Tag: Criticism

  • ‘ಆಸ್ಕರ್’ ವೇದಿಕೆಯ ಮೇಲೆ ಬೆತ್ತಲೆ: ಜಾನ್ ಸೇನಾ ವಿರುದ್ಧ ಭಾರೀ ಟೀಕೆ

    ನಿನ್ನೆಯಷ್ಟೇ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಬ್ಲುಡಬ್ಲುಇ ಸ್ಟಾರ್ ಹಾಗೂ ಹಾಲಿವುಡ್ ನಟ ಜಾನ್ ಸೇನಾ, ಬೆತ್ತಲೆಯಾಗಿ ವೇದಿಕೆಗೆ ಆಗಮಿಸಿದ್ದರು. ಈ ನಡೆ ಭಾರೀ ಟೀಕೆಗೆ ವ್ಯಕ್ತವಾಗಿದೆ. ಜಗತ್ತಿನ ಸಾಕಷ್ಟು ದಿಗ್ಗಜರು ಸೇರಿದಂತೆ ಸಿನಿ ಪ್ರೇಮಿಗಳು ಈ ನಡೆಯನ್ನು ಖಂಡಿಸಿದ್ದಾರೆ. ಪ್ರತಿಷ್ಠಿತ ವೇದಿಕೆಯಲ್ಲಿ ಇಂಥದ್ದೆಲ್ಲ ಆಗಬಾರದು ಎಂದು ಸಲಹೆ ನೀಡಿದ್ದಾರೆ.

    ಆಸ್ಕರ್ ‍ಪ್ರಶಸ್ತಿ (Oscar Award) ಪ್ರದಾನ ಸಮಾರಂಭದಲ್ಲಿ ಒಂದಿಲ್ಲೊಂದು ಎಡವಟ್ಟು ನಡೆಯೋದು ಕಾಮನ್ ಅನ್ನುವಂತಾಗಿದೆ. ಕೆಲವನ್ನು ಆಸ್ಕರ್ ಸಮಿತಿಯೇ ಡಿಸೈನ್ ಮಾಡಿದರೆ, ಇನ್ನೂ ಕೆಲವು ತಾನಾಗಿಯೇ ಅಲ್ಲಿ ನಡೆದು ಬಿಡುತ್ತವೆ. ಈವರೆಗೂ ನಡೆದ ಎಲ್ಲ ಸಂಗತಿಗಳು ವೈರಲ್ ಆಗುವುದರ ಜೊತೆಗೆ ವಿವಾದವನ್ನೂ ಹುಟ್ಟು ಹಾಕಿವೆ.

    ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿಯನ್ನು ಘೋಷಣೆ ಮಾಡುವುದಕ್ಕಾಗಿ ಖ್ಯಾತ ಹಾಲಿವುಡ್ ನಟ, ಡಬ್ಲುಡಬ್ಲುಇ ಸ್ಟಾರ್ ಜಾನ್ ಸೇನಾ  (John Cena)ಬೆತ್ತಲೆಯಾಗಿ (Nude) ವೇದಿಕೆಗೆ ಬಂದಿದ್ದರು. ಸ್ಟೋರಿ ಬೋರ್ಡ್ ನಿಂದ ಖಾಸಗಿ ಅಂಗಾಂಗ ಮುಚ್ಚಿಕೊಂಡು ಮೈಕ್ ಮುಂದೆ ನಿಂತಿದ್ದರು. ನಂತರ ಅವರಿಗೆ ವೇದಿಕೆಯ ಮೇಲೆ ಡಿಸೈನರ್ ಬಟ್ಟೆ ತೊಡಿಸಲಾದರೂ, ಈ ನಡೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

    ಪ್ರತಿಷ್ಠಿತ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಿತು. ಅತ್ಯಂತ ಕುತೂಹಲ ಮೂಡಿಸಿದ್ದ ನಾಮ ನಿರ್ದೇಶನ ಪಟ್ಟಿಯಲ್ಲಿ ಯಾರೆಲ್ಲ ಪ್ರಶಸ್ತಿ ಪಡೆಯಲಿದ್ದಾರೆ ಎನ್ನುವ ಸಹಜ ನಿರೀಕ್ಷೆ ಇದ್ದೇ ಇತ್ತು. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯು ಓಪನ್ ಹೈಮರ್ ಸಿನಿಮಾಗಾಗಿ ಸಿಲಿಯನ್ ಮರ್ಫಿ ಪಡೆದುಕೊಂಡರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಪೂರ್ ಥಿಂಗ್ಸ್ ಸಿನಿಮಾಗಾಗಿ ಎಮ್ಮಾ ಸ್ಟೋನ್ ಪಡೆದುಕೊಂಡಿದ್ದಾರೆ.

     

    ಅತ್ಯುತ್ತಮ ಚಿತ್ರ ಪ್ರಶಸ್ತಿಯು ಓಪನ್ ಹೈಮರ್ ಚಿತ್ರ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಓಪನ್ ಹೈಮರ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಓಪನ್ ಹೈಮರ್ ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದ್ದರೆ, ದಿ ಹೋಲ್ಡೋವರ್ಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್‍ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

  • ಟೀಕೆಗಳು ಆರೋಪಗಳಿಗೆ ಮಾತ್ರ ಸೀಮಿತವಾಗಿವೆ: ಪ್ರಧಾನಿ ಮೋದಿ

    ಟೀಕೆಗಳು ಆರೋಪಗಳಿಗೆ ಮಾತ್ರ ಸೀಮಿತವಾಗಿವೆ: ಪ್ರಧಾನಿ ಮೋದಿ

    ನವದೆಹಲಿ: ಟೀಕೆಗಳಿಗೆ ತುಂಬಾ ಮಹತ್ವ ಕೊಡುತ್ತೇನೆ. ಆದರೆ ಇಂದು ಈಗ ಟೀಕೆಗಳನ್ನು ಕೇವಲ ಆರೋಪಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕುಟುಕಿದ್ದಾರೆ.

    ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಟೀಕೆಗಳಿಗೆ ತುಂಬಾ ಪ್ರಾಮುಖ್ಯತೆ ನೀಡುತ್ತೇನೆ. ಆದರೆ ಇಂದು ಟೀಕೆಗಳು ಆರೋಪಗಳಿಗೆ ಮಾತ್ರ ಸೀಮಿತವಾಗಿವೆ. ಈಗ ಜನ ಆರೋಪಗಳನ್ನು ಮಾತ್ರ ಮಾಡುತ್ತಾರೆ. ಆದರೆ ಟೀಕೆಗೆ ಕಠಿಣ ಪರಿಶ್ರಮ, ಸಂಶೋಧನೆ ಅಗತ್ಯವಿದೆ ಎಂದು ಹೇಳುವ ಮೂಲಕ ಟೀಕೆ ಹಾಗೂ ಆರೋಪಗಳ ನಡುವೆ ಗೆರೆ ಎಳೆದರು. ಇದನ್ನೂ ಓದಿ: ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

    ಹೆಚ್ಚಿನ ಜನ ಆರೋಪಗಳನ್ನು ಮಾಡುವ ಹಂತದಲ್ಲೇ ಇದ್ದಾರೆ, ಹೇಳಿಕೆ ಮಾತುಗಳನ್ನು ಕೇಳಿ ಆಟ ಆಡುವ ಜನರೇ ಹೆಚ್ಚು. ಇದಕ್ಕೆ ಕಾರಣ ಇಂದಿನ ವೇಗದ ಜಗತ್ತಿನಲ್ಲಿ ಟೀಕೆ ಮಾಡಲು ಸಾಕಷ್ಟು ಕಠಿಣ ಪರಿಶ್ರಮ, ಸಂಶೋಧನೆ ನಡೆಸಲು ಬಹುಶಃ ಜನರಿಗೆ ಸಮಯವಿಲ್ಲದಿರಬಹುದು. ಹೀಗಾಗಿ ಕೆಲವು ಬಾರಿ ನಾನು ಟೀಕಾಕಾರನ್ನು ಕಳೆದುಕೊಂಡಂತೆ ಭಾಸವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದ ಯೋಜನೆಯ ರಾಯಭಾರಿಯಾದ ಕಂಗನಾ

    ವಿರೋಧಿಗಳ ಬಗ್ಗೆ ಕೇಳಿದಾಗ, ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಅವರ ಕೆಲಸವನ್ನು ಮಾತ್ರ ವಿಶ್ಲೇಷಣೆ ಮಾಡಿದ್ದರೆ ಅವರ ಬಗ್ಗೆ ಗೊಂದಲ ಇರುವುದಿಲ್ಲ ಎಂದು ವಿರೋಧಿಗಳ ಬಗ್ಗೆ ಮಾತನಾಡಿದರು.

    ನಾನು ಏನಾದರೂ ಸಾಧಿಸಲು ಅಥವಾ ಏನಾದರೂ ಆಗಲು ಬಯಸುವುದಿಲ್ಲ. ಆದರೆ ಜನತೆಗಾಗಿ ಏನಾದರೂ ಮಾಡಲು ಯಾವಾಗಲೂ ಬಯಸುತ್ತೇನೆ ಎಂದು ಹೇಳಿದರು.

  • ಶ್ರೀದೇವಿಯವರ ಪ್ರಾಣಕ್ಕೆ ವಿಪರೀತ ಶಸ್ತ್ರಚಿಕಿತ್ಸೆಯೇ ಮುಳುವಾಯ್ತಾ? ಜನ ಹೇಳೋದು ಏನು?

    ಶ್ರೀದೇವಿಯವರ ಪ್ರಾಣಕ್ಕೆ ವಿಪರೀತ ಶಸ್ತ್ರಚಿಕಿತ್ಸೆಯೇ ಮುಳುವಾಯ್ತಾ? ಜನ ಹೇಳೋದು ಏನು?

    ಮುಂಬೈ: ಬಹುಭಾಷಾ ನಟಿ ಶ್ರೀದೇವಿ ಅವರು ಹೆಚ್ಚು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದಲೇ ಮೃತಪಟ್ಟಿದ್ದಾರೆ ಎನ್ನುವ ಮಾತು ಈಗ ಕೇಳಿಬಂದಿದೆ.

    ಸೌಂದರ್ಯಕ್ಕೆ ಹೆಚ್ಚು ಗಮನಹರಿಸಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಶನಿವಾರ ರಾತ್ರಿ ದುಬೈಯಲ್ಲಿ ಹೃದಯ ಸ್ತಂಭನಗೊಂಡು ಶ್ರೀದೇವಿ ಮೃತಪಟ್ಟಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.

    ಜನ ಹೇಳೋದು ಏನು?
    ಚರ್ಮದ ಲೇಸರ್ ಶಸ್ತ್ರಚಿಕಿತ್ಸೆ, ಸಿಲಿಕಾನ್ ಸ್ತನ ಸರಿಪಡಿಸುವಿಕೆ, ಮುಖದ ಸೌಂದರ್ಯ ಹೆಚ್ಚಿಸಲು ಮಾಡಿಸಿಕೊಂಡ ಚಿಕಿತ್ಸೆಗಳು ಮತ್ತು ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಂಡ ಔಷಧಿಗಳ ಸೇವನೆ ದೇಹಕ್ಕೆ ಮಾರಕವಾಗಿ ಪರಿಣಮಿಸಿದೆ.

    ಈ ಎಲ್ಲಾ ಶಸ್ತ್ರಚಿಕಿತ್ಸೆಗಳಿಂದ ಅವರು ಇನ್ನಷ್ಟು ಯೌವನದಿಂದ ಕಾಣಬಹುದು ಆದರೆ, ತಮ್ಮ ದೇಹದ ಶಕ್ತಿಗೂ ಮೀರಿದ ಶ್ರಮವನ್ನ ಹಾಕಿದರೇ ಅದು ತಡೆದುಕೊಳ್ಳಲು ಸಾಧ್ಯವೇ? ನೈಜ್ಯ ಸೌಂದರ್ಯವನ್ನ ಗೌರವಿಸಿ. ನಿಮ್ಮ ದೇಹವನ್ನ ಗೌರವಿಸಿ. ಇದನ್ನೂ ಓದಿ: ಸಿನಿಮಾ ಕ್ಷೇತ್ರದಲ್ಲಿ ಗ್ಲಾಮರ್ ಗೆ ಪ್ರಾಮುಖ್ಯತೆ ಹೆಚ್ಚು ಯಾಕೆ: ರಕ್ಷಿತಾ ಪ್ರೇಮ್ ಪ್ರಶ್ನೆ

    ಯಾವುದೇ ಶಸ್ತ್ರಚಿಕಿತ್ಸೆಗಳನ್ನ ಮಾಡುವಾಗ ಅರವಳಿಕೆ ಮದ್ದು ನೀಡುತ್ತಾರೆ. ನಮ್ಮ ದೇಹದ ಮೇಲೆ ಈ ಮದ್ದಿನ ಪ್ರಭಾವ ಸುಮಾರು 5 ವರ್ಷದವರೆಗೂ ಇರುತ್ತದೆ. ಇದರಿಂದ ಹೃದಯಾಘಾತ ಸಹ ಉಂಟಾಗಬಹುದು.

    ಶ್ರೀದೇವಿಯವರು ಹೃದಯ ಸ್ತಂಭನದಿಂದ ಮೃತಪಟ್ಟರೇ? ಅವರ ಅಷ್ಟು ಫಿಟ್ ಆಗಿದ್ದರು ಇದು ಹೇಗೆ ಸಾಧ್ಯ? ಮೂಲಗಳ ಪ್ರಕಾರ ಶ್ರೀದೇವಿ ಅವರು ತುಟಿಯ ಸರ್ಜರಿಯನ್ನು ವಾರಗಳ ಹಿಂದೆ ಮಾಡಿಸಿಕೊಂಡಿದ್ದರು. ಪ್ಲಾಸ್ಟಿಕ್ ಸರ್ಜರಿ ಅವರ ಜೀವವನ್ನೇ ತೆಗೆದುಕೊಂಡಿದೆ.

    ಎಕ್ತಾ ಕಪೂರ್ ವಾಗ್ದಾಳಿ:
    ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಸಾವಿನ ಕುರಿತು ನಡೆಯುತ್ತಿರುವ ಚರ್ಚೆಗೆ ನಿರ್ಮಾಪಕಿ ಏಕ್ತಾ ಕಪೂರ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ದುಷ್ಟರೇ ನಿಮಗೆ ತಿಳಿದಿರಲಿ ಪ್ರಪಂಚದ 1% ಜನರಿಗೆ ಯಾವುದೇ ಕಾಯಿಲೆ ಮತ್ತು ಶಸ್ತ್ರಚಿಕಿತ್ಸೆ ಆಗದಿದ್ದರೂ ಹೃದಯಾಘಾತವಾಗುತ್ತದೆ. ಇದು ನನ್ನ ವೈದ್ಯರು ನೀಡಿದ ಮಾಹಿತಿ. ಶ್ರೀದೇವಿಯವರ ಸಾವು ಹಣೆಯಲ್ಲಿ ಬರೆದಿದ್ದು, ನಿಮ್ಮಂತವರ ಕೆಟ್ಟ ವದಂತಿಗಳಿಂದಲ್ಲ ಎಂದು ಕಿಡಿಕಾರಿದ್ದಾರೆ.

  • ಶತಕ ಸಿಡಿಸಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ರೋಹಿತ್ ಶರ್ಮಾ

    ಶತಕ ಸಿಡಿಸಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ರೋಹಿತ್ ಶರ್ಮಾ

    ಪೋರ್ಟ್ ಎಲಿಜಬೆತ್: ಕೇವಲ ಮೂರು ಪಂದ್ಯಗಳಲ್ಲಿ ವಿಫಲವಾದ ಕಾರಣಕ್ಕೆ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮಾಧ್ಯಮಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿದ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮಾ, ನಾನು ಕೇವಲ ಮೂರು ಪಂದ್ಯಗಳಲ್ಲಿ ಅಲ್ಪ ಮೊತ್ತಕ್ಕೆ ಔಟ್ ಆಗಿದ್ದ ಮಾತ್ರಕ್ಕೆ ಕೆಟ್ಟ ಪ್ರದರ್ಶನ ನೀಡಿದ್ದೇನೆ ಎಂದು ಹೇಗೆ ನಿರ್ಧಾರಕ್ಕೆ ಬರುತ್ತೀರಿ? ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಉತ್ತಮ ಪ್ರದರ್ಶನ ಎಂದು ಹೇಳುತ್ತಿರ ಎಂದು ಪ್ರಶ್ನಿಸಿದರು.

    ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಉತ್ತರಿಸಿದ ಅವರು, 2013ರಲ್ಲಿ ನನಗೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಲಭಿಸಿತ್ತು. ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಕಣಕ್ಕೆ ಇಳಿಯುವ ವೇಳೆ ಸಾಕಷ್ಟು ಒತ್ತಡ ಎದುರಿಸಿದ್ದೆ. ಹೀಗಾಗಿ ಅಂದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹೆಚ್ಚು ರನ್ ಗಳಿಸಲು ಆಗಿರಲಿಲ್ಲ. ಅದು ಮುಗಿದ ಅಧ್ಯಾಯ ಎಂದರು.

    ಯಾವುದೇ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಎಲ್ಲಾ ಆಟಗಾರರಿಗೂ ಉತ್ತಮ ಆರಂಭ ಲಭಿಸುವುದಿಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ನೆಟ್ ನಲ್ಲಿ ಉತ್ತಮವಾಗಿ ಅಭ್ಯಾಸ ನಡೆಸಿದ್ದೆ. ಪ್ರತಿಯೊಬ್ಬ ಆಟಗಾರರನ ವೃತ್ತಿ ಜೀವನದಲ್ಲಿ ಇಂತಹ ಸನ್ನಿವೇಶಗಳು ಎದುರಾಗುತ್ತದೆ. ಕೇವಲ ಎರಡು ಅಥವಾ ಮೂರು ಪಂದ್ಯಗಳ ಪ್ರದರ್ಶನದಿಂದ ಆಟಗಾರನ ಸಾಮರ್ಥ್ಯ ನಿರ್ಧರಿಸುವುದು ಸರಿಯಲ್ಲ ಎಂದು ಹೇಳಿದರು.

    ಹಿಂದಿನ ಪಂದ್ಯದಲ್ಲಿ ಗಳಿಸಿದ ಶತಕ ನನ್ನ ಮನೋಬಲ ಹೆಚ್ಚುವಂತೆ ಮಾಡಿದೆ. ಶತಕದ ಖುಷಿಯಲ್ಲಿ ಮೈಮರೆಯದೆ ಮುಂದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ಕಡೆ ಗಮನಹರಿಸಿತ್ತೆನೆ ಎಂದರು.

    ಮಂಗಳವಾರ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಐದನೇ ಪಂದ್ಯದಲ್ಲಿ ರೋಹಿತ್ ಶತಕ (115 ರನ್) ಗಳಿಸಿ ಮಿಂಚಿದ್ದರು. ಏಕದಿನ ಮಾದರಿಯಲ್ಲಿ 17ನೇ ಶತಕದ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ನಡೆದಿದ್ದ ನಾಲ್ಕು ಪಂದ್ಯಗಳಲ್ಲಿ (40ರನ್) ಮಾತ್ರ ಗಳಿಸಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ರೋಹಿತ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮಾಧ್ಯಮಗಳು ‘ಮೇಕ್ ಇನ್ ಇಂಡಿಯಾ ರೋಹಿತ್’, ‘ಸ್ವದೇಶದಲ್ಲಿ ಹೀರೋ ವಿದೇಶದಲ್ಲಿ ಝೀರೋ’ ಎಂದು ಸುದ್ದಿ ಪ್ರಕಟಿಸಿ ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನವನ್ನು ಟೀಕಿಸಿತ್ತು. ಇದನ್ನೂ ಓದಿ: ರೋ`ಹಿಟ್’ ಸಿಕ್ಸರ್ ಗೆ ಸಚಿನ್ ಸಾಧನೆ ಬ್ರೇಕ್!

    ರೋಹಿತ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ಏಕದಿನ ಪಂದ್ಯವನ್ನು ಜಯಗಳಿಸಿ 4-1 ಅಂತರದಿಂದ ಸರಣಿ ವಶಕ್ಕೆ ಪಡೆಯಿತು. ಇದರೊಂದಿಗೆ ಭಾರತದ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಜಯಿಸಿದ ಹೆಗ್ಗಳಿಕೆ ಪಡೆದುಕೊಂಡಿದೆ. ಸರಣಿಯ ಆರನೇ ಹಾಗೂ ಅಂತಿಮ ಪಂದ್ಯ ಫೆಬ್ರವರಿ 16 ರಂದು ಸೆಂಚೂರಿಯನ್ ನಲ್ಲಿ ನಡೆಯಲಿದೆ.