Tag: Cristiano Ronaldo

  • ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    ರಿಯಾದ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾದ ಅಲ್-ನಾಸ್ರ್‌ ಕ್ಲಬ್ ಸೇರಿದ ಬಳಿಕ ಚೊಚ್ಚಲ ಚಾಂಪಿಯನ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

    ಅರಬ್ ಕ್ಲಬ್ ಚಾಂಪಿಯನ್‌ಶಿಪ್ ಕಪ್-2023 ನಲ್ಲಿ (Arab Club Championship Cup 2023) ಅಲ್-ನಾಸ್ರ್ ಮತ್ತು ಅಲ್-ಹಿಲಾಲ್ ನಡುವಿನ ಫೈನಲ್‌ ಪಂದ್ಯದಲ್ಲಿ ಭರ್ಜರಿ ಎರಡು ಗೋಲು ಸಿಡಿಸುವ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಲ್-ನಾಸ್ರ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಅಲ್ಲದೇ ರೊನಾಲ್ಡೊ ಸೌದಿ ಅರೇಬಿಯಾದ (Saudi Arabia) ಕ್ಲಬ್‌ ಸೇರಿದ ಬಳಿಕ ಗೆದ್ದ ಮೊದಲ ಟ್ರೋಫಿಯೂ ಇದಾಗಿದೆ. ಕಳೆದ ವರ್ಷ ರೊನಾಲ್ಡೋ ಸೌದಿ ಅರೇಬಿಯಾ ತಂಡ ಸೇರಿಕೊಂಡರು.

    ಫೈನಲ್‌ ಪಂದ್ಯದಲ್ಲಿ ಗೆಲುವಿನ ಪ್ರಮುಖ ರೂವಾರಿಯಾಗಿದ್ದ ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ದಂತಕಥೆ ಗೆರ್ಡ್ ಮುಲ್ಲರ್‌ ಅವರನ್ನ ಹಿಂದಿಕ್ಕಿ ಅತಿಹೆಚ್ಚು ಹೆಡ್‌ ಗೋಲ್‌ಗಳನ್ನು (145) ಗಳಿಸಿದ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ. ಸೋಲು ಖಚಿತವಾಗಿತ್ತು ಎನ್ನುವ ಪಂದ್ಯದಲ್ಲಿ ಗೆದ್ದಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸ ತಂದಿದೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    2022ರ ಡಿಸೆಂಬರ್‌ 31 ರಂದು ರೊನಾಲ್ಡೋ ಸೌದಿ ಅರೇಬಿಯಾದ ಅನ್‌ ನಾಸ್ರ್‌ ಕ್ಲಬ್‌ಗೆ ಸೇರಿಕೊಂಡರು. ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದು, 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಬಾಬರ್‌ ಮೇಲಿನ ಗೌರವ ಇಂದಿಗೂ ಬದಲಾಗಿಲ್ಲ – ಪಾಕ್‌ ಆಟಗಾರನನ್ನ ಬಾಯ್ತುಂಬ ಹೊಗಳಿದ ಕೊಹ್ಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

    ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

    ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿದ ನಂ.1 ಕ್ರಿಕೆಟಿಗನಾಗಿದ್ದಾರೆ. ಈ ನಡುವೆ ಕೊಹ್ಲಿ ಸೋಶಿಯಲ್ ಮೀಡಿಯಾದಿಂದ ಗಳಿಸುವ ಆದಾಯದ ಬಗ್ಗೆ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಫ್ಲಾಟ್‌ಪಾರ್ಮ್ ಸಂಸ್ಥೆ ಹಾಪರ್ ಎಚ್‌ಕ್ಯೂ ಬಿಡುಗಡೆ ಮಾಡಿದ ವರದಿಯೊಂದು ಚರ್ಚೆಯನ್ನ ಹುಟ್ಟುಹಾಕಿದೆ.

    ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಹಾಗೂ ಲಿಯೊನೆಲ್ ಮೆಸ್ಸಿ (Lionel Messi) ಬಳಿಕ ವಿಶ್ವದಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 3ನೇ ಕ್ರೀಡಾಪಟು ಹಾಗೂ ನಂ.1 ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಎಂದು ಸಂಸ್ಥೆ ತಿಳಿಸಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಇದಕ್ಕೆ ಸ್ವತಃ ವಿರಾಟ್ ಕೊಹ್ಲಿ ಅವರೇ ಸ್ಪಷ್ಟನೆ ಕೊಟ್ಟಿದ್ದು, ತಾನು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ (Instagram Post Earning) 11.45 ಕೋಟಿ ರೂ. ಪಡೆಯುತ್ತೇನೆಂಬುದು ಸುಳ್ಳು ಎಂದು ಹೇಳಿದ್ದಾರೆ.

    ನಾನು ನನ್ನ ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ, ನನ್ನ ಸೋಶಿಯಲ್ ಮೀಡಿಯಾ ಗಳಿಕೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಕೊಹ್ಲಿ ಬಗ್ಗೆ ಬಂದ ಸುದ್ದಿ ಏನಿತ್ತು?
    ಕೊಹ್ಲಿ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 11.45 ಕೋಟಿ ರೂ. ಪಡೆಯುತ್ತಾರೆ ಎಂದು ಹಾಪರ್ ಎಚ್‌ಕ್ಯೂ ವರದಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದು, ಮತ್ತೊಬ್ಬ ದಿಗ್ಗಜ ಲಿಯೊನೆಲ್ ಮೆಸ್ಸಿ 2ನೇ ಸ್ಥಾನ ಪಡೆದುಕೊಂಡಿರುವುದಾಗಿ ಹೇಳಿತ್ತು.

    ರೊನಾಲ್ಡೊ ಪೋಸ್ಟ್ ಮಾಡುವ ಪ್ರಾಯೋಜಿತ ಪೋಸ್ಟ್‌ಗೆ ಸುಮಾರು 3.23 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆಯುತ್ತಾರೆ. ಅಂದರೆ ಪ್ರತಿ ಪೋಸ್ಟ್‌ಗೆ ಸುಮಾರು 26.75 ಕೋಟಿ ರೂಗಳನ್ನು ಪಡೆಯುತ್ತಾರೆ. ಅಂತೆಯೇ ಮೆಸ್ಸಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 2.56 ಮಿಲಿಯನ್ (21.49 ಕೋಟಿ ರೂ.) ನಗದನ್ನು ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ

    ವಿರಾಟ್ ಕೊಹ್ಲಿ ಜಾಗತಿಕವಾಗಿ ಟಾಪ್-20 ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಭಾರತೀಯನಾಗಿದ್ದು, ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ನಲ್ಲಿ 25.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಪಟ್ಟಿಯಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದ್ದು, ಪ್ರತಿ ಪೋಸ್ಟ್‌ಗೆ 532,000 ಅಮೆರಿಕನ್ ಡಾಲರ್ (4.40 ಕೋಟಿ ರೂ.) ಹಣವನ್ನು ಪಡೆಯುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    ದುಬೈ: ಪೋರ್ಚುಗಲ್‌ ಫುಟ್ಬಾಲ್ (Football) ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾದ ಅಲ್-ನಸ್ ಕ್ಲಬ್ (Arabian club Al Nassr) ಪರ ಮುಂದಿನ ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದ್ದರಿಂದ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ (Manchester United) ತಂಡವನ್ನು ತೊರೆದಿದ್ದಾರೆ.

    ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ರೊನಾಲ್ಡೊ 2022ರ ಫಿಫಾ ವಿಶ್ವಕಪ್‌ನಲ್ಲಿ (FIFA Worldcup) ಸೋತು ಹೊರನಡೆದಿದ್ದರು. ಈದೀಗ 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ ಎಂದು ಸೌದಿ ಕ್ಲಬ್ ಹೇಳಿಕೆ ನೀಡಿದೆ. ಆದ್ರೆ ಹಣಕಾಸು ವ್ಯವಹಾರವನ್ನು ಬಹಿರಂಗಪಡಿಸಿಲ್ಲ. ಆದ್ರೆ ರೊನಾಲ್ಡೊನೊಂದಿಗೆ 200 ಮಿಲಿಯನ್ ಯುರೋಗಿಂತಲೂ ಅಧಿಕ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ತಂದೆಗೆ ಕೊಟ್ಟ ಮಾತಿನಂತೆ ಕಪ್ ಗೆದ್ದು ತಂದ – ದಂತಕತೆಯಾಗಿ ಮರೆಯಾದ ಡ್ರಿಬ್ಲಿಂಗ್ ಗೋಲ್ ಜಾದೂಗಾರ ಪೀಲೆ

    ಬಳಿಕ ಮಾತನಾಡಿದ ರೊನಾಲ್ಡೋ, ಯೂರೋಪಿಯನ್ ಫುಟ್ಬಾಲ್‌ನಲ್ಲಿ ನಾನು ಇರಿಸಿಕೊಂಡಿದ್ದ ಎಲ್ಲ ಗುರಿಗಳನ್ನು ಸಾಧಿಸಿದ್ದೇನೆ. ಇದೀಗ ಏಷ್ಯಾದಲ್ಲಿ ನನ್ನ ಅನುಭವ ಹಂಚಿಕೊಳ್ಳಲು ಇದು ಸಕಾಲ ಎಂದು ಭಾವಿಸುತ್ತೇನೆ. ನನ್ನ ಹೊಸ ತಂಡದ ಸಹ ಆಟಗಾರರ ಜತೆ ಸೇರಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಕ್ಲಬ್‌ನ ಯಶಸ್ಸಿಗೆ ನೆರವಾಗಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    37 ವರ್ಷದ ರೊನಾಲ್ಡೋ ಕಳೆದ ತಿಂಗಳು `ನನಗೆ ಕ್ಲಬ್ ದ್ರೋಹ ಬಗೆದಿದೆ. ಡಚ್ ವ್ಯವಸ್ಥಾಪಕ ಎರಿಕ್ ಟೆನ್ ಹಗ್ ಅವರ ಬಗ್ಗೆ ಗೌರವ ಇಲ್ಲ’ ಎಂದು ಹೇಳಿಕೆ ನೀಡಿ ಓಲ್ಡ್ ಟ್ರಾಫರ್ಡ್‌ನಿಂದ ಬೇರ್ಪಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

    ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

    ಕತಾರ್‌: ಫಿಫಾ ವಿಶ್ವಕಪ್‍ನ (FIFA World Cup) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಪೋರ್ಚುಗಲ್ (Portugal) ತಂಡ ಸೋತ ಬಳಿಕ ಭಾವುಕರಾಗಿದ್ದ ಸ್ಟಾರ್ ಫುಟ್‍ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊಗೆ (Cristiano Ronaldo) ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

    ಕ್ವಾರ್ಟರ್ ಫೈನಲ್ ಸೋಲಿನೊಂದಿಗೆ ಪೋರ್ಚುಗಲ್‍ನ ಕತಾರ್ ಫಿಫಾ ವಿಶ್ವಕಪ್ ಅಭಿಯಾನ ಅಂತ್ಯವಾಗುತ್ತಿದ್ದಂತೆ ರೊನಾಲ್ಡೊ ಕಣ್ಣೀರಿಟ್ಟಿದ್ದರು. ಇದು ವಿರಾಟ್ ಕೊಹ್ಲಿ ಸಹಿತ ರೊನಾಲ್ಡೊ ಅವರ ಅಭಿಮಾನಿಗಳಿಗೆ ದುಃಖ ತರಿಸಿತ್ತು. ಇದೀಗ ಈ ಬಗ್ಗೆ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಟೆಸ್ಟ್‌ನಿಂದ ರೋಹಿತ್ ಹೊರಕ್ಕೆ – ಕನ್ನಡಿಗ ಕ್ಯಾಪ್ಟನ್

    ಕ್ರೀಡೆಗೆ ಹಾಗೂ ಕ್ರೀಡಾಭಿಮಾನಿಗಳಿಗಾಗಿ ನೀವು ಇಲ್ಲಿಯವರೆಗೂ ಮಾಡಿರುವ ಸಾಧನೆಯನ್ನು ಒಂದು ಪ್ರಶಸ್ತಿಯಿಂದ ನಿರ್ಧರಿಸಲು ಸಾಧ್ಯವಿಲ್ಲ. ನೀವು ಅಭಿಮಾನಿಗಳಿಗೆ ಬೀರಿರುವ ಪ್ರಭಾವವನ್ನು ಯಾವುದೇ ಶೀರ್ಷಿಕೆಯಿಂದ ವಿವರಿಸಲು ಸಾಧ್ಯವಿಲ್ಲ. ನನ್ನನ್ನು ಸೇರಿದಂತೆ ವಿಶ್ವದಾದ್ಯಂತ ಇರುವ ನಿಮ್ಮ ಅಭಿಮಾನಿಗಳು ನಿಮ್ಮ ಆಟವನ್ನು ನೋಡುವ ಮೂಲಕ ಆನಂದಿಸಿದ್ದೇವೆ. ನಿಮ್ಮ ಸಾಧನೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ನೀವು ದೇವರಿಂದ ಪಡೆದಿರುವ ವರ ಇದಾಗಿದೆ. ಪಂದ್ಯದ ಪ್ರತಿಯೊಂದು ಕ್ಷಣದಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರ ನೀವಾಗಿದ್ದೀರಿ. ನಿಮ್ಮ ಕಠಿಣ ಪರಿಶ್ರಮ ಹಾಗೂ ಬದ್ಧತೆಯೇ ಇದಕ್ಕೆ ಕಾರಣ. ನೀವು ನನ್ನ ಪಾಲಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸೂಪರ್‌ ಓವರ್‌ನಲ್ಲಿ ಸಿಕ್ಸರ್‌, ಬೌಂಡರಿ – ಆಸೀಸ್‌ ವಿರುದ್ಧ ಭಾರತಕ್ಕೆ 4 ರನ್‌ ರೋಚಕ ಜಯ

    ಕಾರ್ಟರ್‍ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ 1-0 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು. ಈ ಮೂಲಕ 5 ಬಾರಿಯ ಬ್ಯಾಲನ್ ಡಿ’ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಪೋರ್ಚುಗಲ್‍ನ ವಿಶ್ವಕಪ್ ಕನಸು ಭಗ್ನಗೊಂಡಿತು. ಅಲ್ಲದೇ ಈ ವಿಶ್ವಕಪ್ ರೊನಾಲ್ಡೊ ಪಾಲಿನ ಕೊನೆಯ ವಿಶ್ವಕಪ್ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮ್ಯಾಂಚೆಸ್ಟರ್ ಕ್ಲಬ್ ತೊರೆದ ಕ್ರಿಸ್ಟಿಯಾನೋ ರೊನಾಲ್ಡೊ – ಮುಂದೆ ಯಾವ ಕ್ಲಬ್ ಪರ ಆಡ್ತಾರೆ?

    ಮ್ಯಾಂಚೆಸ್ಟರ್ ಕ್ಲಬ್ ತೊರೆದ ಕ್ರಿಸ್ಟಿಯಾನೋ ರೊನಾಲ್ಡೊ – ಮುಂದೆ ಯಾವ ಕ್ಲಬ್ ಪರ ಆಡ್ತಾರೆ?

    ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರು ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ, ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಅನ್ನು ತೊರೆದರು. ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಎರಿಕ್ ಟೆನ್ ಹ್ಯಾಗ್ ಅವರನ್ನು ಗೌರವಿಸುವುದಿಲ್ಲ ಎಂದು ಹೇಳಿ ತಮ್ಮ ತಂಡದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದರು.

    ಇದರ ಬೆನ್ನಲ್ಲೇ ರೊನಾಲ್ಡೊ ಸೌದಿ ಅರೇಬಿಯಾದ ತಂಡಕ್ಕೆ ಸೇರುವ ಬೃಹತ್ ಪ್ರಸ್ತಾಪವನ್ನೇ ತಿರಸ್ಕರಿಸಿದ್ದಾರೆ ಎಂಬ ವರದಿಯನ್ನು ದೃಢಪಡಿಸಿದ್ದಾರೆ. 37 ವಯಸ್ಸಿನ ರೊನಾಲ್ಡೊ ಈಗಲೇ ನಿವೃತ್ತರಾಗುವ ಸಾಧ್ಯತೆಯಿಲ್ಲ. ಕತಾರ್ ಅವರ ಕೊನೆಯ ವಿಶ್ವಕಪ್ ಪಂದ್ಯ ಆಗಿರಬಹುದು. ಆದರೂ ಅವರು ತಮ್ಮ 40ನೇ ವಯಸ್ಸಿನಲ್ಲಿ ಕ್ರೀಡೆಗೆ ವಿದಾಯ ಹೇಳಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.

    ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮುಂದೆ ಯಾವ ತಂಡಗಳಲ್ಲಿ ಆಡಬಹುದು ಎಂಬುದು ಕುತೂಹಲಕಾರಿಯಾಗಿದೆ. ಅವರ ಮುಂದಿರುವ ಕೆಲವು ಪ್ರಮುಖ ತಂಡಗಳ ಹೆಸರು ಇಂತಿವೆ.

    ಚೆಲ್ಸಿಯಾ:
    ಕಳೆದ ಕೆಲ ದಿನಗಳ ಹಿಂದೆ ರೊನಾಲ್ಡೊ ಚೆಲ್ಸಿಯಾ ತಂಡದೊಂದಿಗೆ ಸಂಪರ್ಕ ಹೊಂದಿದ್ದರು. ಲಂಡನ್ ಕ್ಲಬ್‌ಗೆ ಅತ್ಯುತ್ತಮ ಆಟಗಾರನ ಅವಶ್ಯಕತೆಯಿದ್ದಾಗ ಅವರು ಚೆಲ್ಸಿಯಾ ತಂಡದೊಂದಿಗೆ ಕೈ ಜೋಡಿಸಿದ್ದರು. ಇದೀಗ ರೊನಾಲ್ಡೊ ತಮ್ಮ ಆಸಕ್ತಿಯನ್ನು ಚೆಲ್ಸಿಯಾ ಕಡೆಗೆ ತೋರಿಸುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ನಲ್ಲಿನ ವರದಿಗಳು ತಿಳಿಸಿವೆ.

    ಸ್ಪೋರ್ಟಿಂಗ್ ಲಿಸ್ಬನ್:
    ರೊನಾಲ್ಡೊ 2003 ರಲ್ಲಿ ಪೋರ್ಚುಗೀಸ್ ತಂಡದ ಸ್ಪೋರ್ಟಿಂಗ್ ಲಿಸ್ಬನ್‌ನಿಂದ 14.41 ಮಿಲಿಯನ್ ಡಾಲರ್‌ಗೆ (ಸುಮಾರು 100 ಕೋಟಿ ರೂ.) ಯುನೈಟೆಡ್‌ಗೆ ಸೇರಿದರು. ಈ ಮೂಲಕ ಫರ್ಗುಸನ್ ಮತ್ತು ಕ್ಲಬ್‌ನ ಆಟಗಾರರ ಸ್ನೇಹ ಸಂಬಂಧ ಗಮನ ಸೆಳೆಯಿತು. ಇದನ್ನೂ ಓದಿ: ಭಾರತೀಯ ಆಟಗಾರರನ್ನು ಖರೀದಿಸುವಷ್ಟ ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್‌ 

    ಎನಿ ಎಂಎಲ್‌ಎಸ್ ಕ್ಲಬ್:
    ಇಂಟರ್ ಮಿಯಾಮಿ ಸಹ ಮಾಲೀಕ ಮಾಜಿ ಯುನೈಟೆಡ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ 2020 ರಲ್ಲಿ ಸಂದರ್ಶನವೊಂದರಲ್ಲಿ ಮೆಸ್ಸಿ ಮತ್ತು ರೊನಾಲ್ಡೊ ಇಬ್ಬರನ್ನು ಕೂಡಾ ತಮ್ಮ ಕ್ಲಬ್‌ಗೆ ಸೇರ್ಪಡೆಗೊಳಿಸಲು ಇರುವ ತಮ್ಮ ಮಹತ್ವಾಕಾಂಕ್ಷೆಯನ್ನು ತಿಳಿಸಿದ್ದರು.

    ಪ್ಯಾರಿಸ್ ಸೇಂಟ್ ಜರ್ಮೈನ್:
    ರೊನಾಲ್ಡೊ ಅವರು ಪಿಎಸ್‌ಜಿ ಯೊಂದಿಗೆ ಫ್ರಾನ್ಸ್‌ಗೆ ಹೋಗಲು ನಿರ್ಧರಿಸಿದರೆ ಇತರ ಕ್ಲಬ್‌ಗಳು ಅಸೂಯೆ ಪಡುವ ಸಾಧ್ಯತೆಯಿದೆ. ಆದರೆ ಅವರು ತಮ್ಮ ಶ್ರೇಣಿಯಲ್ಲಿ ಬರುವ ಲಿಯೋನೆಲ್ ಮೆಸ್ಸಿ, ನೇಮರ್ ಹಾಗೂ ಕೈಲಿಯನ್ ಎಂಬಪ್ಪೆ ಹೆಮ್ಮೆಪಡುತ್ತಾರೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್‌ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

    Live Tv
    [brid partner=56869869 player=32851 video=960834 autoplay=true]

  • ನಾನು ರೊನಾಲ್ಡೊ ಆಡುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಖರೀದಿಸುತ್ತೇನೆ: ಎಲೋನ್ ಮಸ್ಕ್

    ನಾನು ರೊನಾಲ್ಡೊ ಆಡುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಖರೀದಿಸುತ್ತೇನೆ: ಎಲೋನ್ ಮಸ್ಕ್

    ವಾಷಿಂಗ್ಟನ್: ನಾನು ವಿಶ್ವದ ಪ್ರಸಿದ್ಧ ಫುಟ್‍ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಖರೀದಿಸುತ್ತೇನೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ಸ್ಪಷ್ಟವಾಗಿ ಹೇಳಬೇಕೆಂದರೆ, ನಾನು ರಿಪಬ್ಲಿಕನ್ ಪಕ್ಷದ ಎಡ ಅರ್ಧ ಮತ್ತು ಡೆಮಾಕ್ರಟಿಕ್ ಪಕ್ಷದ ಬಲ ಅರ್ಧವನ್ನು ಬೆಂಬಲಿಸುತ್ತೇನೆ. ಜೊತೆಗೆ ನಾನು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಖರೀದಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಎಲೋನ್ ಮಸ್ಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇದನ್ನೂ ಓದಿ: ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ

    ಮ್ಯಾಂಚೆಸ್ಟರ್ ಯುನೈಟೆಡ್ ವಿಶ್ವದ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫುಟ್‍ಬಾಲ್ ಕ್ಲಬ್‍ಗಳಲ್ಲಿ ಒಂದಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಇಂಗ್ಲೆಂಡ್‍ನಲ್ಲಿ ನಡೆಯುವ ಯುರೋಪಿಯನ್ ಕಪ್ ಟೂರ್ನಿಯಲ್ಲಿ ದಾಖಲೆಯ 20 ಬಾರಿ ಚಾಂಪಿಯನ್ ಆಗಿದೆ. ವಿಶ್ವದ ಲೆಜೆಂಡ್ ಸ್ಟ್ರೈಕರ್‌ಗಳಲ್ಲಿ ಒಬ್ಬರಾದ ಕ್ರಿಸ್ಟಿಯಾನೋ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುವ ಆಟಗಾರರಾಗಿದ್ದು, ಅಮೇರಿಕನ್ ಗ್ಲೇಜರ್ ಕುಟುಂಬ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಲೀಕತ್ವವನ್ನು ಹೊಂದಿದೆ. ಇದನ್ನೂ ಓದಿ: ಹರಾರೆಯಲ್ಲಿ ನೀರಿಗೆ ಹಾಹಾಕಾರ – ಮಿತವಾಗಿ ಬಳಸಿ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸೂಚನೆ

    ಇದೀಗ ಮಸ್ಕ್ ನಾನು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಖರೀದಿಸುತ್ತೇನೆ ಎಂದ ಬಳಿಕ ಮಸ್ಕ್ ನಡೆಯ ಕುರಿತಾಗಿ ಬಾರಿ ಚರ್ಚೆ ನಡೆಯುತ್ತಿದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟ್ಟರ್ ಖರೀದಿಸುವುದಾಗಿ ಹೇಳಿಕೊಂಡಿದ್ದರು. ಆ ಬಳಿಕ ಈ ಖರೀದಿ ಒಪ್ಪಂದ ಮುರಿದುಬಿದ್ದಿತ್ತು.

    Live Tv
    [brid partner=56869869 player=32851 video=960834 autoplay=true]

  • ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಸ್ಪೇನ್: ಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮಾಲೀಕತ್ವದ 13.3 ಕೋಟಿ ಮೌಲ್ಯದ ಬುಗಾಟಿ ವೆರಾನ್ ಕಾರು ಅಪಘಾತಕ್ಕೀಡಾಗಿದೆ.

    ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶದ್ವಾರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ರೊನಾಲ್ಡೊ ಅವರ ಸಿಬ್ಬಂದಿಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿರುವ ಆಟಗಾರರ ಪೈಕಿ ರೊನಾಲ್ಡೊ ಸಹ ಒಬ್ಬರಾಗಿದ್ದಾರೆ. ಪ್ರಸ್ತುತ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಫೋಕ್ಸ್ ವ್ಯಾಗನ್ ಕಂಪನಿಯ ಬುಗಾಟಿ ವೆರಾನ್ ಕಾರು ಪ್ರಪಂಚದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ.

    Live Tv

  • ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಲಿಸ್ಬನ್: ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ರೊನಾಲ್ಡೋ ಅವರು ತಮ್ಮ ಗಂಡುಮಗುವನ್ನು ಕಳೆದುಕೊಂಡಿದ್ದಾರೆ.

    ರೊನಾಲ್ಡೋ ತಮ್ಮ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಮ್ಮ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ನಾವು ದುಃಖದಿಂದ ಘೋಷಿಸಬೇಕಾಗಿದೆ. ಇದೀಗ ಹೆಣ್ಣು ಮಗು ಮಾತ್ರವೇ ಹುಟ್ಟಿದ್ದು, ಈ ಕ್ಷಣವನ್ನು ಸ್ವಲ್ಪ ಭರವಸೆಯಿಂದ ಬದುಕಲು ನಮಗೆ ಶಕ್ತಿ ನೀಡಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಟ್ಲರ್ ಬೊಂಬಾಟ್ ಶತಕ – ರಾಜಸ್ಥಾನ್ ರಾಯಲ್ಸ್‌ಗೆ 7ರನ್‌ಗಳ ರೋಚಕ ಜಯ

    ವೈದ್ಯರ ಆರೈಕೆ ಹಾಗೂ ಬೆಂಬಲಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವು ಕುಗ್ಗಿ ಹೋಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾನು ನಿಮ್ಮಿಂದ ಶಾಂತಿಯನ್ನು ಬಯಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಗೆಳತಿ ಜಾರ್ಜಿನಾರೊಂದಿಗೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ಅಭಿಮಾನಿಗಳಿಗೂ ದುಃಖ ತಂದಿದೆ.

  • ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಲಂಡನ್: ಖ್ಯಾತ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ವಲ್ಪ ಸಮಯದವರೆಗೆ ಫಾರ್ಮ್‍ನಿಂದ ಹೊರಗುಳಿದಿರಬಹುದು. ಆದರೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನಲ್ಲಿ 400 ಮಿಲಿಯನ್ (40 ಕೋಟಿ) ಫಾಲೋವರ್ಸ್‍ಗಳ ಸಂಖ್ಯೆಯನ್ನು ದಾಟಿದ ವಿಶ್ವದ ಏಕೈಕ ವ್ಯಕ್ತಿಯಾಗಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪಟ್ಟಿಯಲ್ಲಿ, ಪೋರ್ಚುಗಲ್ ನಾಯಕ ಕೈಲಿ ಜೆನ್ನರ್ ಅವರು 309 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರೊನಾಲ್ಡೊ ಅವರ ಅತಿದೊಡ್ಡ ಫುಟ್‍ಬಾಲ್ ಪ್ರತಿಸ್ಪರ್ಧಿ ಮೆಸ್ಸಿ ಪ್ರಸ್ತುತ 306 ಮಿಲಿಯನ್ ಫಾಲೋವರ್ಸ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಪಾಪ್ ಗಾಯಕಿ ಸೆಲೆನಾ ಗೊಮೆಜ್ ಮತ್ತು ನಟ ಡ್ವೇನ್ ಜಾನ್ಸನ್ ತಲಾ 295 ಮಿಲಿಯನ್ ಫಾಲೋವರ್ಸ್‍ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ – ಸರಣಿ ಕೈವಶಪಡಿಸಿಕೊಂಡ ಟೀಂ ಇಂಡಿಯಾ

    ವರದಿಯ ಪ್ರಕಾರ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನ ಎಲ್ಲಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರತಿ ಪೋಸ್ಟ್‌ಗೆ (ಯುಎಸ್‍ಡಿ) 1.6 ಮಿಲಿಯನ್ (ಐಎನ್‍ಆರ್ 11.9 ಕೋಟಿ) ಚಾರ್ಜ್ ಮಾಡುತ್ತಾರೆ.

    ಇದರ ಮಧ್ಯೆ ಒಂದೆರಡು ದಿನಗಳ ಹಿಂದೆ ರೊನಾಲ್ಡೊ ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪ್ರಯುಕ್ತ ತಮಗೆ ಶುಭಾಶಯಗಳನ್ನು ಕಳುಹಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.

    ಜೀವನವು ರೋಲರ್ ಕೋಸ್ಟರ್ ಆಗಿದೆ. ಕಠಿಣ ಪರಿಶ್ರಮ, ಹೆಚ್ಚಿನ ವೇಗ, ಗುರಿಗಳು, ಬೇಡಿಕೆಯ ನಿರೀಕ್ಷೆಗಳು. ಆದರೆ ಕೊನೆಯಲ್ಲಿ ಇದು ಕುಟುಂಬ, ಪ್ರೀತಿ, ಪ್ರಾಮಾಣಿಕತೆ, ಸ್ನೇಹ ಎಲ್ಲವನ್ನೂ ಮೌಲ್ಯಯುತವಾಗಿಸುತ್ತದೆ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:  7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ತಮ್ಮ ಭವಿಷ್ಯದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ ರೊನಾಲ್ಡೊ, ನಾನು ಫುಟ್‍ಬಾಲ್ ಕ್ಷೇತ್ರದಲ್ಲಿ ಇನ್ನೂ 40ರ ವಯಸ್ಸಿನವರೆಗೂ ಆಡಲು ನಿರ್ಧರಿಸಿದ್ದೇನೆ. ಇದೀಗ ನಾನು ಅಲ್ಪಾವಧಿಯ ಗುರಿಗಳತ್ತ ಗಮನ ಹರಿಸಿದ್ದೇನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Cristiano Ronaldo (@cristiano)

    ನನಗೆ ಈಗ 30 ವರ್ಷ ವಯಸ್ಸಾಗಿದೆ. ನಾನು ನನ್ನ ದೇಹ ಮತ್ತು ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. 33ರ ವಯಸ್ಸಿನ ನಂತರ ದೇಹವು ಕುಗ್ಗಲಾರಂಭಿಸುತ್ತದೆ. ಆದರೆ ನಾನು ಮಾನಸಿಕವಾಗಿ ಸಧೃಢನಾಗಿದ್ದೇನೆ. ಹಾಗೆ ನೋಡಿದರೆ ನಿಜವಾದ ಜೀವನದ ಯುದ್ಧವು 40ರ ನಂತರ ಪ್ರಾರಂಭವಾಗುತ್ತದೆ. ವಯಸ್ಸು ಕೇವಲ ಎಣಿಕೆಗಾಗಿ. ನಾವು ನಮ್ಮ ದೇಹವನ್ನು ಎಷ್ಟು ಚಟುವಟಿಕೆಯಿಂದ ಇಡುತ್ತೇವೋ ಅಷ್ಟು ಸಧೃಡರಾಗಿರಬಹುದು ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿದ್ದರು.

  • ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ

    ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ

    ದುಬೈ: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನ್ ರೊನಾಲ್ಡೊ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಲೇಸರ್ ಶೋ ಏರ್ಪಡಿಸುವ ಮೂಲಕ ಪತ್ನಿಗೆ ಉಡುಗೊರೆಯನ್ನು ನೀಡಿದ್ದಾರೆ.

    ಜಾರ್ಜಿನಾ ರೊಡ್ರಿಗಸ್ ಅವರ 28ನೇ ಹುಟ್ಟುಹಬ್ಬವನ್ನು ಆಚರಿಸಲು ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ರೊನಾಲ್ಡೊ ಪತ್ನಿಯ ಭಾವಚಿತ್ರವಿರುವ ಲೇಸರ್ ಶೋ ಏರ್ಪಡಿಸಿದ್ದಾರೆ. ಇದರಲ್ಲಿ ಜಾರ್ಜಿಯಾವ ಅವರ ಫೋಟೋ ವೀಡಿಯೊವು ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗೋಚರಿಸಿದೆ.

     

    View this post on Instagram

     

    A post shared by Georgina Rodríguez (@georginagio)

    ಐದು ಬ್ಯಾಲನ್ ಡಿ ಓರ್ ಪ್ರಶಸ್ತಿಗಳ ವಿಜೇತ ರೊನಾಲ್ಡೊ, ದುಬೈನ ಹೃದಯಭಾಗದಲ್ಲಿರುವ ಐಕಾನಿಕ್ ಟವರ್ ಮೇಲೆ ತನ್ನ ಪತ್ನಿಯ ಜನ್ಮದಿನದ ಶುಭಾಶಯ ಕೋರಲು ಬರೋಬ್ಬರಿ 50,000 ಪೌಂಡ್‍ಗಳನ್ನು ಖರ್ಚು ಮಾಡಿದ್ದಾರೆ.

    ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಕೋರಿರುವ ರೊನಾಲ್ಡೊ ಈ ವಿಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

     

    View this post on Instagram

     

    A post shared by Cristiano Ronaldo (@cristiano)

    ವೀಡಿಯೋದಲ್ಲಿ ಏನಿದೆ?: ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ಲೈಟ್ ಮತ್ತು ಲೇಸರ್ ಶೋನಲ್ಲಿ ರೊನಾಲ್ಡೊ ಹಾಗೂ ಅವರ ಪತ್ನಿ ಹೆಸರು ಬುರ್ಜ್ ಖಲಿಫಾದ ಮೇಲೆ ಪ್ರದರ್ಶನಗೊಂಡಿತು. ನಂತರ ಹ್ಯಾಪಿ ಬರ್ತ್‍ಡೇ ಜಿಯೋ ಸಂದೇಶದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ: ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ