Tag: CRPF

  • ಅಮರನಾಥ ಉಗ್ರರ ದಾಳಿಯಲ್ಲಿ ಬದುಕುಳಿದ ಕನ್ನಡಿಗರು

    ಅಮರನಾಥ ಉಗ್ರರ ದಾಳಿಯಲ್ಲಿ ಬದುಕುಳಿದ ಕನ್ನಡಿಗರು

    ಕಾರವಾರ/ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಕುಟುಂಬಗಳನ್ನ ಸಿಆರ್‍ಪಿಎಫ್ ರಕ್ಷಣಾ ಸಿಬ್ಬಂದಿ ಜಮ್ಮು ಕಾಶ್ಮೀರದ ಅನಂತ್ ನಾಗ ಜಿಲ್ಲೆಯ ಬಾಟಿಂಗು ಬಳಿ ರಕ್ಷಿಸಿದ್ದಾರೆ.

    ಇದೇ ತಿಂಗಳ 5ರಂದು ಕಾರವಾರದ ಎಸ್.ಬಿ.ಎಮ್ ಮ್ಯಾನೇಜರ್ ರತ್ನಾಕರ್ ಹೆಬ್ಬಾರ್, ಮಗ ಉಲ್ಲಾಸ್ ಕುಟುಂಬ ಹಾಗೂ ಶಿರಸಿಯ ಆಶಾ ಹೆಗಡೆ, ನಾಗೇಶ್, ಕುಮಟಾದ ಕೃಷ್ಣ ಗುನಗಿ ಅಮರನಾಥ ಯಾತ್ರೆಗೆ ತೆರಳಿದ್ದರು. ಸೋಮವಾರ ಮುಂಜಾನೆ ಉಗ್ರಗಾಮಿಗಳ ದಾಳಿಗೆ ಒಳಗಾಗಿದ್ದ ಬಾಟಿಂಗು ಮಾರ್ಗವಾಗಿ ತೆರಳುತಿದ್ದಾಗ ಸಿಆರ್‍ಪಿಎಫ್ ಸಿಬ್ಬಂದಿ ಇವರನ್ನ ರಕ್ಷಿಸಿ ಅನಂತ್‍ನಾಗ್‍ನ ಸಿಆರ್‍ಪಿಎಫ್ ಕ್ಯಾಂಪ್ ನಲ್ಲಿ ವಸತಿ ಕಲ್ಪಿಸಿದ್ದಾರೆ. ಯಾತ್ರೆಗೆ ತೆರಳಿದ್ದ ಜಿಲ್ಲೆಯ ಆರು ಜನರು ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ.

    ಧಾರವಾಡ ನಗರದ 24 ಯಾತ್ರಿಗಳು ಅಮರನಾಥ ಯಾತ್ರೆಗೆ ತೆರಳಿದ್ದು, ಉಗ್ರರ ದಾಳಿಯ ಬಗ್ಗೆ ಸುದ್ದಿ ತಿಳಿದು ಇವರ ಕುಟುಂಬಗಳು ಆತಂಕಕ್ಕೀಡಾಗಿದ್ದಾರೆ. ಧಾರವಾಡದಿಂದ ಮೂರು ತಂಡಗಳಾಗಿ ಯಾತ್ರೆಗೆ ಹೋಗಿರುವ ಯಾತ್ರಾರ್ಥಿಗಳ ಮೊಬೈಲ್ ರೀಚ್ ಆಗುತ್ತಿಲ್ಲ. ಹೀಗಾಗಿ ಅವರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    ನಗರದ ಸಾಧನಕೇರೆ ನಿವಾಸಿ ಚಂದ್ರಶೇಖರ ಎನ್ನುವವರು ಕಳೆದ ಮೂರು ವರ್ಷಗಳಿಂದ ಈ ಯಾತ್ರೆಗೆ ಹೋಗುತ್ತಿದ್ದಾರೆ. ಈ ಬಾರಿ ನಾಲ್ಕನೇ ಪ್ರವಾಸಕ್ಕೆ ತೆರಳಿದ್ದು, ಅವರೂ ಕೂಡಾ ಯಾತ್ರೆಯ ವೇಳೆ ಸಿಲುಕಿದ್ದಾರೆ. ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಮುಗಿಸಿ ಅನಂತನಾಗ್ ಜಿಲ್ಲೆಗೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದ್ದು, ಅಲ್ಲಿ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಇನ್ನು ಇಲ್ಲಿ ಅವರ ಕುಟುಂಬಸ್ಥರು ಮೊಬೈಲ್ ಕರೆ ಮಾಡಿದ್ದು, ಯಾರ ಫೋನ್ ಕರೆಯೂ ಸಿಗುತ್ತಿಲ್ಲ. ಹಾಗಾಗಿ ಸತತ ಮೊಬೈಲ್ ಸಂಪರ್ಕಕ್ಕೆ ಪ್ರಯತ್ನ ನಡೆದಿದೆ.

    ಇದನ್ನೂ ಓದಿ: ಶಿವಭಕ್ತರ ಮೇಲೆ ಉಗ್ರರ ಪೈಶಾಚಿಕ ಕೃತ್ಯ – 7 ಮಂದಿ ಅಮರನಾಥ ಯಾತ್ರಿಕರ ಹತ್ಯೆ

  • ಹುತಾತ್ಮ ಯೋಧರ ಕುಟುಂಬಕ್ಕೆ 25 ಫ್ಲಾಟ್‍ಗಳನ್ನು ನೀಡಿದ ನಟ ವಿವೇಕ್ ಒಬೆರಾಯ್!

    ಹುತಾತ್ಮ ಯೋಧರ ಕುಟುಂಬಕ್ಕೆ 25 ಫ್ಲಾಟ್‍ಗಳನ್ನು ನೀಡಿದ ನಟ ವಿವೇಕ್ ಒಬೆರಾಯ್!

    ಥಾಣೆ: ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರ ಕರ್ಮ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹುತಾತ್ಮ ಸಿಆರ್‍ಪಿಎಫ್ ಯೋಧರ ಕುಟುಂಬಸ್ಥರಿಗೆ 25  ಫ್ಲಾಟ್‍ ಗಳನ್ನು ನೀಡಿದೆ.

    ಈ ಬಗ್ಗೆ ಕಂಪನಿ ವತಿಯಿಂದ ಹುತಾತ್ಮ ಯೋಧರ ಸಂಬಂಧಿಕರಿಗೆ ಪತ್ರ ಬರೆಯಲಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯೋಧರ ಕುಟುಂಬಸ್ಥರಿಗೆ  ಫ್ಲಾಟ್‍ ಗಳನ್ನು ನೀಡುವುದಾಗಿ ಪತ್ರದಲ್ಲಿ ಹೇಳಲಾಗಿದೆ. ಇದರಲ್ಲಿ 4 ಫ್ಲಾಟ್‍ಗಳನ್ನು ಈಗಾಗಲೇ ಯೋಧರ ಕುಟುಂಬಕ್ಕೆ ನೀಡಿರುವುದಾಗಿ ವರದಿಯಾಗಿದೆ.

    ಫ್ಲಾಟ್ ನೀಡಲಾಗಿರುವ ಯೋಧರ ಕುಟುಂಬಗಳ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಉಳಿದ ಯೋಧರ ಕುಟುಂಬಕ್ಕೆ ಶೀಘ್ರದಲ್ಲಿಯೇ ಫ್ಲಾಟ್‍ಗಳನ್ನು ಹಸ್ತಾಂತರ ಮಾಡಲಾಗುತ್ತದೆ ಎನ್ನಲಾಗಿದೆ.

    ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ 12 ಹುತಾತ್ಮ ಯೋಧರ ಕುಟುಂಬಸ್ಥರಿಗೆ ರೂ.1.08 ಕೋಟಿ ರೂ. ನೆರವು ನೀಡಿದ್ದರು.

    2017ರ ಮಾರ್ಚ್ 11 ರಂದು ಛತ್ತೀಸ್‍ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 219 ಬೆಟಾಲಿಯನ್‍ಗೆ ಸೇರಿದ ಸುಮಾರು 25 ಮಂದಿ ಯೋಧರು ಹುತಾತ್ಮರಾಗಿದ್ದರು.

  • ಮುಂದಿನ ವಾರ ರಜೆ ಮೇಲೆ ಬರೋದಾಗಿ ಹೇಳಿದ್ದ ಹಾವೇರಿ ಯೋಧ ಹುತಾತ್ಮ

    ಮುಂದಿನ ವಾರ ರಜೆ ಮೇಲೆ ಬರೋದಾಗಿ ಹೇಳಿದ್ದ ಹಾವೇರಿ ಯೋಧ ಹುತಾತ್ಮ

    ಹಾವೇರಿ: ಮುಂದಿನ ವಾರ ರಜೆ ಮೇಲೆ ಊರಿಗೆ ಬರೋದಾಗಿ ಹೇಳಿದ್ದ, ಯೋಧ ಇಂದು ಶವವಾಗಿ ಮನೆಗೆ ಬಂದಿದ್ದಾರೆ.

    ಆಹಾರ ಅರಸಿ ಬನ್ನೇರುಘಟ್ಟ ಅರಣ್ಯ ಕಾಡಿಗೆ ಬಂದಿದ್ದ ಕಾಡಾನೆ ದಾಳಿಗೆ ಇಬ್ಬರು ಸಿಆರ್ ಪಿಎಫ್ ಯೋಧರು ಭಾನುವಾರ ಬಲಿಯಾಗಿದ್ದರು. ಕಾಡಾನೆ ದಾಳಿಗೆ ಮೃತಪಟ್ಟ ಪುಟ್ಟಪ್ಪ ಅವರ ಪಾರ್ಥಿವ ಶರೀರ ಇಂದು ಜಿಲ್ಲೆಯ ಸವಣೂರು ತಾಲೂಕಿನ ಶಿರಬಡಗಿ ಸ್ವಗ್ರಾಮ ಬಂದು ತಲುಪಿದೆ.

    ಪುಟ್ಟಪ್ಪ ಅವರ ಸಾವಿನಿಂದ ಶಿರಬಡಗಿ ಗ್ರಾಮ ದುಃಖದಲ್ಲಿ ಮುಳುಗಿದೆ. 2005 ರಲ್ಲಿ ಸಿಆರ್ ಪಿಎಫ್ ಗೆ ಸೇರಿದ್ದ ಪುಟ್ಟಪ್ಪ, ಎರಡು ವರ್ಷಗಳ ಹಿಂದೆ ಬನ್ನೇರುಘಟ್ಟ ಶಿಬಿರ ಸೇರಿದ್ದರು. ಪುಟ್ಟಪ್ಪ ಅವರು ತಂದೆ, ತಾಯಿ, ಪತ್ನಿ ಮೂವರು ಮಕ್ಕಳು ಹಾಗೂ ಸಹೋದರರನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ.

    ಇದನ್ನೂ ಓದಿ: ಆಹಾರ ಅರಸಿ ಸಿಆರ್‍ಪಿಎಫ್ ಕ್ಯಾಂಪ್‍ಗೆ ಬಂದ ಕಾಡಾನೆಗಳ ದಾಳಿಗೆ ಇಬ್ಬರು ಯೋಧರು ಹುತಾತ್ಮ

    ಶಿರಬಡಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪುಟ್ಟಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಆಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

     

  • ಆಹಾರ ಅರಸಿ ಸಿಆರ್‍ಪಿಎಫ್ ಕ್ಯಾಂಪ್‍ಗೆ ಬಂದ ಕಾಡಾನೆಗಳ ದಾಳಿಗೆ ಇಬ್ಬರು ಯೋಧರು ಹುತಾತ್ಮ

    ಆಹಾರ ಅರಸಿ ಸಿಆರ್‍ಪಿಎಫ್ ಕ್ಯಾಂಪ್‍ಗೆ ಬಂದ ಕಾಡಾನೆಗಳ ದಾಳಿಗೆ ಇಬ್ಬರು ಯೋಧರು ಹುತಾತ್ಮ

    ಬೆಂಗಳೂರು: ಆಹಾರ ಆರಿಸಿ ಬಂದಿದ್ದ ಕಾಡಾನೆ ದಾಳಿಗೆ ಇಬ್ಬರು ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

    ಇಂದು ಬೆಳಗಿನ ಜಾವ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕಗ್ಗಲೀಪುರ ವಲಯದ ಅರಣ್ಯ ಪ್ರದೇಶದಲ್ಲಿರುವ ಸಿಆರ್‍ಪಿಎಫ್ ಸೇನಾ ಶಿಬಿರದ ಬಳಿ ಕಾಡಾನೆಗಳು ಆಹಾರಕ್ಕಾಗಿ ಲಗ್ಗೆಯಿಟ್ಟಿವೆ. ಈ ವೇಳೆ ಪುಟ್ಟಪ್ಪ (35) ಮತ್ತು ಮೂರ್ತಿ (52) ಎಂಬವರು ಆನೆಗಳ ದಾಳಿಗೆ ಸಿಲುಕಿ ದುರ್ಮರಣ ಹೊಂದಿದ್ದಾರೆ.3

    ಕಗ್ಗಲೀಪುರ ವಲಯದ ಅರಣ್ಯ ಪ್ರದೇಶದಲ್ಲಿರುವ ಸಿಆರ್‍ಪಿಎಫ್ ಸೇನಾ ಶಿಬಿರದ ಬಳಿ ಕಾಡಾನೆಗಳು ಆಹಾರಕ್ಕಾಗಿ ಬಂದಾಗ ಸಹಜವಾಗಿಯೇ ಕಾಡಾನೆಗಳಿಗೆ ನೀರು ಅಥವಾ ಆಹಾರ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆನೆಗಳು ಸ್ಥಳದಲ್ಲಿದ್ದ ಮೂರ್ತಿ ಅವರ ಮೇಲೆ ಎರಗಿವೆ. ಇದರಿಂದ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಯುವಕರಾದ ಪುಟ್ಟಪ್ಪ ಓಡಿಹೋದರೂ ಆನೆಗಳು ದಾಳಿ ನಡೆಸಿ ಪುಟ್ಟಪ್ಪರನ್ನು ಗಂಭೀರವಾಗಿ ಗಾಯಗೊಳಿಸಿದ್ದವು. ಪುಟ್ಟಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದ ಕಗ್ಗಲೀಪುರ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂರ್ತಿ ತಮಿಳುನಾಡು ಮೂಲದವರು ಮತ್ತು ಪುಟ್ಟಪ್ಪ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ.

     

  • ಪ್ರಧಾನಿ ಮೋದಿ ವಿರುದ್ಧ ರಮ್ಯಾ ಭಾರೀ ಟೀಕೆ!

    ಪ್ರಧಾನಿ ಮೋದಿ ವಿರುದ್ಧ ರಮ್ಯಾ ಭಾರೀ ಟೀಕೆ!

    ಬೆಂಗಳೂರು: ಛತ್ತೀಸ್‍ಗಢದ ಸುಕ್ಮಾದಲ್ಲಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದು, ಈ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿಯವರನ್ನು ಟ್ವಿಟ್ಟರಿನಲ್ಲಿ ಟೀಕಿಸಿದ್ದಾರೆ.

    `ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಗೋವುಗಳು, ಕಾಲೆಳೆಯುವವರು ಮಾತ್ರ ಸುರಕ್ಷಿತ. ಈ ಸರ್ಕಾರದಲ್ಲಿ ಸೇನೆ, ಪ್ರಜೆಗಳು, ಆಧಾರ್ ಕಾರ್ಡ್ ಮಾಹಿತಿಗೆ ರಕ್ಷಣೆಯೇ ಇಲ್ಲ. ಕೇಂದ್ರ ಗೃಹ ಸಚಿವಾಲಯ, ಗುಪ್ತಚರ ಇಲಾಖೆಯ ವೈಫಲ್ಯದಿಂದಲೇ ಸಿಆರ್‍ಪಿಎಫ್ ಯೋಧರ ಹುತಾತ್ಮಕ್ಕೆ ಕಾರಣ. ಮೋದಿ ಸಿಎಂ ಆಗಿದ್ದಾಗ ದೂರವಾಣಿ ಕದ್ದಾಲಿಕೆಗೆ ಆಡಳಿತ ಯಂತ್ರ ಬಳಸಿಕೊಂಡಿದ್ದರು. ಆದರೆ ಸಿಆರ್‍ಪಿಎಫ್ ಯೋಧರ ರಕ್ಷಣೆಗೆ ಆಡಳಿತ ಯಂತ್ರ ಬಳಸಿಕೊಂಡಿಲ್ಲ ಅಂತಾ ರಮ್ಯಾ  ಟೀಕಿಸಿದ್ದಾರೆ.

    ಇದನ್ನೂ ಓದಿ: ಅಭಿಮಾನಿಗಳ ಗಮನ ಸೆಳೆಯುತ್ತಿದೆ ಸುದೀಪ್, ರಮ್ಯಾ ಮಾತುಗಳು

    ಟೀಕಿಸಲು ಕಾರಣವೇನು?: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಸೋಮವಾರ ನಕ್ಸಲರು ಮತ್ತು ಯೋಧರ ಮಧ್ಯೆ ಗುಂಡಿನ ದಾಳಿ ನಡೆದಿತ್ತು. ಈ ಗುಂಡಿನ ಚಕಮಕಿಯಲ್ಲಿ 24 ಮಂದಿ ಸಿಆರ್ ಪಿ ಎಫ್ ಯೋಧರು ಹುತಾತ್ಮರಾಗಿದ್ದರು. ಇನ್ನು ಘಟನೆಯಲ್ಲಿ 6 ಮಂದಿ ಸಿಆರ್ ಪಿ ಎಫ್ ಯೋಧರು ಗಾಯಗೊಂಡಿದ್ದರು.

  • ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ: 24 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮ

    ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ: 24 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮ

    ರಾಯ್ ಪುರ್: ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ನಡೆಸಿದ ದಾಳಿಯಲ್ಲಿ 24 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

    ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿತ್ತು. ಮಧ್ಯಾಹ್ನ ನಡೆದ ಈ ಚಕಮಕಿಯಲ್ಲಿ 24 ಮಂದಿ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಘಟನೆಯಲ್ಲಿ ಆರು ಮಂದಿ ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಗಾಯಗೊಂಡವರನ್ನು ಕರೆತರಲು ಹೆಲಿಕಾಪ್ಟರ್ ಅನ್ನು ರವಾನಿಸಲಾಗಿದ್ದು, ಎನ್‍ಕೌಂಟರ್ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿದೆ.

    ಸಿಆರ್‍ಪಿಎಫ್ ಯೋಧರು ಇಲ್ಲಿನ ಅರಣ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಕ್ಸಲರು ಯೋಧರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಬೆಳಗಾವಿಯ ವೀರಯೋಧ ಬಸಪ್ಪ ಭಜಂತ್ರಿ ಅಂತ್ಯಕ್ರಿಯೆ

    ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಬೆಳಗಾವಿಯ ವೀರಯೋಧ ಬಸಪ್ಪ ಭಜಂತ್ರಿ ಅಂತ್ಯಕ್ರಿಯೆ

    ಬೆಳಗಾವಿ: ಕರ್ತವ್ಯದ ವೇಳೆ ಹುತಾತ್ಮರಾಗಿದ್ದ ಬೆಳಗಾವಿಯ ವೀರಯೋಧ ಬಸಪ್ಪ ಭಜಂತ್ರಿ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು.

    ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸಪ್ಪ ಭಜಂತ್ರಿ ಸೋಮವಾರ ಉಗ್ರರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿದ್ದರು.

    ಬಸಪ್ಪ ಅವರು ಕಳೆದ 20 ವರ್ಷಗಳಿಂದ ಸಿಆರ್‍ಪಿಎಫ್ ನಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ಶ್ರೀನಗರ ಪಟಾಣ್ ಚೌಕ್ ಬಳಿ ಯೋಧರು ಸಾಗುತ್ತಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಬಸಪ್ಪ ಅವರು ಸೇರಿದಂತೆ 10 ಜನ ಯೋಧರು ವೀರ ಮರಣವನ್ನಪ್ಪಿದ್ದರು. ಮಂಗಳವಾರ ಶ್ರೀನಗರದಿಂದ ವಿಮಾನದ ಮೂಲಕ ಗೋವಾ ಮಾರ್ಗವಾಗಿ ಹುಟ್ಟೂರಿಗೆ ತಡರಾತ್ರಿ ಪಾರ್ಥೀವ ಶರೀರ ಆಗಮಿಸಿತ್ತು. ಪಾರ್ಥೀವ ಶರೀರ ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ವೀರ ಯೋಧ ಬಸಪ್ಪ ಭಜಂತ್ರಿರಿಗೆ ಪತ್ನಿ ಹಾಗೂ ಮೂರು ಜನ ಮಕ್ಕಳಿದ್ದಾರೆ. ಬಸಪ್ಪ ಸೇವಾವಧಿಯ 20 ವರ್ಷ ಪೂರೈಸಿದ ನಂತರ ಸ್ವಯಂ ನಿವೃತ್ತಿ ಪಡೆಯಬಹುದಿತ್ತು. ಆದರೆ ಕುಟುಂಬ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಬಸಪ್ಪನ ಸ್ವಯಂ ನಿವೃತ್ತಿ ತೆಗೆದುಕೊಂಡಿರಲಿಲ್ಲ. ನಂತರ ಸೇವೆ ಮುಂದುವರಿಸಿದ ಬಸಪ್ಪ ಅವರು ಇತ್ತೀಚಿಗೆ ಮತ್ತೆ ಎರಡು ವರ್ಷ ಸೇವಾವಧಿಯನ್ನು ಮುಂದುವರೆಸಲು ಬರೆದುಕೊಟ್ಟಿದ್ದರು. ಕೊನೆಗೆ ಆ ವಿಧಿ ಸೇವೆಯಲ್ಲಿದ್ದಾಗಲೇ ಬಸಪ್ಪರನ್ನು ಇಹಲೋಕಕ್ಕೆ ಕರೆಸಿಕೊಂಡಿದೆ. ಇನ್ನೂ ಗ್ರಾಮಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಗ್ರಾಮದ ಶಾಲೆಯಲ್ಲಿ ಸಾರ್ವಜನಿಕರ ದರ್ಶಕ್ಕೆ ಇಡಲಾಗಿತ್ತು.