Tag: Crop relief Fund

  • ಬಳ್ಳಾರಿ: ರೈತರಿಗೆ ನೀಡಿದ್ದ 2 ಕೋಟಿ ರೂ. ಪರಿಹಾರ ಗುಳುಂ ಮಾಡಿದ ಅಧಿಕಾರಿಗಳು

    ಬಳ್ಳಾರಿ: ರೈತರಿಗೆ ನೀಡಿದ್ದ 2 ಕೋಟಿ ರೂ. ಪರಿಹಾರ ಗುಳುಂ ಮಾಡಿದ ಅಧಿಕಾರಿಗಳು

    ಬಳ್ಳಾರಿ: ಅಧಿಕಾರಿಗಳೇ ನಕಲಿ ಸಹಿ ಮಾಡಿ ರೈತರಿಗೆ ಸೇರಬೇಕಾಗಿದ್ದ ಬೆಳೆ ಪರಿಹಾರದ ಹಣವನ್ನ ನುಂಗಿ ನೀರು ಕುಡಿದಿರುವಂತಹ ಘಟನೆ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆದಿದೆ.

     

    ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹತ್ತಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಸೇರಬೇಕಾದ ಬೆಳೆನಷ್ಟ ಪರಿಹಾರವನ್ನು ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರ ಕಚೇರಿಯ ಸಿಬ್ಬಂದಿ ರೈತರ ನಕಲಿ ಸಹಿ ಮಾಡಿ ಮುಂಡರಗಿ, ದಾವಣಗೆರೆ ಪಟ್ಟಣದ ಎಸ್‍ಬಿಐ ಬ್ಯಾಂಕ್‍ನಲ್ಲಿ ಬರೋಬ್ಬರಿ 2 ಕೋಟಿ ರೂ. ಡ್ರಾ ಮಾಡಿರೋದು ದಾಖಲೆ ಸಹಿತ ಬಯಲಾಗಿದೆ.

    ಭ್ರಷ್ಟ ಅಧಿಕಾರಿಗಳ ನುಂಗಾಟ ಕಂಡು ಬೆಚ್ಚಿಬಿದ್ದಿರುವ ಹೊಸಪೇಟೆ ಉಪವಿಭಾಗಾಧಿಕಾರಿಗಳೇ ತನಿಖೆಗೆ ಆದೇಶಿಸಿದ್ದಾರೆ. ಆದಷ್ಟು ಶೀಘ್ರವೇ ತನಿಖೆ ಪೂರ್ಣಗೊಳಿಸಿ ರೈತರಿಗೆ ಮೋಸ ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡ್ಬೇಕಿದೆ.