Tag: crpf inspector

  • ಮೋದಿ ಕಾರ್ಯಕ್ರಮದಲ್ಲಿ ಬಿಹಾರ ಸರ್ಕಾರ ಬ್ಯುಸಿ – ನಿತೀಶ್ ವಿರುದ್ಧ ಯೋಧನ ಸಂಬಂಧಿ ಕಿಡಿ

    ಮೋದಿ ಕಾರ್ಯಕ್ರಮದಲ್ಲಿ ಬಿಹಾರ ಸರ್ಕಾರ ಬ್ಯುಸಿ – ನಿತೀಶ್ ವಿರುದ್ಧ ಯೋಧನ ಸಂಬಂಧಿ ಕಿಡಿ

    ಪಾಟ್ನಾ: ಹುತಾತ್ಮ ಯೋಧರೊಬ್ಬರಿಗೆ ಬಿಹಾರದ ಸರ್ಕಾರ ಗೌರವ ಸಲ್ಲಿಸದೇ ನಿಷ್ಕಾಳಜಿ ಮೆರೆದಿದ್ದಾರೆ ಎಂದು ಯೋಧನ ಸಂಬಂಧಿಕರು ಕಿಡಿಕಾರಿದ್ದಾರೆ.

    ಬಿಹಾರ ಮೂಲದ ಸಿಆರ್‌ಪಿಎಫ್ ಇನ್ಸ್ ಪೆಕ್ಟರ್ ಪಿಂಟು ಕುಮಾರ್ ಸಿಂಗ್ ಅವರು, ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಶುಕ್ರವಾರ ಹುತಾತ್ಮರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಇಂದು ಪಾಟ್ನಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು.

    ರಾಜ್ಯದ ಯೋಧನೊಬ್ಬರ ಪಾರ್ಥಿವ ಶರೀರವನ್ನು ಸ್ವೀಕರಿಸಿ, ಅಂತಿಮ ನಮನ ಸಲ್ಲಿಸಲು ಸಿಎಂ ನಿತೀಶ್ ಕುಮಾರ್ ಬರಲಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹುತಾತ್ಮ ಯೋಧ ಪಿಂಟು ಕುಮಾರ್ ಸಿಂಗ್ ಅವರ ಸಂಬಂಧಿ ಸಂಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಕಲ್ಪ ಯಾತ್ರೆ ಬೃಹತ್ ಸಮಾವೇಶ ನಡೆದಿದೆ. ಹೀಗಾಗಿ ಎನ್‍ಡಿಎ ಮೈತ್ರಿ ಕೂಟದ ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಆದರೆ ಅಲ್ಲಿಯೇ ಇರುವ ಜೈ ಪ್ರಕಾಶ್ ನಾರಾಯಣ ವಿಮಾನ ನಿಲ್ದಾಣಕ್ಕೆ ಯಾರೊಬ್ಬರೂ ಬಂದು ಯೋಧನ ಪಾರ್ಥಿವ ಶರೀರ ಸ್ವೀಕರಿಸಿ, ಗೌರವಿಸಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

    ಪಿಂಟು ಕುಮಾರ್ ಸಿಂಗ್ ಅವರ ಪಾರ್ಥಿವ ಶರೀರ ಸ್ವೀಕರಿಸಲು ಪಾಟ್ನಾ ವಿಮಾನ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಕುಮಾರ್ ರವಿ, ಹಿರಿಯ ಪೊಲೀಸ್ ಅಧಿಕಾರಿ ಗರಿಮಾ ಮಲ್ಲಿಕ್, ಸಿಆರ್‍ಪಿಎಫ್‍ನ ಅಧಿಕಾರಿಗಳು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಜಾ, ಲೋಕ ಜನಶಕ್ತಿ ಪಕ್ಷದ ಚೌದ್ರಿ ಮೆಹಬೂಬ್ ಅಲಿ ಕೈಸರ್ ಆಗಮಿಸಿದ್ದರು. ಈ ವೇಳೆ ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

    ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲು ಬಂದಿದ್ದೇನೆ ಎಂದು ಬಿಹಾರ ಕಾಂಗ್ರೆಸ್‍ನ ಅಧ್ಯಕ್ಷ ಮದನ್ ಮೋಹನ್ ಹೇಳಿದರು.

    ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿ ನೇತೃತ್ವದ ಸಂಕಲ್ಪ ಯಾತ್ರೆಯಲ್ಲಿ ನಿರತರಾಗಿದ್ದರೆ. ಹೀಗಾಗಿ ಕನಿಷ್ಠ ಉಪ ಮುಖ್ಯಮಂತ್ರಿ ಸುನಿಲ್ ಕುಮಾರ್ ಮೋದಿ ಅವರನ್ನು ಕಳುಹಿಸಬಹುದಿತ್ತು ಎಂದು ಎನ್‍ಡಿಎ ಮೈತ್ರಿಯ ಜೆಎಲ್ ಪಕ್ಷದ ಮುಖಂಡ ಕೈಸರ್ ಅಸಮಾಧಾನ ಹೊರಹಾಕಿದ್ದಾರೆ.

    ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಬಿಹಾರ ಮೂಲದ ಇಬ್ಬರು ಸಿಆರ್‌ಪಿಎಫ್ ಯೋಧರ ಪಾರ್ಥಿವ ಶರೀರ ಸ್ವೀಕರಿಸಲು ಸಿಎಂ ನಿತಿಶ್ ಕುಮಾರ್ ಅವರು ಫೆಬ್ರವರಿ 16ರಂದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಜೊತೆಗೆ ಉಪ ಮುಖ್ಯಮಂತ್ರಿ ಸುನಿಲ್ ಕುಮಾರ್ ಮೋದಿ, ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

    ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

    ಶ್ರೀನಗರ: ಇಡೀ ದೇಶಕ್ಕೆ ದೇಶವೇ ಅಭಿನಂದನ್ ಸ್ವಾಗತಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಆದರೆ ಕಣಿವೆ ನಾಡಿನಲ್ಲಿ ಉಗ್ರರು ತಮ್ಮ ಕುತಂತ್ರಿ ಬುದ್ಧಿ ಮುಂದುವರಿಸಿದ್ದು, ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಐವರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ.

    ಉಗ್ರರು ಮತ್ತು ಸೇನಾಪಡೆಗಳ ನಡುವೆ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದು, ಓರ್ವ ನಾಗರಿಕ ಕೂಡ ಸಾವನ್ನಪ್ಪಿದ್ದಾರೆ.

    ಗುಂಡಿನ ದಾಳಿಯಲ್ಲಿ ಉಗ್ರಗಾಮಿಯೋರ್ವ ಸತ್ತಂತೆ ನಟಿಸಿದ್ದು, ಹತ್ತಿರ ಬರುತ್ತಿದ್ದ ಸೇನಾಪಡೆ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಈ ವೇಳೆ ಸಿಆರ್‍ಪಿಎಫ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇತ್ತ ಸತ್ತಂತೆ ನಟಿಸಿ ಯೋಧರನ್ನು ಕೊಂದ ಉಗ್ರ ಕೂಡ ಫಿನೀಶ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

    ಭಾರತ ಮತ್ತು ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದರೂ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿ ಬಿಟ್ಟಿಲ್ಲ. ಉಗ್ರರ ಮೂಲಕ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಶಾಂತಿ ಕದಡುತ್ತಿದೆ.

    ಗಡಿಯಲ್ಲಿನ ಕೊನೆಯ ಹಳ್ಳಿಗಳಲ್ಲಿ ವಾಸವಾಗಿರುವವರ ಭದ್ರತೆಗಾಗಿ ಪೂಂಚ್ ಸೆಕ್ಟರ್‍ನಲ್ಲಿ ಸೇನಾ ಬಂಕರ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಸೇನೆ ನಮ್ಮ ಸುತ್ತಮುತ್ತಲೇ ಇರುವುದರಿಂದ ನಮಗೆ ಪಾಕಿಸ್ತಾನ ನೀಡುತ್ತಿದ್ದ ಭೀತಿ ದೂರಾಗಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಈ ಮಧ್ಯೆ ಗಡಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿ ಹುತಾತ್ಮರಾದ ಇಬ್ಬರು ಪೈಲಟ್‍ಗಳ ಅಂತ್ಯಕ್ರಿಯೆ ಹುಟ್ಟೂರುಗಳಲ್ಲಿ ಸೇನಾ ಗೌರವದೊಂದಿಗೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv