Tag: CRPC

  • ಜು.1 ರಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿ – ಹೇಗಿದೆ ಸಿದ್ಧತೆ?

    ಜು.1 ರಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿ – ಹೇಗಿದೆ ಸಿದ್ಧತೆ?

    ನವದೆಹಲಿ: ದೇಶದಲ್ಲಿ ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ, ಇಂಡಿಯನ್ ಎವಿಡೆನ್ಸ್ ಆಕ್ಟ್ಗೆ ಗುಡ್‌ಬೈ ಹೇಳಲಾಗ್ತಿದೆ.

    ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಮತ್ತು ಭಾರತೀಯ ಸಾಕ್ಷಿ ಕಾಯ್ದೆ (Indian Evidence Act) ಜುಲೈ 1ರಿಂದ ಜಾರಿಗೆ ಬರಲಿವೆ. ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯ್ದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯ್ದೆ ಎಂದು ಬದಲಿಸಲಾಗಿದೆ. ಇದನ್ನೂ ಓದಿ: T20 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಂಪರ್‌ – ಬರೋಬ್ಬರಿ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

    ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದ್ದು, 177 ಕಲಂಗಳನ್ನ ಬದಲಿಸಲಾಗಿದೆ. ಇನ್ನೂ ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ. ಹೊಸ ಕಾನೂನುಗಳ ಬಗ್ಗೆ ವಕೀಲರ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗ್ತಿದೆ. ಇದರ ನಡುವೆಯೇ ಹೊಸ ಕಾನೂನು ಜಾರಿಗೆ ಪೊಲೀಸ್ ಇಲಾಖೆ ಸನ್ನದ್ಧವಾಗ್ತಿದೆ. ಈಗಾಗಲೇ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕಾನೂನು ತಜ್ಞರು, ಹಿರಿಯ ವಕೀಲರಿಂದ ಪೊಲೀಸರಿಗೆ ತರಬೇತಿ ಸಹ ನೀಡಲಾಗಿದೆ. ಜೊತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಾಲೆ, ಕಾಲೇಜು ಆಸ್ಪತ್ರೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶುಭಂ ಗೋಲ್ಡ್ ನಂದಿನಿ ಹಾಲಿನ ದರ 2 ರೂ. ಅಲ್ಲ, ಲೀಟರ್‌ಗೆ 4 ರೂ. ಹೆಚ್ಚಳ!

    ಹೊಸ ಕಾನೂನು.. ಏನೆಲ್ಲಾ ಬದಲಾವಣೆ..?
    * ಪೊಲೀಸ್ ಕಸ್ಟಡಿ ಗರಿಷ್ಠ ಅವಧಿ 14 ದಿನದಿಂದ 60 ದಿನಗಳವರೆಗೂ ಹೆಚ್ಚಳ
    * 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳಲ್ಲಿ ದೂರು ನೀಡಿದ 24 ಗಂಟೆಯೊಳಗೆ ಎಫ್‌ಐಆರ್
    * 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳ ತನಿಖೆಯನ್ನು 14 ದಿನದಲ್ಲಿ ಒಂದು ಹಂತಕ್ಕೆ ತರಬೇಕು
    * 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗುವ ಪ್ರಕರಣಗಳಲ್ಲಿ ಫೊರೆನ್ಸಿಕ್ ತನಿಖೆ ಕಡ್ಡಾಯ
    * ಆರ್ಥಿಕ ಅಪರಾಧ ಕೇಸ್‌ಗಳಲ್ಲಿ ಪೊಲೀಸರಿಗೆ ಸ್ಥಿರಾಸ್ತಿ-ಚರಾಸ್ತಿ ಜಪ್ತಿ ಮಾಡುವ ಅಧಿಕಾರ
    * ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಕೇಸ್.. 2 ತಿಂಗಳಲ್ಲಿ ತನಿಖೆ ಮುಗಿಸಬೇಕು
    * ರೇಪ್ ಕೇಸ್‌ಗಳಲ್ಲಿ ಸಂತ್ರಸ್ತೆ ಹೇಳಿಕೆಯನ್ನು ಆಡಿಯೋ, ವೀಡಿಯೋ ಮೂಲಕ ದಾಖಲು
    * ಪೋಕ್ಸೋ ಕೇಸ್‌ಗಳಲ್ಲಿ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಅಧಿಕಾರಿ ಕೂಡ ದಾಖಲಿಸಿಕೊಳ್ಳಬಹುದು
    * ಕ್ರಿಮಿನಲ್ ಕೇಸ್ ವಿಚಾರಣೆ.. ಕೋರ್ಟ್ ಗರಿಷ್ಠ 2-3 ವಾಯಿದೆಗಳನ್ನು ಮಾತ್ರ ನೀಡಬೇಕು
    * ತನಿಖೆ, ಕೋರ್ಟ್ ಸನ್ಸ್‌ಗಳನ್ನು ವಾಟ್ಸಪ್ ಸೇರಿ ಡಿಜಿಟಲ್ ರೂಪದಲ್ಲಿಯೇ ಕಳಿಸಬಹುದು
    * ಕೇಸ್ ನಮೂದು-ಕೋರ್ಟ್ ವಿಚಾರಣೆವರೆಗೂ ಸಂತ್ರಸ್ತರಿಗೆ ವಾಟ್ಸಪ್ ಮೂಲಕ ಪ್ರತಿಹಂತದ ಮಾಹಿತಿ
    * ರೇಡ್ ಪ್ರಕ್ರಿಯೆಯ ಕಡ್ಡಾಯ ಚಿತ್ರೀಕರಣ, 48 ಗಂಟೆಯಲ್ಲಿ ಕೋರ್ಟ್‌ಗೆ ವರದಿ ಸಲ್ಲಿಕೆ
    * ಸಂತ್ರಸ್ತರು ಠಾಣೆಗೆ ಹೋಗದೆಯೂ ಆನ್‌ಲೈನ್ ಮೂಲಕ ದೂರು ನೀಡಬಹುದು
    * ಮಹಿಳೆಯರು, ವಿಕಲಚೇತನರು, ರೋಗಿಗಳು, ಮಕ್ಕಳು, ಹಿರಿಯರು ಠಾಣೆಗೆ ಹೋಗುವ ಅಗತ್ಯವಿಲ್ಲ
    * ಈ ಐದು ವರ್ಗದ ಮಂದಿ ತಾವಿರುವ ಕಡೆಯೇ ಪೊಲೀಸರನ್ನು ಕರೆಸಬಹುದು
    * ಯಾವುದೇ ಘಟನೆಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಯಾವ ಠಾಣೆಗಾದ್ರೂ ತಿಳಿಸಬಹುದು
    * ಝೀರೋ ಎಫ್‌ಐಆರ್, ಠಾಣಾ ವ್ಯಾಪ್ತಿ ಲೆಕ್ಕಿಸದೇ ಯಾವ ಠಾಣೆಗಾದ್ರೂ ದೂರು ಸಲ್ಲಿಸಬಹುದು
    * ಆರೋಪಿಗಳ ಬಂಧನದ ಬಗ್ಗೆ ಅವರ ಸ್ನೇಹಿತರು, ಕುಟುಂಬ ಸದಸ್ಯರಿಗೆ ಪೊಲೀಸರು ತಿಳಿಸಬೇಕು
    * ಆರೋಪಿಗಳಿಗೆ, ಸಂತ್ರಸ್ತರಿಗೆ ಎಫ್‌ಐಆರ್ ಕಾಪಿ ಉಚಿತವಾಗಿ ನೀಡಬೇಕು.
    * ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗುವವರಿಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು.

  • ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

    ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

    ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಸಿಆರ್‌ಪಿಸಿ (CrPC) ಹಾಗೂ ಇಂಡಿಯನ್ ಎವಿಡೆನ್ಸ್ ಕಾಯಿದೆಯನ್ನು ಬದಲಿಸುವ ಮೂರು ಹೊಸ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

    ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಕೆಡೆಟ್‍ಗಳ ಪಾಸಿಂಗ್ ಔಟ್ ಪರೇಡ್‍ನಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಮಾಡಿದ ಕಾನೂನುಗಳನ್ನು ತ್ಯಜಿಸುತ್ತಿದೆ. ಈಗ ಹೊಸ ಆತ್ಮವಿಶ್ವಾಸ ಮತ್ತು ಹೊಸ ಭರವಸೆಗಳೊಂದಿಗೆ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ನಾಯಕರ ಭೇಟಿಗೆ ಆಗಮಿಸಿದ್ದ DVSಗೆ ತೀವ್ರ ನಿರಾಸೆ

    ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಮೂರು ಹೊಸ ಮಸೂದೆಗಳನ್ನು ಪರಿಶೀಲಿಸುತ್ತಿದೆ. ಪರಿಶೀಲನೆ ಬಳಿಕ ಅಂಗೀಕರಿಸಲಾಗುತ್ತದೆ. ಹೊಸ ಕಾನೂನುಗಳು ಜನರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

    ಮಹಿಳಾ ಐಪಿಎಸ್ ಕೆಡೆಟ್‍ಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ (Narendra Modi )ಅವರ ನಾಯಕತ್ವದಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ನಾಯಕ ಡಿಕೆಶಿ ಸಿಎಂ ಆಗ್ತಾರೆ, 70 ಶಾಸಕರ ಬೆಂಬಲವಿದೆ: ಶಿವಗಂಗಾ ಬಸವರಾಜ್ ಬಾಂಬ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    ಸೂರಜ್‌ಕುಂಡ್: ಭಾರತೀಯ ದಂಡ ಸಂಹಿತೆ (IPC) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶೀಗ್ರವೇ ಸದನದಲ್ಲಿ ಹೊಸ ಕರಡನ್ನು ಮಂಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

    ಹರಿಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ಭಾರತೀಯ ದಂಡ ಸಂಹಿತೆ (IPC) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಸುಧಾರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ಸ್ವೀಕರಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಎರಡೂ ಶಾಸನಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಸದನದಲ್ಲಿ ಹೊಸದಾಗಿ ಕರಡು ಮಂಡಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರೆನ್ಸಿ ನೋಟುಗಳಲ್ಲಿರಲಿ ಗಣೇಶ, ಲಕ್ಷ್ಮೀ ಚಿತ್ರ – ಮೋದಿಗೆ ಕೇಜ್ರಿವಾಲ್ ಪತ್ರ

    ಐಪಿಸಿ, ಸಿಆರ್‌ಪಿಸಿ ಸುಧಾರಣೆಗಳಿಗಾಗಿ ಸಾಕಷ್ಟು ಸಮಯ ವಿನಿಯೋಗಿಸಿದ್ದು, ಆಳವಾಗಿ ಅಧ್ಯಯನ ಮಾಡಲಾಗುತ್ತಿದೆ. ಭಾರತದಲ್ಲಿ ಕ್ರಿಮಿನಲ್ ಕಾನೂನು (Law) ಸುಧಾರಣೆ ಶಿಫಾರಸ್ಸು ಮಾಡುವಂತೆ ಗೃಹ ಸಚಿವರು 2020ರ ಮೇನಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ದೆಹಲಿಯ ಕಾನೂನು ವಿಶ್ವವಿದ್ಯಾಲಯದ (Delhi Law University) ಕುಲಪತಿ ಪ್ರೊ. ರಣಬೀರ್ ಸಿಂಗ್ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

    ಸಮಿತಿ ರಚಿಸಿದಾಗ ವೈವಿಧ್ಯತೆ ಮತ್ತು ಪಾರದರ್ಶಕತೆ ಕೊರತೆಯ ಹಿನ್ನೆಲೆಯಲ್ಲಿ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸಮಿತಿಯು ಎಲ್ಲಾ ರೀತಿಯ ಅಭಿಪ್ರಾಯ ಮತ್ತು ಸಲಹೆಗಳನ್ನು ಗೌರವಿಸುವುದಾಗಿ ಹೇಳಿತ್ತು. ಪಾರದರ್ಶಕತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಹೇಳಿತ್ತು. ಹಾಗಾಗಿ ಸೂಕ್ತ ಸಲಹೆಗಳನ್ನು ಸ್ವೀಕರಿಸಿದ್ದು, ಶೀಘ್ರದಲ್ಲೇ ಕರಡು ಮಂಡಿಸುವುದಾಗಿ ಅವರು ಘೋಷಿಸಿದ್ದಾರೆ.

    ಪ್ರತಿ ರಾಜ್ಯದಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇಂದ್ರ ಆರಂಭಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀ ಕೇಸ್ – ಜಡ್ಜ್ ಮುಂದೆ ಹೇಳಿಕೆ ನೀಡಿದ ವಿದ್ಯಾರ್ಥಿಗಳು

    ಮುರುಘಾ ಶ್ರೀ ಕೇಸ್ – ಜಡ್ಜ್ ಮುಂದೆ ಹೇಳಿಕೆ ನೀಡಿದ ವಿದ್ಯಾರ್ಥಿಗಳು

    ಚಿತ್ರದುರ್ಗ: ಮುರುಘಾ ಶ್ರೀಗಳ ಮೇಲಿನ ಪೋಕ್ಸೋ ಕೇಸ್ ತನಿಖೆ ತೀವ್ರಗೊಂಡಿದೆ. ಪ್ರಕರಣ ವರದಿಯಾದ ಮೂರು ದಿನಗಳ ಬಳಿಕ ಸಂತ್ರಸ್ತ ಬಾಲಕಿಯರನ್ನು ಪೊಲೀಸರು ಚಿತ್ರದುರ್ಗದ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.

    CRPC 164 ಅಡಿ ಸಂತ್ರಸ್ತರು, ಮಹಿಳಾ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ಸಂತ್ರಸ್ತ ಬಾಲಕಿಯರ ರಕ್ತದ ಮಾದರಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಸದ್ಯ ಮುಚ್ಚಿದ ಲಕೋಟೆಯಲ್ಲಿರುವ ಸಂತ್ರಸ್ತರ ಹೇಳಿಕೆಯನ್ನು ಗೌಪ್ಯವಾಗಿ ಇರಿಸಲಾಗಿದೆ. ಸಂತ್ರಸ್ತ ಬಾಲಕಿಯರ ಈ ಹೇಳಿಕೆ ಮೇಲೆ ಮುರುಘಾ ಶರಣರ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಮುಂದಿನ ಪೀಳಿಗೆ ಭವಿಷ್ಯವನ್ನು ಉಜ್ವಲಗೊಳಿಸಲಿದೆ: ರಾಜ್ಯಪಾಲರು

    ಇಂದು ಕೋರ್ಟ್ ಮುಂದೆ ಪರ-ವಿರೋಧಿ ಪ್ರತಿಭಟನೆಗಳು ನಡೆದಿದ್ದು, ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯ್ತು. ಈ ಮಧ್ಯೆ, ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿರುವ ಕಾರಣ ಶ್ರೀಗಳ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಈ ಮಧ್ಯೆ, 20ಕ್ಕೂ ಹೆಚ್ಚು ಸ್ವಾಮೀಜಿಗಳು ಸುದ್ದಿಗೋಷ್ಟಿ ನಡೆಸಿ, ಮುರುಘಾ ಮಠದ ಶ್ರೀಗಳಿಗೆ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್‌

    ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿವಿಧ ಮಠದ ಶ್ರೀಗಳು, ಮುರುಘಾ ಶರಣರು ಮಕ್ಕಳು ದೇವರ ಸಮಾನ ಎಂದು ತಿಳಿದಿರುವವರು, ಅವರು ನಾಡಿನ ಗಮನ ಸೆಳೆದಿದ್ದಾರೆ. ಬಹಳ ಮುಂಚೂಣಿಯಲ್ಲಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮೀಜಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳು ಖಂಡಿತಾಗಿಯೂ ಈ ಪ್ರಕರಣದಿಂದ ಹೊರ ಬರ್ತಾರೆ, ಸತ್ಯಕ್ಕೆ ಜಯವಾಗುತ್ತದೆ ಎಂದು ಎಲ್ಲಾ ಮಠಾಧೀಶರು ಶ್ರೀಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈಯಲ್ಲಿ ಜೂನ್ 30ರವರೆಗೂ 144 ಸೆಕ್ಷನ್ ಜಾರಿ

    ಮುಂಬೈಯಲ್ಲಿ ಜೂನ್ 30ರವರೆಗೂ 144 ಸೆಕ್ಷನ್ ಜಾರಿ

    ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸರ್ಕಾರ ರಕ್ಷಿಸುವ ನಿಟ್ಟಿನಲ್ಲಿ ಶಿವಸೇನೆಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದು, ಸಭೆಯಲ್ಲಿ ಮುಂದಿನ ಕ್ರಮದ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಥಾಣೆ, ಮುಂಬೈನಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಯಾಗಿದೆ.

    ಜೂನ್ 30ರ ವರೆಗೂ 144 ಸೆಕ್ಷನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಮೆರವಣಿಗೆ, ಘೋಷಣಾ ವಾಕ್ಯಗಳು ಕೂಗುವುದು, ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಿವಸೇನೆ ಹೆಸರು ಬಳಸದಂತೆ ಶಿಂಧೆಗೆ ಠಾಕ್ರೆ ಸವಾಲ್ – 16 ರೆಬೆಲ್ ಶಾಸಕರಿಗೆ ನೊಟೀಸ್

    ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಮೆರವಣಿಗೆ, ಸಭೆ ಅಥವಾ ಘೋಷಣೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಮುಂಬೈ ಪೊಲೀಸರು ನಗರದ ಎಲ್ಲ ರಾಜಕೀಯ ಕಚೇರಿಗಳ ಭದ್ರತೆ ಬಗ್ಗೆ ಖಚಿತಪಡಿಸಿಕೊಳ್ಳಲು ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿ ಮಟ್ಟದ ಪೊಲೀಸ್ ಸಿಬ್ಬಂದಿ ಪ್ರತಿ ರಾಜಕೀಯ ಕಚೇರಿಗೆ ಭೇಟಿ ನೀಡಿ ಭದ್ರತೆ ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಇನ್ಸ್‌ಪೆಕ್ಟರ್

    https://twitter.com/s_somen/status/1540619804620382208?ref_src=twsrc%5Etfw%7Ctwcamp%5Etweetembed%7Ctwterm%5E1540619804620382208%7Ctwgr%5E%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fmaharashtra-political-crisis-after-thane-section-144-imposed-in-mumbai

    ಶಿವಸೇನೆ ಶಾಸಕ ಏಕನಾಥ ಶಿಂಧೆ ಹಾಗೂ ಅವರ ಬೆಂಬಲಿಗರ ಬಂಡಾಯದಿಂದ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಇದರಿಂದ ಆಕ್ರೋಶಗೊಂಡಿರುವ ಶಿವಸೇನೆ ಕಾರ್ಯಕರ್ತರು ಹಲವೆಡೆ ದಾಂಧಲೆ ನಡೆಸಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಶಿಂಧೆ ಬೆಂಬಲಿಗರ ಫ್ಲೆಕ್ಸ್ ಬೋರ್ಡ್‌ಗಳ ಮೇಲೆ ಸೇನಾ ಕಾರ್ಯಕರ್ತರು ದಾಳಿ ನಡೆಸಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ.

    ಇಂದು ಸಭೆ ನಡೆಯುತ್ತಿದ್ದು, ಬಂಡಾಯ ಶಾಸಕರ ವಿರುದ್ಧ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚೆಗಳು ನಡೆಯಲಿವೆ ಎನ್ನಲಾಗುತ್ತಿದೆ. ಸಭೆ ಬಳಿಕ 16 ಬಂಡಾಯ ಶಿವಸೇನೆ ಶಾಸಕರಿಗೆ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಬಂಡಾಯ ನಾಯಕ ಏಕನಾಥ್ ಶಿಂಧೆ ಬಣಕ್ಕೆ ಮತ್ತೋರ್ವ ಶಾಸಕ ಸೇರಿಕೊಂಡಿದ್ದು, ಅಸ್ಸಾಂ ರಾಜಧಾನಿಯಲ್ಲಿ ಬೀಡುಬಿಟ್ಟ ಶಿವಸೇನೆ ಶಾಸಕರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಅರ್ಹನತೆ ಭೀತಿಯಿಂದ (56ರ ಶಾಸಕರಲ್ಲಿ 3ನೇ ಎರಡರಷ್ಟು ಸಂಖ್ಯೆ 37) ಶಾಸಕರು ಪಾರಾಗಿದ್ದಾರೆ. ಇದರೊಂದಿಗೆ ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟ ಹೊಂದಿರುವ ಉದ್ಧವ್ ಠಾಕ್ರೆ ಮುಖ್ಯಂತ್ರಿಯಾಗಿರುವ ಸರ್ಕಾರ ಪತನಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇದರೊಂದಿಗೆ ಶಿಂಧೆ ಬಣದಲ್ಲಿರುವ ಶಾಸಕರ ಸಂಖ್ಯೆ ಪಕ್ಷೇತರರೂ ಸೇರಿ 50ಕ್ಕೆ ಏರಿಕೆಯಾಗಿದೆ.

    Live Tv

  • ಅತ್ಯಾಚಾರ ಪ್ರಕರಣ ದಾಖಲಿಸಿ, ರದ್ದುಗೊಳಿಸಲು ನ್ಯಾಯಾಲಯಕ್ಕೆ ತರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು – ಹೈಕೋರ್ಟ್‌

    ಅತ್ಯಾಚಾರ ಪ್ರಕರಣ ದಾಖಲಿಸಿ, ರದ್ದುಗೊಳಿಸಲು ನ್ಯಾಯಾಲಯಕ್ಕೆ ತರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು – ಹೈಕೋರ್ಟ್‌

    ನವದೆಹಲಿ: ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿ, ಅವುಗಳನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ತರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

    ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ), 354 (ಮಹಿಳೆಯ ಮೇಲೆ ಹಲ್ಲೆ) ಮತ್ತು 498-A (ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವ ಪತಿ ಅಥವಾ ಪತಿಯ ಸಂಬಂಧಿ) ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ಪಟ್ಟಿದೆ. ಇದನ್ನೂ ಓದಿ: ಕುತುಬ್ ಮಿನಾರ್ ಮಸೀದಿಯಲ್ಲಿ ನಮಾಜ್ ತಡೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೋರ್ಟ್ ನಕಾರ

    ಕಕ್ಷಿದಾರ ಮಹಿಳೆಯೊಬ್ಬರು ‌ಸೆಕ್ಷನ್‌ 376, 354 ಮತ್ತು 498-A ಅಡಿಯಲ್ಲಿ ತನ್ನ ಮಾವನ ವಿರುದ್ಧ ದಾಖಲಿಸಿದ್ದ FIR ಅನ್ನು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ರದ್ದುಗೊಳಿಸಿದ ಈ ಅಭಿಪ್ರಾಯ ಪಟ್ಟಿದ್ದಾರೆ.

    ಸಾಮಾನ್ಯವಾಗಿ IPC ಸೆಕ್ಷನ್ 376ರ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳನ್ನು ರದ್ದುಗೊಳಿಸಬಾರದು, ಅವರನ್ನು ಸಮಾಜದ ವಿರುದ್ಧ ಅಪರಾಧಿಗಳೆಂದು ಪರಿಗಣಿಸಬೇಕು. ಹೀಗಿದ್ದೂ ಮಹಿಳೆಯ ಭವಿಷ್ಯದ ಮೇಲೆ ಅವಲಂಬಿತವಾದಾಗ, ಆಕೆ ತನ್ನನ್ನು ಅತ್ಯಾಚಾರ ಎಸಗಿಲ್ಲ ಎಂದು ಹೇಳಿದಾಗ ಎಫ್‌ಐಆರ್‌ ರದ್ದುಗೊಳಿಸುವುದು ನಮ್ಮ ಹಿತಾಸಕ್ತಿಯಾಗಿದೆ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಹಲವು ದೇಶಗಳಲ್ಲಿ ಬ್ಯಾನ್ : ಭಾರತದ ಹೆಸರು ಕೆಡಿಸುವ ಹುನ್ನಾರ ಎಂದ ನಿರ್ದೇಶಕ

    STOP RAPE

    ಐಪಿಸಿಯ ಸೆಕ್ಷನ್ 376, 377, 498-A ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಇದೇ ಸೆಕ್ಷನ್‌ ಅಡಿಯಲ್ಲಿ ಚಾರ್ಜ್‌ ಶೀಟ್‌ ಸಹ ಸಲ್ಲಿಸಲಾಗಿದೆ. ಆದರೆ ಅಪರಾಧ ಪ್ರಕ್ರಿಯಾ ಸಂಹಿತೆಯ (CRPC) ಸೆಕ್ಷನ್ 164ರ ಅಡಿಯಲ್ಲಿ ನೀಡಿದ ಹೇಳಿಕೆಯಲ್ಲಿ ದೂರುದಾರರು ತನ್ನ ಮಾವ ಅತ್ಯಾಚಾರ ಪ್ರಯತ್ನ ಮಾತ್ರ ಮಾಡಿದ್ದಾರೆ ಅತ್ಯಾಚಾರ ಮಾಡಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ.

    ತನ್ನ ಸ್ವಂತ ಇಚ್ಛೆಯಿಂದ ಆಕೆ ರಾಜಿ ಮಾಡಿಕೊಂಡಿದ್ದಾರೆ. ಇದರಿಂದ ಎಫ್‌ಐಆರ್ ರದ್ದುಗೊಳಿಸಲು ಯಾವುದೇ ಅಭ್ಯಂತರವಿಲ್ಲ ಎಂದು ದೂರುದಾರರು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ಜೂನ್ 13 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್

    court

    ದೂರುದಾರರು ರಾಜಿ ಮಾಡಿಕೊಳ್ಳಲು 10 ಲಕ್ಷ ರೂ. ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸ್ವೀಕರಿಸಿದ್ದಾರೆ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸುವುದು ಸೂಕ್ತವೆಂದು ನ್ಯಾಯಾಲಯ ಪರಿಗಣಿಸಿತು. ಅಲ್ಲದೆ ಅರ್ಜಿದಾರರಿಗೆ ಒಂದು ವಾರದೊಳಗೆ ದೆಹಲಿ ಹೈಕೋರ್ಟ್ ವಕೀಲರ ಕಲ್ಯಾಣ ನಿಧಿಗೆ 12,500 ರೂ ಮೊತ್ತವನ್ನು ಠೇವಣಿ ಮಾಡುವಂತೆ ಸೂಚಿಸಿತು.

    ಯಾವುದೇ ಪ್ರಕರಣವು ಮುಕ್ತಾಯವಾಗುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಅಲ್ಲದೆ ಇದು ವಿಚಾರಣೆಯನ್ನು ಕಡಿಮೆ ಮಾಡುತ್ತದೆ ಎಂದು ನ್ಯಾಯಮೂರ್ತಿ ಶರ್ಮಾ ದೂರುದಾರರ ನಿಲುವನ್ನು ಶ್ಲಾಘಿಸಿದರು. ಅರ್ಜಿದಾರರ ಪರ ವಕೀಲರಾದ ಅಭಿಷೇಕ್ ಶರ್ಮಾ, ರಾಹುಲ್ ಶರ್ಮಾ ಮತ್ತು ಹಿರಿಯ ವಕೀಲ ಅರುಣ್ ಭಾರದ್ವಾಜ್ ವಾದ ಮಂಡಿಸಿದ್ದರು.

  • ಒಮ್ಮೆ ನಡೆಸುವ ವ್ಯಭಿಚಾರಕ್ಕಾಗಿ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

    ಒಮ್ಮೆ ನಡೆಸುವ ವ್ಯಭಿಚಾರಕ್ಕಾಗಿ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

    ನವದೆಹಲಿ: ಯಾವಾಗಲಾದರೂ ಒಮ್ಮೆ ಪ್ರತ್ಯೇಕವಾಗಿ ನಡೆಸುವ ವ್ಯಭಿಚಾರವು, ವ್ಯಭಿಚಾರದ ಜೀವನವೆಂದು (ಲಿವಿಂಗ್ ಇನ್ ಅಡಲ್ಟ್ರಿ) ಪರಿಗಣನೆಯಾಗುವುದಿಲ್ಲ. ಹಾಗಾಗಿ, ವಿಚ್ಛೇದನದ ಬಳಿಕವೂ ಮಹಿಳೆಯನ್ನು ಜೀವನಾಂಶದಿಂದ ದೂರವಿಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

    ವಿಚ್ಛೇದನದ ಬಳಿಕ ಸಿಆರ್‌ಪಿಸಿ (ಕ್ರಿಮಿನಲ್‌ ಪ್ರೊಸಿಜರ್‌ ಕೋಡ್‌) ಸೆಕ್ಷನ್ 125ರ ಅಡಿ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. ಇದನ್ನೂ ಓದಿ: ಸಲಿಂಗಿಗಳ ಮದುವೆ ಮಾನ್ಯತೆ ಮನವಿ ತಿರಸ್ಕರಿಸಿದ ಹೈಕೋರ್ಟ್

    COURT (2)

    ನಿರಂತರವಾಗಿ ನಡೆಸುವ ವ್ಯಭಿಚಾರ ಅಥವಾ ವ್ಯಭಿಚಾರಕ್ಕಾಗಿಯೇ ಒಟ್ಟಾಗಿ ಇರುವುದಕ್ಕೆ ಕಠಿಣ ಸಿಆರ್‌ಪಿಸಿ ಸೆಕ್ಷನ್ 125 (4) ಅನ್ವಯಿಸುತ್ತದೆ ಎಂದು ದೇಶದ ಹಲವು ಹೈಕೋರ್ಟ್ಗಳು ಹೇಳಿವೆ ಎಂದು ನ್ಯಾಯಾಲಯ ಹೇಳಿದೆ.

    ವ್ಯಭಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್ಗಳು ತೀರ್ಪನ್ನು ನೀಡಿದ್ದು, ಪತ್ನಿಗೆ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದ ವಿಚಾರವನ್ನು ಪರಿಹರಿಸಿವೆ. ಸಿಆರ್‌ಪಿಸಿ ಸೆಕ್ಷನ್ 125(4) ಅನ್ನು ಅನ್ವಯಿಸಲು ಪತಿಯು ಪತ್ನಿ ಪೂರ್ಣ ವ್ಯಭಿಚಾರದಲ್ಲಿ ಭಾಗಿಯಾಗಿದ್ದಾಳೆ ಎಂಬುದನ್ನು ಪತಿಯೂ ಸಾಕ್ಷಿಯಿಂದ ಸಾಬೀತುಪಡಿಸಬೇಕು. ಹೀಗಾಗಿ, ಯಾವಾಗಲಾದರೊಮ್ಮೆ ಏಕಾಂತದಲ್ಲಿ ನಡೆಸಿದ ವ್ಯಭಿಚಾರವು, ವ್ಯಭಿಚಾರದ ಬದುಕು ಆಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಸಿಕ್ಕಿಬೀಳುವ ಗ್ರಾಹಕರನ್ನು ಬಂಧಿಸುವಂತಿಲ್ಲ: ಹೈಕೋರ್ಟ್‌

    COURT (1)

    ಸಿಆರ್‌ಪಿಸಿ ಸೆಕ್ಷನ್ 125 ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶ ಪಡೆಯಲು ಅವಕಾಶ ಮಾಡಿಕೊಡುತ್ತದೆ. ಅದಾಗ್ಯೂ, ಪತ್ನಿಯು ಲಿವಿಂಗ್ ಇನ್ ವ್ಯಭಿಚಾರದಲ್ಲಿದ್ದರೆ, ಪ್ರತ್ಯೇಕವಾಗಿದ್ದರೆ ಅಥವಾ ಸಕಾರಣವಿಲ್ಲದೇ ತನ್ನ ಪತಿಯ ಜೊತೆ ನೆಲೆಸಲು ಪತ್ನಿ ನಿರಾಕರಿಸಿದರೆ ಆಗ ಆಕೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ಪ್ರಕಟಿಸಿದೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು

    ಅರ್ಜಿದಾರರ ಪರ ವಕೀಲರಾದ ಅಣ್ಣು ನರುಲಾ, ವಿಶಾಲ್ ಸಿಂಗ್, ರವಿಕುಮಾರ್ ಮತ್ತು ಶಿವ ಚೌಹಾಣ್ ವಾದ ಮಂಡಿಸಿದರೆ, ಪ್ರತಿವಾದಿ ಪರ ವಕೀಲ ಎಂ ಶಮಿಖ್ ವಾದ ಮಂಡಿಸಿದ್ದರು.

  • ವರ್ಗಾವಣೆ ಕೇಳಲು ಹೋದ ಶಿಕ್ಷಕಿಯನ್ನು ಸೇವೆಯಿಂದಲೇ ವಜಾಗೊಳಿಸಿದ ಉತ್ತರಾಖಂಡ್ ಸಿಎಂ

    ವರ್ಗಾವಣೆ ಕೇಳಲು ಹೋದ ಶಿಕ್ಷಕಿಯನ್ನು ಸೇವೆಯಿಂದಲೇ ವಜಾಗೊಳಿಸಿದ ಉತ್ತರಾಖಂಡ್ ಸಿಎಂ

    ಡೆಹ್ರಾಡೂನ್: ನನಗೆ ವರ್ಗಾವಣೆ ಬೇಕು ಮಾಡಿಕೊಡಿ ಎಂದು ವಿನಂತಿಸಿಕೊಳ್ಳಲು ಹೋಗಿದ್ದ ಶಾಲಾ ಮುಖ್ಯ ಶಿಕ್ಷಕಿಯೋರ್ವರನ್ನು ಸೇವೆಯಿಂದ ಅಮಾನತುಗೊಳಿ ಅವರನ್ನು ಬಂಧನಕ್ಕೊಳಪಡಿಸುವಂತೆ ಉತ್ತಾರಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪೊಲೀಸರಿಗೆ ಆದೇಶ ನೀಡಿದ್ದಾರೆ.

    ಡೆಹ್ರಾಡೂನ್‍ನಲ್ಲಿ ಗುರುವಾರ ಮಧ್ಯಾಹ್ನ ಜನತಾ ದರ್ಬಾರ್ ಆಯೋಜನೆಗೊಂಡಿತ್ತು. ಈ ವೇಳೆ ಶಿಕ್ಷಕಿಯೊಬ್ಬರು ವರ್ಗಾವಣೆ ನೀಡುವಂತೆ ಕೇಳಿಕೊಂಡಿದ್ದಾರೆ. ನಾನು 25 ವರ್ಷಗಳ ಕಾಲ ಕುಗ್ರಾಮದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿ ಅವಾಚ್ಯ ಪದಗಳನ್ನು ಬಳಸಿ ವರ್ಗಾವಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಸ್ಥಳದಲ್ಲಿ ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಸಿಟ್ಟಾದ ಸಿಎಂ ಆಕೆಯನ್ನು ಸೇವೆಯಿಂದಲೇ ಅಮಾನತುಗೊಳಿಸಿ ಬಂಧಿಸುವಂತೆ ಆದೇಶಿಸಿದ್ದಾರೆ.

    ಏನಿದು ಘಟನೆ?
    57 ವರ್ಷದ ಉತ್ತರ ಬಹುಗುಣ ಅವರು ಉತ್ತರಕಾಶಿ ಜಿಲ್ಲೆಯ ನೌಗಾಂವ್ ಪ್ರದೇಶದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, 25 ವರ್ಷಗಳಿಂದ ಕುಗ್ರಾಮದಲ್ಲಿಯೇ ಕೆಲಸ ಮಾಡಿದ್ದೇನೆ. ಈಗ ನನ್ನನ್ನು ವರ್ಗಾವಣೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ಸಿಎಂ ಮರು ಪ್ರಶ್ನೆ ಹಾಕಿದಾಗ ಶಿಕ್ಷಕಿ, ಅವಾಚ್ಯ ಪದ ಬಳಸಿ ಸಿಎಂ ರೊಂದಿಗೆ ವಾದಿಸಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡು ಕೋಪಗೊಂಡ ಸಿಎಂ ರಾವತ್ ಮೈಕಿನಲ್ಲಿ ಜೋರಾಗಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಬಂಧಿಸಿ ಎಂದು ಪೊಲೀಸರಿಗೆ ಆದೇಶಿಸಿದ್ದಾರೆ.

    ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಬಹುಗುಣ ಅವರನ್ನು ಪೊಲೀಸರು ಸ್ಥಳದಲ್ಲೇ ಸಿಆರ್ ಪಿಸಿ ಸೆಕ್ಷನ್ 151 ಅಡಿಯಲ್ಲಿ ಬಂಧಿಸಿದ್ದಾರೆ. ನಂತರ ಗುರುವಾರ ಸಂಜೆ ಅವರನ್ನು ಬಿಡುಗಡೆಗೊಳಿಸಿದ್ದಾರೆ.

    ಘಟನೆ ಬಳಿಕ ಮಾತನಾಡಿದ ಸಿಎಂ ರಾವತ್, ಈ ವೇದಿಕೆ ಸಾರ್ವಜನಿಕರಿಗಾಗಿಯೇ ರೂಪಿಸಲಾಗಿದೆ. ವರ್ಗಾವಣೆ ಬೇಕಿದ್ದರೆ ಅದನ್ನು ಕೇಳುವುದಕ್ಕೆ ಒಂದು ವ್ಯವಸ್ಥಿತ ಪ್ರಕ್ರಿಯೆ ಇದೆ. ಸರ್ಕಾರಿ ಸಿಬ್ಬಂದಿಗಳ ವರ್ಗಾವಣೆಯನ್ನು ರಾಜ್ಯದ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

    ಈ ಘಟನೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉತ್ತರ ಬಹುಗುಣ, ನನಗೆ ಕೆಲಸ ಮಾಡಲು ಯಾವುದೇ ಸಮಸ್ಯೆಯಿಲ್ಲ. ಆದರೆ 25 ವರ್ಷದಿಂದ ನಾನು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಉತ್ತರಕಾಶಿಯ ಹಳ್ಳಿಯಲ್ಲಿ ಕೆಲಸ ಮಾಡುವ ಮುನ್ನ ಅದೇ ಜಿಲ್ಲೆಯ ಚಿನ್ಯಾಲಿಸೌರ್ ಎಂಬ ಕುಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಆಗ ನನ್ನ ಪತಿ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ 2017ರ ಆಗಸ್ಟ್ ನಲ್ಲಿ ನನ್ನ ಪತಿ ತೀರಿಹೋದರು. ಈಗ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ. ನನಗೂ ವಯಸ್ಸಾಗಿದೆ ಅಂತಹ ಕುಗ್ರಾಮದಲ್ಲಿ ಕೆಲಸ ನಿರ್ವಹಿಸಲು ಆಗುವುದಿಲ್ಲ. ಈ ಕಾರಣಕ್ಕೆ ನಾನು ವರ್ಗಾವಣೆ ಮಾಡುವಂತೆ ಸಿಎಂ ಕಾರ್ಯಕ್ರಮಕ್ಕೆ ಆಗಮಿಸಿದ್ದೆ ಎಂದು ತಿಳಿಸಿದರು.