Tag: CRPF

  • ಕಾಶ್ಮೀರದಲ್ಲಿ ಸೇನೆಯ ಮೇಲೆ ಗುಂಡಿನ ದಾಳಿ – ಓರ್ವ ಹುತಾತ್ಮ

    ಕಾಶ್ಮೀರದಲ್ಲಿ ಸೇನೆಯ ಮೇಲೆ ಗುಂಡಿನ ದಾಳಿ – ಓರ್ವ ಹುತಾತ್ಮ

    ಶ್ರೀನಗರ: ಕಾಶ್ಮೀರದಲ್ಲಿ (Kashmir) ಮತ್ತೆ ಉಗ್ರರು (Terrorist) ಭದ್ರತಾ ಪಡೆಯನ್ನು ಗರಿಯಾಗಿಸಿ ದಾಳಿ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಚೆಕ್‌ಪೋಸ್ಟ್ ಬಳಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ತಂಡವನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಓರ್ವ ಸಿಆರ್‌ಪಿಎಫ್ ಯೋಧ ಗಾಯಗೊಂಡಿದ್ದಾರೆ.

    ಶೋಪಿಯಾನ್‌ದಲ್ಲಿ (Shopian) ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ (LET) ಭಯೋತ್ಪಾದಕನನ್ನು ಹತ್ಯೆ ಮಾಡಿದ ಕೆಲವೇ ಗಂಟೆಗಳ ಬಳಿಕ ಉಗ್ರರಿಂದ ಪ್ರತಿದಾಳಿ ನಡೆದಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದ ಪಿಂಗ್ಲಾನಾ ಗ್ರಾಮದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಂಡಿದ್ದಾರೆ. ಸದ್ಯ ಉಗ್ರರನ್ನು ಪತ್ತೆಹಚ್ಚಲು ಗ್ರಾಮಕ್ಕೆ ಪೊಲೀಸ್ (Police), ಸೇನೆ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್

    ಕಾರ್ಯಾಚರಣೆಯ ಸಮಯದಲ್ಲಿ ಎಕೆ ರೈಫಲ್ ಸೇರಿದಂತೆ ಮದ್ದು ಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಖಾದಿ ಎಂಪೋರಿಯಂನಲ್ಲಿ ಲೇಡಿಸ್ ಟಾಪ್ ಡ್ರೆಸ್ ಖರೀದಿಸಿದ ಸಿಎಂ

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಬಾಸ್ಕುಚಾನ್ ಇಮಾಮಸಾಹಿಬ್ ಪ್ರದೇಶದಲ್ಲಿ ಭದ್ರತಾಪಡೆಗಳು ಶನಿವಾರ ನಡೆಸಿದ ಎನ್‌ಕೌಂಟರ್ ದಾಳಿಯಲ್ಲಿ ಲಷ್ಕರ್ ಎ ತೋಯ್ಬಾ (LET) ದೊಂದಿಗೆ ಸಂಪರ್ಕ ಹೊಂದಿದ್ದ ಭಯೋತ್ಪಾದಕನನ್ನು ಹತ್ಯೆಗೈದು ಇಬ್ಬರನ್ನು ಬಂಧಿಸಿತ್ತು. ಮೃತ ಭಯೋತ್ಪಾದಕನನ್ನು ನಸೀರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಈತ ಇತ್ತೀಚೆಗೆ ಎನ್‌ಕೌಂಟರ್‌ನಿಂದ ತಪ್ಪಿಸಿಕೊಂಡಿದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    ನವದೆಹಲಿ: ಪಾಕಿಸ್ತಾನ (Pakistan) ಶತ್ರು ಪಡೆಗಳ ಮೇಲೆ ಶೌರ್ಯ ಮೆರೆದಿದ್ದ ಮಾಜಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Abhinandan Varthaman) (ಪ್ರಸ್ತುತ ಗ್ರೂಪ್‌ ಕ್ಯಾಪ್ಟನ್‌) ಅವರ ಮಿಗ್-21 ಬೈಸನ್ ಫೈಟರ್ ಜೆಟ್ (MiG-21 Fighter Jets) ಇದೇ ಸೆಪ್ಟೆಂಬರ್ 30 ರಂದು ಭಾರತೀಯ ವಾಯುಪಡೆಯಿಂದ (Indian Air Force) ನಿವೃತ್ತಿಯಾಗಲಿದೆ.

    ಮಿಗ್-21 ಬೈಸನ್ 1960 ದಶಕದಲ್ಲಿ ಭಾರತೀಯ ವಾಯುಪಡೆಗೆ (IAF) ಸೇರ್ಪಡೆಗೊಳಿಸಲಾಯಿತು. ಆದರೆ 1980ರ ದಶಕಕದಿಂದ 400ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. 200ಕ್ಕೂ ಹೆಚ್ಚು ಪೈಲಟ್‌ಗಳು (Pilots) ಮತ್ತು 60 ನಾಗರಿಕರನ್ನು ಬಲಿ ತೆಗೆದುಕೊಂಡಿವೆ. ಪ್ರಸ್ತುತ 32 ಸ್ಕ್ವಾಡ್ರನ್‌ಗಳಿಗೆ ಇಳಿಕೆಯಾಗಿದೆ. ಭಾರತೀಯ ವಾಯುಪಡೆಯು ಸದ್ಯ 550 ಫೈಟರ್ ಜೆಟ್‌ಗಳ (Fighter Jets) ಸಾಮರ್ಥ್ಯಕ್ಕೆ ಇಳಿದಿದ್ದು, ಇನ್ನೂ 200 ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿದೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ಸದ್ಯ ಅಭಿನಂದನ್ ವರ್ಧಮಾನ್ ಅವರ ಮಿಗ್-21 ಫೈಟರ್ ಜೆಟ್ (ಶ್ರೀನಗರ ಮೂಲದ ನಂ.51 ಸ್ಕ್ವಾಡ್ರನ್)ಅನ್ನು ಸೆಪ್ಟೆಂಬರ್ 30 ರಂದು ಸೇನೆಯಿಂದ ನಿವೃತ್ತಿಗೊಳಿಸಲಿದ್ದು, 2025ರ ವೇಳೆಗೆ ಹಂತಹಂತವಾಗಿ ಬದಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ 1980 ದಶಕದಲ್ಲಿ ಸೇನೆಗೆ ಸೇರ್ಪಡೆಗೊಂಡ ಜಾಗ್ವಾರ್, ಮಿಗ್-29 ಹಾಗೂ ಮಿರಾಜ್ ನಂತಹ ಯುದ್ಧ ವಿಮಾನಗಳೂ ಹಳೆಯದ್ದಾಗುತ್ತಿದ್ದು, ಅವುಗಳು ಸಹ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 

    ಪಾಕ್ ವಿರುದ್ಧ ಪರಾಕ್ರಮ ಮೆರೆದಿದ್ದ ಅಭಿನಂದನ್:
    2019ರ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಕಾರವಾಗಿ ಏರ್‌ಸ್ಟ್ರೈಕ್ ನಡೆಸಿ ಭಾರತ ಪ್ರತಿಕಾರ ತೀರಿಸಿಕೊಂಡಿತ್ತು. ಪಾಕಿಸ್ತಾನದ ಖೈಬರ್ ಪಕ್ತುಂಕ್ವಾ ಪ್ರದೇಶದ ಬಾಲಾಕೋಟ್‌ನಲ್ಲಿ ಜೈಷೆ ಮೊಹಮದ್ ಸಂಘಟನೆಗಳ ಉಗ್ರರ ಶಿಬಿರಗಳ ಮೇಲೆ 2019 ರ ಫೆಬ್ರವರಿ 26 ರಂದು ಭಾರತ ವೈಮಾನಿಕ ದಾಳಿ ನಡೆಸಿತ್ತು.

    ಫೆ.26ರ ನಸುಕಿನ ಜಾವ 3.30 ರಿಂದ 3.55ರ ನಡುವೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್ ಉಗ್ರರ ಶಿಬಿರಗಳ ಮೇಲೆ 12 ಮಿರಾಜ್-2000 ಯುದ್ಧ ವಿಮಾನಗಳು ದಾಳಿ ನಡೆಸಿದ್ದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿಮೀ ಒಳನುಗ್ಗಿ ಭಾರತೀಯ ವಾಯುಪಡೆ ಈ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಭಾರತ ತನ್ನ ನೆಲದಲ್ಲಿ ದೊಡ್ಡ ದಾಳಿ ನಡೆಸಿದೆ ಎಂದು ಗೊತ್ತಾದ ತಕ್ಷಣ ಪಾಕ್ ಕೂಡ ಪ್ರತಿ ದಾಳಿ ಮಾಡಿತ್ತು. ಪಾಕ್‌ನ ಪ್ರತಿದಾಳಿಯ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್ ಅವರು ತಮ್ಮ ಮಿಗ್-21 ರಿಂದ ಪಾಕಿಸ್ತಾನದ ಎಫ್-16 ಜೆಟ್ ವಿಮಾನವನ್ನು ಹೊಡೆದುರುಳಿಸಿದ್ದರು. ಅದಾದ ಬಳಿಕ ಪಾಕಿಸ್ತಾನ ಸೇನೆ ಅಭಿನಂದನ್ ಅವರನ್ನು ಬಂಧಿಸಿ ಮಾರ್ಚ್ 1ರ ಮಧ್ಯರಾತ್ರಿ ಬಿಡುಗಡೆ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಟೋಲ್ ಪಾವತಿ ವಿಚಾರದಲ್ಲಿ ಕಿರಿಕ್ – ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು

    ಟೋಲ್ ಪಾವತಿ ವಿಚಾರದಲ್ಲಿ ಕಿರಿಕ್ – ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು

    ಮುಂಬೈ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯರಿಬ್ಬರು (Women) ಪರಸ್ಪರ ಕೂದಲು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ನಾಸಿಕ್ (Nashik) ಬಳಿಯ ಪಿಂಪಲ್ಗಾವ್ ಟೋಲ್ ಬೂತ್ (Toll Plaza) ಬಳಿ ನಡೆದಿದೆ.

    ಸಿಆರ್‌ಪಿಎಫ್ (CRPF) ಅಧಿಕಾರಿಯ ಪತ್ನಿ ಹಾಗೂ ಟೋಲ್ ಸಿಬ್ಬಂದಿ (Toll Employee) ಟೋಲ್‌ಬೂತ್ ರಸ್ತೆಯಲ್ಲೇ ನಿಂತು ಪರಸ್ಪರ ಮುಂದಲೆ ಹಿಡಿದು ಎಳೆದಾಡಿದ್ದಾರೆ, ನಿಂದಿಸಿದ್ದಾರೆ. ಮಹಿಳೆಯರಿಬ್ಬರ ನಡುವಿನ ಮಾರಾಮಾರಿ ದೃಶ್ಯ ಜಾಲತಾಣದಲ್ಲಿ ವೈರಲ್  (Video Viral) ಆಗಿದೆ. ಇದನ್ನೂ ಓದಿ: ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಟೋಲ್ (Toll) ಪಾವತಿಸುವ ವಿಚಾರಕ್ಕೆ ಇಬ್ಬರ ನಡುವೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿತ್ತು. ನಂತರ ಇದು ವಿಕೋಪಕ್ಕೆ ತಿರುಗಿ ಮಾರಾಮಾರಿಯಾಗಿದೆ. ಬಳಿಕ ಇಬ್ಬರು ಜುಟ್ಟು ಹಿಡಿದು ಎಳೆದಾಡಿದ್ದಾರೆ, ಕಪಾಳಕ್ಕೆ ಬಾರಿಸಿದ್ದಾರೆ. ಹತ್ತಾರು ಮಂದಿ ಸ್ಥಳದಲ್ಲೇ ನಿಂತಿದ್ದರೂ ಘಟನೆಯನ್ನು ಮೊಬೈಲ್‌ನಲ್ಲಿ (Mobile) ಸೆರೆ ಹಿಡಿಯುತ್ತಿದ್ದರೆ ಹೊರತು, ಯಾರೊಬ್ಬರೂ ಜಗಳ ಬಿಡಿಸುವ ಪ್ರಯತ್ನ ಮಾಡಲಿಲ್ಲ. ಸುಮಾರು 10 ನಿಮಿಷದ ಬಳಿಕ ಜಗಳ ಬಿಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶದ ನಂ.1 ಶ್ರೀಮಂತ ಗೌತಮ್ ಅದಾನಿಗೆ Z – VIP  ಭದ್ರತೆ

    ದೇಶದ ನಂ.1 ಶ್ರೀಮಂತ ಗೌತಮ್ ಅದಾನಿಗೆ Z – VIP ಭದ್ರತೆ

    ನವದೆಹಲಿ: ದೇಶದ ನಂ.1 ಶ್ರೀಮಂತ ಉದ್ಯಮಿ ಆಗಿರುವ ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರಿಗೆ ಕೇಂದ್ರ ಸರ್ಕಾರ `Z’ ಮಾದರಿಯ ವಿಐಪಿ ಭದ್ರತೆ ಒದಗಿಸಿದೆ.

    ಸಿಆರ್‌ಪಿಎಫ್‌ನ 22 ಕಮಾಂಡೋಗಳು ಅದಾನಿ ಅವರಿಗೆ ಇನ್ನು ಮುಂದೆ ಭದ್ರತೆ ಒದಗಿಸಲಿದ್ದಾರೆ. ಈ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಶುಲ್ಕ ಆಧಾರಿತವಾಗಿದ್ದು, ತಿಂಗಳಿಗೆ ಸುಮಾರು 15 ರಿಂದ 20 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಬದಲಾವಣೆ – ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಶಾಕ್ ಸಾಧ್ಯತೆ

    ಅದಾನಿಗೆ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ಈ ಭದ್ರತೆ ಒದಗಿಸಲಾಗಿದೆ. ಸಿಆರ್‌ಪಿಎಫ್ ತಂಡ ಈಗಾಗಲೇ ಕೈಗಾರಿಕೋದ್ಯಮಿಯ ಭದ್ರತೆಯನ್ನು ವಹಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ಈ ಹಿಂದೆ ದೇಶದ 2ನೇ ಶ್ರೀಮಂತರಾಗಿರುವ ಮುಖೇಶ್ ಅಂಬಾನಿಗೆ ಸರ್ಕಾರ ಇದೇ ರೀತಿ ಭದ್ರತೆ ನೀಡಿತ್ತು. ಆರ್‌ಎಲ್ ಅಧ್ಯಕ್ಷರಿಗೆ 2013 ರಲ್ಲಿ ಸಿಆರ್‌ಪಿಎಫ್ ಕಮಾಂಡೋಗಳ `ಝಡ್+’ ವರ್ಗದ ಭದ್ರತೆ ನೀಡಲಾಯಿತು. ಇದಾದ ಕೆಲ ವರ್ಷಗಳ ನಂತರ ಅವರ ಪತ್ನಿ ನೀತಾ ಅಂಬಾನಿಗೆ ಕಡಿಮೆ ವರ್ಗದ ಭದ್ರತೆ ನೀಡಲಾಯಿತು. ಭದ್ರತೆಗಾಗಿ ಇಬ್ಬರೂ ಸಿಆರ್‌ಪಿಎಫ್‌ಗೆ ಮಾಸಿಕ ಪಾವತಿಗಳನ್ನು ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಯೋತ್ಪಾದಕರ ಗುಂಡಿಗೆ CRPF ಯೋಧ ಹುತಾತ್ಮ

    ಭಯೋತ್ಪಾದಕರ ಗುಂಡಿಗೆ CRPF ಯೋಧ ಹುತಾತ್ಮ

    ಶ್ರೀನಗರ: ಭಾನುವಾರ ಭಯೋತ್ಪಾದಕರ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗೊಂಗೂ ಕ್ರಾಸಿಂಗ್ ಬಳಿ ನಡೆದಿದೆ.

    ಪುಲ್ವಾಮಾ ಜಿಲ್ಲೆಯ ಪೊಲೀಸ್ ಹಾಗೂ ಸಿಆರ್‌ಪಿಎಫ್ ಜಂಟಿ ನಾಕಾ ಪಾರ್ಟಿ(ಚೆಕ್ ಫೋಸ್ಟ್) ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜು.19 ರಂದು ಸರ್ವಪಕ್ಷಗಳ ಸಭೆ – ಪ್ರಹ್ಲಾದ್ ಜೋಶಿ

    ಚೆಕ್‌ಪೋಸ್ಟ್ ಮೇಲೆ ಸಮೀಪದ ಸೇಬಿನ ತೋಟದಿಂದ ಗುಂಡಿನ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಏಕ್ಸ್‌ಪ್ರೆಸ್‍ನಲ್ಲಿ ಸುಟ್ಟ ವಾಸನೆ- ಮಸ್ಕತ್‍ಗೆ ಹೋದ ವಿಮಾನ

    ಘಟನಾ ಪ್ರದೇಶದಲ್ಲಿ ಭದ್ರತಾ ಪಡೆ ಸುತ್ತುವರಿದಿದ್ದು, ಉಗ್ರರನ್ನು ಪತ್ತೆ ಹಚ್ಚಲು ಹಾಗೂ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ

    ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ

    ಭುವನೇಶ್ವರ್: ಒಡಿಶಾದ ನುವಾಪಾದ ಜಿಲ್ಲೆಯ ಭದ್ರತಾ ಪೋಸ್ಟ್‌ನಲ್ಲಿ ಮಾವೋವಾದಿಗಳು ನಡೆಸಿದ ಹೊಂಚು ದಾಳಿಗೆ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸಿಬ್ಬಂದಿಗಳಲ್ಲಿ ಒಬ್ಬರು ಯೋಧ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಇಬ್ಬರು ಅಧಿಕಾರಿಗಳು ಸೇರಿದ್ದಾರೆ. ಇದನ್ನೂ ಓದಿ: ಮಹಿಳಾ ಪೊಲೀಸರಿಗೆ ಕ್ಯಾಕರಿಸಿ ಉಗಿದು ಕೈ ನಾಯಕಿ ನೆಟ್ಟಾ ಡಿಸೋಜಾ ಆಕ್ರೋಶ

    ಎಎಸ್‌ಐ ಶಿಶುಪಾಲ್ ಸಿಂಗ್, ಎಎಸ್‌ಐ ಶಿವ ಲಾಲ್ ಮತ್ತು ಕಾನ್‌ಸ್ಟೇಬಲ್ ಧರ್ಮೇಂದ್ರ ಕುಮಾರ್ ಸಿಂಗ್ ಹುತಾತ್ಮರು ಎಂದು ಗುರುತಿಸಲಾಗಿದೆ.

    ಪಡೆಗಳ ಮೇಲೆ ಮಾವೋವಾದಿಗಳು ಸುಧಾರಿತ ಮತ್ತು ಕಚ್ಚಾ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳನ್ನು ಬಳಸಿ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಸೇನಾ ವ್ಯವಹಾರಗಳ ಇಲಾಖೆ

    ನಕ್ಸಲರು ಹುತಾತ್ಮ ಸಿಆರ್‌ಪಿಎಫ್‌ ಸಿಬ್ಬಂದಿ ಬಳಿಯಿದ್ದ ಮೂರು ಎಕೆ-47 ರೈಫಲ್‌ಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಐಜಿ ಪೊಲೀಸ್ (ಕಾರ್ಯಾಚರಣೆ) ಅಮಿತಾಭ್ ಠಾಕೂರ್ ಹೇಳಿದ್ದಾರೆ.

    Live Tv

  • ಶ್ರೀನಗರದಲ್ಲಿ ಉಗ್ರರ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ

    ಶ್ರೀನಗರದಲ್ಲಿ ಉಗ್ರರ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ

    ಶ್ರೀನಗರ: ಪುಲ್ವಾಮಾದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆದ ಕೆಲವೇ ಗಂಟೆಗಳ ನಂತರ ಉಗ್ರರು ನಡೆಸಿದ ದಾಳಿಯ ವೇಳೆ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದು, ಇನ್ನೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

    ಶ್ರೀನಗರದ ಭದ್ರತಾ ಪಡೆಗಳ ಜಂಟಿ ಚೆಕ್ ಪಾಯಿಂಟ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

    ARMY

    ಈ ಹಿನ್ನೆಲೆಯಲ್ಲಿ ಘಟನೆ ನಡೆದ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಭಯೋತ್ಪಾದಕರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಸಮಸ್ತ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ 78ರ ಮಹಿಳೆ

    ಇಂದು ಮುಂಜಾನೆ, ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಿಹಾರ ಮೂಲದ ಇಬ್ಬರು ಸ್ಥಳೀಯೇತರ ಕಾರ್ಮಿಕರು ಗಾಯಗೊಂಡಿದ್ದಾರೆ. ಭಾನುವಾರದಿಂದ ವಲಸೆ ಕಾರ್ಮಿಕರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

  • CRPF ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಕಾದಾರಿ ಮಹಿಳೆ

    CRPF ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಕಾದಾರಿ ಮಹಿಳೆ

    ಶ್ರೀನಗರ:  ಸಿಆರ್‌ಪಿಎಫ್ ಬಂಕರ್ ಮೇಲೆ ಬುರ್ಕಾದಾರಿ ಮಹಿಳೆಯೊಬ್ಬರು ಪೆಟ್ರೋಲ್ ಬಾಂಬ್ ಎಸೆದು ಎಸ್ಕೇಪ್ ಆಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ನಡೆದಿದೆ.

    ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದ ಸಿಆರ್‌ಪಿಎಫ್ ಬಂಕರ್ ಬಳಿ ಬರ್ಕಾ ಧರಿಸಿದ ಮಹಿಳೆ ಬಂದಿದ್ದಾರೆ. ಆ ಅಪರಿಚಿತ ಮಹಿಳೆ ತನ್ನ ಬ್ಯಾಗ್‍ನಿಂದ ಪೆಟ್ರೋಲ್ ಬಾಂಬ್ ತೆಗೆದು  ಸಿಆರ್‌ಪಿಎಫ್ ಬಂಕರ್ ಮೇಲೆ ಎಸೆದಿದ್ದಾಳೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬೆಂಕಿ ಉರಿಯಲು ಪ್ರಾರಂಭಿಸಿದ ಬಳಿಕ ಅಲ್ಲಿದ್ದ ಪಾದಾಚಾರಿಗಳು ಓಡಿ ಹೋಗಿದ್ದಾರೆ. ಕೆಲವರು ಬಕೆಟ್‍ನಲ್ಲಿ ನೀರನ್ನು ತಂದು ಬೆಂಕಿಯನ್ನು ನಂದಿಸಲು ಮುಂದಾದರು.

    ನಿನ್ನೆ ಸೋಪೋರ್‌ನಲ್ಲಿ ಸಿಆರ್‌ಪಿಎಫ್ ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಮಹಿಳೆಯನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆಕೆಯನ್ನು ಬಂಧಿಸುತ್ತೇವೆ ಎಂದು ಐಜಿಪಿ ಕಾಶ್ಮೀರ ವಿಜಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರಲ್ಲ: ಅಮಿತ್ ಶಾ

    ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರಲ್ಲ: ಅಮಿತ್ ಶಾ

    ಶ್ರೀನಗರ: ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಈಶಾನ್ಯದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

    ಶ್ರೀನಗರದ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಸಿಆರ್‌ಪಿಎಫ್‌ನ 83ನೇ ರೈಸಿಂಗ್ ಡೇ ಪರೇಡ್‍ನಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಬೃಹತ್ ಭದ್ರತಾ ನಿಯೋಜನೆಯನ್ನು ತೆಗೆದುಹಾಕಲು ಉನ್ನತ ಮಟ್ಟದಲ್ಲಿ ಸರ್ಕಾರ ಇದೇ ಮೊದಲ ಬಾರಿಗೆ ಪ್ರಯತ್ನಿಸುತ್ತಿದೆ. ಇದು ಕೆಲವೇ ವರ್ಷಗಳಲ್ಲಿ ಈಡೇರಿಸಲಿದೆ ಎಂದು ಭರವಸೆ ನೀಡಿದರು.

    ಸಿಆರ್‌ಪಿಎಫ್ ಯೋಧರ ಶ್ರಮದಿಂದಾಗಿ ಇನ್ನೂ ಕೆಲವೇ ವರ್ಷಗಳಲ್ಲಿ ಭಯೋತ್ಪಾದನಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಮೂರು ಪ್ರದೇಶಗಳಲ್ಲೂ ಸಿಆರ್‌ಪಿಎಫ್ ಅಗತ್ಯವಿಲ್ಲದೇ ನಾವು ಸಂಪೂರ್ಣವಾಗಿ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂಬ ವಿಶ್ವಾಸವಿದೆ. ಇದರ ಸಂಪೂರ್ಣ ಪ್ರಶಂಸೆಯೂ ಸಿಆರ್‌ಪಿಎಫ್ ಯೋಧರಿಗೆ ಸಲ್ಲುತ್ತದೆ ಎಂದರು. ಇದನ್ನೂ ಓದಿ: RRR ಪ್ರೀ ರಿಲೀಸ್ ಇವೆಂಟ್‌ನಲ್ಲಿ ಪೊಲೀಸರ ಮೇಲೆ ಬಾಟಲಿ, ಚಪ್ಪಲಿ ತೂರಿ ಅಭಿಮಾನಿಗಳ ಅತಿರೇಕದ ವರ್ತನೆ

    ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟದ ಮೇಲೆ ಸಿಆರ್‌ಪಿಎಫ್ ನಿಯಂತ್ರಣ ತೆಗೆದುಕೊಂಡಿದೆ. ಇದು ಯೋಧರು ಜಮ್ಮು- ಕಾಶ್ಮೀರದಲ್ಲಿ ಮಾಡಿದ ದೊಡ್ಡ ಕೆಲಸವಾಗಿದೆ ಎಂದು ಪ್ರಶಂಸಿದರು. ಇದನ್ನೂ ಓದಿ: ಹೋಳಿ ಹಬ್ಬದಲ್ಲೂ ಕಾಶ್ಮೀರ್ ಫೈಲ್ಸ್ ಹವಾ- ಅನುಪಮ್ ಖೇರ್‌ನಂತೆ ಕಾಣಿಸಿಕೊಂಡ ಯುವಕರು

    ಕಾಶ್ಮೀರದಲ್ಲಿ ಸಿಆರ್‌ಪಿಎಫ್ ದೊಡ್ಡ ಅಸ್ತಿತ್ವವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ಸಿಆರ್‌ಪಿಎಫ್ ಸ್ಥಳೀಯ ಪೊಲೀಸರಲ್ಲದೇ, ಸೇನೆ, ಬಿಎಸ್‍ಎಫ್, ಐಟಿಬಿಪಿ ಮತ್ತು ಎಸ್‍ಎಸ್‍ಬಿ ಸಹ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ದೆಹಲಿಯ ಸಿಆರ್‌ಪಿಎಫ್ ಪ್ರಧಾನ ಕಚೇರಿಯ ಹೊರಗೆ ಪರೇಡ್ ನಡೆಯುತ್ತಿದೆ.

  • ಹಿರಿಯ-ಕಿರಿಯ ಅಧಿಕಾರಿಗಳ ಸಂಘರ್ಷ ತಡೆಗಟ್ಟಲು ಸಿಆರ್‌ಪಿಎಫ್‌ ಬೆಟಾಲಿಯನ್‌ಗಳಲ್ಲಿ ಸಂಸ್ಕಾರ ಶಾಲೆ

    ಹಿರಿಯ-ಕಿರಿಯ ಅಧಿಕಾರಿಗಳ ಸಂಘರ್ಷ ತಡೆಗಟ್ಟಲು ಸಿಆರ್‌ಪಿಎಫ್‌ ಬೆಟಾಲಿಯನ್‌ಗಳಲ್ಲಿ ಸಂಸ್ಕಾರ ಶಾಲೆ

    ನವದೆಹಲಿ: ಹಿರಿಯರು ಮತ್ತು ಕಿರಿಯರ ನಡುವಿನ ಸಂಘರ್ಷದಿಂದ ಸಿಆರ್‌ಪಿಎಫ್ ಘಟಕಗಳಲ್ಲಿ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸಲು ಸಂಸ್ಕಾರ ಶಾಲೆಗಳನ್ನು ತೆರೆಯಲು ತೀರ್ಮಾನಿಸಿದೆ.

    ದೇಶದ ಎಲ್ಲ (Central Reserve Police Force) ಸಿಆರ್‌ಪಿಎಫ್ ಬೆಟಾಲಿಯನ್‍ಗಳಲ್ಲಿ ಶಾಲೆ ಆರಂಭಿಸುವ ಬಗ್ಗೆ ಸಿಆರ್‌ಪಿಎಫ್ ಕಲ್ಯಾಣ ಇಲಾಖೆ ಎಲ್ಲ ಬೆಟಾಲಿಯನ್‌ಗಳಿಗೆ ಪತ್ರ ಕಳುಹಿಸಿದ್ದು ಶೀಘ್ರದಲ್ಲಿ ಇವು ಕಾರ್ಯಾರಂಭವಾಗಲಿದೆ. ಸಂಸ್ಕಾರ ಶಾಲಾಗಳು ಹೇಗೆ ಕಾರ್ಯನಿರ್ವಹಿಸಲಿವೆ, ಇದರ ಸ್ವರೂಪ ಹೇಗಿರಲಿದೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳು ತಿಳಿದು ಬಂದಿಲ್ಲ, ಅದಾಗ್ಯೂ ಸಂಸ್ಕಾರ ಶಾಲಾಗಳನ್ನು ಪ್ರಾರಂಭಿಸಲು ಹಿರಿಯ ಅಧಿಕಾರಿಗಳು ಎಲ್ಲ ಬೆಟಾಲಿಯನ್‍ಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ದನ್ನೂ ಓದಿ: ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ: ನಾರಾಯಣಸ್ವಾಮಿ ವಾಗ್ದಾಳಿ

    ಮಾಹಿತಿಗಳ ಪ್ರಕಾರ ಸಂಸ್ಕಾರ ಶಾಲೆಗಳಲ್ಲಿ ಹಿರಿಯರು ಮತ್ತು ಕಿರಿಯ ಅಧಿಕಾರಿಗಳ ನಡುವೆ ಬಾಂಧ್ಯವ ಹೆಚ್ಚಿಸಲು ಕಾರ್ಯ ನಡೆಯಲಿದ್ದು, ಮನಸ್ಥಾಪಗಳನ್ನು ಬದಿಗೊತ್ತುವ ಪ್ರಯತ್ನ ನಡೆಯಲಿದೆ. ಇಲ್ಲಿ ಹಿರಿಯರು ತಮ್ಮ ಅನುಭವದ ಪಾಠಗಳನ್ನು ಮಾಡಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದನ್ನೂ ಓದಿ: ಪಾದಯಾತ್ರೆ ಹಿನ್ನೆಲೆ ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

    ಸೇನೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸಿಆರ್‌ಪಿಎಫ್‌ನಲ್ಲಿ ಅನುಷ್ಠಾನಗೊಳಿಸುತ್ತಿರುವ ಐಡಿಯಾಗಳಲ್ಲಿ ‘ಸಂಸ್ಕಾರ ಶಾಲಾ’ ಕೂಡ ಒಂದಾಗಿದೆ. ಸಂಘರ್ಷವನ್ನು ತಪ್ಪಿಸಲು ಉಪಾಯ ನೀಡುವಂತೆ ಹಿಂದೆ ಕೇಳಲಾಗಿತ್ತು. ಸಂಸ್ಕಾರ ಶಾಲಾ ಮೂಲಕ ಸೈನಿಕರಿಗೆ ಸಂಸ್ಕಾರ ಹೇಳಿಕೊಡಲಿದ್ದು ಇತರೆ ಸಹೋದ್ಯೋಗಿಗಳ ಜೊತೆಗೆ ವರ್ತಿಸುವುದನ್ನು ಹೇಳಿಕೊಡಲಿದ್ದಾರೆ ಎನ್ನಲಾಗಿದೆ.

    2020ರಿಂದ ಈ ವರ್ಷ ಸೆಪ್ಟೆಂಬರ್ 13ರವರೆಗೆ 101 ಆತ್ಮಹತ್ಯೆಗಳನ್ನು CRPF ಈ ವರದಿ ಮಾಡಿದೆ.  2020ರಲ್ಲಿ 60 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಸಿಆರ್‌ಪಿಎಫ್‌ ತಿಳಿಸಿದೆ. ಈ ವರ್ಷ 41 ವರದಿಯಾಗಿದೆ. 2019ರಲ್ಲಿ 42, 2018ರಲ್ಲಿ 36 ವರದಿಯಾಗಿದೆ.