Tag: CRPF constable

  • ಸಿಆರ್‌ಪಿಎಫ್ ಪೇದೆ ಪತ್ನಿ ಆತ್ಮಹತ್ಯೆಗೆ ಶರಣು- ಕಿರಕುಳ ಆರೋಪ

    ಸಿಆರ್‌ಪಿಎಫ್ ಪೇದೆ ಪತ್ನಿ ಆತ್ಮಹತ್ಯೆಗೆ ಶರಣು- ಕಿರಕುಳ ಆರೋಪ

    ತುಮಕೂರು: ಸಿಆರ್‌ಪಿಎಫ್ ಪೇದೆಯ ಪತ್ನಿ ನೇಣುಬೀಗಿದ ಸ್ಥಿತಿಯಲ್ಲಿ ಸಾವನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಘಟನೆ ನಡೆದಿದ್ದು, 20 ವರ್ಷದ ಗೌರಮ್ಮ ಮೃತ ದುರ್ದೈವಿ. ಮಹಿಳೆ 6 ತಿಂಗಳ ಹಿಂದಷ್ಟೇ ಸಿಆರ್‌ಪಿಎಫ್ ಪೇದೆ ರವೀಶ್ ಅವರನ್ನು ಮದುವೆಯಾಗಿದ್ದರು. ಗಂಡನ ಮನೆಯಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಂದೆ ತಾಯಿ ಆರೋಪಿಸಿದ್ದಾರೆ.

    ಮದುವೆ ಸಂದರ್ಭದಲ್ಲಿ ಕೇಳಿದಷ್ಟು ವಡವೆ ನೀಡಿ, ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಇಷ್ಟಾದರೂ ಗೌರಮ್ಮನಿಗೆ ನಿರಂತರ ಕಿರುಕುಳ ನೀಡುತಿದ್ದರು. ಇದೀಗ ಮಹಿಳೆ ಸಾವಿಗೆ ಗಂಡನ ಮನೆಯವರ ಕಿರುಕುಳ ಕಾರಣ ಗೌರಮ್ಮನನ್ನು ಚೆನ್ನಾಗಿ ಥಳಿಸಿ ಸಾಯಿಸಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಘಟನೆ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯ ಮೃತದೇಹ ಇಟ್ಟು ಗೌರಮ್ಮನ ಗಂಡನ ಮನೆಯವರು ಪರಾರಿಯಾಗಿದ್ದಾರೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಆರ್‌ಪಿಎಫ್ ಪೇದೆಯಿಂದ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ- ಮೂವರು ಸಾವು

    ಸಿಆರ್‌ಪಿಎಫ್ ಪೇದೆಯಿಂದ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ- ಮೂವರು ಸಾವು

    ಶ್ರೀನಗರ: ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ಸಿಆರ್‌ಪಿಎಫ್ ಪೇದೆಯೊಬ್ಬ ಮೂವರು ಸಹೋದ್ಯೋಗಿಗಳಿಗೇ ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್‍ಪುರ ಜಿಲ್ಲೆಯ ಸಿಆರ್‌ಪಿಎಫ್ ಕ್ಯಾಂಪ್ ಬಳಿ ನಡೆದಿದೆ.

    ಅಜಿತ್ ಕುಮಾರ್ ಬುಧವಾರ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ತನ್ನ ಮೇಲೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಉಧಮ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಐಜಿಪಿ ಎಂ.ಕೆ ಸಿನ್ಹ ತಿಳಿಸಿದ್ದಾರೆ. ಇದನ್ನೂ ಓದಿ:ಚುನಾವಣೆ ಡ್ಯೂಟಿಗೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಸಿಆರ್‌ಪಿಎಫ್‌ ಪೇದೆ

    ಕ್ಷುಲ್ಲಕ ಕಾರಣಕ್ಕೆ ನಾಲ್ವರು ಪೇದೆಗಳ ಮಧ್ಯೆ ಮಾತಿನ ಚಕಮಕಿ ಶುರುವಾಗಿತ್ತು. ಬಳಿಕ ಮಾತಿಗೆ ಮಾತು ಬೆಳೆದು ಕೋಪಗೊಂಡ ಅಜಿತ್ ಮೂವರು ಸಹೋದ್ಯೋಗಿಗಳ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡ ಪೇದೆಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  • ಚುನಾವಣೆ ಡ್ಯೂಟಿಗೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಸಿಆರ್‌ಪಿಎಫ್‌ ಪೇದೆ

    ಚುನಾವಣೆ ಡ್ಯೂಟಿಗೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಸಿಆರ್‌ಪಿಎಫ್‌ ಪೇದೆ

    ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಸಿಆರ್‌ಪಿಎಫ್‌ನ ಕಾನ್ಸ್​ಟೇಬಲ್ ಓರ್ವ ತನ್ನ ಪತ್ನಿಯನ್ನೇ ಕೊಂದ ಘಟನೆ ಛತ್ತೀಸ್‍ಗಢದ ಜಗ್ದಲ್‍ಪುರದಲ್ಲಿ ನಡೆದಿದೆ.

    ಕೋಬ್ರಾ ಬೆಟಾಲಿಯನ್‍ನ ಕಾನ್ಸ್​ಟೇಬಲ್ ಗುರುವೀರ್ ಸಿಂಗ್ ಕೊಲೆ ಮಾಡಿದ ಆರೋಪಿ. ಗುರುವೀರ್ ಸಿಂಗ್ ಸಿಆರ್‌ಪಿಎಫ್‌ನ 201 ಕೋಬ್ರಾ ಬೆಟಾಲಿಯನ್‍ನ ಹೆಡ್ ಕ್ವಾಟ್ರಸ್‍ನಲ್ಲಿ ಪತ್ನಿಯ ಜೊತೆ ವಾಸವಾಗಿದ್ದರು. ಮಾರ್ಚ್ 16ರಂದು ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಕೋಪಗೊಂಡು ಪತ್ನಿ ಅನುಪ್ರಿಯ ಗೌತಮ್‍ಳನ್ನು ಕತ್ತು ಹಿಸುಕಿ ಕಾನ್ಸ್​ಟೇಬಲ್ ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ.

    ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆ ಬಳಿಕ ನಿಜ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 301 ಹಾಗೂ 201ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.