Tag: Crispy Paneer Fry

  • ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

    ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

    ಟೀ ಟೈಮ್‌ನಲ್ಲಿ ಹೊಸ ಹೊಸದಾಗಿ ಸವಿಯಬೇಕೆಂದು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಪ್ರತಿ ಬಾರಿ ಅದೇ ಪಕೋಡಾವನ್ನೇ ತಿಂದು ಬೋರ್ ಹೊಡೆದಿದ್ದರೆ, ಒಮ್ಮೆ ಕುರುಕಲಾದ ಪನೀರ್ ಫ್ರೈ ಅನ್ನು ಟ್ರೈ ಮಾಡಿ. ರುಚಿಕರವಾಗಿ ಹಿಟ್ಟಿನ ಸಂಯೋಜನೆಯೊಂದಿಗೆ ಕ್ರಿಸ್ಪಿ ಅನುಭವ ನಿಮ್ಮ ಟೀ ಟೈಮ್‌ಗೆ ಇನ್ನಷ್ಟು ಮಜ ನೀಡುತ್ತದೆ. ಕ್ರಿಸ್ಪಿ ಪನೀರ್ ಫ್ರೈ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಸಂಸ್ಕರಿಸಿದ ಹಿಟ್ಟು – 3 ಟೀಸ್ಪೂನ್
    ಪನೀರ್ – 100 ಗ್ರಾಂ
    ಕಾರ್ನ್ ಫ್ಲೋರ್ – 3 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಮುಕ್ಕಾಲು ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ – ಕಾಲು ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕಸೂರಿ ಮೇಥಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅಗತ್ಯಕ್ಕೆ ತಕ್ಕಷ್ಟು
    ಎಣ್ಣೆ – ಹುರಿಯಲು
    ಕಾರ್ನ್ ಫ್ಲೇಕ್ಸ್ – ಒಂದು ಕಪ್ ಇದನ್ನೂ ಓದಿ: ಬ್ರೆಡ್‌ನಿಂದಲೂ ಮಾಡ್ಬೋದು ಟೇಸ್ಟಿ ಸ್ಪ್ರಿಂಗ್ ರೋಲ್

    ಮಾಡುವ ವಿಧಾನ:
    * ಮೊದಲಿಗೆ ಬೌಲ್ ಒಂದರಲ್ಲಿ ಸಂಸ್ಕರಿಸಿದ ಹಿಟ್ಟು, ಕಾರ್ನ್ ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಕಸೂರಿ ಮೇಥಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
    * ಬಳಿಕ ಅಗತ್ಯಕ್ಕೆ ತಕ್ಕಂತೆ ನೀರನ್ನು ಹಾಕಿ ದಪ್ಪನೆಯ ಹಿಟ್ಟಾನ್ನಾಗಿ ಕಲಸಿ.
    * ಈಗ ಮತ್ತೊಂದು ಬೌಲ್‌ನಲ್ಲಿ ಕಾರ್ನ್ ಫ್ಲೇಕ್ಸ್ ತೆಗೆದುಕೊಂಡು ಸ್ವಲ್ಪ ಕೈಯಿಂದಲೇ ಪುಡಿ ಮಾಡಿ ಪಕ್ಕಕ್ಕಿಡಿ.
    * ಈಗ ಪನೀರ್‌ನ ತುಂಡುಗಳನ್ನು ತೆಗೆದುಕೊಂಡು ಮೊದಲಿಗೆ ಹಿಟ್ಟಿನ ಮಿಶ್ರಣಕ್ಕೆ ಅದ್ದಿ.
    * ಬಳಿಕ ಕಾರ್ನ್ ಫ್ಲೇಕ್ಸ್‌ನ ಪುಡಿಗೆ ಹಾಕಿ, ಪನೀರ್‌ಗೆ ಸಂಪೂರ್ಣವಾಗಿ ಅಂಟಿಕೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ.
    * ಈಗ ಬಿಸಿ ಎಣ್ಣೆಯಲ್ಲಿ ಪನೀರ್ ಅನ್ನು ಒಂದೊಂದಾಗಿಯೇ ಬಿಡಿ.
    * ಪನೀರ್ ಕುರುಕಲಾಗಿ ಸ್ವಲ್ಪ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿದು, ಟಿಶ್ಯೂ ಪೇಪರ್‌ನಲ್ಲಿ ಹರಡಿ.
    * ಚಹಾ ಸಮಯದಲ್ಲಿ ಸವಿಯಬಹುದಾಗ ಕ್ರಿಸ್ಪಿ ಪನೀರ್ ಫ್ರೈ ಈಗ ತಯಾರಾಗಿದೆ. ಇದನ್ನೂ ಓದಿ: ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್

    Live Tv
    [brid partner=56869869 player=32851 video=960834 autoplay=true]