Tag: Croatia

  • ಕ್ರೊಯೇಷಿಯಾಗೆ ಮೋದಿ ಭೇಟಿ – ಪ್ರಧಾನಿ ಪ್ಲೆಂಕೋವಿಕ್ ಜೊತೆ ಹಲವು ಒಪ್ಪಂದಗಳಿಗೆ ಸಹಿ

    ಕ್ರೊಯೇಷಿಯಾಗೆ ಮೋದಿ ಭೇಟಿ – ಪ್ರಧಾನಿ ಪ್ಲೆಂಕೋವಿಕ್ ಜೊತೆ ಹಲವು ಒಪ್ಪಂದಗಳಿಗೆ ಸಹಿ

    ಝಾಗ್ರೆಬ್: ಕೆನಡಾ ಪ್ರವಾಸ ಮುಗಿಸಿ ಕ್ರೊಯೇಷಿಯಾಗೆ ತೆರಳಿದ ಪ್ರಧಾನಿ ಮೋದಿ (Narendra Modi) ಅಲ್ಲಿನ ಪ್ರಧಾನಿ ಪ್ಲೆಂಕೋವಿಕ್ (Andrej Plenkovic) ಅವರನ್ನು ಭೇಟಿ ಮಾಡಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

    ಪರಸ್ಪರ ಎರಡು ರಾಷ್ಟ್ರಗಳ ವ್ಯಾಪಾರ ವೃದ್ಧಿಯ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದ್ದಾರೆ. ಕೃಷಿ, ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಸ್ಕೃತಿ ಸೇರಿದಂತೆ ಹಲವು ವ್ಯಾಪಾರ ವಹಿವಾಟು ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಿಲ್ಡರ್ ಮೇಲೆ ಟ್ರ್ಯಾಪ್‌ – ಕೋಟಿ ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ `ಹನಿ’ ಲೇಡಿ ಅರೆಸ್ಟ್

    ಕೆನಡಾದಿಂದ ಝಾಗ್ರೆಬ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ರೊಯೇಷಿಯಾದ ಭಾರತೀಯ ವಲಸಿಗ ಸಮುದಾಯವು ಗಾಯಿತ್ರಿ ಮಂತ್ರ ಪಠಿಸಿ ಸ್ವಾಗತಿಸಿತು. ಇದೇ ವೇಳೆ, ಜನರು ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಮುಂತಾದ ಘೋಷಣೆಗಳೊಂದಿಗೆ ಸ್ವಾಗತಿಸಿದರು. ಇದನ್ನೂ ಓದಿ:  ಹನಿಮೂನ್ ಹಂತಕಿಯ ಮತ್ತೊಂದು ರಹಸ್ಯ ಬಯಲು – 3 ವಾರಗಳಲ್ಲಿ ಆ ಸಂಖ್ಯೆಗೆ 234 ಬಾರಿ ಫೋನ್‌ ಕಾಲ್‌ ಮಾಡಿದ್ದ ಸೋನಂ

    ಕ್ರೊಯೇಷಿಯಾಕ್ಕೆ ತೆರಳುವ ಮುನ್ನ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಈ ವೇಳೆ ಕೆನಡಾ ಪ್ರಧಾನಿ ಕಾರ್ನಿ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಭದ್ರತೆ, ನಾವಿನ್ಯತೆ ಹಾಗೂ ತಂತ್ರಜ್ಞಾನದ ಕುರಿತು ಮೋದಿ ಚರ್ಚಿಸಿದ್ದಾರೆ. ಇದನ್ನೂ ಓದಿ: Israel-Iran Conflict – ಇರಾನ್‍ನಿಂದ ದೆಹಲಿ ತಲುಪಿದ 110 ಭಾರತೀಯರು

  • ನೋಡನೋಡುತ್ತಲೇ ಧರೆಗೆ ಬಿತ್ತು ಕಟ್ಟಡ – ಭೀಕರ ಭೂಕಂಪಕ್ಕೆ 7 ಮಂದಿ ಸಾವು, ಹಲವರಿಗೆ ಗಾಯ

    ನೋಡನೋಡುತ್ತಲೇ ಧರೆಗೆ ಬಿತ್ತು ಕಟ್ಟಡ – ಭೀಕರ ಭೂಕಂಪಕ್ಕೆ 7 ಮಂದಿ ಸಾವು, ಹಲವರಿಗೆ ಗಾಯ

    ಜಗೇಬ್: ಕ್ರೊಯೇಷಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಏಳು ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

    ರಾಜಧಾನಿ ಜಗ್ರೇಬ್ ನಿಂದ 30 ಮೈಲಿ ದೂರದ ಬಾಲ್ಕನ್‍ನಲ್ಲಿ ಭೂಕಂಪನ ಸಂಭವಿಸಿದೆ. ನಿನ್ನೆ ಸಣ್ಣ ಪ್ರಮಾಣದಲ್ಲಿ ಸಂಭವಿಸಿರುವ ಭೂಕಂಪನ ಇಂದು ಮತ್ತೆ ಜೋರಾಗಿ ಅಬ್ಬರಿಸಿದ್ದು ಹಲವಾರು ಅವಘಡಗಳಿಗೆ ಕಾರಣವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.4 ರಷ್ಟು ದಾಖಲಾಗಿದೆ. ಈ ಭೂಕಂಪದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.

    ಭೂಕಂಪದ ತೀವ್ರತೆಗೆ ಕಟ್ಟಡಗಳು ಧರೆಗುರುಳಿದ್ದು, ಹಲವರಿಗೆ ಗಾಯಗಳಾಗಿ ಮತ್ತು ಇನ್ನು ಹಲವು ಪ್ರಾಣ ಕಳೆದುಕೊಂಡಿದ್ದಾರೆ. ತುರ್ತು ನೆರವಿಗೆ ಮಿಲಿಟರಿ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಈ ಭೂಪಂಕಪದಲ್ಲಿ ಸಿಲುಕಿಕೊಂಡವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಈ ಪ್ರದೇಶದದಲ್ಲಿರುವ ಪೆಟ್ರಿಂಜ ಮತ್ತು ಸಿನಾಕ್ ಪಟ್ಟಣಗಳ ಸಮೀಪ ಕಂಪನದ ಕೇಂದ್ರಬಿಂದು ದಾಖಲಾಗಿದೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

  • ಫಿಫಾ ವಿಶ್ವಕಪ್ ಫೈನಲ್: ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಗೆ ಜಯ- ಎರಡು ತಂಡಗಳಿಗೆ ಸಿಕ್ತು ಭರ್ಜರಿ ಮೊತ್ತ

    ಫಿಫಾ ವಿಶ್ವಕಪ್ ಫೈನಲ್: ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಗೆ ಜಯ- ಎರಡು ತಂಡಗಳಿಗೆ ಸಿಕ್ತು ಭರ್ಜರಿ ಮೊತ್ತ

    ಮಾಸ್ಕೋ: ತೀವ್ರ ಹಣಾಹಣಿಯಿಂದ ಕೂಡಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮಾಸ್ಕೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಫ್ರಾನ್ಸ್ 4-2 ಗೋಲುಗಳಿಂದ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಾಂಪಿಯನ್ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ಜೇಬಿಗಿಳಿಸಿತು. ರನ್ನರ್-ಅಪ್ ತಂಡ ಕ್ರೊವೇಷಿಯಾ 191 ಕೋಟಿ ಬಹುಮಾನ ಪಡೆಯಿತು.

    ಈ ಮೂಲಕ 1998ರ ಬಳಿಕ ಎರಡನೇ ಬಾರಿ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಕ್ರೋವೇಷಿಯಾ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಇಡೀ ಫ್ರಾನ್ಸ್ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಸಾಕರ್ ಅಭಿಮಾನಿಗಳು ವಿಶ್ವದಾದ್ಯಂತ ಸಂಭ್ರಮದಲ್ಲಿದ್ದಾರೆ.

    ಮೊದಲಾರ್ಧದಲ್ಲಿ 2-1 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿದ್ದ ಫ್ರಾನ್ಸ್ ದ್ವಿತಿಯಾರ್ಧದಲ್ಲೂ 2 ಗೋಲು ಗಳಿಸಿ ಮಿಂಚಿತು. ಕ್ರೊವೇಷಿಯಾದ ಮಾರಿಯೋ ಮಂಡ್ವೋಕಿಚ್ ಸೆಲ್ಫ್ ಗೋಲ್ ಕಾರಣ 18ನೇ ನಿಮಿಷದಲ್ಲೇ ಫ್ರಾನ್ಸ್‍ಗೆ 1-0 ಮುನ್ನಡೆ ಸಿಕ್ಕಿತು. ಗ್ರೀಜ್‍ಮನ್ ಮಾಡಿದ ಫ್ರೀ ಕಿಕ್ ತಡೆಯೋ ಭರದಲ್ಲಿ ಮಂಡ್ವೋಕಿಚ್ ಫುಟ್ಬಾಲನ್ನ ಹೆಡ್ ಮಾಡಿದ್ರು. ಅದು ನೇರ ಗೋಲು ಪೆಟ್ಟಿಗೆ ಸೇರಿತು. ಇದಾದ ಕೇವಲ 10 ನಿಮಿಷದಲ್ಲಿ ತಿರುಗೇಟು ನೀಡಿದ ಕ್ರೊವೇಷಿಯಾ 1-1ರಿಂದ ಸಮಬಲ ಸಾಧಿಸಿತು.

    28ನೇ ನಿಮಿಷದಲ್ಲಿ ಇವಾನ್ ಪೆರಿಸಿಕ್ ಈಸಿಯಾಗಿ ಗೋಲ್ ಬಾರಿಸಿದ್ರು. ಇದಾದ ಬೆನ್ನಲ್ಲೇ ಅಂದ್ರೆ 38 ನಿಮಿಷದಲ್ಲಿ ಪೆನಾಲ್ಟಿ ಗೋಲ್ ಬಾರಿಸಿದ ಗ್ರೀಜ್‍ಮನ್ ಫ್ರಾನ್ಸ್‍ಗೆ 2-1ರಿಂದ ಮುನ್ನಡೆ ತಂದುಕೊಟ್ರು.. ದ್ವಿತಿಯಾರ್ಧದಲ್ಲಿ, ಪಂದ್ಯದ ಒಟ್ಟಾರೆ 59 ನಿಮಿಷದಲ್ಲಿ ಫ್ರಾನ್ಸ್ ಮಿಡ್‍ಫೀಲ್ಡರ್ ಪೌಲ್ ಪೋಗ್ಬಾ ತಂಡಕ್ಕೆ ಮೂರನೇ ಗೋಲು ತಂದಿತ್ತರು. ಇದಾದ ಕೇವಲ 5 ನಿಮಿಷದಲ್ಲಿ ಕಿಲಿಯನ್ ಎಂಬಾಪೆ ಮತ್ತೊಂದು ಗೋಲು ಗಳಿಸಿದ್ರು.

    ಈ ಮೂಲಕ ಫ್ರಾನ್ಸ್ 4-1 ಗೋಲುಗಳಿಂದ ಮುನ್ನಡೆ ಸಾಧಿಸಿತು. ಇದಾದ 4 ನಿಮಿಷದಲ್ಲೇ ಮಂಡ್ವೋಕಿಚ್ ಕ್ರೊವೇಶಿಯಾಗೆ 2ನೇ ಗೋಲು ತಂದಿಟ್ಟರು. ಆದ್ರೆ ಫ್ರಾನ್ಸ್ ಮುನ್ನಡೆಯನ್ನು ತಡೆಯಲು ಆಗಲಿಲ್ಲ. ಹೆಚ್ಚುವರಿ ಅವಧಿಯಲ್ಲೂ ಯಾವುದೇ ಗೋಲು ಬರಲಿಲ್ಲ.

  • ಪೆನಾಲ್ಟಿ ಶೂಟೌಟ್‍ನಲ್ಲಿ ಡೆನ್ಮಾರ್ಕ್ ಔಟ್!

    ಪೆನಾಲ್ಟಿ ಶೂಟೌಟ್‍ನಲ್ಲಿ ಡೆನ್ಮಾರ್ಕ್ ಔಟ್!

    ಮಾಸ್ಕೊ: ಪೆನಾಲ್ಟಿ ಶೂಟೌಟ್ ಕ್ಲೈಮಾಕ್ಸ್ ಕಂಡ ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕ್ರೊವೇಷಿಯಾ, ಡ್ಯಾನಿಶ್ ಡೈನಮೈಟ್ ಖ್ಯಾತಿಯ ಡೆನ್ಮಾರ್ಕ್ ಸವಾಲನ್ನು ಮೀರಿ ನಿಂತು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

    ನೊವ್‍ಗರೊಡ್ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯ (15+15ನಿಮಿಷ)ದಲ್ಲೂ ಚೆಂಡು ಗೋಲು ಬಲೆ ದಾಟಲು ಉಭಯ ತಂಡಗಳ ಗೋಲು ಕೀಪರ್‍ಗಳು ಅವಕಾಶ ನೀಡಲಿಲ್ಲ. ಅಂತಿಮವಾಗಿ ನಾಟಕೀಯವಾಗಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ 3 ಸ್ಪಾಟ್ ಕಿಕ್‍ಗಳಿಗೆ ತಡೆಗೋಡೆಯಾದ ಕ್ರೊಯೇಶಿಯಾದ ಡೆನಿಜೆಲ್ ಸುಬಾಸಿಕ್, 3-2ರ ಅಂತರದಲ್ಲಿ ಡೆನ್ಮಾರ್ಕ್ ವಿರುದ್ಧ ಗೆಲುವು ತಂದಿತ್ತು, ತಂಡವನ್ನು ಕ್ವಾರ್ಟರ್ ಫೈನಲ್ ಹಂತಕ್ಕೆ ಕೊಂಡೊಯ್ದರು.

    ಪಂದ್ಯ ಆರಂಭವಾಗಿ ಕೇವಲ 57ನೇ ಸೆಕೆಂಡ್‍ನಲ್ಲೇ ಕ್ರೊವೇಶಿಯಾದ ರಕ್ಷಣಾ ಗೋಡೆಯನ್ನು ಭೇದಿಸಿದ ಜಾರ್ಗೆನ್‍ಸನ್ ಡೆನ್ಮಾರ್ಕ್‍ಗೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಆದರೆ ಮುಂದಿನ ನಾಲ್ಕನೇ ನಿಮಿಷದಲ್ಲಿ ತಿರುಗೇಟು ನೀಡಿದ ಕ್ರೊವೇಶಿಯಾದ ಮಾರಿಯೊ ಮಂಡ್ಜುವಿ ಕ್ರೊವೇಶಿಯಾಗೆ ಸಮಬಲ ತಂದುಕೊಟ್ಟರು. ಹೀಗಾಗಿ ಪಂದ್ಯ ಆರಂಭವಾಗಿ ಕೇವಲ ನಾಲ್ಕು ನಿಮಿಷದ ಅಂತರದಲ್ಲಿ ಉಭಯ ತಂಡಗಳು ಗೋಲು ಗಳಿಸಿದ ಅಪರೂಪದ ದಾಖಲೆಯ ಕ್ಷಣಕ್ಕೆ ಪಂದ್ಯ ಸಾಕ್ಷಿಯಾಯಿತು.

    ಬಳಿಕ ಎರಡು ಗಂಟೆಗಳ ಕಾಲ ಉಭಯ ತಂಡಗಳ ಆಟಗಾರರು ನೊವ್‍ಗರೊಡ್ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸಿದರೂ ಗೋಲು ದಾಖಲಾಗಲಿಲ್ಲ. ಲೂಕಾ ಮಾಡ್ರಿಕ್, ಮಾರಿಯೋ ಮಾಂಡುಜುಕಿಕ್, ಇವಾನ್ ರಾಕೆಟಿಕ್, ಇವಾನ್ ಪೆರಿಸಿಕ್‍ರಂಥ ಸ್ಟಾರ್ ಆಟಗಾರರನ್ನು ಹೊಂದಿದ್ದ ಕ್ರೊವೇಷಿಯಾವನ್ನು, ಕೋಚ್ ಏಜ್ ಹರಾಯ್ಡ್ ಹೆಣೆದ ತಂತ್ರಗಳ ನೆರವಿನಿಂದ ಡೆನ್ಮಾರ್ಕ್ ಕಟ್ಟಿಹಾಕಿತು. ಹೆಚ್ಚುವರಿ ಅವಧಿ ಮುಗಿಯುವ ಐದು ನಿಮಿಷಕ್ಕೂ ಮೊದಲೇ ಕ್ರೊವೇಶಿಯಾ ಗೆಲುವಿನ ಗೋಲು ಬಾರಿಸಬೇಕಿತ್ತು. ಆದರೆ ನಾಯಕ ಲೂಕಾ ಮಾಡ್ರಿಕ್ ಪೆನಾಲ್ಟಿಯನ್ನು ಡೆನ್ಮಾರ್ಕ್ ಗೋಲಿ ಕಾಸ್ಪರ್ ಶೆಮಿಚೆಲ್ ಅದ್ಭುತವಾಗಿ ತಡೆದು, ಪಂದ್ಯವನ್ನು ಪೆನಾಲ್ಟಿ ಶೂಟೌಟ್‍ಗೆ ಒಯ್ದರು.

    ಮೊದಲ ಪೆನಾಲ್ಟಿ ಕಿಕ್‍ನಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ಬಳಿಕ ಕ್ರೊವೇಷಿಯಾ ಪರ ಆಂದ್ರೆಜ್ ಕ್ರಾಮರಿಕ್, 32 ವರ್ಷ ವಯಸ್ಸಿನ ರಿಯಲ್ ಮ್ಯಾಡ್ರಿಡ್ ಸ್ಟಾರ್ ಲೂಕಾ ಮಾಡ್ರಿಕ್, ಜೋಸೆಫ್ ಪಿವಾರಿಕ್, ಹಾಗೂ ಬಾರ್ಸಿಲೋನಾದ ಇವಾನ್ ರಾಕೆಟಿಕ್ ಗೋಲು ಗಳಿಸಿ ಗೆಲುವಿನ ನಗೆ ಬೀರಿದರು. ಮತ್ತೊಂದೆಡೆ ಡೆನ್ಮಾರ್ಕ್ ಪರ ಎಸ್ ಕಜೇರ್, ಕ್ರೋನ್ ಡೆಹ್ಲಿ ಗೋಲು ಬಾರಿಸಿದರೆ, ಎರಿಕ್ಸನ್, ಸೋಪೋಸ್ ಹಾಗೂ ಜೋರ್ಗನ್‍ಸನ್ ಅಪೂರ್ವ ಅವಕಾಶವನ್ನು ಮಿಸ್ ಮಾಡಿ ನಿರಾಸೆ ಅನುಭವಿಸಿದರು. ಆ ಮೂಲಕ 1998ರಲ್ಲಿ 3ನೇ ಸ್ಥಾನ ಪಡೆದಿದ್ದ ಕ್ರೊವೇಷಿಯಾ, ಈ ಬಾರಿಗೆ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯಿತು. ಶನಿವಾರ ನಡೆಯುವ ಕ್ವಾರ್ಟರ್ ಫೈನಲ್‍ನಲ್ಲಿ ಆತಿಥೇಯ ರಷ್ಯಾವನ್ನು ಕ್ರೊವೇಷಿಯಾ ಎದುರಿಸಲಿದೆ.