಷ್ಯಾ-ಉಕ್ರೇನ್ ಸಂಘರ್ಷದ ಮೊದಲು, ಭಾರತ ಶೇ.60 ರಷ್ಟು ತೈಲವನ್ನು ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡುತ್ತಿತ್ತು. ಉತ್ತರ ಅಮೆರಿಕದಿಂದ ಶೇ.14, ಪಶ್ಚಿಮ ಆಫ್ರಿಕಾದಿಂದ ಶೇ.12, ಲ್ಯಾಟಿನ್ ಅಮೆರಿಕದಿಂದ ಶೇ.5, ರಷ್ಯಾದಿಂದ ಶೇ.2 ರಷ್ಟು ತೈಲವನ್ನು ಖರೀದಿ ಮಾಡುತ್ತಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಷ್ಯಾದಿಂದ ತೈಲ ಖರೀದಿ – ಭಾರತಕ್ಕೆ ಎಷ್ಟು ಲಾಭ?

    ರಷ್ಯಾದಿಂದ ತೈಲ ಖರೀದಿ – ಭಾರತಕ್ಕೆ ಎಷ್ಟು ಲಾಭ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಿ7 ದೇಶಗಳು ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರದಲ್ಲಿ ರಷ್ಯಾದಿಂದ ಭಾರತ ತೈಲ ಖರೀದಿ

    ಜಿ7 ದೇಶಗಳು ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರದಲ್ಲಿ ರಷ್ಯಾದಿಂದ ಭಾರತ ತೈಲ ಖರೀದಿ

    ನವದೆಹಲಿ: ಜಿ7(G7) ದೇಶಗಳು ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಭಾರತ(India) ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿದೆ ಎಂದು ವರದಿಯಾಗಿದೆ.

    ಪ್ರತಿ ಬ್ಯಾರೆಲ್‌ಗೆ ರಷ್ಯಾದ ಯುರಲ್ಸ್‌ ಕಚ್ಚಾ ತೈಲಕ್ಕೆ (Russia Urals Crude) ಜಿ7 ದೇಶಗಳು 60 ಡಾಲರ್‌(4,900 ರೂ.) ನಿಗದಿ ಮಾಡಿವೆ. ಆದರೆ ಭಾರತ ಪ್ರತಿ ಬ್ಯಾರೆಲ್‌ ಕಚ್ಚಾ ತೈಲವನ್ನು 49 ಡಾಲರ್‌ಗೆ (4,000 ರೂ.) ಖರೀದಿಸುತ್ತಿದೆ.

    ಪ್ರತಿ ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 79 ಡಾಲರ್‌ನಲ್ಲಿ ಮಾರಾಟವಾಗುತ್ತಿದೆ. ಜಿ7 ದೇಶಗಳ ನಿರ್ಧಾರವನ್ನು ಯಾರು ಬೆಂಬಲಿಸುತ್ತಾರೋ ಅವರಿಗೆ ನಾವು ತೈಲವನ್ನು ರಫ್ತು ಮಾಡುವುದಿಲ್ಲ ಎಂದು ರಷ್ಯಾ ಈಗಾಗಲೇ ತನ್ನ ನಿರ್ಧಾರ ತಿಳಿಸಿದೆ.

    ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕ, ಯುರೋಪಿಯನ್‌ ಯೂನಿಯನ್‌ ಜೊತೆ ಆಸ್ಟ್ರೇಲಿಯಾ ಒಂದು ಬ್ಯಾರೆಲ್‌ ರಷ್ಯಾದ ಕಚ್ಚಾ ತೈಲಕ್ಕೆ 60 ಡಾಲರ್‌(49 ಸಾವಿರ ರೂ.) ದರವನ್ನು ನಿಗದಿ ಮಾಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ

    ಕಳೆದ ವಾರ ಜಿ7 ದೇಶಗಳು ಮತ್ತು ಮಿತ್ರರಾಷ್ಟ್ರಗಳು ವಿಧಿಸಿದ ತೈಲದ ಮೇಲಿನ ಬೆಲೆ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ರಷ್ಯಾ ಸ್ವಾಗತಿಸಿತ್ತು.

    ತೈಲ ಮಾರಾಟದಿಂದ ಸಂಗ್ರಹವಾದ ಆದಾಯವನ್ನು ಉಕ್ರೇನ್‌ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿದೆ ಎಂದು ಆರೋಪಿಸಿ ಜಿ7 ದೇಶಗಳು ಈ ನಿರ್ಧಾರವನ್ನು ಕೈಗೊಂಡಿದ್ದು ಡಿ.5ರಿಂದ ಜಾರಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಕಚ್ಚಾ ತೈಲಕ್ಕೆ ಜಿ7 ದೇಶಗಳಿಂದ ದರ ಮಿತಿ – ಭಾರತದ ನಿರ್ಧಾರವನ್ನು ಸ್ವಾಗತಿಸಿದ ರಷ್ಯಾ

    ಕಚ್ಚಾ ತೈಲಕ್ಕೆ ಜಿ7 ದೇಶಗಳಿಂದ ದರ ಮಿತಿ – ಭಾರತದ ನಿರ್ಧಾರವನ್ನು ಸ್ವಾಗತಿಸಿದ ರಷ್ಯಾ

    ಮಾಸ್ಕೋ: ಜಿ7 ಮತ್ತು ಮಿತ್ರ ರಾಷ್ಟ್ರಗಳು ರಷ್ಯಾ(Russia) ಕಚ್ಚಾ ತೈಲ(Crude Oil) ಮೇಲೆ ವಿಧಿಸಿರುವ ದರ ಮಿತಿಯನ್ನು ಬೆಂಬಲಿಸದಿರುವ ಭಾರತದ(India ನಿರ್ಧಾರವನ್ನು ರಷ್ಯಾ ಸ್ವಾಗತಿಸಿದೆ.

    ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಅವರು ರಷ್ಯಾದಲ್ಲಿ ಭಾರತದ ರಾಯಭಾರಿ ಪವನ್ ಕಪೂರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

    ಜಿ7 ದೇಶಗಳು ಮತ್ತು ಮಿತ್ರರಾಷ್ಟ್ರಗಳು ವಿಧಿಸಿದ ರಷ್ಯಾದ ತೈಲದ ಮೇಲಿನ ಬೆಲೆ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ಉಪಪ್ರಧಾನಿ ಸ್ವಾಗತಿಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಜೆಇಎಂ ಭಯೋತ್ಪಾದಕನ ಅಕ್ರಮ ಮನೆ ನೆಲಸಮ

    ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕ, ಯುರೋಪಿಯನ್‌ ಯೂನಿಯನ್‌ ಜೊತೆ ಆಸ್ಟ್ರೇಲಿಯಾ ಒಂದು ಬ್ಯಾರೆಲ್‌ ರಷ್ಯಾದ ಕಚ್ಚಾ ತೈಲಕ್ಕೆ 60 ಡಾಲರ್‌(49 ಸಾವಿರ ರೂ.) ದರವನ್ನು ನಿಗದಿ ಮಾಡಿದೆ.

    ತೈಲ ಮಾರಾಟದಿಂದ ಸಂಗ್ರಹವಾದ ಆದಾಯವನ್ನು ಉಕ್ರೇನ್‌ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿದೆ ಎಂದು ಆರೋಪಿಸಿ ಜಿ7 ದೇಶಗಳು ಈ ನಿರ್ಧಾರವನ್ನು ಕೈಗೊಂಡಿದ್ದು ಡಿ.5ರಿಂದ ಜಾರಿಗೆ ಬಂದಿದೆ.

    ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್‌ದೀಪ್‌ ಸಿಂಗ್‌ ಪುರಿ, ಜಿ7 ರಾಷ್ಟ್ರಗಳ ನಿರ್ಧಾರ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಈ ಹಿಂದೆ ತಿಳಿಸಿದ್ದರು.

    ನವೆಂಬರ್‌ನಲ್ಲಿಯೂ ರಷ್ಯಾ ಭಾರತದ ಪ್ರಮುಖ ಕಚ್ಚಾ ತೈಲ ಪೂರೈಕೆ ದೇಶವಾಗಿ ಗುರುತಿಸಿಕೊಂಡಿದೆ. ಅಕ್ಟೋಬರ್‌ನಲ್ಲಿ ದಿನಕ್ಕೆ ಸರಾಸರಿ 9,02,740 ಬ್ಯಾರಲ್‌ನಂತೆ ಕಚ್ಚಾ ತೈಲ ಪೂರೈಕೆ ಮಾಡಿದ್ದ ರಷ್ಯಾ ಇದೀಗ ನವೆಂಬರ್‌ನಲ್ಲಿ ದಿನಕ್ಕೆ ಸರಾಸರಿ 9,09,400 ಬ್ಯಾರಲ್‌ನಂತೆ ಕಚ್ಚಾ ತೈಲ ಪೂರೈಕೆ ಮಾಡಿದೆ. ಈ ಮೂಲಕ ಸತತ ಎರಡನೇ ತಿಂಗಳೂ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿ ಮುಂದುವರಿದಿದೆ.

    ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(Jaishankar) ಅವರು, ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸಮರ್ಥಿಸಿಕೊಂಡು ಇದೊಂದು ʼಬೆಸ್ಟ್‌ ಡೀಲ್‌ʼ ಎಂದು ಬಣ್ಣಿಸಿದ್ದರು. ಬೆಲೆಗಳು ದುಬಾರಿಯಾಗಿರುವ ಸಮಯದಲ್ಲಿ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಲು ಪ್ರಯತ್ನ ಮಾಡುತ್ತದೆ. ಈಗ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಜೈಶಂಕರ್ ಸಮರ್ಥಿಸಿಕೊಂಡರು.

    Live Tv
    [brid partner=56869869 player=32851 video=960834 autoplay=true]