Tag: Crude Oil

  • ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ವಾಷಿಂಗ್ಟನ್‌: ರಷ್ಯಾದಿಂದ (Russia) ಭಾರತ (India) ತೈಲ ಖರೀದಿ ನಿಲ್ಲಿಸದೇ ಇದ್ದರೆ ಮುಂದೆ ಭಾರಿ ಸುಂಕಗಳನ್ನು ಎದುರಿಸಬೇಕಾಗುತ್ತದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದಾರೆ.

    ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾನು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ (Narendra Modi) ನನಗೆ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಭಾರೀ ಸುಂಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ:  ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಗೆ

    ಟ್ರಂಪ್‌ ಮತ್ತು ಪ್ರಧಾನಿ ಮೋದಿ ನಡುವಿನ ಯಾವುದೇ ಇತ್ತೀಚಿನ ಸಂಭಾಷಣೆಯ ಬಗ್ಗೆ ತಿಳಿದಿಲ್ಲ ಎಂಬ ಭಾರತ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಕೇಳಿದ್ದಕ್ಕೆ, ಅವರು ಹಾಗೆ ಹೇಳಲು ಬಯಸಿದರೆ ಮುಂದೆ ಅವರು ಬೃಹತ್ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸಬೇಕಾಗುತ್ತದೆ ಎಂದರು.

    ಡೊನಾಲ್ಡ್‌ ಟ್ರಂಪ್‌ ಆರಂಭದಲ್ಲಿ ಭಾರತದ ಮೇಲೆ 25% ಸುಂಕವನ್ನು ಹೇರಿದ್ದರು. ನಂತರ ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ಹಾಕಿದ್ದಾರೆ. ಇದರ ಪರಿಣಾಮ ಈಗ ಭಾರತದಿಂದ ಅಮೆರಿಕ್ಕೆ ಆಮದಾಗುವ ವಸ್ತುಗಳ ಮೇಲೆ 50% ಸುಂಕ ಹೇರಲಾಗಿದೆ.

    ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕೆ ಚೀನಾ ಮೇಲೆ 100% ಸುಂಕವನ್ನು ಟ್ರಂಪ್‌ ಘೋಷಿಸಿದ್ದಾರೆ. ಹೊಸ ಸುಂಕ ನೀತಿಗಳು ನ.1 ರಿಂದ ಜಾರಿಗೆ ಬರಲಿದೆ.

  • ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    * ಮೋದಿ-ಟ್ರಂಪ್ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಪ್ರಧಾನಿ ಮೋದಿ (PM Modi) ಭರವಸೆ ಕೊಟ್ಟಿದ್ದಾರೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.

    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಮೋದಿ ಭರವಸೆ ಕೊಟ್ಟಿದ್ದಾರೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಮೋದಿ-ಟ್ರಂಪ್ ಮಧ್ಯೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಆಮದು ನೀತಿಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ. ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಸ್ಥಿರ ಆದ್ಯತೆಯಾಗಿದೆ ಎಂದಿದ್ದಾರೆ.

    ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪ್ರತಿಕ್ರಿಯಿಸಿ, ಮಾಸ್ಕೋ ಜೊತೆಗಿನ ಭಾರತದ ಇಂಧನ ಸಹಕಾರವು ಅದರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    ಈ ಮಧ್ಯೆ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಟ್ರಂಪ್‌ಗೆ ಭರವಸೆ ನೀಡಿದ್ದಕ್ಕೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು, ಟ್ರಂಪ್ ಹೇಳಿಕೆಗಳಿಗೆ ಮೋದಿ ಏಕೆ ಖಂಡನೆ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

  • ಮುಂದುವರಿದ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

    ಮುಂದುವರಿದ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

    ನವದೆಹಲಿ: ಟ್ಯಾರಿಫ್‌ (Tariff) ವಿಚಾರವಾಗಿ ಅಮೆರಿಕದ (US) ಮುನಿಸಿನ ನಡುವೆ ಭಾರತಕ್ಕೆ (India) ಹೆಚ್ಚಿನ ರಿಯಾಯಿತಿಯಲ್ಲಿ ತೈಲ ಪೂರೈಸಲು ರಷ್ಯಾ ಮುಂದಾಗಿದೆ.

    ಅಮೆರಿಕದ ಸುಂಕದ ಹೊರೆಯನ್ನು ಭಾರತ ಇನ್ನೂ ಎದುರಿಸುತ್ತಿದೆ. ಇದನ್ನು ಮನಗಂಡಿರುವ ರಷ್ಯಾದ (Russia) ತೈಲ ಬೆಲೆ ಭಾರತಕ್ಕೆ ಪ್ರತಿ ಬ್ಯಾರಲ್‌ಗೆ 3 ರಿಂದ 4 ಡಾಲರ್‌ ನಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್‌ನಲ್ಲಿ ಲೋಡ್ ಆಗುವ ಸರಕುಗಳಿಗೆ ರಷ್ಯಾದ ಉರಲ್ ದರ್ಜೆಯ ಬೆಲೆಯನ್ನು ಕಡಿಮೆಗೆ ನೀಡಲಾಗುತ್ತಿದೆ. ಇದನ್ನೂ ಓದಿ: ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    ರಷ್ಯಾದ ತೈಲವನ್ನು ಖರೀದಿಸಿ ಉಕ್ರೇನ್ ಯುದ್ಧಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ಶಿಕ್ಷಿಸಲು ಟ್ರಂಪ್ ಆಡಳಿತ ಕಳೆದ ವಾರ ಭಾರತದ ಮೇಲಿನ ಸುಂಕವನ್ನು ಶೇ.50 ಕ್ಕೆ ದ್ವಿಗುಣಗೊಳಿಸಿತು. 2022 ರಲ್ಲಿ, ರಷ್ಯಾ-ಉಕ್ರೇನ್ ಯುದ್ಧದ ಆರಂಭದಲ್ಲಿ ಭಾರತವು ರಷ್ಯಾದ ಕಚ್ಚಾ ತೈಲದ ಪ್ರಮುಖ ಆಮದುದಾರನಾಗಿತ್ತು. ಇದೀಗ ಅಮೆರಿಕದಿಂದ ಪದೇ ಪದೇ ಟೀಕೆಗೊಳಗಾದ ನಂತರ, ಭಾರತವು ಸಂಬಂಧದಲ್ಲಿ ರಷ್ಯಾ ಮತ್ತು ಚೀನಾಗೆ ಮತ್ತಷ್ಟು ಹತ್ತಿರವಾಗಿದೆ.

    ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಮತ್ತು ಭಾರತ ವಿಶೇಷ ಸಂಬಂಧವನ್ನು ಹಂಚಿಕೊಳ್ಳುತ್ತವೆ ಎಂದು ಹೇಳಿದ್ದರು. ಅದೇ ರೀತಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸಹ ಭೇಟಿಯಾದರು. ಎರಡೂ ದೇಶಗಳು ಪ್ರತಿಸ್ಪರ್ಧಿಗಳಲ್ಲ, ಪಾಲುದಾರರಾಗಲು ಪ್ರತಿಜ್ಞೆ ಮಾಡಿವೆ. ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೊದಲು ಭಾರತವು ರಷ್ಯಾದ ತೈಲವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿತ್ತು. ಈಗ ಏನಾಯಿತು? ರಷ್ಯಾದ ಸಂಸ್ಕರಣಾಗಾರರು ರಿಯಾಯಿತಿಗಳನ್ನು ನೀಡುತ್ತಾರೆ. ಭಾರತ ಅದನ್ನು ಸಂಸ್ಕರಿಸುತ್ತದೆ. ನಂತರ ಯುರೋಪ್, ಆಫ್ರಿಕಾ ಮತ್ತು ಏಷ್ಯಾಕ್ಕೆ ಪ್ರೀಮಿಯಂನಲ್ಲಿ ಮಾರಾಟ ಮಾಡುತ್ತದೆ. ಇದು ರಷ್ಯಾದ ಯುದ್ಧ ತಂತ್ರವನ್ನು ಉತ್ತೇಜಿಸಿದಂತಿದೆ ಎಂದು ಶ್ವೇತಭವನದ ಸಲಹೆಗಾರ ಪೀಟರ್ ನವರೊ ಭಾರತದ ವಿರುದ್ಧ ಕಟುವಾದ ಟೀಕೆಯನ್ನು ಮಾಡಿದ್ದರು.

  • ಭಾರತಕ್ಕೆ 5% ರಿಯಾಯಿತಿಯಲ್ಲಿ ತೈಲ ಪೂರೈಕೆ: ರಷ್ಯಾ

    ಭಾರತಕ್ಕೆ 5% ರಿಯಾಯಿತಿಯಲ್ಲಿ ತೈಲ ಪೂರೈಕೆ: ರಷ್ಯಾ

    ಮಾಸ್ಕೋ: ಟ್ರಂಪ್ ಸುಂಕದ ಉದ್ವಿಗ್ನತೆ ನಡುವೆ ಭಾರತಕ್ಕೆ (India) ತೈಲದ ಮೇಲೆ 5% ರಿಯಾಯಿತಿ ನೀಡಲಾಗುವುದು ಎಂದು ರಷ್ಯಾ (Russia) ಘೋಷಿಸಿದೆ.

    ಭಾರತಕ್ಕೆ ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ, ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಖರೀದಿಯ ಮೇಲೆ ಮಾತುಕತೆಗೆ ಒಳಪಟ್ಟು ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಮೇಲೆ ಒತ್ತಡ ಹೇರಲು ಭಾರತದ ಮೇಲೆ ಸುಂಕ – ವೈಟ್‌ ಹೌಸ್‌

    ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಭಾರತವು ಸರಿಸುಮಾರು ಅದೇ ಮಟ್ಟದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಗ್ರಿವಾ ತಿಳಿಸಿದ್ದಾರೆ. ರಿಯಾಯಿತಿಗಳಿಗೆ ಸಂಬಂಧಿಸಿದಂತೆ, ಇದು ವಾಣಿಜ್ಯ ರಹಸ್ಯವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಉದ್ಯಮಿಗಳ ನಡುವಿನ ಸಂಭಾಷಣೆ ಎಂದು ಹೇಳಿದ್ದಾರೆ.

    ರಷ್ಯಾದ ಉಪ ಮುಖ್ಯಸ್ಥ ಮಿಷನ್ ರೋಮನ್ ಬಾಬುಷ್ಕಿನ್ ಮಾತನಾಡಿ, ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿ. ಆದರೂ, ನಮಗೆ ನಮ್ಮ ಸಂಬಂಧಗಳಲ್ಲಿ ನಂಬಿಕೆ ಇದೆ. ಬಾಹ್ಯ ಒತ್ತಡದ ಹೊರತಾಗಿಯೂ ಭಾರತ-ರಷ್ಯಾ ಇಂಧನ ಸಹಕಾರ ಮುಂದುವರಿಯುತ್ತದೆ ಎಂದು ನಮಗೆ ವಿಶ್ವಾಸವಿದೆಯೆಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    ರಷ್ಯಾ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್‌ನಲ್ಲಿ ಯುದ್ಧಕ್ಕೆ ಭಾರತ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸಿದೆ. ಭಾರತವು ರಷ್ಯಾದ ತೈಲಕ್ಕೆ ಜಾಗತಿಕ ಕ್ಲಿಯರಿಂಗ್ ಹೌಸ್ ಆಗಿ ಕಾರ್ಯನಿರ್ವಹಿಸುತ್ತದೆ. ನಿರ್ಬಂಧಿತ ಕಚ್ಚಾ ತೈಲವನ್ನು ಹೆಚ್ಚಿನ ಮೌಲ್ಯದ ರಫ್ತುಗಳಾಗಿ ಪರಿವರ್ತಿಸುತ್ತದೆ. ಮಾಸ್ಕೋಗೆ ಅಗತ್ಯವಿರುವ ಡಾಲರ್‌ಗಳನ್ನು ನೀಡುತ್ತದೆ ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಆರೋಪಿಸಿದ್ದರು.

  • ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್‌ ಟ್ರಂಪ್‌

    ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್‌ ಟ್ರಂಪ್‌

    – ನಿನ್ನೆಯಷ್ಟೇ ಭಾರತದ 25% ಸುಂಕ ಘೋಷಿಸಿದ್ದ ಟ್ರಂಪ್‌

    ವಾಷಿಂಗ್ಟನ್‌: ಆಗಸ್ಟ್‌ 7ರಿಂದ ಅನ್ವಯವಾಗುವಂತೆ ಭಾರತ ಸೇರಿ 69 ದೇಶಗಳಿಗೆ ಟ್ರಂಪ್‌ (Donald Trump) ಹೊಸ ಸುಂಕ ವಿಧಿಸಿದ್ದಾರೆ. ಈ ಬೆನ್ನಲ್ಲೇ ಭಾರತ (India), ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿಸುವುದನ್ನೇ ನಿಲ್ಲಿಸಬಹುದು ಎನ್ನುವ ವದಂತಿಗಳು ವರದಿಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದನ್ನ ಸ್ವಾಗತಿಸಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾರತ ಇನ್ಮುಂದೆ ತೈಲ (Crude Oil) ಖರೀದಿಸುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಇದು ಒಳ್ಳೆಯ ಹೆಜ್ಜೆ ಎಂದು ಹೇಳಿದ್ದಾರಲ್ಲದೇ ಈ ಸುದ್ದಿ ಎಷ್ಟು ನಿಖರವಾಗಿದೆ ಅನ್ನೋದ್ರ ಬಗ್ಗೆ ನಮ್ಮ ಬಳಿ ಸರಿಯಾದ ಮಾಹಿತಿ ಇಲ್ಲ ಎಂದು ಟ್ರಂಪ್‌ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌

    ಭಾರತಕ್ಕೆ ದಂಡ ವಿಧಿಸಲು ಅಥವಾ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ಯಾವ ಯೋಜನೆ ಹಾಕಿಕೊಂಡಿದ್ದೀರಿ? ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಅಂತ ನಾನು ಕೇಳಿದ್ದೇನೆ. ಆದ್ರೆ ಅದು ನಿಜವೋ, ಸುಳ್ಳೋ ನನಗೆ ತಿಳಿದಿಲ್ಲ. ಒಂದು ವೇಳೆ ಅದು ನಿಜವಾದಲ್ಲಿ ಒಳ್ಳೆಯ ಹೆಜ್ಜೆ. ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಭಾರತದ್ದು ಸತ್ತೋದ ಆರ್ಥಿಕತೆ – ಹೀನ ಪದ ಬಳಸಿದ ಟ್ರಂಪ್‌

    ಭಾರತವು ವಿಶ್ವದ 3ನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾಗಿದೆ. 2022ರಿಂದ ಪಾಶ್ಚಿಮಾತ್ಯ ನಿರ್ಬಂಧಗಳ ನಂತರ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಆದ್ರೆ ಇತ್ತೀಚಿನ ಕೆಲ ವರದಿಗಳ ಪ್ರಕಾರ, ಭಾರತದ ಸರ್ಕಾರಿ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿಸುವುದನ್ನೇ ನಿಲ್ಲಿಸಿವೆ. ರಷ್ಯಾ ನೀಡುತ್ತಿದ್ದ ರಿಯಾಯಿತಿಗಳಲ್ಲಿ ಕಡಿತಗೊಂಡಿರುವುದು ಹಾಗೂ ಸರಕು ಸಾಗಣೆಗೆ ಎದುರಾಗಿರುವ ಸಮಸ್ಯೆಗಳೇ ಕಾರಣ ಎನ್ನಲಾಗಿದೆ. ಈ ಕಾರಣದಿಂದ ಭಾರತ ತೈಲ ಖರೀದಿಯನ್ನ ಸದ್ಯಕ್ಕೆ ನಿಲ್ಲಿಸಿವೆ ಎಂದು ವರದಿಗಳು ತಿಳಿಸಿವೆ.  ಇದನ್ನೂ ಓದಿ: ಎಫ್‌-35 ಖರೀದಿಸಲ್ಲ ಎಂದ ಭಾರತ – ತೆರಿಗೆ ಸಮರ ಆರಂಭಿಸಿದ ಟ್ರಂಪ್‌ಗೆ ಶಾಕ್‌

    ಭಾರತದ ಮೇಲೆ 25% ಸುಂಕಾಸ್ತ್ರ:
    ಒಂದು ದಿನದ ಹಿಂದೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಭಾರತ ಸೇರಿ 69 ದೇಶಗಳಿಗೆ ಸುಂಕ ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. 69 ವ್ಯಾಪಾರ ಪಾಲುದಾರ (Trading Partners) ದೇಶಗಳ ಮೇಲೆ 10% ರಿಂದ 41% ರಷ್ಟು ಹೆಚ್ಚಿನ ಆಮದು ಸುಂಕ ವಿಧಿಸಿದ್ದು, ಇದು 7 ದಿನಗಳಲ್ಲಿ ಜಾರಿಗೆ ಬರುವುದಾಗಿ ತಿಳಿಸಿದ್ದರು. ಈ ಆದೇಶದ ಅಡಿಯಲ್ಲಿ, ಭಾರತದ ಮೇಲೆ 25% ಸುಂಕ, ಪಾಕಿಸ್ತಾನದ ಮೇಲೆ 19% ಸುಂಕ ವಿಧಿಸಿದ್ದಾರೆ.

    ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತ ಮತ್ತು ರಷ್ಯಾ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸ್ಥಿರವಾಗಿದೆ. ಪ್ರಸ್ತುತ ಉದ್ವಿಗ್ನತೆಯ ಹೊರತಾಗಿಯೂ, ಎರಡೂ ದೇಶಗಳ ನಡುವಿನ ಸಂಬಂಧ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಬಿಹಾರ ಸರ್ಕಾರದಿಂದ ಬಂಪರ್‌ ಗಿಫ್ಟ್‌ – ಬಿಸಿಯೂಟ ತಯಾರಕರು, ದೈಹಿಕ, ಆರೋಗ್ಯ ಶಿಕ್ಷಕರ ಗೌರವಧನ ಡಬಲ್‌

  • ಬಾಂಬ್‌ ದಾಳಿ ನಡೆದಿರೋದು ಸ್ಪಷ್ಟ – ನಮ್ಮಲ್ಲೇನು ಆಗೇ ಇಲ್ಲ ಎನ್ನುತ್ತಿದ್ದ ಇರಾನ್‌ಗೆ ವಿಡಿಯೋ ಸಮೇತ ಅಮೆರಿಕ ತಿರುಗೇಟು

    ಬಾಂಬ್‌ ದಾಳಿ ನಡೆದಿರೋದು ಸ್ಪಷ್ಟ – ನಮ್ಮಲ್ಲೇನು ಆಗೇ ಇಲ್ಲ ಎನ್ನುತ್ತಿದ್ದ ಇರಾನ್‌ಗೆ ವಿಡಿಯೋ ಸಮೇತ ಅಮೆರಿಕ ತಿರುಗೇಟು

    ವಾಷಿಂಗ್ಟನ್‌: ಅಮೆರಿಕದ ಬಾಂಬ್‌ ದಾಳಿಯಿಂದ (America Strikes In Iran) ನಮ್ಮಲ್ಲಿ ಅಂಥದ್ದೇನೂ ಹಾನಿಯಾಗಿಲ್ಲ ಎಂದಿದ್ದ ಇರಾನ್‌ಗೆ ಅಮೆರಿಕ ಈಗ ವಿಡಿಯೋ ಸಮೇತ ತಿರುಗೇಟು ಕೊಟ್ಟಿದೆ.

    ಇರಾನ್‌ನ ಅಣುಸ್ಥಾವರದ ಮೇಲೆ ಮಾಡಿರುವ ಬಿ2 ಬಾಂಬರ್‌ಗಳ (B2 Bomber) ಮಿಡ್‌ನೈಟ್ ಹ್ಯಾಮರ್ ದಾಳಿಯ ಹೊಸ ವಿಡಿಯೋವನ್ನು ಪೆಂಟಗನ್‌ (Pentagon) (ಅಮೆರಿಕ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ) ಅಮೆರಿಕ ಬಿಡುಗಡೆ ಮಾಡಿದೆ. ಈ ವಿಡಿಯೋನಲ್ಲಿ ಅಮೆರಿಕವು ವಿಶ್ವದ ಶಕ್ತಿಶಾಲಿ ವೆಪೆನ್‌ ʻಬಂಕರ್‌ ಬಸ್ಟರ್‌ʼ ಬಳಸಿ ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

    ಪೆಂಟಗನ್‌ನ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಲೆಫ್ಟಿನೆಂಟ್ ಜನರಲ್ ಡ್ಯಾನ್ ಕೈನ್ ಅಮೆರಿಕದ ಬಿ2 ಬಾಂಬರ್‌ಗಳು ಹೇಗೆ ದಾಳಿ ನಡೆಸಿವೆ ಎಂಬುದನ್ನು ಇಂಚಿಂಚಾಗಿ ವಿವರಿಸಿದ್ರು. ಒಂದೊಂದೇ ದೃಶ್ಯಗಳನ್ನು ಬಿಡುಗಡೆ ಮಾಡುತ್ತಾ.. ಸಾಮಾನ್ಯ ಬಾಂಬ್‌ಗಳಿಗಿಂತ ʻಬಂಕರ್‌ ಬಸ್ಟರ್‌ʼ ಎಷ್ಟು ವಿಭಿನ್ನ? ಇದರ ಹಾನಿ ಪ್ರಮಾಣ ಹೇಗಿರುತ್ತೆ? ಭೂಮಿಯನ್ನು ಸೀಳಿಕೊಂಡು ಪರಮಾಣು ಕೇಂದ್ರವನ್ನು ಧ್ವಂಸಗೊಳಿಸಿದ್ದು ಹೇಗೆ? ಎಂಬೆಲ್ಲ ಮಾಹಿತಿಗಳನ್ನ ವಿವರಿಸಿದ್ದಾರೆ.  ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ

    ನೆಲದಡಿಯಿಂದ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿರುವ ಫೋರ್ಡೋ ಪರಮಾಣು ಘಟಕವನ್ನು ಅಮೆರಿಕ ಬಿ2 ಬಾಂಬರ್‌ ಧ್ವಂಸಗೊಳಿಸಿರುವುದು, ಅದರ ಭೀಕರತೆ ಹೇಗಿತ್ತು? ಎಂಬುದನ್ನು ವಿಡಿಯೋ ಬಿಚ್ಚಿಟ್ಟಿದೆ.  ಇದನ್ನೂ ಓದಿ: ಅಮೆರಿಕ ಬಳಿಕ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್‌ ದಾಳಿ

    ಅಮೆರಿಕ ದಾಳಿ ಎಷ್ಟು ಭೀಕರ?
    ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿತ್ತು. ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿತ್ತು. ಇದನ್ನ ʻಬಂಕರ್‌ ಬಸ್ಟರ್‌ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್‌ ಬಸ್ಟರ್‌ʼ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು (ಕ್ರೂಸ್‌ ಕ್ಷಿಪಣಿ) ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದವು.

    ಫೋರ್ಡೋ ಅಣು ಕೇಂದ್ರ ಎಷ್ಟು ಸೇಫ್‌?
    ಫೋರ್ಡೋ ಪರಮಾಣು ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ವಿಶ್ವದಲ್ಲೇ ಅತಿಹೆಚ್ಚು ಪವರ್‌ಫುಲ್‌ ಆಗಿರುವ ಸ್ವದೇಶಿ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಅಮೆರಿಕ ದಾಳಿ ನಡೆಸಿದೆ.

    ಇನ್ನೂ ಇಸ್ರೇಲ್-ಇರಾನ್ ಮಧ್ಯೆ ಕದನ ವಿರಾಮ ಘೋಷಣೆಯಾಗಿದ್ದರೂ, ಇರಾನ್ ಸಿಟ್ಟು ಕಡಿಮೆಯಾಗಿಲ್ಲ. ಇರಾನ್ ಪರಮೋಚ್ಛ ನಾಯಕ ಖಮೇನಿ ಮತ್ತೆ ಅಮೆರಿಕ ವಿರುದ್ಧ ಕೆಂಡಕಾರಿದ್ದಾರೆ. ಇಸ್ರೇಲ್ ಸೋಲುವ ಭೀತಿಯಿಂದಲೇ ಅಮೆರಿಕ ಎಂಟ್ರಿ ಕೊಟ್ಟಿದೆ. ಈ ಯುದ್ಧದಿಂದ ಅಮೆರಿಕ ಸಾಧಿಸಿದ್ದೇನೂ ಇಲ್ಲ. ನಾವು ಅಮೆರಿಕಕ್ಕೆ ಶರಣಾಗತಿಯಾಗೋ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

    ಇನ್ನು ಇಸ್ರೇಲ್ ಜೊತೆಗಿನ ಕದನ ವಿರಾಮ ಬಳಿಕ ಇರಾನ್ ತನ್ನ ವಾಯುಪ್ರದೇಶವನ್ನು ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂನ್ 12ರಿಂದಲೂ ಇರಾನ್ ವಾಯುಪ್ರದೇಶ ಮುಚ್ಚಿತ್ತು.. ಅಂತಾರಾಷ್ಟ್ರೀಯ, ದೇಶೀಯ ವಿಮಾನಗಳಿಗೆ ಏರ್‌ಸ್ಪೇಸ್ ಓಪನ್ ಮಾಡಲಾಗಿದೆ ಎಂದು ಇರಾನ್ ತಿಳಿಸಿದೆ.

    ಸಂಘರ್ಷಪೀಡಿತ ಇರಾನ್‌ನಲ್ಲಿ ಸಿಲುಕಿದ್ದ ಒಟ್ಟು 3,154 ಭಾರತೀಯ ಪ್ರಜೆಗಳನ್ನು ಆಪರೇಷನ್ ಸಿಂಧು ಕಾರ್ಯಾಚರಣೆಯಡಿ ಕರೆತರಲಾಗಿದೆ. 296 ಭಾರತೀಯರು ಮತ್ತು ನಾಲ್ವರು ನೇಪಾಳಿ ಪ್ರಜೆಗಳನ್ನು ಹೊತ್ತ ವಿಮಾನ ನಿನ್ನೆ ದೆಹಲಿಗೆ ಮರಳಿತ್ತು. ಇದರೊಂದಿಗೆ ಆಪರೇಷನ್ ಸಿಂಧು ಅಡಿಯಲ್ಲಿ ಸ್ಥಳಾಂತರಿಸಲಾದ ಒಟ್ಟು ಭಾರತೀಯರ ಸಂಖ್ಯೆ 3,154ಕ್ಕೆ ತಲುಪಿದೆ.

  • ಸುರಕ್ಷಿತ ಸ್ಥಳಗಳಲ್ಲೇ ಇರಿ – ಇರಾನ್‌ ಮಿಸೈಲ್‌ ದಾಳಿ ಬೆನ್ನಲ್ಲೇ ಕತಾರ್‌ನಲ್ಲಿರೋ ಭಾರತೀಯರಿಗೆ ಎಚ್ಚರಿಕೆ

    ಸುರಕ್ಷಿತ ಸ್ಥಳಗಳಲ್ಲೇ ಇರಿ – ಇರಾನ್‌ ಮಿಸೈಲ್‌ ದಾಳಿ ಬೆನ್ನಲ್ಲೇ ಕತಾರ್‌ನಲ್ಲಿರೋ ಭಾರತೀಯರಿಗೆ ಎಚ್ಚರಿಕೆ

    – ಅಮೆರಿಕ ನಮಗೆ ಹೆದರಿ ಬಹ್ರೇನ್‌ ವಾಯುನೆಲೆ ಮುಚ್ಚಿದೆ: ಇರಾನ್‌

    ಟೆಹ್ರಾನ್‌: ಅಮೆರಿಕ ಬಾಂಬ್‌ ದಾಳಿಗೆ ಇಸ್ರೇಲ್‌ ಪ್ರತೀಕಾರದ ದಾಳಿ ನಡೆಸಿದೆ. ಕತಾರ್‌ನ ದೋಹಾದಲ್ಲಿರುವ ಅಮೆರಿಕದ ಸೇನಾ ನೆಲೆಗಳ (US Military Bases) ಮೇಲೆ ಇರಾನ್‌ ಸುಮಾರು 10 ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಹೀಗಾಗಿ ಕತಾರ್‌ನಲ್ಲಿರುವ ಭಾರತೀಯರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಭಾರತೀಯ ರಾಯಭಾರ ಕಚೇರಿ ಎಚ್ಚರಿದೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕತಾರ್‌ನಲ್ಲಿರುವ ಎಲ್ಲ ನಾಗರಿಕರು ಸುರಕ್ಷಿತ ಸ್ಥಳಗಳಲ್ಲಿರಿ. ಸ್ಥಳೀಯ ಅಧಿಕಾರಿಗಳು ನೀಡುವ ಸೂಚನೆ ಹಾಗೂ ಮಾರ್ಗದರ್ಶನ ಅನುಸರಿಸಿ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದು ಹೇಳಿದೆ.

    ಯುಎಸ್ ವಾಯುನೆಲೆ ನಾಶಪಡಿಸಿದ್ದೇವೆ: ಇರಾನ್
    ಇನ್ನೂ ದಾಳಿ ನಡೆಸಿದ ಕೆಲವೇ ನಿಮಿಷಗಳಲ್ಲಿ ಕತಾರ್‌ನ ಅಲ್-ಉದೈದ್‌ನಲ್ಲಿರುವ ಅಮೆರಿಕದ ವಾಯುನೆಲೆಯನ್ನು ನಾಶಗೊಳಿಸಿರುವುದಾಗಿ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಹೇಳಿಕೊಂಡಿದೆ. ನಮ್ಮ ಅಣುಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದೇವೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಪ್ರಬಲ ಸಶಸ್ತ್ರ ಪಡೆಗಳು ಕತಾರ್‌ನ ಅಲ್-ಉದೈದ್‌ನಲ್ಲಿರುವ ಯುಎಸ್ ವಾಯುಪಡೆಯ ನೆಲೆಯ ಮೇಲೆ ದಾಳಿ ಮಾಡಿ ನಾಶಪಡಿಸಿವೆ ಎಂದು ತಿಳಿಸಿದೆ.

    ಇನ್ನೂ ಅಮೆರಿಕದ ನೆಲೆಗಳ ಮೇಲೆ ಅಮೆರಿಕ ಬಳಸಿದಷ್ಟೇ ಸಂಖ್ಯೆಯ ಕ್ಷಿಪಣಿ ಬಳಿಸಿದ್ದೇವೆ. ಇದಿನ್ನೂ ಸಾಮಾನ್ಯ ಪ್ರತಿಕ್ರಿಯೆ ಅಷ್ಟೇ. ಇದಕ್ಕೆ ಹೆದರಿರುವ ಅಮೆರಿಕ ಬಹ್ರೇನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ ಎಂಬುದಾಗಿಯೂ ಇರಾನ್‌ ಹೇಳಿದೆ.

    ಇರಾನ್‌ ಪ್ರತೀಕಾರದ ದಾಳಿಗೆ ಕಾರಣ ಏನು?
    ಇರಾನ್‌ನ ಶಕ್ತಿಶಾಲಿ ಪರಮಾಣು ಕೇಂದ್ರದ ಬಗ್ಗೆ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಒಂದು ದಿನದ ಹಿಂದೆಯಷ್ಟೇ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿತ್ತು.

    ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿದೆ. ಇದನ್ನ ʻಬಂಕರ್‌ ಬಸ್ಟರ್‌ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್‌ ಬಸ್ಟರ್‌ʼ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು (ಕ್ರೂಸ್‌ ಕ್ಷಿಪಣಿ) ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದವು.

    ಅಮೆರಿಕ ದಾಳಿ ಬಳಿಕ ಇರಾನ್‌, ಇಸ್ರೇಲ್‌ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿತ್ತು. 10ಕ್ಕೂ ಹೆಚ್ಚು ನಗರಗಳ ಮೇಲೆ 30ಕ್ಕೂ ಹೆಚ್ಚು ಮಿಸೈಲ್‌ಗಳನ್ನ ಹಾರಿಸಿ ದಾಳಿ ಮಾಡಿತ್ತು. ಆದ್ರೆ ಇಂದು ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆಯೇ ದಾಳಿ ನಡೆಸಿದೆ. ಇದು ಜಾಗತಿಕವಾಗಿ ಮತ್ತಷ್ಟು ಉದ್ವಿಗ್ನತೆ ಹೆಚ್ಚಳವಾಗಲು ಕಾರಣವಾಗಿದೆ.

  • ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಇರಾನ್ ಪ್ರತೀಕಾರದ ದಾಳಿ

    ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಇರಾನ್ ಪ್ರತೀಕಾರದ ದಾಳಿ

    ಟೆಹ್ರಾನ್‌/ವಾಷಿಗ್ಟನ್‌: ತನ್ನ ಪರಮಾಣು ಘಟಕಗಳ ಮೇಲೆ ಅಮೆರಿಕ ಬಾಂಬ್‌ ದಾಳಿ ನಡೆಸಿದ ಒಂದು ದಿನದ ನಂತರ ಇರಾನ್‌ ಪ್ರತೀಕಾರದ ದಾಳಿ (Iran Fires Missiles) ನಡೆಸಿದೆ. ಕತಾರ್‌ನ ದೋಹಾದಲ್ಲಿರುವ ಅಮೆರಿಕದ ಸೇನಾ ನೆಲೆಗಳ (US Military Bases) ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ಈ ಬೆಳವಣಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದಲ್ಲೇ ಕುಳಿತು ವೀಕ್ಷಿಸಿದ್ದಾರೆ.

    ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ದಾಳಿ ನಡೆದಿದೆ. ಸುಮಾರು 6 ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಇಸ್ರೇಲ್‌ ಅಧಿಕಾರಿಯ ಹೇಳಿಕೆ ಆಧರಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಇರಾನ್‌ನ ಎಲ್ಲ ಕ್ಷಿಪಣಿಗಳನ್ನು ಅಮೆರಿಕ ಸೇನೆ ಸಮರ್ಥವಾಗಿ ಎದುರಿಸಿದ್ದು, ಯಾವುದೇ ಸಾವುನೋವುಗಳಾಗಿಲ್ಲ ಎಂದು ಕತಾರ್‌ ಹೇಳಿದೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

    ಇರಾನ್‌ ಪ್ರತೀಕಾರದ ದಾಳಿಗೆ ಕಾರಣ ಏನು?
    ಇರಾನ್‌ನ ಶಕ್ತಿಶಾಲಿ ಪರಮಾಣು ಕೇಂದ್ರದ ಬಗ್ಗೆ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಒಂದು ದಿನದ ಹಿಂದೆಯಷ್ಟೇ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿತ್ತು. ಇದನ್ನೂ ಓದಿ: ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿದೆ. ಇದನ್ನ ʻಬಂಕರ್‌ ಬಸ್ಟರ್‌ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್‌ ಬಸ್ಟರ್‌ʼ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು (ಕ್ರೂಸ್‌ ಕ್ಷಿಪಣಿ) ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದವು. ಇದನ್ನೂ ಓದಿ: ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

    ಅಮೆರಿಕ ದಾಳಿ ಬಳಿಕ ಇರಾನ್‌, ಇಸ್ರೇಲ್‌ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿತ್ತು. 10ಕ್ಕೂ ಹೆಚ್ಚು ನಗರಗಳ ಮೇಲೆ 30ಕ್ಕೂ ಹೆಚ್ಚು ಮಿಸೈಲ್‌ಗಳನ್ನ ಹಾರಿಸಿ ದಾಳಿ ಮಾಡಿತ್ತು. ಆದ್ರೆ ಇಂದು ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆಯೇ ದಾಳಿ ನಡೆಸಿದೆ. ಇದು ಜಾಗತಿಕವಾಗಿ ಮತ್ತಷ್ಟು ಉದ್ವಿಗ್ನತೆ ಹೆಚ್ಚಳವಾಗಲು ಕಾರಣವಾಗಿದೆ. ಇದನ್ನೂ ಓದಿ: ಅಮೆರಿಕ ಬಳಿಕ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್‌ ದಾಳಿ

  • ಇರಾನ್‌ ನಿರ್ಧಾರದಿಂದ ಕಚ್ಚಾ ತೈಲ ದರ ದಿಢೀರ್‌ ಭಾರೀ ಏರಿಕೆ

    ಇರಾನ್‌ ನಿರ್ಧಾರದಿಂದ ಕಚ್ಚಾ ತೈಲ ದರ ದಿಢೀರ್‌ ಭಾರೀ ಏರಿಕೆ

    ನವದೆಹಲಿ: ಅಮೆರಿಕದ (USA) ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್‌ (Iran) ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ದರ 5 ತಿಂಗಳ ನಂತರ ಭಾರೀ ಏರಿಕೆಯಾಗಿದೆ.

    ಒಂದು ಬ್ಯಾರೆಲ್‌ (159 ಲೀಟರ್‌) ಕಚ್ಚಾ ತೈಲ ಜನವರಿ ನಂತರ ಏರಿಕೆ ಕಂಡಿದೆ. ಇಂದು 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ (Crude Oil Price) ಬೆಲೆ 1.92 ಡಾಲರ್‌ ಅಥವಾ 2.49 % ಏರಿಕೆಯಾಗಿ 78.93 ಡಾಲರ್(6,847 ರೂ.) ತಲುಪಿದೆ.

    ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು 1.89 ಡಾಲರ್‌ ಅಥವಾ 2.56% ಏರಿಕೆಯಾಗಿ 75.73 ಡಾಲರ್(6,570‌ ರೂ.) ತಲುಪಿದೆ.  ಇದನ್ನೂ ಓದಿ: ಬಾಂಬ್‌ ಹಾಕಿದ ಬೆನ್ನಲ್ಲೇ ಇರಾನ್‌ಗೆ MIGA ಘೋಷಿಸಿದ ಟ್ರಂಪ್‌

    ಇರಾನಿನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸಿ ನಾಶ ಮಾಡಿದೆ. ಅಮೆರಿಕ ದಾಳಿಯ ಬೆನ್ನಲ್ಲೇ ಇರಾನ್‌ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವುದಾಗಿ ಘೋಷಿಸಿದೆ. ಇದನ್ನೂ ಓದಿ: ಇರಾನ್‌ಗೆ ಅಣ್ವಸ್ತ್ರ ನೀಡಲು ಮುಂದೆ ಬಂದ ಹಲವು ದೇಶಗಳು!

    ಇರಾನ್‌ ಮತ್ತು ಒಮಾನ್‌ ನಡುವಿನ 40 ಕಿ.ಮೀ ಅಗಲದ ಸಮುದ್ರದಲ್ಲಿ ಹಡಗುಗಳು ಸಂಚರಿಸುತ್ತವೆ. ಹಡಗುಗಳು ಸಂಚರಿಸುವ ಈ ಜಾಗಕ್ಕೆ ಹಾರ್ಮುಜ್ ಜಲಸಂಧಿ ಎಂದು ಕರೆಯಲಾಗುತ್ತದೆ.

    ಒಂದು ತಿಂಗಳಿನಲ್ಲಿ 3 ಸಾವಿರಕ್ಕೂ ಅಧಿಕ ಕಾರ್ಗೋ ಶಿಪ್‌ಗಳು ಈ ಜಲಸಂಧಿಯನ್ನು ಬಳಸುತ್ತಿದೆ. ಇರಾನ್‌ ಈಗ ಈ ಜಲಸಂಧಿಯನ್ನೇ ಬಂದ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಕಚ್ಚಾ ತೈಲ ದರ ದಿಢೀರ್‌ ಏರಿಕೆಯಾಗಿದೆ. ಇದನ್ನೂ ಓದಿ: ಲೇಡಿ ಕಿಲ್ಲರ್‌ನಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ಇರಾಕ್‌, ಸೌದಿ ಅರೇಬಿಯಾ, ಯುಎಇ, ಕತಾರ್‌ನಿಂದ ಬರುವ ಕಚ್ಚಾ ತೈಲ, ಎಲ್‌ಎನ್‌ಜಿ ಹೊತ್ತುಕೊಡು ಬರುವ ಹಡಗುಗಳು ಹಾರ್ಮುಜ್ ಜಲಸಂಧಿಯಿಂದಲೇ ಬರಬೇಕು.

  • Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    ನವದೆಹಲಿ: ಇರಾನ್ ಮೇಲೆ ಇಸ್ರೇಲ್ (Iran-Israel War) ನಡೆಸಿದ ದಾಳಿಯಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಭಾರತವು ಜೂನ್‌ನಲ್ಲಿ ರಷ್ಯಾದ (Russia) ತೈಲ ಖರೀದಿಯನ್ನು ಹೆಚ್ಚಿಸಿದೆ. ಸೌದಿ ಅರೇಬಿಯಾ ಮತ್ತು ಇರಾಕ್‌ನಂತಹ ಮಧ್ಯಪ್ರಾಚ್ಯ ಪೂರೈಕೆದಾರರಿಂದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

    ಜೂನ್ 13 ರಂದು ಮೊದಲು ಇರಾನಿನ ಪರಮಾಣು ತಾಣಗಳ ಮೇಲೆ ದಾಳಿ ಮಾಡಿದ ಇಸ್ರೇಲ್‌ಗೆ ನೇರ ಬೆಂಬಲ ನೀಡಿರುವ ಅಮೆರಿಕ (US), ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್‌ ಮೇಲಿನ ದಾಳಿ ಖಂಡನೆ

    ಜೂನ್‌ನಲ್ಲಿ, ಭಾರತೀಯ ಸಂಸ್ಕರಣಾಗಾರಗಳು ದಿನಕ್ಕೆ 2-2.2 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚಿನದ್ದಾಗಲಿದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಖರೀದಿಸಿದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ ತಿಳಿಸಿದ್ದಾರೆ.

    ಮೇ ತಿಂಗಳಲ್ಲಿ ರಷ್ಯಾದಿಂದ ಭಾರತದ (India) ತೈಲ ಆಮದು ದಿನಕ್ಕೆ 1.96 ಮಿಲಿಯನ್ ಬ್ಯಾರೆಲ್‌ಗಳಷ್ಟಿತ್ತು (bpd). ಇದಲ್ಲದೆ, ಜೂನ್‌ನಲ್ಲಿ ಅಮೆರಿಕದಿಂದ ಆಮದು ದಿನಕ್ಕೆ 4.39 ಲಕ್ಷ ಬ್ಯಾರೆಲ್‌ಗೆ ಏರಿದೆ. ಇದು ಹಿಂದಿನ ತಿಂಗಳಲ್ಲಿ ಖರೀದಿಸಲಾದ 2.80 ಲಕ್ಷ ಬ್ಯಾರೆಲ್‌ಗಳಿಂದ ಭಾರಿ ಜಿಗಿತವಾಗಿದೆ. ಇದನ್ನೂ ಓದಿ: America Strikes In Iran | ಕಚ್ಚಾ ತೈಲ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ – ಆರ್ಥಿಕ ತಜ್ಞರ ಕಳವಳ

    ಜೂನ್‌ನಲ್ಲಿ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ಅಂದಾಜುಗಳು ದಿನಕ್ಕೆ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟಿದ್ದು, ಮೇ ತಿಂಗಳ ಖರೀದಿಗಿಂತ ಕಡಿಮೆಯಾಗಿದೆ ಎಂದು ಕೆಪ್ಲರ್ ತಿಳಿಸಿದೆ.

    ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆಯ ರಾಷ್ಟ್ರವಾಗಿದೆ. ಇದು ಸುಮಾರು 5.1 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ಇದನ್ನು ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ. ಇದನ್ನೂ ಓದಿ: ಶಾಂತಿ ಸ್ಥಾಪಿಸಿ, ಇಲ್ಲದಿದ್ರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತೆ – ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್

    2022ರ ಫೆಬ್ರವರಿಯಲ್ಲಿ ಉಕ್ರೇನ್ ಆಕ್ರಮಣದ ನಂತರ ಭಾರತವು ಹೆಚ್ಚಿನ ಪ್ರಮಾಣದ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ದೇಶವು ಸಾಂಪ್ರದಾಯಿಕವಾಗಿ ಮಧ್ಯಪ್ರಾಚ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಕೆಲವು ಯುರೋಪಿಯನ್ ದೇಶಗಳು ಖರೀದಿಗಳನ್ನು ತಿರಸ್ಕರಿಸಿದ್ದರಿಂದ ಇತರ ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ, ತೈಲವು ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಿದ್ದ ಕಾರಣ ರಷ್ಯಾದ ಆಮದು ಹೆಚ್ಚಾಗಿದೆ.