Tag: Crores

  • ಸಿನಿಮಾಗೆ 2 ಕೋಟಿ, ಟಿವಿಗೆ ಹೋದರೆ 3 ಕೋಟಿ ಸಂಭಾವನೆ ಪಡೆಯುತ್ತಾರಂತೆ ಜಗ್ಗೇಶ್: ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ

    ಸಿನಿಮಾಗೆ 2 ಕೋಟಿ, ಟಿವಿಗೆ ಹೋದರೆ 3 ಕೋಟಿ ಸಂಭಾವನೆ ಪಡೆಯುತ್ತಾರಂತೆ ಜಗ್ಗೇಶ್: ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ

    ಸಾಮಾನ್ಯವಾಗಿ ನಟ ನಟಿಯರ ಸಂಭಾವನೆ ವಿಚಾರ ಆದಷ್ಟು ಗುಟ್ಟಾಗಿಯೇ ಇರುತ್ತದೆ. ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸುವುದಕ್ಕೆ ಇಷ್ಟ ಪಡುವುದಿಲ್ಲ. ಸಂಭಾವನೆ ವಿಚಾರ ಸದಾ ಗಾಸಿಪ್ ನಂತೆಯೇ ತೇಲು ಬರುತ್ತದೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ತಮ್ಮ ಸಂಭಾವನೆ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದಾರೆ. ತಾವು ಎಷ್ಟು ಸಂಭಾವನೆ ಪಡೆಯುತ್ತೇನೆ ಎನ್ನುವುದನ್ನು ತಿಳಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾದ ಪ್ರೆಸ್ ಮೀಟ್ ಆಯೋಜನೆ ಆಗಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಜಗ್ಗೇಶ್, ‘ಸಂಭಾವನೆ ವಿಚಾರದಲ್ಲಿ ನನ್ನ ಹತ್ತಿರ ಮುಚ್ಚುಮರೆ ಇಲ್ಲ. ಸಿನಿಮಾದಲ್ಲಿ ನಟಿಸಲು ಎರಡು ಕೋಟಿ ತಗೆದುಕೊಳ್ಳುತ್ತೇನೆ. ಟಿವಿ ಅವರು ಮೂರು ಕೋಟಿ ಕೊಡುತ್ತಾರೆ. ನನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಸಾಕುವುದಕ್ಕೆ ಇಷ್ಟು ಸಾಕಾಗುತ್ತದೆ. ಬೇರೆ ಯಾವ ವಿಚಾರಕ್ಕೂ ನಾನು ತಲೆ ಹಾಕುವುದಿಲ್ಲ’ ಎಂದು ಜಗ್ಗೇಶ್ ಹೇಳಿದ್ದಾರೆ. ಇದನ್ನೂ ಓದಿ:ನಟ ಧನಂಜಯ್ ಮತ್ತು ಅದಿತಿ ಪ್ರಭುದೇವ್ ರಿಯಲ್ ಆಗಿ ಮದುವೆ ಆಗ್ಬೇಕಿತ್ತು: ಆದರೆ ತಪ್ಪಿಸಿದವರು ಯಾರು?

    ಬರೀ ಸಂಭಾವನೆ ವಿಚಾರವನ್ನು ಮಾತ್ರ ಜಗ್ಗೇಶ್ ಹೇಳಲಿಲ್ಲ. ಎರಡೆರಡು ಮದುವೆ ಆದ ಕಲಾವಿದರನ್ನೂ ತಮ್ಮ ಮಾತಿನ ಮಧ್ಯ ಎಳೆತಂದು ‘ನನಗಿರೋದು ಒಬ್ಬರೆ ಹೆಂಡ್ತಿ, ಎರಡು ಮಕ್ಕಳು. ನನ್ನ ಮಕ್ಕಳು ನನ್ನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ನಾನೂ ಕೂಡ ಯಾರ ತಂಟೆಗೂ ಹೋಗುವುದಿಲ್ಲ. ಹಾಗಾಗಿ ನಮ್ಮದು ಸುಖಿ ಕುಟುಂಬ. ದೇವರನ್ನು ನಂಬಿಕೊಂಡು ಬದುಕಿದ್ದೇನೆ. ನಮಗೆಲ್ಲ ಭಗವಂತ ಆನಂದದ ಜೀವನ ಕೊಟ್ಟಿದ್ದಾನೆ ಎಂದಿದ್ದಾರೆ.

    ತಮ್ಮ ಹಳೆಯ ದಿನಗಳನ್ನೂ ನೆನಪಿಸಿಕೊಂಡ ಜಗ್ಗೇಶ್, ಈ ಹಿಂದೆ ಶೂಟಿಂಗ್ ಗೆ ಹೋಗುವಾಗ ಎಷ್ಟೆಲ್ಲ ಕಷ್ಟ ಪಡುತ್ತಿದ್ದೆವು ಎನ್ನುವುದನ್ನೂ ಹೇಳಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬಂದಾಗ, ಒಂದು ರೀತಿಯಲ್ಲಿ ಭಯದಿಂದಲೇ ಶೂಟಿಂಗ್ ಗೆ ಹೋಗುತ್ತಿದ್ದೆ. ಯಾರೂ ಆಗ ಪ್ರೀತಿಯಿಂದ ಕಲಿಸಲೇ ಇಲ್ಲ. ಕಷ್ಟಪಟ್ಟು ನಾನು ಈ ಮಟ್ಟಕ್ಕೆ ಬಂದಿರುವುದಾಗಿ ಜಗ್ಗೇಶ್ ಫ್ಲ್ಯಾಶ್ ಬ್ಯಾಕ್‍ ಗೆ ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದರ್ಶನ್ ಒಂದು ಮನವಿಗೆ ಹರಿದು ಬಂತು ಬರಪೂರ ದೇಣಿಗೆ

    ದರ್ಶನ್ ಒಂದು ಮನವಿಗೆ ಹರಿದು ಬಂತು ಬರಪೂರ ದೇಣಿಗೆ

    ಮೈಸೂರು: ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕರಿಸಿ ಮೃಗಾಲಯಗಳನ್ನು ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸಿ ಎಂಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಮೃಗಾಲಯಕ್ಕೆ 3 ಕೋಟಿ ದೇಣಿಗೆ ಬಂದಿದೆ.

    ವೀಡಿಯೋ ಮೂಲಕ ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ದರ್ಶನ್ ಕರೆ ನೀಡಿದ್ದರು. ರಾಜ್ಯದ 9 ಮೃಗಾಲಯಗಳಿಗೆ ಪ್ರಾಣಿ ಪ್ರಿಯರಿಂದ ನೆರವು ಸಿಕ್ಕಿದೆ. Zoos ಆ್ಯಪ್ ಕರ್ನಾಟಕ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ನಡೆದಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ಜನರು ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ. ಕೇವಲ 20 ದಿನಗಳಲ್ಲಿ ಎರಡು ಕೋಟಿ ದೇಣಿಗೆ ಸಂಗ್ರಹವಾಗಿದೆ.

    ಪ್ರಾಣಿ ದತ್ತು ಪಡೆದವರಿಗೆ ದರ್ಶನ್ ಭೇಟಿ ಮಾಡುವ ಅವಕಾಶವಿದ್ದು, ಪ್ರತಿ ಮೃಗಾಲಯದಲ್ಲಿ ಆಯ್ದ 50 ಜನರಿಗೆ ದರ್ಶನ್‍ರಿಂದ ಪ್ರಶಂಸನಾ ಪತ್ರ ಸಿಗಲಿದೆ. ದರ್ಶನ್ ಮನವಿಗೆ ಓಗೊಟ್ಟು ಚಿತ್ರ ನಟರಿಂದಲೂ ದತ್ತು ಸ್ವೀಕಾರ ಆಗಿದೆ.

    ನವಿಲು ಹಾಗೂ ನಾಗರಹಾವನ್ನೇ ಹೆಚ್ಚು ದತ್ತು ಪಡೆದಿದ್ದು, ಇಂದಿನಿಂದ ಬೆಳಗಾವಿ, ಗದಗ ಹಾಗೂ ಹಂಪಿ ಮೃಗಾಲಯ ಓಪನ್ ಆಗಲಿದೆ. ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ಸ್ಥಳದಲ್ಲೇ ಕೋವಿಡ್ ಪರೀಕ್ಷೆ ನಡೆಸಿ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  2 ಕೋಟಿ ಲಸಿಕೆ ನೀಡಿ ಇತಿಹಾಸ ನಿರ್ಮಿಸಿದ ಕರ್ನಾಟಕ: ಸುಧಾಕರ್

  • 204 ಕೋಟಿ  ನೀಡಿ ಬುಕ್ಕಿಂಗ್ – ಅಮೆಜಾನ್ ಸಂಸ್ಥಾಪಕನ ಜೊತೆ ಬಾಹ್ಯಾಕಾಶ ಪ್ರಯಾಣ

    204 ಕೋಟಿ ನೀಡಿ ಬುಕ್ಕಿಂಗ್ – ಅಮೆಜಾನ್ ಸಂಸ್ಥಾಪಕನ ಜೊತೆ ಬಾಹ್ಯಾಕಾಶ ಪ್ರಯಾಣ

    ವಾಷಿಂಗ್ಟನ್ : ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಜೊತೆ ಬಾಹ್ಯಾಕಾಶಕ್ಕೆ ಹೋಗಲು 28 ದಶಲಕ್ಷ ಡಾಲರ್(ಅಂದಾಜು 204 ಕೋಟಿ ರೂ.)ನೀಡಿ ಬಿಡ್ ಗೆದ್ದು ವ್ಯಕ್ತಿಯೊಬ್ಬ ಸುದ್ದಿಯಾಗಿದ್ದಾನೆ.

    ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಂಸ್ಥಾಪಿಸಿರುವ ಬ್ಲ್ಯೂ ಒರಿಜಿನ್ ಕಂಪನಿಯ ಚೊಚ್ಚಲ ಬಾಹ್ಯಾಕಾಶ ಪ್ರವಾಸ ಯೋಜನೆಯ ಟಿಕೆಟ್‍ಗೆ ಬುಕ್ಕಿಂಗ್ ಆರಂಭವಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ 204 ಕೋಟಿ ರೂಪಾಯಿ ಬಿಡ್ ಮಾಡಿ ಗೆದ್ದುಕೊಂಡಿದ್ದಾರೆ.

    ಅಮೆರಿಕಾ ಗಗನಯಾತ್ರಿಗಳಾದ ನೀಲ್ ಅರ್ಮ್‍ಸ್ಟ್ರಾಂಗ್ ಚಂದ್ರನ ಮೇಲಿಳಿದು ಇದೇ ಜು.20ಕ್ಕೆ 52 ವರ್ಷ ತುಂಬಲಿದೆ. ಅದೇ ದಿನ ಬ್ಲ್ಯೂ ಒರಿಜಿನ್ ಕಂಪನಿಯ ರಾಕೆಟ್ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲಿದೆ.

    ಮೊದಲ ಪ್ರಯಾಣದಲ್ಲಿ ಬೆಜೋಸ್ ಮತ್ತು ಅವರ ಸಹೋದರ ಮಾರ್ಕ್ ಇರಲಿದ್ದು, ಇನ್ನೊಂದು ಸೀಟ್‍ಗೆ ಆಸಕ್ತರಿಗಾಗಿ ಬಿಡ್ ಆಹ್ವಾನಿಸಲಾಗಿತ್ತು. 159 ದೇಶಗಳ 7500 ಜನ ಭಾಗಿಯಾಗಿದ್ದರು. ಈ ಪೈಕಿ ಅತಿ ಹೆಚ್ಚು ಅಂದರೆ 204 ಕೋಟಿ ರೂಪಾಯಿ ಬಿಡ್ ಸಲ್ಲಿಸಿದ ವ್ಯಕ್ತಿಯನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಬಿಡ್ ಗೆದ್ದ  ವ್ಯಕ್ತಿ ಯಾರು ಎಂಬುದನ್ನು ಕಂಪನಿ ಬಹಿರಂಗ ಮಾಡಿಲ್ಲ.

  • ಮಹದೇಶ್ವರನ ಹುಂಡಿಯಲ್ಲಿ 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ

    ಮಹದೇಶ್ವರನ ಹುಂಡಿಯಲ್ಲಿ 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ

    ಚಾಮರಾಜನಗರ: ಮಹಾಮಾರಿ ಕೊರೊನಾ ವೈರಸ್ ನಡುವೆಯೂ ಮಾದಪ್ಪನ ಸನ್ನಿಧಿಗೆ ಕೋಟಿ ಕೋಟಿ ಹಣ ಹರಿದುಬಂದಿದೆ.

    ಹೌದು. ಕೊರೊನಾ ಸಾಂಕ್ರಮಿಕ ರೋಗದಿಂದ ದೇಶದ ಆರ್ಥಿಕತೆ ಕುಸಿದಿದೆ. ಜನ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ವ್ಯಾಪಾರ ವಾಹಿವಾಟುಗಳ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜೊತೆಗೆ ಕೊರೊನಾ ರಾಜ್ಯದ ದೇವಾಲಯಗಳ ಆದಾಯ ಗಳಿಕೆ ಮೇಲೂ ಪ್ರಭಾವ ಬೀರಿದೆ. ಆದರೆ ಕೊರೊನಾ ಸಂಕಷ್ಟದ ನಡುವೆ ಕೂಡ ಮಲೆಮಹದೇಶ್ವರ ಬೆಟ್ಟದ ದೇವಾಲಯದ ಹುಂಡಿಗೆ ಭಕ್ತರಿಂದ ಕೋಟಿ ಕೋಟಿ ಹಣ ಸಂಗ್ರಹವಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟ ದೇವಾಲಯದಲ್ಲಿ ತಡ ರಾತ್ರಿವರೆಗೂ ನಡೆದ ಹುಂಡಿ ಏಣಿಕೆಯಲ್ಲಿ 2 ಕೋಟಿ 21 ಲಕ್ಷ ರೂಪಾಯಿ ನಗದು ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 2, 21,59, 820 ರೂ. ನಗದು ಜೊತೆಗೆ 80 ಗ್ರಾಂ ಚಿನ್ನ, 2 ಕೆ.ಜಿ.ಬೆಳ್ಳಿ ಮತ್ತು ನಾಣ್ಯದ ರೂಪದಲ್ಲಿ 11.23 ಲಕ್ಷ ರೂಪಾಯಿ ಭಕ್ತರಿಂದ ಸಂಗ್ರಹವಾಗಿದೆ. ಕೋವಿಡ್ ಪರಿಣಾಮದ ಆರ್ಥಿಕ ಕಷ್ಟದ ನಡುವೆಯು ಮಲೆಮಹದೇಶ್ವರನಿಗೆ ಭಕ್ತರು ಉದಾರವಾಗಿ ಕಾಣಿಕೆ ಅರ್ಪಿಸಿದ್ದಾರೆ.