Tag: Cristiano Ronaldo

  • ಮದ್ವೆಗೂ ಮುನ್ನ 4 ಮಕ್ಕಳ ತಂದೆಯಾಗಿರೋ ರೊನಾಲ್ಡೋ ಮತ್ತೆ ಟ್ವಿನ್ಸ್ ನೀರಿಕ್ಷೆಯಲ್ಲಿ

    ಮದ್ವೆಗೂ ಮುನ್ನ 4 ಮಕ್ಕಳ ತಂದೆಯಾಗಿರೋ ರೊನಾಲ್ಡೋ ಮತ್ತೆ ಟ್ವಿನ್ಸ್ ನೀರಿಕ್ಷೆಯಲ್ಲಿ

    ವಾಷಿಂಗ್ಟನ್: ಫುಟ್ಬಾಲ್ ಆಟಗಾರ ಕ್ರಿಸ್ಟಿಯನೋ ರೊನಾಲ್ಡೋ ಎಲ್ಲರಿಗೂ ಗೊತ್ತು. ಇವರು ಮದುವೆ ಆಗುವ ಮುನ್ನವೇ 4 ಮಕ್ಕಳ ತಂದೆ ಎಂಬುದು ಕೂಡ ಹಳೇ ಸುದ್ದಿಯಾಗಿದೆ. ಆದರೆ ಈಗ ರೆನಾಲ್ಡೋ ಗರ್ಲಫ್ರೆಂಡ್ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಇವರು ಅವಳಿ ಮಕ್ಕಳ ನೀರಿಕ್ಷೆಯಲ್ಲಿದ್ದಾರೆ.

    ಗರ್ಲ್‍ಫ್ರೆಂಡ್ ಜಾರ್ಜಿನಾ ರೋಡ್ರಿಗಸ್ ಜೊತೆಗಿನ ಫೋಟೋವೊಂದನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಅವಳಿ ಮಗು ಪಡೆಯುವ ನೀರಿಕ್ಷೆಯಲ್ಲಿ ಇದ್ದೇವೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ರೊನಾಲ್ಡೋ ಇದಕ್ಕೂ ಮೊದಲೇ ತಮ್ಮ ಇತರೆ ಗೆಳತಿಯರೊಂದಿಗೆ ನಾಲ್ಕು ಮಕ್ಕಳನ್ನು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ನಾವು 6ನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮಗೆ ಬಹಳ ಸಂತೋಷ ಆಗುತ್ತಿದೆ ಎಂದು ಬರೆದುಕೊಂಡಿದ್ದ ರೊನಾಲ್ಡೋ, ತನ್ನ 4 ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಕೂಡ ಶೇರ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

     

    View this post on Instagram

     

    A post shared by Cristiano Ronaldo (@cristiano)

    ರೊನಾಲ್ಡೋ ಇರುವರೆಗೂ ಯಾರನ್ನೂ ಮದುವೆಯಾಗಿಲ್ಲ. ಹೀಗಿರುವಾಗ ಬೇರೆ ಬೇರೆ ಗೆಳತಿಯರೊಂದಿಗೆ 4 ಮಕ್ಕಳ ತಂದೆಯಾಗಿದ್ದಾರೆ. ಈಗ ಹಲವು ವರ್ಷಗಳಿಂದ ಡೇಟ್ ಮಾಡುತ್ತಿರುವ ಜಾರ್ಜಿನಾ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.

    ಜಾರ್ಜಿನಾ ಮಾಡೆಲ್. ರೋನಾಲ್ಡೋ ಮತ್ತು ಜಾರ್ನಿನಾ ಮೊದಲ ಬಾರಿಗೆ ಸ್ಪೇನ್‍ನಲ್ಲಿ ಭೇಟಿಯಾಗಿದ್ದರು. ಅವರು 2016ರಲ್ಲಿ ಭೇಟಿ ಪರಿಚಯಕ್ಕೆ ತಿರುಗಿ ಡೇಟಿಂಗ್ ಶುರು ಮಾಡಿದ್ದರು. ಇದೀಗ ಜಾರ್ಜಿನಾ ರೋನಾಲ್ಡೋ ಅವರ ಅವಳಿ ಮಕ್ಕಳಿಗೆ ತಾಯಿ ಆಗುವ ನೀರಿಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ತಂದೆಯ ಮೂಢನಂಬಿಕೆ, ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟ ಬಾಲಕಿ

    ಮೊದಲು ರೊನಾಲ್ಡೋ ಕಿಮ್ ಕರ್ದಿಶಿಯಾ, ಜಯೀನಾ ಜಯಿನಾ, ಮಿರಾಲ್ ಗ್ರೀಸ್‍ಲೆಸ್, ರೊಮ್ಯಾರಿಯಾ, ಎಲಿಸಾ ಗುಡಾವಿನಾ ಸೇರಿದಂತೆ ಹಲವರ ಜೊತೆ ಲವ್‍ನಲ್ಲಿದ್ದರು. ಸದ್ಯ ರೊನಾಲ್ಡೋ ಎಲ್ಲಾ ಮಕ್ಕಳನ್ನ ಜಾರ್ಜಿನಾ ನೋಡಿಕೊಳ್ಳುತ್ತಿದ್ದಾರೆ.

  • ಕ್ರಿಶ್ಚಿಯಾನೊ ರೊನಾಲ್ಡೊ ಹೊಸ ಕ್ಲಬ್ ಸೇರ್ಪಡೆ: ಟ್ರೆಂಡ್ ಆಯ್ತು ನಂ-7

    ಕ್ರಿಶ್ಚಿಯಾನೊ ರೊನಾಲ್ಡೊ ಹೊಸ ಕ್ಲಬ್ ಸೇರ್ಪಡೆ: ಟ್ರೆಂಡ್ ಆಯ್ತು ನಂ-7

    ಟ್ಯುರಿನ್: ಪೋರ್ಚುಗಲ್ ಫುಟ್‍ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಇಟಲಿಯ ಜುವೆಂಟಸ್ ಕ್ಲಬ್ ತ್ಯಜಿಸಿ, ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಸೇರ್ಪಡೆಗೊಂಡಿದ್ದಾರೆ. ಈ ನಡುವೆ ಅವರ ಜೆರ್ಸಿ ನಂಬರ್ 7 ಕ್ರಿಕೆಟ್ ಲೋಕದಲ್ಲೂ ಟ್ರೆಂಡ್ ಸೃಷ್ಟಿಸಿದೆ.

    ಕ್ರಿಶ್ಚಿಯಾನೊ ರೊನಾಲ್ಡೊ ಜುವೆಂಟಸ್ ಕ್ಲಬ್ 2018ರಿಂದ ಜುವೆಂಟಸ್ ಕ್ಲಬ್ ಪರ ಆಡುತ್ತಿದ್ದರು. ಇದೀಗ ಆ ಕ್ಲಬ್‍ಗೆ ಗುಡ್ ಬೈ ಹೇಳಿ ತನ್ನ ಹಳೆಯ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಕೂಡಿಕೊಂಡಿದ್ದಾರೆ. ಈ ಹಿಂದೆ ರೊನಾಲ್ಡೊ 2003ರಿಂದ 2009ರ ವರೆಗೆ ಇದೇ ಕ್ಲಬ್ ಪರ ಆಡಿದ್ದರು. ಇದೀಗ ಮತ್ತೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ರೊನಾಲ್ಡೊ ಆಗಮನವಾಗಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

    ರೊನಾಲ್ಡೊ ಅತ್ತ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಸೇರ್ಪಡೆಗೊಳ್ಳುವುದು ಖಚಿವಾಗುತ್ತಿದ್ದಂತೆ ಇತ್ತ ಕ್ರಿಕೆಟ್ ಲೋಕದಲ್ಲಿ ನಂ-7 ಸುದ್ದಿ ಮಾಡಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹೇಂದ್ರ ಸಿಂಗ್ ಧೋನಿಯವರ ಫೋಟೋ ಹಾಕಿಕೊಂಡು ನಮ್ಮ ಜೆರ್ಸಿ ನಂಬರ್ 7 ಇನ್ನೂ ಮುಂದೆ ಮ್ಯಾಂಚೆಸ್ಟರ್ ಯುನೈಟೆಡ್‍ನಲ್ಲಿ ಎಂದು ಬರೆದುಕೊಂಡಿದೆ.

    ಫುಟ್‍ಬಾಲ್‍ನಲ್ಲಿ 7ನಂಬರ್ ಜೆರ್ಸಿಯಲ್ಲಿ ರೊನಾಲ್ಡೊ ಕಾಣಿಸಿಕೊಂಡರೆ, ಕ್ರಿಕೆಟ್ ಲೋಕದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 7 ನಂಬರ್ ಜೆರ್ಸಿಯಲ್ಲಿ ಮಿಂಚಿದ್ದಾರೆ. ಇದೀಗ ಎರಡು ಬೇರೆ ಬೇರೆ ಕ್ರೀಡೆಯ ದಿಗ್ಗಜ ಆಟಗಾರ ಜೆರ್ಸಿ ನಂಬರ್ ಟ್ರೆಂಡ್ ಸೃಷ್ಟಿಸಿದೆ. ಇದನ್ನೂ ಓದಿ: ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

  • ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

    ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

    ಬುಡಾಪೆಸ್ಟ್: ಪೋರ್ಚುಗಲ್ ಫುಟ್‍ಬಾಲ್ ಟೀಂ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಟೇಬಲ್ ಮೇಲಿರಿಸಿದ್ದ ಕೊಕಾ ಕೋಲಾ ಬಾಟಲ್ ಗಳನ್ನು ಕೆಳಗೆ ಇರಿಸಿದ ಪರಿಣಾಮ ಕಂಪನಿ 29.34 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ.

    ಶೇರ್ ಮಾರುಕಟ್ಟೆಯಲ್ಲಿ ಕೊಕಾ ಕೋಲಾ ಕಂಪನಿಯ ಶೇರುಗಳ ಮುಖಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಇಳಿಕೆಯಾಗಿದೆ. ಅಂದ್ರೆ ಶೇ.1.6ರಷ್ಟು ಬೆಲೆ ಇಳಿದಿದೆ. ಸುದ್ದಿಗೋಷ್ಠಿ ವೇಳೆ ಟೇಬಲ್ ಮೇಲೆ ಕೊಕಾ ಬಾಟೆಲ್ ಗಳನ್ನು ಇರಿಸಲಾಗಿತ್ತು. ವೇದಿಕೆಯತ್ತ ಬರುತ್ತಲೇ ತಮ್ಮ ಮುಂದಿದ್ದ ಕೊಕಾ ಕೋಲಾ ಬಾಟೆಲ್ ಗಳನ್ನು ಕೆಳಗಿರಿಸಿ, ನೀರು ಕುಡಿಯಿರಿ ಎಂದು ಆ ಬಾಟೆಲ್ ಮುಂದಿಟ್ಟುಕೊಂಡರು.

    ಕೊಕಾ ಕೋಲಾ ಪ್ರಾಯೋಜಕತ್ವ: ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಕೊಕಾ ಕೋಲಾ ಮಾರ್ಕೆಟ್ ವ್ಯಾಲ್ಯೂ 242 ಕೋಟಿ ಅರಬ್ ಡಾಲರ್ ನಿಂದ 238 ಅರಬ್ ಡಾಲರ್ ಕೋಟಿಗೆ ತಲುಪಿದೆ. 11 ದೇಶಗಳಲ್ಲಿ ನಡೆಯುತ್ತಿರುವ ಯುಇಎಫ್‍ಎ ಯುರೋ ಕಪ್ ಗೆ ಕೊಕಾ ಕೋಲಾ ಪ್ರಾಯೋಜಕತ್ವ ಪಡೆದುಕೊಂಡಿದೆ.

    ಫಿಟ್ನೆಸ್ ಡಯಟ್: 36 ವರ್ಷದ ರೊನಾಲ್ಡೊ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನ ಅಳವಡಿಸಿಕೊಂಡಿದ್ದಾರೆ. ಫಿಟ್ನೆಸ್ ಗಾಗಿ ಯಾವುದೇ ರೀತಿಯ ಕೋಲ್ಡ್ ಡ್ರಿಂಕ್ ಮತ್ತು ಏರೆಟೆಡ್ ಡ್ರಿಂಕ್ ಗಳಿಂದ ದೂರ ಇರುತ್ತಾರೆ. ಭಾರತ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ವಿಷಯದಲ್ಲಿ ರೊನಾಲ್ಡೋ ಅವರನ್ನ ಫಾಲೋ ಮಾಡುತ್ತಾರೆ. ಕೊಹ್ಲಿ ಅಂತೆ ಹಲವು ಕ್ರೀಡಾಪಟುಗಳು ಫಿಟ್ನೆಸ್ ಗಾಗಿ ರೊನಾಲ್ಡೊ ಅವರನ್ನು ಅನುಸರಿಸುತ್ತಾರೆ.

    ಈ ಪೋರ್ಚುಗಲ್ ತಂಡವನ್ನು ಗ್ರೂಫ್ ಎಫ್ ನಲ್ಲಿರಿಸಲಾಗಿದೆ. ಪೋರ್ಚುಗಲ್ ಜೊತೆ ಜರ್ಮನಿ, ಫ್ರಾನ್ಸ್ ಮತ್ತು ಹಂಗರಿ ಸಹ ಇದೇ ಗ್ರೂಫ್ ನಲ್ಲಿವೆ. ಫ್ರಾನ್ಸ್ ಫಿಫಾ ವರ್ಲ್ಡ್  ಕಪ್ ಚಾಂಪಿಯನ್ ಆಗಿದೆ. ಜರ್ಮನಿ ಮೂರು ಬಾರಿ ಯುರೋ ಚಾಂಪಿಯನ್ ಆಗಿದೆ. 2016ರ ಯುರೋ ಕಪ್ ಫೈನಲ್ ನಲ್ಲಿ ಪೋರ್ಚುಗಲ್ ಎದರು ಫ್ರಾನ್ಸ್ ಸೋಲೊಪ್ಪಿಕೊಂಡಿತ್ತು.

  • ಫೋರ್ಬ್ಸ್  ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್

    ಫೋರ್ಬ್ಸ್  ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್

    ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ವಿಶ್ವದ ಅತಿ ಹೆಚ್ಚು ಗಳಿಕೆಯ ಆಟಗಾರರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಆಟಗಾರರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಟಾಪ್-100 ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಟಾಪ್ 100ರಲ್ಲಿ ಗುರುತಿಸಿಕೊಂಡ ಏಕೈಕ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.

    ವಿರಾಟ್ ಕೊಹ್ಲಿ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಅತಿ ಹೆಚ್ಚು ಗಳಿಕೆಯ ಟಾಪ್-100 ಆಟಗಾರರಲ್ಲಿ 66ನೇ ಸ್ಥಾನದಲ್ಲಿದ್ದಾರೆ. ಅವರು 2019-2020ರಲ್ಲಿ ಮಧ್ಯದಲ್ಲಿ 26 ಮಿಲಿಯನ್ ಡಾಲರ್ (ಸುಮಾರು 196 ಕೋಟಿ ರೂ.) ಗಳಿಸಿದ್ದಾರೆ ಎಂದು ತಿಳಿಸಲಾಗಿದೆ.

    ಫೋರ್ಬ್ಸ್ ಪಟ್ಟಿಯಲ್ಲಿ ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಫುಟ್ಬಾಲ್ ತಾರೆ ಪೋರ್ಚುಗಲ್‍ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನ ಹಿಂದಿಕ್ಕಿದ್ದಾರೆ. ಫೆಡರರ್ 106.3 ಮಿಲಿಯನ್ ಡಾಲರ್ (ಸುಮಾರು 802 ಕೋಟಿ ರೂ.) ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಹಾಗೂ ಲಿಯೋನೆಲ್ ಮೆಸ್ಸಿ 104 ಮಿಲಿಯನ್ ಡಾಲರ್ (ಸುಮಾರು 785 ಕೋಟಿ ರೂ.) ಗಳಿಸಿದ್ದಾರೆ.

    ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೊನಾಲ್ಡೊ ಕಳೆದ ವರ್ಷ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಗಳಿಸಿದ್ದರು. ಅದೇ ಸಮಯದಲ್ಲಿ, ಮೆಸ್ಸಿ ಪೋರ್ಚುಗೀಸ್ ಫುಟ್ಬಾಲ್ ಆಟಗಾರ ರೊನಾಲ್ಡೊಗಿಂತ ಕೇವಲ 8 ಕೋಟಿ ಕಡಿಮೆ ಗಳಿಸಿದ್ದರು. ಈ ಬಾರಿಯ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 5 95.5 ಮಿಲಿಯನ್ (ಸುಮಾರು 721 ಕೋಟಿ ರೂ.) ಗಳಿಸಿದ್ದಾರೆ.

    ಫೆಡರರ್ ಸಾಧನೆ:
    ಹೆಚ್ಚು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಫೆಡರರ್, ಬ್ರಾಂಡ್ ಅನುಮೋದನೆಯಿಂದ ಸುಮಾರು 7 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಅವರು ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದರು. ಫೆಡರರ್ ಮೊದಲ ಸ್ಥಾನಕ್ಕೆ ಜಿಗಿದು ಈ ಸಾಧನೆ ಮಾಡಿದ ಮೊದಲ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಯಾರು, ಗಳಿಕೆ ಎಷ್ಟು?:
    1. ರೋಜರ್ ಫೆಡರರ್- ಸ್ವಿಟ್ಜರ್ಲೆಂಡ್- ಟೆನಿಸ್- 802 ಕೋಟಿ ರೂ.
    2. ಕ್ರಿಸ್ಟಿಯಾನೊ ರೊನಾಲ್ಡೊ- ಪೋರ್ಚುಗಲ್- ಫುಟ್ಬಾಲ್- 793 ಕೋಟಿ ರೂ.
    3. ಲಿಯೋನೆಲ್ ಮೆಸ್ಸಿ- ಅರ್ಜೆಂಟೀನಾ- ಫುಟ್ಬಾಲ್- 785 ಕೋಟಿ ರೂ.
    4. ನೇಮರ್- ಬ್ರೆಜಿಲ್- ಫುಟ್ಬಾಲ್- 721 ಕೋಟಿ ರೂ.
    5. ಲೆಬೋರ್ನ್ ಜೇಮ್ಸ್- ಅಮೆರಿಕ- ಬ್ಯಾಸ್ಕೆಟ್‍ಬಾಲ್- 453 ಕೋಟಿ ರೂ.

    ಮಹಿಳೆಯರಲ್ಲಿ ನವೋಮಿ ಒಸಾಕಾಗೆ ಅಗ್ರಸ್ಥಾನ:
    ಮಹಿಳೆಯರಲ್ಲಿ ಜಪಾನ್‍ನ ಟೆನಿಸ್ ತಾರೆ ನವೋಮಿ ಒಸಾಕಾ ವಿಶ್ವದ ಅತಿ ಹೆಚ್ಚು ಹಣ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಅವರು ಸುಮಾರು 284 ಕೋಟಿ ರೂ. ಗಳಿಸಿದ್ದಾರೆ. ಒಸಾಕಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಒಟ್ಟಾರೆ ಅತಿ ಹೆಚ್ಚು ಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಸಾಕಾ 29ನೇ ಸ್ಥಾನದಲ್ಲಿದ್ದಾರೆ. ಸೆರೆನಾ ಈ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ. ಒಸಾಕಾ ಸತತ ಎರಡು ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ. ಅವರು 2018ರಲ್ಲಿ ಯುಎಸ್ ಓಪನ್ ಮತ್ತು 2019ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದಿದ್ದರು. ಅದೇ ಸಮಯದಲ್ಲಿ ಸೆರೆನಾ 23 ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ.

  • 1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    – ಅಜಿಂಕ್ಯ ರಹಾನೆಯಿಂದ 10 ಲಕ್ಷ ರೂ. ದೇಣಿಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಿನಿಮಾ ನಟ, ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು, ಕ್ರಿಕೆಟಿಗರು ಸಹಾಯ ನೀಡಲು ಒಬ್ಬೊಬ್ಬರೇ ಮುಂದೆ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಬಿಸಿಸಿಐ, ಸೌರವ್ ಗಂಗೂಲಿ, ಸುರೇಶ್ ರೈನಾ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಸದ ಗೌತಮ್ ಗಂಭೀರ್  1 ಕೋಟಿ ರೂ. ನೀಡಿದ್ದಾರೆ.

    ಬಿಜೆಪಿ ಸಂಸದ ಗಂಭೀರ್ ಅವರು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರೂ. ಜಮಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಜೊತೆಗೆ ಗಂಭೀರ್ ಅವರು ನಡೆಸುತ್ತಿರುವ ಎನ್‍ಜಿಒ ಬಡವರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದೆ.

    ಕ್ರೀಡಾ ಸಚಿವ ರಿಜಿಜು ಅವರು ಟ್ವೀಟ್ ಮಾಡಿ, ನಾನು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿ (ಎಂಪಿಎಲ್‍ಡಿಎಸ್)ನಿಂದ ಒಂದು ಕೋಟಿ ರೂ. ಜಮಾ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಇತ್ತ ಟೀಂ ಇಂಡಿಯಾ ಕ್ರಿಕೆಟರ್ ಅಜಿಂಕ್ಯ ರಹಾನೆ 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ.

    ಕೊರೊನಾ ವೈರಸ್ ವಿಶ್ವಾದ್ಯಂತ 195 ದೇಶಗಳಿಗೆ ಹರಡಿದ್ದು, ತಮ್ಮ ದೇಶವನ್ನು ರಕ್ಷಿಸಲು ಅಲ್ಲಿಯ ಆಟಗಾರರು, ಸೆಲೆಬ್ರಿಟಿಗಳು, ಉದ್ಯಮಿಗಳು ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ. ಫುಟ್ಬಾಲ್ ಆಗದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ, ತರಬೇತುದಾರ ಮೌರಿಜಿಯೊ ಸಾರಿ. ಇಟಲಿಯನ್ ಫುಟ್ಬಾಲ್ ಕ್ಲಬ್ ಯುವೆಂಟಸ್ ಪರ ಆಡಿರುವ ಇತರ ಆಟಗಾರರು 100 ಮಿಲಿಯನ್ ಯುರೋಗಳನ್ನು (ಸುಮಾರು 753 ಕೋಟಿ ರೂ.) ದೇಣಿಗೆ ನೀಡಿದ್ದಾರೆ.

    ರೊನಾಲ್ಡೊ ಅವರು ಮೂರು ತಿಂಗಳ ಸಂಬಳ 10 ಮಿಲಿಯನ್ ಯುರೋಗಳಷ್ಟು (ಸುಮಾರು 84 ಕೋಟಿ ರೂ.)ವನ್ನು ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಡೇನಿಯಲ್ ರುಗಾನಿ, ಬ್ಲೇಸ್ ಮಾಟುಡಿ ಮತ್ತು ಪಾವೊಲೊ ದಿಬಾಲಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಪೈಕಿ ದಿಬಾಲಾ ಚೇತರಿಸಿಕೊಂಡಿದ್ದು, ಉಳಿದ ಇಬ್ಬರು ಆಟಗಾರರು ಹೋಮ್ ಕ್ವಾರೆಂಟೈನ್‍ನಲ್ಲಿ ಇದ್ದಾರೆ. ಇಟಲಿಯಲ್ಲಿ ಈವರೆಗೂ 10 ಸಾವಿರಕ್ಕೂ ಅಧಿಕ ಜನರು ಸೋಂಕಿತರು ಮೃತಪಟ್ಟಿದ್ದಾರೆ.

    ಕೊರೊನಾ ವೈರಸ್‍ಗೆ ವಿಶ್ವಾದ್ಯಂತ ಭಾನುವಾರ ಮಧ್ಯಾಹ್ನದ ವೇಳೆಗೆ 30,943 ಜನರು ಮೃತಪಟ್ಟಿದ್ದಾರೆ. ಜತ್ತಿನಾದ್ಯಂತ 666,013 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 497,002 ಜನರು ಚಿಕಿತ್ಸೆ ಪಡೆಯುತ್ತಿದ್ದು, 1,38,068 ಮಂದಿ ಗುಣಮುಖರಾಗಿದ್ದಾರೆ.

  • ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ 100ನೇ ಸ್ಥಾನ

    ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ 100ನೇ ಸ್ಥಾನ

    ನವದೆಹಲಿ: 2019ರ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು ಇದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಕಳೆದ 2018 ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು 83 ನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ವರ್ಷ ಕೊಹ್ಲಿ ಅವರು 17 ಸ್ಥಾನ ಇಳಿದು 100ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಆಟಗಾರ ಆಗಿದ್ದಾರೆ.

    ಈ ವರ್ಷ ಕೊಹ್ಲಿ ಸಂಭಾವನೆ ರೂಪದಲ್ಲಿ 25 ಮಿಲಿಯನ್ ಡಾಲರ್ (174.27 ಕೋಟಿ) ಪಡೆದಿದ್ದಾರೆ. ಇದರಲ್ಲಿ 21 ಮಿಲಿಯನ್ ಡಾಲರ್ (146.39 ಕೋಟಿ) ಜಾಹೀರಾತಿನಿಂದ ಪಡೆದಿದ್ದಾರೆ. ಇನ್ನುಳಿದ 4 ಮಿಲಿಯನ್ ಡಾಲರ್ (27.88 ಕೋಟಿ) ಹಣವನ್ನು ಕ್ರಿಕೆಟ್ ಸಂಭಾವನೆಯಿಂದ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊಹ್ಲಿ ಈ ವರ್ಷ ಆದಾಯ 6.97 ಕೋಟಿ ಜಾಸ್ತಿಯಾಗಿದೆ.

    ಇನ್ನೂ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಬಾರ್ಸಿಲೋನಾದ ಫುಟ್‍ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಇದ್ದಾರೆ. ಪೋರ್ಚುಗಲ್‍ನ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

    ಫೋರ್ಬ್ಸ್ ನ ಟಾಪ್ 5  ಶ್ರೀಮಂತ ಆಟಗಾರರ ಪಟ್ಟಿ

    1. ಲಿಯೋನಲ್ ಮೆಸ್ಸಿ 127 ಮಿಲಿಯನ್ ಡಾಲರ್ (880.44 ಕೋಟಿ)
    2. ಕ್ರಿಸ್ಟಿಯಾನೋ ರೊನಾಲ್ಡೋ 109 ಮಿಲಿಯನ್ ಡಾಲರ್ ( 755.64 ಕೋಟಿ)
    3. ನೇಮ್ಮಾರ್ 105 ಮಿಲಿಯನ್ ಡಾಲರ್ (727.91 ಕೋಟಿ)
    4. ಅಲ್ವೆರೆಜ್ 94 ಮಿಲಿಯನ್ ಡಾಲರ್ (651.65 ಕೋಟಿ)
    5. ರೋಜರ್ ಫೆಡರರ್ 93.4 ಮಿಲಿಯನ್ ಡಾಲರ್ (647.77 ಕೋಟಿ)

  • ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ರೋಮ್: ಜಗತ್ತಿನ ಶ್ರೀಮಂತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪ್ರಪಂಚದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ.

    ಕಾರಿನ ಮೇಲೆ ಹೆಚ್ಚು ಫ್ಯಾಷನ್ ಹೊಂದಿರುವ ರೊನಾಲ್ಡೊ ಅವರು ಬುಗಾಟಿ ಸಂಸ್ಥೆ ನಿರ್ಮಿಸಲಾದ 11 ಮಿಲಿಯನ್ ಯುರೋ (85.65 ಕೋಟಿ ರೂ.) ಮೌಲ್ಯದ ಅತ್ಯಂತ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ.

    2019 ರಲ್ಲಿ ವಿನ್ಯಾಸ ಮಾಡಲಾದ ಬುಗಾಟಿ ಲಾ ವೂಯಿಟ್ ನೊಯಿರ್ ಎಂಬ ಕಾರನ್ನು ಖರೀದಿ ಮಾಡಿದ್ದಾರೆ. ಈಗ ಈ ಕಾರನ್ನು ಖರೀದಿ ಮಾಡಿದರೂ ಕಾರಿನ ಕೆಲ ಭಾಗಗಳನ್ನು ವಿನ್ಯಾಸ ಮಾಡಬೇಕಾಗಿರುವುದರಿಂದ 2021ಕ್ಕೆ ಪೂರ್ಣ ಪ್ರಮಾಣದಲ್ಲಿ ವಿನ್ಯಾಸಗೊಂಡು ರೊನಾಲ್ಡೊ ಅವರಿಗೆ ಹಸ್ತಾಂತರವಾಗಲಿದೆ.

    ಬುಗಾಟಿ ಕಂಪನಿ 110ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಈ ಒಂದು ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. 2019ರ ಜಿನಿವಾ ಮೋಟರ್ ಶೋದಲ್ಲಿ ಈ ಕಾರಿನ ಮಾದರಿಯನ್ನು ಕಂಪನಿ ಅನಾವರಣಗೊಳಿಸಿತ್ತು. ಈ ಕಾರು ಕಂಪನಿಯ 8.0 ಲೀಟರ್ ಟರ್ಬೋಚಾರ್ಜ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು ಗಂಟೆಗೆ 260 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮಥ್ರ್ಯ ಹೊಂದಿದೆ.

    ಕಾರಿನ ಮೇಲೆ ಹೆಚ್ಚು ಒಲವು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಗತ್ತಿನ ಅತ್ಯಂತ ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಅವರ ಬಳಿ ಮರ್ಸಿಡಿಸ್ ಸಿ ಕ್ಲಾಸ್ ಸ್ಪೋರ್ಟ್ಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599 ಜಿಟಿಒ, ಲ್ಯಾಂಬೋರ್ಗಿನಿ ಅವೆಂಟಡರ್ ಎಲ್‍ಪಿ 700-4, ಆಸ್ಟನ್ ಮಾರ್ಟೀನ್ ಡಿಬಿ 9, ಮೆಕ್ಲಾರೆನ್ ಎಂಪಿ 4 12 ಸಿ ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ನಂತಹ ದುಬಾರಿ ಕಾರಗಳನ್ನು ಹೊಂದಿದ್ದಾರೆ.

  • ಮದುವೆಯಾಗದೇ ನಾಲ್ಕನೇ ಮಗುವಿಗೆ ತಂದೆಯಾದ ರೋನಾಲ್ಡೋ

    ಮದುವೆಯಾಗದೇ ನಾಲ್ಕನೇ ಮಗುವಿಗೆ ತಂದೆಯಾದ ರೋನಾಲ್ಡೋ

    ವಾಷಿಂಗ್ಟನ್: ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಮದುವೆಯಾಗದೇ ನಾಲ್ಕನೇ ಮಗುವಿಗೆ ತಂದೆಯಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಆಸ್ಪತ್ರೆಯಲ್ಲಿರುವ ಗರ್ಲ್ ಫ್ರೆಂಡ್ ಜೊತೆಗಿರುವ ಫೋಟೋ ಹಾಕಿ ತಮ್ಮ ಸಂತೋಷದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಫೋಟೋದಲ್ಲಿ ಗೆಳತಿ ಜಾರ್ಜಿನಾ ರೊಡ್ರಿಗಜ್, ನವಜಾತ ಹೆಣ್ಣು ಮಗು, ರೋನಾಲ್ಡೊ ಮತ್ತು ಹಿರಿಯ ಮಗ ಜೂನಿಯರ್ ರೋನಾಲ್ಡೋರನ್ನು ನೋಡಬಹುದು. ಈಗಾಗಲೇ ಮಗುವಿಗೆ ಅಲಾನಾ ಮಾರ್ಟಿನ್ ಎಂದು ಹೆಸರಿಡಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ರೋನಾಲ್ಡೋ ಇದೇ ವರ್ಷ ಜೂನ್ ತಿಂಗಳಲ್ಲಿ ಇವಾ ಮತ್ತು ಮೆಥ್ಯೂ ಎಂಬ ಅವಳಿ ಮಕ್ಕಳಿಗೆ ತಂದೆಯಾಗಿದ್ದರು. ರೋನಾಲ್ಡೋ ಈ ಅವಳಿ ಮಕ್ಕಳನ್ನು ಬಾಡಿಗೆ ತಾಯಿಯ ಮೂಲಕ ಪಡೆದುಕೊಂಡಿದ್ದರು. ಜಾರ್ಜಿನಾ ಮತ್ತು ರೋನಾಲ್ಡೋ ತಮಗೆ ಹುಟ್ಟುವ ಮಗುವಿಗಿಂತ ಮೊದಲೇ ದತ್ತು ಮಕ್ಕಳನ್ನು ಪಡೆಯಲು ನಿರ್ಧರಿಸಿದ್ದು ವಿಶೇಷವಾಗಿತ್ತು. ಈ ದತ್ತು ಮಕ್ಕಳು ಹುಟ್ಟುವ ಮೊದಲೇ ಹೆಸರನ್ನು ಇಟ್ಟಿದ್ದರು.

    ಜೂನಿಯರ್ ರೋನಾಲ್ಡೋ ತಾಯಿ ಯಾರು?:
    ಫೋಟೋದಲ್ಲಿ ಕಾಣುವ ಜೂ.ರೋನಾಲ್ಡೋ ತಾಯಿ ಮೂಲತಃ ಬಾರ್ ಡ್ಯಾನ್ಸರ್ ಆಗಿದ್ದರು ಎಂದು ಹೇಳಲಾಗುತ್ತದೆ. ಆದರೆ ಇದೂವರೆಗೂ ಜೂ.ರೋನಾಲ್ಡೋ ತಾಯಿಯ ಬಗ್ಗೆ ಹೇಳಿಕೊಂಡಿಲ್ಲ. 2009ರಲ್ಲಿ ಬಾರ್ ನಲ್ಲಿ ಡ್ಯಾನ್ಸರ್ ಒಬ್ಬರನ್ನು ಭೇಟಿಯಾಗುವ ರೋನಾಲ್ಡೋ ಆಕೆಯನ್ನು ಇಷ್ಟಪಡುತ್ತಾರೆ. ನಂತರದ ದಿನಗಳಲ್ಲಿ ಒಬ್ಬರನೊಬ್ಬರನ್ನು ಇಷ್ಟಪಟ್ಟು ವಿವಾಹ ಪೂರ್ವ ದೈಹಿಕ ಸಂಪರ್ಕ ಬೆಳಸಿದ್ದಾರೆ.

    ಡ್ಯಾನ್ಸರ್ ಗರ್ಭಿಣಿ ಎಂದು ತಿಳಿದಾಗ ರೋನಾಲ್ಡೋ ಡಿಎನ್‍ಎ ಪರೀಕ್ಷೆ ಬಳಿಕ ಅದು ತನ್ನ ಮಗು ಎಂದು ಒಪ್ಪಿಕೊಂಡಿದ್ದರು. ಮಗುವಿನ ಜನ್ಮ ನೀಡಿದ ಬಳಿಕ ರೋನಾಲ್ಡೋ ತಮ್ಮ ಮೊದಲ ಮಗುವಿಗೆ ಜೂ.ರೋನಾಲ್ಡೋ ಎಂದು ಹೆಸರಿಟ್ಟಿದ್ದರು. ಸದ್ಯ ರೋನಾಲ್ಡೋ ತಮ್ಮ ಗೆಳತಿಯೊಂದಿಗಿನ ಮೊದಲ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ.